Tag: Amaresh Karadi

  • ಪೋಸ್ ಕೊಡುವ ಭರದಲ್ಲಿ ರೈತರನ್ನು ಅವಮಾನಿಸಿದ ಸಂಸದರ ಪುತ್ರ

    ಪೋಸ್ ಕೊಡುವ ಭರದಲ್ಲಿ ರೈತರನ್ನು ಅವಮಾನಿಸಿದ ಸಂಸದರ ಪುತ್ರ

    – ಚಪ್ಪಲಿ ಹಾಕಿಕೊಂಡು ಉಳುಮೆ
    – ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಆಕ್ರೋಶ

    ಕೊಪ್ಪಳ: ಪೋಸ್ ಕೊಡುವ ಭರದಲ್ಲಿ ಸಂಸದರ ಪುತ್ರ ರೈತರಿಗೆ ಅವಮಾನಿಸಿದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ನೇಗಿಲು ಹಿಡಿದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುವಾಗ ಸಾಮಾನ್ಯವಾಗಿ ರೈತರು ಚಪ್ಪಲಿ ಧರಿಸುವುದಿಲ್ಲ. ಈ ಮೂಲಕ ನೇಗಿಲನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಾರೆ. ಆದರೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ರೈತರ ಪರ ಕಾಳಜಿಯಂತೆ ಪೋಸ್ ಕೊಡುವ ಭರದಲ್ಲಿ ಚಪ್ಪಲಿ ಹಾಕಿಕೊಂಡೇ ನೇಗಿಲು ಹೊಡೆದು ರೈತರಿಗೆ ಅವಮಾನಿಸಿದ್ದಾರೆ.

    ಈ ವಿಡಿಯೋವನ್ನು ಸ್ವತಃ ಅಮರೇಶ್ ಕರಡಿ ಅಭಿಮಾನಿಗಳೇ ಹರಿಬಿಟ್ಟಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕಂಡ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೂಜ್ಯನೀಯ ಭಾವನೆಯಿಂದ ನೋಡುವ ನೇಗಿಲನ್ನು ರೈತರು ಚಪ್ಪಲಿ ಹಾಕಿಕೊಂಡು ಉಳುಮೆ ಮಾಡುವುದಿಲ್ಲ. ಆದರೆ ಸಂಸದರ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ಪೋಸ್ ನೀಡಿ ರೈತರಿಗೆ ಅವಮಾನಿಸಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬ್ಲಾಕ್‍ಮೇಲ್ ಹಣದಲ್ಲಿ ಪಡಿತರ ವಿತರಿಸಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಸಂಸದನ ಪುತ್ರ

    ಬ್ಲಾಕ್‍ಮೇಲ್ ಹಣದಲ್ಲಿ ಪಡಿತರ ವಿತರಿಸಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಸಂಸದನ ಪುತ್ರ

    -ಸಂಸದರ ಪುತ್ರನ ಬ್ಲಾಕ್‍ಮೇಲ್ ಆಡಿಯೋ ಔಟ್
    -ವರ್ಗಾವಣೆ ಮಾಡದೇ ಇರಲು ಲಕ್ಷ ಲಕ್ಷ ಬೇಡಿಕೆಯ ಆರೋಪ

    ಕೊಪ್ಪಳ: ಕೊರೊನಾ ಮಹಾಮಾರಿಯಿಂದ ಸಾಕಷ್ಟು ಬಡ ಕುಟುಂಬಗಳು, ಕೂಲಿ ಕಾರ್ಮಿಕರು, ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತವರ ಸಹಾಯಕ್ಕಾಗಿ ಸಾಕಷ್ಟು ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಪ್ರೇರಿತರಾಗಿ ಮುಂದೆ ಬಂದು ತಮ್ಮ ತಮ್ಮ ಸ್ವಂತ ಖರ್ಚಿನಲ್ಲಿ ಸಹಾಯ ಮಾಡಿ ಬಡವರ ಮತ್ತು ನಿರ್ಗತಿಕರಿಗೆ ಹಸಿವು ನೀಗಿಸಿದ್ದಾರೆ. ಆದರೆ ಕೊಪ್ಪಳ ಸಂಸದರ ಪುತ್ರ ಬಡವರಿಗೆ ಸಹಾಯದ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಿ, ಅವರಿಂದ ತೆಗೆದುಕೊಂಡ ಸಾಮಗ್ರಿಗಳನ್ನ ಬಡವರಿಗೆ ಹಂಚಿ ಪೋಸ್ ಗಿಟ್ಟಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಕೊಪ್ಪಳ ಸಂಸದ ಕರಡಿ ಸಂಗಣ್ಣರವರ ಪುತ್ರ ಅಮರೇಶ್ ಕರಡಿ ಫೋಟೋಗೆ ಪೋಸ್ ಕೊಟ್ಟ ಲೀಡರ್. ರಾಜ್ಯದಲ್ಲಿ ಯಾವಾಗ ಬಿಜೆಪಿ ಸರ್ಕಾರ ಬಂತೋ ಅಂದಿನಿಂದ ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಪ್ರಭಾವ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಯಲ್ಲಿ ಅಮರೇಶ್ ಕರಡಿ ತಾವೇ ಜಿಲ್ಲಾ ಉಸ್ತುವಾರಿ ಮಂತ್ರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

    ಲಾಕ್‍ಡೌನ್ ವೇಳೆ ಬಡವರಿಗೆ ನೀಡಿದ ಅಹಾರದ ಕಿಟ್ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ಮಾಡಿದ್ದಾರೆ. ಬಡವರಿಗೆ ನೀಡಿದ ದಿನಸಿ ಕಿಟ್ ವಿತರಣೆ ಮಾಡಿದ್ದು, ಜಿಲ್ಲೆಯ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ ವಸೂಲಿ ಮಾಡಿ ತಮ್ಮ ಫೋಟೋ ಅಂಟಿಸಿಕೊಂಡು ಫೋಸ್ ನೀಡಿದ್ದಾರೆ ಎಂಬ ಆರೋಪಕ್ಕೆ ಪೂರಕ ಎಂಬಂತೆ ಅಮರೇಶ್ ಕರಡಿ ಮಾತನಾಡಿದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ

    ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಲಾಕ್‍ಡೌನ್ ಇದೆ. ನಿಮ್ಮಿಂದ ಟನ್ ಗಟ್ಟಲೆ ಅಕ್ಕಿ ಪೂರೈಸಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಕೊಪ್ಪಳ ಡಿವೈಎಸ್ಪಿ, ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಣ ಮತ್ತು ಸಾಮಗ್ರಿಗಳನ್ನು ನೀಡಿದ್ದಾರೆ. ನೀವು ಕೂಡ ನೀಡಬೇಕು ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.

    50 ಟನ್ ಅಕ್ಕಿಯ ಹಣವನ್ನು ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರು ಅಮರೇಶ್ ಕರಡಿಗೆ ನೀಡಿದ್ದಾರೆ. ನಂತರ ಡಿವೈಎಸ್ಪಿಯಾಗಿ ಗಂಗಾವತಿಯಲ್ಲಿ ಮುಂದುವರಿಯಬೇಕು ಅಂದ್ರೆ ಹಣ ನೀಡಬೇಕು ಎನ್ನುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಡಿವೈಎಸ್ಪಿ ಗಳ ಮಾಡಿದ ವರ್ಗಾವಣೆ ಯಲ್ಲಿ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ ಹೆಸರು ಪ್ರಕಟಗೊಂಡಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ ಎಂಬ ಮಾತು ಈಗ ಪೊಲೀಸ್‌ ವಲಯದಿಂದ ಕೇಳಿಬಂದಿದೆ.

    ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ ಕೂಡ ಅವಧಿ ಒಂದು ವರ್ಷ ಮುಗಿದಿದೆ. ಆದರೆ ಕೊಪ್ಪಳ ಸಂಸದರ ಪುತ್ರನ ಜೊತೆ ಉತ್ತಮ ಸಂಬಂಧ ಇರುವ ಕಾರಣಕ್ಕೆ ಅವರು ಕೊಪ್ಪಳ ಡಿವೈಎಸ್ಪಿಯಾಗಿ ಮುಂದುವರಿದಿದ್ದಾರೆ ಎಂದು ಜಿಲ್ಲೆಯಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ವರ್ಗಾವಣೆ ತಡೆಯಲು ಅಮರೇಶ್ ಕರಡಿ ಡಿವೈಎಸ್ಪಿ ಚಂದ್ರಶೇಖರ್ ಬಳಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.

    ಈಗ ಗಂಗಾವತಿ ಡಿವೈಎಸ್ಪಿ ವರ್ಗಾವಣೆ ಗೊಂಡಿದ್ದು, ಅವರೊಂದಿಗೆ ಲಾಕ್‍ಡೌನ್ ಅವಧಿಯಲ್ಲಿ ಅಕ್ಕಿ ಪೂರೈಸುವಂತೆ ಪೀಡಿಸಿದ ಆಡಿಯೋ ರಿವೀಲ್ ಆಗಿದ್ದು, ಎಲ್ಲರನ್ನ ಅನುಮಾನ ಮೂಡಿಸುವಂತೆ ಮಾಡಿದೆ. ಡಿವೈಎಸ್ಪಿ ಈಗಾಗಲೇ ಒಂದು ವರ್ಷ ಗಂಗಾವತಿಯಲ್ಲಿ ಮುಗಿಸಿದ್ದಾರೆ. ಸರ್ಕಾರ ಆದೇಶ ಒಂದು ವರ್ಷದ ನಂತರ ಅಧಿಕಾರಿಯನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲಿಯೇ ಮುಂದುವರಿಯಬೇಕು ಅಂದರೆ ಜನಪ್ರತಿನಿಧಿಗಳ ಮಾತು ಕೇಳಲೇಬೇಕು. ಇಲ್ಲ ಅಂದ್ರೆ ಅವರ ತಮಗೆ ಯಾರು ಅನುಕೂಲ ಆಗುತ್ತಾರೆ ಅವರನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಪ್ಪಳ ಸಂಸದನ ಪುತ್ರನ  ದರ್ಬಾರ್ ಜಾಸ್ತಿಯಾಗಿದೆ ಎನ್ನುವ ಮಾತುಗಳು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.

  • ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್

    ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್

    ಕೊಪ್ಪಳ: ಡಿವೈಎಸ್‍ಪಿ ಕೊರಳಪಟ್ಟಿ ಹಿಡಿದು ಜಗ್ಗಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಸೋಮವಾರ ಕರ್ನಾಟಕ ಬಂದ್ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಸಂಸದರು ಹಾಗೂ ಸಂಸದರ ಪುತ್ರ ಪೊಲೀಸರ ವಿರುದ್ಧ ಗಲಾಟೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ನಗರ ಠಾಣೆಯ ಸಿಪಿಐ ರವಿ ಉಕ್ಕುಂದ ದೂರು ನೀಡಿದ್ದರು.

    ರವಿ ಉಕ್ಕುಂದ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಠಾಣೆಯಲ್ಲಿ ಸಂಸದ ಸಂಗಣ್ಣ ಕರಡಿ, ಪುತ್ರ ಅಮರೇಶ್ ಕರಡಿ ಸೇರಿದಂತೆ 38 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

     

    ಸೋಮವಾರ ಬೆಳಗ್ಗೆ ಒತ್ತಾಯಪೂರ್ವಕವಾಗಿ ಬಿಜೆಪಿಯವರು ಅಂಗಡಿಗಳನ್ನು ಬಂದ್ ಮಾಡಿಸಿದ್ದರು. ಈ ವೇಳೆಯಲ್ಲಿ ಪರವಾನಿಗೆ ಇಲ್ಲದ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅನುಮತಿ ಪಡೆಯದ ಹಿನ್ನೆಲೆ ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಆಕ್ರೋಶಗೊಂಡ ಸಂಸದ ಸಂಗಣ್ಣ ಕರಡಿ ಮತ್ತು ಪುತ್ರ ಅಮರೇಶ್, ಪೊಲಿಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಠಾಣೆಯಲ್ಲಿ ಕರ್ತವ್ಯ ನಿರತ ಡಿವೈಎಸ್‍ಪಿ ಎಸ್ ಎಮ್ ಸಂದಿಗವಾಡ್ ಅವರನ್ನು ಸಂಗಣ್ಣ ಕರಡಿ ಎಳೆದಾಡಿದ್ದಾರೆ. ಇತ್ತ ತಂದೆ ಜೊತೆಯಲ್ಲಿದ್ದ ಪುತ್ರ ಸಹ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.

  • ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ – ಡಿವೈಎಸ್‍ಪಿ ಮೇಲೆ ಕೈ ಮಾಡಿದ ಸಂಸದ ಸಂಗಣ್ಣ ಕರಡಿ

    ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ – ಡಿವೈಎಸ್‍ಪಿ ಮೇಲೆ ಕೈ ಮಾಡಿದ ಸಂಸದ ಸಂಗಣ್ಣ ಕರಡಿ

    – ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪುತ್ರ ಅಮರೇಶ್ ಕರಡಿ

    ಕೊಪ್ಪಳ: ಬಿಜೆಪಿಯವರ ಆಟೋ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ನೂರಾರು ಬೆಂಬಲಿಗರೊಂದಿಗೆ ನಗರ ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿ ಸಂಸದ ಸಂಗಣ್ಣ ಕರಡಿ ಮತ್ತು ಪುತ್ರ ಅಮರೇಶ್, ಪೊಲಿಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಠಾಣೆಯಲ್ಲಿ ಕರ್ತವ್ಯ ನಿರತ ಡಿವೈಎಸ್‍ಪಿ ಎಸ್ ಎಮ್ ಸಂದಿಗವಾಡ್ ಅವರನ್ನು ಸಂಗಣ್ಣ ಕರಡಿ ಎಳೆದಾಡಿದ್ದಾರೆ. ಇತ್ತ ತಂದೆ ಜೊತೆಯಲ್ಲಿದ್ದ ಪುತ್ರ ಸಹ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

    ಬೆಳಗ್ಗೆ ಒತ್ತಾಯಪೂರ್ವಕವಾಗಿ ಬಿಜೆಪಿಯವರು ಅಂಗಡಿಗಳನ್ನು ಬಂದ್ ಮಾಡಿಸ್ತಿದ್ರು. ಈ ವೇಳೆಯಲ್ಲಿ ಪರವಾನಿಗೆ ಇಲ್ಲದ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು ನಗರ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನಗರ ಠಾಣೆಯ ಇನ್ಸ್ ಪೆಕ್ಟರ್ ರವಿ ಉಕ್ಕುಂದ ವಿರುದ್ಧ ಘೋಷಣೆ ಕೂಗಿದ್ದಾರೆ. ನಗರ ಠಾಣೆಯ ಬಾಗಿಲು ಮುಂದೆ ಕುಳಿತು ಸಂಸದ ಸಂಗಣ್ಣ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.