Tag: Aloo Chaat

  • ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಲ್ಲೂಗೆಡ್ಡೆಯಲ್ಲಿ ಹೆಚ್ಚು ಚಾಟ್, ಚಿಪ್ಸ್‌ಗಳು ಬರುತ್ತಿದ್ದು, ಇದನ್ನು ಆಹಾರಪ್ರಿಯರು ಸವಿದು ಖುಷಿಪಡುತ್ತಿದ್ದಾರೆ. ಅದರಂತೆ ಇಂದು ವಿಶೇಷವಾಗಿ ಮತ್ತು ಸರಳವಾಗಿ ‘ಆಲೂ ಚಾಟ್’ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ. ಈ ರೆಸಿಪಿ ಸರಳವಾಗಿದ್ದು, ರುಚಿಕರವಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    * ಬೇಯಿಸಿದ ಆಲೂಗಡ್ಡೆ- 2(ಸಿಪ್ಪೆ ಸುಲಿಯಬೇಕು)
    * ರೆಡ್ ಚಿಲ್ಲಿ ಪೌಡರ್ – 1/2 ಟೀ ಸ್ಪೂನ್
    * ಜೀರಿಗೆ-ಕೊತ್ತಂಬರಿ ಪುಡಿ – 1/2 ಟೀಸ್ಪೂನ್
    * ಚಾಟ್ ಮಸಾಲಾ ಪೌಡರ್ – 1/2 ಟೀಸ್ಪೂನ್
    * ನಿಂಬೆ ರಸ – 1 ಟೀಸ್ಪೂನ್


    * ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 1/4 ಕಪ್
    * ಹಸಿರು ಕೊತ್ತಂಬರಿ ಚಟ್ನಿ – 1 ಟೀಸ್ಪೂನ್
    * ಸಿಹಿ ಹುಣಸೆಹಣ್ಣಿನ ಚಟ್ನಿ – 1 ಟೀಸ್ಪೂನ್
    * ಮೊಸರು – 4 ಟೇಬಲ್ಸ್ಪೂನ್
    * ಸೆವ್ – 2 ಟೇಬಲ್ಸ್ಪೂನ್
    * ದಾಳಿಂಬೆ – 1 ಕಪ್
    * ಕತ್ತರಿಸಿದ ಕೊತ್ತಂಬರಿ ಸೋಪ್ಪು – 2 ಟೀಸ್ಪೂನ್
    * ರುಚಿಗೆ ಉಪ್ಪು ಮತ್ತು 2 ಟೇಬಲ್ಸ್ಪೂನ್ ಎಣ್ಣೆ ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’

    ಮಾಡುವ ವಿಧಾನ:
    * ಫ್ರೈಯಿಂಗ್ ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬೇಯಿಸಿದ ಆಲೂಗಡ್ಡೆ ದಪ್ಪ-ದಪ್ಪದಾಗಿ ಕತ್ತರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಡೀಪ್ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಬಂದ ಮೇಲೆ 4-5 ನಿಮಿಷಗಳು ತಣ್ಣಗಾಗಲು ಬಿಡಬೇಕು.

    * ಆಲೂಗಡ್ಡೆಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಜೀರಿಗೆ, ಕೊತ್ತಂಬರಿ ಪುಡಿ ಮತ್ತು 1/2 ಟೀಸ್ಪೂನ್ ಚಾಟ್ ಮಸಾಲಾ ಪುಡಿಯನ್ನು ಸೇರಿಸಿ. 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗಡ್ಡೆ ತುಂಡುಗಳನ್ನು ಮಸಾಲಾದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.

    * 1 ಟೀಸ್ಪೂನ್ ಹಸಿರು ಕೊತ್ತಂಬರಿ ಚಟ್ನಿ, 1 ಟೀಸ್ಪೂನ್ ಸಿಹಿ ಹುಣಸೆಹಣ್ಣಿನ ಚಟ್ನಿ ಮತ್ತು 1/4 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಎಲ್ಲವನ್ನು ಸರಿಯಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ಈ ಮಿಶ್ರಣವನ್ನು ಒಂದು ಬೌಲ್ ಹಾಕಿಕೊಳ್ಳಿ. ಮೊಸರು ಇಷ್ಟ ಇದ್ದವರು ಆಲೂ ಚಾಟ್ ಮೇಲೆ ಹಾಕಿಕೊಂಡು ಅದರ ಮೇಲೆ ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಹಣ್ಣನ್ನು ಹಾಕಿ ಅಲಂಕರಿಸಿ. ಕೊನೆಗೆ ಆಲೂ ಚಾಟ್ ಬಡಿಸಿ ಆನಂದಿಸಿ.