Tag: Alternative Movie

  • ಬಿಗ್‍ಬಾಸ್ ಮನೆಯಲ್ಲಿ ಆಲ್ಟರ್‌ನೇಟ್ ಮೂವಿ ರಹಸ್ಯ ಬಿಚ್ಚಿಟ್ಟ ರಾಜೀವ್!

    ಬಿಗ್‍ಬಾಸ್ ಮನೆಯಲ್ಲಿ ಆಲ್ಟರ್‌ನೇಟ್ ಮೂವಿ ರಹಸ್ಯ ಬಿಚ್ಚಿಟ್ಟ ರಾಜೀವ್!

    ಬಿಗ್‍ಬಾಸ್ ಮನೆಯ ಸದಸ್ಯರಿಗೆ ನಿನ್ನೆ ‘ಗುಟ್ಟೊಂದು ಹೇಳುವೇ’ ಎಂಬ ಚಟುವಟಿಕೆಯೊಂದನ್ನು ಬಿಗ್‍ಬಾಸ್ ನೀಡಿದ್ದರು. ಅದರಂತೆ ಮನೆಯ ಸದಸ್ಯರು ತಮ್ಮ ಜೀವನದಲ್ಲಿ ಇದುವರೆಗೂ ಯಾರಿಗೂ ಹೇಳಿರದ, ಹೊರಜಗತ್ತಿಗೆ ಗೊತ್ತಿಲ್ಲದ ಗುಟ್ಟೊಂದನ್ನು ಹೇಳಬೇಕೆಂದು ತಿಳಿಸಿದ್ದರು. ಈ ವೇಳೆ ಕೆಲವು ಮನೆಯ ಸದಸ್ಯರು ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡರೆ, ಇನ್ನೂ ಕೆಲವರು ಸಿಹಿ ಘಟನೆಗಳನ್ನು ಹಂಚಿಕೊಂಡರು. ಆದರೆ ಎಲ್ಲರ ಮಧ್ಯೆ ರಾಜೀವ್ ಮಾತ್ರ ಹಾಸ್ಯಮಯ ಘಟನೆಯೊಂದನ್ನು ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ.

    ಹೌದು, ಕ್ರಿಕೆಟಿಗ ರಾಜೀವ್ ಹಾಗೂ ಅವರ 16 ಮಂದಿ ಸ್ನೇಹಿತರು ಒಮ್ಮೆ ಆಲ್ಟರ್‌ನೇಟ್ ಮೂವಿ ನೋಡಲು ಪ್ಲಾನ್ ಮಾಡಿದ್ದರಂತೆ. ಅದರಂತೆ ಲೋಕೇಶ್ ರಾವ್ ಎಂಬ ಸ್ನೇಹಿತನೊಬ್ಬನ ತಂದೆಗೆ ನೈಟ್ ಶಿಫ್ಟ್ ಕೆಲಸ ಇದ್ದಿದ್ದರಿಂದ ಎಲ್ಲರೂ ಅವರ ಮನೆಯಲ್ಲಿ ಆಲ್ಟರ್‌ನೇಟ್ ಮೂವಿ ನೋಡಲು ಹೋಗಿದ್ದರಂತೆ. ಈ ವೇಳೆ ಒಂದು ಸಿಡಿ ಚೆನ್ನಾಗಿಲ್ಲ ಅದನ್ನು ಬದಲಾಯಿಸಿಕೊಂಡು ಬರುತ್ತೇನೆ ಎಂದು ಲೋಕೇಶ್ ಸಿಡಿ ಅಂಗಡಿಗೆ ಹೋದ. ಆಗ 10 ನಿಮಿಷದ ಬಳಿಕ ಲೋಕೇಶ್ ತಂದೆ ಬಾಗಿಲು ತೆರೆದು ಮನೆಗೆ ಎಂಟ್ರಿ ಕೊಟ್ಟರು. ಇದನ್ನು ಕಂಡು ಅವರ ತಂದೆ ಏನು ಮಾತನಾಡದೇ ಸಿದಾ ರೂಮ್‍ಗೆ ಹೋಗಿ ಬಾಗಿಲು ಹಾಕಿಕೊಂಡರು. ನಾವೆಲ್ಲರೂ ಗಾಬರಿಯಿಂದ ಅಲ್ಲಿಂದ ಪರಾರಿಯಾದ್ವಿ. ಬಳಿಕ ಲೋಕೇಶ್ ಮನೆಗೆ ಹೋಗಿದ್ದಾನೆ. ಆಗಲೂ ಕೂಡ ಅವರ ಮನೆಯಲ್ಲಿ ಏನೂ ನಡೆದಿಲ್ಲ.

    ನಾವೆಲ್ಲ ಅವನು ಗ್ರೌಂಡ್‍ಗೆ ಬರುವುದನ್ನೇ ಕಾಯುತ್ತಿದ್ದೆವು. ಸ್ವಲ್ಪ ಸಮಯದ ಬಳಿಕ ಬಂದ ಲೋಕೇಶ್‍ಗೆ ಮನೆಯಲ್ಲಿ ಏನು ನಡೆದಿದೆ ಎಂಬ ವಿಚಾರವನ್ನೆಲ್ಲಾ ವಿವರಿಸಿದೆವು. ಆಗ ಅವನಿಗೆ ನಡೆದ ವಿಚಾರ ತಿಳಿಯಿತು. ಆದರೆ ಒಂದು ವಾರದ ಬಳಿಕ ಈ ಕೋಪ ತೀರಿಸಿಕೊಳ್ಳಲು ಅವರ ತಂದೆ, ಯಾವುದೋ ಬೇರೆ ವಿಚಾರಕ್ಕೆ ಮೊಟ್ಟೆಕಡ್ಡಿ ಪೊರಕೆ ಕಿತ್ತು ಹೋಗುವಂತೆ ಅವರ ಅಮ್ಮನ ಕೈನಲ್ಲಿ ಲೋಕೇಶ್‍ಗೆ ಹೊಡೆಸಿದ್ದಾರೆ. ಅದು ಹೇಗೆಂದರೆ ಅವನನ್ನು ಕೇಳು ಒಂದು ವಾರದ ಹಿಂದೆ ಏನು ಮಾಡಿದ್ದಾನೆ ಎಂದು ಹೇಳುತ್ತಾ ಹೊಡೆಸಿದ್ದಾರೆ. ಈ ವಿಚಾರವನ್ನು ಅವನು ಅವರಮ್ಮನಿಗೂ ಹೇಳಲು ಆಗುತ್ತಿಲ್ಲ. ಅವರಪ್ಪಗೆ ಕೂಡ ಅವರಮ್ಮನ ಹತ್ತಿರ ಹೇಳಲು ಆಗುತ್ತಿಲ್ಲ. ಮನೆಯಲ್ಲಿ ಹೊಡೆಯುತ್ತಿರುವ ವಿಚಾರವನ್ನು ಲೋಕೆಶ್‍ಗೆ ನಮ್ಮ ಬಳಿ ಕೂಡ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಹೇಳುತ್ತಾ ಎಲ್ಲರೂ ನಕ್ಕಿದ್ವಿ.

    ಹೀಗೆ ರಾಜೀವ್ ಹೇಳಿದ ಕಾಮಿಡಿ ಸ್ಟೋರಿ ಕೇಳಿ ಮನೆಯ ಸದಸ್ಯರು ಎದ್ದುಬಿದ್ದು ನಗುತ್ತಾ ಸಖತ್ ಎಂಜಾಯ್ ಮಾಡಿದ್ರು.