Tag: Alur

  • ಕಾರಲ್ಲಿ ಇಬ್ರು ಬಾಲಕಿಯರಿದ್ರೂ.. ಕಣ್ಣೀರಿಡುತ್ತಾ ಓಡಿ ಬಂದ ವಿದ್ಯಾರ್ಥಿನಿ – ಕಿಡ್ನ್ಯಾಪ್‌ಗೆ ನಡೆಯಿತಾ ಯತ್ನ?

    ಕಾರಲ್ಲಿ ಇಬ್ರು ಬಾಲಕಿಯರಿದ್ರೂ.. ಕಣ್ಣೀರಿಡುತ್ತಾ ಓಡಿ ಬಂದ ವಿದ್ಯಾರ್ಥಿನಿ – ಕಿಡ್ನ್ಯಾಪ್‌ಗೆ ನಡೆಯಿತಾ ಯತ್ನ?

    ಹಾಸನ: ಕಾರಲ್ಲಿ (Car) ಇಬ್ರು ಬಾಲಕಿಯರಿದ್ರೂ… ಕಾರಲ್ಲಿದ್ದವರು ನನ್ನನ್ನೂ ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ರೂ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು (Student) ಅಳುತ್ತ ಓಡಿ ಶಾಲೆಗೆ ಬಂದ ಪ್ರಸಂಗ ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ನಡೆದಿದೆ.

    ಶಾಲೆಗೆ (School) ಓಡಿ ಬಂದ ವಿದ್ಯಾರ್ಥಿನಿ, ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಬಂದವರು ಅಪಹರಣಕ್ಕೆ ಯತ್ನಿಸಿದ್ರು, ಕಾರಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರು ಇದ್ದರು ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ಗಾಬರಿಯಿಂದ ಬಾಲಕಿ ಬ್ಯಾಗ್‌ ಸಹ ಎಸೆದು ಬಂದಿದ್ದಾಳೆ. ಈ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮನೆಯವರಿಂದ ನನ್ನನ್ನು ಕಾಪಾಡು – ಬಾಯ್‌ಫ್ರೆಂಡ್‌ಗೆ ಮೆಸೇಜ್‌ ಕಳಿಸಿದವಳು ಶವವಾಗಿ ಪತ್ತೆ

    ಪ್ರಕರಣ ಸುಖಾಂತ್ಯ
    ಪೊಲೀಸರ ಮಾಹಿತಿ ಕಲೆಹಾಕಿದಾಗ, ಅದೇ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಕಾರಿನಲ್ಲಿ ಪರಿಚಯಸ್ಥ ಯುವಕ ಶಾಲೆಗೆ ಬಿಡಲು ಕರೆದುಕೊಂಡು ಬರುತ್ತಿದ್ದ. ಈ ಬಾಲಕಿಯನ್ನು ಸಹ ಕಾರಿಗೆ ಹತ್ತಿಸಿಕೊಂಡು ಶಾಲೆಯ ಬಳಿ ಬಿಡಲು ಸಮೀಪ ಬಂದು ಕಾರು ನಿಲ್ಲಿಸಿ ಡೋರ್‌ ತೆಗೆದಿದ್ದಾನೆ. ಅಷ್ಟರಲ್ಲೇ ಬಾಲಕಿ ಕೂಗಾಡಿಕೊಂಡು ಅಲ್ಲಿಂದ ಓಡಿದ್ದಾಳೆ ಎಂದು ತಿಳಿದು ಬಂದಿದೆ. ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ಮಾಹಿತಿ ಪಡೆದುಕೊಂಡು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಬ್ರೆಡ್‌ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು

  • ಮನೆಯ ಬಾಗಿಲಲ್ಲೇ ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ – ಬೇಸತ್ತು ಮಹಿಳೆ ಆತ್ಮಹತ್ಯೆ

    ಮನೆಯ ಬಾಗಿಲಲ್ಲೇ ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ – ಬೇಸತ್ತು ಮಹಿಳೆ ಆತ್ಮಹತ್ಯೆ

    ಹಾಸನ: ಮನೆಯ ಬಾಗಿಲಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಹಾಸನದ (Hassan) ಆಲೂರು (Alur) ತಾಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.

    ಕೆಂಚಮ್ಮ(50) ನೇಣಿಗೆ ಶರಣಾದ ಮಹಿಳೆ. ಬಿಎಸ್‌ಎಸ್, ಇಐಎಫ್ ಹೆಸರಿನ ಫೈನಾನ್ಸ್ ಕಂಪನಿಯಿಂದ ಕೆಂಚಮ್ಮ 2 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತಿನ ಹಣ ಕಟ್ಟುತ್ತಿದ್ದರು. ಈ ತಿಂಗಳು ಹಣ ಇಲ್ಲದ ಕಾರಣ ಕಟ್ಟಿರಲಿಲ್ಲ. ಇದನ್ನೂ ಓದಿ: ಕಲರ್‌ಫುಲ್ ಹೋಳಿ ಸಾಂಗ್‌ನಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಡ್ಯಾನ್ಸ್

    ಇಂದೇ ಹಣ ಕಟ್ಟಬೇಕೆಂದು ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆಯ ಬಳಿಯೇ ಬಂದು ಕುಳಿತಿದ್ದರು. ಇದರಿಂದ ಮನನೊಂದು ಮನೆಯಲ್ಲಿಯೇ ಕೆಂಚಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ತಂದೆ-ತಾಯಿ ಹಾಗೂ ಹಿರಿಯರ ಆರೈಕೆ ಮಾಡದಿದ್ರೆ ಅವ್ರ ಆಸ್ತಿಯಲ್ಲಿ ಪಾಲಿಲ್ಲ: ಕೃಷ್ಣ ಬೈರೇಗೌಡ

    ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

  • ವಿಶೇಷಚೇತನ ರೈತನ ಕಾಫಿ ತೋಟ ನಾಶ ಮಾಡಿದ ದುಷ್ಟರು- ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

    ವಿಶೇಷಚೇತನ ರೈತನ ಕಾಫಿ ತೋಟ ನಾಶ ಮಾಡಿದ ದುಷ್ಟರು- ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

    ಹಾಸನ: ವಿಶೇಷಚೇತನ ರೈತನೊಬ್ಬರ ಒಂದು ಎಕರೆ ಕಾಫಿ ತೋಟವನ್ನು (Coffee Plantation) ದುಷ್ಕರ್ಮಿಗಳು ನಾಶಪಡಿಸಿದ ಘಟನೆ ಹಾಸನದ (Hassan) ಆಲೂರಿನ (Alur) ಅಡಿಬೈಲು ಗ್ರಾಮದಲ್ಲಿ ನಡೆದಿದೆ.

    ಚಂದ್ರು ಎಂಬವರು ಒಂದು ಎಕರೆ ಜಾಗದಲ್ಲಿ 450ಕ್ಕೂ ಹೆಚ್ಚು ಕಾಫಿ ಗಿಡ ಹಾಗೂ ಮೆಣಸಿನ ಗಿಡಗಳನ್ನು ಬೆಳೆದಿದ್ದರು. ದುಷ್ಕರ್ಮಿಗಳು ಬೆಳೆಯನ್ನು ಕಡಿದು ಹಾಕಿದ್ದು ರೈತ (Farmer) ಹಾಗೂ ಆತನ ಕುಟುಂಬ (Family) ಕಂಗಾಲಾಗಿ ಕಣ್ಣೀರಿಟ್ಟಿದೆ. ಇದನ್ನೂ ಓದಿ: ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಹನ್ನೆರಡು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಗಿಡಗಳಲ್ಲಿ ಫಸಲು ಬರುತ್ತಿದ್ದು, ಕುಟುಂಬ ನಿರ್ವಹಣೆಯ ಆಧಾರವೇ ಕಳಚಿದಂತಾಗಿದೆ ಎಂದು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ. ವಿಶೇಷಚೇತನ ರೈತನ ಕಾಫಿ ತೋಟದಲ್ಲಿ ಹೀನ ಕೃತ್ಯ ಎಸಗಿರುವ ದುಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸ್ವಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್‌ಗೆ ಗ್ರಾಮಸ್ಥರಿಂದ ಕ್ಲಾಸ್

  • ಕರ್ತವ್ಯದಲ್ಲಿದ್ದಾಗ ಅಪಘಾತ- 2 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಪೇದೆ ಸಾವು

    ಕರ್ತವ್ಯದಲ್ಲಿದ್ದಾಗ ಅಪಘಾತ- 2 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಪೇದೆ ಸಾವು

    ಹಾಸನ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಾಸನದ ಆಲೂರು ಠಾಣೆ ಪೊಲೀಸ್ ಪೇದೆ ಸಾವನ್ನಪಿದ್ದಾರೆ.

    ಆಲೂರು ಪೊಲೀಸ್ ಠಾಣೆ ಮೋಹನ್ ಕುಮಾರ್(32) ಮೃತ ದುರ್ದೈವಿ. ಕರ್ತವ್ಯ ನಿರತನಾಗಿದ್ದಾಗ ಐದು ದಿನದ ಹಿಂದೆ ಅಪಘಾತವಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

    ಹಾಸನ ನಿವಾಸಿ ಮೋಹನ್ ಕುಮಾರ್ ಅವರಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಕೊರೊನಾ ಲಾಕ್‍ಡೌನ್ ಹಿನ್ನೆಲೆ ಎಂದಿನಂತೆ ಐದು ದಿನದ ಹಿಂದೆ ಕರ್ತವ್ಯ ನಿರತನಾಗಿದ್ದರು. ಈ ವೇಳೆ ಬೈಕ್‍ನಲ್ಲಿ ಸ್ಟೇಷನ್‍ಗೆ ತೆರಳುತ್ತಿದ್ದಾಗ ಕಂದಲಿ ಬಳಿ ಬೈಕ್ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು.

    ಸ್ಥಳೀಯರು ಹಾಗೂ ಕೆಲ ಪೊಲೀಸ್ ಸಿಬ್ಬಂದಿ ತಕ್ಷಣವೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಸರ್ಕಾರದಿಂದ ಸೂಕ್ತ ನೆರವಿಗೆ ಸಹೊದ್ಯೋಗಿಗಳು ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೇಯಸಿಗಾಗಿ ದುಬಾರಿ ಬೈಕ್ ಕದ್ದು ಪೊಲೀಸರ ಅತಿಥಿಯಾದ ಯುವಕ

    ಪ್ರೇಯಸಿಗಾಗಿ ದುಬಾರಿ ಬೈಕ್ ಕದ್ದು ಪೊಲೀಸರ ಅತಿಥಿಯಾದ ಯುವಕ

    – ಟೆಸ್ಟ್ ಡ್ರೈವ್‍ಗೆ ಬೈಕ್ ಪಡೆದು ನಾಪತ್ತೆಯಾಗಿದ್ದ ಆರೋಪಿ

    ಹಾಸನ: ಪ್ರೇಯಸಿಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಶೋಕಿ ಮಾಡಲು ದುಬಾರಿ ಬೈಕ್ ಕದ್ದ ಯುವಕನನ್ನು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೂಳದ ಪೊಲೀಸರು ಬಂಧಿಸಿದ್ದಾರೆ.

    ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ನಿವಾಸಿ ಪ್ರಮೋದ್ (19) ಬಂಧಿತ ಆರೋಪಿ. ಪ್ರಮೋದ್ ಶ್ರವಣಬೆಳಗೊಳದ ಪುನೀತ್ ಎಂಬವರ ಬೈಕ್ ಅನ್ನು ಫೆಬ್ರವರಿ 9ರಂದು ಎಗರಿಸಿಕೊಂಡು ಹೋಗಿದ್ದ. ಆರೋಪಿಗೆ ಬಲೆ ಬೀಸಿದ್ದ ಪೊಲೀಸರು 9 ದಿನಗಳ ಬಳಿಕ ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಶ್ರವಣಬೆಳಗೊಳದ ಪುನೀತ್ ಬೈಕನ್ನು ಮಾರಾಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತನ್ನು ಒಎಲ್‍ಎಕ್ಸ್ ನಲ್ಲಿ ನೋಡಿದ್ದ ಪ್ರಮೋದ್ ಕೂಡಲೇ ಪುನೀತ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದ. ನಂತರ ಪರಿಚಯ ಮಾಡಿಕೊಂಡು ಬೈಕನ್ನು ಖರೀದಿಸುವುದಾಗಿ ಹೇಳಿದ್ದ. ಶ್ರವಣಬೆಳಗೊಳ ಬಸ್ ನಿಲ್ದಾಣದ ಹತ್ತಿರ ಫೆಬ್ರವರಿ 9ರಂದು ಸಂಜೆ ಬಂದಿದ್ದ ಪ್ರಮೋದ್, ಪುನೀತ್ ಬಳಿಯಿದ್ದ ಬೈಕನ್ನು ಟೆಸ್ಟ್ ಡ್ರೈವ್ ಮಾಡುತ್ತೇನೆಂದು ನಂಬಿಸಿ ತೆಗೆದುಕೊಂಡು ಪರಾರಿಯಾಗಿದ್ದ. ನಂತರ ಫೋನ್ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

    ಈ ಸಂಬಂಧ ಪುನೀತ್ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂಬಿಕೆ ದ್ರೋಹ ಪ್ರಕರಣದ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗೆ ಬಲೆ ಬೀಸಿದ್ದರು. ಈ ನಿಟ್ಟಿನಲ್ಲಿ ಎಸ್‍ಪಿ ಶ್ರೀನಿವಾಸಗೌಡ ಹಾಗೂ ಎಎಸ್‍ಪಿ ನಂದಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಚುರುಕುಗೊಳಿಸಿದ ತಂಡವು ಆರೋಪಿ ಪ್ರಮೋದ್‍ನನ್ನು ಇಂದು ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.