Tag: alvas institution

  • ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

    ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

    ಮಂಗಳೂರು: ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಬೆಂಗಳೂರಿನ ಅಬ್ಬಿಗೆರೆ ಮೂಲದ ತೇಜಸ್(16) ಹುಟ್ಟುಹಬ್ಬದ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್‍ನಲ್ಲಿ ತೇಜಸ್ ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪೊಲೀಸರು ಡೆತ್‍ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ತಾಯಿಯನ್ನು ಕಳೆದುಕೊಂಡ ನೋವಿನ ಬಗ್ಗೆ ತೇಜಸ್ ಉಲ್ಲೇಖಿಸಿದ್ದಾನೆ. ಜೊತೆಗೆ ತಂದೆಗೆ ಬೆನ್ನು ನೋವು ಇದ್ದ ಬಗ್ಗೆಯೂ ನೊಂದುಕೊಂಡಿದ್ದ ಎಂದು ಹೇಳಲಾಗಿದೆ.

    ಸೋಮವಾರದಂದು ತೇಜಸ್ ಹುಟ್ಟುಹಬ್ಬವಿದ್ದಿದ್ದರಿಂದ ಪೋಷಕರು ಆತನನ್ನು ಭೇಟಿಯಾಗಿ ತೆರಳಿದ್ದರು. ತೇಜಸ್ ತಾಯಿ ಈ ಹಿಂದೆಯೇ ಸಾವನ್ನಪ್ಪಿದ್ದರು. ನಿನ್ನೆ ತಂದೆ ಹಾಗೂ ತಂದೆಯ ಎರಡನೇ ಹೆಂಡತಿ ತೇಜಸ್‍ ನನ್ನು ಭೇಟಿಯಾಗಿ ಮಾತನಾಡಿದ್ದರು. ಈ ವೇಳೆ ತನ್ನ ಬೆನ್ನು ನೋವಿನ ಬಗ್ಗೆ ತಂದೆ ಹೇಳಿದ್ದರು. ತಂದೆಗೆ ಬೆನ್ನು ನೋವು ಕಾಡುತ್ತಿದ್ದ ಬಗ್ಗೆ ಸಂಜೆ ವೇಳೆ ಕೂಡ ನೊಂದುಕೊಂಡಿದ್ದ ಎಂದು ತೇಜಸ್ ಸ್ನೇಹಿತರು ಹೇಳಿದ್ದಾರೆ.

    ನಿನ್ನೆ ರಾತ್ರಿ 7.30 ರ ಸುಮಾರಿಗೆ ತೇಜಸ್ ಹಾಸ್ಟೆಲ್‍ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಆರ್‍ಟಿಐ ಕಾಯ್ದೆಯಡಿ ಬಯಲಾಯ್ತು ಆಳ್ವಾಸ್ ಸಂಸ್ಥೆಯ ಸ್ಫೋಟಕ ರಹಸ್ಯ

    ಕಳೆದ ವರ್ಷ ಆಳ್ವಾಸ್‍ನಲ್ಲಿ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಪೂಜಾರಿ ನಿಗೂಢ ಸಾವು ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಕಾವ್ಯಾ(15) 2017ರ ಜುಲೈ 20ರಂದು ಹಾಸ್ಟೆಲ್‍ನಲ್ಲಿ ಮೃತಪಟ್ಟಿದ್ದಳು. ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದ್ರೆ ಕಾವ್ಯಾ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದರು.

    https://www.youtube.com/watch?v=bErE1Ufa2RU

  • ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ

    ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ

    ಮಂಗಳೂರು: ಜುಲೈ 20ರಂದು ಆಳ್ವಾಸ್ ಕಾಲೇಜಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಕಾವ್ಯಶ್ರೀ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ.

    ಇದನ್ನೂ ಓದಿ: ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಕಾವ್ಯ ಪೋಷಕರಿಗೆ ಸಾಂತ್ವನ ಹೇಳಿದ ನಳಿನ್ ಕುಮಾರ್, ಆರೋಪಿಗಳು ಯಾರೇ ಆಗಿದ್ದರೂ ಸರಿ ಅವರನ್ನು ಬಂಧಿಸಬೇಕು. ಈ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಪ್ರಕರಣದಲ್ಲಿರುವ ಗೊಂದಲಗಳು ಶೀಘ್ರ ನಿವಾರಣೆಯಾಗಬೇಕು ಅಂದ್ರು.

    ಇದನ್ನೂ ಓದಿ:  ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಕಾವ್ಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ರಾಜಕೀಯ ನಾಯಕರು ತೆಪ್ಪಗಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು.

    ಕಾವ್ಯಾ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯೆದುರು ಎಬಿವಿಪಿ ಪ್ರತಿಭಟನೆ ನಡೆಸಿತು. ನ್ಯಾಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದ್ರು.

     

  • ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಮಂಗಳೂರು: ಕೋಮು ಗಲಭೆಯಿಂದ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಮತ್ತೊಂದು ನಿಗೂಢ ಸಾವು ಹಲವು ಅನುಮಾನ, ವಿವಾದಗಳಿಗೆ ಕಾರಣವಾಗಿದೆ. ಶಿಕ್ಷಣಕ್ಕೆ ಹೆಸರಾದ ಆಳ್ವಾಸ್ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ವಿದ್ಯಾರ್ಥಿನಿ ಕಾವ್ಯಶ್ರೀ ಸಾವು ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದೆ.

    ಈ ನಡುವೆ ವಿದ್ಯಾರ್ಥಿನಿ ಸಾವಿನ ನ್ಯಾಯಾಕ್ಕಾಗಿ ಇದೀಗ ಪ್ರತಿಭಟನೆಗಳು ಆರಂಭಗೊಂಡಿವೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರಿನ ನೆಹರೂ ಮೈದಾನದಲ್ಲಿ ಮೊಂಬತ್ತಿ ಉರಿಸಿ ಮೌನ ಪ್ರತಿಭಟನೆ ನಡೆಸಿತು. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ಸಾವಿನ ತನಿಖೆಯನ್ನು ಸರಿಯಾಗಿ ನಡೆಸಬೇಕೆಂದು ಒತ್ತಾಯಿಸಿದ್ರು.

    ಅಲ್ಲದೇ ಕಾವ್ಯಾ ಸಾವಿನಲ್ಲಿ ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್ ಕೈವಾಡ ಇರೋ ಆರೋಪ ಕೇಳಿಬಂದಿದ್ರಿಂದ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದ್ರು. ಇನ್ನು ಕಾವ್ಯಾ ನಿಗೂಢ ಸಾವಿನ ತನಿಖೆಯನ್ನು ಸೂಕ್ತವಾಗಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ನಡೆಸಿದ್ರು. ಇಷ್ಟೇ ಅಲ್ಲ ದೂರದ ಬಹರೈನ್‍ನಲ್ಲೂ ಪ್ರತಿಭಟನೆ ನಡೆದಿದ್ದು, ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಿಫಾ ಘಟಕ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದೆ.

    ಕಾವ್ಯ ಸಾವು ಸಹಜವೋ? ಕೊಲೆಯೋ? ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಆಳ್ವಾಸ್ ಶಿಕ್ಷಣ ಸಂಸ್ಥೆ ಜುಲೈ 20ರ ಹಾಸ್ಟೆಲ್‍ನ ಸಿಸಿಟಿವಿ ದೃಶ್ಯವನ್ನ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ದೃಶ್ಯ 1: ಬೆಳಗ್ಗೆ 6.03ಕ್ಕೆ ಕಾಲೇಜಿನ ಆವರಣದಲ್ಲಿ ಓಡಾಟ

    ದೃಶ್ಯ 2: ಬೆಳಗ್ಗೆ 6.42ಕ್ಕೆ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಟ

    ದೃಶ್ಯ 3: ಬೆಳಗ್ಗೆ 9.48ಕ್ಕೆ ಶಾಲೆಗೆ ಬಂದಿದ್ದು

    ಮಧ್ಯಾಹ್ನ 3.34ಕ್ಕೆ  ಶಾಲೆಯಿಂದ ಹೋಗುತ್ತಿರುವುದು 

    https://www.youtube.com/watch?v=RoCUPTp54LM

    ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರೋ ಮೂಡಬಿದಿರೆಯ ಆಳ್ವಾಸ್‍ನ 10 ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ಜುಲೈ 20ರಂದು ನಿಗೂಢವಾಗಿ ಸಾವನ್ನಪ್ಪಿದ್ರು. ಸ್ಪೋಟ್ರ್ಸ್ ಕೋಟಾದಲ್ಲಿ ಸೀಟ್ ಪಡೆದಿದಿದ್ದ ಕಾವ್ಯ, ಬ್ಯಾಡ್ಮಿಂಟನ್‍ನಲ್ಲಿ ನ್ಯಾಷನಲ್ ಲೆವೆಲ್ ಚಾಂಪಿಯನ್ ಆಗಿದ್ರು. ಮಗಳು ಕಾವ್ಯ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಆಳ್ವಾಸ್ ಮಾತ್ರ ದನ್ನ ಅಲ್ಲಗಳೀತಿದೆ. ಇದರ ಮಧ್ಯೆ ಜುಲೈ 20ರಂದು ಶಾಲೆಗೆ ಬಂದಿದ್ದ ಕಾವ್ಯ, ಬ್ಯಾಡ್ಮಿಂಟನ್ ಆಡಿರೋದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ಕಟೀಲು ನಿವಾಸಿಯಾಗಿರೋ ಕಾವ್ಯ ಪೋಷಕರು ಕಾಲೇಜಿನಲ್ಲೇ ಕೊಲೆ ಮಾಡಲಾಗಿದೆ ಅಂತ ಆರೋಪಿಸಿದ್ರು.

    ಸಾಯುವ ಮೊದಲ ದಿನ ಸಂತೋಷದಿಂದ ಮಾತನಾಡಿದವಳು, ನಾಳೆಯಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಟ್ರೈನಿಂಗ್ ಬರಲು ಪಿಟಿ ಮೇಷ್ಟ್ರು ಪ್ರವೀಣ್ ತಿಳಿಸಿದ್ದಾರೆ ಅಂತ ಹೇಳಿದ್ದಳು. ಆದ್ರೆ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ನಂಬೋದಿಕ್ಕೆ ಆಗತ್ತಾ ಅಂತ ಕಾವ್ಯಾ ತಾಯಿ ಬೇಬಿ ಮತ್ತು ತಂದೆ ಲೋಕೇಶ್ ಪ್ರಶ್ನೆ ಮಾಡ್ತಿದ್ದಾರೆ. ಮಂಗಳೂರು ಕಮಿಷನರ್‍ಗೂ ಕಂಪ್ಲೆಂಟ್ ಕೊಟ್ಟಿದ್ದಾರೆ.

    ಈ ನಡುವೆ ಕಾವ್ಯ ಸಾವು ಹಲವು ಪ್ರಶ್ನೆ ಹುಟ್ಟಿಹಾಕಿದೆ: 
    * ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಹೇಗೆ..?
    * ಹೆತ್ತವರು ಬರುವ ಮೊದಲೇ ಮೃತದೇಹವನ್ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ..?
    * ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ..?
    * ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆ ಕರೆದದ್ದು ಯಾಕೆ..?

    ಈ ನಡುವೆ ಆಳ್ವಾಸ್ ಸಂಸ್ಥೆ, ಜುಲೈ 20ರಂದು ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಆಕೆಯದ್ದು ಕೊಲೆಯಲ್ಲ ಎಂದು ಹೇಳುತ್ತಿದೆ.