Tag: Alzheimer

  • ಅಲ್‌ಝೈಮರ್ಸ್‌ಗೆ ಹೊಸ ಮದ್ದು; ‘ಡೊನಾನೆಮಾಬ್‌’ ಔಷಧಿ ಆತಂಕದ ಮಧ್ಯೆ ಆಶಾವಾದ – ಪ್ರಯೋಜನವೇನು? ಅಪಾಯಗಳೇನು?

    ಅಲ್‌ಝೈಮರ್ಸ್‌ಗೆ ಹೊಸ ಮದ್ದು; ‘ಡೊನಾನೆಮಾಬ್‌’ ಔಷಧಿ ಆತಂಕದ ಮಧ್ಯೆ ಆಶಾವಾದ – ಪ್ರಯೋಜನವೇನು? ಅಪಾಯಗಳೇನು?

    – ಭಾರತದಲ್ಲಿ ಏರುಗತಿಯಲ್ಲಿ ಸಾಗಿದೆ ಅಲ್‌ಝೈಮರ್ಸ್‌ ಪೀಡಿತರ ಸಂಖ್ಯೆ!

    ಬ್ರಹ್ಮಾಂಡದಲ್ಲಿ ಇತರೆ ಜೀವಿಗಳಿಗಿಂತ ಮನುಷ್ಯ ಜೀವಿಗೆ ವಿಶೇಷ ಸ್ಥಾನವಿದೆ. ಬುದ್ಧಿಶಾಲಿ, ನೆನಪಿನ ಶಕ್ತಿ ಇರುವ ಏಕೈಕ ಜೀವಿ ಮನುಷ್ಯ. ಹೀಗಾಗಿ ಜಗತ್ತಿನಲ್ಲಿ ನಾನೇ ಅತ್ಯಂತ ಬುದ್ಧಿಶಾಲಿ ಎಂದು ಮನುಷ್ಯ ಘೋಷಿಸಿಕೊಂಡಿದ್ದಾನೆ. ಇವೆರಡು ವಿಶೇಷ ಗುಣಗಳಿಂದ ವಿಜ್ಞಾನ, ತಂತ್ರಜ್ಞಾನದಲ್ಲಿ ಅಚ್ಚರಿದಾಯಕ ಬೆಳವಣಿಗೆಯಾಗಿದೆ. ಹೊಸ ಹೊಸ ಸಂಶೋಧನೆಗಳಾಗುತ್ತಿವೆ. ಮಾನವ ಎಷ್ಟೇ ವಿಶೇಷತೆಗಳನ್ನು ಹೊಂದಿದ್ದರೂ ಒಂದಲ್ಲ ಒಂದು ನ್ಯೂನತೆ ಇದ್ದೇ ಇರುತ್ತದೆ. ಮನುಷ್ಯನ ನೆನಪಿನ ಶಕ್ತಿಗೆ ಪೆಟ್ಟುಕೊಡುವಂತಹ ಕಾಯಿಲೆಯೊಂದಿದೆ. ಅದೇ ಅಲ್‌ಝೈಮರ್ಸ್ (Alzheimer’s).

    ಅರವತ್ತಕ್ಕೆ ಅರಳು ಮರಳು ಎಂಬ ಗಾದೆಯಿದೆ. ಇದನ್ನು ಮುಪ್ಪಿನ ಮರೆವಿನ ಕಾಯಿಲೆ ಎನ್ನುತ್ತಾರೆ. ಇಳಿವಯಸ್ಸು, ಅನುವಂಶಿಕತೆ, ಜೆನೆಟಿಕ್, ತಲೆಗೆ ಬಲವಾದ ಪೆಟ್ಟು, ದುಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ ಅಂಶಗಳು ಕಾಯಿಲೆಗೆ ಮುಖ್ಯ ಕಾರಣ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಕೆಲವು ಔಷಧಿ, ಥೆರಪಿ, ಉತ್ತಮ ಆರೈಕೆಯಿಂದ ರೋಗ ಹೆಚ್ಚು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬಹುದು. ಇದೀಗ ಅಲ್‌ಝೈಮರ್ಸ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ನಿಯಂತ್ರಣದಲ್ಲಿಡುವ ಔಷಧಿಯೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ವೈದ್ಯಲೋಕ ಬಣ್ಣಿಸಿದೆ. ಆದರೆ ಔಷಧಿ ಪ್ರಾಯೋಗಿಕ ಹಂತದಲ್ಲಿ ಒಂದಷ್ಟು ಯಡವಟ್ಟುಗಳಾಗಿವೆ. ಇದು ಸಹಜವಾಗಿಯೇ ಆತಂಕ ಮೂಡಿಸಿದೆ. ಏನದು ಔಷಧಿ, ಹೇಗೆ ಕೆಲಸ ಮಾಡುತ್ತದೆ, ಭಾರತದ ತಜ್ಞ ವೈದ್ಯರು ಇದರ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ನೋಡಿ ಮಾಹಿತಿ..‌‌ ಇದನ್ನೂ ಓದಿ: ತಮಾಷೆಯಲ್ಲ – 52ನೇ ವಯಸ್ಸಿನಲ್ಲಿ ಮಹಿಳೆಯ ಮಿಂಚಿನ ಓಟ; ಗಿನ್ನಿಸ್‌ ರೆಕಾರ್ಡ್‌ಗೆ ವೇಯ್ಟಿಂಗ್‌

    ಅಲ್‌ಝೈಮರ್ಸ್‌.. ಏನಿದು ಕಾಯಿಲೆ?
    ಅಲ್‌ಝೈಮರ್ಸ್‌ ಕಾಯಿಲೆಯಲ್ಲಿ ಅಮೈಲಾಯ್ಡ್‌ ಹಾಗೂ ಟಾವು ಎಂಬ ರಾಸಯನಿಕಗಳು ಮಿದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಸಂಗ್ರಹವಾಗುತ್ತೆ. ಇದರಿಂದ ನರಕೋಶಗಳು ಹಾಳಾಗುತ್ತವೆ. ಮಿದುಳಿನ ಗಾತ್ರ ಸಂಕುಚಿತಗೊಳ್ಳುತ್ತೆ. ಅಸಿಟೈಲ್‌ ಕೊಲೀನ್‌ ಎಂಬ ನರವಾಹಕದ ಪ್ರಮಾಣ ಕಡಿಮೆಯಾಗುತ್ತೆ. ಪರಿಣಾಮವಾಗಿ ನೆನಪಿನ ಶಕ್ತಿ ಕುಂದುತ್ತದೆ.

    ಕಾಯಿಲೆಗೆ ಕಾರಣವೇನು?
    ಇಳಿವಯಸ್ಸು, ಅನುವಂಶೀಯತೆ, ಜೆನೆಟಿಕ್‌ ಅಂಶ, ತಲೆಗೆ ಬಲವಾದ ಪೆಟ್ಟು, ದುಃಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ.

    ರೋಗ ಲಕ್ಷಣಗಳೇನು?
    ಮರೆವು ಶುರುವಾಗುತ್ತದೆ. ಘಟನೆಗಳು ನೆನಪಿಗೆ ಬರುವುದಿಲ್ಲ. ದಿನನಿತ್ಯದ ವಸ್ತುಗಳನ್ನು ಇಟ್ಟ ಜಾಗದಲ್ಲಿ ಮರೆಯುವುದು, ಹುಡುಕಾಡುವುದು. ವಸ್ತುಗಳ ಹೆಸರೂ ಮರೆತು ಹೋಗುವುದು. ಹೊರಗೆ ಹೋದರೆ ಮರಳಿ ಮನೆಗೆ ವಾಪಸ್‌ ಬರಲು ಗೊತ್ತಾಗದೇ ಇರುವುದು. ಕಾಯಿಲೆ ಹಂತ ಹಂತವಾಗಿ ಹೆಚ್ಚಾದಂತೆ ರೋಗಿಯು ಸಂಪೂರ್ಣವಾಗಿ ತಮ್ಮವರನ್ನು ಆಶ್ರಯಿಸಬೇಕಾಗುತ್ತದೆ. ಇದನ್ನೂ ಓದಿ: ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆ ಇದೆ- ಮೋದಿ ಭೇಟಿ ಬಳಿಕ ಕೆನಡಾ ಪ್ರಧಾನಿ ಹೇಳಿಕೆ

    ಡೊನಾನೆಮಾಬ್ ಔಷಧಿ
    ಔಷಧಿ ತಯಾರಕ ಸಂಸ್ಥೆ ಎಲಿ ಲಿಲ್ಲಿ, ಅಲ್‌ಝೈಮರ್ಸ್ ಕಾಯಿಲೆಗೆ ಹೊಸ ಚಿಕಿತ್ಸಾ ವಿಧಾನವಾಗಿ ‘ಡೊನಾನೆಮಾಬ್’ (Donanemab) ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಯುನೈಟೆಡ್ ಸ್ಟೇಟ್ಸ್ ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್‌ಗೆ ಸಲಹೆ ನೀಡುವ ವಿಜ್ಞಾನಿಗಳು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

    ಔಷಧಿ ಪ್ರಯೋಜನಗಳೇನು?
    ಅಲ್‌ಝೈಮರ್ಸ್ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಸೌಮ್ಯವಾದ ಅರಿವಿನ ದುರ್ಬಲತೆ ಅಥವಾ ಸೌಮ್ಯ ಬುದ್ಧಿಮಾಂದ್ಯತೆ ಹೊಂದಿರುವವರಿಗಾಗಿ ಈ ಔಷಧಿ ಅಭಿವೃಧಿಪಡಿಸಲಾಗಿದೆ. ಮಿದುಳಿನ ರಕ್ತಸ್ರಾವ ಮತ್ತು ರೋಗಗ್ರಸ್ತವಾಗುವಿಕೆಗಳಂತಹ ಅಮಿಲಾಯ್ಡ್-ಸಂಬಂಧಿತ ಇಮೇಜಿಂಗ್ ಅಸಹಜತೆಗಳಿಗೆ ಪರಿಹಾರ ಒದಗಿಸುತ್ತದೆ. ಸೂಕ್ತವಾದ ಲೇಬಲಿಂಗ್ ಮತ್ತು ಕ್ಲಿನಿಕಲ್ ಮಾನಿಟರಿಂಗ್ ಮೂಲಕ ಕಾಯಿಲೆಯಿಂದಾಗುವ ಅಪಾಯಗಳನ್ನು ನಿಯಂತ್ರಿಸಬಹುದು. ಡೊನಾನೆಮಾಬ್ ರೋಗಿಗಳಿಗೆ ಪ್ರಾಯೋಗಿಕವಾಗಿ ಅರ್ಥಪೂರ್ಣ ಚಿಕಿತ್ಸಾ ಪ್ರಯೋಜನವನ್ನು ಒದಗಿಸುತ್ತದೆ. ಇದನ್ನೂ ಓದಿ: ರಫಾದಲ್ಲಿ ವಿನಾಶಕಾರಿ ಸ್ಫೋಟ; 8 ಇಸ್ರೇಲಿ ಸೈನಿಕರು ಸಾವು

    ಏನಿದು ಡೊನಾನೆಮಾಬ್? ಹೇಗೆ ಕೆಲಸ ಮಾಡುತ್ತೆ?
    ಇದು ಮೊನೊಕ್ಲೋನಲ್ ಪ್ರತಿಕಾಯವಾಗಿದ್ದು, ಮಿದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಶೇಖರಣೆಯಾಗುವ ಅಮೈಲಾಯ್ಡ್ ಹಾಗೂ ಟಾವು ಎಂಬ ರಾಸಾಯನಿಕಗಳನ್ನು ಟಾರ್ಗೆಟ್ ಮಾಡುತ್ತದೆ. ಅಲ್‌ಝೈಮರ್ಸ್ ಕಾಯಿಲೆ ಆರಂಭಿಕ ಹಂತದಲ್ಲಿರುವ ಸುಮಾರು 1,736 ರೋಗಿಗಳ ಮೇಲೆ ಡೊನಾನೆಮಾಬ್ ಔಷಧಿ ಪ್ರಯೋಗ ಮಾಡಲಾಯಿತು. ಅವರ ಪೈಕಿ 860 ಜನರು ಅಮೈಲಾಯ್ಡ್ ಬೀಟಾ ಪ್ಲೇಕ್ ತೆರವುಗೊಳಿಸುವವರೆಗೆ ನಾಲ್ಕು ವಾರಗಳಿಗೊಮ್ಮೆ ಈ ಔಷಧಿ ಪಡೆದುಕೊಂಡಿದ್ದರು. 76 ವಾರಗಳಲ್ಲಿ ರೋಗಿಗಳಲ್ಲಿ 35.1% ರಷ್ಟು ಅರಿವಿನ ಕುಸಿತವನ್ನು ಡೊನಾನೆಮಾಬ್ ನಿಧಾನಗೊಳಿಸಿದೆ ಎಂದು ಪ್ರಾಯೋಗಿಕ ಅಧ್ಯಯನಗಳು ಹೇಳುತ್ತಿವೆ.

    ಔಷಧಿಯ ಪ್ರತಿಕೂಲ ಪರಿಣಾಮಗಳೇನು?
    ಡೊನಾನೆಮಾಬ್ ನೀಡಿದ 24% ರೋಗಿಗಳಲ್ಲಿ ಮೆದುಳಿನ ಊತ ಕಂಡುಬಂದಿದೆ. 19.7% ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದಾರೆ ಎಂದು ಅಧ್ಯಯನವು ತೋರಿಸಿದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಮೂರು ಸಾವುಗಳಾಗಿವೆ ಎಂದು ಅಧ್ಯಯನದಲ್ಲಿ ವರದಿಯಾಗಿದೆ.

    ಭಾರತೀಯ ವೈದ್ಯರು ಹೇಳೋದೇನು?
    ಜಗತ್ತಿನಾದ್ಯಂತ ವಯಸ್ಸಾದವರ ಸಂಖ್ಯೆ ಏರುತ್ತಿದ್ದು, ಆಲ್‌ಝೈಮರ್ಸ್‌ನಂತಹ ಕಾಯಿಲೆಗಳ ಹೊರೆ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳಿಗೆ ಇಂತಹ ಔಷಧಿಗಳ ಅಗತ್ಯವಿದೆ. ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಲ್‌ಝೈಮರ್ಸ್ ಕಾಯಿಲೆ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗುರುಗ್ರಾಮ್‌ನ ಪಾರಸ್ ಹೆಲ್ತ್‌ನ ನರವಿಜ್ಞಾನದ ಅಧ್ಯಕ್ಷೆ ಮತ್ತು ದೆಹಲಿಯ ಏಮ್ಸ್‌ನ ನರವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಡಾ ಎಂ.ವಿ.ಪದ್ಮಾ ಶ್ರೀವಾಸ್ತವ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

    ಭಾರತಕ್ಕಿರೋ ಆತಂಕವೇನು?
    ಪ್ರಸ್ತುತ ಭಾರತದಲ್ಲಿ ಅಂದಾಜು 53 ಲಕ್ಷ ಜನರು ಬುದ್ದಿಮಾಂದ್ಯತೆಗೆ ತುತ್ತಾಗಿದ್ದಾರೆ. ಅಲ್‌ಝೈಮರ್ಸ್ ಬುದ್ದಿಮಾಂದ್ಯತೆಯ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ. ಈ ಸಮಸ್ಯೆಯು 2050 ರ ವೇಳೆಗೆ 1.4 ಕೋಟಿ ಸಂಖ್ಯೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂತಹ ಔಷಧಿಗಳ ಪ್ರಯೋಜನಗಳ ಬಗ್ಗೆ ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ಡಾ.ಪದ್ಮಾ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

    ಔಷಧಿ ಬಂದರೂ ಬಳಕೆಗೆ ಸಿಕ್ಕಿಲ್ಲ ಗ್ರೀನ್‌ ಸಿಗ್ನಲ್!
    ಡೊನೆನಮಾಬ್ ಚಿಕಿತ್ಸೆಗೆ ಸಂಬಂಧಿಸಿದ ಡೇಟಾ ಬಗ್ಗೆ ಮತ್ತಷ್ಟು ವಿಶ್ಲೇಷಣೆಯ ಅಗತ್ಯವಿದೆ ಎಂದು ಯುಎಸ್ ನಿಯಂತ್ರಕರು ತಿಳಿಸಿದ್ದಾರೆ. ಹೀಗಾಗಿ ಔಷಧಿಗೆ ಅನುಮೋದನೆ ನೀಡಲು ವಿಳಂಬವಾಗುತ್ತಿದೆ. ಡೊನೆನಮಾಬ್‌ಗೂ ಮೊದಲು ಅಲ್‌ಝೈಮರ್ಸ್ ಚಿಕಿತ್ಸೆಗೆ ಎರಡು ಔಷಧಿಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಜಪಾನೀಸ್ ಮತ್ತು ಅಮೆರಿಕನ್ ಕಂಪನಿಗಳಾದ ಐಸೈ ಮತ್ತು ಬಯೋಜಿನ್ ಅಭಿವೃದ್ಧಿಪಡಿಸಿದ ಮೊದಲ ಔಷಧವಾದ ‘ಅಡುಕನುಮಾಬ್’ಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಯುಎಸ್ ಕಾಂಗ್ರೆಸ್ ಸಮಿತಿ ಪರಿಶೀಲಿಸಿತ್ತು. ಆಗ ಇದು ಅಕ್ರಮಗಳಿಂದ ಕೂಡಿದೆ ಎಂದು ತಿಳಿದುಬಂದಿತ್ತು. ಬಳಿಕ ಔಷಧಿಯ ಹೆಚ್ಚುವರಿ ಪರಿಶೀಲನೆಗೆ ಸಮಿತಿಯು ಮುಂದಾಯಿತು.

    ಬಯೋಜೆನ್ ಅಭಿವೃದ್ಧಿಪಡಿಸಿದ ಎರಡನೇ ಔಷಧವಾದ ಲೆಕನೆಮಾಬ್ ಕೂಡ ಯಾವುದೇ ಪರಿಣಾಮಕಾರಿ ಚಿಕಿತ್ಸೆಯನ್ನು ಹೊಂದಿಲ್ಲ. ಇದರಿಂದ ಕಡಿಮೆ ಅಡ್ಡಪರಿಣಾಮ ಆಗುತ್ತದೆ. ಅರಿವಿನ ಕೊರತೆಯು ನಿಧಾನಗೊಳಿಸುವಲ್ಲಿ ಕೆಲಸ ಮಾಡುತ್ತದೆ ಎನ್ನಲಾಗಿತ್ತು.

  • ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್‌ʼ ರೋಗ  ತಡೆಗಟ್ಟಬಹುದು

    ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್‌ʼ ರೋಗ ತಡೆಗಟ್ಟಬಹುದು

    ನೆನಪಿನ ಶಕ್ತಿ ಮತ್ತು ಯೋಚನಾ ಸಾಮರ್ಥ್ಯವನ್ನು ಕುಂದಿಸುವ ಕಾಯಿಲೆಯನ್ನೇ ʼಆಲ್‌ಝೈಮರ್‌ʼ (Alzheimer) ಅಥವಾ ಮರೆಗುಳಿ ಎನ್ನುತ್ತಾರೆ. ಸಾಮಾನ್ಯವಾಗಿ ಈ ರೋಗ ವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆಲ್‌ಝೈಮರ್ಸ್‌ ಕಾಯಿಲೆಯು ಮೆದುಳಿನ ಕೋಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರೊಟೀನ್‌ಗಳ ಅಸಹಜ ರಚನೆಯಿಂದ ಉಂಟಾಗುತ್ತದೆ.

    ಮನೆಯವರನ್ನು ಗುರುತು ಹಿಡಿಯದಿರುವುದು, ಏನೇನೋ ಮಾತಾಡುವುದು. ಎಲ್ಲವೂ ಮರೆತವರಂತೆ ಇರುವುದು ಈ ಕಾಯಿಲೆಯ ಲಕ್ಷಣ. ಅಲ್‌ಝೈಮರ್‌ಗೆ ತುತ್ತಾದವರನ್ನು ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ರೋಗಿಗಳ ಕಾಳಜಿಯಲ್ಲಿ ಮನೆಯವರ ಪಾತ್ರ ಬಹುಮುಖ್ಯ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

    ಆಲ್‌ಝೈಮರ್‌ ರೋಗ ನಿಯಂತ್ರಣಕ್ಕೆ ಕೆಲವೊಂದು ಆರೋಗ್ಯಕರ ಹವ್ಯಾಸಗಳಿವೆ. ಅದನ್ನು ಪಾಲಿಸಿದರೆ ಅಥವಾ ರೋಗಿಗಳು ಪಾಲಿಸುವಂತೆ ಮಾಡಿದರೆ, ಆಲ್‌ಝೈಮರ್‌ ನಿಯಂತ್ರಣ ಸಾಧ್ಯವಾಗುತ್ತದೆ.

    ಧೂಮಪಾನ ನಿಲ್ಲಿಸುವುದು
    ಧೂಮಪಾನ ಬಿಡುವುದರಿಂದ ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ಇದೆ. ಬುದ್ಧಿಮಾಂದ್ಯತೆ, ನಿರ್ದಿಷ್ಟವಾಗಿ ಆಲ್‌ಝೈಮರ್‌ ಕಾಯಿಲೆಗೆ ತುತ್ತಾಗಲು ಧೂಮಪಾನವೂ ಪ್ರಮುಖ ಕಾರಣವಾಗಿದೆ. ಧೂಮಪಾನ ನಿಲ್ಲಿಸುವುದರಿಂದ ಆಲ್‌ಝೈಮರ್‌ ನಿಯಂತ್ರಣ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೃದಯ ಮತ್ತು ಮೆದುಳಿನಲ್ಲಿರುವ ರಕ್ತನಾಳಗಳ ಕಿರಿದಾಗುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಕಡಿಮೆ ಆಲ್ಕೋಹಾಲ್‌ ಸೇವಿಸಿ
    ಮದ್ಯದ ಚಟ ಹೆಚ್ಚಿರುವವರು ಅದಕ್ಕೊಂದು ಮಿತಿಯ ಚೌಕಟ್ಟನ್ನು ಹಾಕಿಕೊಳ್ಳಬೇಕು. ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್‌ ಸೇವಿಸುವುದರಿಂದ ಆಲ್‌ಝೈಮರ್‌ ಕಾಯಿಲೆ ತಡೆಗಟ್ಟಬಹುದು. ಆರೋಗ್ಯ ಸಮಸ್ಯೆ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ಅದಕ್ಕೆ ಇತಿಮಿತಿಯಲ್ಲಿ ಮದ್ಯ ಸೇವನೆ ಉತ್ತಮ ಮಾರ್ಗ. ಇದರಿಂದ ನಡವಳಿಕೆ ಮತ್ತು ಯೋಚನೆ ಮಾಡುವ ಶಕ್ತಿಯೂ ಸುಧಾರಿಸುತ್ತದೆ.

    ಆರೋಗ್ಯಕರ, ಸಮತೋಲಿತ ಆಹಾರ
    ಪ್ರತಿದಿನ ಕನಿಷ್ಠ ಐದು ಭಾಗ ಮಾಡಿದ ಹಣ್ಣು ಮತ್ತು ತರಕಾರಿ, ಧಾನ್ಯ, ಮತ್ತು ಕಡಿಮೆ ಕೊಬ್ಬಿನ ಪದಾರ್ಥ ಆಹಾರಗಳನ್ನು ಸೇವಿಸಿ. ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಅಡುಗೆಯಲ್ಲಿ ಹೆಚ್ಚಿನ ಉಪ್ಪು ಇರುವ ಆಹಾರ ಸೇವನೆ ಕಡಿಮೆ ಮಾಡಿ. ಈ ಕ್ರಮ ಮೆದುಳನ್ನು ಆರೋಗ್ಯಕರವಾಗಿ ಇಡಲಿದೆ. ಮೆದುಳಿನ ಕ್ಷೀಣತೆ ತಪ್ಪಿಸಲು ಈ ಆಹಾರ ಕ್ರಮ ಸಹಕಾರಿ.

    ವ್ಯಾಯಾಮ
    ಏರೋಬಿಕ್ ಚಟುವಟಿಕೆ (ಸೈಕ್ಲಿಂಗ್ ಅಥವಾ ವೇಗದ ನಡಿಗೆಯಂತಹ) ಮಾಡುವ ಮೂಲಕ ಪ್ರತಿ ವಾರ ಕನಿಷ್ಠ 150 ನಿಮಿಷಗಳ ವ್ಯಾಯಾಮ ಮಾಡಿ. ಇದರಿಂದ ನೆನಪು, ಯೋಚನೆ ಮತ್ತು ಆಲೋಚನಾ ಸಾಮರ್ಥ್ಯ ಸುಧಾರಿಸುತ್ತದೆ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?

    ನಿಯಮಿತ ಆರೋಗ್ಯ ತಪಾಸಣೆ
    ಆಲ್‌ಝೈಮರ್‌ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಉತ್ತಮ ಜೀವನಶೈಲಿ, ಆಹಾರ ಪದ್ಧತಿ ಮತ್ತು ನಿಯಮಿತ ಆರೋಗ್ಯ ತಪಾಸಣೆಯಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು. ಆಗಾಗ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ, ಚಿಕಿತ್ಸೆ ಪಡೆಯುತ್ತಿದ್ದರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

    Live Tv
    [brid partner=56869869 player=32851 video=960834 autoplay=true]

  • ಈ ಲಕ್ಷಣಗಳು ಕಂಡು ಬಂದರೆ ನಿಮಗೆ ಮರೆವಿನ ಕಾಯಿಲೆ ಇದೆ ಎಂದರ್ಥ

    ಈ ಲಕ್ಷಣಗಳು ಕಂಡು ಬಂದರೆ ನಿಮಗೆ ಮರೆವಿನ ಕಾಯಿಲೆ ಇದೆ ಎಂದರ್ಥ

    ವಯಸ್ಸಾದ ಬಳಿಕ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಮರೆವಿನ ಕಾಯಿಲೆ. ಹೌದು, ಇಂದು ವಿಶ್ವ ಅಲ್ಝೈಮರ್ ಡೇ (ಮರೆವಿನ ಕಾಯಿಲೆ) ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ ಜ್ಞಾಪಕ ಶಕ್ತಿ ಕುಂದುತ್ತಾ ಬರುವುದೇ ಅಲ್ಝೈಮರ್ ಎನ್ನುತ್ತೇವೆ.

    ಈ ಕಾಯಿಲೆ ಪ್ರಾರಂಭದಲ್ಲಿ ಅಷ್ಟಾಗಿ ಸಮಸ್ಯೆ ಎನಿಸದೇ ಹೋದರೂ ಆ ನಂತರದಲ್ಲಿ ಇದೇ ದೊಡ್ಡ ಕಾಯಿಲೆಯಾಗಬಹುದು. ಇದನ್ನು ಮೊದಲ ಹಂತದಲ್ಲೇ ಆರೈಕೆ ಮಾಡಿದರೆ, ನಿಂಯತ್ರಣದಲ್ಲಿ ಇಡಬಹುದು. ಸಾಮಾನ್ಯವಾಗಿ 60 ರಿಂದ 80 ವರ್ಷ ವಯಸ್ಸಿನವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ, ಇದು ಅನುವಂಶಿಯವಾಗಿಯೂ ಬರಬಹುದು. ಮರೆವಿನ ಕಾಯಿಲೆಗೆ ಇಂಥದ್ದೇ ಚಿಕಿತ್ಸೆ ಇರುವುದಿಲ್ಲ. ಆದರೆ, ಆರೋಗ್ಯ ಸಮಸ್ಯೆ ಎದುರಾದರೆ ಮಾತ್ರ ಚಿಕಿತ್ಸೆ ನೀಡಬಹುದು. ಮರೆವಿನ ಕಾಯಿಲೆಯ ಕೆಲವು ಹಂತಗಳು ಹೀಗಿವೆ.

    ಮೊದಲ ಹಂತ: ಈ ಹಂತದಲ್ಲಿ ಅಲ್ಝೈಮರ್ ಇರುವ ವ್ಯಕ್ತಿಯಲ್ಲಿ ಯಾವುದೇ ರೀತಿಯ ದೌರ್ಬಲ್ಯ ಕಂಡು ಬರುವುದಿಲ್ಲ. ಸಣ್ಣ ಪುಟ್ಟ ಮರೆವುಗಳು ಮಾತ್ರ ಕಾಣಿಸುತ್ತವೆ. ಇಟ್ಟ ವಸ್ತುಗಳನ್ನು ಮರೆಯುತ್ತಿರುವುದು ಇತ್ಯಾದಿ. ಇದು ಅತಿ ಸಾಮಾನ್ಯವೆನಿಸುತ್ತದೆ. ಇದನ್ನೂ ಓದಿ:  ಶಾರುಖ್ ಅಭಿಮಾನಿಗೆ ಕೊನೆಗೂ ಸುಪ್ರೀಂನಲ್ಲಿ ಸಿಕ್ತು ಜಯ

    ಎರಡನೇ ಹಂತ: ಈ ಹಂತದಲ್ಲಿ ಮರೆವು ಕೊಂಚ ಏರಿಕೆಯಾಗಿರುತ್ತದೆ. ಇಟ್ಟ ವಸ್ತು ಆ ಕ್ಷಣದಲ್ಲೇ ಮರೆಯುವುದು, ಈಗಷ್ಟೇ ತಿಂದ ತಿಂಡಿಯನ್ನೇ ಮರೆಯುವುದು, ಮಾತುಗಳನ್ನು ಮರೆಯುವುದು ಇತ್ಯಾದಿ. ಆದರೆ, ಈ ಹಂತದಲ್ಲಿ, ತಾವು ಮರೆತ ವಿಷಯಗಳನ್ನು ಕೆಲವು ಕ್ಷಣದಲ್ಲಿ ನೆನಪು ಮಾಡಿಕೊಂಡರೆ ಮರುಕಳುಹಿಸುತ್ತಿರುತ್ತದೆ. ಈ ಹಂತದಲ್ಲಿಯೂ ಕೆಲವರು ಹೆಚ್ಚಾಗಿ ಗಮನ ಹರಿಸುವುದಿಲ್ಲ.

    ಮೂರನೇ ಹಂತ: ಈ ವೇಳೆ ಮರೆವು ಸ್ವಲ್ಪ ಹೆಚ್ಚಾಗಿಯೇ ಕಾಡುತ್ತದೆ. ದೈನಂದಿನ ಚಟುವಟಿಕೆಗಳನ್ನೇ ಮರೆಯುವುದು, ಹಣವನ್ನು ಎಣಿಸಲು ಸಾಧ್ಯವಾಗದೇ ಇರುವುದು, ಸರಳ ಸಮಸ್ಯೆಗಳನ್ನು ಪರಿಹರಿಸಲು ಆಗದೇ ಇರುವುದು, ಬಣ್ಣಗಳ ಗುರುತಿಸುವಿಕೆಯಲ್ಲಿ ಕಷ್ಟ, ಮಾತುಗಳನ್ನೇ ಮರೆಯುವುದು ಇತ್ಯಾದಿ ಸಮಸ್ಯೆಗಳು ಉಲ್ಭಣಗೊಳ್ಳುತ್ತಾ ಹೋಗುತ್ತವೆ. ಇದನ್ನೂ ಓದಿ:  ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಕ್ಕೆ ಜೀವಗಳು ಬಲಿ

    ಮಧ್ಯಮ ಹಂತ: ಈ ಹಂತದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡ ತೊಡಗುತ್ತದೆ. ಸಂಬಂಧಗಳನ್ನೇ ಮರೆಯುವುದು, ವ್ಯಕ್ತಿಗಳನ್ನು ಗುರುತಿಸಲು ಆಗದೇ ಇರುವುದು, ತೀವ್ರ ಕೋಪ, ಆತಂಕ, ಒತ್ತಡ, ಚಡಪಡಿಕೆ ಇತ್ಯಾದಿ ಸಮಸ್ಯೆಗಳು ಉಲ್ಭಣವಾಗುತ್ತದೆ. ಈ ಹಂತದಲ್ಲಿಯೇ ವೈದ್ಯರನ್ನು ಕಾಣುವುದು ಹೆಚ್ಚು ಉತ್ತಮ.

    ಕೊನೆಯ ಹಂತ: ಮರೆವು ಕೊನೆಯ ಹಂತಕ್ಕೆ ತಲುಪಿದಾಗ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡ ಬಹುದು. ದೈಹಿಕ ಚಟುವಟಿಕೆಗಳ ಮೇಲೆ ನಿಯಂತ್ರಣವಿಲ್ಲದೇ ಇರುವುದು, ಮಾತನಾಡುವುದನ್ನೇ ಮರೆಯುವುದು, ಖಿನ್ನತೆ, ಕರುಳು ಸಂಬಂಧ ಕಾಯಿಲೆ, ತೂಕ ಇಳಿಯುವುದು, ಆಹಾರ ಸೇವನೆಯಲ್ಲಿ ಕಷ್ಟ, ನರಳುವಿಕೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಾರೆ.  ಇದನ್ನೂ ಓದಿ:  ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಹೆಚ್‍ಡಿಕೆ

    ಇದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ವೈದ್ಯರನ್ನು ಕಾಣುವುದರಿಂದ ಚಿಕಿತ್ಸೆ ಮೂಲಕ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಬಹುದು, ಆದರೆ ಮರೆವನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು. ಇದನ್ನು ಆಪ್ತಸಮಾಲೋಚಕರನ್ನು ಭೇಟಿ ಮಾಡಿ, ಈ ಸಮಸ್ಯೆಯಿಂದಾಗುತ್ತಿರುವ ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳುವ ಬಗ್ಗೆ ಸಲಹೆ ಪಡೆಯಬಹುದು.