Tag: Amar

  • ನೋ ವೇ, ಚಾನ್ಸೇ ಇಲ್ಲ, ನಾನು ಹೀರೋನೇ – ಇದು ಯಂಗ್ ರೆಬೆಲ್ ಗುಡುಗು

    ನೋ ವೇ, ಚಾನ್ಸೇ ಇಲ್ಲ, ನಾನು ಹೀರೋನೇ – ಇದು ಯಂಗ್ ರೆಬೆಲ್ ಗುಡುಗು

    – ಬಿಡುಗಡೆಯಾಯ್ತು ಜೂ.ಅಂಬಿಯ ಖಡಕ್ ಟೀಸರ್

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಟಿಸಿದ ಮೊದಲ ಚಿತ್ರ ‘ಅಮರ್’ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರೇಮಿಗಳ ದಿನದಂದು ಚಿತ್ರದ ಟೀಸರ್ ಅಥವಾ ಆಡಿಯೋ ಬಿಡುಗಡೆ ಮಾಡಬೇಕೆಂದು ಅಂಬರೀಶ್ ಆಸೆಪಟ್ಟಿದ್ದರು. ಈಗ ಅವರ ಆಸೆಯಂತೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

    ಚಿತ್ರದ ಟೀಸರ್ ಶುರುವಾಗುವ ಮೊದಲೇ ಈ ಟೀಸರ್ ರನ್ನು ದಿವಂಗತ ಅಂಬರೀಶ್ ಅವರಿಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅರ್ಪಿಸಿದ್ದಾರೆ. ಈ ಟೀಸರ್ ನಲ್ಲಿ ಅಭಿಷೇಕ್ ಆ್ಯಕ್ಷನ್ ಸೀನ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ನಾನ್ ಹೀರೋ ತರ ಅಲ್ಲ, ಹೀರೋನೇ ಎಂಬ ಖಡಕ್ ಡೈಲಾಗ್ ಹೇಳಿದ್ದಾರೆ.

    ಅಂಬರೀಶ್ ನನ್ನ ಸಿನಿಮಾದಲ್ಲಿ ಇರುತ್ತಾರೆ. ಇನ್ನು ಮುಂದೆ ನಾನು ಯಾವ ಸಿನಿಮಾ ಮಾಡಿದರೂ ಅದರಲ್ಲಿ ಅಪ್ಪಾಜಿ ಇರುತ್ತಾರೆ ಎಂದು ಅಭಿಷೇಕ್ ಹೇಳಿದ್ದರು. ಹಾಗೆಯೇ ಅಮರ್ ಚಿತ್ರದಲ್ಲಿ ತಮ್ಮ ತಂದೆಯ ‘ಚಾನ್ಸೇ ಇಲ್ಲ, ನೋ ವೇ’ ಎಂಬ ಫೇಮಸ್ ಡೈಲಾಗ್‍ವನ್ನು ಹೇಳಿದ್ದಾರೆ. ಟೀಸರ್ ನಲ್ಲಿ ನಾಯಕಿಯ ಪಾತ್ರವನ್ನು ಪರಿಚಯಿಸದೇ ಗುಟ್ಟಾಗಿ ಇಡಲಾಗಿದೆ.

    ಈ ಚಿತ್ರದ ಟೀಸರ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, “ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ `ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ” ಎಂದು ಟ್ವೀಟ್ ಮಾಡಿದ್ದಾರೆ.

    ಅಮರ್ ಚಿತ್ರದಲ್ಲಿ ಅಭಿಷೇಕ್‍ಗೆ ನಾಯಕಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ಚಿತ್ರ ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರ ಆಗಿದ್ದು, ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದರೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ಅಂಬಿಯ ಆ ಕನಸು ಈಡೇರಲಿಲ್ಲ!

    ಕೊನೆಗೂ ಅಂಬಿಯ ಆ ಕನಸು ಈಡೇರಲಿಲ್ಲ!

    ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧವಶರಾದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪುತ್ರ ಅಭಿಷೇಕ್ ಸಿನಿಮಾವನ್ನು ವೀಕ್ಷಿಸಬೇಕೆಂದು ಆಸೆಪಟ್ಟಿದ್ದರು. ಆದರೆ ಅವರ ಆಸೆ ಪೂರ್ಣವಾಗಿ ಈಡೇರದೇ ಇದ್ದರೂ ತಮ್ಮ ಮಗ ಅಭಿಷೇಕ್ ನ ಸಿನಿಮಾದ ಫಸ್ಟ್ ಹಾಫ್ ನೋಡಿ ಅಗಲಿದ್ದಾರೆ.

    ನಟ ಅಂಬರೀಶ್ ಅವರಿಗೆ ತಮ್ಮ ಮಗನ ಮೇಲೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ತಮ್ಮಂತೆ ಮಗ ಅಭಿಷೇಕ್ ರಾಜಕೀಯಕ್ಕೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಬಾರಿ ‘ರಾಜಕೀಯ ನಮಗೇ ಸಾಕು, ಅವನಿಗೆ ಬೇಡ’ ಎಂದು ಹೇಳುತ್ತಿದ್ದರು. ಇತ್ತ ಮಗ ಅಭಿಷೇಕ್ ಅವರಿಗೂ ಕೂಡ ಅಪ್ಪನಂತೆ ಸಿನಿಮಾ ಕಡೆ ಆಸಕ್ತಿ ಇತ್ತು. ಆದ್ದರಿಂದ ಮಗ ಮುಂದೆ ದೊಡ್ಡ ನಟನಾಗಬೇಕು ಎಂದು ಅಂಬಿ ಕನಸು ಕಂಡಿದ್ದರು.

    ತಮ್ಮ ಕನಸಿನಂತೆ ಅಭಿಷೇಕ್ ನಟನಾಗಿ ಮಿಂಚಲು ವೇದಿಕೆ ಸಿದ್ಧವಾಗಿತ್ತು. ಈ ವೇಳೆ ಸ್ವತಃ ಅಂಬರೀಶ್ ಅವರು ಮಗನಿಗಾಗಿ ಕಥೆ ಕೇಳಿ ಓಕೆ ಮಾಡಿದ್ದರು. ಇನ್ನು ಮುಂದೆಯೂ ನಾನೇ ಅಭಿಷೇಕ್ ಕಥೆಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದರು. ಅಂಬರೀಶ್ ಅವರಿಗೆ ತಮ್ಮ ಮಗನ ಚೊಚ್ಚಲ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳುವ ಆಸೆ ಇತ್ತು. ಆದರೆ ಆ ಸಿನಿಮಾವನ್ನು ನೋಡುವ ಮುನ್ನವೇ ಅಂಬಿ ಇಹಲೋಕ ತ್ಯಜಿಸಿದ್ದಾರೆ. ಇದು ಮನಸ್ಸಿಗೆ ಬೇಸರದ ಸಂಗತಿಯಾಗಿದೆ.

    ಮಗನ `ಅಮರ್’ ಸಿನಿಮಾವನ್ನು ಸಂಪೂರ್ಣವಾಗಿ ನೋಡದಿದ್ದರೂ, ಫಸ್ಟ್ ಹಾಫ್ ಅನ್ನು ನೋಡಿ ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರ ಗೆಳೆಯ, ‘ಅಮರ್’ ಸಿನಿಮಾದ ನಿರ್ಮಾಪಕ ಸಂದೇಶ್ ನಾಗರಾಜ್  ಹೇಳಿದ್ದಾರೆ.

    “ಅಂಬಿಗೆ ತಮ್ಮ ಮಗ ಸಿನಿಮಾರಂಗದಲ್ಲಿ ದೊಡ್ಡ ಹೀರೋ ಆಗಬೇಕು. ಜೊತೆಗೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಕನಸು ಕಂಡಿದ್ದ. ಅವರಂತೆಯೇ ಅಂಬಿ ಮಗನ ಚೊಚ್ಚಲ ಸಿನಿಮಾವನ್ನು ನಿರ್ಮಿಸುವ ಅವಕಾಶ ನನಗೆ ಸಿಕ್ಕಿತ್ತು. ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದೆ. ಈ ವೇಳೆ ಅಂಬಿಗೆ ಮಗ ಏನು ಮಾಡಿದ್ದಾನೆ ಎಂದು ನೋಡುವ ಆಸೆಯಾಗಿತ್ತು” ಎಂದು ಹೇಳಿದ್ದಾರೆ.

    ಒಂದು ದಿನ ‘ಅಮರ್’ ಶೂಟಿಂಗ್ ಏನಾಗಿದೆ ಅದನ್ನು ನಾನು ನೋಡಬೇಕು ಎಂದರು. ಅದಕ್ಕೆ ನಾನು, “ಈಗಲೇ ಬೇಡ, ಇನ್ನು ಕೆಲವು ದಿನಗಳು ಶೂಟಿಂಗ್ ಇದೆ ಬಳಿಕ ಸಿನಿಮಾ ನೋಡಬಹುದು” ಎಂದು ಹೇಳಿದ್ದೆ. ಆದರೆ ಅಂಬಿ ನಾನು ನೋಡಲೇಬೇಕು ಎಂದು ಹಠ ಮಾಡಿದ್ದರು. ಕೊನೆಗೆ ಡಬ್ಬಿಂಗ್ ಮಾಡಿಸಿ ‘ಅಮರ್’ ಸಿನಿಮಾ ಫಸ್ಟ್ ಹಾಫ್ ನೋಡಿಸಿದ್ದೆವು. ಮಗನ ಸಿನಿಮಾ ನೋಡಿ ಅಂಬಿ ಸಂತಸ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಈ ವೇಳೆ ಮಗನನ್ನು ಕರೆದು, “ತುಂಬಾ ಚೆನ್ನಾಗಿ ಅಭಿನಯಿಸಿದ್ದೀಯಾ, ಏನು ಹೆದರಬೇಡ” ಎಂದು ಬೆನ್ನುತಟ್ಟಿದ್ದರು ಅಂತ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

    https://www.youtube.com/watch?v=fJfbkc_yU8M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದೇಶಕ್ಕೆ ಹಾರಲು ರೆಡಿಯಾಯ್ತು ಅಮರ್ ಟೀಮ್!

    ವಿದೇಶಕ್ಕೆ ಹಾರಲು ರೆಡಿಯಾಯ್ತು ಅಮರ್ ಟೀಮ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕನಾಗಿ ಲಾಂಚ್ ಆಗುತ್ತಿರೋ ಚಿತ್ರ ಅಮರ್. ಈ ಕಾರಣದಿಂದಲೇ ಈ ಚಿತ್ರದ ಸಕಲ ಆಗುಹೋಗುಗಳ ಬಗ್ಗೆಯೂ ಜನರಿಗೊಂದು ಕುತೂಹಲವಿದೆ. ಅದಕ್ಕೆ ಸರಿಯಾಗಿಯೇ ನಿರ್ದೇಶಕ ನಾಗಶೇಖರ್ ಅವರು ಭಲೇ ಸ್ಪೀಡಿನಿಂದ ಕೆಲಸ ಮಾಡಲಾರಂಭಿಸಿದ್ದಾರೆ.

    ಕೊಯಮತ್ತೂರಿನಿಂದ ಚಿತ್ರೀಕರಣ ಶುರು ಮಾಡಿದ್ದ ನಾಗಶೇಖರ್ ಯಶಸ್ವಿಯಾಗಿ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ಹಂತದ ಚಿತ್ರೀಕರಣಕ್ಕೆ ಸರಿಕಟ್ಟಾದ ಪ್ಲಾನು ಮಾಡಿಕೊಂಡು ವಿದೇಶದತ್ತ ಹೊರಡಲು ರೆಡಿಯಾಗಿದ್ದಾರೆ.

    ಅಂಬರೀಶ್ ಅವರ ಪುತ್ರ ಅಭಿಷೇಕ್ ಗೆ ಇದು ಮೊದಲ ಚಿತ್ರ. ಆದರೆ ಚಿತ್ರೀಕರಣ ಶುರುವಾದ ಬಳಿಕ ನಿರಂತರವಾಗಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಅವರ ಎನರ್ಜಿ ಕಂಡರೆ ಅಭಿ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕನಾಗಿ ನೆಲೆ ನಿಲ್ಲುವ ಭರವಸೆ ಮೂಡುತ್ತದೆ ಎಂಬಂಥಾ ಮೆಚ್ಚುಗೆಯನ್ನೂ ನಿರ್ದೇಶಕ ನಾಗಶೇಖರ್ ಹೊಂದಿದ್ದಾರೆ.

    ಇದೀಗ ಕೊಯಮತ್ತೂರು, ಬೆಳಗಾವಿ, ಮಡಿಕೇರಿ, ಮಣಿಪಾಲ್, ಮಂಗಳೂರು ಸುತ್ತಮುತ್ತ ನಡೆದ ನಿರಂತರ ಚಿತ್ರೀಕರಣದಿಂದ ಚಿತ್ರ ತಂಡ ವಿರಾಮ ಪಡೆದಿದೆ. ಇದೀಗ ನಾಗಶೇಖರ್ ಅಣತಿಯಂತೆಯೇ ಹೊಸಾ ಹುರುಪು ತುಂಬಿಕೊಂಡು ವಿದೇಶಕ್ಕೆ ಹೊರಡಲು ಸಜ್ಜಾಗಿ ನಿಂತಿದೆ.

    ಬೈಕ್ ರೇಸಿನ ಪ್ರಧಾನ ಅಂಶವನ್ನು ಹೊಂದಿರೋ ಈ ಚಿತ್ರ ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿ ಬಂದಿದೆಯಂತೆ. ಇದುವರೆಗೂ ಚಿತ್ರೀಕರಣಕ್ಕೆ ಡಿಫರೆಂಟಾದ ಲೊಕೇಶನ್ನುಗಳನ್ನೇ ಹುಡುಕುತ್ತಾ ಬಂದಿರೋ ನಾಗಶೇಖರ್ ವಿದೇಶದಲ್ಲಿಯೂ ಅಂಥಾದ್ದೇ ವಿರಳ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬಿ ಪುತ್ರನ ಜೊತೆ ಕುಣಿಯಲು ರೆಡಿಯಾದ ರಚಿತಾ ರಾಮ್!

    ಅಂಬಿ ಪುತ್ರನ ಜೊತೆ ಕುಣಿಯಲು ರೆಡಿಯಾದ ರಚಿತಾ ರಾಮ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಅಮರ್ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಸದ್ದು ಮಾಡುತ್ತಿದೆ. ಚಿತ್ರತಂಡದ ಕಡೆಯಿಂದ ದಿನಕ್ಕೊಂದರಂತೆ ಸೆನ್ಸೇಷನಲ್ ಸುದ್ದಿಗಳೂ ಹೊರ ಬೀಳುತ್ತಿವೆ. ಈಗ ಹೊರ ಬಿದ್ದಿರೋ ಸುದ್ದಿ ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸುವಂಥಾದ್ದು!

    ಅಮರ್ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಿರೂಪ್ ಭಂಡಾರಿ ನಟಿಸುತ್ತಿರೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಚಿತಾ ರಾಮ್ ವಿಶೇಷವಾದ ಹಾಡೊಂದರಲ್ಲಿ ಅಮರ್ ಜೊತೆ ಹೆಜ್ಜೆ ಹಾಕಲಿರೋ ವಿಚಾರವನ್ನೂ ಕೂಡಾ ನಾಗಶೇಖರ್ ಜಾಹೀರು ಮಾಡಿದ್ದಾರೆ.

    ಇದು ಹೇಳಿಕೇಳಿ ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಿರುವ ಚಿತ್ರ. ಸಾಕಷ್ಟು ಅಳೆದೂ ತೂಗಿಯೇ ನಾಗಶೇಖರ್ ಅವರಿಗೆ ಅಂಬರೀಶ್ ಜವಾಬ್ದಾರಿ ವಹಿಸಿದ್ದಾರೆ. ಇದನ್ನು ಅಚ್ಚುಕಟ್ಟಾಗಿಯೇ ನಿಭಾಯಿಸುತ್ತಿರುವ ನಾಗಶೇಖರ್ ವಿಶೇಷತೆಗಳ ಸರಮಾಲೆಯನ್ನೇ ಪೋಣಿಸುತ್ತಿದ್ದಾರೆ. ರಚಿತಾ ರಾಮ್ ಎಂಟ್ರಿ ಕೂಡಾ ಅದರ ಒಂದು ಭಾಗ. ರಚಿತಾ ರಾಮ್ ಅವರ ಭಾಗದ ವಿಶೇಷವಾದ ಹಾಡಿನ ಚಿತ್ರೀಕರಣ ಈಗಾಗಲೇ ಶುರುವಾಗಿದೆ.

    ಅಮರ್ ಚಿತ್ರ ಚೆಂದದ ಪ್ರೇಮ ಕಥಾನಕ ಹೊಂದಿದೆ. ಬೈಕ್ ರೇಸ್ ಪ್ರಧಾನವಾಗಿರೋ ಈ ಚಿತ್ರ ಪಕ್ಕಾ ಆಕ್ಷನ್ ಜಾನರಿನದ್ದೂ ಹೌದು. ಚಿತ್ರೀಕರಣದ ಹಂತದಲ್ಲಿಯೇ ನಾನಾ ಥರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರೋ ಈ ಚಿತ್ರ ವ್ಯಾಪಕ ನಿರೀಕ್ಷೆಗಳನ್ನೂ ಹುಟ್ಟು ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv