Tag: amaravati

  • ಬಿಹಾರ, ಆಂಧ್ರಕ್ಕೆ ಬಂಪರ್‌ ಗಿಫ್ಟ್‌ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು

    ಬಿಹಾರ, ಆಂಧ್ರಕ್ಕೆ ಬಂಪರ್‌ ಗಿಫ್ಟ್‌ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕ್ಯಾಬಿನೆಟ್‌ ಗುರುವಾರ ಬಿಹಾರ ಮತ್ತು ಆಂಧ್ರ ಪ್ರದೇಶದ 2 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದ ಅಮರಾವತಿ ಮತ್ತು ಉತ್ತರ ಬಿಹಾರದಿಂದ ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.

    ಅಮರಾವತಿ ರೈಲ್ವೆ ಯೋಜನೆಯು (Amaravati Railway Projects) 87 ಕಿಮೀ ರೈಲುಮಾರ್ಗ ನಿರ್ಮಿಸುವ ಯೋಜನೆಯಾಗಿದ್ದು, ಸುಮಾರು 2,245 ಕೋಟಿ ರೂ. ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಹೊಸ ರೈಲ್ವೆ ಯೋಜನೆಯು ಹೈದರಾಬಾದ್‌, ಚೆನ್ನೈ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳಿಗೆ ನೇರ ರೈಲ್ವೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಲ್ಲದೇ ಮಚಲಿಪಟ್ಟಣಂ, ಕೃಷ್ಣಪಟ್ಟಣಂ ಮತ್ತು ಕಾಕಿನಾಡ ಬಂದರುಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಇದನ್ನೂ ಓದಿ: ಶಿವಮೊಗ್ಗ | ವಾಹನ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸ್‌ನನ್ನೇ ಬಾನೆಟ್ ಮೇಲೆ ಹೊತ್ತೋಯ್ದ ಕಾರು ಚಾಲಕ

    2ನೇ ಯೋಜನೆಯು ಉತ್ತರ ಬಿಹಾರ (North Bihar) ಮತ್ತು ಈಶಾನ್ಯ ರಾಜ್ಯಗಳ ನಡುವಿನ ಸಂಪರ್ಕ ಹೆಚ್ಚಿಸುವ ಗುರಿ ಹೊಂದಿದೆ, ಇದು 256 ಕಿಮೀ ಉದ್ದದ ರೈಲು ಮಾರ್ಗ ನಿರ್ಮಿಸುವ ಯೋಜನೆಯಾಗಿದೆ. ಡಬಲ್‌ ಲೈನ್‌ ರೈಲು ಮಾರ್ಗ ಇದಾಗಿದ್ದು, 4,553 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಸುಮಾರು 40 ಸೇತುವೆಗಳೂ ಇರಲಿವೆ. ಜೊತೆಗೆ ಪವಿತ್ರ ನಗರವಾದ ಅಯೋಧ್ಯೆಯನ್ನು ಸೀತಾಮರ್ಹಿಯೊಂದಿಗೆ ಸಂಪರ್ಕಿಸುತ್ತದೆ.

    ಎರಡೂ ಯೋಜನೆಗಳಿಗೆ 6,798 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್‌ ಸಮಿತಿ ಹಸಿರು ನಿಶಾನೆ ತೋರಿದೆ. ಇದನ್ನೂ ಓದಿ: ಮಹಾ ಚುನಾವಣೆ: ಅಜಿತ್ ಪವಾರ್ ಬಣಕ್ಕೆ ಸಿಕ್ತು ಗಡಿಯಾರ ಚಿಹ್ನೆ – ಸುಪ್ರೀಂ ಕೋರ್ಟ್ ಅನುಮತಿ

    ಈ ಯೋಜನೆಯ ಅನುಕೂಲವೇನು?
    ಸುಮಾರು 313 ಕಿಮೀ ರೈಲು ಮಾರ್ಗ ಸ್ಥಾಪಿಸುವ ಈ ಯೋಜನೆಯು 168 ಹಳ್ಳಿಗಳನ್ನು ಸಂಪರ್ಕಿಸುತ್ತವೆ. ಸುಮಾರು 12 ಲಕ್ಷ ಜನರಿಗೆ ಅನುಕೂಲ ಒದಗಿಸಲಿದೆ. ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು ಮತ್ತು ಸಿಮೆಂಟ್ ಮುಂತಾದ ಸರಕುಗಳನ್ನು ಸಾಗಾಟಕ್ಕೆ ಹೊಸ ಮಾರ್ಗ ಸಿಕ್ಕಂತಾಗುತ್ತದೆ. ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣದಲ್ಲಿ 98 ಜನಕ್ಕೆ ಜೀವಾವಧಿ – ಕೊಪ್ಪಳ ಜಿಲ್ಲಾ ಕೋರ್ಟ್‌ ಐತಿಹಾಸಿಕ ತೀರ್ಪು!

  • ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!

    ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!

    ಅಮರಾವತಿ: ಅಕ್ರಮ ಮದ್ಯವನ್ನು ನಾಶಪಡಿಸುವಾಗ ಪೊಲೀಸರನ್ನು ಲೆಕ್ಕಿಸದೇ ಜನರು ಬಾಟಲಿಗಳನ್ನು ಹಿಡಿದು ಪರಾರಿಯಾದ ಘಟನೆ ಆಂಧ್ರಪ್ರದೇಶ (Andhra Pradesh) ಅಮರಾವತಿ (Amaravati) ಬಳಿಯ ಗುಂಟೂರು ಗ್ರಾಮದಲ್ಲಿ ನಡೆದಿದೆ.

    ಪೊಲೀಸರು ವಶಪಡಿಸಿಕೊಂಡ ಮದ್ಯವನ್ನು ನಾಶ ಮಾಡುತ್ತಿರುವ ವೇಳೆ ಮದ್ಯಪ್ರಿಯರು ಬಾಟಲಿ ಹಿಡಿದು ಓಡುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಬರಲಿದೆ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ; ಮೊದಲ 20 ಕಿಮೀವರೆಗೆ ಫ್ರೀ

    ವಿವಿಧ ಪ್ರಕರಣಗಳಲ್ಲಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸುಮಾರು 50 ಲಕ್ಷ ರೂ. ಮೌಲ್ಯದ 24,031 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಎಸ್‌ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಲ್ಲಚೆರುವು ಡಂಪಿಂಗ್ ಯಾರ್ಡ್ ನಲ್ಲಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಜನ ಮದ್ಯ ಬಾಟಲಿಗಾಗಿ ಮುಗಿಬಿದ್ದರು. ಇದನ್ನೂ ಓದಿ: ಮುಡಾ ಕೇಸ್‌ ತನಿಖೆಗೆ ಲೋಕಾಯುಕ್ತ ಎಂಟ್ರಿ – 18 ಅಧಿಕಾರಿಗಳಿಗೆ ನೋಟಿಸ್

    ಸಾಮಾನ್ಯವಾಗಿ ಮದ್ಯದ ಬಾಟಲಿಗಳನ್ನು ರೋಡ್ ರೋಲರ್ ಮೂಲಕ ನಾಶ ಮಾಡಲಾಗುತ್ತೆ, ಆದರೆ ಸೋಮವಾರ ಪೊಕ್ಲೈನ್ ಯಂತ್ರದ ಮೂಲಕ ನಾಶ ಮಾಡಲು ಮುಂದಾಗಿದ್ದರಿಂದ ಸ್ವಲ್ಪ ವಿಳಂಬವಾಗಿತ್ತು. ಇದರ ಪ್ರಯೋಜನ ಪಡೆದ ಜನರು ಮದ್ಯದ ಬಾಟಲಿಗಳ ಲೂಟಿಗೆ ಮುಂದಾದರು. ಇದನ್ನೂ ಓದಿ: ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಜೋಡಿಸಿಟ್ಟಿದ್ದ ಬಾಟಲಿಗಳತ್ತ ನುಗ್ಗಿದ ಜನರು ಪೊಲೀಸರ ಎದುರೇ ಕೈಗೆ ಸಿಕ್ಕಷ್ಟು ಬಾಟಲಿಗಳನ್ನ ಹಿಡಿದು ಓಡಿಹೋದರು. ಅಲ್ಲೆ ಇದ್ದ ಪೊಲೀಸರು ಜನರನ್ನು ತಡೆಯಲು ಸಾದ್ಯವಾಗಲಿಲ್ಲ.

    ನಾಶಕ್ಕೆ ಮುಂದಾಗಿದ್ದ ಬಾಟಲಿಗಳನ್ನು ಹೊತ್ತೊಯ್ದವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

  • ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

    ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

    ಅಮರಾವತಿ: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನ ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದ್ರೆ ಆನ್‌ಲೈನ್‌ ಯುಗದಲ್ಲಿ ಪ್ರೀತಿ – ಪ್ರೇಮ ಎಂಬುದು ಕ್ಷಣಿಕ ಸುಃಖವಾಗಿದೆ. ಬೆಳಗ್ಗೆ ಪ್ರಪೋಸ್‌ ಮಾಡಿ, ಸಂಜೆ ಹೊತ್ತಿಗೆ ಶೇಕ್‌ ಹ್ಯಾಂಡ್‌ ಮಾಡಿ ಬ್ರೇಕಪ್‌ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬಳು ವಿಧವೆ ತನ್ನ ಪ್ರಿಯಕರ (Lover) ಕೈಕೊಟ್ಟಿದ್ದಕ್ಕಾಗಿ ಅವನ ಮೇಲೆ ಆಸಿಡ್‌ ದಾಳಿಗೆ ಮುಂದಾಗಿದ್ದಾಳೆ.

    44 ವರ್ಷದ ವಿಧವೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆ (Marriage) ದಿನವೇ ಆತನ ಮೇಲೆ ಆಸಿಡ್‌ ದಾಳಿಗೆ ಯತ್ನಿಸಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ (Andhra Pradesh) ನಂಡಲೂರಿನಲ್ಲಿ ನಡೆದಿದೆ. ಘಟನೆ ನಂತರ ಯುವಕನ ವಿವಾಹ ಕಾರ್ಯಕ್ರಮ ರದ್ದಾಗಿದೆ. ಆಸಿಡ್‌ ದಾಳಿ (Acid Attack) ನಡೆಸಿದ ಆರೋಪಿ ಮಹಿಳೆ ಸಾಫ್ಟ್‌ವೇರ್‌ ಎಂಜಿನಿಯರ್‌ ಜಯಾ. ಈಕೆಗೆ 22 ವರ್ಷದ ಮಗನಿದ್ದಾನೆ. ಇನ್ನೂ ಆಸಿಡ್‌ ದಾಳಿಗೆ ಒಳಗಾದ ಮಾಜಿ ಪ್ರಿಯಕರ ಶೇಖ್ ಸೈಯದ್ (32), ಮದುವೆಯಾಗಲು ತಯಾರಾಗಿದ್ದ. ತನ್ನೊಂದಿಗೆ ಎಲ್ಲಾ ಮುಗಿದ ಮೇಲೆ ಕೈಕೊಟ್ಟನೆಂದು ಆಸಿಡ್‌ ದಾಳಿಗೆ ಮುಂದಾಗಿದ್ದಾಳೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರಿಂದ ಹೋರಾಟ – ಸರ್ಕಾರಿ ಶಾಲೆಗಳಲ್ಲಿ ತರಗತಿ ವ್ಯತ್ಯಯ?

    ಏನಿದು ಪ್ರೇಮಕಥೆ?
    ಸಯ್ಯದ್‌ ಮತ್ತು ಜಯಾ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಕಳೆದ 3 ವರ್ಷಗಳಲ್ಲಿ ಸೈಯ್ಯದ್‌ ಡ್ರೈವರ್‌ ಕೆಲಸಕ್ಕಾಗಿ ಕುವೈತ್‌ಗೆ ತೆರಳಿದ್ದ. ಭಾರತಕ್ಕೆ ಮರಳಿದ ನಂತರ ಜಯಾಳ ಸಂಪರ್ಕವನ್ನು ಬಿಟ್ಟು, ಇದೇ ಆಗಸ್ಟ್‌ 11ರಂದು ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಮದುವೆ ನಿಲ್ಲಿಸುವ ಸಲುವಾಗಿ ಜಯಾ ಕೂಡ ಅಲ್ಲಿಗೆ ಬಂದಿದ್ದಳು. ಆದ್ರೆ ಸಯ್ಯದ್‌ ಆಕೆಯೊಂದಿಗೆ ಇರಲ್ಲ ಎಂದು ಹೇಳಿದ. ಇದರಿಂದ ಕೋಪಗೊಂಡ ಮಹಿಳೆ ಬಾತ್‌ರೂಮ್‌ ಕ್ಲೀನರ್‌ ಆಸಿಡ್‌ ತಂಡು ಅವನ ಮೇಲೆ ಎರಚಿದ್ದಾಳೆ. ಆದ್ರೆ ಅವನು ತಪ್ಪಿಸಿಕೊಂಡಿದ್ದರಿಂದ ಸಯ್ಯದ್‌ ಚಿಕ್ಕಮ್ಮನಿಗೆ ಆಸಿಡ್‌ ತಾಗಿದೆ. ಇದೇ ಕೋಪದಿಂದ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸಯ್ಯದ್‌ ಜಯಾಳಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ 

    ಬಾತ್ ರೂಂ ಕ್ಲೀನಿಂಗ್ ಆಸಿಡ್ ಆಗಿದ್ದರಿಂದ ಸೈಯದ್ ಚಿಕ್ಕಮ್ಮನಿಗೆ ಗಂಭೀರ ಗಾಯಗಳಾಗಿಲ್ಲ. ಇಯ್ಯ ಜಯಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಇಬ್ಬರ ವಿರುದ್ಧವೂ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡು ಬಂಧಿಸಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ 

  • ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದ ಹಿರಿಯ ವಿದ್ಯಾರ್ಥಿಗಳು

    ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದ ಹಿರಿಯ ವಿದ್ಯಾರ್ಥಿಗಳು

    – ಅಪ್ರಾಪ್ತ ಆರೋಪಿಗಳನ್ನು ಪತ್ತೆ ಹಚ್ಚಿದ ಶ್ವಾನ

    ಅಮರಾವತಿ: 8 ವರ್ಷದ ವಿದ್ಯಾರ್ಥಿನಿಯ ಮೇಲೆ 13 ವರ್ಷದ ಮೂವರು ಹಿರಿಯರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಹತ್ಯೆಗೈದಿರುವ ಘಟನೆ ಆಂಧ್ರಪ್ರದೇಶದ (Andhra Pradesh) ನಂದ್ಯಾಲ ಜಿಲ್ಲೆಯ ಮುಚ್ಚುಮರ್ರಿ ಎಂಬಲ್ಲಿ ನಡೆದಿದೆ.

    ಅಪ್ರಾಪ್ತ ಆರೋಪಿಗಳನ್ನು ಪೊಲೀಸರು (Muchumarri police) ಬಂಧಿಸಿದ್ದು, ವಿಚಾರಣೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಹತ್ಯೆಯ ಬಳಿಕ ಬಾಲಕಿಯ ಶವವನ್ನು ಕಾಲುವೆಗೆ ಎಸೆದಿದ್ದಾರೆ. ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್‌ ಬಂಧನವಾಗಿ ಒಂದು ತಿಂಗಳು ಪೂರ್ಣ – ಅರೆಸ್ಟ್‌ ದಿನದಿಂದ ಇಲ್ಲಿವರೆಗೆ ಏನೇನಾಯ್ತು? ಇಲ್ಲಿದೆ ಟೈಮ್‌ಲೈನ್‌!

    ಬಾಲಕಿ ಭಾನುವಾರ ಮುಚ್ಚುಮರ್ರಿ ಪಾರ್ಕ್‍ನಲ್ಲಿ ಆಟವಾಡುತ್ತಿದ್ದಳು. ಬಳಿಕ ಅಲ್ಲಿಂದ ಆಕೆ ನಾಪತ್ತೆಯಾಗಿದ್ದು, ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಶ್ವಾನದಳವನ್ನು ಬಳಕೆ ಮಾಡಿಕೊಂಡು ಹುಡುಕಾಟ ನಡೆಸಿದಾಗ, ಮೂವರು ಅಪ್ರಾಪ್ತರ ಬಳಿ ಶ್ವಾನ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಇಬ್ಬರು ಬಾಲಕರು 6ನೇ ತರಗತಿ ವಿದ್ಯಾರ್ಥಿಗಳು, ಓರ್ವ 7ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೇವಲ ನಾಮ್‌ಕಾವಸ್ತೆ ಹೋರಾಟ – ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್‌ ಗರಂ

  • ಟೊಮೆಟೋಗೆ ಬಂಗಾರದ ಬೆಲೆ – 30 ಲಕ್ಷ ಗಳಿಸಿದ್ದ ರೈತನ ಕೊಲೆ

    ಟೊಮೆಟೋಗೆ ಬಂಗಾರದ ಬೆಲೆ – 30 ಲಕ್ಷ ಗಳಿಸಿದ್ದ ರೈತನ ಕೊಲೆ

    ಅಮರಾವತಿ: ಟೊಮೆಟೋ (Tomato) ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ಹಣಕ್ಕಾಗಿ ದರೋಡೆಕೋರರು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಆತ ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ. ಜುಲೈ ಮೊದಲ ವಾರದಲ್ಲಿ ಬೆಲೆ ಏರಿಕೆಯಾಗುತ್ತಿದ್ದಾಗ ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ. ಸುಮಾರು 70 ಬಾಕ್ಸ್ ಟೊಮೆಟೋ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಪತಿ ವಿರುದ್ಧ ಕೊಲೆ ಆರೋಪ

    ಪ್ರಾಥಮಿಕ ತನಿಖೆಯ ಪ್ರಕಾರ ಕೊಲೆಯಲ್ಲಿ ದರೋಡೆಕೋರರ ಜೊತೆಗೆ ಕೆಲವು ಉದ್ಯಮಿಗಳು ಭಾಗಿಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ.

    ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆತನನ್ನು ದರೋಡೆಕೋರರು ಅಡ್ಡಗಟ್ಟಿದ್ದರು. ಆತನ ಬಾಯಿಗೆ ಬಲವಂತವಾಗಿ ಬಟ್ಟೆ ತುರುಕಿ ಮರಕ್ಕೆ ಕೈಕಾಲು ಕಟ್ಟಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Don’t Allow him to Speak ಎಂದ ಸಿಎಂ: ಪ್ಲೀಸ್ ಸೇರಿಸಿ Kill Him ಎನ್ನಬಹುದಾ ಎಂದ ಸುರೇಶ್ ಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಗೆ ಹೊಸ ಅರ್ಥ ಕೊಟ್ಟ ಅಮೆರಿಕ ವರ-ಆಂಧ್ರ ವಧು

    ಪ್ರೀತಿಗೆ ಹೊಸ ಅರ್ಥ ಕೊಟ್ಟ ಅಮೆರಿಕ ವರ-ಆಂಧ್ರ ವಧು

    ಅಮರಾವತಿ: ಲವ್ ಇಸ್ ಬ್ಲೈಂಡ್ ಎಂಬ ವಾಕ್ಯ ಎಲ್ಲರಿಗೂ ಗೊತ್ತೆ ಇದೆ. ನಾವು ಹಲವು ಉದಾಹರಣೆಗಳನ್ನು ನೋಡಿದ್ದೇವೆ, ಓದಿದ್ದೇವೆ. ಈಗ ಮತ್ತೊಂದು ಉದಾಹರಣೆಯೊಂದು ನಮ್ಮ ಕಣ್ಣ ಮುಂದೆ ಇದ್ದು ಅಮೆರಿಕದ ಯುವಕನನ್ನು ಆಂಧ್ರ ಪ್ರದೇಶದ ಯುವತಿ ಮದುವೆಯಾಗಿ ನಮ್ಮ ಪ್ರೀತಿಗೆ ಹೊಸ ಅರ್ಥ ಕೊಟ್ಟಿದ್ದಾರೆ.

    ಈ ಮುದ್ದು ಜೋಡಿಯನ್ನು ನೋಡಲು ಹಲವು ಜನರು ಮದುವೆಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋ ವೈರಲ್ ಆಗುತ್ತಿದೆ. ಈ ಜೋಡಿಯನ್ನು ನೋಡಿದ ಜನರು ನಿಜವಾದ ಪ್ರೀತಿಗೆ ಯಾವುದೇ ಬಣ್ಣ, ಗಡಿ ಬೇಕಾಗಿಲ್ಲ ಎಂದು ಶುಭಕೋರುತ್ತಿದ್ದಾರೆ. ಇದನ್ನೂ ಓದಿ: RTPSನಲ್ಲಿ ಕಳಚಿಬಿದ್ದ ಬಂಕರ್‌ಗಳು – ವಿದ್ಯುತ್ ಉತ್ಪಾದನೆ ಸ್ಥಗಿತ 

    ನಿರ್ಮಲವಾದ ಪ್ರೀತಿ ಎರಡು ಹೃದಯಗಳನ್ನು ಒಂದು ಮಾಡುತ್ತೆ ಎಂಬುದಕ್ಕೆ ಆಂಧ್ರ ಯುವತಿ, ಅಮೆರಿಕ ಯುವಕ ನಿರ್ದಶನರಾಗಿದ್ದಾರೆ. ಆಂಧ್ರದ ಟಿ.ಹರ್ಷವಿ ಹಾಗೂ ಅಮೆರಿಕದ ದಮಿಯನ್ ಫ್ರ್ಯಾಂಕ್ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

    ವಧು ಹರ್ಷವಿ, ತಿರುಪತಿಯ ಜಯಚಂದ್ರ ರೆಡ್ಡಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ ಬಿ.ಟೆಕ್ ಪೂರ್ಣಗೊಳಿಸಿರುವ ಹರ್ಷವಿ, ಅಮೆರಿಕದ ಬೋಸ್ಟನ್‍ನಲ್ಲಿರುವ ಫ್ರ್ಯಾಂಕ್ ಪರಿಚಯವಾಗಿದೆ. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಹಿರಿಯರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಎಲ್ಲರ ಒಪ್ಪಿಗೆ ನಂತರ ಇಬ್ಬರು ಸಂಪ್ರದಾಯದ ಪ್ರಕಾರ ಸಪ್ತಪದಿಯನ್ನು ತುಳಿಯುವ ಮೂಲಕ ಸಂಬಂಧಕ್ಕೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು:  ಹೆಚ್‍ಡಿಕೆ ಕಿಡಿ

    ಅಮೆರಿಕದಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಆದರೆ ಹರ್ಷವಿ ಕುಟುಂಬದ ಒತ್ತಾಯದ ಮೇರೆಗೆ ತಿರುಪತಿಯಲ್ಲಿ ಮತ್ತೊಮ್ಮೆ ಇವರಿಬ್ಬರ ವಿವಾಹ ಕಾರ್ಯ ನೆರವೇರಿದೆ. ತಿರುಪತಿಯ ಹೋಟೆಲ್ ಒಂದರಲ್ಲಿ ಕಳೆದ ಗುರುವಾರ ರಾತ್ರಿ ಅದ್ಧೂರಿ ಮದುವೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • 90 ಕಿ.ಮೀವರೆಗೂ ಬೈಕ್‍ನಲ್ಲಿ ಮಗನ ಮೃತದೇಹ ಸಾಗಿಸಿದ ತಂದೆ

    90 ಕಿ.ಮೀವರೆಗೂ ಬೈಕ್‍ನಲ್ಲಿ ಮಗನ ಮೃತದೇಹ ಸಾಗಿಸಿದ ತಂದೆ

    ಅಮರಾವತಿ: 90 ಕಿಮೀ. ದೂರದಲ್ಲಿದ್ದ ತಮ್ಮ ಹುಟ್ಟೂರಿಗೆ ಮಗನ ಮೃತದೇಹ ಸಾಗಿಸಲು ಅಂಬುಲೆನ್ಸ್ ಚಾಲಕ 20,000 ರೂ. ಕೇಳಿದ್ದಾನೆ. ಈ ಹಿನ್ನೆಲೆ ತಂದೆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ತಡೆದು ಸವಾರನನ್ನು ಬೇಡಿಕೊಂಡು ತನ್ನ ಹುಟ್ಟೂರಿಗೆ ಸೇರಿದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ

    ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್(RUIA) ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಃಖಿತ ವ್ಯಕ್ತಿ ನರಸಿಂಹುಲು ತನ್ನ 10 ವರ್ಷದ ಮಗ ಜಸ್ವಾನನ್ನು ಕಳೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ನರಸಿಂಹುಲು ಹುಟ್ಟೂರಿಗೆ 90 ಕಿ.ಮೀ ದೂರವಿತ್ತು. ಈ ಹಿನ್ನೆಲೆ ಅಂಬುಲೆನ್ಸ್ ಚಾಲಕನನ್ನು ನರಸಿಂಹುಲು ಆಸ್ಪತೆಯಿಂದ ತಮ್ಮೊರಿಗೆ ಜಸ್ವಾ ಮೃತದೇಹವನ್ನು ಕರೆದೊಯ್ಯಲು ಕೇಳಿದ್ದಾನೆ. ಇದನ್ನೂ ಓದಿ:  ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

    ಚಾಲಕ 20,000 ರೂ. ಬೇಡಿಕೆ ಇಟ್ಟಿದ್ದಾನೆ. ಬಡತಂದೆಗೆ ಚಾಲಕ ಮಾಡಿದ ಡಿಮ್ಯಾಂಡ್ ಕೇಳಿ ಶಾಕ್ ಆಗಿದ್ದು, ಮಗನ ದೇಹ ಎತ್ತಿಕೊಂಡು ಆ ಸ್ಥಳದಲ್ಲಿ ಓಡಾಡುತ್ತಿದ್ದ ಬೈಕ್ ಸವಾರರಿಗೆ 90 ಕಿ.ಮೀಟರ್ ದೂರದಲ್ಲಿರುವ ತನ್ನ ಹುಟ್ಟೂರಿಗೆ ಬಿಡುವಂತೆ ಮನವಿ ಮಾಡಿಕೊಂಡಿದ್ದಾನೆ. ನರಸಿಂಹುಲು ಅವರು ಮಾವಿನ ತೋಟದಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಹಣವಿಲ್ಲದ ಕಾರಣ ಹೊರಗಿನಿಂದ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತೋಟದ ಮಾಲೀಕರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಗ್ರಾಮದಿಂದ ಆಂಬುಲೆನ್ಸ್ ಕಳುಹಿಸಿದ್ದಾರೆ. ಆದರೆ ಇದನ್ನು ಗಮನಿಸಿದ ಖಾಸಗಿ ಅಂಬುಲೆನ್ಸ್ ಚಾಲಕ ಗ್ರಾಮದಿಂದ ಬಂದಿದ್ದ ಚಾಲಕನನ್ನು ಥಳಿಸಿ ಆಸ್ಪತ್ರೆಯಿಂದ ಓಡಿಸಿದ್ದಾರೆ. ಈ ಹಿನ್ನೆಲೆ ತಂದೆ ಬೈಕ್‍ನಲ್ಲಿ ಶವವನ್ನು ಹೊತ್ತೊಯ್ದಿದ್ದಾನೆ.

    ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದು, ತಿರುಪತಿಯ RUIA ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪುಟ್ಟಮಗನನ್ನು ಕರೆದುಕೊಂಡು ಹೋಗಬೇಕೆಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಅದಕ್ಕೆ ಯಾರು ಒಪ್ಪಿಕೊಳ್ಳಲಿಲ್ಲ. ಶವಾಗಾರದ ವ್ಯಾನ್‍ಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಬರೆದು ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

    ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಜನಾಂಗದ ಬಾಲಕ ಜಸ್ವಾ ಯಕೃತ್ತಿನ(ಲಿವರ್) ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಸಂಪೂರ್ಣ ಘಟನೆಯ ತನಿಖೆಗೆ ಆದೇಶಿಸಿದೆ.

  • ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ

    ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ

    ಅಮರಾವತಿ: ಮೈಸೂರಿನಿಂದ ಆಂಧ್ರಪ್ರದೇಶಗೆ ಬಂದ ರಾಯಲ್ ಎನ್‍ಫೀಲ್ಡ್ ಬೈಕ್ ಸ್ಫೋಟಗೊಂಡ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬುಲೆಟ್ ಎಂದೇ ಪ್ರಸಿದ್ಧವಾಗಿರುವ ರಾಯಲ್ ಎನ್ ಫೀಲ್ಡ್ ಬೈಕ್ ಮೈಸೂರಿನ ರವಿಚಂದ್ರನ್ ಖರೀದಿಸಿದ್ದಾನೆ. ಹೊಸ ಬೈಕ್ ಖರೀದಿಸಿದ ನಂತರ ರವಿಚಂದ್ರನ್ ಮೈಸೂರಿನಿಂದ ಆಂಧ್ರದ ಕುಂದಕಲ್ಲಿನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಬೈಕ್‍ನಲ್ಲೇ ಬಂದಿದ್ದಾನೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    https://twitter.com/AlluHarish17/status/1510463748498022400?ref_src=twsrc%5Etfw%7Ctwcamp%5Etweetembed%7Ctwterm%5E1510463748498022400%7Ctwgr%5E%7Ctwcon%5Es1_&ref_url=https%3A%2F%2Fpipanews.com%2Froyal-enfield-bike-blast-in-andhra-video-became-viral-in-social-media%2F

    ಮೈಸೂರಿನಿಂದ ಆಂಧ್ರಗೆ ಬೈಕ್ ಎಲ್ಲಿಯೂ ನಿಲ್ಲಿಸದೇ 387 ಕಿಲೋಮೀಟರ್‍ವರೆಗೂ ಕ್ರಮಿಸಿದ್ದಾನೆ. ಆಂಜನೇಯ ದೇಗುಲಕ್ಕೆ ಪೂಜೆಗೆಂದು ಬೈಕ್ ಪಾರ್ಕ್ ಮಾಡಿ ಒಳಗೆ ಹೋಗಿದ್ದಾನೆ. ಇತ್ತ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ.

    ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಬೈಕ್ ಸ್ಫೋಟಗೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: SSLC ಪರೀಕ್ಷೆ ವೇಳೆ ಜೇನುನೊಣಗಳ ದಾಳಿ – ಐವರಿಗೆ ಗಾಂಭೀರ ಗಾಯ 

  • ಗರ್ಭಿಣಿಯಾಗುವ ಆಸೆಗೆ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸಿದ ಯುವತಿ

    ಗರ್ಭಿಣಿಯಾಗುವ ಆಸೆಗೆ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸಿದ ಯುವತಿ

    ಅಮರಾವತಿ: ಗರ್ಭಿಣಿಯಾಗಲು ಬಯಸಿದ್ದ ಯುವತಿ ಹಸುಗುಸಿನ ಹೊಕ್ಕಳ ಬಳ್ಳಿ ಸೇವಿಸಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ.

    19 ವರ್ಷದ ಯುವತಿ ಮೃತಳಾಗಿದ್ದಾಳೆ. ಈಕೆ ದಾಚೆಪಲ್ಲಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ತುಬಡು ಗ್ರಾಮದ ರವಿ ಜೊತೆಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದಳು. ಗರ್ಭಿಣಿಯಾಗಲು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದಳು. ಇದಕ್ಕಾಗಿ ನಾಟಿ ಔಷಧಗಳನ್ನೆಲ್ಲಾ ಪಡೆದಿದ್ದರು. ಗರ್ಭಿಣಿಯಾಗಲು ಹೊಕ್ಕಳ ಬಳ್ಳಿ ಸೇವಿಸಿ ಆಕೆ ಸಾವನ್ನಪ್ಪಿರುವುದಾಗಿ ಕೆಲ ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ:  ಈ ಬದುಕು ಶಾಶ್ವತವಲ್ಲ, ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ: ಸಿಎಂ ಭಾವುಕ

    ಆಕೆ ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, ಕೂಡಲೇ ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಆಕೆ ತಾಯಿ ನಾಂದೆಡ್ಲದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನಂತರ ಕ್ರಮ ಕೈಗೊಳ್ಳುವುದಾಗಿ ನಾಂದೆಡ್ಲದ ಸಿಐ ಸತೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಸ್ತ್ರಿ ರೋಗ ತಜ್ಞೆ ಡಾ. ಕವಿತಾ ಈ ಕುರಿತಾಗಿ ಮಾತನಾಡಿ, ಗರ್ಭಿಣಿಯಾಗಲು ಹೊಕ್ಕಳು ಬಳ್ಳಿ ಸೇವನೆ ಅವೈಜ್ಞಾನಿಕ. ಈ ಕುರಿತಾಗಿ ಮಹಿಳೆಯರಲ್ಲಿ ಅರಿವಿನ ಕೊರತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ. ನಂಬಿಕೆ ಮತ್ತು ಮೂಢನಂಬಿಕೆ ಪದ್ಧತಿಗಳಲ್ಲಿ ನಂಬಿಕೆ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.

  • ಆಂಧ್ರಪ್ರದೇಶಕ್ಕೆ ಅಮರಾವತಿ ರಾಜಧಾನಿ:  ಜಗನ್ ಮೋಹನ್ ರೆಡ್ಡಿ

    ಆಂಧ್ರಪ್ರದೇಶಕ್ಕೆ ಅಮರಾವತಿ ರಾಜಧಾನಿ: ಜಗನ್ ಮೋಹನ್ ರೆಡ್ಡಿ

    ಅಮರಾವತಿ: ರಾಜಧಾನಿಗಳ ಬಗ್ಗೆ ವಿವಾದದ ನಡೆಯುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜ್ಯಕ್ಕೆ ಒಂದೇ ರಾಜಧಾನಿ ಅದು ಅಮರಾವತಿ ಎಂದು ಘೋಷಿಸಿದ್ದಾರೆ.

    ಎಪಿ ಮರುಸಂಘಟನೆ ಕಾಯಿದೆ, 2014 ಸೆಕ್ಷನ್ 6ರ ಅಡಿಯಲ್ಲಿ ಕೇಂದ್ರ ಸರ್ಕಾರವು 2014 ಮಾರ್ಚ್28 ರಂದು ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿಗಾಗಿ ಪರ್ಯಾಯಗಳನ್ನು ಅಧ್ಯಯನ ಮಾಡಲು ಕೆ.ಸಿ ಶಿವರಾಮಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಪ್ರತಿ-ಅಫಿಡವಿಟ್ ಉಲ್ಲೇಖಿಸಿದೆ. ಸಮಿತಿಯು ಅದೇ ವರ್ಷದ ಆಗಸ್ಟ್ 30 ರಂದು ತನ್ನ ವರದಿಯನ್ನು ಸಲ್ಲಿಸಿತು. ಎರಡು ದಿನಗಳ ನಂತರ ಸೆಪ್ಟೆಂಬರ್ 1 ರಂದು ಆಂಧ್ರ ಪ್ರದೇಶ ಸರ್ಕಾರಕ್ಕೆ ಕಳುಹಿಸಲಾಯಿತು. ಅಫಿಡವಿಟ್‍ನಲ್ಲಿ ರಾಜ್ಯ ಸರ್ಕಾರವು  2015 ಏಪ್ರಿಲ್ 23ರಂದು ರಾಜಧಾನಿಯನ್ನು ಅಮರಾವತಿ ಎಂದು ಸೂಚಿಸಿ ಆದೇಶವನ್ನು ಹೊರಡಿಸಿದೆ ಎಂದು ಉಲ್ಲೇಖಿಸಿದೆ. ಅದೇ ವೇಳೆ ರಾಜ್ಯದ ರಾಜಧಾನಿಯನ್ನು ಆಯಾ ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ:  ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    2020 ಜುಲೈ 31 ರಂದು ರಾಜ್ಯ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯಿದೆ 2020ರ ಮೂಲಕ ಆಂಧ್ರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಮೂರು ಆಡಳಿತ ಸ್ಥಾನಗಳನ್ನು ಹೊಂದಿರಬೇಕು ಎಂದು ಎಂದು ಅಫಿಡವಿಟ್ ಉಲ್ಲೇಖಿಸಿದೆ. ಅವುಗಳನ್ನು ರಾಜಧಾನಿಗಳೆಂದು ಕರೆಯಬೇಕು. ಅಮರಾವತಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶವನ್ನು ಶಾಸಕ ರಾಜಧಾನಿ ಎಂದು ಕರೆಯಲಾಗುವುದು, ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶವನ್ನು ಕಾರ್ಯನಿರ್ವಾಹಕ ರಾಜಧಾನಿ ಮತ್ತು ಕರ್ನೂಲ್ ನಗರಾಭಿವೃದ್ಧಿ ಪ್ರದೇಶವನ್ನು ನ್ಯಾಯಾಂಗ ರಾಜಧಾನಿ ಎಂದು ಕರೆಯಲಾಗುವುದು. ಆಂಧ್ರಪ್ರದೇಶದ ಬಿಜೆಪಿ ನಾಯಕ ವೈಎಸ್ ಚೌಧರಿ ಕಳೆದ ವಾರ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಘೋಷಿಸುವ ಬೇಡಿಕೆಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

    ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಬೆಂಬಲಿಸಲು ಬಿಜೆಪಿ ಪರವಾಗಿ ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಯಾವುದೇ ಅಧಿಕಾರವಿಲ್ಲದೇ ರಾಜ್ಯದಲ್ಲಿ ಮೂರು ರಾಜಧಾನಿಗಳು ಎಂದು ವೈಎಸ್‌ಆರ್‌ಸಿಪಿ ಸರ್ಕಾರ ಘೋಷಿಸಿತು. ರಾಜಧಾನಿ ಅಭಿವೃದ್ಧಿಗೆ ಭೂಮಿ ನೀಡಿದ ಸ್ಥಳೀಯ ರೈತರನ್ನು ಬೆಂಬಲಿಸುವ ಸಲುವಾಗಿ ಬಿಜೆಪಿ ಅವರನ್ನು ಬೆಂಬಲಿಸುತ್ತದೆ ಮತ್ತು ಅಮರಾವತಿಯೇ ರಾಜಧಾನಿಯಾಗಿ ಉಳಿಯುವಂತೆ ಮಾಡುತ್ತದೆ ಎಂದು ಚೌಧರಿ ಹೇಳಿದ್ದರು.