Tag: Amarnath Yatra 2023

  • ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    ಶ್ರೀನಗರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಅಮರನಾಥ ಯಾತ್ರೆ (Amarnath Yatra) ಕೈಗೊಂಡಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಹುದ್ದೆಗೇರಲಿ ಎಂದು ಅಮರನಾಥಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ವೀಡಿಯೋ ಸಮೇತ ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಅಮರನಾಥ ದರ್ಶನ ಪಡೆದು ಧನ್ಯಳಾಗಿದ್ದೇನೆ. ದೇಶವಾಸಿಗಳ ಯೋಗಕ್ಷೇಮ ಮತ್ತು ನರೇಂದ್ರ ಮೋದಿ (Narendra Modi) ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಸಂಘರ್ಷ – ತಂದೆ, ಮಗ ಸೇರಿ ಮೂವರು ಬಲಿ

    ಶ್ರೀ ಅಮರನಾಥದಲ್ಲಿರುವ ಪವಿತ್ರ ಶಿವಲಿಂಗದ ದರ್ಶನ ಪಡೆದೆ. ನನ್ನ ಯಾತ್ರೆಗೆ ಸಹಕಾರಿಯಾದ ಅಮರನಾಥ ದೇಗುಲ ಮಂಡಳಿಯ ಎಲ್ಲಾ ಸಿಬ್ಬಂದಿ ಮತ್ತು ಭದ್ರತಾ ತಂಡಕ್ಕೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಎಲ್ಲರ ಸುಗಮ ಯಾತ್ರೆಗೆ ಅನುವು ಮಾಡಿಕೊಟ್ಟಿರುವ ಮನೋಜ್‌ ಸಿನ್ಹಾ ಅವರಿಗೆ ವಂದನೆಗಳು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಹಾಕದೇ ಶಾಲೆಗೆ ಬಂದ ಬಾಲಕಿಯರನ್ನು ತಡೆದ 10 ನೇ ತರಗತಿ ಮುಸ್ಲಿಂ ವಿದ್ಯಾರ್ಥಿ – ಗುಂಪಿನಿಂದ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂಗಳ ಪವಿತ್ರ ‘ಅಮರನಾಥ ಯಾತ್ರೆ’ ಆರಂಭ

    ಹಿಂದೂಗಳ ಪವಿತ್ರ ‘ಅಮರನಾಥ ಯಾತ್ರೆ’ ಆರಂಭ

    ಶ್ರೀನಗರ: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರೆಗೆ (Amarnath Yatra 2023) ಚಾಲನೆ ಸಿಕ್ಕಿದೆ. ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಹಸಿರು ನಿಶಾನೆ ತೋರಿಸಲಾಗಿದೆ.

    ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಶ್ರೀ ಅಮರನಾಥ ಜಿ ಪುಣ್ಯಕ್ಷೇತ್ರ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಗಂದರ್‌ಬಾಲ್ ಉಪ ಆಯುಕ್ತ ಶ್ಯಾಂಬೀರ್ ಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    62 ದಿನಗಳ ಅಮರನಾಥ ಯಾತ್ರೆಯು ಪ್ರಾರಂಭವಾಗಿದ್ದು, ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಬಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಗುಹೆ ದೇಗುಲಕ್ಕೆ ಯಾತ್ರಿಕರು ಹೊರಟಿದ್ದಾರೆ. ಬಿಗಿ ಭದ್ರತೆಯ ನಡುವೆ ಶನಿವಾರ ಮುಂಜಾನೆ ಯಾತ್ರಾರ್ಥಿಗಳು ಬೇಸ್ ಕ್ಯಾಂಪ್‌ನಿಂದ ನಿರ್ಗಮಿಸಿದರು.

    ಮೊದಲ ಬ್ಯಾಚ್‌ನಲ್ಲಿ 7 ರಿಂದ 8 ಸಾವಿರ ಮಂದಿ ಯಾತ್ರಾರ್ಥಿಗಳಿದ್ದಾರೆ. ಬೇಸ್ ಕ್ಯಾಂಪ್‌ನಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಅಮರನಾಥ ಗುಹೆಯ ದೇಗುಲಕ್ಕೆ 12 ಕಿಮೀ ಪ್ರಯಾಣವನ್ನು ಕೈಗೊಂಡಿದ್ದಾರೆ. 62 ದಿನಗಳ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ. ಕಳೆದ ಬಾರಿ ಮೇಘಸ್ಪೋಟ ಸಂಭವಿಸಿ ಯಾತ್ರಿಗಳು ನಾನಾ ತೊಂದರೆ ಅನುಭವಿಸಿದ್ದರು. ಹೀಗಾಗಿ ಈ ಬಾರಿ ಹೆಚ್ಚಿನ ನಿಗಾ ವಹಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತ – 25 ಮಂದಿ ಸಜೀವ ದಹನ

    ಇಂದು ನಾವು ಪ್ರಯಾಣಿಕರ ಮೊದಲ ಬ್ಯಾಚ್‌ನ್ನು ಕಳುಹಿಸುತ್ತಿದ್ದೇವೆ. ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ. ನಮ್ಮ ಸ್ವಯಂಸೇವಕರು ಸಹಾಯ ಮಾಡಲು ಎಲ್ಲೆಡೆ ಇದ್ದಾರೆ ಎಂದು ಶ್ಯಾಂಬಿರ್ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]