Tag: alliance government

  • ಲೋಕಸಭೆ ಚುನಾವಣೆಗೆ ದಿನೇಶ್ ಗುಂಡೂರಾವ್ ರಣತಂತ್ರ

    ಲೋಕಸಭೆ ಚುನಾವಣೆಗೆ ದಿನೇಶ್ ಗುಂಡೂರಾವ್ ರಣತಂತ್ರ

    ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ರಣತಂತ್ರ ರೂಪಿಸುತ್ತಿದ್ದು, ಈಗಾಗಲೆ 7 ಮತಕ್ಷೇತ್ರಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ.

    ಶುಕ್ರವಾರ ರಾಜ್ಯದ 7 ಲೋಕಸಭಾ ಕ್ಷೇತ್ರಗಳ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಲಾಗಿದ್ದು, ಪಕ್ಷ ಸಂಘಟನೆ, ವಿಧಾನಸಭೆ ಸೋಲು ಗೆಲುವುಗಳ ಚರ್ಚೆ ಮಾಡಲಾಗಿದೆ. ಮುಂದಿನ ವಾರ ಉಳಿದ 21 ಮತಕ್ಷೇತ್ರಗಳ ಮುಖಂಡರ ಸಭೆ ನಿಗದಿ ಪಡಿಸಲಾಗಿದೆ. ಆದರೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

    ಸ್ಥಳೀಯ ಸಂಸ್ಥೆಗಳ ಚುನಾವಣಾ ಮೈತ್ರಿ ಕುರಿತಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆಗೆ ಚರ್ಚೆ ಬಳಿಕ, ಮೈತ್ರಿಯ ನಿರ್ಧಾರ ಎಂದ ಅವರು, ಆಷಾಢ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಆಗಸ್ಟ್ 15ರ ನಂತರ ದೆಹಲಿಗೆ ತೆರಳಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

    ಅಧ್ಯಕ್ಷನಾಗಿ ನೇಮಕಗೊಂಡ ಬಳಿಕ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿಲ್ಲ. ಹೀಗಾಗಿ ಇಂದು ಸಂಜೆ ಅವರ ನಿವಾಸಕ್ಕೆ ಹೋಗುತ್ತಿರುವೆ. ಈ ವೇಳೆ ಅವರೊಂದಿಗೆ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

    ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

    – ರಾಹುಲ್ ಪ್ರಧಾನಿ ಕನಸಿಗೆ ಹಿನ್ನಡೆ

    ನವದೆಹಲಿ: 2019 ರ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಉತ್ತರ ಪ್ರದೇಶ ಬಿಹಾರ್ ಹಾಗೂ ಮಹಾರಾಷ್ಟ್ರದಲ್ಲಿ ಮೈತ್ರಿಗೆ ಮುಂದಾಗಿರುವುದು ತಿಳಿದ ವಿಷಯ. ಆದರೆ ಬಿಜೆಪಿ ಸರ್ಕಾರವನ್ನ ಮಣಿಸಲು ಕಾಂಗ್ರೆಸ್ ಸಮೂಹ ನಾಯಕತ್ವ ಮುಂದುವರೆಯಲು ಮುಂದಾಗಿದೆ. ಈ ಹಿನ್ನೆಲೆ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆ ಬಳಿಕ ನಿರ್ಧರಿಸಲಾಗುವುದು ಎಂದು ಶುಕ್ರವಾರ ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಚುನಾವಣೆಯಲ್ಲಿ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಪ್ರಭಾವವನ್ನು ಮಣಿಸಲು ಮುಂದಾಗಿರುವ ಕಾಂಗ್ರೆಸ್ ವಿವಿಧ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಈಗಾಗಲೇ ಸಿದ್ಧತೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೈತ್ರಿ ಭಾಗವಾಗಿ ಕರ್ನಾಟಕ, ಗುಜರಾತ್, ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ರಾಜ್ಯಗಳು ಪ್ರಮುಖವಾಗಿದ್ದು, ಮೈತ್ರಿ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಹಿಡಲು ಕಾಂಗ್ರೆಸ್ ಮುಂದಾಗಿದೆ.

    ಪ್ರಮುಖವಾಗಿ 2019 ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಆಗಲು ಬಿಜೆಪಿಗೆ ಕನಿಷ್ಟ 230 ಲೋಕಸಭಾ ಸ್ಥಾನಗಳು ಅಗತ್ಯವಿದ್ದು, ಬಳಿಕ ಎನ್‍ಡಿಎ ಒಕ್ಕೂಟ ಇತರೇ ಪಕ್ಷಗಳ ಮೈತ್ರಿ ನಡೆಸಲಿದೆ. ಇದು ತಮಗೇ ಅರಿವಿದೆ ಎಂದು ಕಾಂಗ್ರೆಸ್ ವಕ್ತಾರಕರು ತಿಳಿಸಿದ್ದಾರೆ.

    ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷದ ಸ್ಥಳೀಯ ಘಟಕಗಳ ನಾಯಕರ ಅಭಿಪ್ರಾಯವನ್ನು ಪರಿಗಣಿಸುವುದಾಗಿ ತಿಳಿಸಿದೆ. ಪ್ರಮುಖವಾಗಿ ಪಂಜಾಬ್, ದೆಹಲಿ, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಮೈತ್ರಿ ರಚಿಸುವಲ್ಲಿ ಎಚ್ಚರಿಕೆಯಿಂದ ನಡೆಸಲು ಮುಂದಾಗಿದೆ. ಪ್ರಮುಖವಾಗಿ ಚುನಾವಣೆಯಲ್ಲಿ 2 ಸಿದ್ಧಾಂತಗಳನ್ನು ಹೊಂದಿರುವ ಕಾಂಗ್ರೆಸ್ ಮೊದಲು ಮೋದಿ ಹಾಗೂ ಆರ್‍ಎಸ್‍ಎಸ್ ಸೋಲಿಸಲು ಮುಂದಾಗಿದೆ. ಬಳಿಕ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ನಡೆಸಲಿದೆ. ಈ ಎಲ್ಲಾ ನಿರ್ಧಾರಗಳು ಕಾಂಗ್ರೆಸ್ ಎಐಸಿಸಿ ನಾಯಕ ರಾಹುಲ್ ಗಾಂಧಿ ತೀರ್ಮಾನಿಸಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

    ಮೈತ್ರಿ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷವೂ ಮೋದಿ ಸರ್ಕಾರ ವಿಫಲತೆ, ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ಹಾಗೂ ರೈತರ ಪರ ಹೋರಾಟ ಅಂಶಗಳನ್ನು ಜನತೆಯ ಮುಂದಿಟ್ಟು ಹೋರಾಟ ನಡೆಸುವ ತಯಾರಿಯಲ್ಲಿದೆ. ಅಲ್ಲದೇ ಇದರ ನಡುವೆಯೇ ಇವಿಎಂ ಮಿಷೆನ್ ಬಳಕೆ ಕುರಿತು ಮಿತ್ರ ಪಕ್ಷಗಳೊಂದಿಗೆ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆ ಇದೆ.

  • ಜೆಡಿಎಸ್‍ನಿಂದ ಅಂಬಿ ಕಣಕ್ಕಿಳಿದರೆ, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುವೆ: ಎಂಎಲ್‍ಸಿ ಸಿ.ಎಂ.ಲಿಂಗಪ್ಪ

    ಜೆಡಿಎಸ್‍ನಿಂದ ಅಂಬಿ ಕಣಕ್ಕಿಳಿದರೆ, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುವೆ: ಎಂಎಲ್‍ಸಿ ಸಿ.ಎಂ.ಲಿಂಗಪ್ಪ

    ರಾಮನಗರ: ಉಪ ಚುನಾವಣೆಯಲ್ಲಿ ರಾಮನಗರ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಂಬರೀಶ್ ಕಣಕ್ಕೆ ಇಳಿದರೆ ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ.

    ರಾಮನಗರ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಾನು ಪ್ರಬಲವಾಗಿ ವಿರೋಧ ಮಾಡುತ್ತೇನೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮತ್ತೇ ಸ್ಪರ್ಧಿಸುತ್ತಾರೆ. ಅವರು ಕಣಕ್ಕೆ ಇಳಿಯುವುದಿಲ್ಲ ಅಂತಾ ತಿಳಿಸಿದರೆ ನಾನೇ ಸ್ಪರ್ಧಿಸ್ತೇನೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

    ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಅಭ್ಯರ್ಥಿಯಾಗಿದ್ದು, ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷದ ವಿರುದ್ಧ ಸಮರ ಸಾರಲು ಸಿದ್ಧನಿರುವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಜಿಲ್ಲೆಯ ಕಾರ್ಯಕರ್ತರಿಂದ ವಿರೋಧವಿತ್ತು. ಅಲ್ಲದೇ ಮೈತ್ರಿಗೆ ನಮ್ಮ ಆತ್ಮಸಾಕ್ಷಿಯೂ ಒಪ್ಪುವುದಿಲ್ಲ ಎಂದಿದ್ದರು. ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಾಲೂಕು ಪಂಚಾಯತ್ ಚುನಾವಣೆಯನ್ನು ರದ್ದು ಮಾಡಲಾಗಿದೆ. ಅಧಿಕಾರಿಗಳು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲೆಯ ಕಾಂಗ್ರೆಸ್ ಪ್ರಭಾವಿ ಮುಖಂಡ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಕುಮಾರಸ್ವಾಮಿ ನಿವಾಸಕ್ಕೆ ಹೋಗಬೇಕು. ನಾನು ಕಾಂಗ್ರೆಸ್ಸಿನ ನಿಷ್ಠಾವಂತ ನಾಯಕ, ಹೀಗಾಗಿ ಅಲ್ಲಿಗೆ ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಅಧಿಕಾರಿಗಳ ವರ್ತನೆ ಹೀಗೆ ಮುಂದುವರೆದರೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಮೈತ್ರಿ ಸರ್ಕಾರದ ರಚನೆ ಸುಳಿವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕ ಚಿದಂಬರಂ

    ಮೈತ್ರಿ ಸರ್ಕಾರದ ರಚನೆ ಸುಳಿವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕ ಚಿದಂಬರಂ

    ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ರಚನೆಯ ತಂತ್ರ ಹಾಗೂ ಭರವಸೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ತೆರೆದಿಟ್ಟಿದ್ದಾರೆ.

    ದೇಶದ 12 ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಸದ್ಯ 48 ಜನ ಸಂಸದರನ್ನು ನಾವು ಹೊಂದಿದ್ದೇವೆ. ಈ ಸಂಖ್ಯೆ 2019ರ ಲೋಕಸಭೆ ಚುನಾವಣೆಯಲ್ಲಿ ಮೂರುಪಟ್ಟು ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ)ಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಸೀಟ್ ಪಡೆಯುವ ಮೂಲಕ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಹೀಗಾಗಿ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರ ಮನವೊಲಿಸಿ ಮೈತ್ರಿ ಸರ್ಕಾರ ರಚಿಸುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.

    ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿಕೊಂಡು ಆಡಳಿತ ನಡೆಸುತ್ತಿವೆ. ಲೋಕಸಭೆ ಚುನಾವಣೆಗೂ ಎರಡೂ ಪಕ್ಷಗಳ ನಡುವೆ ಮೈತ್ರಿ ಆಗಲಿದೆ ಎಂದು ಹೇಳಲಾಗಿದೆ. ಆದ್ರೆ ಯಾವ ಕ್ಷೇತ್ರಗಳ ಲೆಕ್ಕಾಚಾರದ ಬಗ್ಗೆ ಚರ್ಚೆಗಳು ಎರಡೂ ಪಕ್ಷದಲ್ಲಿ ನಡೆಯುತ್ತಿವೆ.

  • ಸಿದ್ದರಾಮಯ್ಯ ಹೇಳಿಕೆಗೆ ಡೋಂಟ್ ಕೇರ್ ಅಂದ್ರು ದೇವೇಗೌಡರು!

    ಸಿದ್ದರಾಮಯ್ಯ ಹೇಳಿಕೆಗೆ ಡೋಂಟ್ ಕೇರ್ ಅಂದ್ರು ದೇವೇಗೌಡರು!

    ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾಗಿ ವೇಣುಗೋಪಾಲ್ ಇದ್ದಾರೆ. ವಿವಾದತ್ಮಕ ಹೇಳಿಕೆಗಳನ್ನೆಲ್ಲಾ ವೇಣುಗೋಪಾಲ್ ಹೆಗಲಿಗೆ ಹಾಕಿದ್ದು, ಅವರೇ ಸರಿದೂಗಿಸಿಕೊಂಡು ಹೋಗ್ತಾರೆ. ಆ ಎಲ್ಲ ಹೇಳಿಕೆಗಳಿಗೆ ನಾವು ಪ್ರತಿಕ್ರಿಯಿಸಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

    ಜೆಪಿ ಭವನದಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾತನಾಡಿದ ದೇವೇಗೌಡರು, ನಮ್ಮ ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದೆ, ಎಲ್ಲರೂ ಹಿರಿಯ ನಾಯಕರು ಬಂದಿದ್ದಾರೆ. ಸರ್ಕಾರ ಮಾಡುವ ಸಂದರ್ಭ ದಲ್ಲಿ ನಮ್ಮ ಪಕ್ಷದ ಚಟುವಟಿಕೆ ಕಡಿಮೆ ಆಗಿತ್ತು. ಈ ಹಿನ್ನೆಲೆಯಲ್ಲಿ ಸಭೆಯನ್ನು ಕರೆದಿದ್ದು, ಮುಂದಿನ ದಿನಗಳಲ್ಲಿ ಸಭೆ ಮುಂದುವರೆಯುತ್ತದೆ. ಮೈತ್ರಿ ಸರ್ಕಾರ ಮುಂದುವರೆಸುವದಕ್ಕಾಗಿ ಈ ಸಭೆ ಮಾಡಲಾಗಿತ್ತು ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನ ಮಾಡಬೇಕು. ಮೈತ್ರಿ ಸರ್ಕಾರ ಮುಂದುವರೆಯುವುದಕ್ಕೆ ಎಲ್ಲ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಲೋಕಾಲ್ ಪಾರ್ಟಿಸ್ ಎಲೆಕ್ಷನ್ ನಲ್ಲಿ ನಮ್ಮ ಪಕ್ಷದ ಸಂಘಟನೆ ಮಾಡೋದಕ್ಕಾಗಿ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಕೆಲಸವನ್ನು ಗುರುತಿಸಿದ್ದೇವೆ. ಅಂತಹವರನ್ನೇ ಇಂದಿನ ಸಭೆಗೆ ಆಹ್ವಾನಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಎಷ್ಟು ಕ್ಷೇತ್ರಗಳ ಬಗ್ಗೆ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ರು.

    ಸಭೆಯಲ್ಲಿ ಸಚಿವ ಎಂಸಿ ಮನಗೂಳಿ, ಕೋನರೆಡ್ಡಿ, ಕುಪೇಂದ್ರ ರೆಡ್ಡಿ, ಮಾಜಿ ಶಾಸಕ ಸುರೇಶ್ ಪ್ರಭು, ಜೆಡಿಎಸ್ ವಕ್ತಾರ ರಮೇಶ್ ಬಾಬು, ಶರವಣ, ಬಿ.ಎಂ.ಫಾರೂಕ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ. ಸಿದ್ದರಾಮಯ್ಯ ಹೇಳಿಕೆಗೆ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಿರುಗೇಟು ನೀಡಿದ್ದು, ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಈ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಅಂತ ಹೇಳಿದ್ದಾರೆ. ಮತ್ತೊಂದೆಡೆ, ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಇತ್ತ ಸಿದ್ದರಾಮಯ್ಯರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೂರು ನೀಡಿದ್ದಾರೆ. ಎಐಸಿಸಿ ಮುಖಂಡರಿಬ್ಬರ ಜೊತೆ ದೂರವಾಣಿ ಮಾತುಕತೆ ನಡೆಸಿರುವ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸೇರಿದಂತೆ, ಕೆಲ ಕಾಂಗ್ರೆಸ್ ನಾಯಕರು ಮಾತನಾಡುವ ರೀತಿ ಸರಿ ಇಲ್ಲ ಅಂತ ದೂರಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

  • ಕರ್ನಾಟಕದ ಬಗ್ಗೆ ನಾವು ಅಲರ್ಟ್ ಆಗಿದ್ದೇವೆ, ಯು ಡೋಂಟ್ ವರಿ ಯಡಿಯೂರಪ್ಪ ಜೀ: ಅಮಿತ್ ಶಾ

    ಕರ್ನಾಟಕದ ಬಗ್ಗೆ ನಾವು ಅಲರ್ಟ್ ಆಗಿದ್ದೇವೆ, ಯು ಡೋಂಟ್ ವರಿ ಯಡಿಯೂರಪ್ಪ ಜೀ: ಅಮಿತ್ ಶಾ

    ಬೆಂಗಳೂರು: ಕರ್ನಾಟಕದ ಬಗ್ಗೆ ನಾವು ಆಲರ್ಟ್ ಆಗಿದ್ದೇವೆ. ಯು ಡೋಂಟ್ ವರಿ ಯಡಿಯೂರಪ್ಪ ಜೀ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಸೋಮವಾರ ಬಿಎಸ್‍ವೈ ಧಿಡೀರ್ ಅಂತ ಅಹಮದಾಬಾದ್ ಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಶಾ ಜೊತೆ ವಿಸ್ತ್ರತ ಚರ್ಚೆ ಮಾಡಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬಿದ್ದು ಹೋಗುತ್ತೆ. ಇನ್ನು ಲೋಕಸಭೆ ಚುನಾವಣೆ ಒಳಗೆ ಮೈತ್ರಿ ಸರ್ಕಾರ ಅದಾಗೆ ಪತನವಾಗುತ್ತದೆ ಎಂದು ಹೇಳಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ? ಶಾ ಜೊತೆ ಬಿಎಸ್‍ವೈ ಚರ್ಚಿಸಿದ್ದೇನು?

    ಮೈತ್ರಿ ಸರ್ಕಾರದ ಪ್ರತಿಯೊಂದು ಬೆಳವಣಿಗೆಯನ್ನು ನಮ್ಮ ಗುಪ್ತ ತಂಡ ಗಮನಹರಿಸಿದೆ. ಈಗಾಗಲೇ ನಮ್ ಟೀಂ ಕರ್ನಾಟಕದಲ್ಲಿ ಇದೆ. ಮುಂದೆಯೂ ಇರುತ್ತೆ. ಗುಪ್ತ ತಂಡದ ವರದಿ ಆಧಾರದ ಮೇಲೆ ಏನು ಕಾರ್ಯಾಚರಣೆ ಕೈಗೊಳ್ಳಬೇಕೆಂದು ನಾವೇ ನಿಮಗೆ ತಿಳಿಸುತ್ತೇವೆ. ಸೂಕ್ತ ಸಮಯದಲ್ಲಿ ರಾಜ್ಯ ಬಿಜೆಪಿ ಘಟಕಕ್ಕೆ ನಾವೇ ಮಾಹಿತಿ ನೀಡುತ್ತೇವೆ. ಸದ್ಯ ನೀವು ಮೈತ್ರಿ ಸರ್ಕಾರದ ವಿರುದ್ಧ ಹೋರಾಟದ ಕಡೆ ಗಮನ ಕೊಡಿ ಎಂದು ಅಹಮದಾಬಾದ್‍ನಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಅಮಿತ್ ಶಾ ಅಭಯ ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ ಲೋಕಸಭಾ ಉಪಚುನಾವಣೆ – ಬಿಜೆಪಿಯಿಂದ ಕಣಕ್ಕಿಳೀತಾರಾ ಆರ್.ಅಶೋಕ್?

    ಸುದೀರ್ಘ ಚರ್ಚೆ ಬಳಿಕ ಅಮಿತ್ ಶಾಗೆ ಜೂನ್ 29 ರ ರಾಜ್ಯ ಕಾರ್ಯಕಾರಿಣಿಗೆ ಬಿಎಸ್‍ವೈ ಆಹ್ವಾನ ನೀಡಿದ್ದಾರೆ. ಬಳಿಕ ಸಮಯ ನೋಡಿಕೊಂಡು ಬೆಂಗಳೂರಿನ ಕಾರ್ಯಕಾರಿಣಿ ಸಭೆಗೆ ಬರುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಬಜೆಟ್ ಮಂಡನೆಗೂ ಮೊದಲು ಅಮಿತ್ ಶಾಗೆ ಕರ್ನಾಟಕಕ್ಕೆ ಬರುತ್ತಾರಾ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಮೂಡಿದೆ.

  • Exclusive: ಸಮ್ಮಿಶ್ರ ಸರ್ಕಾರದ ರಾಜಕೀಯ ಚದುರಂಗದಾಟದಲ್ಲಿ ಮೆಗಾ ಟ್ವಿಸ್ಟ್

    Exclusive: ಸಮ್ಮಿಶ್ರ ಸರ್ಕಾರದ ರಾಜಕೀಯ ಚದುರಂಗದಾಟದಲ್ಲಿ ಮೆಗಾ ಟ್ವಿಸ್ಟ್

    ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರ ಹೇಳಿಕೆಯ ಬೆನ್ನಲ್ಲೆ ರಾಜಕೀಯ ಚದುರಂಗದಾಟ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಸಾಲಮನ್ನಾ ಮತ್ತು ಮಧ್ಯಂತರ ಬಜೆಟ್ ಎರಡು ವಿಷಯಗಳಿಂದಾಗಿ ರಾಜಕೀಯ ನಾಯಕರಲ್ಲಿ ಭಿನ್ನಮತದ ಹೊಗೆ ಕಾಣಲಾರಂಭಿಸಿದೆ.

    ಸಾಲಮನ್ನಾ ಮತ್ತು ಬಜೆಟ್ ವಿಚಾರವಾಗಿ ಸಿದ್ದರಾಮಯ್ಯನವರು ಅಸಮಾಧಾನ ಹೊರಹಾಕಿದ ಎನ್ನಲಾದ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇತ್ತ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾಲಮನ್ನಾ, ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಮುನಿಸು: ಆಪ್ತರ ಜೊತೆ ಮಾತನಾಡಿದ್ದು ಏನು? ಆಡಿಯೋ ಕೇಳಿ

    ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭ:
    ಇಲ್ಲಿ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳ ನಾಯಕರು ಒಬ್ಬರ ಮೇಲೊಬ್ಬರು ಅಸಮಾಧಾನ ಹೊರಹಾಕುತ್ತಿದ್ದಂತೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಬ್ಬರ ಜಗಳಲ್ಲಿ ಲಾಭ ಪಡೆಯಲು ಮುಂದಾಗಿದ್ದಾರಂತೆ. ಯಡಿಯೂರಪ್ಪನವರು ಇವತ್ತು ಬೆಳಗ್ಗೆಯಿಂದ ಯಾರ ಕೈಗೂ ಸಿಗದೇ ಸೆಕ್ಯೂರಿಟಿ, ಸರ್ಕಾರಿ ಕಾರು ಇಲ್ಲದೇ ನಿವಾಸದಿಂದ ಹೊರ ನಡೆದಿದ್ದಾರೆ. ಬೆಳಗ್ಗೆ 7.30ಕ್ಕೆ ಡಾಲರ್ಸ್ ಕಾಲೋನಿ ನಿವಾಸ ಬಿಟ್ಟಿರುವ ಬಿಎಸ್ ವೈ ಕೇವಲ ಓರ್ವ ಆಪ್ತನನ್ನು ಮಾತ್ರ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

    ದಿಢೀರ್ ಅಂತಾ ಯಡಿಯೂರಪ್ಪನವರ ಅಜ್ಞಾವಾಸ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಯಾರಿಗೂ ತಿಳಿಯದಂತೆ ಮತ್ತೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸಂಪರ್ಕಿಸಲು ಯಡಿಯೂರಪ್ಪ ಮುಂದಾದರಾ ಅಥವಾ ಮತ್ತೊಮ್ಮೆ ತೆರೆಮರೆಯಲ್ಲಿ ಆಪರೇಷನ್ ಕಮಲಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

  • ಒಂದು ವರ್ಷ ಏಕೆ 5 ವರ್ಷವೂ ಕುಮಾರಸ್ವಾಮಿಯೇ ಸಿಎಂ ಆಗಿರಲಿ: ಬಿಎಸ್‍ವೈ

    ಒಂದು ವರ್ಷ ಏಕೆ 5 ವರ್ಷವೂ ಕುಮಾರಸ್ವಾಮಿಯೇ ಸಿಎಂ ಆಗಿರಲಿ: ಬಿಎಸ್‍ವೈ

    ಬೆಂಗಳೂರು: ಒಂದು ವರ್ಷ ಏಕೆ, 5 ವರ್ಷವೂ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಲಿ ಎಂದು ಕುಮಾರಸ್ವಾಮಿ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಒಂದು ವರ್ಷ ಮೈತ್ರಿ ಸರ್ಕಾರವನ್ನು ಯಾರು ಅಲುಗಾಡಿಸಲು ಆಗಲ್ಲ ಎಂದು ಈ ಹಿಂದೆ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ಮೈತ್ರಿ ಸರ್ಕಾರ ಅವರದ್ದೇ ಇದೆಯಲ್ವಾ. ಒಂದು ವರ್ಷ ಏಕೆ, 5 ವರ್ಷವೂ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ವಿರೋಧ ಪಕ್ಷದಲ್ಲಿದ್ದು ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಟಾಂಗ್ ನೀಡಿದರು. ಇದನ್ನು ಓದಿ: ಇನ್ನು ಒಂದು ವರ್ಷ ಯಾರೂ ನನ್ನ ಟಚ್ ಮಾಡೋಕೆ ಆಗಲ್ಲ: ಸಿಎಂ ಎಚ್‍ಡಿಕೆ

    ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದಲ್ಲಿ ಯಾವುದೇ ಸಂಘಟನೆ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.

  • ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಎಸ್‍ವೈ ಪ್ಲಾನ್!

    ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಎಸ್‍ವೈ ಪ್ಲಾನ್!

    – ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು 6 ತಂಡಗಳೊಂದಿಗೆ ಸಜ್ಜಾದ ಯಡಿಯೂರಪ್ಪ!

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ.

    ಯಡಿಯೂರಪ್ಪ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗುತ್ತಿದ್ದಾರೆ. ರಾಜ್ಯದ ರೈತರ ಸಮಗ್ರ ಸಮಸ್ಯೆಗಳನ್ನರಿಯಲು ಯಡಿಯೂರಪ್ಪ 6 ತಂಡಗಳನ್ನು ರಚಿಸಿದ್ದಾರೆ. ಇಂದಿನಿಂದ ಜೂನ್ 30 ವರೆಗೆ ಒಟ್ಟು 15 ದಿನಗಳ ಕಾಲ ರಾಜ್ಯಾದ್ಯಂತ ಆ 6 ತಂಡಗಳು ಪ್ರವಾಸ ಆರಂಭಿಸಲಿವೆ. ರೈತ ಮೋರ್ಚಾದ ಐದು ತಂಡಗಳಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿವೆ.

    ಪ್ರವಾಸ ಮಾಡಲಿರುವ ತಂಡಗಳು
    ತಂಡ 1 – ರಾಜ್ಯ ಬಿಜೆಪಿ ರೈತ ಮೋರ್ಚಾ ಅದ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಪ್ರವಾಸ ಮಾಡಲಿದ್ದು, ಈ ತಂಡ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತದೆ.

    ತಂಡ 2 – ಬಳ್ಳಾರಿ, ಬೀದರ್, ಕಲಬುರ್ಗಿ ನಗರ, ಕಲಬುರ್ಗಿ ಗ್ರಾಮಾಂತರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತವೆ.

    ತಂಡ -3 – ಈಶ್ವರ ಚಂದ್ರ ಹೊಸಮನಿ ನೇತೃತ್ವದಲ್ಲಿ ಮೂರನೇ ತಂಡದ ಕಾರ್ಯ ನಿರ್ವಹಣೆ ಮಾಡುತ್ತದೆ. ಈ ತಂಡ ಹಾವೇರಿ, ಗದಗ, ಧಾರವಾಡ, ಧಾರವಾಡ ಗ್ರಾಮೀಣ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡ -4 – ನಂಜುಂಡೇಗೌಡ ಅವರ ನೇತೃತ್ವದಲ್ಲಿ ನಾಲ್ಕನೇ ತಂಡದ ಪ್ರವಾಸ ಮಾಡಲಿದ್ದು, ಮೈಸೂರು ನಗರ, ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತವೆ.

    ತಂಡ 5 – ಪವಿತ್ರಾ ರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದ್ದು, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡ 6 – ಶಿವಪ್ರಸಾದ್ ನೇತೃತ್ವದಲ್ಲಿ ಕೊನೆಯ 6ನೇ ತಂಡದ ಪ್ರವಾಸ ಮಾಡಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡಗಳಿಗೆ ಯಡಿಯೂರಪ್ಪ ನೀಡಿದ ಟಾಸ್ಕ್:
    * ಸಾಲ ಮನ್ನಾಕ್ಕೆ ಆಗ್ರಹಿಸಿ ಮೈತ್ರಿ ಸರ್ಕಾರದ ವಿರುದ್ದ ರೈತರನ್ನು ಹುರಿದುಂಬಿಸಬೇಕು.
    * ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಜನರಿಗೆ ಮನವರಿಕೆ ಮಾಡುವುದು.
    * ಆಯಾ ಜಿಲ್ಲೆಗಳಲ್ಲಿನ ರೈತರ ಮೂಲಭೂತ ಸಮಸ್ಯೆಗಳನ್ನು ಪಟ್ಟಿ ಮಾಡುವುದು.
    * ಪ್ರಧಾನಿ ನರೇಂದ್ರ ಮೋದಿ ರೈತರಿಗೆ ನೀಡಿರುವ ಯೋಜನೆಗಳ ಮನವರಿಕೆ ಮಾಡುವುದು.
    * ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲಿಸುವಂತೆ ರೈತರಿಗೆ ಮನವಿ ಮಾಡುವುದು.
    * ಪ್ರತಿ ಜಿಲ್ಲೆಗಳಲ್ಲಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸುವುದು.

    ಆರು ತಂಡಗಳ ಕಾರ್ಯ ನಿರ್ವಹಣೆ:
    * ಬಿ.ಎಸ್.ವೈ ನೀಡಿರುವ ಟಾಸ್ಕ್ ಕಡ್ಡಾಯವಾಗಿ ಪೂರೈಸಲೇಬೇಕು.
    * ಪ್ರವಾಸದ ಸಂಪೂರ್ಣ ವರದಿ ರೈತ ಮೋರ್ಚಾ ಅದ್ಯಕ್ಷ ಲಕ್ಷ್ಮಣ ಸವದಿ ಕೈ ಸೇರಲಿದೆ.
    * ಲಕ್ಷ್ಮಣ ಸವದಿ ಸಂಪೂರ್ಣ ವರದಿಯನ್ನು ರೈತ ಮೋರ್ಚಾ ಉಸ್ತುವಾರಿ ರವಿಕುಮಾರ್ ಗೆ ನೀಡಬೇಕು.
    * ರೈತ ಮೋರ್ಚಾ ಉಸ್ತುವಾರಿ ಹೊತ್ತಿರುವ ರವಿಕುಮಾರ್.
    * ರವಿಕುಮಾರ್ ಸಂಪೂರ್ಣ ವರದಿಯನ್ನು ಯಡಿಯೂರಪ್ಪ ಕೈಗೊಪ್ಪಿಸಲಿದ್ದಾರೆ.

  • ಎಚ್‍ಡಿಕೆ ಫುಲ್ ಟರ್ಮ್? ಅಥವಾ 30:30 ಸಿಎಂ? ಅಧಿಕಾರ ಹಂಚಿಕೆ ಹೇಗೆ?

    ಎಚ್‍ಡಿಕೆ ಫುಲ್ ಟರ್ಮ್? ಅಥವಾ 30:30 ಸಿಎಂ? ಅಧಿಕಾರ ಹಂಚಿಕೆ ಹೇಗೆ?

    ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಚ್‍ಡಿಕೆ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರಾ? ಅಥವಾ 30 ತಿಂಗಳ ನಂತರ ಕಾಂಗ್ರೆಸ್ ನವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತಾ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

    ಎರಡು ಪಕ್ಷದ ನಾಯಕರು ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಂಡಿದ್ದು, ಟಿ-20 ರೀತಿ 30:30 ಅಧಿಕಾರ ಹಂಚಿಕೆ ಸಾಧ್ಯತೆ ಇಲ್ಲವೇ ಇಲ್ಲ. ಕುಮಾರಸ್ವಾಮಿಯವರು ಫುಲ್ ಟರ್ಮ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೇಲುಕೋಟೆ ಶಾಸಕ ಪುಟ್ಟರಾಜು ಹೇಳಿದ್ದಾರೆ.

    ಜೆಡಿಎಸ್‍ಗೆ ಕಾಂಗ್ರೆಸ್ ಯಾವುದೇ ಷರತ್ತು ವಿಧಿಸದೇ ಬೆಂಬಲ ನೀಡಿದೆ. ಇಲ್ಲಿ ಯಾವ ಊಹಾಪೋಹಗಳಿಗೂ ಆಸ್ಪದ ಇಲ್ಲ. ಸಚಿವ ಸ್ಥಾನ ಹಂಚಿಕೆ ವಿಚಾರ, ಈಗಾಗಲೇ ಚರ್ಚೆಯಾಗಿದೆ ಎಂದು ಅವರು ತಿಳಿಸಿದರು.

    ಮೈತ್ರಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಆರಂಭದ 30 ತಿಂಗಳು ಕುಮಾರಸ್ವಾಮಿ, ಮುಂದಿನ 30 ತಿಂಗಳು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

    ಅಧಿಕಾರ ಹಂಚಿಕೆ ಹೇಗೆ?
    ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಸರ್ಕಾರದ ಸುಗಮ ನಡೆಗಾಗಿ ಸಮನ್ವಯ ಸಮಿತಿ ರಚನೆಯಾಗಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಈ ಬಗ್ಗೆ ಹೆಚ್‍ಡಿಡಿ ಜೊತೆ ಮಾತನಾಡುವುದಾಗಿ ಹೆಚ್‍ಡಿಕೆ ಭರವಸೆ ಕಾಂಗ್ರೆಸ್ ನಾಯಕರಿಗೆ ಭರವಸೆ ನೀಡಿದ್ದಾರೆ.

    ಜೆಡಿಎಸ್‍ಗೆ ಮುಖ್ಯಮಂತ್ರಿ ಪಟ್ಟದ ಜೊತೆಗೆ 14 ಸಚಿವ ಸಿಗಲಿದ್ದು, ಕಾಂಗ್ರೆಸ್‍ಗೆ ಒಂದು ಉಪ ಮುಖ್ಯಮಂತ್ರಿ ಸ್ಥಾನ ಸೇರಿ 20 ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಕಾಂಗ್ರೆಸ್ ನಿಂದ ಒತ್ತಡ ಇದೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಡಿಸಿಎಂ ಆಗುವ ಸಾಧ್ಯತೆಯಿದೆ.

    ಹೆಚ್‍ಡಿಕೆ 5 ವರ್ಷ ಸಿಎಂ ಆಗಿ ಮುಂದುವರೆಯಲು ಕಾಂಗ್ರೆಸ್ ಒಪ್ಪಿಗೆ ನೀಡಿದ ಪರಿಣಾಮ ಖಾತೆ ಹಂಚಿಕೆ ವಿಚಾರದಲ್ಲಿ ದೇವೇಗೌಡರ ರಾಜಿಯಾಗಿದ್ದಾರೆ. ಹಣಕಾಸು, ಇಂಧನ ಹೊರತುಪಡಿಸಿ ಪ್ರಮುಖ ಖಾತೆಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ತೀರ್ಮಾನ ಮಾಡಲಾಗಿದ್ದು, ಶಾಸಕರ ಸಂಖ್ಯೆಗೆ ಅನುಗುಣವಾಗಿ ನಿಗಮ ಮಂಡಳಿಗಳ ಅಧಿಕಾರ ಹಂಚಿಕೆಯಾಗಲಿದೆ.