Tag: Alpesh Thakur

  • ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ- ಅದಕ್ಕಾಗೇ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಖರ್ಚು!

    ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ- ಅದಕ್ಕಾಗೇ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಖರ್ಚು!

    ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಸಮಾವೇಶವೊಂದರಲ್ಲಿ, ನನ್ನ ಹಾಗೆ ಕಪ್ಪಗಿದ್ದ ಪ್ರಧಾನಿ ನರೇಂದ್ರ ಮೋದಿ ತೈವಾನ್ ನಿಂದ ಆಮದಾಗುವ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಅಲ್ಪೇಶ್ ಠಾಕೂರ್ ವ್ಯಂಗ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತೈವಾನ್ ದೇಶದ ಒಂದು ಅಣಬೆ 80 ಸಾವಿರ ರೂ. ಬೆಲೆಯನ್ನು ಹೊಂದಿದೆ. ಪ್ರಧಾನಿ ಮೋದಿ ಒಂದು ದಿನಕ್ಕೆ 5 ಅಣಬೆಗಳನ್ನು ತಿನ್ನುತ್ತಾರೆ. ಮೋದಿ ಅವರು ಸೇವಿಸುವಂತಹ ಆಹಾರ ನಮ್ಮಿಂದ ಸೇವನೆ ಮಾಡಲಾಗುವುದಿಲ್ಲ. ಕಾರಣ ನಾವು ಬಡವರು ನಮ್ಮಲ್ಲಿ ಅಷ್ಟು ಹಣವಿಲ್ಲ ಅಂತಾ ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದ್ದಾರೆ.

    ಪಿಎಂ ಅಣಬೆಗಾಗಿ ಒಂದು ತಿಂಗಳಿಗೆ 1 ಕೋಟಿ 20 ಲಕ್ಷ ರೂ. ಹಣವನ್ನು ಖರ್ಚು ಮಾಡುತ್ತಾರೆ. ಅವರು ನಮ್ಮ ಹಾಗೆ ರೋಟಿ, ಅನ್ನ ತಿನ್ನುವುದಿಲ್ಲ. ಕೇವಲ ನಾನು ಸಾಮನ್ಯ ವ್ಯಕ್ತಿಯೆಂದು ನಾಟಕ ಮಾಡುತ್ತಾರೆ. ಹಾಗಾದ್ರೆ ಮೋದಿ ಹಿಂಬಾಲಕರು ಎಷ್ಟು ಕೋಟಿ ಮೌಲ್ಯದ ಅಣಬೆಗಳನ್ನು ತಿನ್ನುತ್ತಾರೆ ಎಂದು ಮೂದಲಿಸಿದ್ದಾರೆ.

    ಗುಜರಾತ್ ಸಿಎಂ ಆದ ನಂತರ ಮೋದಿ ತೈವಾನ್ ಅಣಬೆಗಳನ್ನು ತಿನ್ನಲು ಆರಂಭಿಸಿದ್ದಾರೆ ಎಂದು ಅಲ್ಪೇಶ್ ಹೇಳಿದ್ದಾರೆ.