Tag: Allu Arvind

  • ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ

    ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ

    ಒಂದು ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಅಲ್ಲು ರಾಮಲಿಂಗಯ್ಯ (Allu Ramalingaiah) ಅವರದ್ದು. ತೆಲುಗು ಸಿನಿಮಾ ರಂಗದಲ್ಲಿ ಅಲ್ಲು ರಾಮಲಿಂಗಯ್ಯ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. 1922ರಲ್ಲಿ ಹುಟ್ಟಿದ್ದ ರಾಮಲಿಂಗಯ್ಯ ಬಣ್ಣದ ಬದುಕಿಗೆ ಕಾಲಿಟ್ಟು ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಕುಟುಂಬ 101ನೇ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದೆ.

    ಸಿನಿಮಾ ರಂಗಕ್ಕೂ ಬರುವ ಮುನ್ನ ರಾಮಲಿಂಗಯ್ಯ ಹೋಮಿಯೋಪತಿ ವೈದ್ಯರಾಗಿದ್ದರು. ವೈದ್ಯ ವೃತ್ತಿಯನ್ನು ಮಾಡುತ್ತಲೇ ಸಿನಿಮಾ ರಂಗಕ್ಕೂ ಕಾಲಿಟ್ಟರು. ಕೇವಲ ನಟರಾಗಿ ಉಳಿಯದೇ ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆಯನ್ನೂ ಶುರು ಮಾಡಿ, ನೂರಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ತೆಲುಗು ಚಿತ್ರೋದ್ಯಮದಲ್ಲಿ ಗೀತಾ ಆರ್ಟ್ಸ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ರಾಮಲಿಂಗಯ್ಯನವರ ಮಗ ಅಲ್ಲು ಅರವಿಂದ್ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ.

    ಅಲ್ಲು ಅರವಿಂದ್ (Allu Arvind) , ಅಲ್ಲು ನರೇಶ್, ಅಲ್ಲು ಅರ್ಜುನ್ ಹೀಗೆ ರಾಮಲಿಂಗಯ್ಯ ಅವರ ಕುಟುಂಬ ಸಿನಿಮಾ ರಂಗಕ್ಕಾಗಿಯೇ ಮೀಸಲಿಟ್ಟಿದೆ. ಪದ್ಮಶ್ರೀ ಗೌರವ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿರುವ ಅಲ್ಲು ರಾಮಲಿಂಗಯ್ಯ ಅವರು ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಲ್ಲು ಬ್ಯುಸಿನೆಸ್ ಪಾರ್ಕ್ (Allu Park) ಉದ್ಘಾಟನೆ ಮತ್ತು ಅವರ ಕಂಚಿನ ಪ್ರತಿಮೆ ಅನಾವರಣೆ ಮಾಡಲಾಗಿದೆ.

     

    ಈ ಸಂದರ್ಭದಲ್ಲಿ ಅವರ ಕುಟುಂಬ ರಾಮಲಿಂಗಯ್ಯ ಅವರ ಮಗ ಅಲ್ಲು ಅರವಿಂದ್, ಅಲ್ಲು ನರೇಶ್, ಮಕ್ಕಳು, ಮೊಕ್ಕಳು ಸೇರಿದಂತೆ ಇಡೀ ಕುಟುಂಬವೇ ಭಾಗಿಯಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಗಚೈತನ್ಯ ಮತ್ತು ಸಾಯಿಪಲ್ಲವಿ ಜೋಡಿಯ ಹೊಸ ಸಿನಿಮಾದ ಕಥೆ ಬಹಿರಂಗ

    ನಾಗಚೈತನ್ಯ ಮತ್ತು ಸಾಯಿಪಲ್ಲವಿ ಜೋಡಿಯ ಹೊಸ ಸಿನಿಮಾದ ಕಥೆ ಬಹಿರಂಗ

    ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ (Naga Chaitanya) 23ನೇ ಸಿನಿಮಾಗೆ ನಾಯಕಿಯಾಗಿ ಸಾಯಿಪಲ್ಲವಿ (Sai Pallavi) ಆಯ್ಕೆಯಾಗಿದ್ದಾರೆ. ಲವ್ ಸ್ಟೋರಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಕಾರ್ತಿಕೇಯ-2 ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ (Chandu Mondeti) ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ  NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ (Allu Arvind) ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.

    ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ಇತ್ತೀಚೆಗೆ ನಾಯಕ ಚೈತನ್ಯ ಹಾಗೂ ನಿರ್ದೇಶಕ ಚಂದು ಮೊಂಡೇಟಿ ಆಂಧ್ರಪ್ರದೇಶದ ಶ್ರೀಕಾಕುಳಂಗೆ ಭೇಟಿ ನೀಡಿ, ಮೀನುಗಾರರ ಕುಟುಂಬಗಳ ಜೊತೆ ಕಾಲಕಳೆದಿದ್ದರು. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಸದ್ಯ NC23 ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ.

    ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಜೋಡಿಯ ಕೆಮಿಸ್ಟ್ರೀ ಸಖತ್ ವರ್ಕೌಟ್ ಆಗಿತ್ತು. ತೆರೆಮೇಲೆ ಮ್ಯಾಜಿಕ್ ಮಾಡಿದ್ದ ಚೈ ಮತ್ತು ಮಲರ್ ಬ್ಯೂಟಿ ಮತ್ತೊಮ್ಮೆ ಕೈ ಜೋಡಿಸಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗ್ತಿರುವ ಈ ಸಿನಿಮಾದ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಶೀಘ್ರದಲ್ಲಿಯೇ ಅಪ್ ಡೇಟ್ ನೀಡಲಿದೆ ಚಿತ್ರತಂಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ರಾಜಶೇಖರ್ ಮತ್ತು ಪತ್ನಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟ: ಏನಿದು ಪ್ರಕರಣ?

    ನಟ ರಾಜಶೇಖರ್ ಮತ್ತು ಪತ್ನಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟ: ಏನಿದು ಪ್ರಕರಣ?

    ತೆಲುಗಿನ ಹೆಸರಾಂತ ನಟ ರಾಜಶೇಖರ್ (Rajasekhar) ಮತ್ತು ಅವರ ಪತ್ನಿ ಜೀವಿತಾಗೆ (Jeevita) ನಾಂಪಲ್ಲಿ ಕೋರ್ಟ್ ನ ಮುಖ್ಯ ಮ್ಯಾಜಿಸ್ಟ್ರೇಟ್ ಒಂದು ವರ್ಷ ಜೈಲು ಶಿಕ್ಷೆ (Jail sentence) ಮತ್ತು ಐದು ಲಕ್ಷ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರಾಜಶೇಖರ್ ಮತ್ತು ಪತ್ನಿ ಜೀವಿತಾ ಮಾಡಿರುವ ಆರೋಪ ಸುಳ್ಳು ಎಂದು ಸಾಬೀತಾಗಿದೆ.

    2011ರಲ್ಲಿ ನಟ ರಾಜಶೇಖರ್ ಮತ್ತು ಅವರ ಪತ್ನಿ ಒಟ್ಟಾಗಿ ಚಿರಂಜೀವಿ (Chiranjeevi) ಬ್ಲಡ್ ಬ್ಯಾಂಕ್ ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಇಲ್ಲಿಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಕುರಿತು  ಚಿರಂಜೀವಿ ಅವರ ಭಾವ ಅಲ್ಲು ಅರವಿಂದ್ (Allu Arvind) ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನೂ ಓದಿ:ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ನಟ ಚಿರಂಜೀವಿ ಕಂಡರೆ ನಟ ರಾಜಶೇಖರ್ ಅವರಿಗೆ ಆಗುವುದಿಲ್ಲ. ಕಾರಣ ಸಿಕ್ಕಾಗೆಲ್ಲ ಚಿರಂಜೀವಿಯನ್ನು ಟೀಕಿಸುತ್ತಲೇ ಇರುತ್ತಾರೆ ರಾಜಶೇಖರ್. ಇದಕ್ಕೆ ವೃತ್ತಿ ವೈಷಮ್ಯ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರೋದ್ಯಮದ ಕಲಾವಿದರ ಸಂಘದಲ್ಲೂ ಈ ಇಬ್ಬರೂ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು.

     

    ಅದರ ಮುಂದುವರೆಕೆಗಾಗಿ ಚಿರಂಜೀವಿ ಹೆಸರಿನ ಬ್ಲಡ್ ಬ್ಯಾಂಕ್ ನಲ್ಲಿ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದರು ರಾಜಶೇಖರ್. ಈ ಮಾತಿನ ವಿರುದ್ದ ಅಲ್ಲು ಅರವಿಂದ್ ದೂರು ನೀಡಿದ್ದರು. ನಿನ್ನೆ ತೀರ್ಪು ಹೊರಬಂದಿದೆ. ಕೂಡಲೇ ದಂಪತಿ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ಕಾಂತಾರ (Kantara) ಸಕ್ಸಸ್ ಬೆನ್ನೆಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ. ಹಾಗಂತ ರಿಷಬ್ ಏನೂ ಖಾಲಿ ಕುಳಿತಿರಲಿಲ್ಲ. ಒಂದು ಸಿನಿಮಾದ ನಿರ್ದೇಶನ, ಎರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಬೇಕಿತ್ತು. ಈ ನಡುವೆಯೇ ತೆಲುಗು ಸಿನಿಮಾ ರಂಗದಿಂದ ಶೆಟ್ಟರಿಗೆ ಭರ್ಜರ್ ಆಫರ್ ಬಂದಿದೆ. ಅದನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದು ಸ್ವತಃ ನಿರ್ಮಾಪಕರಿಗೆ ಹೇಳಿದ್ದಾರೆ.

    ಕಾಂತಾರ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದವರು ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ತಂದೆ ಅಲ್ಲು ಅರವಿಂದ್ (Allu Arvind). ಇವರ ಗೀತಾ ಆರ್ಟ್ಸ್ (Geetha Arts) ಪ್ರೊಡಕ್ಷನ್ ಹೌಸ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ತೆಲುಗು ಸಿನಿಮಾ ರಂಗಕ್ಕೆ ಸಾಕಷ್ಟು ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆಯೂ ಇದೆ. ಈಗ ಅದೇ ಬ್ಯಾನರ್ ನಲ್ಲೇ ರಿಷಬ್ ಅವರಿಗೆ ಆಫರ್ ಹೋಗಿದ್ದು, ಈ ಅವಕಾಶವನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಅಲ್ಲು ಅರವಿಂದ್ ತಿಳಿಸಿದ್ದಾರೆ. ಇದನ್ನೂ ಓದಿ:ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ತೆಲುಗಿನಲ್ಲಿ ಕಾಂತಾರ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಿದ್ದರು ಅರವಿಂದ್. ಈ ಸಕ್ಸಸ್ ಮೀಟ್ ನಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಸಿನಿಮಾ ತಂಡದ ಹಲವರು ಸದಸ್ಯರಿದ್ದರು. ಇದೇ ಸಮಯದಲ್ಲೇ ತಮ್ಮ ಬ್ಯಾನರ್ ಮೂಲಕ ರಿಷಬ್ ಅವರು ಸಿನಿಮಾ ಮಾಡಲಿದ್ದಾರೆ ಎಂದು ಅರವಿಂದ್ ಘೋಷಣೆ ಮಾಡಿದರು. ಅದಕ್ಕೆ ರಿಷಬ್ ಕೂಡ ಒಪ್ಪಿಗೆ ಸೂಚಿಸಿದರು. ಇದಕ್ಕೂ ಮೊದಲು ತಮಗೆ ಸಣ್ಣದೊಂದು ಬ್ರೇಕ್ ಬೇಕಿರುವ ವಿಚಾರವನ್ನೂ ರಿಷಬ್ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಮೊಮ್ಮಗನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ತಾತಾ – ನಾನು ಈಗಲೂ ಶಾಕ್‍ನಲ್ಲಿದ್ದೇನೆ ಎಂದ ನಟ ಅಲ್ಲು ಅರ್ಜುನ್

    ಮೊಮ್ಮಗನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ತಾತಾ – ನಾನು ಈಗಲೂ ಶಾಕ್‍ನಲ್ಲಿದ್ದೇನೆ ಎಂದ ನಟ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ತಮ್ಮ ಮೊಮ್ಮಗನ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ಗಿಫ್ಟ್ ಆಗಿ ನೀಡಿದ್ದಾರೆ. ಇದನ್ನು ನೋಡಿ ಅಲ್ಲು ಅರ್ಜುನ್ ನಾನು ಈಗಲೂ ಶಾಕ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

    ಅಲ್ಲು ಅರವಿಂದ್ ಒಂದು ತಿಂಗಳ ಹಿಂದೆ ತಮ್ಮ ಮೊಮ್ಮಗ ಅಯಾನ್ ಬಳಿ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಎಂದು ಕೇಳಿದ್ದಾರೆ. ಆಗ ಅಯಾನ್ ನನಗೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳಿದ್ದಾನೆ. ಮೊಮ್ಮಗನ ಆಸೆಯಂತೆ ಆತನ ಹುಟ್ಟುಹಬ್ಬಕ್ಕೆ ಅಲ್ಲು ಅರವಿಂದ್ ಈಜುಕೊಳವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    Happy Birthday My Baby ❤️ . My most priceless possession . 5 years of sweetness, naughtyness , cutenesses n infinite love . #alluayaan

    A post shared by Allu Arjun (@alluarjunonline) on

    ಪೋಸ್ಟ್ ನಲ್ಲಿ ಏನಿದೆ?
    “ನನ್ನ ತಂದೆಯವರು ಅಯಾನ್ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ನೀಡಿದ್ದಾರೆ. ನಾನು ಈಗಲೂ ಶಾಕ್‍ನಲ್ಲಿದ್ದೇನೆ. ನನ್ನ ತಂದೆ ಒಂದು ತಿಂಗಳ ಹಿಂದೆ ಹುಟ್ಟುಹಬ್ಬಕ್ಕೆ ಏನೂ ಉಡುಗೊರೆ ಬೇಕು ಎಂದು ಅಯಾನ್‍ಗೆ ಕೇಳಿದರು. ಆಗ ಅಯಾನ್ ನನಗೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳಿದ್ದ. ನನ್ನ ತಂದೆ ಆತನ ಮಾತಿಗೆ ಒಪ್ಪಿಕೊಂಡು ಈಜುಕೊಳವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ತಾತ ಪಡೆಯಲು ಅಯಾನ್ ಅದೃಷ್ಟ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.