Tag: Aloe vera

  • PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

    PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

    ತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರ ಜೀವನ ಶೈಲಿಯಿಂದಾಗಿ ಪಿಸಿಓಡಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮನೆ, ಕೆಲಸದ ಒತ್ತಡದಿಂದಾಗಿ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOD) ಬರುತ್ತಿದೆ. ಶೇಕಡಾ 25 ರಿಂದ 30ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಪುರುಷರಿಗಿರುವಂತೆ ರೋಮಗಳ ಬೆಳವಣಿಗೆ ಮೊದಲಾದ ಸಮಸ್ಯೆಗಳನ್ನು ಪಿಸಿಓಡಿ ಸಮಸ್ಯೆಗೊಳಗಾದವರಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ ಬಂಜೆತನಕ್ಕೂ ಕಾರಣವಾಗಬಲ್ಲ ಈ ಸಮಸ್ಯೆಯಿಂದ ಚಿಂತೆ ಮತ್ತು ಖಿನ್ನತೆಯಂತಹ ಬೇರೆ ಬೇರೆ ತೊಂದರೆಗಳು ಕಾಣಿಸಿಕೊಳ್ಳಬಹುದು.

    ಈ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಂದು ಮಹಿಳೆಯು (Woman) ಸತತವಾಗಿ ವ್ಯಾಯಾಮ ಮಾಡುವುದು ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ನಡೆಸಬೇಕು. ಈ ಪಿಸಿಓಡಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಪ್ರೋಟೀನ್ ಹಾಗೂ ಫೈಬರ್ ಪ್ರಮಾಣ ಹೊಂದಿರುವ ಜ್ಯೂಸ್‍ಗಳು ಇಲ್ಲಿವೆ.

    ಮೆಂತ್ಯ, ದಾಲ್ಚಿನ್ನಿ ಮತ್ತು ಕಪ್ಪು ಒಣದ್ರಾಕ್ಷಿ ಜ್ಯೂಸ್: ಮೆಂತ್ಯ ಸಾಮಾನ್ಯವಾಗಿ ಋತುಚಕ್ರದ ಸಮಯದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರಿಂದಾಗಿ ಋತುಚಕ್ರದ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ದಾಲ್ಚಿನಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಕಪ್ಪು ಒಣ ದ್ರಾಕ್ಷಿಯು ಪಿಸಿಓಡಿ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಹಾಗೂ ರಕ್ತ ಶುದ್ಧೀಕರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಒಣದ್ರಾಕ್ಷಿ, ದಾಲ್ಚಿನ್ನಿ ಹಾಗೂ ಮೆಂತ್ಯ ಬೀಜವನ್ನು ಮಿಶ್ರಣ ಮಾಡಿ 8 ದಿನಗಳವರೆಗೆ ಕುಡಿದರೆ ಪಿಸಿಒಡಿ ಕಡಿಮೆ ಮಾಡಿಕೊಳ್ಳಬಹುದು.

    ಅಲೋವರಾ (ಲೋಳೆರಸ): ಅಲೋವರಾ (Aloe Vera) ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಅದರಲ್ಲೂ ಹೆಚ್ಚಾಗಿ ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರು ಬೆಳಗ್ಗೆ ಸಮಯದಲ್ಲಿ ಅಲೋವರವನ್ನು ಉಪ್ಪು, ಜೇನುತುಪ್ಪ ಹಾಗೂ ನೀರಿನೊಂದಿಗೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ಕುಡಿಯಿರಿ.

    ಆಪಲ್ ಸೈಡರ್ ವಿನೆಗರ್: ಈ ಪೌಷ್ಟಿಕ ಜ್ಯೂಸ್ ದೇಹದ ಸಮತಲೋನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಪಿಸಿಓಡಿ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೀಟ್ರೂಟ್ ಕ್ಯಾರೆಟ್ ಜ್ಯೂಸ್: ಬೀಟ್ರೂಟ್ ಹಾಗೂ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆಯಿಂದ ಚೇತರಿಸಿಕೊಳ್ಳಬಹುದು. ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುವ ಮೂಲಕ ರಕ್ತವನ್ನು ಶುದ್ಧಿಗೊಳಿಸುತ್ತದೆ.

    ಪುದಿನಾ ಟೀ: ಪುದಿನಾ ಟೀ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಪಿಸಿಓಡಿ ಹೊಂದಿರುವ ಮಹಿಳೆಯರು ಹೆಚ್ಚು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿದೆ. ಇದರಿಂದಾಗಿ ಕೂದಲು ಉದುರುವಿಕೆಯು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಪುದಿನಾ ಟೀ ಪಿಸಿಓಡಿ ಕಡಿಮೆ ಮಾಡುವ ಜೊತೆಗೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

  • ಡಾರ್ಕ್ ಸರ್ಕಲ್‍ಗೆ ಶಾಶ್ವತ ಪರಿಹಾರ ಮನೆಮದ್ದು

    ಡಾರ್ಕ್ ಸರ್ಕಲ್‍ಗೆ ಶಾಶ್ವತ ಪರಿಹಾರ ಮನೆಮದ್ದು

    ಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಕ್ರೀಮ್‍ಗಳನ್ನು ಬಳಕೆ ಮಾಡುತ್ತಲಿರುತ್ತಾರೆ. ಆದರೆ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮಹಿಳೆಯರಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಹೆಚ್ಚಾಗುತ್ತವೆ. ಸುಕ್ಕುನ್ನು ಹೊಗಲಾಡಿಸಲು ಹೆಂಗಳೆಯರು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಮ್‍ಗಳ ಬಳಕೆಯನ್ನು ಮಾಡಿರುತ್ತಾರೆ. ಆದರೆ ನೀವು ಒಮ್ಮೆ ಈ ಮದ್ದುಗಳನ್ನು ಬಳಸಿ ನೋಡಿ.

    ಆಯಾಸವಾದರೆ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗುತ್ತಿಲ್ಲ ಎಂದರ್ಥ. ನಿದ್ರೆಯ ಕೊರತೆ ನಿಮ್ಮ ಚರ್ಮವನ್ನು ಮಂದವಾಗಿ, ಮಸುಕಾಗಿ ಪರಿವರ್ತಿಸುತ್ತದೆ. ಅಷ್ಟೇ ಅಲ್ಲ, ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಮೂಡಲಾರಂಭಿಸುತ್ತದೆ.

    * ದೇಹದಲ್ಲಿ ನೀರಿನ ಕೊರತೆಯುಂಟಾದರೆ ಕಣ್ಣುಗಳ ಕೆಳಗೆ ಸುಕ್ಕಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು. ಜೊತೆಗೆ ಸೌತೆಕಾಯಿಯನ್ನೂ ಹೆಚ್ಚು ಸೇವಿಸಬೇಕು.

    * ಪ್ರತಿದಿನ ಬಾದಾಮಿ ಎಣ್ಣೆಯಿಂದ ಕಣ್ಣುಗಳ ಕೆಳಗೆ ಕೈಗಳಿಂದ ಲಘುವಾಗಿ ಮಸಾಜ್ ಮಾಡಿದರೆ ಸುಕ್ಕು ಸಮಸ್ಯೆ ನಿವಾರಣೆಯಾಗುತ್ತದೆ.

    * ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಅದನ್ನು ಚೆನ್ನಾಗಿ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಸುಕ್ಕು ಕಡಿಮೆಯಾಗುತ್ತಾ ಬರುತ್ತದೆ.

    * ಸೌತೆಕಾಯಿಯ ರಸವನ್ನು ಹತ್ತಿ ಸಹಾಯದಿಂದ ಸುಕ್ಕು ಇರುವ ಕಡೆ ಹಚ್ಚಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಣ್ಣಿನ ಕೆಳಗಿರುವ ಸುಕ್ಕು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.

    * ರಾತ್ರಿ ಮಲಗುವಾಗ ಅಲೋವೆರಾ ಅನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.

    * ಎರಡು ಟೀಸ್ಪೂನ್ ಮೊಸರಿಗೆ ಒಂದು ಟೀಚಮಚ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಈ ಪೇಸ್ಟ್ ಅನ್ನು ಡಾರ್ಕ್ ಸರ್ಕಲ್ ಆದ ಜಾಗಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಬೇಕು.