Tag: Allied Government

  • ಮೈತ್ರಿ ಸರ್ಕಾರಕ್ಕೆ ಮೊದಲು ಆಹ್ವಾನ ಇಟ್ಟಿದ್ದು ಡಿಕೆಶಿ: ಸಾ.ರಾ. ಮಹೇಶ್

    ಮೈತ್ರಿ ಸರ್ಕಾರಕ್ಕೆ ಮೊದಲು ಆಹ್ವಾನ ಇಟ್ಟಿದ್ದು ಡಿಕೆಶಿ: ಸಾ.ರಾ. ಮಹೇಶ್

    – ಮೈಸೂರು ಮೇಯರ್ ರಾಜಕೀಯ ಜಿದ್ದಾಜಿದ್ದಿಗೆ ಸ್ಫೋಟಕ ಟ್ವಿಸ್ಟ್

    ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿ ಮಾತನಾಡಿ ಮೈತ್ರಿ ಸರ್ಕಾರಕ್ಕೆ ಮನವಿ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿನೂ ಬೇಡ, ಕಾಂಗ್ರೆಸ್ ಕೂಡ ಬೇಡ ಅಂತಾ ಅಂತಿಮವಾಗಿ ನಿರ್ಧಾರ ಮಾಡಿ ಅದನ್ನು ತನ್ವೀರ್ ಸೇಠ್‍ಗೆ ತಿಳಿಸಿದ್ದೇವು. ಮಧ್ಯರಾತ್ರಿ 12 ಗಂಟೆ 41 ನಿಮಿಷಕ್ಕೆ ತನ್ವೀರ್ ಸೇಠ್ ಕರೆ ಮಾಡಿದ್ದರು. ನಾನು ರೀಸೀವ್ ಮಾಡಿರಲಿಲ್ಲ. ಆಗ ಮೇಸೇಜ್ ಹಾಕಿದ್ದರು ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್ ಚುನಾವಣೆ ಗೆ ಗೈರು ಆಗುತ್ತಾರೆ ಎಂದು ಮೆಸೇಜ್ ಹಾಕಿದ್ದರು. ಚುನಾವಣೆ ದಿನ ಬೆಳಗ್ಗೆ 11 ಗಂಟೆಗೆ ತನ್ವೀರ್ ಸೇಠ್ ಕರೆ ಮಾಡಿ ಮೇಯರ್ ಸ್ಥಾನ ನೀವೇ ಇಟ್ಕೊಳ್ಳಿ, ಉಪ ಮೇಯರ್ ನಮಗೆ ಕೊಡಿ ಅಂತಾ ತನ್ವೀರ್ ಸೇಠ್ ಹೇಳಿದ್ದರು ನಾವು ಒಪ್ಪಿರಲಿಲ್ಲ ಎಂದರು.

    ಅದೇ ದಿನ 11.30 ಕ್ಕೆ ಡಿ.ಕೆ.ಶಿವಕುಮಾರ್ ಕರೆ ಮಾಡಿ ಮೈತ್ರಿಗೆ ಬನ್ನಿ ಅಂತಾ ಕೇಳಿದ್ದರು. 11.45 ಕ್ಕೆ ನಮ್ಮ ಇಬ್ಬರು ಶಾಸಕರು ಚುನಾವಣೆಗೆ ಗೈರು ಆಗೋದು ಖಚಿತವಾಯಿತು ಆಗ, ತನ್ವೀರ್ ಸೇಠ್ ಮತ್ತೆ ಕರೆ ಮಾಡಿ ಕೇಳಿದ್ದರು. ಆಗ ನಾವು ನಮ್ಮ ಸದಸ್ಯರ ತೀರ್ಮಾನಕ್ಕೆ ಬಿಟ್ಟೆವು. ಸ್ವತಂತ್ರವಾಗಿ ನಮ್ಮ ಶಕ್ತಿ ತೋರಿಸಲು ನಿರ್ಧಾರ ಮಾಡಿದ್ದೇವು.ಡಿ.ಕೆ. ಶಿವಕುಮಾರ್ ಫೋನ್ ಮಾಡುತ್ತಿದ್ದಾರೆ ಕಾಲ್ ಪಿಕ್ ಮಾಡಿ ಅಂತಾ ತನ್ವೀರ್ ಸೇಠ್ ನನಗೆ ಮೆಸೇಜ್ ಮಾಡಿದ್ದರು ಎಂದಿದ್ದಾರೆ.

    ನನ್ನ ಫೋನ್ ಅಲ್ಲೆ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಜೊತೆ ಮಾತಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖುದ್ದಾಗಿ ನನ್ನ ಜೊತೆ ಮಾತಾಡಿದ್ದರು. ಮೇಯರ್ ಸ್ಥಾನ ಕಾಂಗ್ರೆಸ್ ಗೆ ಬಿಟ್ಟು ಕೊಡಿ ಅಂತಾ ಕೇಳಿದ್ದರು. ಆದರೂ ನಾವು ಆ ಕ್ಷಣಕ್ಕೂ ಮೈತ್ರಿ ಬೇಡ ಅಂತಾ ನಿರ್ಧರಿಸಿದ್ದೇವು ಎಂದಿದ್ದಾರೆ.

  • ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ

    ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ

    – ನಾನು ನಿರ್ಮಾಪಕನಾಗಿದ್ದಾಗ ಡ್ರಗ್ ಮಾಫಿಯಾ ಇರೋದು ಗೊತ್ತಿಲ್ಲ

    ತುಮಕೂರು: ಡ್ರಗ್ ಮಾಫಿಯಾದಿಂದ ಬಂದ ಹಣವನ್ನು ಬಿಜೆಪಿ ಪಕ್ಷ ಮೈತ್ರಿ ಸರ್ಕಾರವನ್ನು ಬೀಳಿಸಲು ಬಳಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ.

    ಇಂದು ತುರುವೇಕೆರೆಯಲ್ಲಿ ಪ್ರತಿಭಟನೆಗೆಂದು ಬಂದಿದ್ದ ಹೆಚ್‍ಡಿಕೆ 144 ಸೆಕ್ಷನ್ ಇರುವ ಹಿನ್ನೆಲೆ ಪ್ರತಿಭಟನೆಯನ್ನು ಕೈಬಿಟ್ಟರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದೆ ಎಂದು ಹೇಳಿದರು.

    ಡ್ರಗ್ ಮಾಫಿಯಾ ಹಣವನ್ನು ಬಿಜೆಪಿ ಪಕ್ಷ ಮೈತ್ರಿ ಸರ್ಕಾರ ಬೀಳಿಸಲು ಬಳಿಸಿಕೊಂಡಿದೆ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಹಣನ್ನು ಬಂದಿತ್ತು. ನನ್ನ ಅವಧಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದೆ. ಮಾಧ್ಯಮದಲ್ಲಿ ಈ ವಿಚಾರ ಹೆಚ್ಚಿಗೆ ಚರ್ಚೆ ಆಗಬಾರದು. ಇದರಿಂದ ಎಳೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ನಾನು ಚಿತ್ರ ನಿರ್ಮಾಪಕನಾಗಿದ್ದ ಕಾಲದಲ್ಲಿ ಡ್ರಗ್ ಮಾಫಿಯಾ ಇರೋದು ನನಗೆ ಗೊತ್ತಿಲ್ಲ ಎಂದು ಹೆಚ್‍ಡಿಕೆ ತಿಳಿಸಿದರು.

    ಇದೇ ವೇಳೆ ಸಿಎಂ ಪುತ್ರನ ಮೇಲೆ ಭ್ರಷ್ಟಾಚಾರ ಆರೋಪದ ವಿಚಾರವಾಗಿ ಮಾತನಾಡಿದ ಅವರು, 5 ಸಾವಿರ ಕೋಟಿ ಹಗರಣ ಸಿಎಂ ಪುತ್ರನ ಮೇಲೆ ಯಾಕೆ ಬಂತು ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಾಗಿಲ್ಲ. ಜನ ಕೊರೊನಾದಿಂದ ಸಾಯುತ್ತಿದ್ದಾರೆ. ಈ ನಡುವೆ ಭ್ರಷ್ಟಾಚಾರ ಕಟ್ಟಿಕೊಂಡು ನಾನು ಏನ್ ಮಾಡಲಿ. ನೆರೆ ಪರಿಹಾರ ಕೊಡುವುದರಲ್ಲಿ ಸರ್ಕಾರ ಎಡವಿದೆ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ತುರುವೇಕೆರೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲು ಇಲ್ಲಿಗೆ ಬಂದಿದ್ದೆ. ಕೊರೊನಾದಿಂದ ನಾನು ಹೊರಗೆ ಹೆಚ್ಚು ಹೋಗುತ್ತಿಲ್ಲ. ಆದರೆ ಇಲ್ಲಿಗೆ ಬರಬೇಕಾಯ್ತು. ಇಲ್ಲಿನ ರೈತರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಶಾಸಕ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದರ ವಿರುದ್ಧ ಹೋರಾಡಲು ಬಂದಿದ್ದೆ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು 144 ಸೆಕ್ಷನ್ ಜಾರಿ ಮಾಡಿದ್ದಾರೆ. ಹೀಗಾಗಿ ಕೇವಲ ಮನವಿ ಮಾಡಿ ಹೋಗುತ್ತಿದ್ದೇನೆ ಎಂದು ಹೆಚ್‍ಡಿಕೆ ಹೇಳಿದರು.

  • ಹಳ್ಳಿ ಹಕ್ಕಿ ಬರಿತಿದೆ ಮೈತ್ರಿ ಸರ್ಕಾರ ಕೆಡವಿದ ಪುಸ್ತಕ

    ಹಳ್ಳಿ ಹಕ್ಕಿ ಬರಿತಿದೆ ಮೈತ್ರಿ ಸರ್ಕಾರ ಕೆಡವಿದ ಪುಸ್ತಕ

    ಮೈಸೂರು: ಮೈತ್ರಿ ಸರ್ಕಾರ ಕೆಡವಿದ ವಿವರವು ಪುಸ್ತಕ ರೂಪದಲ್ಲಿ ಬರಲಿದೆ. ಮಾಜಿ ಸಚಿವ ಎಚ್. ವಿಶ್ವನಾಥ್ ಈ ಪುಸ್ತಕ ಬರೆಯುತ್ತಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಈ ವಿಷಯ ತಿಳಿಸಿದರು. ಸರ್ಕಾರ ಬೀಳಿಸುವುದಕ್ಕೆ ಯಾರು ಯಾರು ಸಹಾಯ ಮಾಡಿದರು. ಮಾಜಿ ಸಿಎಂ ಆಗಿದ್ದವರು, ಮಾಜಿ ಮಂತ್ರಿ ಆಗಿದ್ದವರು ಹೇಗೆಲ್ಲ ಇದರಲ್ಲಿ ಪಾತ್ರವಹಿಸಿದರು ಎಂಬ ಎಲ್ಲಾ ಮಾಹಿತಿಗಳನ್ನು ಬಯಲು ಮಾಡುತ್ತೇನೆ ಎಂದರು.

    ನಾನು ಇದ್ದದ್ದನ್ನು ಇದ್ದ ಹಾಗೇ ಹೇಳುವ ಮನುಷ್ಯ. ಈಗ ಬರೆಯುತ್ತಿರುವ ಪುಸ್ತಕದಲ್ಲಿ ಸತ್ಯ ದಾಖಲಾಗುತ್ತದೆ. ಎರಡು ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗಲಿದೆ. ಸರ್ಕಾರ ಪತನ ಜನ ಅಂದು ಕೊಂಡ ರೀತಿ ಏಕ ಪಾತ್ರ ಅಭಿನಯ ಅಲ್ಲ. ಅದರಲ್ಲಿ ಬಹಳಷ್ಟು ಪಾತ್ರ ಬರುತ್ತವೆ. ಮೇಲ್ನೋಟಕ್ಕೆ ನನಗೆ ಏನೂ ಗೊತ್ತಿಲ್ಲ ಅಂದವರ ಬಣ್ಣವೂ ಇಲ್ಲಿ ಬಯಲಾಗುತ್ತದೆ. ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದೇನೆ. ನೋಟ್ ಮುಗಿದ ಮೇಲೆ ಬರಹ ಶುರುವಾಗುತ್ತೆ. ಎರಡು ತಿಂಗಳಲ್ಲಿ ಪುಸ್ತಕ ಹೊರ ಬರುತ್ತೆ ಎಂದು ತಿಳಿಸಿದರು.

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ರಾಜಕಾರಣ ನಂಬಿಕೆ, ಆತ್ಮವಿಶ್ವಾಸ, ಆಶಾವಾದದ ಮೇಲೆಯೇ ನಡೆಯಬೇಕು. ನಾನು ಈಗಲೂ ಆಶಾವಾದ ಹೊಂದಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದೇನೆ. ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾರೆ. ಯಾರ ಹೆಸರುಗಳು ಇವೆ, ಯಾರು ಇಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಏನಾಗುತ್ತೋ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕೆಆರ್‌ಎಸ್‌ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಜೀವಂತ

    ಕೆಆರ್‌ಎಸ್‌ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಜೀವಂತ

    ಮಂಡ್ಯ: ಕಳೆದ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಕೂಡ ಜೀವಂತವಾಗಿ ಇದೆ. ಈ ನಿಟ್ಟಿನಲ್ಲಿ ಇಂದು ಮಂಡ್ಯದಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ ಸರ್ಕಾರ ಬದಲಾದರೂ ಸಹ ಕೆಲವು ಒಳ್ಳೆಯ ಯೋಜನೆಗಳನ್ನು ಕೈ ಬಿಡುವುದಿಲ್ಲ. ಅಂತೆಯೇ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆಯನ್ನು ಸಹ ನಾವು ಇನ್ನೂ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.

    ಕಳೆದ ಸಮ್ಮಿಶ್ರ ಸರ್ಕಾರ ಪ್ರವಾಸೋದ್ಯಮ ಸಚಿವರಾಗಿದ ಸಾ.ರಾ.ಮಹೇಶ್ ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್‍ನ್ನು ರೂಪಿಸುವುದಾಗಿ ಯೋಜನೆಯೊಂದನ್ನು ತಯಾರು ಮಾಡಲು ಮುಂದಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಈ ಯೋಜನೆಯೂ ಸಹ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇಂದು ಸಚಿವ ಸಿ.ಟಿ.ರವಿ ಈ ಯೋಜನೆ ಇನ್ನೂ ಜೀವಂತವಾಗಿ ಇದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಬದಲಾಯ್ತು ಅಂದ್ರೆ ಅವರ ಅಲೋಚನೆಗಳನ್ನು ಅಲ್ಲಿಗೆ ಬಿಟ್ಟು ಹೋಗುವಂತಹ ಪದ್ಧತಿ ಇಲ್ಲ. ಅವರ ಒಳ್ಳೆಯ ಅಲೋಚನೆಗಳನ್ನು ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ ಎಂದರು.

    ಈ ಡಿಸ್ನಿಲ್ಯಾಂಡ್ ಯೋಜನೆ ಪ್ರವಾಸೋದ್ಯಮ ಇಲಾಖೆಯಿಂದ ಪ್ಲಾನ್ ಮಾಡಿರಲಿಲ್ಲ. ಇದನ್ನು ನೀರಾವರಿ ಇಲಾಖೆಯಿಂದ ಮಾಡಿಸುತ್ತೇವೆ ಎಂದು ಸಾ.ರಾ.ಮಹೇಶ್ ಅವರು ಹೇಳಿದ್ದರು. ಸದ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ ಬೇಕಾದ 2 ಸಾವಿರ ಕೋಟಿ ಹಣ ಇಲ್ಲ. ಈ ಬಗ್ಗೆ ಹಣ ಹೂಡಿಕೆ ಮಾಡಿದ್ದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಿಟಿ ರವಿ ಹೇಳಿದ್ದಾರೆ.

  • ಸೋಮವಾರದಿಂದ ಬಿಎಸ್‍ವೈ ಚುನಾವಣಾ ಕಣಕ್ಕೆ- ಅನರ್ಹರಿಗೆ ಅಭಯ

    ಸೋಮವಾರದಿಂದ ಬಿಎಸ್‍ವೈ ಚುನಾವಣಾ ಕಣಕ್ಕೆ- ಅನರ್ಹರಿಗೆ ಅಭಯ

    ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅನರ್ಹ ಶಾಸಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಭಯ ನೀಡಿದ್ದು, ಎಲ್ಲಾ 14 ಅನರ್ಹ ಶಾಸಕರು ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ಸ್ವತಃ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಸೋಮವಾರದಿಂದ ಆರಂಭ ಮಾಡಲಿರುವ ಸಿಎಂ ಬಿಎಸ್‍ವೈ, ಮೊದಲು ಅನರ್ಹ ಶಾಸಕ ಎಂಟಿಬಿ ನಾಗರಾಜ್‍ರ ಹೊಸಕೋಟೆಯಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅಲ್ಲದೇ ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 1 ದಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

    ಅನರ್ಹ ಶಾಸಕರಿಗೆ ನೀಡಿರೋ ಭರವಸೆಯಂತೆ ಸಿಎಂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಅನರ್ಹರನ್ನು ಮತ್ತೆ ಶಾಸಕರನ್ನು ಮಾಡುತ್ತೇನೆ ಎಂಬ ಶಪಥವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲ್ಲೆಯಲ್ಲಿ 14 ಕ್ಷೇತ್ರಗಳಿಗೆ ಸಿಎಂ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ.

    ಸಿಎಂ ಬಿಎಸ್‍ವೈ ಅವರು ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಮುಖಂಡರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಸಿಎಂ ಅವರೇ ಪ್ರಚಾರ ಕಾರ್ಯಕ್ಕೆ ಆಗಮಿಸುವುದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗುತ್ತದೆ ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.

  • ಮೈತ್ರಿ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ – ಹೆಚ್‍ಡಿಕೆ ವಿರುದ್ಧ ಹೊರಟ್ಟಿ ಅಸಮಾಧಾನ

    ಮೈತ್ರಿ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ – ಹೆಚ್‍ಡಿಕೆ ವಿರುದ್ಧ ಹೊರಟ್ಟಿ ಅಸಮಾಧಾನ

    ಹುಬ್ಬಳ್ಳಿ: ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನಮಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿನ ನ್ಯೂನತೆಗಳ ಬಗ್ಗೆ 11 ಎಂ.ಎಲ್.ಸಿಗಳು ವರಿಷ್ಠರಿಗೆ ಹೇಳಿದ್ದೇವೆ. ಹೆಚ್‍ಡಿಕೆ ನಾಯಕತ್ವದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಪಕ್ಷದಲ್ಲಿ ನ್ಯೂನತೆ ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರು ಸರಿಪಡಿಸುತ್ತಾರೆ ಎಂದಿದ್ದಾರೆ ನೋಡೋಣ ಎಂದರು.

    ದೇವೇಗೌಡರು ಸರಿಪಡಿಸುವ ಕೆಲಸ ಮಾಡಿದರೆ ಸರಿ ಆಗುತ್ತದೆ. ಇಲ್ಲದಿದ್ದರೆ ನಾವೇನೂ ಮಾಡಕ್ಕೆ ಆಗಲ್ಲ. ಜೆಡಿಎಸ್ ಪಕ್ಷದಲ್ಲಿನ ಆಂತರಿಕ ಕಲಹ ಸರಿಯಾಗಬೇಕು. ಇಲ್ಲದಿದ್ದರೇ ಮುಂದೆ ನಾವು ವಿಚಾರ ಮಾಡುತ್ತೇವೆ ಎಂದು ಜೆಡಿಎಸ್ ಪಕ್ಷಕ್ಕೆ ಬಸವರಾಜ ಹೊರಟ್ಟಿ ವಾರ್ನಿಂಗ್ ನೀಡಿದ್ದಾರೆ.

    ಇದೇ ವೇಳೆ ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರ ಆಣೆ ಪ್ರಮಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ, ರಾಜಕಾರಣವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬಾರದು. ಆಣೆ ಪ್ರಮಾಣ ವಿಚಾರ ನಿಲ್ಲಿಸಲು ಇಬ್ಬರಿಗೂ ಹೇಳಿದ್ದೇನೆ. ಸುಮ್ಮನೆ ಪ್ರಾಬ್ಲಮ್ ಕ್ರಿಯೇಟ್ ಮಾಡಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

  • 14 ತಿಂಗಳ ನೋವನ್ನು ಕುಮಾರಣ್ಣ ತಡೆದಿದ್ದಾರೆ- ಎಚ್.ಡಿ.ರೇವಣ್ಣ

    14 ತಿಂಗಳ ನೋವನ್ನು ಕುಮಾರಣ್ಣ ತಡೆದಿದ್ದಾರೆ- ಎಚ್.ಡಿ.ರೇವಣ್ಣ

    ಮಂಡ್ಯ: 14 ತಿಂಗಳುಗಳ ನೋವನ್ನು ಎಚ್.ಡಿ.ಕುಮಾರಸ್ವಾಮಿಯಾಗಿದ್ದಕ್ಕೆ ತಡೆದಿದ್ದಾರೆ. ಬೇರೆ ಯಾರು ಕೂಡ ಈ ಪ್ರಮಾಣದ ನೋವನ್ನು ತಡೆಯುತ್ತಿರಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕರು ಹಾಗೂ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಣ್ಣ ರೈತರ ಸಾಲವನ್ನು ಮನ್ನಾ ಮಾಡಿದರು. ಆಗ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಒಂದು ರೂಪಾಯಿ ಕೊಡಲಿಲ್ಲ. ತುಮಕೂರು ಜಿಲ್ಲೆಯ ತೆಂಗಿನಮರಗಳು ಹಾನಿಯಾಗಿದ್ದವು. ಇದಕ್ಕೆ ಬಿಜೆಪಿಯವರು ಒಂದು ರೂಪಾಯಿ ಸಹ ಕೊಡಲಿಲ್ಲ. ಕುಮಾರಣ್ಣ 200 ಕೋಟಿ ರೂಪಾಯಿ ಕೊಟ್ಟಿದ್ದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಮಾರವಾಡಿಗಳಿಗೆ ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುತ್ತಿದ್ದರು. ಇದರಿಂದಲೇ ಮಾರವಾಡಿಗಳು ಹೆಚ್ಚು ಮನೆಗಳನ್ನು ಕಟ್ಟಿದ್ದಾರೆ. ಆದರೆ, ಕುಮಾರಣ್ಣ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರಿಂದ ಇಂದು ಜನ ಉಸಿರು ಬಿಡುತ್ತಿದ್ದಾರೆ. ಇಲ್ಲವಾಗಿದ್ದರೆ ಈ ಸಾಲವೂ ಸಹ ಅವರಿಗೆ ಹೊರೆಯಾಗುತ್ತಿತ್ತು ಎಂದು ಕುಮಾರಸ್ವಾಮಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕುಮಾರಣ್ಣ ಒಳ್ಳೆಯವರನ್ನೂ ನಂಬುತ್ತಾರೆ, ಕೆಟ್ಟವರನ್ನು ನಂಬುತ್ತಾರೆ. ನಾನು ದೊಡ್ಡವರ ಮಾತು ಕೇಳು ಎಂದು ಹೇಳುತ್ತೇನೆ, ಆದರೆ ಕೇಳಲ್ಲ. ಎಲ್ಲರನ್ನೂ ನಂಬಿ ಪಕ್ಷಕ್ಕೆ ಕರೆ ತರುತ್ತಾನೆ. ಅವರು ಚಂಗಲು ಬಿದ್ದಿರುತ್ತಾರೆ. ಮೇವು ಸಿಕ್ಕಿದ ಕಡೆಗೆ ಹೋಗುತ್ತಾರೆ. ಹೊಟೇಲ್‍ನಲ್ಲಿ ಇದ್ದವರನ್ನು ಕುಮಾರಣ್ಣ ಪಕ್ಷಕ್ಕೆ ಕರೆ ತಂದರು. ಆದರೆ, ಅವು ಚಂಗಲುಗಳು, ಮೇವು ಎಲ್ಲಿ ಸಿಗುತ್ತದೆ ಎಂದು ನೋಡುತ್ತಿರುತ್ತವೆ. ಮೇವು ಸಿಕ್ಕ ಕಡೆ ಹಾರುತ್ತಿರುತ್ತಾರೆ ಎಂದು ಅನರ್ಹ ಶಾಸಕ ನಾರಾಯಣಗೌಡ ವಿರುದ್ಧ ಪರೋಕ್ಷವಾಗಿ ವಗ್ದಾಳಿ ನಡೆಸಿದರು.

    ಕೆಲಸ ಮಾಡುವ ಎತ್ತಿಗೆ ಹುಲ್ಲು ಹಾಕು ಎಂದು ನಾನು ಹೇಳುತ್ತೇನೆ. ನನ್ನ ಮಾತನ್ನು ಕೇಳುವುದಿಲ್ಲ, ಈಗ ನೋಡಿ ಏನಾಗಿದೆ ಎಂದು. ಅದಕ್ಕೆ ಇಲ್ಲಿಗೆ ಕುಮಾರಣ್ಣ ಬಂದಿಲ್ಲ. ಮನೆ ಹತ್ತಿರ ಹೋದರೆ ಟೀ ಕೊಡೋದಿಲ್ಲ ಎನ್ನುತ್ತಾರೆ, ಯಾರ ಮನೆಯಲ್ಲಿ ಟೀ ಕೊಡುವುದಿಲ್ಲ. ಇವರು ಟೀ ಕುಡಿಯೋರಲ್ಲ, ಚಂಗಲುಗಳು ಇವರು ಎಂದು ವಾಗ್ದಾಳಿ ನಡೆಸಿದರು.

  • ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ: ಪುಟ್ಟರಾಜು

    ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ: ಪುಟ್ಟರಾಜು

    – ಹೆಚ್‍ಡಿಕೆಗೆ ಟೋಪಿ ಹಾಕೋದು ಹೇಳಿಕೊಟ್ಟಿದ್ದು ಚಲುವರಾಯಸ್ವಾಮಿ

    ಮಂಡ್ಯ: ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಶ್ನಿಸಿದರು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿ ಮುಂದುವರಿಯುವುದರ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ. ಈಗ ಸಮ್ಮಿಶ್ರ ಸರ್ಕಾರ ಮುಗಿದು ಹೋದ ಕಥೆಯಾಗಿದೆ. ಈ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಸಮ್ಮಿಶ್ರ ಸರ್ಕಾರ ವಾಪಸ್ ಬರುತ್ತಾ ಎಂದು ಪ್ರಶ್ನಿಸಿದರು.

    ಸಿದ್ದರಾಮಯ್ಯ ಅವರ ಬಗ್ಗೆ ದೇವೇಗೌಡರು ಹೇಳಿಕೆ ವಿಚಾರವಾಗಿ ಮಾತನಾಡಿದ ಪುಟ್ಟರಾಜು, ಎಂಪಿ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನ ಕೆಲ ಪಕ್ಕಾ ಬೆಂಬಲಿಗರೇ ನಿಖಿಲ್ ಸೋಲುತ್ತಾರೆ ಎಂದು ಮಾತನಾಡಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರಕ್ಕೆ ಮನನೊಂದ ಹೆಚ್‍ಡಿಡಿ ಈ ರೀತಿ ಹೇಳಿದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ನಮಗೆ ವಹಿಸಿದ ಜವಾಬ್ದಾರಿಯನ್ನು ಮಾತ್ರ ನಾವು ಮಾಡುತ್ತೇವೆ ಎಂದು ತಿಳಿಸಿದರು.

    ಹಳೆ ಮೈಸೂರು ಪ್ರಾಂತ್ಯದಲ್ಲಿ ಮೊದಲಿನಿಂದಲೂ ನಮಗೆ ಮತ್ತು ಕಾಂಗ್ರೆಸ್‍ಗೆ ಫೈಟ್ ಇತ್ತು. ನಾವು ಶತ್ರುಗಳಾಗಿಯೇ ಹೊಡೆದಾಡಿಕೊಂಡು ಬಂದವರು. ಈಗ ಒಂದಾಗಿ ಕೆಲಸ ಮಾಡುವ ವೇಳೆ ಈ ರೀತಿಯ ಬೆಳವಣಿಗೆ ಸಹಜ. ಇದನ್ನು ಸರಿಪಡಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಾರೆ. ಈ ಬಗ್ಗೆ ನಮ್ಮ ನಾಯಕರ ಬಳಿ ಹೇಳಿದ್ದೇನೆ, ಬೇಡ ಎಂದರೆ ಬಿಟ್ಟಾಕಿ. ಆದರ ಬದಲು ಹೀಗೆ ಕಿತ್ತಾಡೋದು ಬೇಡಾ ಎಂದು ಹೇಳಿದ್ದೇನೆ ಎಂದು ಹೇಳಿದರು.

    ಈ ವೇಳೆ ಮಾಜಿ ಶಾಸಕ ಚಲುವರಾಯಸ್ವಾಮಿ ಬಗ್ಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಯಾರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅವರ ಬೆನ್ನ ಹಿಂದೆಯೋ ಸಿದ್ದರಾಮಯ್ಯ ಅವರ ಬೆನ್ನ ಹಿಂದೆಯೋ ಎಂದು ಅರ್ಥ ಆಗುತ್ತಿಲ್ಲ. ಹೆಚ್‍ಡಿಕೆಗೆ ಟೋಪಿ ಹಾಕೋದು ಹೇಳಿಕೊಟ್ಟಿದ್ದೇ ಚಲುವರಾಯಸ್ವಾಮಿ. ಇದರ ಬಗ್ಗೆ ನಾನು ಆಮೇಲೆ ಮಾತಾಡುತ್ತೇನೆ ಎಂದು ಕಿಡಿಕಾರಿದರು.

  • ಬಿಜೆಪಿ ಸೇರುವ ಬಗ್ಗೆ ಎನ್ ಮಹೇಶ್ ಸ್ಪಷ್ಟನೆ

    ಬಿಜೆಪಿ ಸೇರುವ ಬಗ್ಗೆ ಎನ್ ಮಹೇಶ್ ಸ್ಪಷ್ಟನೆ

    – ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ
    – ಸ್ವತಂತ್ರವಾಗಿಯೇ ಕ್ಷೇತ್ರದ ಕೆಲಸ
    – ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು

    ಚಾಮರಾಜನಗರ: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರ್ಕಾರದ ಮಂತ್ರಿ ಮಂಡಲವನ್ನೂ ಸೇರುವುದಿಲ್ಲ ಎಂದು ಮಾಜಿ ಸಚಿವ, ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ಪಕ್ಷಕ್ಕೂ ಬೆಂಬಲ ನೀಡಿಲ್ಲ. ಪಕ್ಷದ ಹೈಕಮಾಂಡ್ ಆದೇಶದಂತೆ ತಟಸ್ಥವಾಗಿದ್ದೇನೆ. ಆದರೆ, ಹಿಂದಿನ ಸರ್ಕಾರ ಬಹುಮತ ಸಾಬೀತು ಪಡಿಸುವ ವೇಳೆ ಸದನಕ್ಕೆ ಹಾಜರಾಗುವಂತೆ ಸೂಚಿಸಿ ಬಿಎಸ್‍ಪಿ ವರಿಷ್ಠೆ ಮಾಯಾವತಿ ಅವರು ಮಾಡಿದ ಟ್ವೀಟನ್ನು ನಾನು ಗಮನಿಸಿರಲಿಲ್ಲ. ಹೀಗಾಗಿ ಸದನಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿಸಿದ್ದಾರೆ.

    ಬೆಹನ್ ಜೀ ಮಾಹಿತಿ ಕೊರತೆಯಿಂದ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದು ಸರಿ ಹೋಗಲಿದೆ. ನಾನು ಸ್ವತಂತ್ರವಾಗಿದ್ದೇನೆ, ಸ್ವತಂತ್ರವಾಗಿಯೇ ಕ್ಷೇತ್ರದ ಕೆಲಸ ಮಾಡುತ್ತೇನೆ. ನನ್ನ ಮೇಲೆ ಬರುತ್ತಿರುವ ಆರೋಪಗಳೆಲ್ಲ ಸುಳ್ಳು. ನಾನು ಯಾವ ಪಕ್ಷಕ್ಕೂ ಸಹಾಯ ಮಾಡಿಲ್ಲ. ಬೆಹನ್ ಜೀ ಅವರ ಆದೇಶದ ಮೇರೆಗೆ ತಟಸ್ಥವಾಗಿದ್ದೆ. ಆದರೆ ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನನ್ನ ಮೇಲೆ ಬರುತ್ತಿರುವ ಆರೋಪಗಳೆಲ್ಲ ಸುಳ್ಳು. ನನಗೆ ಯಾವ ಪಕ್ಷದ ಸಹಾಯವೂ ಬೇಡ. ಪ್ರಸ್ತುತ ಬಿಜೆಪಿ ಸರ್ಕಾರವಿದೆ. ಅವರಿಂದ ನನ್ನ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತೇನೆ. ಆದರೆ, ಹಿಂದಿನ ಸರ್ಕಾರ ನನ್ನ ಕ್ಷೇತ್ರದ ಸಮಸ್ಯಗಳಿಗೆ ಸ್ಪಂದಿಸಲಿಲ್ಲ. ನಾನು ಕೇಳಿದಷ್ಟು ಅನುದಾನವನ್ನು ನೀಡಲಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ರೇವಣ್ಣ ಆರೋಗ್ಯ ಇಲಾಖೆಗೂ ಕೈ ಹಾಕಿದ್ರು – ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್

    ರೇವಣ್ಣ ಆರೋಗ್ಯ ಇಲಾಖೆಗೂ ಕೈ ಹಾಕಿದ್ರು – ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್

    ವಿಜಯಪುರ: ಹೆಚ್.ಡಿ. ರೇವಣ್ಣನಿಂದ ಮೈತ್ರಿ ಸರ್ಕಾರಕ್ಕೆ ಪತನ ಆಗಿದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು ಹೆಚ್.ಡಿ ರೇವಣ್ಣ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅವರು ಆರೋಗ್ಯ ಇಲಾಖೆಯಲ್ಲೂ ಕೈ ಹಾಕಿದ್ದರು. ಅವರ ವಿರುದ್ಧ ನಮಗೂ ಸಾಕಷ್ಟು ಅಸಮಾಧಾನವಿದೆ. ಅಸಮಾಧಾನ ಇದೆ ಎನ್ನುವ ಕಾರಣಕ್ಕೆ ಸರ್ಕಾರವನ್ನು ಬೀಳಿಸಬೇಕೇ ಎಂದು ಪ್ರಶ್ನೆ ಮಾಡಿದರು.

    ಈ ವೇಳೆ ಕೆಎಂಎಫ್ ಅಧ್ಯಕ್ಷರನ್ನು ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ರೇವಣ್ಣ ಈ ವಿಷಯದಲ್ಲಿ ಕೈ ಹಾಕಿದ್ದು ತಪ್ಪು. ಅ ಸ್ಥಾನವನ್ನು ಕಾಂಗ್ರೆಸ್ ಶಾಸಕ ಭೀಮಾನಾಯಕ್ ಅವರಿಗೆ ನೀಡಲು ಮೊದಲೇ ತೀರ್ಮಾನ ಆಗಿತ್ತು ಎಂದು ತಿಳಿಸಿದರು.