Tag: Alwar

  • ಟ್ರ್ಯಾಕ್ಟರ್-ಟೆಂಪೋ ನಡುವೆ ಡಿಕ್ಕಿ – ತಂದೆ, ಮೂವರು ಮಕ್ಕಳ ದುರ್ಮರಣ

    ಟ್ರ್ಯಾಕ್ಟರ್-ಟೆಂಪೋ ನಡುವೆ ಡಿಕ್ಕಿ – ತಂದೆ, ಮೂವರು ಮಕ್ಕಳ ದುರ್ಮರಣ

    ಜೈಪುರ್: ಟ್ರ್ಯಾಕ್ಟರ್ ಹಾಗೂ ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿ ಹಾಗೂ ಆತನ ಮೂರು ಮಕ್ಕಳು ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ಅಲ್ವಾರ್‌ನ (Alwar) ಕಥೂಮರ್‌ನಲ್ಲಿ (Kathoomar) ನಡೆದಿದೆ.

    ಅಕ್ರಮ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಟ್ರ್ಯಾಕ್ಟರ್‌ಗೆ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಶವವನ್ನು ರಸ್ತೆಯಲ್ಲಿ ಇರಿಸಿ ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್

     

    ಅಕ್ರಮ ಮರಳು ಗಣಿಗಾರಿಕೆಯ ವಾಹನಗಳು ವಿಪರೀತವಾಗಿವೆ. ಅದರಲ್ಲೂ ರಸ್ತೆಯಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಮರಳು ದಂಧೆಕೋರರ (Sand mafia) ಜೊತೆ ಪೊಲೀಸರು ಸಹ ಭಾಗಿಯಾಗಿದ್ದಾರೆ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆರೋಪಿಸಿದ್ದಾರೆ.

    ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಪೊಲೀಸರ ಮನವೊಲಿಕೆ ಬಳಿಕ ಶವಗಳನ್ನು ಶವಾಗಾರಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ

  • ಹಾಲಿನಲ್ಲಿ ಡಿಟರ್ಜೆಂಟ್, ಎಣ್ಣೆ ಮಿಕ್ಸ್ ಮಾಡ್ತಿದ್ದ ಖದೀಮರು ಅರೆಸ್ಟ್

    ಹಾಲಿನಲ್ಲಿ ಡಿಟರ್ಜೆಂಟ್, ಎಣ್ಣೆ ಮಿಕ್ಸ್ ಮಾಡ್ತಿದ್ದ ಖದೀಮರು ಅರೆಸ್ಟ್

    – ತಿಂಗಳಿಗೆ ಒಂದೂವರ ಲಕ್ಷ ಹಣ ಸಂಪದಾನೆ
    – ಎರಡೂವರೆ ವರ್ಷದಿಂದ ಕಳ್ಳತನ

    ಜೈಪುರ: ಹಾಲಿನಲ್ಲಿ ಡಿಟರ್ಜೆಂಟ್ ಮತ್ತು ತಾಳೆ ಎಣ್ಣೆಯನ್ನು ಬೆರಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಲಿನ ಟ್ಯಾಂಕರ್, ಪಿಕಪ್ ಮತ್ತು ಕಳ್ಳತನಕ್ಕೆ ಬೇಕಾದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಲಾಗಿದ್ದು, ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಗ್ಯಾಂಗ್ ಹಾಲನ್ನು ಅಲ್ವಾರ್‍ನ ಲಕ್ಷ್ಮಣಗಧದ ಸಖಿ ಎಂಬ ಡೈರಿಯಿಂದ ಬರುತ್ತಿದ್ದನ್ನು ಕದ್ದು, ವಿಷಬೆರಿತ ಹಾಲನ್ನು ಹರಿಯಾಣದ ವಲ್ಲಭಗಧ್‍ನ ಗೋಪಾಲ್ ಡೈರಿಗೆ ಸರಬರಾಜು ಮಾಡುತ್ತಿದ್ದರು.

    ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದೇಗೆ?
    ಈ ಗ್ಯಾಂಗ್ ಸುಮಾರು ಹತ್ತು ದಿನಗಳಿಂದ ಅಲ್ವಾರ್ ನಗರದ ಸಮೀಪವಿರುವ ಹೋಟೆಲ್‍ನಲ್ಲಿ ಹಾಲಿನ ಟ್ಯಾಂಕರ್‍ನಿಂದ ಹಾಲು ಕಳ್ಳತನ ಮಾಡುತ್ತಿತ್ತು. ಕದ್ದ ಹಾಲಿಗೆ ಡಿಟರ್ಜೆಂಟ್ ಮತ್ತು ತಾಳೆ ಎಣ್ಣೆಯನ್ನು ಸೇರಿಸುತ್ತಿದ್ದರು. ಇಂದು ಹಾಲು ಕದ್ದು ಕಲಬೆರಕೆ ಮಾಡುವಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ ಎಂದು ಐಪಿಎಸ್ ಅಧಿಕಾರಿ ಸದರ್ ತಾನಾಧಿಕಾರಿ ತಿಳಿಸಿದ್ದಾರೆ.

    ಟ್ಯಾಂಕರ್‍ನಿಂದ ಹಾಲು ಕಳ್ಳತನ: ಹಾಲಿನ ಟ್ಯಾಂಕರ್‍ನಿಂದ ಈ ಖದೀಮರು ವಿಭಿನ್ನ ರೀತಿಯಲ್ಲಿ ಹಾಲನ್ನು ಕದಿಯುತ್ತಿದ್ದರು. ಟ್ಯಾಂಕರ್ ತೆರೆಯಲು ಇವರ ಬಳಿ ಇದ್ದ ನಕಲಿ ಕೀಲಿಗಳನ್ನು ಬಳಸುತ್ತಿದ್ದರು. ಅಲ್ಲದೆ ಸಂಪೂರ್ಣ ಮುದ್ರೆಯನ್ನು ತೆಗೆದುಹಾಕಿ ಮತ್ತೆ ಅದೇ ರೀತಿಯ ಮುದ್ರೆಯನ್ನು ಮರು ಹಾಕ್ತಿದ್ದರು. ಅಲ್ಲದೇ ಹಾಲು ಹೊರತೆಗೆಯಲು ಬಾಟಲಿಯನ್ನು ಹೇಗೆ ತೆರೆಯಬೇಕು ಎಂದು ತಿಳಿದಿದ್ದರು.

    ಜಿಪಿಎಸ್‍ನನ್ನು ವಾಹನದಿಂದ ಬದಲಾಯಿಸಿದ್ದೇಗೆ?
    ಹಾಲಿನ ಟ್ಯಾಂಕರ್‍ನ ವಾಹನದಲ್ಲಿ ಜಿಪಿಎಸ್ ವ್ಯವಸ್ಥೆ ಗೊಳಿಸಲಾಗಿತ್ತು. ಹಾಲಿನ ವಾಹನ ಎಲ್ಲಿ ತಲುಪಿದೆ? ವಾಹನ ಚಲಿಸುತ್ತಿದ್ದೆಯೋ ಅಥವಾ ನಿಲ್ಲಿಸಲಾಗಿದೆಯೇ ಎಂದು ವಾಹನದ ಸಂಚಾರವನ್ನು ಕಂಟ್ರೋಲ್ ರೂಮ್ ನೋಡಿಕೊಳುತ್ತಿತ್ತು. ಆದ್ರೆ ಈ ಗ್ಯಾಂಗ್ ಜಿಪಿಎಸ್‍ನನ್ನು ಹಾಲಿನ ವಾಹನದಿಂದ ತೆರೆದು ಮತ್ತೊಂದು ಗಾಡಿಗೆ ಫಿಕ್ಸ್ ಮಾಡಿ. ಅವರು ಹೋಗುತ್ತಿದ್ದ ದಾರಿಯಲ್ಲಿಯೇ ಈ ವಾಹನವು ಹಿಂಬಾಲಿಸುತ್ತಿತ್ತು. ಆದ್ದರಿಂದ ಟ್ಯಾಂಕರ್ ವಾಹನ ಎಲ್ಲಿಯೂ ನಿಂತಿಲ್ಲ ಎಂದು ಕಂಟ್ರೋಲ್ ರೂಮ್‍ನವರು ಭಾವಿಸುತ್ತಿದ್ದರು. ಆದ್ರೆ ಹಾಲನ್ನು ಕದ್ದು ನಂತರ ಜಿಪಿಎಸ್‍ನನ್ನು ತೆಗೆದು ಹಾಲಿನ ಟ್ಯಾಂಕರ್‍ಗೆ ಪುನಃ ಖದೀಮರು ಫಿಕ್ಸ್ ಮಾಡುತ್ತಿದ್ದರು.

    ಎರಡೂವರೆ ವರ್ಷದಿಂದ ಕಳ್ಳತನ: ತನಿಖೆಯಲ್ಲಿ ಕಳ್ಳರು ಸುಮಾರು ಎರಡೂವರೆ ವರ್ಷದಿಂದ ಹಾಲನ್ನು ಕದಿಯುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತಿ ದಿನ ಒಂದು ಟ್ಯಾಂಕರ್‍ನಲ್ಲಿ 20 ಸಾವಿರ ಲೀಟರ್ ಹಾಲು ಇರುತ್ತಿತ್ತು, ಅದರಲ್ಲಿ ಒಂದರಿಂದ ಎರಡು ಸಾವಿರ ಲೀಟರ್ ಹಾಲನ್ನು ತೆಗೆದು ಅಷ್ಟೇ ಪ್ರಮಾಣದಲ್ಲಿ ನೀರು ಮತ್ತು ತಾಳೆ ಎಣ್ಣೆ ಮತ್ತು ಡಿಟರ್ಜೆಂಟ್‍ನನ್ನು ಮಿಶ್ರಣ ಮಾಡುತ್ತಿದ್ದೆವು ಎಂದು ಕಳ್ಳರು ಹೇಳಿದ್ದಾರೆ.

    ಅಲ್ವಾರ್‍ನ ಅನೇಕ ಸ್ಥಳಗಳಲ್ಲಿ ಹಾಲು ಕಲಬೆರಕೆ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಈ ಕುರಿತಂತೆ ಜನಸಾಮಾನ್ಯರು ಎಚ್ಚರದಿಂದರಬೇಕು. ತಾಳೆ ಎಣ್ಣೆ ಮತ್ತು ಡಿಟರ್ಜೆಂಟ್ ಬೆರಿಸಿದ ಹಾಲನ್ನು ಕುಡಿಯುವುದರಿಂದ ಯಕೃತ್ತು, ಮೂತ್ರಪಿಂಡ, ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯಕ್ಕೆ ಮಾರಕವಾಗುವಂತಹ ಅನೇಕ ರೋಗಗಳು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದರು.

    ಸಂಜಯ್ ಕುಮಾರ್ ಪುತ್ರ ಪಪ್ಪು ರಾಮ್ ಜಾತಿ, ಜಾಟವ್ ನಿವಾಸಿಯಾಗಿರುವ ಟಿಸಾಮಾರ್ ಥಾನಾ ರಾಮ್‍ನಾಥ್, ಅಸ್ಲಂದ್ದಿನ್ ಪುತ್ರ ಸಹಮತ್ ಖಾನ್ ಬುಟೋಲಿಯಾ ನಿವಾಸಿಯಾಗಿದ್ದು, ಅವರ ಬಾಸ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆ ಇದ್ದ ಅಸ್ಮತ್ ಮತ್ತು ಸಾಹುನ್ ಎಂಬ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

  • 4ರ ಕಂದಮ್ಮನ ಮೇಲೆ 15ರ ಹುಡುಗನಿಂದ ರೇಪ್

    4ರ ಕಂದಮ್ಮನ ಮೇಲೆ 15ರ ಹುಡುಗನಿಂದ ರೇಪ್

    – ಹುಡುಗನನ್ನ ಚಿಕ್ಕಪ್ಪ ಅಂತಿದ್ದ ಬಾಲಕಿ

    ಜೈಪುರ: 15 ವರ್ಷದ ಹುಡುಗ ತನ್ನನ್ನ ಚಿಕಪ್ಪ ಎಂದು ಕರೆಯುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ಥಾಣಾಗಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಬಾಲಕಿಯನ್ನ ದಾಖಲಿಸಿರುವ ಆಸ್ಪತ್ರೆಗೆ ತೆರಳಿದ ಎಸ್.ಪಿ.ತೇಜಸ್ವಿನಿ ಗೌತಮ್ ಮಾಹಿತಿ ಪಡೆದುಕೊಂಡಿದ್ದಾರೆ. ಬಾಲಕಿ ತನ್ನ ಮೇಲಾದ ದೌರ್ಜನ್ಯ ಹೇಳಿ ಭಯದಿಂದ ಕಣ್ಣೀರು ಹಾಕಿದ್ದಾಳೆ ಎಂದು ವರದಿಯಾಗಿದೆ.

    ಆರೋಪಿ ಅಪ್ತಾಪ್ತ ಬಾಲಕಿಯನ್ನ ಆಟಕ್ಕೆ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕಂದಮ್ಮ ಮನೆಗೆ ಅಳುತ್ತಾ ಬಂದು ಚಿಕಪ್ಪನ ಬಗ್ಗೆ ದೂರು ಹೇಳಿದ್ದಾಳೆ. ಪೋಷಕರು ಮಗುವನ್ನ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರೋದು ಬೆಳಕಿಗೆ ಬಂದಿದೆ.

    ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಮಗುವನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಕುಟುಂಬಸ್ಥರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಥಾಣಾಗಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಹ ಅದೇ ಗ್ರಾಮದ ನಿವಾಸಿಯಾಗಿದ್ದಾನೆ. ಬಾಲಕಿಯ ಪಕ್ಕದ ಮನೆಯಲ್ಲಿ ಆರೋಪಿ ವಾಸವಾಗಿದ್ದು, 9ನೇ ಕ್ಲಾಸ್ ಓದುತ್ತಿದ್ದಾನೆ ಎಂದು ಡಿಎಸ್ ಪಿ ಬಲರಾಮ್ ಮೀಣಾ ಹೇಳಿದ್ದಾರೆ.

  • ಮಗನ ಕೊಲೆ ಪ್ರಕರಣದಲ್ಲಿ ಪೊಲೀಸರ ನಿಷ್ಕಾಳಜಿ- ಆತ್ಮಹತ್ಯೆಗೆ ಶರಣಾದ ಅಂಧ ತಂದೆ

    ಮಗನ ಕೊಲೆ ಪ್ರಕರಣದಲ್ಲಿ ಪೊಲೀಸರ ನಿಷ್ಕಾಳಜಿ- ಆತ್ಮಹತ್ಯೆಗೆ ಶರಣಾದ ಅಂಧ ತಂದೆ

    ಜೈಪುರ್: ಮಗನ ಮೇಲೆ ಹಲ್ಲೆ ಮಾಡಿ, ಕೊಲೆಗೈದ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಂಧ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಹರೀಶ್ ಜಾತವ್ (28) ಕೊಲೆ ಆಗಿದ್ದವರು. ಜುಲೈ 16ರಂದು ಹರೀಶ್ ಜಾತವ್ ಕೊಲೆಯಾಗಿತ್ತು. ಆದರೆ ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಂದೆ ರಟ್ಟಿರಾಮ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಅಲ್ವಾರ್ ಜಿಲ್ಲೆಯ ಬಿವಾಡಿ-ಚೋಪನ್ಕಿ ರಸ್ತೆಯಲ್ಲಿ ಹರೀಶ್ ಜಾತವ್ ಅವರು ಜುಲೈ 16ರಂದು ರಾತ್ರಿ 7 ಗಂಟೆ ಸುಮಾರಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಚಾನಕ್ಕಾಗಿ ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದರು. ಇದರಿಂದ ಕೋಪಗೊಂಡ ಸ್ಥಳೀಯರು ಹರೀಶ್ ಜಾತವ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಪರಿಣಾಮ ತೀವ್ರ ರಕ್ತಸ್ರಾವಕ್ಕೆ ಒಳಗಾಗಿ ರಸ್ತೆ ಬದಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಹರೀಶ್ ಸಾವನ್ನಪ್ಪಿದ್ದರು.

    ಈ ಸಂಬಂಧ ಹರೀಶ್ ತಂದೆ ರಟ್ಟಿರಾಮ್ ಅವರು, ಉಮರ್ ಶೇರ್ ಹಾಗೂ ಆತನ ಸಹಾಯಕ ಹರೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಮಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

    ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುತ್ತಿಲ್ಲ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ರಟ್ಟಿರಾಮ್ ಆರೋಪಿಸಿದ್ದರು. ಇದೇ ಕಾರಣದಿಂದ ರಟ್ಟಿರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಅಲ್ವಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಪರೀಶ್ ದೇಶ್ಮುಖ್ ಅವರು, ಹರೀಶ್ ಜಾತವ್ ಸಾಮೂಹಿಕ ಹಲ್ಲೆಯ ಕಾರಣದಿಂದಲೇ ಮೃತಪಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಸೂಕ್ತ ಪುರಾವೆಗಳಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರುವವರೆಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಹರೀಶ್ ಮದ್ಯ ಸೇವಿಸಿ ಬೈಕ್ ಓಡಿಸುತ್ತಿದ್ದ. ನನಗೆ ಡಿಕ್ಕಿಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಅಂತ ಮಹಿಳೆ ದೂರು ನೀಡಿದ್ದಾರೆ. ಹೀಗಾಗಿ ಎಲ್ಲ ರೀತಿಯಲ್ಲಿಯೂ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

  • ಹಾಡಹಗಲೇ ಪತಿಗೆ ಥಳಿಸಿ, ಪತ್ನಿಯ ಮೇಲೆ ಗ್ಯಾಂಗ್ ರೇಪ್

    ಹಾಡಹಗಲೇ ಪತಿಗೆ ಥಳಿಸಿ, ಪತ್ನಿಯ ಮೇಲೆ ಗ್ಯಾಂಗ್ ರೇಪ್

    ಜೈಪುರ್: ಹಾಡಹಗಲೇ ಪತಿಗೆ ಥಳಿಸಿ, ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಸಚೀನ್, ಜಿತು ಹಾಗೂ ಅಶೋಕ್ ಅತ್ಯಾಚಾರ ಎಸಗಿದ ಆರೋಪಿಗಳು. ಮತ್ತಿಬ್ಬರು ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಸಂತ್ರಸ್ತೆ ಪತಿಯ ಜೊತೆಗೆ ಅಲ್ವಾರ್ ಜಿಲ್ಲೆಯ ತಾಲ್‍ವೃಕ್ಷದಿಂದ ಲಾಲ್‍ವಾಡಿ ಗ್ರಾಮಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

    ದಂಪತಿ ಬೈಕ್‍ನಲ್ಲಿ ತಾಲ್‍ವೃಕ್ಷದಿಂದ ಲಾಲ್‍ವಾಡಿ ಗ್ರಾಮಕ್ಕೆ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಏಪ್ರಿಲ್ 26ರಂದು ಮಧ್ಯಾಹ್ನ 3 ಗಂಟೆಗೆ ಐದು ಜನರ ಗುಂಪೊಂದು ಅಡ್ಡಗಟ್ಟಿದೆ. ಇಬ್ಬರು ಪತಿಗೆ ಥಳಿಸಿದರೆ ಉಳಿದ ಮೂವರು ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಇಬ್ಬರು ಕೂಡ ಅತ್ಯಾಚಾರ ಮಾಡಿದ್ದಾರೆ.

    ಈ ಸಂಬಂಧ ಸಂತ್ರಸ್ತೆಯು ಏಪ್ರಿಲ್ 30ರಂದು ಗಾಜಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147 (ಹಲ್ಲೆ), 354 ಬಿ (ಅತ್ಯಚಾರ) ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ವೀಡಿಯೋ: ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಗೋರಕ್ಷಕರಿಂದ ಹಲ್ಲೆ, ವ್ಯಕ್ತಿ ಸಾವು

    ವೀಡಿಯೋ: ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಗೋರಕ್ಷಕರಿಂದ ಹಲ್ಲೆ, ವ್ಯಕ್ತಿ ಸಾವು

    ಜೈಪುರ್: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆಂದು ಆರೋಪಿಸಿ 5 ಜನರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ್ದು, ಓರ್ವ ಮುಸ್ಲಿಂ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಲ್ಲಿನ ಅಲ್ವಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರದಂದು ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನ ತಡೆದ ಗೋರಕ್ಷಕರು ಸುಮಾರು 5 ಜನರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಹರಿಯಾಣದವರಾದ 55 ವರ್ಷದ ಪೆಹ್ಲು ಖಾನ್ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹಲ್ಲೆಗೊಳಗಾದ ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

    ವಾಹನದಿಂದ ಅವರನ್ನ ಎಳೆದು ತಂದು ಥಳಿಸುತ್ತಿರುವುದನ್ನ ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಗುಜರಾತ್‍ನಲ್ಲಿ ಇನ್ಮುಂದೆ ಗೋಹತ್ಯೆಗೆ ಜೀವಾವಧಿ ಶಿಕ್ಷೆ