Tag: amarinder sing

  • ಬೆಳಗಾವಿ | ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

    ಬೆಳಗಾವಿ | ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

    ಬೆಳಗಾವಿ: ಕೆಲಸದಿಂದ ವಜಾ ಮಾಡಿದ್ದಕ್ಕೆ ಯುವಕನೋರ್ವ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಮೊದಗಾ ಗ್ರಾಮದಲ್ಲಿ ನಡೆದಿದೆ.

    ಮೊದಗಾ (Modaga) ಗ್ರಾಮದ ನಿವಾಸಿ ರವಿ ವೀರನಗೌಡ ಹಟ್ಟಿಹೊಳಿ (24) ಆತ್ಮಹತ್ಯೆಗೆ ಶರಣಾದ ಯುವಕ. ಇದನ್ನೂ ಓದಿ: 56 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಖದೀಮರು ಅರೆಸ್ಟ್

    ಎಂಸಿಎ ಪದವೀಧರನಾಗಿದ್ದ ರವಿ ಹಟ್ಟಿಹೊಳಿ, ಕಳೆದೊಂದು ವರ್ಷದಿಂದ ಪುಣೆಯ (Pune) ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. 15 ದಿನಗಳ ಹಿಂದೆ ರವಿಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್‌ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು

    ಇದರಿಂದ ಮನನೊಂದ ರವಿ, ಸ್ವಗ್ರಾಮಕ್ಕೆ ಮರಳಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಮಾರಿಹಾಳ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಚಂಡೀಗಢ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸಿಧು ಅವರು ಹೀನಾಯ ಸೋಲನುಭವಿಸಿದ್ದಾರೆ.

    ಪಾಟಿಯಾಲ ನಗರ ಕ್ಷೇತ್ರದಲ್ಲಿ ಅಮರೀಂದರ್‌ ಸಿಂಗ್‌ ಸ್ಪರ್ಧಿಸಿದ್ದರು. ಸಿಂಗ್‌ ವಿರುದ್ಧ ಆಮ್‌ ಆದ್ಮಿ ಪಕ್ಷದ ಅಜಿತ್‌ ಪಾಲ್‌ ಸಿಂಗ್‌ ಕೊಹ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    2017ರ ಚುನಾವಣೆಯಲ್ಲಿ ಸಿಂಗ್‌ ಅವರ ಗೆಲುವಿನ ಅಂತರವು ಶೇ.49 ರಷ್ಟಿತ್ತು. ಆದರೆ ಈ ಬಾರಿ ಎಎಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.

    ಅಮರೀಂದರ್‌ ಸಿಂಗ್‌ ಆಡಳಿತ ವಿರೋಧಿ ಅಲೆ ಪಕ್ಷದೊಳಗಡೇ ಎದ್ದಿತ್ತು. ಆಂತರಿಕ ಕಲಹದಿಂದಾಗಿ ಸಿಂಗ್‌ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಅಮರೀಂದರ್‌ ಸಿಂಗ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

     

  • ಚರಣ್‍ಜಿತ್ ಚನ್ನಿ, ನವಜೋತ್ ಸಿಧು ನಿಷ್ಪ್ರಯೋಜಕರು: ಅಮರಿಂದರ್ ಸಿಂಗ್

    ಚರಣ್‍ಜಿತ್ ಚನ್ನಿ, ನವಜೋತ್ ಸಿಧು ನಿಷ್ಪ್ರಯೋಜಕರು: ಅಮರಿಂದರ್ ಸಿಂಗ್

    ಚಂಡೀಗಢ: ಪಂಜಾಬ್ ಲೋಕ ಕಾಂಗ್ರೆಸ್ ವರಿಷ್ಠ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾನುವಾರ ಫೆಬ್ರವರಿ 20 ತಮ್ಮ ಮಾಜಿ ಸಹೋದ್ಯೋಗಿಗಳಾದ ನವಜೋತ್ ಸಿಂಗ್ ಸಿಧು ಮತ್ತು ಚರಂಜಿತ್ ಸಿಂಗ್ ಚನ್ನಿ ಅವರನ್ನು ದೂರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದ್ದಾರೆ.

    ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಟಿಯಾಲದಿಂದ ಸ್ಪರ್ಧಿಸಿರುವ ಪಂಜಾಬ್ ಮಾಜಿ ಸಿಎಂ, ತಮ್ಮ ತವರು ನೆಲದಿಂದ ಗೆಲ್ಲುವ ವಿಶ್ವಾಸವಿದೆ. ನಾನು ಪಟಿಯಾಲದಲ್ಲಿ ಗೆಲ್ಲುವುದು ಖಚಿತವಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಅಂತ ನಾನು ಭಾವಿಸುತ್ತೇನೆ. ಕಾಂಗ್ರೆಸ್ ಬೇರೆ ಜಗತ್ತಿನಲ್ಲಿ ವಾಸಿಸುತ್ತಿದ್ದು, ರಾಜ್ಯದಲ್ಲಿ ಅದು ನಾಶವಾಗುತ್ತದೆ ಎಂದರು. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    117 ಸದಸ್ಯ ಬಲದ ಅಸೆಂಬ್ಲಿಯಲ್ಲಿ ತಮ್ಮ ಹಿಂದಿನ ಪಕ್ಷವು ಕೇವಲ 20-30 ಸ್ಥಾನಗಳನ್ನು ಗಳಿಸಲಿದೆ. ತಮ್ಮ ವಿರುದ್ಧ ನಡೆಯುತ್ತಿರುವ ಪಂಜಾಬ್‍ನಲ್ಲಿ ನಾನು ಏನು ಸಾಧಿಸಬಲ್ಲೆ ಎಂಬುದರ ಬಗ್ಗೆ ಕೈ ಪಕ್ಷ ಚಿಂತೆಗೀಡಾಗಿದೆ. ಕಾಂಗ್ರೆಸ್ 20-30ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಅಂತ ನಾನು ಊಹಿಸಬಲ್ಲೆ ಎಂದು ಭವಿಷ್ಯ ನುಡಿದಿದ್ದಾರೆ.

    ಚರಣ್‍ಜಿತ್ ಚನ್ನಿ ಎಂದರೇನು? 3 ತಿಂಗಳಲ್ಲಿ ಪಂಜಾಬ್‍ನಲ್ಲಿ ಪವಾಡ ಮಾಡಬಲ್ಲ ಜಾದೂಗಾರನಾ. ಚುನಾವಣೆಗೆ ಮುನ್ನ ಅವರನ್ನು ಹೀರೋ ಮಾಡಲು ಪ್ರಯತ್ನಿಸುವ ಎಲ್ಲಾ ಕ್ರೆಡಿಟ್‍ಗಳನ್ನು ನೀಡುವುದು. ಇಬ್ಬರೂ ರಾಜ್ಯದಲ್ಲಿ ನಿಷ್ಟ್ರಯೋಜಕರು ಅಂತ ನಾನು ಭಾವಿಸುತ್ತೇನೆ ಎಂದು ಸಿಧು ಮತ್ತು ಹಾಲಿ ಪಂಜಾಬ್ ಸಿಎಂ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

    ರಾಜ್ಯದಲ್ಲಿ ಈಗಾಗಲೇ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಪಂಜಾಬ್‍ನಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 34 ರಷ್ಟು ಮತದಾನವಾಗಿದೆ. ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ, ನವಜೋತ್ ಸಿಧು, ಸುಖಬೀರ್ ಬಾದಲ್, ಭಗವಂತ್ ಮಾನ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

  • ಬಿಜೆಪಿಯೊಂದಿಗೆ ಮೈತ್ರಿ – ಅಮರೀಂದರ್‌ ಸಿಂಗ್‌ ಅಧಿಕೃತ ಘೋಷಣೆ

    ಬಿಜೆಪಿಯೊಂದಿಗೆ ಮೈತ್ರಿ – ಅಮರೀಂದರ್‌ ಸಿಂಗ್‌ ಅಧಿಕೃತ ಘೋಷಣೆ

    ಚಂಡೀಗಢ: ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

    ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಅಮರೀಂದರ್‌ ಸಿಂಗ್‌ ಮೈತ್ರಿ ಕುರಿತು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಹಾಗೂ ಪಂಜಾಬ್‌ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಆಲಂಗಿಸಿರುವ ಫೋಟೊವನ್ನು ಕ್ಯಾಪ್ಟನ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಮೈತ್ರಿ ಬಗ್ಗೆ ಪ್ರಧಾನಿ ಮೋದಿ, ಅಮಿತ್‌ ಶಾ ಜೊತೆ ಮಾತನಾಡಿದ್ದೇನೆ: ಅಮರೀಂದರ್‌ ಸಿಂಗ್‌

    ಬಿಜೆಪಿಯೊಂದಿಗೆ ಮೈತ್ರಿ ಆಗಿದೆ. ಚುನಾವಣೆಗಾಗಿ ಸೀಟುಗಳ ಹಂಚಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ. ಯಾರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಂದೆ ತಿಳಿಯಲಿದೆ. ಸೀಟು ಆಯ್ಕೆಯ ಮಾನದಂಡವು ಗೆಲುವಿಗೆ ಪೂರಕವಾಗಿರಲಿದೆ ಎಂದು ಅಮರೀಂದರ್‌ ತಿಳಿಸಿದ್ದಾರೆ.

    ಮೈತ್ರಿ ಆಗಿರುವುದರಿಂದ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆಂಬ 101 ಪರ್ಸೆಂಟ್‌ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ

    ಪಂಜಾಬ್‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಾಂಗ್ರೆಸ್‌ ತೊರೆದಿದ್ದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು. ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದರೆ ಪಂಜಾಬ್‌ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಸಿಂಗ್‌ ಹೇಳಿದ್ದರು. ಅಂತೆಯೇ ಈಗ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರು.

    ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲಾ ಕಡೆ ಬಿಜೆಪಿ ಕಡೆಗಿನ ಒಲವು ಹೆಚ್ಚಾಗಿದೆ. ಮೈತ್ರಿ ಆಗುವುದರಿಂದ ಅನೇಕ ಹಿಂದೂಗಳು ಬಿಜೆಪಿ ಮತ್ತು ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ. ಪಂಜಾಬ್‌ನಲ್ಲಿ ಶೇ. 36ರಷ್ಟು ಹಿಂದೂಗಳಿದ್ದು, ರೈತರ ಬೆಂಬಲವೂ ನಮಗೆ ಸಿಗಲಿದೆ. ಹೀಗಾಗಿ ನಾವು ಕಾಂಗ್ರೆಸ್‌ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂಬುದು ಅಮರೀಂದರ್‌ ಅವರ ಯೋಜನೆ.