Tag: Amar

  • ಪತ್ನಿ ಅವಿವ ಜೊತೆ ಅಭಿಷೇಕ್ ಅಂಬರೀಶ್ ಮಸ್ತ್ ಫೋಟೋಶೂಟ್

    ಪತ್ನಿ ಅವಿವ ಜೊತೆ ಅಭಿಷೇಕ್ ಅಂಬರೀಶ್ ಮಸ್ತ್ ಫೋಟೋಶೂಟ್

    ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವ ಮಗುವಿನ ಪಾಲನೆಯಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಮಸ್ತ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಚೆಂದದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವಿವ ಹಂಚಿಕೊಂಡಿದ್ದಾರೆ.

    ಬಿಳಿ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಮತ್ತು ಅವಿವ (Aviva Bidapa) ದಂಪತಿ ಮಿಂಚಿದ್ದಾರೆ. ಇಬ್ಬರೂ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದಾರೆ. ಅಂದಹಾಗೆ, ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಲು ಅವಿವ ಜೋಡಿ ಮಸ್ತ್ ಆಗಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ

    ಅಂದಹಾಗೆ, ಕಳೆದ ವರ್ಷ ಈ ಜೋಡಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ನ.12ರಂದು ಗಂಡು ಮಗುವಿಗೆ ಅವಿವ ಜನ್ಮ ನೀಡಿದರು. ಇದನ್ನೂ ಓದಿ:ಎಲಿಮಿನೇಷನ್ ಹೈಡ್ರಾಮಾ: ಬಿಗ್ ಬಾಸ್‌ನಿಂದ ಹೊರಬಂದ ತ್ರಿವಿಕ್ರಮ್!

     

    View this post on Instagram

     

    A post shared by Mrs. Abishek (@avivabidapa)

    ಇನ್ನೂ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಬಳಿಕ ಅಭಿಷೇಕ್ ಅವರು ಮದಗಜ, ಅಯೋಗ್ಯ ಡೈರೆಕ್ಟರ್ ಮಹೇಶ್ ಕುಮಾರ್ ಜೊತೆ ಕೈಜೋಡಿಸಿದ್ದಾರೆ. ಈ ಸಿನಿಮಾ ಯಾವಾಗ ಶುರು ಆಗಲಿದೆ ಎಂಬುದನ್ನು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.

  • ಅಮರ್ ನಟನೆಯ ಮೊದಲ ಸಿನಿಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ

    ಅಮರ್ ನಟನೆಯ ಮೊದಲ ಸಿನಿಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ

    ರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಾ ಬಂದಿದ್ದ ಸಿನಿಮಾ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare). ಅರುಣ್ ಅಮುಕ್ತ (Arun Amukta) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಗಾಯಕ ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿದ್ದಾರೆ. ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದ್ದ ಈ ಚಿತ್ರವೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಕುಂಬಳ ಕಾಯಿ ಒಡೆದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಸಜ್ಜುಗೊಂಡಿರುವ ಚಿತ್ರತಂಡ, ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮ ಪ್ರತಿನಿಧಿಗಳನ್ನು ಮುಖಾಮುಖಿಯಾಗಿದ್ದಾರೆ. ಈ ಹಂತದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಭಾಗವಾಗಿರುವ ಕಲಾವಿದರೆಲ್ಲ ಮನದುಂಬಿ ಮಾತಾಡಿದ್ದಾರೆ. ಒಟ್ಟಾರೆ ಅನುಭವಗಳ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಐವತ್ತು ದಿನಗಳ ಕಾಲ ಚಿತ್ರೀಕರಣ ನೆರವೇರಿದೆ. ಈ ಬಗೆಗಿನ ಸಾಕಷ್ಟು ಮಾಹಿತಿಗಳನ್ನು ಕಾರ್ಯಕಾರಿ ನಿರ್ಮಾಪಕರಾದ ಶ್ರೀಕಾಂತ್ ಕಶ್ಯಪ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಮೂರು ಯುವ ಜೋಡಿಯ ಸುತ್ತ ಕಥೆ ಚಲಿಸುತ್ತದೆ. ಅದರಲ್ಲೊಂದು ಪಾತ್ರವನ್ನು ಅಮರ್ ನಿಭಾಯಿಸಿದ್ದಾರೆ. ಅಮರ್ ಪಾಲಿಗಿದು ನಟನಾಗಿ ಮೊದಲ ಚಿತ್ರ. ನಿರ್ದೇಶಕ ಅರುಣ್ ಅಮುಕ್ತ ಆಡಿಷನ್ ನಡೆಸಿ, ಒಂದಷ್ಟು ತರಬೇತಿಗಳನ್ನು ನೀಡುವ ಮೂಲಕ ಅಮರ್ ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ.

    ಈ ಸಿನಿಮಾ ಮೂಲಕವೇ ತನಗೆ ಸಿನಿಮಾ ರಂಗಪ್ರವೇಶದ ಅವಕಾಶ ಕಲ್ಪಿಸಿದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಅಮರ್ (Amar) ಧನ್ಯವಾದ ಹೇಳಿದ್ದಾರೆ. ಜೊತೆಗೆ ಚಂದನ್ ಶೆಟ್ಟಿ ಜೊತೆ ನಟಿಸುವ ಅವಕಾಶ ಸಿಕ್ಕಿದ್ದರ ಬಗ್ಗೆ ತಮ್ಮೊಳಗಿನ ಥ್ರಿಲ್ ಅನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಒಟ್ಟಾರೆಯಾಗಿ, ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಮೂಲಕ ನಾಯಕನಾಗಿರುವ ಅಮರ್ ಅಕ್ಷರಶಃ ರೋಮಾಂಚಿತರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಬಹುದಾದ ಟ್ರೈಲರ್ ಮೂಲಕ ಅಮರ್ ಸೇರಿದಂತೆ ಎಲ್ಲರ ಪಾತ್ರಗಳೂ ಪ್ರೇಕ್ಷಕರನ್ನು ಮುಖಾಮುಖಿಯಾಗಲಿವೆ.

     

    ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ಚಂದನ್ ಶೆಟ್ಟಿ ಹೊಸ ಚಿತ್ರದ ಟೈಟಲ್ ಅನಾವರಣ: ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಪ್ರೈಸ್

    ಚಂದನ್ ಶೆಟ್ಟಿ ಹೊಸ ಚಿತ್ರದ ಟೈಟಲ್ ಅನಾವರಣ: ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಪ್ರೈಸ್

    ಗಾಯಕನಾಗಿ ಪ್ರವರ್ಧಮಾನಕ್ಕೆ ಬಂದು, ಆ ವಲಯದಲ್ಲಿಯೇ ಒಂದಷ್ಟು ಖ್ಯಾತಿ ಪಡೆದಿರುವವರು ಚಂದನ್ ಶೆಟ್ಟಿ (Chandan Shetty). ತಮ್ಮ ವೃತ್ತಿಯಲ್ಲಿ ಬಹು ಬೇಡಿಕೆ ಚಾಲ್ತಿಯಲ್ಲಿರುವಾಗಲೇ ಚಂದನ್ ನಟನೆಯತ್ತ ಮುಖ ಮಾಡಿದ್ದಾರೆ. ಅವರು ನಾಯಕ ನಟನಾಗಿ ನಟಿಸಿರುವ ಒಂದೆರಡು ಸಿನಿಮಾಗಳು ಅಂತಿಮ ಘಟ್ಟದಲ್ಲಿರುವಾಗಲೇ ಚಂದನ್ ಮತ್ತೊಂದು ಸಿನಿಮಾಗೆ (New Movie) ಸಹಿ ಮಾಡಿದ್ದಾರೆ. ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರದ ಟೈಟಲ್ ಇದೇ 25ರಂದು ಅಂದರೆ, ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಅನಾವರಣಗೊಳ್ಳಲಿದೆ.

    ಇದೇ ಹದಿನೆಂಟನೇ ತಾರೀಕಿನಂದು ಚಿತ್ರತಂಡ ಟೈಟಲ್ ಪ್ರೋಮೋ ಒಂದನ್ನು ಬಿಡುಗಡೆಗೊಳಿಸಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗಳೂ ಸಿಕ್ಕಿವೆ. ಈ ಮೂಲಕವೇ ಸದರಿ ಚಿತ್ರದ ಶೀರ್ಷಿಕೆ ಏನಿರಬಹುದೆಂಬ ಕುತೂಹಲವೂ ಮೂಡಿದೆ. ಒಂದು ಪ್ರತಿಭಾನ್ವಿತ ಯುವ ತಂಡ, ಒಂದೊಳ್ಳೆ ಕಥೆಯ ಮೂಲಕ ಈ ಸಿನಿಮಾದೊಂದಿಗೆ ಚಂದನ್ ಪ್ರೇಕ್ಷಕರ ಮುಂದೆ ಬರುವ ಲಕ್ಷಣಗಳೂ ದಟ್ಟವಾಗಿವೆ. ಒಟ್ಟಾರೆ ಸಿನಿಮಾ ಹೇಗಿರಬಹುದೆಂಬ ಸಣ್ಣ ಸೂಚನೆ ಈ ಟೈಟಲ್ ಜೊತೆಗೇ ಅನಾವರಣಗೊಳ್ಳುವ ನಿರೀಕ್ಷೆಗಳಿವೆ. ಇದನ್ನೂ ಓದಿ:ಉರ್ಫಿಗೆ ಕೊಲೆ ಬೆದರಿಕೆ: ವ್ಯಕ್ತಿಯ ಹೆಸರು ಬಹಿರಂಗ ಪಡಿಸಿದ ನಟಿ

    ಈ ಹಿಂದೆ ಶ್ರೀಮುರಳಿ ನಾಯಕನಾಗಿ ನಟಿಸಿದ್ದ `ಲೂಸ್ ಗಳು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಅರುಣ್ ಅಮುಕ್ತ (Arun Mukta). ಮೂಲತಃ ಆಡ್ ಫಿಲಂ ಮೇಕರ್ ಆಗಿರುವ ಅರುಣ್, ಚಿತ್ರರಂಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೆಲ್ಲ ಅನುಭವಗಳನ್ನು ಒಗ್ಗೂಡಿಸಿಕೊಂಡು ಒಂದೊಳ್ಳೆ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರಂತೆ. ಸದ್ಯದ ಮಟ್ಟಿಗೆ ಇದೊಂದು ಟೀನೇಜ್ ಡ್ರಾಮಾ ಆಗಿರಲಿದೆ ಎಂಬ ಸಣ್ಣ ಸುಳಿವು ಚಿತ್ರತಂಡದ ಕಡೆಯಿಂದ ಸಿಕ್ಕಿದೆಯಷ್ಟೇ.

     

    ಈ ಚಿತ್ರದ ತಾರಾಗಣದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್ (Amar), ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ತಾಂತ್ರಿಕ ವರ್ಗವೂ ಸೇರಿದಂತೆ, ಬಹುಮುಖ್ಯವಾದ ಇನ್ನೊಂದಷ್ಟು ವಿಚಾರಗಳನ್ನು ಹಂತ ಹಂತವಾಗಿ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ತೀರ್ಮಾನಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಬುರಗಿ ಹೈದನಾದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್

    ಕಲಬುರಗಿ ಹೈದನಾದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್

    ರೆಬಲ್ ಸ್ಟಾರ್ ಅಂಬರೀಶ್ ತರ್ಲೆ, ತಮಾಷೆಗಳಿಗೆ ಹೆಸರಾದವರು. ಯಾವತ್ತೂ ಅವರು ಗಂಭೀರವಾಗಿ ಇದ್ದವರೇ ಅಲ್ಲ. ಜೊತೆಗಿದ್ದವರ ನಗಿಸುತ್ತಾ, ಕೋಪ ಬಂದಾಗ ಗದರುತ್ತಾ ತಮ್ಮಿಷ್ಟದಂತೆ ಬದುಕಿದವರು. ಇದೀಗ ಅಂಬರೀಶ್ ಪುತ್ರ ಅಭಿಷೇಕ್ ಕೂಡ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ. ಅಭಿಮಾನಿಗಳ ಜತೆ ಬೆರೆಯಲು ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಪ್ರತಿ ಸಲವೂ ಒಂದಿಲ್ಲೊಂದು ಸರ್ ಪ್ರೈಸ್ ಗಳನ್ನು ಅಭಿಮಾನಿಗಳಿಗೆ ನೀಡುತ್ತಾ, ರಂಜಿಸುತ್ತಾರೆ.

    ಇತ್ತೀಚೆಗಷ್ಟೇ ಇನ್ ಸ್ಟಾ ಸ್ಟೋರಿಯಲ್ಲಿ ಅವರು ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಗಾಂಧಿ ಟೋಪಿ ತೊಟ್ಟುಕೊಂಡು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಿಂಚಿದ್ದಾರೆ. ಫೋಟೋದ ಜೊತೆಗೆ ‘ನಮ್ಮ ಕಲಬುರಗಿ’ ಎಂದು ಬರೆದು, ಆ ಭಾಗದ ಅಭಿಮಾನಿಗಳ ಕ್ರೇಜ್ ಗೆ ಕಾರಣರಾಗಿದ್ದಾರೆ. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

     

    View this post on Instagram

     

    A post shared by Kannadapichhar (@kannada_pichhar)

    ಕಲಬುರಗಿ ಹೈದನ ಗೆಟಪ್ ಹಾಕಿಕೊಂಡಿದ್ದು ಯಾಕೆ ಎನ್ನುವುದನ್ನು ಅವರು ಎಲ್ಲಿಯೂ ಹೇಳಿಲ್ಲ. ಆದರೆ, ಅವರ ಆಪ್ತರು ಹೇಳುವಂತೆ ಸದ್ಯ ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಅವರು ಕಲಬುರಗಿಗೆ ಹೋಗಿದ್ದು, ಅಲ್ಲಿ ಈ ವೇಷ ಹಾಕಿಕೊಂಡಿದ್ದರು ಎನ್ನಲಾಗಿದೆ.

    Abhishek Ambarish Says Life Has Turned Around After Father's Death | 'Darshan Wasn't Scared To Face Ambarish - Filmibeat

    ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಹೊಸ ಬಗೆಯ ಪಾತ್ರ ಮಾಡಿದ್ದು, ಇಲ್ಲಿ ಅವರು ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ನೆಗೆಟಿವ್ ಮತ್ತು ಪಾಸಿಟಿವ್ ಶೇಡ್ ಇರುವಂತಹ ಪಾತ್ರವನ್ನು ಅಭಿಷೇಕ್ ನಿಭಾಯಿಸುತ್ತಿದ್ದಾರಂತೆ. ಇದನ್ನೂ ಓದಿ: ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ಸಮಂತಾ – ಕುಚಿಕು ಗೆಳೆತಿಯರ ಫೋಟೋ ಕಹಾನಿ

  • ದೇವಸ್ಥಾನದಲ್ಲಿ ಅಭಿಮಾನಿಯಿಂದ ಸುಮಲತಾ, ಅಭಿಷೇಕ್‍ಗೆ ಸಕ್ಕರೆ-ತುಪ್ಪದ ತುಲಾಭಾರ

    ದೇವಸ್ಥಾನದಲ್ಲಿ ಅಭಿಮಾನಿಯಿಂದ ಸುಮಲತಾ, ಅಭಿಷೇಕ್‍ಗೆ ಸಕ್ಕರೆ-ತುಪ್ಪದ ತುಲಾಭಾರ

    ಧಾರವಾಡ: ಮಂಡ್ಯ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಚೊಚ್ಚಲ ‘ಅಮರ್’ ಚಿತ್ರದ ಪ್ರಚಾರಕ್ಕಾಗಿ ಧಾರವಾಡಕ್ಕೆ ಭೇಟಿ ನೀಡಿದ್ದಾರೆ.

    ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನದಲ್ಲಿ ತುಪ್ಪ ಮತ್ತು ಸಕ್ಕರೆ ತುಲಾಭಾರ ಮಾಡಿಸಿದ್ದಾರೆ. ಸುಮಲತಾ ಅಂಬರೀಶ್ ಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಾಭಾರ ಮಾಡಿದರೆ, ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15 ಕೆಜಿ ತುಪ್ಪದಲ್ಲಿ ತುಲಾಭಾರ ಮಾಡಿಸಲಾಗಿದೆ. ಅಭಿಮಾನಿ ನಾರಾಯಣ್ ಕಲಾಲ್ ಅಪೇಕ್ಷೆ ಮೇರೆಗೆ ಈ ತುಲಾಭಾರ ನಡೆದಿದೆ. ಈ ವೇಳೆ ನಟ ದೊಡ್ಡಣ್ಣ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕರಾದ ಯೋಗರಾಜ್ ಭಟ್, ನಾಗಶೇಖರ್ ಉಪಸ್ಥಿತರಿದ್ದರು.

    ಇದೇ ವೇಳೆ ಮಾತಾನಾಡಿದ ಅಭಿಷೇಕ್, ತುಲಾಭಾರ ಕಾರ್ಯಕ್ರಮ ಇರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ಬಂದ ಮೇಲೆ ಗೊತ್ತಾಯಿತು. ನನ್ನ ತುಲಾಭಾರ ಮಾಡುವುದಕ್ಕೆ ಮೂರು ಸರಿ ಯೋಚಿಸಬೇಕು. ಏಕೆಂದರೆ ನನ್ನ ಭಾರಕ್ಕೆ ಎಷ್ಟು ಅಕ್ಕಿ ಬೇಕು ಎಂದು ಯೋಚನೆ ಮಾಡಬೇಕು. ಆದರೂ ಸಹ ಅವರು ಮಾಡಿದ್ದಾರೆ. ನನಗೆ ತುಂಬಾ ಖುಷಿಯಾಯಿತು. ಚುನಾವಣೆಯಾಗಲಿ, ಸಿನಿಮಾವಾಗಲಿ ಅವರು ಇದು ಮಾಡಿಲ್ಲ. ಅವರು ಪಕ್ಕಾ ಅಂಬರೀಶಣ್ಣನ ಅಭಿಮಾನಿ. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ತುಲಾಭಾರ ಮಾಡಿದ್ದಾರೆ. ಅಮರ್ ಸಿನಿಮಾಗೆ ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಲೈಫ್‍ನಲ್ಲಿ ಮೊದಲ ಸಲ ಹುಬ್ಬಳ್ಳಿ ಕಡೆ ಬಂದಿದ್ದೇನೆ. ಈ ಕಡೆ ಜನ ಕೇಳಿಕೊಂಡ ಹಿನ್ನೆಲೆಯಲ್ಲಿ ನಾನು ಅಮರ ಚಿತ್ರದ ಪ್ರಚಾರಾರ್ಥ ಬಂದಿದ್ದೇವೆ ಎಂದರು.

    ಸುಮಲತಾ ಅವರು ಕೂಡ ಮಾತನಾಡಿ, ಅಂಬರೀಶ್ ಅವರ ಜೊತೆ ಸುಮಾರು ಆರೇಳು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಕಡೆ ಬಂದಿದ್ದೆ. ಅದಾದ ಬಳಿಕ ನಾನು ಇಂದು ಬಂದಿದ್ದೇನೆ. ನನ್ನ ಚುನಾವಣೆ ವೇಳೆ ಸಾಕಷ್ಟು ಜನ ಹುಬ್ಬಳ್ಳಿ ಕಡೆಯಿಂದಲೂ ಬೆಂಬಲ ನೀಡಲು ಮಂಡ್ಯಕ್ಕೆ ಬಂದಿದ್ದರು. ಅಂಬರೀಶ್ ಅವರ ಅಭಿಮಾನಿಗಳು ನನ್ನ ಗೆಲುವಿಗೆ ಈ ಕಡೆಯಲ್ಲೂ ಪೂಜೆ ಸಲ್ಲಿಸಿ ಆಶೀರ್ವಾದ ಮಾಡಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡೋಣ ಎಂದು ಇಲ್ಲಿಗೆ ಬಂದಿದ್ದೇವೆ ಎಂದರು.

    ಬಳಿಕ ಮಾತನಾಡಿದ ಅವರು, ಅಮರ್ ಚಿತ್ರದ ಪ್ರಚಾರಕ್ಕೆ ಬೇರೆ ಕಡೆ ಹೋಗಿದ್ದೇವು. ಉತ್ತರ ಕರ್ನಾಟಕ ಭಾಗಕ್ಕೆ ಬಂದಿರಲಿಲ್ಲ. ಹುಬ್ಬಳ್ಳಿ ವಿಶೇಷವಾದ ಊರು. ಹಾಗಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇವೆ. ಹೀಗಾಗಿ ಇಲ್ಲಿಂದ ಉತ್ತರ ಕನ್ನಡ ಚಿತ್ರದ ಪ್ರಮೋಷನ್ ಆರಂಭಿಸುತ್ತಿದ್ದೇವೆ. ಅಭಿಷೇಕ್ ಒಂದಿಷ್ಟು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ನಾನು ಚುನಾವಣೆಯಲ್ಲಿ ಯಾವುದೇ ಹರಕೆ ಹೊತ್ತಿರಲಿಲ್ಲ. ಆದರೆ ನನ್ನ ಪರವಾಗಿ ಸಾಕಷ್ಟು ಜನ ಹರಕೆ ಹೊತ್ತಿದ್ದರು. ಅವರ ಆಸೆಯಂತೆ ಧಾರವಾಡದಲ್ಲಿ ತುಲಾಭಾರ ನಡೆದಿದೆ ಎಂದು ಸುಮಲತಾ ಹೇಳಿದರು.

  • ‘ಅಮರ್’ ಸಿನಿಮಾದ ಕೆಲ ದೃಶ್ಯಗಳಲ್ಲಿ ಅಂಬರೀಶ್ ನೆನಪಾಗ್ತಾರೆ: ಸುಮಲತಾ

    ‘ಅಮರ್’ ಸಿನಿಮಾದ ಕೆಲ ದೃಶ್ಯಗಳಲ್ಲಿ ಅಂಬರೀಶ್ ನೆನಪಾಗ್ತಾರೆ: ಸುಮಲತಾ

    ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ‘ಅಮರ್’ ಚಿತ್ರ ಇಂದು ಬಿಡುಗಡೆಯಾಗಿದ್ದು, ಮಗನ ಸಿನಿಮಾದ ಕೆಲವು ದೃಶ್ಯಗಳನ್ನ ಸುಮಲತಾ ಅವರು ಅಭಿಮಾನಿಗಳೊಂದಿಗೆ ಕುಳಿತು ನೋಡಿದ್ದಾರೆ.

    ‘ಅಮರ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುಮಲತಾ ಅವರು ಬೆಂಗಳೂರಿನ ನರ್ತಕಿ ಚಿತ್ರಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಗನ ಸಿನಿಮಾದ ಕೆಲವು ದೃಶ್ಯಗಳನ್ನು ಅಭಿಮಾನಿಗಳೊಂದಿಗೆ ಕುಳಿತು ನೋಡಿದರು. ಆ ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯಷ್ಟೇ ಪೂರ್ಣ ಸಿನಿಮಾವನ್ನು ಕುಟುಂಬದೊಂದಿಗೆ ನೋಡಿದ್ದೆ. ಇಂದು ಅಭಿಮಾನಿಗಳ ಭೇಟಿಗೆ ಆಗಮಿಸಿದ್ದೆ. ಅಂಬರೀಶ್ ಅಭಿಮಾನಿಗಳ ಪ್ರೀತಿ ‘ಅಮರ್’ ಇಷ್ಟೊಂದು ಒಳ್ಳೆ ಒಪನಿಂಗ್ ಪಡೆದಿದೆ. ಸಿನಿಮಾದ ಕೆಲವು ದೃಶ್ಯಗಳಲ್ಲಿ ಅಂಬರೀಶ್ ನೆನಪಾಗುತ್ತಾರೆ. ಅವರು ಗಳಿಸಿದ ಪ್ರೀತಿಯನ್ನು ಅಭಿಷೇಕ್ ಗಳಿಸಲು ಸಾಕಷ್ಟು ಪ್ರಯತ್ನ ಪಡಬೇಕಿದೆ ಎಂದರು.

    ಮೊದಲ ಸಿನಿಮಾ ನನಗೆ ಇನ್ನು ಅಭಿ ಚಿಕ್ಕವನಂತೆ ಕಾಣುತ್ತಾರೆ. ಆದ್ದರಿಂದಲೇ ಅವರ ಮೊದಲ ಹೆಜ್ಜೆ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ನನ್ನ ಪರೀಕ್ಷೆಯಲ್ಲಿ ನಾನು ಪಾಸ್ ಆಗಿದ್ದೆ, ಇಂದು ಅಭಿಷೇಕ್ ನಿನ್ನ ಪರೀಕ್ಷೆ ಎಂದು ಹೇಳಿದ್ದೆ. ಇದರಲ್ಲೂ ಅಭಿ ಪಾಸ್ ಆಗಿದ್ದು, ಅಂಬರೀಶ್ ಅವರ ಅಭಿಮಾನಿಗಳ ಪ್ರೀತಿಗೆ ಉತ್ತಮ ಪ್ರಾರಂಭ ಸಿಕ್ಕಿದೆ ಎಂದರು. ಇತ್ತ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಭಿಷೇಕ್ ಅವರು, ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡರು.

    ಸಿನಿಮಾ ಬಿಡುಗಡೆ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ ಸೇರಿದಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದರು. ರಾಜ್ಯಾದ್ಯಂತ ಅಭಿಷೇಕ್  ಅಭಿನಯದ ಅಮರ್ ಸಿನಿಮಾ  ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ನಾಗಶೇಖರ್ ಅವರ ನಿರ್ದೇಶನವಿದ್ದು, ತಾನ್ಯ ಹೋಪ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ‘ಅಮರ್’ ಸಿನಿಮಾ ಮೂಡಿಬಂದಿದೆ.

  • ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

    ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

    -ಗೆಳೆಯನಿಗಾಗಿ ವಿಡಿಯೋ ಮಾಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ “ಅಮರ್” ಚಿತ್ರ ಇಂದು ಬಿಡುಗಡೆ ಆಗಲಿದ್ದು, ಚಿತ್ರ ಬಿಡುಗಡೆಗೂ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ, ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಯಂಗ್ ರೆಬೆಲ್ ಸ್ಟಾರ್ ನಮ್ಮ ಅಭಿ ಅಭಿನಯದ `ಅಮರ್’ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವೂ ಭರ್ಜರಿ ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ. ಅಪ್ಪಾಜಿಗಿಂತಲೂ ಇನ್ನು ಹೆಚ್ಚು ಎತ್ತರಕ್ಕೆ ಅವರ ಮಗ ಬೆಳೆಯಲಿ. ನಿಮ್ಮ ಪ್ರೀತಿ- ಪ್ರೋತ್ಸಾಹ ಸದಾ ಹೀಗೆ ಇರಲಿ. ಇಡೀ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರು `ಅಭಿ ನಿನಗೆ ಶುಭಾಶಯಗಳು. ಚಿತ್ರ ನಿನಗೆ ಹೊಸದಲ್ಲ ಆದರೆ ಮೊದಲ ಹೆಜ್ಜೆ ಮುಖ್ಯವಾಗುತ್ತದೆ. ಚಿತ್ರದಲ್ಲಿ ನೀನು ನಿನ್ನ ಬೆಸ್ಟ್ ಕೊಟ್ಟಿರುತ್ತೀಯಾ ಎಂದು ನನಗೆ ಗೊತ್ತು. ಮೇಲಿಂದ ನೋಡುತ್ತಿರುವ ಗ್ರೇಟ್ ಸೋಲ್‍ನ ಆಶೀರ್ವಾದ ಇದೆ ಎಂದು ಟ್ವೀಟ್ ಮಾಡಿ ಅಭಿಷೇಕ್ ಅವರಿಗೆ ಶುಭ ಕೋರಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ, “ಅಮರ” ನಮ್ಮ ಅಂಬರೀಷ್ ಅಣ್ಣ ಸುಪುತ್ರ ಅಭಿಷೇಕ್ ಯಂಗ್ ರೆಬೆಲ್ ಸ್ಟಾರ್ ಆಗಿ ಬೆಳ್ಳಿತೆರೆಯ ಮೇಲೆ ಬರುತ್ತಿರುವ `ಅಮರ್’ ಚಿತ್ರ ಅದ್ಭುತ ಯಶಸ್ಸು ಗಳಿಸಲಿ ಎಂದು ಶುಭಕೋರಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ಅವರು ಕೂಡ ವಿಡಿಯೋ ಮೂಲಕ ಅಭಿಷೇಕ್ ಹಾಗೂ ಅಮರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ರಾಹುಲ್ ವಿಡಿಯೋವನ್ನು ಸುಮಲತಾ ಅವರು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿ ಅದಕ್ಕೆ, “ಅಭಿಷೇಕ್ ಅಂಬರೀಶ್ ಅವರ ಆಪ್ತ ಗೆಳೆಯ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಇಂದು ಬಿಡುಗಡೆಯಾಗಲಿರುವ ಅಮರ್ ಚಿತ್ರಕ್ಕೆ ಶುಭಹಾರೈಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕೂಡ ವಿಡಿಯೋ ಮೂಲಕ ಅಭಿಷೇಕ್ ಅವರಿಗೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ಸುಮಲತಾ ಅವರು “ಅಮರ್ ಗೆ ಶುಭಾಶಯ ಕೋರುವ ಸರದಿ ಈಗ ಮೆಗಾಸ್ಟಾರ್ ಚಿರಂಜೀವಿಯವರದ್ದು, ಶುಕ್ರವಾರ ಬಿಡುಗಡೆಯಾಗಲಿರುವ ಅಮರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ವಿಡಿಯೋ ಮೂಲಕ ಚಿತ್ರಕ್ಕೆ ಹಾಗೂ ಅಭಿಷೇಕ್‍ಗೆ ಶುಭ ಕೋರಿದ್ದರು.

    `ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ಮಗು ಅಂದುಕೊಂಡ್ವಿ, ಆದ್ರೆ ಈ ಮಗು ಈಗ ರೊಮ್ಯಾನ್ಸ್ ಮಾಡುತ್ತೆ: ದರ್ಶನ್

    ಮಗು ಅಂದುಕೊಂಡ್ವಿ, ಆದ್ರೆ ಈ ಮಗು ಈಗ ರೊಮ್ಯಾನ್ಸ್ ಮಾಡುತ್ತೆ: ದರ್ಶನ್

    – ಅಮರ್ ಚಿತ್ರಕ್ಕೆ ಶುಭಕೋರಿದ ಸೂಪರ್ ಸ್ಟಾರ್ ರಜನಿಕಾಂತ್

    ಬೆಂಗಳೂರು: ನಟ ಅಭಿಷೇಕ್ ಅಭಿನಯದ ಚೊಚ್ಚಲ `ಅಮರ್’ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಅಂಬರೀಶ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಿತ್ರಕ್ಕೆ ಶುಭ ಕೋರಿದ್ದಾರೆ.

    ರಜನಿಕಾಂತ್ ಅವರು ವಿಡಿಯೋದಲ್ಲಿ ಅಮರ್ ಚಿತ್ರ ಯಶಸ್ಸು ಕಾಣಲಿ ಎಂದು ಹೇಳಿ ಅಭಿಷೇಕ್ ಅವರಿಗೆ ಶುಭ ಹಾರೈಸಿದ್ದಾರೆ. ಹಾಗೆಯೇ ಮಂಡ್ಯದಲ್ಲಿ ಬುಧವಾರ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಅವರು ಕೂಡ ಶುಭ ಕೋರಿದ್ದಾರೆ.

    ರಜನಿಕಾಂತ್ ಹೇಳಿದ್ದೇನು?
    ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ನನ್ನ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ನಟಿಸಿದ ‘ಅಮರ್’ ಚಿತ್ರ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯಲ್ಲಿ ವಿಜೃಂಭಿಸಿದ್ದನೋ, ಹಾಗೆ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಜನರ ಹೃದಯದಲ್ಲಿ ವಿಜೃಂಭಸಲಿ ಎಂದು ದೇವರ ಬಳಿ ಪ್ರಾಥಿಸುತ್ತೇನೆ ಎಂದು ರಜನಿಕಾಂತ್ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

    ಬುಧವಾರ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನೀವೆಲ್ಲರೂ ನಮ್ಮಂತಹ ಪುಟ್ಟ-ಪುಟ್ಟ ಕಲಾವಿದರನ್ನು ಆಶೀರ್ವದಿಸಿ ಬೆಳೆಸುತ್ತಿದ್ದೀರಿ. ಮೇ 31ಕ್ಕೆ ನಮ್ಮ ಮಗು ಸಿನಿಮಾ ಬರುತ್ತಿದೆ. ಅಭಿಷೇಕ್‍ನನ್ನು ಹರಿಸಿ, ಬೆಳೆಸಿ, ಆಶೀರ್ವದಿಸಿ. ಏಕೆಂದರೆ ಇವನನ್ನು ನೋಡಿದಾಗಲೆಲ್ಲಾ ಮಗು ಎಂದು ಅನಿಸುತ್ತದೆ. ಆದರೆ ಸ್ಕ್ರೀನ್‍ನಲ್ಲಿ ರೊಮ್ಯಾನ್ಸ್ ಮಾಡುವುದನ್ನು ನೋಡಿದಾಗ ನಮಗಿಂತ ದೊಡ್ಡವನು ಆಗಿದ್ದಾನೆ ಎಂದು ಅನಿಸುತ್ತದೆ. ಹಾಗಾಗಿ ಮೇ 31ರಂದು ನನ್ನ ತಮ್ಮನ ಸಿನಿಮಾ ಬರುತ್ತಿದೆ. ನೀವೆಲ್ಲರು ಬೆಂಬಲ ನೀಡಿ ಪ್ರೋತ್ಸಾಹಿಸಿ ಅಂಬರೀಶ್ ಅಪ್ಪಾಜಿಯಂತೆ ಎತ್ತರವಾಗಿ ಬೆಳೆಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

    `ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. `ಅಮರ್’ ಸಿನಿಮಾ ಇದೇ ತಿಂಗಳ 31 ರಂದು ತೆರೆಗೆ ಬರಲಿದೆ.

  • ‘ಅಮರ್’ಗಾಗಿ ಕೊಡವ ಹಾಡಿಗೆ ಕುಣಿದ ದರ್ಶನ್-ರಚಿತಾ!

    ‘ಅಮರ್’ಗಾಗಿ ಕೊಡವ ಹಾಡಿಗೆ ಕುಣಿದ ದರ್ಶನ್-ರಚಿತಾ!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ಅಮರ್. ಖುದ್ದು ಅಂಬರೀಶ್ ಅವರೇ ಮುಂದೆ ನಿಂತು, ಬಲು ಆಸ್ಥೆಯಿಂದ ಆರಂಭಿಸಿದ್ದ ಚಿತ್ರವಿದು. ಈಗ ಅಂಬಿ ಮರೆಯಾಗಿದ್ದರೂ ಅವರ ನೆನಪಿನ ನೆರಳಲ್ಲಿಯೇ ಅಚ್ಚುಕಟ್ಟಿನಿಂದ ಚಿತ್ರೀಕರಣ ಮುಗಿಸಿಕೊಳ್ಳುತ್ತಿರೋ ಅಮರ್ ಚಿತ್ರವೀಗ ಹಾಡುಗಳಿಂದ ಜನರನ್ನು ಸೆಳೆಯುತ್ತಿದೆ.

    ಈಗಾಗಲೇ ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿವೆ. ಅವೆಲ್ಲವೂ ಈಗ ಟ್ರೆಂಡ್ ಸೆಟ್ ಮಾಡಿವೆ. ಅದಾಗಲೇ ಮತ್ತೊಂದು ಹಾಡಿಗಾಗಿ ಚಿತ್ರತಂಡ ಭರ್ಜರಿಯಾಗೇ ಶ್ರಮ ಹಾಕಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ನಿರೂಪ್ ಭಂಡಾರಿ ಕೂಡಾ ಸಾಥ್ ನೀಡಿದ್ದಾರೆ.

    ಇದು ಎಲ್ಲ ರೀತಿಯಲ್ಲಿಯೂ ಸ್ಪೆಷಲ್ ಸಾಂಗು. ಇದನ್ನು ಕಿರಣ್ ಕಾವೇರಪ್ಪ ಬರೆದಿದ್ದಾರೆ. ಈ ಹಾಡಿಗೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಧ್ವನಿಯಾಗಿದ್ದಾರೆ. ಬಹುಕಾಲದ ನಂತರ ಕೊಡವ ಭಾಷೆಯ ಹಾಡೊಂದು ಈ ಮೂಲಕ ಅಣಿಗೊಂಡಿದೆ. ಈ ಹಾಡನ್ನು ಕೊಡವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆಯಂತೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಮರ್ ಚಿತ್ರದಲ್ಲಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಈ ಕಾರಣದಿಂದಲೇ ಅಮರ್ ಬಗ್ಗೆ ದರ್ಶನ್ ಅಭಿಮಾನಿಗಳೂ ಆಕರ್ಷಿತರಾಗಿದ್ದರು. ಆದರೆ ದರ್ಶನ್ ಹಾಡೊಂದರಲ್ಲಿಯೂ ನಟಿಸಿದ್ದಾರೆಂಬ ವಿಚಾರ ಅಭಿಮಾನಿಗಳ ಪಾಪಿಗೆ ಡಬಲ್ ಸಂಭ್ರಮವನ್ನು ಕೊಡಮಾಡಿದೆ.

    ಅಂಬರೀಶ್ ಅವರು ನಂಬಿಕೆಯಿಟ್ಟು ಈ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ನಾಗಶೇಖರ್ ಅವರಿಗೆ ವಹಿಸಿದ್ದರು. ಆ ಜವಾಬ್ದಾರಿಯನ್ನು ಗಂಭೀರವಾಗಿಯೇ ವಹಿಸಿಕೊಂಡಿರೋ ನಾಗಶೇಖರ್ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ಅಮರ್ ನನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಶ್ರಮಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈ ವಿಶೇಷ ಹಾಡು ರೆಡಿಯಾಗಿದೆ.

  • ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

    ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

    ಮಂಡ್ಯ: ಮನೆಗೆ ಬಂದವರಿಗೆ ಸುಮಲತಾ ಒಂದು ಲೋಟ ನೀರು ಕೊಟ್ಟಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆಗೆ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯ ರಾಜಕೀಯ ಸಂಬಂಧಿಕರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮತ್ತು ಅಂಬರೀಶ್ ಇಬ್ಬರು ಸಂಬಂಧಿಕರಾಗಬೇಕು. ಇಬ್ಬರೂ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದವರಾಗಿದ್ದಾರೆ. ಈಗ ತಮ್ಮಣ್ಣ ಹೇಳಿಕೆಗೆ ಡೊಡ್ಡರಸಿನಕೆರೆ ಗ್ರಾಮದ ಅಂಬಿ ಸಂಬಂಧಿಕರು ನಾವು ನೀವು ಎಲ್ಲ ಸಂಬಂಧಿಕರು ಎಂದು ಹೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಅಂಬರೀಶ್ ಮನೆಗೆ ಹೋದಾಗ ನಿಮಗೆ ನೀರು ಕೊಡದೆ ಊಟ ಕೊಡದೆ ಕಳುಹಿಸಿದ್ದಾರ..? ನಾವೆಲ್ಲ ಸಂಬಂಧಿಕರು, ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು. ವಯಸ್ಸಾಯ್ತ ತಾಳ್ಮೆಯಿಂದ ಮಾತನಾಡಬೇಕು. ಗೆಲ್ಲೋದು ಸೋಲೋದು ಮುಖ್ಯವಲ್ಲ. ನಮ್ಮ ಅತ್ತಿಗೆ ಬಳಿ ಜನ ಬೆಂಬಲ ಇದೆ. ನೇರವಾಗಿ ಫೇಸ್ ಮಾಡಿ. ಚಿತ್ರರಂಗದವರನ್ನು ಕೆಟ್ಟದಾಗಿ ಮಾತನಾಡಬೇಕಾಗಿಲ್ಲ. ಯಾಕೆಂದರೆ ನಿಖಿಲ್, ಕುಮಾರಸ್ವಾಮಿ ಇಬ್ಬರು ಚಿತ್ರರಂಗದಿಂದ ಬಂದವರಾಗಿದ್ದಾರೆ. ನಮ್ಮ ಸಂಬಂಧಿಕರು ಎಂದು ನಾವು ನಿಮ್ಮ ಪರವಾಗಿ ಓಡಾಡಿದ್ದು ಎಂದು ಅಂಬರೀಶ್ ಚಿಕ್ಕಪ್ಪನ ಮಗ ಅಮರ್ ಕಿಡಿಕಾರಿದ್ದಾರೆ.

    ತಂದೆ ಸಮಾನರಾದ ಡಿ.ಸಿ.ತಮಣ್ಣ ನೀವು ಸುಮಕ್ಕನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತೀರಿ ಎಂದು ಅಂದುಕೊಂಡಿರಲಿಲ್ಲ. ಸುಮಕ್ಕ ನಿಮ್ಮ ಮಗಳ ಸಮಾನ. ತಪ್ಪು ಮಾಡಿದ್ದರೆ ತಿದ್ದಿ ಹೇಳಬೇಕಿತ್ತು. ನಮ್ಮ ಮನೆ ಸೇರಿದಂತೆ, ಎಷ್ಟು ಜನ ಸಚಿವರ ಮನೆಯಲ್ಲಿ ಅವರ ಹೆಂಡತಿಯರು ನೀರು, ಊಟ ಕೊಡುತ್ತಾರೆ. ಆಂಟಿ ಗೊತ್ತಿಲ್ಲದವರನ್ನು ಮಾತನಾಡಿಸುತ್ತಾರ..?. ಸಂಬಂಧದಲ್ಲಿ ನಾನು ನಿಮ್ಮ ಮಗಳಾಗಬೇಕು. ಸುಮಕ್ಕನೂ ನಿಮ್ಮ ಮಗಳಾಗಬೇಕು. ಅಪ್ಪನೇ ಮಗಳ ಬಗ್ಗೆ ಮಾತಾಡಿದರೆ ನೋವಾಗುತ್ತದೆ. ಕ್ಷಮೆ ಕೇಳಿದರೂ ನೋವನ್ನು ಮರೆಯಲು ಆಗಲ್ಲ. ಸಂಬಂಧ ಬೇರೆ, ಪಕ್ಷ ಬೇರೆ ಅದನ್ನು ತಿಳಿಯಿರಿ ಎಂದು ಅಂಬರೀಶ್ ಸಂಬಂಧಿ ವಸಂತ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv