Tag: alvas

  • ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಮಂಗಳೂರು: ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ.

    18 ವರ್ಷದ ಪ್ರೀತಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಆಳ್ವಾಸ್ ಸಂಸ್ಥೆಯ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತುಮಕೂರು ಮೂಲದ ಪ್ರೀತಿ ಸೋಮವಾರ ಬೆಳಗ್ಗೆ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನದವರೆಗೆ ತರಗತಿಗೆ ಹಾಜರಾಗಿದ್ದ ಪ್ರೀತಿ ಊಟಕ್ಕೆ ಹೋಗಿದ್ದವಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸಹಪಾಠಿಗಳು ತಿಳಿಸಿದ್ದಾರೆ.

    ಈ ಕುರಿತು ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನುಡಿಸಿರಿಯಲ್ಲಿ ಕೃಷಿ ಬದುಕಿನ ಸಿರಿ-ಸಾಹಿತ್ಯ ಜಾತ್ರೆ ನಡುವೆ ಅರಳಿದ ಕೃಷಿ ಪ್ರಪಂಚ

    ನುಡಿಸಿರಿಯಲ್ಲಿ ಕೃಷಿ ಬದುಕಿನ ಸಿರಿ-ಸಾಹಿತ್ಯ ಜಾತ್ರೆ ನಡುವೆ ಅರಳಿದ ಕೃಷಿ ಪ್ರಪಂಚ

    ಮಂಗಳೂರು: ನಾಡು ನುಡಿಯನ್ನು ಅನಾವರಣಗೊಳಿಸುವ ಆಳ್ವಾಸ್ ನುಡಿಸಿರಿ ಎಲ್ಲರಿಗೂ ಗೊತ್ತು. ಅಲ್ಲಿನ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ, ಕಲಾಪ್ರಕಾರಗಳ ಪ್ರದರ್ಶನಗಳು ಗೊತ್ತು. ಆದರೆ ಅಲ್ಲಿ ಕೃಷಿ ಪ್ರಪಂಚದ ವೈವಿಧ್ಯವೂ ಅನಾವರಣಗೊಳ್ಳುತ್ತಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿ ಗಮನ ಸೆಳೆಯುವ ಅಂಶ ಅಂದ್ರೆ, ತರಕಾರಿ ಕೃಷಿಗಳ ವೈವಿಧ್ಯ.

    ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ ಈಗೆಲ್ಲ ವೈವಿಧ್ಯತೆಗೆ ತೆರೆದುಕೊಳ್ಳುತ್ತಿದೆ. ಆಧುನಿಕ ಜೀವನದಲ್ಲಿ ಮರೆಯಾಗುತ್ತಿರುವ ಕೃಷಿ ಲೋಕದ ಪರಂಪರೆಯನ್ನೂ ಪರಿಚಯಿಸುವ ಯತ್ನ ನುಡಿಸಿರಿಯಲ್ಲಾಗುತ್ತಿದೆ. ಯಾವುದೋ ದೊಡ್ಡ ಮಟ್ಟಿನ ಕೃಷಿಕರು ನೆಟ್ಟ ತೋಟಗಾರಿಕೆ ಹೇಳುವ ಹಾಗೆ ಅಲ್ಲಿ ಬೆಂಡೆ, ತೊಂಡೆಯಿಂದ ತೊಡಗಿ ಹಾಗಲ, ಪಡುವಲ, ಸೋರೆ, ಹೀರೆ, ಬದನೆ, ಚೀನಿಕಾಯಿ ಹೀಗೆ ಬಹುತೇಕ ಎಲ್ಲಾ ಬಗೆಯ ತರಕಾರಿಗಳನ್ನು ಬೆಳೆಯಲಾಗಿದೆ. ನೋಡಲು ಬಂದವರಿಗೆ ಅಚ್ಚರಿಯೋ ಅಚ್ಚರಿ. ಹೀಗೂ ತರಕಾರಿ ಬೆಳೆಯುತ್ತಾ ಅಂತ ಉದ್ಘಾರ ಎತ್ತಿದ್ದರು. ಯಾಕಂದ್ರೆ, ಒಂದು ಕಾಲೇಜು ಕ್ಯಾಂಪಸ್ ನಲ್ಲಿ 6 ಎಕ್ರೆ ಜಾಗದಲ್ಲಿ ಬೆಳೆದು ನಿಂತ ತರಕಾರಿ ಕೃಷಿಯದು. 10ಕ್ಕೂ ಹೆಚ್ಚು ಕಾರ್ಮಿಕರು ಕಳೆದ ಎರಡು ತಿಂಗಳಿಂದ ಮಾಡಿದ ಶ್ರಮದ ಫಲವಿದು.

    ರಾಜ್ಯದ ಉದ್ದಗಲದಿಂದ ಬಂದಿದ್ದವರಂತೂ ಈ ತರಹದ ತರಕಾರಿ ನೋಡಿಯೇ ಇಲ್ಲ ಅನ್ನುತ್ತಿದ್ದರು. ಒಂದ್ಕಡೆ ತರಕಾರಿ ಬೆಳೆದಿದ್ದರೆ, ಇನ್ನೊಂದ್ಕಡೆ ಹಲವು ಬಗೆಯ ಹೂವುಗಳೂ ಅರಳಿ ನಿಂತಿದ್ದವು. ಮತ್ತೊಂದ್ಕಡೆ ಕೃಷಿ ಪರಿಕರಗಳನ್ನೂ ಪ್ರದರ್ಶನಕ್ಕಿಡಲಾಗಿತ್ತು. ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದಿದ್ದ ಕೃಷಿ ಪರಿಕರಗಳ ಮಾರಾಟಗಾರರಿಗೂ ಒಂದೇ ವೇದಿಕೆ ಸಿಕ್ಕಿದ್ದು ವಿಶೇಷವಾಗಿತ್ತು.

    ತರಕಾರಿ ಕೃಷಿಯನ್ನೇ ನೋಡಿರದ ಕಾಲೇಜು ಮಕ್ಕಳಿಗಂತೂ ಕೃಷಿ ಸಿರಿ ಅದ್ಭುತ ಅನುಭವ ನೀಡಿತ್ತು. ಊರಲ್ಲಿ ತರಕಾರಿ, ಕೃಷಿ ಇದ್ದರೂ, ಹೇಗೆ ಇವನ್ನು ಬೆಳೆಯುವುದು ಅನ್ನುವುದು ಗೊತ್ತಿರಲಿಲ್ಲ. ಇಷ್ಟೊಂದು ವೆರೈಟಿಯ ಕೃಷಿಯನ್ನು ನೋಡುವುದೇ ಕಣ್ಣಿಗೆ ಹಬ್ಬ ಅಂತಾ ವಿದ್ಯಾರ್ಥಿಗಳು ಹೇಳುತ್ತಿದ್ದರು.

    ಸಾಹಿತ್ಯ ಜಾತ್ರೆಯ ನುಡಿಸಿರಿ ಯಾವತ್ತಿನದ್ದೇ ಆಗಿದ್ದರೂ, ಕೃಷಿ ಲೋಕದ ಅನಾವರಣ ನುಡಿಸಿರಿಗೆ ಬಂದವರಿಗೆಲ್ಲ ವಿಭಿನ್ನ ಅನುಭವ ನೀಡಿದೆ. ಪ್ರತಿ ಕಾಲೇಜು ಕ್ಯಾಂಪಸ್ ಗಳಲ್ಲಿಯೂ ಇಂಥದ್ದೇ ಕೃಷಿ ಚಟುವಟಿಕೆಗೆ ಪ್ರೇರಣೆ ನೀಡುವಂತಾಗಬೇಕು ಎಂಬ ಆಶಯವೂ ಕೇಳಿಬಂದಿದೆ. ಒಟ್ಟಿನಲ್ಲಿ ಈ ಬಾರಿಯ ನುಡಿಸಿರಿಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದೇ ಕೃಷಿ ಪ್ರಪಂಚ ಅನ್ನುವುದರಲ್ಲಿ ಎರಡು ಮಾತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಳ್ವಾಸ್ ಕಾಲೇಜಿನ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

    ಆಳ್ವಾಸ್ ಕಾಲೇಜಿನ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

    ಮಂಗಳೂರು: ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ.

    ಚಿತ್ರದುರ್ಗದ ಮೂಲದ ರಚನಾ ಅತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಚನಾ ವ್ಯಾಸಂಗ ಮಾಡುತ್ತಿದ್ದಳು.

    ಇಂದು ಮಧ್ಯಾಹ್ನ ಲೈಬ್ರೆರಿಗೆ ಬಂದಿದ್ದ ರಚನಾ ಅನಂತರ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಹೊಂದಿದ್ದ ಕಾರಣ ರಚನಾಗೆ ಈ ಹಿಂದೆ ಕೌನ್ಸಿಲಿಂಗ್ ನೀಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

    ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕುರಿತು ರಚನಾ ಡೆತ್ ನೋಟ್ ಸಹ ಬರೆದಿಟ್ಟಿದ್ದು, ತನ್ನ ಆತ್ಮಹತ್ಯೆಗೆ ಕಡಿಮೆ ಅಂಕ ಪಡೆದಿರುವುದು ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾಳೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‍ಟಿಐ ಕಾಯ್ದೆಯಡಿ ಬಯಲಾಯ್ತು ಆಳ್ವಾಸ್ ಸಂಸ್ಥೆಯ ಸ್ಫೋಟಕ ರಹಸ್ಯ

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಪ್ರಸ್ತುತ ಮೃತ ದೇಹವನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾವ್ಯ ಸಾವಿನ ನ್ಯಾಯಕ್ಕಾಗಿ ಮಂಗಳೂರಲ್ಲಿ ಭಾರೀ ಪ್ರತಿಭಟನೆ- ಮೇಯರ್ ಸೇರಿದಂತೆ ಸಾವಿರಾರು ಜನ ಭಾಗಿ

    ಕಾವ್ಯ ಸಾವಿನ ನ್ಯಾಯಕ್ಕಾಗಿ ಮಂಗಳೂರಲ್ಲಿ ಭಾರೀ ಪ್ರತಿಭಟನೆ- ಮೇಯರ್ ಸೇರಿದಂತೆ ಸಾವಿರಾರು ಜನ ಭಾಗಿ

    ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣದಲ್ಲಿ ಪೊಲೀಸರ ವಿಳಂಬ ತನಿಖೆ ವಿರೋಧಿಸಿ `ಜಸ್ಟಿಸ್ ಫಾರ್ ಕಾವ್ಯ’ ಹೋರಾಟ ಸಮಿತಿ ಇಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

    ಕಾವ್ಯ ಸಾವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಹಾಗೂ ಆಕೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಮಂಗಳೂರಿನ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಗೆ ಭಾಗವಹಿಸಿಲು ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಕಾವ್ಯ ಹೆತ್ತವರು, ಸೌಜನ್ಯ ಪೋಷಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದಾರೆ. ಡಿಸಿ ಕಚೇರಿ ಮುಂಭಾಗ ರಸ್ತೆ ಬಂದ್ ಮಾಡಿರುವುದರಿಂದ ಬಸ್ಸುಗಳ ಓಡಾಟಕ್ಕೆ ಪೊಲೀಸರು ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

    ಪ್ರತಿಭಟನೆಗೆ ಮಂಗಳೂರು ಮೇಯರ್ ಕವಿತಾ ಸನಿಲ್ ಸಹ ಬೆಂಬಲ ಸೂಚಿಸಿದ್ದಾರೆ. ಈ ವೇಳೆ ಮಾತನಾಡಿದ ಮೇಯರ್ ಕಾವ್ಯ ಆತ್ಮಹತ್ಯೆಯೋ, ಕೊಲೆಯೋ ಅನ್ನೋದು ತನಿಖೆಯಾಗಬೇಕು. ಒಟ್ಟಿನಲ್ಲಿ ಸತ್ಯ ಹೊರಬರಲಿ, ಕಾವ್ಯಾ ಹೆತ್ತವರ ಪ್ರಶ್ನೆಗಳಿಗೆ ಉತ್ತರ ಸಿಗಲಿ. ಕಾವ್ಯ ಸಾವಿಗೆ ನ್ಯಾಯಕ್ಕಾಗಿ ನಮ್ಮ ಪೂರ್ಣ ಬೆಂಬಲ ಇದೆ ಎಂದ್ರು.

    ಕಾವ್ಯ ಕ್ರೀಡಾ ವಿದ್ಯಾರ್ಥಿನಿಯಾಗಿದ್ದು ಎಂದಿಗೂ ಆತ್ನಹತ್ಯೆ ಮಾಡಿಕೊಳ್ಳಲಾರಳು. ಸತ್ಯ ಹೊರ ಬರುವವರೆಗೂ ನಮ್ಮ ಹೋರಾಟ ನಿರಂತರವಾಗಲಿದ್ದು, ಪರಿಹಾರ ಮೊತ್ತ ಕೊಡಿಸಲು ಮೇಯರ್ ಆಗಿ ನನ್ನ ಪ್ರಯತ್ನ ಮಾಡುವೆ. ಆದ್ರೆ ತನಿಖೆ ವಿಚಾರದಲ್ಲಿ ಯಾವುದೇ ಪಕ್ಷ ಮೂಗು ತೂರಿಸಬಾರದು ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನ್ಯಾಶನೆಲ್ ಲೆವಲ್ ಬ್ಯಾಡ್ಮಂಟನ್ ಆಟಗಾರ್ತಿಯಾಗಿರೋ 15 ವರ್ಷದ ಕಾವ್ಯ ಜುಲೈ 20 ರಂದು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದ್ರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇದರಿಂದ ಪೋಷಕರು ಇದೊಂದು ಕೊಲೆ ಎಮದು ಆರೋಪಿಸಿದ್ದರು. ಘಟನೆಯ ಬಳಿಕ ಅನೇಕ ಪ್ರತಿಭಟನೆಗಳು ನಡೆದಿದ್ದು, ಹಾಸ್ಟೆಲ್ ನ ಸಿಸಿಟಿವಿ ಕೂಡ ಬಿಡುಗಡೆ ಮಾಡಲಾಗಿತ್ತು.

    ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು.

    ಇದನ್ನೂ ಓದಿ: ಕಾವ್ಯ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

  • ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆಯ ವರದಿ

    ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆಯ ವರದಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲಿನ ವಿದ್ಯಾರ್ಥಿನಿ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಪೂಜಾರಿ ನಿಗೂಢ ಸಾವಿನ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ.

    ಮರಣೋತ್ತರ ಪರೀಕ್ಷೆಯ ವರದಿಯಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಪಣಂಬೂರು ಎಸಿಪಿ ರಾಜೇಂದ್ರ ಅವರು ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದ್ದರೂ ವಿಧಿ ವಿಜ್ಞಾನ ಇಲಾಖೆಯ ವರದಿ ಹಾಗೂ ಆ ವರದಿಯಿಂದ ವೈದ್ಯರು ನೀಡುವ ವರದಿಯಂತೆ ಪ್ರಕರಣದ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಎಸಿಪಿ ತಿಳಿಸಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಈ ಎಲ್ಲಾ ವರದಿಗಳು ಸರಿಯಾಗಿ ಆಗಬೇಕಿರುವುದರಿಂದ ಇನ್ನೂ 15 ದಿನಗಳ ಕಾಲ ಆಗುವ ಸಾಧ್ಯತೆ ಇದೆ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಪೊಲೀಸರು ಕೂಡ ಎಲ್ಲಾ ರೀತಿಯ ತನಿಖೆಗಳನ್ನೂ ಮಾಡುತ್ತಿದ್ದಾರೆ. ಈಗಾಗಲೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್, ಕಾವ್ಯಾಳ ಸಹಪಾಠಿಗಳು, ಹಾಸ್ಟೆಲ್ ವಾರ್ಡನ್‍ರನ್ನು ವಿಚಾರಣೆ ನಡೆಸಿದ್ದ ಎಸಿಪಿ ತಂಡ ಕಾವ್ಯಾಳ ಹೆತ್ತವರಿಂದಲೂ ಮಾಹಿತಿ ಪಡೆದಿದ್ದಾರೆ.

    ಕಾವ್ಯಾಳ ಸಾವಿನ ರಹಸ್ಯ ನಿಗೂಢವಾಗಿದ್ದು, ಈ ಕುರಿತು ಸುದ್ದಿಯಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವುದರಿಂದ ಪೊಲೀಸರೂ ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸೂಕ್ತ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಯ ಕಾವು ಹೆಚ್ಚುತ್ತಲೇ ಇದೆ.

    ಇದನ್ನೂ ಓದಿ: ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

  • ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮೂಡಬಿದಿರೆಯ ಆಳ್ವಾಸ್‍ನ 10ನೇ ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ. ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವಿನ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ಮಾಡಿದ್ರೆ, ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ಕಾರ್ಯಕರ್ತರು ಮಂಗಳೂರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.

    ಈ ಹಿನ್ನೆಲೆಯಲ್ಲಿ ಶನಿವಾರದ ಪಬ್ಲಿಕ್ ಟಿವಿ ಬಿಗ್‍ಬುಲೆಟಿನ್‍ನಲ್ಲಿ ಈ ಕುರಿತಂತೆ ಚರ್ಚೆ ನಡೀತು. ಪಬ್ಲಿಕ್ ಟಿವಿ ಪ್ರಶ್ನೆಗಳಿಗೆ ಉತ್ತರಿಸಿದ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ನಾನು ಕೂಡ ಆಗ್ರಹಿಸುತ್ತೇನೆ. ಅವರಿಗಷ್ಟೇ ಅಲ್ಲದೇ ನನ್ನ ಸಂಸ್ಥೆಗೂ ನ್ಯಾಯ ಬೇಕು ಅಂದ್ರು.

    ಮೋಹನ್ ಆಳ್ವ ನೀಡಿದ ಉತ್ತರಕ್ಕೆ ಕಾವ್ಯಶ್ರೀಯ ತಾಯಿ ಕೂಡ ಸಹಮತ ವ್ಯಕ್ತಪಡಿಸಿದ್ರು. ನಮಗೆ ಪ್ರವೀಣ್ ಮೇಲೆ ಡೌಟ್ ಇದೆ. ತನಿಖೆ ನಡೆಯಬೇಕು ಅಂದ್ರು. ಇದೇ ವೇಳೆ ಮಾತಾಡಿದ ವಿದ್ಯಾರ್ಥಿ ಸಂಘಟನೆ ಮುಖಂಡ ದಿನಕರ್ ಶೆಟ್ಟಿ, ದೈಹಿಕ ಶಿಕ್ಷಕ ಪ್ರವೀಣ್ ರನ್ನು ಕೆಲಸದಿಂದ ತೆಗೆದುಹಾಕುವಂತೆ ಆಗ್ರಹಿಸಿದ್ರು. ಇದಕ್ಕೆ ಉತ್ತರಿಸಿದ ಆಳ್ವ, ಮೊನ್ನೆಯೇ ಆ ಕೆಲಸ ಮಾಡಿದ್ದೇನೆ ಅಂದ್ರು.

    ಇದನ್ನೂ ಓದಿ: ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ 

    https://www.youtube.com/watch?v=75vzrVm8Z6w

    https://www.youtube.com/watch?v=O1dTEqQsZ80

    ಇದನ್ನೂ ಒದಿ: ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ 

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಇದನ್ನೂ ಓದಿ: ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ