Tag: Amaranath Yatra

  • ಅಮರನಾಥ ಯಾತ್ರೆಗೆ ಇಂದಿನಿಂದ ನೋಂದಣಿ ಶುರು – ಅರ್ಜಿ ಸಲ್ಲಿಕೆ ಹೇಗೆ? ದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

    ಅಮರನಾಥ ಯಾತ್ರೆಗೆ ಇಂದಿನಿಂದ ನೋಂದಣಿ ಶುರು – ಅರ್ಜಿ ಸಲ್ಲಿಕೆ ಹೇಗೆ? ದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

    ಶ್ರೀನಗರ: ಈ ಸಾಲಿನ ಅಮರನಾಥ ಯಾತ್ರೆಯ (Amaranath Yatra) ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆ ಹಾಗೂ ಅವಶ್ಯ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    2025ರ ಅಮರನಾಥ ಯಾತ್ರೆ ಜೂ.29 ರಿಂದ ಪ್ರಾರಂಭವಾಗಿ ಆ.19 ರವೆರೆಗೆ ನಡೆಯಲಿದ್ದು, ಇಂದಿನಿಂದ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಸಮುದ್ರಮಟ್ಟದಿಂದ 12,756 ಅಡಿ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗದ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

    ಅಮರನಾಥ ಯಾತ್ರೆಗೆ ನೋಂದಣಿ ಹೇಗೆ?
    ಯಾತ್ರಿಕರು ಶ್ರೀ ಅಮರನಾಥ ದೇವಾಲಯ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ದೇಶಾದ್ಯಂತ ಗೊತ್ತುಪಡಿಸಿದ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಗಣತಿ ದಂಗಲ್‌ – ಒಕ್ಕಲಿಗ ಶಾಸಕರ ಸಭೆ ಕರೆದ ಡಿಸಿಎಂ

    ಆನ್‌ಲೈನ್ ನೋಂದಣಿ ಹಂತಗಳು:
    1.https://jksasb.nic.in/ಗೆ ಭೇಟಿ ನೀಡಿ.
    2. 2025ರ ಯಾತ್ರಾ ನೋಂದಣಿ ಮೇಲೆ ಕ್ಲಿಕ್ ಮಾಡಿ.
    3. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
    – ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
    – ಇದೇ ಏ.15ರ ನಂತರ ನೀಡಲಾದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ
    – ಗುರುತಿನ ಚೀಟಿ
    4. ನೋಂದಣಿಯನ್ನು ಪೂರ್ಣಗೊಳಿಸಲು 220 ರೂ. ಪಾವತಿಸಬೇಕು.

    ಆಫ್‌ಲೈನ್ ಮೋಡ್:
    ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳ ನಿರ್ದಿಷ್ಟ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿಯನ್ನು ಮಾಡಿಕೊಳ್ಳಬಹುದು. ವೈಯಕ್ತಿಕವಾಗಿ ನೋಂದಾಯಿಸುವಾಗ ಮೂಲ ದಾಖಲೆಗಳು ಮತ್ತು ಕಡ್ಡಾಯವಾಗಿ ಆರೋಗ್ಯ ಪ್ರಮಾಣಪತ್ರವನ್ನು ಕೊಂಡೊಯ್ಯಬೇಕು. ಅಧಿಕೃತವಾಗಿ ವೈದ್ಯರು ಅಥವಾ ಸಂಸ್ಥೆಗಳು ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರವಿಲ್ಲದೆ ಯಾರಿಗೂ ಯಾತ್ರೆಗೆ ತೆರಳಲು ಅವಕಾಶವಿರುವುದಿಲ್ಲ. ಈ ಪ್ರಮಾಣಪತ್ರವು ನೀವು ಎತ್ತರದ ಚಾರಣವನ್ನು ತಡೆದುಕೊಳ್ಳಲು ದೈಹಿಕವಾಗಿ ಸದೃಢರಾಗಿದ್ದೀರಿ ಎಂಬುವುದನ್ನು ಖಚಿತಪಡಿಸುತ್ತದೆ.

    ಆರೋಗ್ಯ ಪ್ರಮಾಣಪತ್ರವು ಇದೇ ಏ.15ರ ನಂತರದ್ದಾಗಿರಬೇಕು. 13 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಯಾತ್ರಿಕರಿಗೆ ಅವಕಾಶವಿಲ್ಲ.

    ಯಾತ್ರಿಕರಿಗೆ ಅನುಸರಿಸಬೇಕಾದ ಕೆಲವು ನಿಯಮಗಳು:
    ಕನಿಷ್ಠ ಒಂದು ತಿಂಗಳ ಮೊದಲು ದೈಹಿಕವಾಗಿ ಸದೃಢರಾಗಿರಲು ತರಬೇತಿಯನ್ನು ಪ್ರಾರಂಭಿಸಿ.
    ಉಣ್ಣೆ ಬಟ್ಟೆ, ವಾಟರ್‌ಪ್ರೂಫ್ ಶೂ, ರೇನ್‌ಕೋಟ್ ಮತ್ತು ಟಾರ್ಚ್ ಅನ್ನು ಕೊಂಡೊಯ್ಯಿರಿ.
    ಯಾತ್ರಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಅನುಸರಿಸಿ.
    ಪ್ಲಾಸ್ಟಿಕ್ ಚೀಲಗಳನ್ನು ಕೊಂಡೊಯ್ಯುವುದು ಬೇಡ.
    ಯಾತ್ರೆಯ ಸಮಯದಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ತಪ್ಪಿಸಿ.
    ಕೆಟ್ಟ ಹವಾಮಾನದ ಸಮಯದಲ್ಲಿ ಯಾತ್ರೆಯನ್ನು ಕೈಗೊಳ್ಳಬೇಡಿ.

    ಯಾತ್ರೆಯ ದಿನಾಂಕ
    ಪ್ರಾರಂಭ: ಜೂನ್ 29, 2025
    ಅಂತಿಮ ದಿನಾಂಕ: ಆಗಸ್ಟ್ 19, 2025
    ಮಾರ್ಗಗಳು: ಪಹಲ್ಗಾಮ್ ಮಾರ್ಗ, ಬಾಲ್ಟಾಲ್ ಮಾರ್ಗ

    ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಹೆಲಿಕಾಪ್ಟರ್ ಸೇವೆಗಾಗಿ ಕಳೆದ ವರ್ಷ ವಿಧ-ವಿಧವಾದ ದರ ನಿಗದಿ ಮಾಡಲಾಗಿತ್ತು. ಈ ಬಾರಿಯೂ ಕೂಡ ಒಂದೊಂದು ದರ ನಿಗದಿ ಮಾಡಲಾಗಿದ್ದು, ಶ್ರೀನಗರ ಏರ್‌ಪೋರ್ಟ್‌ನಿಂದ ಸ್ಟ್ಯಾಂಡರ್ಡ್‌ ಪ್ಯಾಕೇಜ್ 36,000 ರೂ. ಹಾಗೂ ಡಿಲಕ್ಸ್ ಪ್ಯಾಕೇಜ್ 41,000 ರೂ. ನಿಗದಿ ಮಾಡಲಾಗಿದೆ.ಇದನ್ನೂ ಓದಿ: ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ

  • ಅಮರನಾಥ ಯಾತ್ರೆ ಕೈಗೊಂಡಿದ್ದ ಮಾಗಡಿಯ 5 ಮಂದಿ ಸೇಫ್‌

    ಅಮರನಾಥ ಯಾತ್ರೆ ಕೈಗೊಂಡಿದ್ದ ಮಾಗಡಿಯ 5 ಮಂದಿ ಸೇಫ್‌

    ರಾಮನಗರ: ಅಮರನಾಥ ಯಾತ್ರೆ (Amaranath Yatra) ಕೈಗೊಂಡಿದ್ದ ರಾಮನಗರ (Ramanagara) ಜಿಲ್ಲೆ ಮಾಗಡಿ ತಾಲೂಕಿನ 5 ಮಂದಿ ಯಾತ್ರಾರ್ಥಿಗಳು ಸೇಫ್ ಆಗಿದ್ದಾರೆ. ಯಾತ್ರೆ ಕೈಗೊಂಡಿದ್ದ ಇನ್ನೂ ಅನೇಕ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಜು. 2ರಂದು ಮಾಗಡಿಯಿಂದ ಅಮರನಾಥ ಯಾತ್ರೆಗೆ ಹೋಗಿದ್ದ ಯಾತ್ರಾರ್ಥಿಗಳು ಪ್ರವಾಹಕ್ಕೂ ಮುನ್ನವೇ ಅಮರನಾಥ ದರ್ಶನ ಮುಗಿಸಿದ್ದಾರೆ. ಬಳಿಕ ಶ್ರೀನಗರದ ವೈಷ್ಣೋದೇವಿ ದರ್ಶನಕ್ಕೆ ತೆರಳಲು ಮುಂದಾದ ಯಾತ್ರಾರ್ಥಿಗಳಿಗೆ ಪ್ರವಾಹ ಅಡ್ಡಿಯಾಗಿದೆ. ಇದನ್ನೂ ಓದಿ: ಅಮರನಾಥದಲ್ಲಿ ಭಾರೀ ಮಳೆ – ಸಂಕಷ್ಟದಲ್ಲಿ ಧಾರವಾಡದ ಐವರು ಯಾತ್ರಿಗಳು

    ಸದ್ಯ ಸಿಆರ್‌ಪಿಎಫ್‌ನ 46 ಕ್ಯಾಂಪ್‌ನಲ್ಲಿ ಯಾತ್ರಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಗಡಿಯಿಂದ ತೆರಳಿದ್ದ ಐವರು ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೇ ರಾಜ್ಯದ ಹಲವು ಮಂದಿ ಯಾತ್ರಾರ್ಥಿಗಳು ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲಿ ಸುರಕ್ಷಿತವಾಗಿದ್ದು, ಕೆಲವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

    ಜಮ್ಮು-ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯಕ್ಕೆ ಯಾತ್ರೆ ಕೈಗೊಂಡಿದ್ದ 80 ಕ್ಕೂ ಹೆಚ್ಚು ಮಂದಿ ಕನ್ನಡಿಗರು ಪ್ರವಾಹದ ಕಾರಣಕ್ಕೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಸಂಕಷ್ಟದಲ್ಲಿ ರಾಜ್ಯದ 83 ಅಮರನಾಥ ಯಾತ್ರಿಕರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮರನಾಥ ಯಾತ್ರೆ ನಿಲ್ಲಿಸಿ, ಕಾಶ್ಮೀರ ತೊರೆಯಿರಿ – ಯಾತ್ರಿಗಳಿಗೆ ಸರ್ಕಾರ ಸೂಚನೆ

    ಅಮರನಾಥ ಯಾತ್ರೆ ನಿಲ್ಲಿಸಿ, ಕಾಶ್ಮೀರ ತೊರೆಯಿರಿ – ಯಾತ್ರಿಗಳಿಗೆ ಸರ್ಕಾರ ಸೂಚನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯಲ್ಲಿ ತೊಡಗಿರುವ ಯಾತ್ರಿಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಲು ಹೊಂಚು ಹಾಕಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

    ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿಯ ಸಿಕ್ಕಿದ ಹಿನ್ನೆಲೆಯಲ್ಲಿ ಪವಿತ್ರ ಅಮರನಾಥ ಯಾತ್ರೆಯನ್ನು ನಿಲ್ಲಿಸಿ ಕಾಶ್ಮೀರ ತೊರೆದು ತಮ್ಮ ಊರುಗಳಿಗೆ ಮರಳಿ ಹೋಗಿ ಎಂದು ಜಮ್ಮು ಕಾಶ್ಮೀರದ ಗೃಹ ಸಚಿವಾಲಯ ಯಾತ್ರಿಗಳಿಗೆ ಸೂಚಿಸಿದೆ.

    ಯಾಕೆ ಈ ಸೂಚನೆ?
    ಅಮರನಾಥ ಯಾತ್ರೆಗೆ ಸಾಗುವ ಮಾರ್ಗಗಳಲ್ಲಿ ವಿದೇಶಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಅಮೆರಿಕದ ಎಂ-24 ಸ್ನೈಪರ್ ರೈಫಲ್ ಅನ್ನು ಸೇನೆ ವಶಪಡಿಸಿಕೊಂಡಿದೆ. ಪತ್ತೆಯಾಗಿರುವ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನದ ಶಸ್ತ್ರಾಸ್ತ್ರ ಘಟಕದ ಚಿಹ್ನೆ ಪತ್ತೆಯಾಗಿದೆ. ಹೀಗಾಗಿ ಅಮರನಾಥ ಯಾತ್ರಿಕರು ಕೂಡಲೇ ಜಮ್ಮು ಕಾಶ್ಮೀರ ಬಿಟ್ಟು ತೆರಳುವಂತೆ ಸೂಚನೆ ರವಾನಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಸಹಾಯ ಮಾಡುತ್ತಿದೆ ಎನ್ನುವ ಭಾರತದ ವಾದಕ್ಕೆ ಪುಷ್ಠಿ ಸಿಕ್ಕಿದೆ.

    ಈ ವಿಚಾರ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಲೆಫ್ಟಿನೆಂಟ್ ಜನರಲ್ ಸರಬ್‍ಜೀತ್ ಸಿಂಗ್ ಧಿಲ್ಲಾನ್, ಕಾಶ್ಮೀರದ ಶಾಂತಿಯನ್ನು ಕದಡಲು ನಾವು ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಉಗ್ರರು ಹಾಗೂ ಪಾಕಿಸ್ತಾನದ ಹೊಂಚು ಯಶಸ್ವಿಯಾಗಲು ಬಿಡುವುದಿಲ್ಲ. ಇದು ಕಾಶ್ಮೀರ ಜನತೆಗೆ ಹಾಗೂ ದೇಶಕ್ಕೆ ನಾವು ನೀಡುವ ವಾದ ಎಂದು ಭರವಸೆ ನೀಡಿದ್ದಾರೆ.

    ಕಾಶ್ಮೀರದಲ್ಲಿ ನಮ್ಮ ಭದ್ರತಾ ಪಡೆಯು ಹೆಚ್ಚು ಜಾಗೃತೆಯಿಂದ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ನಡೆದ ಚುನಾವಣೆಗಳು, ಸಭೆ ಸಮಾರಂಭಗಳು ಹಾಗೂ ಈಗ ನಡೆಯುತ್ತಿರುವ ಅಮರನಾಥ ಯಾತ್ರೆಯಲ್ಲಿ ಯಾವ ಅಹಿತಕರ ಘಟನೆ ನಡೆಯದಂತೆ ಕಳೆದ 9 ತಿಂಗಳುಗಳಿಂದ ನಿಗಾವಹಿಸಿದ್ದೇವೆ. ಇದುವರೆಗೂ ಪಾಕ್ ಹಾಗೂ ಉಗ್ರರು ಗಡಿಯಲ್ಲಿ ನುಸುಳುವ ಯತ್ನ ಹಾಗೂ ಅವರ ಕುತಂತ್ರವನ್ನು ಯಶಸ್ವಿಯಾಗಲು ನಾವು ಬಿಟ್ಟಿಲ್ಲ. ನಮ್ಮ ಭದ್ರತಾ ಪಡೆ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಉಗ್ರರನ್ನು ಸದೆಬಡಿಯುತ್ತೇವೆ ಎಂದು ಧಿಲ್ಲಾನ್ ಅವರು ಹೇಳಿದ್ದಾರೆ.

    ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗಿದೆ. ಉಗ್ರರ ದಾಳಿ ಬಗ್ಗೆ ಮಾಹಿತಿ ದೊರಕಿದ ಮೇಲೆ 25 ಸಾವಿರಕ್ಕೂ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗಿದೆ. ಕೆಲ ಆಂತರಿಕ ವಿಚಾರವಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಯೋಧರನ್ನು ಕಳುಹಿಸಲಾಗಿದೆ ಎಂದ ಧಿಲ್ಲಾನ್ ಅವರು ಸ್ಪಷ್ಟಪಡಿಸಿದ್ದಾರೆ.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಭಾರತಕ್ಕೆ ನುಸುಳಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರು ಮತ್ತು ಅವರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು ಎಂದು ಮೂಲಗಳು ತಿಳಿಸಿರುವ ಕಾರಣ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಸೈನಿಕರು ಮತ್ತು ವಾಯು ಪಡೆಯನ್ನು ನಿಯೋಜನೆ ಮಾಡಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಗುರುವಾರ ಸಂಜೆಯಿಂದ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಹೆಚ್ಚಿನ ಭದ್ರತೆಗೆ ಸೇನೆಯನ್ನು ಸಿದ್ಧಗೊಳಿಸಲಾಗಿದೆ. ಕಾಶ್ಮೀರ ಕಣಿವೆಗಳಲ್ಲಿ ಭದ್ರತಾ ಪಡೆಗಳ 280 ಗುಂಪುಗಳನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರದ ನಗರ ಭಾಗದ ಕೆಲ ದುರ್ಬಲ ಸ್ಥಳಗಳಲ್ಲಿ ಸಿಆರ್‍ಪಿಎಫ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ನಗರದ ಎಲ್ಲಾ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನು ನೇಮಿಸಲಾಗಿದೆ. ಭಯೋತ್ಪಾದಕರು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳಿಗೆ 10 ದಿನಗಳವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಎಚ್‍ಡಿಡಿ ಕುಟುಂಬದ ಅಮರನಾಥ ಯಾತ್ರೆ ರದ್ದು

    ಎಚ್‍ಡಿಡಿ ಕುಟುಂಬದ ಅಮರನಾಥ ಯಾತ್ರೆ ರದ್ದು

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಅಧಿಕಾರಿ ಹೆಚ್.ಡಿ. ದೇವೇಗೌಡ ಕುಟುಂಬ ಕೈಗೊಳ್ಳಬೇಕಿದ್ದ ಅಮರನಾಥ ಯಾತ್ರೆ ರದ್ದಾಗಿದೆ.

    ದೇವೇಗೌಡರು ಬುಧವಾರ ಪತ್ನಿ ಚೆನ್ನಮ್ಮ, ಪುತ್ರ ರೇವಣ್ಣ, ಸೊಸೆ ಭವಾನಿ ಮತ್ತು ಮೊಮ್ಮಕ್ಕಳೊಂದಿಗೆ ಯಾತ್ರೆ ಹೋಗಬೇಕಿತ್ತು. ಆದರೆ ಅಮರನಾಥದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಯಾತ್ರೆಯನ್ನು ರದ್ದೊಗೊಳಿಸಿದ್ದಾರೆ.

    ಪತ್ನಿ ಚೆನ್ನಮ್ಮ ಅವರು ಅಮರನಾಥ ಯಾತ್ರೆ ಮಾಡಬೇಕೆಂಬ ಆಸೆಯನ್ನು ದೇವೇಗೌಡರ ಬಳಿ ವ್ಯಕ್ತಪಡಿದ್ದರು. ಸದಾ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿ ಇರುವ ದೇವೇಗೌಡರು ಪತ್ನಿ ಆಸೆಯನ್ನು ಈಡೇರಿಸಲು ಮುಂದಾಗಿದ್ದರು. ಅದರಂತೆ ದೇವೇಗೌಡರು ಬುಧವಾರ ಬೆಳಗ್ಗೆ ದೆಹಲಿಯಿಂದ ಅಮರನಾಥ ಯಾತ್ರೆ ಮಾಡಲು ನಿರ್ಧರಿಸಿದ್ದರು. ಆದರೆ ಈಗ ಮಳೆಯಿಂದ ಅಮರನಾಥ ಯಾತ್ರೆಯನ್ನು ರದ್ದು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ವಿಶೇಷ ಪೂಜೆ: ದೇವೇಗೌಡರ ಕುಟುಂಬದವರು ದೇವರು, ಜ್ಯೋತಿಷ್ಯದ ಮೇಲೆ ಜಾಸ್ತಿ ನಂಬಿಕೆ ಇಟ್ಟಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಬಗ್ಗೆ ಭವಿಷ್ಯವಾಣಿಗಳು ಕೇಳಿ ಬರುತ್ತಿದ್ದಂತೆ ದೇವೇಗೌಡರ ಕುಟುಂಬ ಗ್ರಹಣ ದೋಷ ನಿವಾರಣೆಗಾಗಿ ಮಹಾ ಪೂಜೆ ನಡೆಸಲು ನಿರ್ಧರಿಸಿದೆ. ಸುದೀರ್ಘ ಗ್ರಹಣ ಮುಗಿದ ಬೆಳಗಿನ ಜಾವ ಗ್ರಹಣ ದೋಷ ನಿವಾರಣೆಗಾಗಿ ಗವಿ ಗಂಗಾಧರ ದೇಗುಲದಲ್ಲಿ ಶಿವಾರಾಧನೆ, ಹೋಮ, ಯಜ್ಞ ಯಾಗಗಳನ್ನು ನಡೆಸಲಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದರು.