Tag: aluru

  • ವರದಕ್ಷಿಣೆ ಹಣ ತರುವಂತೆ ಪತಿ ಮನೆಯವ್ರಿಂದ ಕಿರುಕುಳ ಆರೋಪ – ಮಹಿಳೆ ಆತ್ಮಹತ್ಯೆ

    ವರದಕ್ಷಿಣೆ ಹಣ ತರುವಂತೆ ಪತಿ ಮನೆಯವ್ರಿಂದ ಕಿರುಕುಳ ಆರೋಪ – ಮಹಿಳೆ ಆತ್ಮಹತ್ಯೆ

    ಹಾಸನ: ವರದಕ್ಷಿಣೆ ಹಣ ತರುವಂತೆ ಪತಿ ಮನೆಯವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ನೇಣುಬಿಗಿದುಕೊಂಡು ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಆಲೂರು (Aluru) ತಾಲ್ಲೂಕಿನ ಕಣದಹಳ್ಳಿ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ಹಲಸಿನ ಗಟ್ಟಿ ಸವಿಯಲು ಬಲು ರುಚಿ!

    ನೇಣಿಗೆ ಶರಣಾದ ವಿವಾಹಿತೆಯನ್ನು ರಕ್ಷಿತಾ (21) ಎಂದು ಗುರುತಿಸಲಾಗಿದೆ.

    ಹಳೇಪಾಳ್ಯ ಗ್ರಾಮದ ರಕ್ಷಿತಾ ಮೂರು ವರ್ಷದ ಹಿಂದೆ ಅದೇ ಗ್ರಾಮದ ಪುನೀತ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ವಿವಾಹದ ಬಳಿಕ ಪತಿ ಮನೆಯವರು ವರದಕ್ಷಿಣೆ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದರು. ಇದರಿಂದ ಮನನೊಂದಿದ್ದ ರಕ್ಷಿತಾ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದನ್ನೂ ಓದಿ: ಚಿನ್ನ, ಬೆಳ್ಳಿ ಆಯ್ತು – ಇದೀಗ 25 ಲಕ್ಷ ಬೆಲೆಬಾಳುವ 400 ಕೆಜಿ ಕೂದಲು ಕಳ್ಳತನ

  • ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳ ದಾರುಣ ಸಾವು

    ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳ ದಾರುಣ ಸಾವು

    ಹಾಸನ: ಕೆರೆಯಲ್ಲಿ (Lake) ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಜೀವನ್ (13), ಸಾತ್ವಿಕ್ (11) ವಿಶ್ವ(12), ಪೃಥ್ವಿ (12 )ಸಾವನ್ನಪ್ಪಿದ್ದ ಮಕ್ಕಳು. ಮೃತ ಮಕ್ಕಳು ಮುತ್ತಿಗೆ ಗ್ರಾಮದವರಾಗಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಪ್ರಧಾನಿ ಮಾಡಲು ಮೋದಿ ಮತ ಕೇಳುತ್ತಿದ್ದಾರೆ: ಕೇಜ್ರಿವಾಲ್

    ಶಾಲೆಗೆ ರಜೆ (School Holiday) ಇರುವುದರಿಂದ ಕೆರೆಗೆ ಐವರು ಬಾಲಕರು ಈಜಲು ತೆರಳಿದ್ದರು. ಈ ಪೈಕಿ ಓರ್ವ ಬಾಲಕ ಪಾರಾಗಿ ಸಮೀಪದಲ್ಲಿದ್ದವರಿಗೆ ತಿಳಿಸಿದ್ದಾನೆ. ನಿವಾಸಿಗಳು ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ.

    ಮಕ್ಕಳ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿದ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಹಾಸನದ ಆಲೂರು ಪಟ್ಟಣದಲ್ಲಿ ಭೂಕಂಪನದ ಅನುಭವ

    ಹಾಸನದ ಆಲೂರು ಪಟ್ಟಣದಲ್ಲಿ ಭೂಕಂಪನದ ಅನುಭವ

    ಹಾಸನ: ಭಾರೀ ಮಳೆಯಿಂದಾದ ಗುಡ್ಡ ಕುಸಿತಗಳಂತಹ ಆತಂಕದ ನಂತರ ಈಗ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಭೂಕಂಪದ ಅನುಭವವಾಗಿದೆ.

    ಭಾನುವಾರ ರಾತ್ರಿ 7ರಿಂದ 8 ಗಂಟೆಯ ನಡುವೆ ಎರೆಡು ಭಾರಿ ಭೂಕಂಪನವಾದ ಅನುಭವವನ್ನು ಸಾರ್ವಜನಿಕರು ತಹಶೀಲ್ದಾರರ ಬಳಿ ಹಂಚಿಕೊಂಡಿದ್ದಾರೆ. ಭೂಕಂಪನದ ಪರಿಣಾಮವಾಗಿ ಮನೆಯ ಅಡುಗೆ ಮನೆಯಲ್ಲಿ ಪಾತ್ರೆಗಳು ಅಲ್ಲಾಡುವ ಶಬ್ಧವನ್ನು ಕೇಳಿದ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ.

    ಪಟ್ಟಣದ ರಾಜಪ್ಪ ಬಡಾವಣೆ, ಹಳೇಸಂತೆ ಬೀದಿ, ದೊಡ್ಡಬೀದಿ, ಬಿಎಂರಸ್ತೆ, ಆಶಾ ಬಡಾವಣೆ ಸೇರಿದಂತೆ ಹಲವೆಡೆ ಭೂಕಂಪನ ಅನುಭವಕ್ಕೆ ಬಂದಿದೆ. ಎರಡು ಭಾರಿ ಭೂಕಂಪನದ ಅನುಭವವಾಗಿದ್ದು ಸಂಬಂದಿಸಿದ ಅಧಿಕಾರಿಗಳು ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳ ಭವಿಷ್ಯಕ್ಕಾಗಿ ಕಿಡ್ನಿಯನ್ನೇ ಮಾರಿ ಮೋಸಕ್ಕೊಳಗಾದ ತಂದೆ!

    ಮಕ್ಕಳ ಭವಿಷ್ಯಕ್ಕಾಗಿ ಕಿಡ್ನಿಯನ್ನೇ ಮಾರಿ ಮೋಸಕ್ಕೊಳಗಾದ ತಂದೆ!

    ದಾವಣಗೆರೆ: ಕಿಡ್ನಿ ಕೊಟ್ಟರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ, ಬಡತನ ನಿವಾರಣೆ ಆಗತ್ತೆ ಅಂತ ಕಿಡ್ನಿ ಮಾರಿಕೊಂಡಿದ್ದ ವ್ಯಕ್ತಿಯೊಬ್ಬರು ಇದೀಗ ಬರಿಗೈಯಲ್ಲಿ ಆಕಾಶ ನೋಡುತ್ತಿದ್ದಾರೆ.

    ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ನಿವಾಸಿ ಚನ್ನಬಸಪ್ಪ ಮೋಸ ಹೋದ ವ್ಯಕ್ತಿ. ಒಂದು ವರ್ಷದ ಹಿಂದೆ ಚನ್ನಬಸಪ್ಪರ ದೊಡ್ಡಪ್ಪನ ಮಗ ಸಿದ್ದೇಶ್ ಎಂಬವರಿಗೆ ಕಿಡ್ನಿ ವೈಫಲ್ಯವಾಗಿತ್ತು. ಚನ್ನಬಸಪ್ಪರ ಬಡತನವನ್ನು ಆಧಾರವಾಗಿಟ್ಟಕೊಂಡು ಕಿಡ್ನಿ ಕೊಟ್ಟರೆ ನಿನಗೆ ಜಮೀನು ಹಾಗೂ ನಿನ್ನ ಮಕ್ಕಳನ್ನು ಚೆನ್ನಾಗಿ ಓದಿಸುತ್ತೇವೆ ಎನ್ನುವ ಅಮೀಷವನ್ನು ಇಟ್ಟಿದ್ದರು. ಹೀಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಪ್ಪಿಗೆ ನೀಡಿದ ಚನ್ನಬಸಪ್ಪ ತಮ್ಮ ಒಂದು ಕಿಡ್ನಿಯನ್ನು ನೀಡಿದ್ದರು.

    ಆದರೆ ಕಿಡ್ನಿ ಪಡೆದ ಸಿದ್ದೇಶ್ ಕೆಲ ತಿಂಗಳು ಆರೋಗ್ಯವಾಗಿದ್ದು, ನಂತರ ಕಾರಣಾಂತರಗಳಿಂದ ಸಾವನ್ನಪ್ಪಿದ್ದಾರೆ. ಇತ್ತ ಹಣ ಜಮೀನು ನೀಡುತ್ತೇವೆ ಎಂದು ಹೇಳಿ ಕಿಡ್ನಿಯನ್ನು ಪಡೆದುಕೊಂಡ ಸಂಬಂಧಿಗಳು ಚನ್ನಬಸಪ್ಪ ಬದುಕ್ಕಿದ್ದಾನೋ ಇಲ್ಲವೋ ಎನ್ನುವುದನ್ನು ಸಹ ಕೇಳುತ್ತಿಲ್ಲ. ಕಿಡ್ನಿಯನ್ನು ನೀಡಿದ್ದ ಚನ್ನಬಸಪ್ಪ ಮಾತ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಂದು ಎಕರೆ ಹೊಲದಲ್ಲಿ ಸೊಪ್ಪು ತರಕಾರಿ ಬೆಳೆದು ಹಳ್ಳಿಗಳಿಗೆ ಹೋಗಿ ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.

     

  • ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    ಹಾಸನ: ಜಮೀನಿಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋಗಿ ರೈತರೊಬ್ಬರು ಸಜೀವ ದಹನವಾಗಿರೋ ಘಟನೆ ಜಿಲ್ಲೆಯ ಆಲೂರು ತಾಲೂಕು ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.

    55 ವರ್ಷದ ಪುಟ್ಟಸ್ವಾಮಿಗೌಡ ಸಜೀವ ದಹನವಾದ ರೈತ. ಇವರ ಜಮೀನಿಗೆ ಕಳೆದ ರಾತ್ರಿ ಬೆಂಕಿ ತಗುಲಿತ್ತು. ಬೆಂಕಿ ನಂದಿಸಲು ಹೋಗಿ ಪುಟ್ಟಸ್ವಾಮಿಗೌಡ ಅದರೊಳಗೆ ಸಿಲುಕಿ ಹೊರಬಾರಲಾರದೆ ಬೆಂದು ಹೋಗಿದ್ದಾರೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಲೂರು ಸರ್ಕಾರಿ ಆಸ್ಪತ್ರೆಗೆ ಶಾಸಕ ಹೆಚ್‍ಕೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅತ್ತ ಬಳ್ಳಾರಿಯಲ್ಲಿನ ತೋರಣಗಲ್‍ನಲ್ಲಿ ಸಾಮೀಲ್‍ಗೆ ಬೆಂಕಿ ಬಿದ್ದು ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಮರದ ದಿಮ್ಮಿಗಳು ಗುರುವಾರ ರಾತ್ರಿಯಿಡೀ ಹೊತ್ತಿ ಉರಿದಿವೆ. ಜಮಾಲುದ್ದಿನ್ ಅನ್ನೋರಿಗೆ ಸೇರಿದ್ದ ಸಾಮಿಲ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಅಂದಾಜು ಒಂದೂವರೆ ಕೋಟಿ ರೂ. ಮೌಲ್ಯದ ಮರದ ದಿಮ್ಮಿಗಳು ಸುಟ್ಟು ಕರಕಲಾಗಿವೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ 4 ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.