Tag: alone film

  • ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಬಿಪಾಶಾ ಬಸು

    ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಬಿಪಾಶಾ ಬಸು

    ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu) ಸದ್ಯ ತಾಯ್ತನದಲ್ಲಿ ಖುಷಿಯಲ್ಲಿದ್ದಾರೆ. ಮುದ್ದು ಮಗಳು ದೇವಿ (Devi) ಮುಖವನ್ನ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಮಗಳ ಚೆಂದದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ರೇಸ್ 2, ಅಲೋನ್, ಗೋಲ್ ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಬಿಪಾಶಾ ಬಸು ಮಿಂಚಿದ್ದಾರೆ.

    2014ರಲ್ಲಿ Alone ಸಿನಿಮಾದಲ್ಲಿ ಕರಣ್ ಸಿಂಗ್‌ಗೆ ಬಿಪಾಶಾ ಬಸು ನಾಯಕಿಯಾಗಿದ್ದರು. ಸಿನಿಮಾ ಸೆಟ್‌ನಲ್ಲಿ ಭೇಟಿಯಾದ ಈ ಜೋಡಿ ರಿಯಲ್‌ ಲೈಫ್‌ನಲ್ಲಿಯೂ ಜೋಡಿಯಾದರು. 2016ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಬಿಪಾಶಾ-ಕರಣ್ ಮದುವೆಯಾದರು.

     

    View this post on Instagram

     

    A post shared by Bipasha Basu (@bipashabasu)

    ಕಳೆದ ವರ್ಷ ನವೆಂಬರ್ 12ರಂದು ಮುದ್ದು ಮಗಳ ಆಗಮನವಾಗಿತ್ತು. ಮಗುವಿಗೆ ದೇವಿ ಎಂದು ಹೆಸರನ್ನೀಟ್ಟಿದ್ದಾರೆ. ಇದೀಗ 5 ತಿಂಗಳು ತುಂಬಿದ ಶುಭ ಸಂದರ್ಭದಲ್ಲಿ, ಫಸ್ಟ್ ಟೈಮ್ ಮಗಳ ಮುಖವನ್ನ ನಟಿ ರಿವೀಲ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿರುವ ಮಗುವಿಗೆ ಹೇರ್ ಬೆಂಡ್ ಹಾಕಿರುವ ಫೋಟೋವನ್ನ ಬಿಪಾಶಾ ದಂಪತಿ ಶೇರ್ ಮಾಡಿದ್ದಾರೆ. ಬಿಪಾಶಾ ಮಗಳು ದೇವಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು ದಂಪತಿ

    ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾದ ಒಂದಾಗಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷಿಯಲ್ಲಿ ಬಿಪಾಶಾ ಬಸು ದಂಪತಿ ಇದ್ದಾರೆ.

    ಬಿಟೌನ್‌ನ ಸಾಕಷ್ಟು ಸಿನಿಮಾಗಳಲ್ಲಿ ಸಂಚಲನ ಮೂಡಿಸಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್, ಮೊದಲು ಭೇಟಿಯಾಗಿದ್ದು, ಅಲೋನ್ ಸಿನಿಮಾದ ಚಿತ್ರೀಕರಣದಲ್ಲಿ. ಈ ಚಿತ್ರದಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದರು. ಈ ಗಳೆತನವೇ ಪ್ರೀತಿಯಾಗಿ, 2016ರಲ್ಲಿ ಬಿಪಾಶಾ ಮತ್ತು ಕರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

     

    View this post on Instagram

     

    A post shared by bipashabasusinghgrover (@bipashabasu)

    ಸಾಕಷ್ಟು ಸಿನಿಮಾಗಳಲ್ಲಿ ಮೋಡಿ ಮಾಡಿರುವ ಬಿಪಾಶಾ ಮತ್ತು ಕರಣ್ ಸಿಂಗ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೊಸ ಅತಿಥಿ ಆಗಮನದ ಖುಷಿಯಲ್ಲಿರುವ ಈ ಜೋಡಿ ಸದ್ಯದಲ್ಲಿಯೇ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]