Tag: Altaf Khan

  • ಕೈ ನಾಯಕ ಅಲ್ತಾಫ್‌ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ

    ಕೈ ನಾಯಕ ಅಲ್ತಾಫ್‌ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ

    ಬೆಂಗಳೂರು: ಕಾಂಗ್ರೆಸ್ ಮುಖಂಡ ಅಲ್ತಾಫ್‌ ಖಾನ್(Congress Leader Altaf Khan) ಮೇಲೆ ದಾಳಿ ನಡೆಸಲು ಬಂದಿದ್ದಾರೆ ಎನ್ನಲಾದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಶನಿವಾರ ರಾತ್ರಿ 10 ಗಂಟೆಯ ವೇಳೆ ಗೋರಿಪಾಳ್ಯದಲ್ಲಿರುವ ಅಲ್ತಾಫ್‌ ಖಾನ್ ಮನೆ ಬಳಿ ಒಂದು ರಿಕ್ಷಾ ಬಂದಿತ್ತು. ರಿಕ್ಷಾದಲ್ಲಿದ್ದ ವ್ಯಕ್ತಿಗಳು ಬಹಳ ಹೊತ್ತು ಅಲ್ತಾಫ್‌ಗೆ ಕಾದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಅಲ್ತಾಫ್‌ ಅವರು ಮನೆಯಿಂದ ಹೊರ ಬಾರದ ಕಾರಣ ಬಚಾವ್ ಆದ ಎಂದು ಗುಂಪು ಮಾತನಾಡಿಕೊಂಡು ಹೋಗುತ್ತಿತ್ತು. ರಿಕ್ಷಾ ನಿಂತ ಕೂಡಲೇ ಅನುಮಾನದಿಂದ ನೋಡುತ್ತಿದ್ದ ಸ್ಥಳೀಯರು ಯುವಕರ ಮಾತುಗಳನ್ನು ಕೇಳಿ ಹಿಂಬಾಲಿಸಿದ್ದಾರೆ.

    ತಮ್ಮನ್ನು ಹಿಂಬಾಲಿಸುವುದನ್ನು ನೋಡಿ ಗುಂಪಿನಲ್ಲಿದ್ದ ಓರ್ವ ಪರಾರಿಯಾಗಿದ್ದು, ಮೂವರನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ರಿಕ್ಷಾವನ್ನು ಜಾಲಾಡಿದಾಗ ಮಾರಕಾಸ್ತ್ರ ಪತ್ತೆಯಾಗಿದೆ. ಜೆ.ಜೆ.ನಗರ ಪೊಲೀಸರು(JJ Nagar Police) ಈಗ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಚ್‍ಡಿಡಿ ಎದುರೇ ಜೆಡಿಎಸ್‍ನ ಅಲ್ಪಸಂಖ್ಯಾತ ಮುಖಂಡರ ನಡುವೆ ಜಟಾಪಟಿ

    ಎಚ್‍ಡಿಡಿ ಎದುರೇ ಜೆಡಿಎಸ್‍ನ ಅಲ್ಪಸಂಖ್ಯಾತ ಮುಖಂಡರ ನಡುವೆ ಜಟಾಪಟಿ

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎದುರೇ ಅಲ್ಪಸಂಖ್ಯಾತ ಮುಖಂಡರು ಜಗಳಾಡಿಕೊಂಡ ಪ್ರಸಂಗ ಇಂದು ಜೆಪಿ ಭವನದಲ್ಲಿ ನಡೆದಿದೆ.

    ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಚಾಮರಾಜಪೇಟೆ ಪರಾಜಿತ ಅಭ್ಯರ್ಥಿ ಅಲ್ತಾಫ್ ಖಾನ್ ಅವರು, ಲೋಕಸಭೆ ಚುನಾವಣೆಯಲ್ಲಿ ನಮ್ಮವರೇ ಕಾಂಗ್ರೆಸ್‍ಗೆ ಮತ ಹಾಕಿಲ್ಲ. ಹೀಗಾಗಿ ಮೈತ್ರಿ ಅಭ್ಯರ್ಥಿ ಸೋತರು. ಚಾಮರಾಜಪೇಟೆ ಕ್ಷೇತ್ರದಲ್ಲಿ ನಮ್ಮವರೇ ಕಾಂಗ್ರೆಸ್ ಪರವಾಗಿ ನಿಂತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

    ಅಲ್ತಾಫ್ ಖಾನ್ ಅವರ ಮಾತಿಗೆ ತಿರುಗಿಬಿದ್ದ ಕಾರ್ಯಕರ್ತರು, ನೇರವಾಗಿ ಕಿಡಿಕಾರಿದರು. ಅಷ್ಟೇ ಅಲ್ಲದೆ ಭಾಷಣ ನಿಲ್ಲಿಸುವಂತೆ ಕೂಗಿದರು. ತಕ್ಷಣವೇ ವೇದಿಕೆ ಮೇಲಿದ್ದ ನಾಯಕರು ಅಲ್ತಾಫ್ ಅವರಿಗೆ ಕುಳಿತುಕೊಳ್ಳಲು ಸೂಚನೆ ನೀಡಿದರು. ಇತ್ತ ಎಚ್.ಡಿ.ದೇವೇಗೌಡ ಅವರು ಎಲ್ಲವನ್ನೂ ಮೌನವಾಗಿ ಕುಳಿತು ನೋಡಿದರು.

    ಈ ಘಟನೆಯಿಂದಾಗಿ ಮುಜುಗುರಕ್ಕೆ ಒಳಗಾದ ಜೆಡಿಎಸ್ ಮುಖಂಡರು ತಕ್ಷಣವೇ ಮಾಧ್ಯಮದವರನ್ನು ಹೊರಗೆ ಕಳುಹಿಸಿದರು. ವೇದಿಕೆಯ ಮೇಲೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಮಾಜಿ ಶಾಸಕ ಮಧು ಬಂಗಾರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಸೇರಿಂದತೆ ಪ್ರಮುಖರು ಉಪಸ್ಥಿತರಿದ್ದರು.

    ಸಭೆ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 37 ಸ್ಥಾನ ಮಾತ್ರ ಬಂತು. ಆದರೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಿಎಂಗೆ ಅವಕಾಶ ನೀಡಿದರು. ಕಾಂಗ್ರೆಸ್ ಹಿರಿಯ ನಾಯಕರು ಸಮ್ಮುಖದಲ್ಲಿ ಈ ತೀರ್ಮಾನ ಆಯಿತು. ಹೀಗಾಗಿ ಸರ್ಕಾರ ರಚನೆಗೊಂಡು ಒಂದು ವರ್ಷ ಪೂರೈಸಿದೆ ಎಂದು ಹೇಳಿದರು.

    ಇಬ್ಬರು ರಾಜೀನಾಮೆ ಕೊಟ್ಟರು. ಮತ್ತೆ ಐದಾರು ಶಾಸಕರು ಹೋಗುತ್ತಾರೆ ಅಂತ ಮಾತನಾಡುತ್ತಿದ್ದಾರೆ. ಸಿಎಂ ಅಮೆರಿಕದಲ್ಲಿ ಇದ್ದುಕೊಂಡು ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಅವರು ಕೂಡ ಎಲ್ಲವನ್ನೂ ಸರಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.

    ಎರಡು-ಮೂರು ದಿನಗಳಲ್ಲಿ ಅಲ್ಪಸಂಖ್ಯಾತ ಘಟಕಗಳ ನೇಮಕ ಮಾಡುತ್ತೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನಸ್ಸಿಗೆ ನೋವಾಗಿರಬಹುದು. ಅವರಲ್ಲಿ ಫೈಟಿಂಗ್ ನೇಚರ್ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ಪ್ರಚಾರ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಹಲವಾರು ವಿಷಯಗಳನ್ನು ಎತ್ತಿಕೊಂಡು ಹೋರಾಟ ಮಾಡಿದರು. ಆದರೆ ಜನ ಮೋದಿ ಅವರಿಗೆ ಆಶೀರ್ವಾದ ಮಾಡಿದರು ಎಂದರು.

    ಪಿರಿಯಾಪಟ್ಟಣ ಶಾಸಕರಿಗೆ ಹಣದ ಆಮಿಷ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಅವರು, ಇಂತಹ ವಿಚಾರದ ಬಗ್ಗೆ ನನಗೆ ಏನು ಕೇಳಬೇಡಿ. ಇಂತಹದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.

  • ಸಚಿವ ಜಮೀರ್ ಅಹ್ಮದ್ ಒಬ್ಬ ಕಂತ್ರಿ, ರಾಬರ್: ಅಲ್ತಾಫ್ ಖಾನ್

    ಸಚಿವ ಜಮೀರ್ ಅಹ್ಮದ್ ಒಬ್ಬ ಕಂತ್ರಿ, ರಾಬರ್: ಅಲ್ತಾಫ್ ಖಾನ್

    ಬೆಂಗಳೂರು: ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಒಬ್ಬ ಕಂತ್ರಿ. ನನ್ನ ಬೆಳವಣಿಗೆ ಸಹಿಸದೇ ಪರೋಕ್ಷವಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಕಿಡಿಕಾರಿದ್ದಾರೆ.

    ಪೊಲೀಸ್ ಬಂಧನದಿಂದ ಹೊರಬಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಬಂಧನದ ಹಿಂದೆ ಸಚಿವ ಜಮೀರ್ ಅಹ್ಮದ್ ಕೈವಾಡವಿದೆ. ನನ್ನನ್ನು ಜೈಲಿಗೆ ಕಳಿಸಲು ಜಮೀರ್ ಅಹ್ಮದ್ ಪ್ರಯತ್ನ ಮಾಡುತ್ತಿದ್ದಾರೆ. ಸಚಿವರ ಬಣ್ಣವನ್ನು ಕೆಲವೇ ದಿನಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದು ಹರಿಹಾಯ್ದರು.

    ಸಚಿವ ಜಮೀರ್ ಅಹ್ಮದ್ ಅವರು ವಕೀಲ ಇಬ್ರಾಹಿಂ ಮೂಲಕ ನನ್ನ ಮೇಲೆ ದೂರು ಕೊಡಿಸಿದ್ದಾರೆ. ವಕೀಲ ಇಬ್ರಾಹಿಂ ಕಳೆದ ಐದು ವರ್ಷಗಳಿಂದ ನನ್ನ ಜೊತೆ ಇದ್ದ ಎಂದ ಅವರು, ಜಮೀರ್ ಅಹ್ಮದ್ ಒಬ್ಬ ರಾಬರ್, ರಾಮನಗರದಲ್ಲಿ ರಾಬರಿ ಮಾಡಿದ್ದ ಎಂದು ಆರೋಪಿಸಿದರು.

    ಏನಿದು ಪ್ರಕರಣ:
    ಅಲ್ತಾಫ್ ಖಾನ್ ಹೋಟೆಲ್ ಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರಿಂದ ತಡರಾತ್ರಿ ಠಾಣೆಗೆ ಕರೆಸಿ ಅಲ್ತಾಫ್ ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ್ದು, ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಬೇಲ್ ಪಡೆದು ಅಲ್ತಾಫ್ ಖಾನ್ ರಿಲೀಸ್ ಆಗಿದ್ದರು.

    ಅಲ್ತಾಫ್ ಖಾನ್ ಬಂಧನದ ಹಿಂದೆ ಮೈತ್ರಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಆರೋಪಗಳು ಕೇಳಿ ಬಂದಿತ್ತು. ಈಗ ಅಲ್ತಾಫ್ ಖಾನ್ ಅವರೇ ಆ ಪ್ರಭಾವಿ ಸಚಿವ ಜಮೀರ್ ಅಹ್ಮದ್ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾತ್ರೋರಾತ್ರಿ ಜೆಡಿಎಸ್ ಮುಖಂಡನ ಬಂಧನ, ಬಿಡುಗಡೆ

    ರಾತ್ರೋರಾತ್ರಿ ಜೆಡಿಎಸ್ ಮುಖಂಡನ ಬಂಧನ, ಬಿಡುಗಡೆ

    ಬೆಂಗಳೂರು: ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ರಾತ್ರೋರಾತ್ರಿ ಬಂಧನವಾಗಿ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ.

    ಹೋಟೆಲ್‍ಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಉಪ್ಪಾರಪೇಟೆ ಪೊಲೀಸರು ತಡರಾತ್ರಿ ಅಲ್ತಾಫ್ ಖಾನ್ ನನ್ನು ಬಂಧಿಸಿದ್ದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಅಲ್ತಾಫ್ ಖಾನ್ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ ಎಂದು ಅಲ್ತಾಫ್ ಖಾನ್ ಬೆಂಬಲಿಗರಿಂದ ಮಾಹಿತಿ ತಿಳಿದು ಬಂದಿದೆ.

    ಅಲ್ತಾಫ್ ಖಾನ್ ಹೋಟೆಲ್ ಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರಿಂದ ತಡರಾತ್ರಿ ಠಾಣೆಗೆ ಕರೆಸಿ ಅಲ್ತಾಫ್ ವಿಚಾರಣೆ ನಡೆಸಿದ್ದಾರೆ. ಬಳಿಕ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ್ದು, ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಬೇಲ್ ಪಡೆದು ಅಲ್ತಾಫ್ ಖಾನ್ ರಿಲೀಸ್ ಆಗಿದ್ದಾರೆ.

    ಅಲ್ತಾಫ್ ಖಾನ್ ಬಂಧನದ ಹಿಂದೆ ಮೈತ್ರಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಇಂದು ಸುದ್ದಿಗೋಷ್ಠಿ ನಡೆಸಿ ಪ್ರಭಾವಿ ಸಚಿವರ ಕೈವಾಡದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಅಲ್ತಾಪ್ ಖಾನ್ ಬೆಂಬಲಿಗರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv