Tag: Allu Sirish

  • ಕ್ರಿಸ್‌ಮಸ್ ಗೆಟ್ ಟುಗೆದರ್ ಸಂಭ್ರಮದಲ್ಲಿ ಮೆಗಾ ಕಸಿನ್ಸ್

    ಕ್ರಿಸ್‌ಮಸ್ ಗೆಟ್ ಟುಗೆದರ್ ಸಂಭ್ರಮದಲ್ಲಿ ಮೆಗಾ ಕಸಿನ್ಸ್

    ಟಾಲಿವುಡ್‌ನ (Tollywood)  ಮೆಗಾ ಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಒಂದ್ ಕಡೆ ರಾಮ್ ಚರಣ್ (Ram Charan) ದಂಪತಿ ಪೋಷರಾಗುತ್ತಿರುವ ಗುಡ್ ನ್ಯೂಸ್ ನಡುವೆ ಕ್ರಿಸ್‌ಮಸ್ ಪಾರ್ಟಿಗೂ ಅದ್ದೂರಿ ಚಾಲನೆ ಸಿಕ್ಕಿದೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ (Allu arjun) ಕುಟಂಬ ಪಾರ್ಟಿಯಲ್ಲಿ ಫನ್ ಮಾಡಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಕುಟುಂಬಗಳಲ್ಲಿ ಮೆಗಾ ಸ್ಟಾರ್ ಕುಟುಂಬ ಕೂಡ ಒಂದಾಗಿದ್ದು, ಈಗ ಮೆಗಾ ಕಸಿನ್ಸ್ ಕ್ರಿಸ್‌ಮಸ್ ಸಂಭ್ರಮದಲ್ಲಿ ಎಂಜಾಯ್ ಮಾಡಿದ್ದಾರೆ. ಸೀಕ್ರೆಟ್ ಸಂತಾ ಜೊತೆ ಎಲ್ಲರೂ ಫನ್ ಮಾಡಿದ್ದಾರೆ. ಹೈದರಾಬಾದ್ ಮನೆಯಲ್ಲಿ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಎಲ್ಲಾ ಕಸಿನ್ಸ್ ಒಟ್ಟಾಗಿ ಗೆಟ್ ಟುಗೆದರ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್

    ಈ ಕುರಿತ ಫೋಟೋವನ್ನು ರಾಮ್ ಚರಣ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲು ಅರ್ಜುನ್ ದಂಪತಿ, ಸಾಯಿ ಧರಮ್ ತೇಜ್, ನಿಹಾರಿಕಾ, ವರುಣ್ ತೇಜ್, ಅಲ್ಲು ಸಿರೀಶ್, ರಾಮ್ ಚರಣ್ ಸಹೋದರಿ ಶ್ರೀಜಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪವರ್ ಸ್ಟಾರ್ ಫಿಟ್ನೆಸ್ ನೋಡಿ ಅಲ್ಲು ಸಿರಿಶ್ ಫಿದಾ

    ಪವರ್ ಸ್ಟಾರ್ ಫಿಟ್ನೆಸ್ ನೋಡಿ ಅಲ್ಲು ಸಿರಿಶ್ ಫಿದಾ

    ಬೆಂಗಳೂರು: ಚಂದನವದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಫಿಟ್ನೆಸ್ ವಿಡಿಯೋ ನೋಡಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಮ್ಮ ಅಲ್ಲು ಸಿರಿಶ್ ಅವರು ಫಿದಾ ಆಗಿದ್ದಾರೆ.

    ಸ್ಯಾಂಡಲ್ ವುಡ್‍ನಲ್ಲಿ ಡ್ಯಾನ್ಸ್ ಫೈಟ್ ಸೇರಿದಂತೆ ಎಲ್ಲ ಪಾತ್ರಗಳಿಗೂ ಹೊಂದಿಕೊಳ್ಳುವ ನಟ ಎಂದರೆ ಅದು ನಮ್ಮ ಪುನೀತ್ ರಾಜ್‍ಕುಮಾರ್ ಎಂದರೆ ತಪ್ಪಾಗುವುದಿಲ್ಲ. ಲಾಕ್‍ಡೌನ್ ನಿಂದ ಮನೆಯಲ್ಲೇ ಉಳಿದಿರುವ ಅಪ್ಪು ಸದ್ಯ ಕಸರತ್ತು ಮಾಡುವುದರಲ್ಲಿ ಬ್ಯುಸಿಯಾಗಿದ್ದಾಋಎ. ಜೊತೆಗೆ ಅವರ ಕಸರತ್ತಿನ ಕೆಲ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಆ ವಿಡಿಯೋಗಳು ವೈರಲ್ ಆಗುತ್ತಿವೆ.

    https://www.instagram.com/p/CA9bgKxp9JJ/

    ಅಪ್ಪು ಜಿಮ್‍ನಲ್ಲಿ ಕಷ್ಟಕರವಾದ ವ್ಯಾಯಾಮವನ್ನು ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು. ಇದನ್ನು ನೋಡಿದ ಅಲ್ಲು ಸಿರಿಶ್, ಅಪ್ಪು ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದಾರೆ. ನಿಮ್ಮನ್ನು ಫಾಲೋ ಮಾಡುವವರಿಗಾಗಿ ನೀವು ಒಳ್ಳೆಯ ಮಾನದಂಡವನ್ನು ಸೆಟ್ ಮಾಡಿದ್ದೀರಾ ಸರ್. ನಿಮಗೆ ಅದ್ಭುತವಾದ ಶಕ್ತಿ ಮತ್ತು ಸ್ಟ್ಯಾಮಿನ ಇದೆ ಎಂದು ಬರೆದುಕೊಂಡಿದ್ದಾರೆ.

    https://twitter.com/AlluSirish/status/1268189587710660608

    ಈ ಹಿಂದೆಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹಲವಾರು ಫಿಟ್ನೆಸ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋಗಳು ಕೂಡ ಬಹಳ ವೈರಲ್ ಆಗಿದ್ದವು. 45ರ ವಯಸ್ಸಿನಲ್ಲೂ ಅಪ್ಪು ವ್ಯಾಯಾಮ ಮಾಡುತ್ತಿರುವುದನ್ನು ನೋಡಿದ ಅವರ ಅಭಿಮಾನಿಗಳು ನೆಚ್ಚಿನ ನಟನನ್ನು ಹಾಡಿಕೊಂಡಿದ್ದರು. ಜೊತೆಗೆ ಸ್ವತಃ ನಿರ್ದೇಶಕ ಸಂತೋಷ್ ಅನಂದ್‍ರಾಮ್ ಅವರು ಕೂಡ ಟ್ವೀಟ್ ಮಾಡಿ, ಅದಕ್ಕೆ ನಾವು ನಿಮ್ಮ ಪವರ್ ಸ್ಟಾರ್ ಎಂದು ಕರೆಯುವುದು ಎಂದಿದ್ದರು.

    ಸದ್ಯ ಪುನೀತ್ ರಾಜ್‍ಕುಮಾರ್ ಅವರು ಸಂತೋಷ್ ಅನಂದ್‍ರಾಮ್ ಅವರ ನಿರ್ದೇಶನದ ‘ಯುವರತ್ನ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸುಮಾರು 20 ವರ್ಷದ ನಂತರ ಅಪ್ಪು ಸಿನಿಮಾದ ಬಳಿಕ ಪುನೀತ್ ಅವರು ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಶುಕ್ರವಾರ ಬಿಡುಗಡೆಯಾದ ಬದಲಾಗು ನೀನು ಬದಲಾಯಿಸು ನೀನು ಎಂಬ ಹಾಡಿನಲ್ಲೂ ಕೂಡ ಅಪ್ಪು ಅಭಿನಯಿಸಿದ್ದರು.

  • ಲವ್ ಮಾಕ್‍ಟೇಲ್ ನೋಡಿ ಮೂಕವಿಸ್ಮಿತರಾದ ಅಲ್ಲು ಅರ್ಜುನ್ ಸೋದರ

    ಲವ್ ಮಾಕ್‍ಟೇಲ್ ನೋಡಿ ಮೂಕವಿಸ್ಮಿತರಾದ ಅಲ್ಲು ಅರ್ಜುನ್ ಸೋದರ

    ಹೈದರಾಬಾದ್: ಲವ್ ಮಾಕ್‍ಟೇಲ್ ಸಿನಿಮಾ ಥಿಯೇಟರ್ ನಲ್ಲಿ ತಡವಾಗಿ ಸದ್ದು ಮಾಡಿದರೂ ಆನ್‍ಲೈನ್ ಪ್ಲಾಟ್‍ಫಾರ್ಮ್‍ನಲ್ಲಿ ಹೈ ಸ್ಪೀಡ್‍ನಲ್ಲಿ ಓಡುತ್ತಿದೆ. ಇದಕ್ಕೆ ಸಾಕ್ಷಿ ತೆಲುಗು ನಟರು ಸೇರಿದಂತೆ ಬಹುತೇಕರು ಈ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಹಲವರು ತೆಲುಗು ಸಿನಿಮಾಗಳನ್ನು ನೋಡಿ ಮೆಚ್ಚುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ತೆಲುಗು ನಟರೇ ಕನ್ನಡ ಸಿನಿಮಾವನ್ನು ಹಾಡಿಹೊಗಳಿದ್ದಾರೆ.

    ಲವ್ ಮಾಕ್‍ಟೇಲ್ ಸಿನಿಮಾ ಥಿಯೇಟರ್‍ಗಳಲ್ಲಿ ಮೊದಲು ಸದ್ದು ಮಾಡಲಿಲ್ಲ. ಅಲ್ಲದೆ ಕೇವಲ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಹಂತಕ್ಕೆ ತಲುಪಿತ್ತು. ಇದಾದ ಬಳಿಕ ನಿರ್ಮಾಪಕ, ನಿರ್ದೇಶಕ, ನಾಯಕ ನಟ ಡಾರ್ಲಿಂಗ್ ಕೃಷ್ಣಾ ಅವರು ಮಲ್ಟಿಫ್ಲೆಕ್ಸ್ ಗಳ ಮಾಲೀಕರ ಬಳಿ ಗೋಗರೆದು ಸಿನಿಮಾ ದಿನಕ್ಕೊಂದು ಶೋಗೆ ಅವಕಾಶ ನೀಡುವಂತೆ ಕೇಳಿಕೊಂಡರು. ನಂತರ ಹಂತ ಹಂತವಾಗಿ ಥಿಯೇಟರ್ ಹಾಗೂ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಇದಾದ ಬಳಿಕ ಓಟಿಟಿ ಪ್ಲಾಟ್‍ಫಾರ್ಮ್ ಗೆ ಬಂತು.

    ಓಟಿಟಿ ಪ್ಲಾಟ್‍ಫಾರ್ಮ್ ನಲ್ಲಿ ಪ್ರೇಕ್ಷಕರು ಇನ್ನೂ ನೋಡಿ ಆನಂದಿಸುತ್ತಿದ್ದಾರೆ. ಅಲ್ಲದೆ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹಲವರು ಚಿತ್ರ ಮೆಚ್ಚಿ ಡಾರ್ಲಿಂಗ್ ಕೃಷ್ಣ ಅವರಿಗೆ ಹಣವನ್ನೂ ಕಳುಹಿಸುತ್ತಿದ್ದಾರಂತೆ. ಇಷ್ಟೆಲ್ಲ ಮೆಚ್ಚುಗೆಯನ್ನು ಲವ್ ಮಾಕ್‍ಟೇಲ್ ಗಳಿಸಿದೆ. ಕನ್ನಡದಲ್ಲಿ ಇತ್ತೀಚೆಗೆ ತೆರೆ ಕಂಡ ವಿಭಿನ್ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದ ಯಶಸ್ಸನ್ನು ಕಂಡು ಡಾರ್ಲಿಂಗ್ ಕೃಷ್ಣಾ ಸಹ ಇದೇ ಕಥೆಯ ಹಂದರ ಇಟ್ಟುಕೊಂಡು ಭಾಗ-2 ಮಾಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಮಾಡಿದ್ದಾರಂತೆ.

    ಇದೆಲ್ಲ ಇರಲಿ ಇದೀಗ ಪರಭಾಷೆಯ ನಟರೊಬ್ಬರು ಲವ್ ಮಾಕ್‍ಟೇಲ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಅದೂ ಬೇರೆ ಯಾರೂ ಅಲ್ಲ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ತಮ್ಮ ಅಲ್ಲು ಸಿರೀಶ್. ಹೌದು ಅಲ್ಲು ಸಿರೀಶ್ ಅವರು ಇತ್ತೀಚೆಗೆ ಈ ಸಿನಿಮಾವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ತುಂಬಾ ಇಷ್ಟವಾಗಿದೆಯಂತೆ ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

    ಸಿನಿಮಾ ಕುರಿತು ಸಿನಿಮಾದ ಪೋಸ್ಟರ್ ಟ್ವೀಟ್ ಮಾಡಿರುವ ಅವರು, ಅಮೇಜಾನ್ ಪ್ರೈಮ್‍ನಲ್ಲಿ ‘ಲವ್ ಮಾಕ್‍ಟೇಲ್’ ಕನ್ನಡ ಚಿತ್ರವನ್ನು ನೋಡಿದೆ. ಸಿನಿಮಾ ತುಂಬಾ ಇಷ್ಟವಾಯಿತು. ಹೃದಯಕ್ಕೆ ಮುದ ನೀಡಿತು. 90 ಹಾಗೂ 2000ರ ಆಸುಪಾಸಿನ ಹುಡುಗರು ಈ ಸಿನಿಮಾವನ್ನು ಹೆಚ್ಚು ಪ್ರೀತಿಸುತ್ತಾರೆ. ಟ್ಯೂಶನ್ ಕ್ರಷಸ್, ಎಸ್‍ಎಂಎಸ್ ದಿನಗಳು, ಗಲ್ಲಿ ಕ್ರಿಕೆಟ್, ಪ್ರಿ ಸ್ಮಾರ್ಟ್ ಫೋನ್ ಲವ್ ಇವೆಲ್ಲವುಗಳು ನನ್ನನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋದದವು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ.

    ಇದಕ್ಕೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲು ಸಿರೀಶ್ ಪ್ರತಿಕ್ರಿಯಿಸಿ, ನಿರ್ದೇಶನ ಹಾಗೂ ನಟನೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ. ಇಂತಹ ಒಳ್ಳೆಯ ಚಿತ್ರ ಮಾಡಿದ್ದಕ್ಕೆ ನಾನೇ ನಿಮಗೆ ಧನ್ಯವಾದಗಳನ್ನು ಹೇಳಬೇಕು ಎಂದು ಕನ್ನಡದಲ್ಲೇ ತಿಳಿಸಿದ್ದಾರೆ.

    ಅಲ್ಲು ಸಿರೀಶ್ ಅವರಿಗೆ ಮೊದಲಿನಿಂದಲೂ ಕನ್ನಡದ ಸಿನಿಮಾಗಳ ಮೇಲೆ ಒಲವು. ಕನ್ನಡ ಚಿತ್ರರಂಗದ ಜೊತೆಗೆ ನಿಕಟ ಸಂಪರ್ಕವನ್ನೂ ಹೊಂದಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಕರ್ನಾಟಕ, ಕನ್ನಡ ಎಂದರೆ ವಿಶೇಷ ಆಸಕ್ತಿ. ಈಗ ಕನ್ನಡದ ಸಿನಿಮಾ ನೋಡಿ ಹಾಡಿ, ಹೊಗಳಿದ್ದಾರೆ.