Tag: Aloevera

  • ಅಲೋವೇರಾ ಜ್ಯೂಸ್‍ನಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ

    ಅಲೋವೇರಾ ಜ್ಯೂಸ್‍ನಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ

    ಅಲೋವೆರಾವನ್ನು ಬಳಸುವುದರಿಂದ ಮತ್ತು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಉತ್ತಮ ಅಂಶಗಳು ದೊರೆಯುತ್ತವೆ. ಆಹಾರ ತಜ್ಞರು, ಸೌಂದರ್ಯ ತಜ್ಞರು ಅಲೋವೆರಾ ಕುರಿತಾಗಿ ಹೆಚ್ಚಾಗಿ ಹೇಳುತ್ತಾರೆ. ಅಲೋವೆರಾ ಅಂಶವುಳ್ಳ ಎಷ್ಟೊಂದು ಪ್ರಾಡೆಕ್ಟ್‍ಗಳು ನಮಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಾವೇ ಮನೆಯಲ್ಲಿ ಅಲೋವೆರಾ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

    * ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಲೋವೆರಾ ಜ್ಯೂಸ್‍ನಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಲು ನೆರವಾಗುತ್ತದೆ.

    * ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಇತರ ಕೆಲವೊಂದು ಪೌಷ್ಠಿಕಾಂಶಗಳನ್ನು ಅಲೋವೆರಾ ಒಳಗೊಂಡಿದೆ. ಈ ಎಲ್ಲಾ ಅಂಶಗಳು ದೇಹವನ್ನು ಶುದ್ಧವಾಗಿಡಲು ಸಹಾಯಕಾರಿಯಾಗಿದೆ.

    * ಅಲೋವೆರಾ ಬಳಕೆಯನ್ನು ಮಾಡುವುದರಿಂದ ಚರ್ಮದ ಜೀವಕೋಶಗಳು ಮತ್ತು ಕೂದಲಿನ ಆರೋಗ್ಯವು ಉತ್ತಮವಾಗಿರುತ್ತದೆ.

    * ಅಲೋವೆರಾವನ್ನು ಮನೆಯಲ್ಲಿ ಜ್ಯೂಸ್ ಮಾಡಿ ಸೇವಿಸುವುದರಿಂದ ಹಲ್ಲನ್ನು ಶುದ್ಧವಾಗಿಟ್ಟುಕೊಳ್ಳಬಹುದಾಗಿದೆ. ಬಾಯಿಯಲ್ಲಿರುವ ದುರ್ವಾಸನೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ.

    * ಕ್ಯಾನ್ಸರ್, ಕೊಲೆಸ್ಟ್ರಾಲ್, ಮಧುಮೇಹ, ಉರಿಯೂತ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಆಗುವುದನ್ನು ಹೊಗಲಾಡಿಸಲು ಮನೆ ಮದ್ದಾಗಿ ಅಲೋವೆರಾ ಜ್ಯೂಸ್ ಮಾಡಿ ಕುಡಿಯಬಹುದಾಗಿದೆ.

    * ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುತ್ತಾ ಬಂದಿದ್ದರೆ ಅಧಿಕವಾದ ರಕ್ತದೊತ್ತಡ ಹಾಗೂ ರಕ್ತವನ್ನು ಶುದ್ಧವಾಗಿಟ್ಟುಕೊಳ್ಳ ಬಹುದಾಗಿದೆ.

    ಅಲೋವೆರಾ ಜ್ಯೂಸ್ ತಯಾರಿಸುವ ವಿಧಾನ: ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತಾಜಾ ಅಲೋವೆರಾ ಜೆಲ್ ಸೇರಿಸಿ. ಬಾಣಲೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿ ಮತ್ತು ಜೆಲ್ ನೀರಿನೊಂದಿಗೆ ಬೆರೆಯುವವರೆಗೆ ನಿರಂತರವಾಗಿ ತಿರುವುತ್ತಿರಿ. ನೀವು ಈ ಅಲೋವೆರಾ ನೀರಿನ ಮಿಶ್ರಣಕ್ಕೆ ಬೇಕಾದರೆ ಸ್ವಲ್ಪ ನಿಂಬೆ ಸೇರಿಸಿದರೆ ಅಲೋವೆರಾ ಜ್ಯೂಸ್ ಸಿದ್ಧವಾಗುತ್ತದೆ.