Tag: Allahu Akbar

  • ನಾವು ಬಿರುಗಾಳಿ ಬೀಸಿದ್ರೂ ʻಅಲ್ಲಾಹು ಅಕ್ಬರ್ʼ ಅಂತೀವಿ – ಪಹಲ್ಗಾಮ್ ಜಿಪ್‌ಲೈನ್ ಆಪರೇಟರ್ ತಂದೆ

    ನಾವು ಬಿರುಗಾಳಿ ಬೀಸಿದ್ರೂ ʻಅಲ್ಲಾಹು ಅಕ್ಬರ್ʼ ಅಂತೀವಿ – ಪಹಲ್ಗಾಮ್ ಜಿಪ್‌ಲೈನ್ ಆಪರೇಟರ್ ತಂದೆ

    • 9 ಜನ ಜಿಪ್‌ಲೈನ್ ಮಾಡಿದ್ದರೂ ಬಾಯ್ಬಿಟ್ಟಿರದ ಆಪರೇಟರ್ – ಆ ವೇಳೆ ʻಅಲ್ಲಾಹು ಅಕ್ಬರ್ʼ ಎಂದಿದ್ದೇಕೆ? 

    ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೂ (Pahalgam Terror Attack) ಕೆಲವೇ ಕ್ಷಣಗಳ ಮುನ್ನ ಜಿಪ್‌ಲೈನ್ ಆಪರೇಟರ್ ಮುಜಾಮಿಲ್ ʻಅಲ್ಲಾಹು ಅಕ್ಬರ್ʼ (Allahu Akbar) ಎಂದು ಕೂಗುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಜಾಮಿಲ್ ಆವರ ತಂದೆ ಪ್ರತಿಕ್ರಿಯಿಸಿದ್ದು, ನಾವು ಮುಸ್ಲಿಮರು, ಬಿರುಗಾಳಿ ಬೀಸಿದ್ರೂ ಸಹ ʻಅಲ್ಲಾಹು ಅಕ್ಬರ್ʼ ಅಂತೀವಿ. ಇದು ನಮ್ಮ ಬಾಯಲ್ಲಿ ಸ್ವಾಭಾವಿಕವಾಗಿ ಬರುವಂತಹದ್ದಾಗಿದೆ ಎಂದು ಅವರು ಹೇಳಿದ್ದಾರೆ.

    ಗುಂಡು ಹಾರಿಸುವ ಮೊದಲು ಮುಜಾಮಿಲ್ ಮೂರು ಬಾರಿ ʻಅಲ್ಲಾಹು ಅಕ್ಬರ್ʼ ಎಂದು ಕೂಗಿದರು ಎಂದು ಗುಜರಾತ್‌ನ ಪ್ರವಾಸಿ ರಿಷಿ ಭಟ್ ಆರೋಪಿಸಿದ್ದರು. ಇದರಿಂದ ಉಗ್ರರ ದಾಳಿಯ ಬಗ್ಗೆ ಮುಜಾಮಿಲ್‌ಗೆ ಮೊದಲೇ ತಿಳಿದಿರಬಹುದು ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಾದ ಬಳಿಕ ಎನ್‌ಐಎ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತದಿಂದ ಪಾಕ್‌ಗೆ ಮೆಡಿಸಿನ್ ಬಂದ್ – ಔಷಧವಿಲ್ಲದೆ ಕೆಲಸ ತೊರೆಯಲು ಮುಂದಾಗ್ತಿರೋ ವೈದ್ಯರು!

    ರಿಷಿ ಭಟ್ ಆರೋಪವೇನು? ನನ್ನ ಮುಂದೆ ಒಂಬತ್ತು ಜನರು ಜಿಪ್‌ಲೈನ್ ಮಾಡಿದ್ದರು. ಆದರೆ ಆಪರೇಟರ್ ಒಂದು ಮಾತನ್ನೂ ಹೇಳಲಿಲ್ಲ. ನಾನು ಜಿಪ್‌ಲೈನ್‌ ಮಾಡುವಾಗ ಅವರು ʻಅಲ್ಲಾಹು ಅಕ್ಬರ್ʼ ಎಂದು ಕೂಗಿದ್ದರು. ಇದಾದ ಬಳಿಕ ಗುಂಡು ಹಾರಿಸಲಾಗಿತ್ತು ಎಂದಿದ್ದರು.

    ಇದರ ನಡುವೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಜಿಪ್‌ಲೈನರ್‌ನ ಅಲ್ಲಾಹು ಅಕ್ಬರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವು ಜನರು ತುಂಬಾ ಕೋಮುವಾದಿಗಳಾಗಿದ್ದಾರೆ. ಹಿಂದೂಗಳು ʻಜೈ ಶ್ರೀ ರಾಮ್ʼ ಎಂದು ಹೇಳುವಂತೆ, ಮುಸ್ಲಿಮರು ʻಅಲ್ಲಾಹು ಅಕ್ಬರ್ʼಹೇಳುತ್ತಾರೆ ಮತ್ತು ನಾವು ಯಾವುದೇ ತೊಂದರೆಯಲ್ಲಿದ್ದಾಗ, ʻಅಲ್ಲಾಹು ಅಕ್ಬರ್ʼ ಎಂದು ಹೇಳುತ್ತೇವೆ ಎಂದಿದ್ದಾರೆ.

    ರಿಷಿ ಭಟ್ ಜಿಪ್‌ಲೈನ್ ಮಾಡುವಾಗ ಮಾಡಿದ್ದ ಸೆಲ್ಫಿ ವೀಡಿಯೋದಲ್ಲಿ ʻಅಲ್ಲಾಹು ಅಕ್ಬರ್‌ʼ ಎಂದಿರುವುದು ಕೇಳಿಸಿದೆ. ಅಲ್ಲದೇ ಗುಂಡೇಟಿನ ಸದ್ದು ಕೇಳಿಸಿದ್ದು, ಜನ ಅಲ್ಲಿಂದ ಓಡುತ್ತಿರುವುದನ್ನು ನೋಡಬಹುದಾಗಿದೆ. ಅಲ್ಲದೇ ಓರ್ವ ವ್ಯಕ್ತಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದು ಸಹ ಸೆರೆಯಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್‌ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್‌ ಸಂಸದೆ

  • ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಮಂಡ್ಯ: ‘ಅಲ್ಲಾಹು ಅಕ್ಬರ್’ ಎಂದು ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ್ದಾರೆ.

    ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸೌದಿ ಪ್ರವಾಸಕ್ಕೆ ಹೊರಟಿದೆ. ಈ ಪ್ರವಾಸದ ಹಿಂದೆ ಏನಾದರೂ ಇದ್ಯಾ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿ ಭಾರೀ ಸುದ್ದಿಯಾಗಿದ್ದರು. ಈ ಹೇಳಿಕೆ ಹಿನ್ನೆಲೆ ಉಗ್ರ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ವೇಳೆ ಮುಸ್ಕಾನ್ ವಿದೇಶಿ ಪ್ರವಾಸ ಕೈಗೊಂಡಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.

    ಅಲ್ ಖೈದಾ ಸಂಘಟನೆ ಮುಸ್ಕಾನ್ ಹೊಗಳಿ ಗುಣಗಾನ ಮಾಡಿತ್ತು. ಇದರಿಂದ ಮುಸ್ಕಾನ್ ಬಗ್ಗೆ ಹೆಚ್ಚು ತನಿಖೆ ಮಾಡುವಂತೆ ಆಗ್ರಹ ಮಾಡಲಾಗಿತ್ತು. ಪರಿಣಾಮ ಪೊಲೀಸ್ ಇಲಾಖೆ ಮುಸ್ಕಾನ್ ಮತ್ತು ಕುಟುಂಬದವರನ್ನು ವಿಚಾರಣೆ ನಡೆಸಿತ್ತು. ಈ ನಡುವೆ ಮುಸ್ಕಾನ್ ಮನೆಗೆ ಬಂದೋಗುವವರ ಮೇಲೆ ಪೊಲೀಸ್ ಇಲಾಖೆ ಒಂದು ಕಣ್ಣು ಇಟ್ಟಿತ್ತು. ಆದರೆ ಈ ಕುಟುಂಬ ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25 ರಂದೇ ಸೌದಿಗೆ ತೆರಳಿದೆ. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಮುಸ್ಕಾನ್ ಕುಟುಂಬ ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಪ್ರವಾಸ ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಪ್ರವಾಸದ ಹಿಂದೆ ಇರುವ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯ ಪ್ರಾರಂಭವಾಗಿದೆ.

  • ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

    ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

    ಮಂಡ್ಯ: ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗುವ ಮೂಲಕ ವಿಶ್ವಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಇಂದು ಪರೀಕ್ಷೆಗೆ ಗೈರಾಗಿದ್ದಾಳೆ.

    ಹಿಜಬ್ ಸಂರ್ಘದ ವೇಳೆ ಫೆ.8 ರಂದು ಪಿಇಎಸ್ ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರೆ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಳು. ಈ ಘಟನೆ ನಡೆದ ಬಳಿಕ ಮುಸ್ಕಾನ್ ಕಾಲೇಜಿಗೆ ಆಗಮಿಸಿರಲಿಲ್ಲ. ಇದನ್ನೂ ಓದಿ:  ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ತಮಿಳುನಾಡಿನಿಂದ ಪ್ರಶಸ್ತಿ ಪ್ರಕಟ

    ಇಂದು ಮೈಸೂರು ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಕಾಂನ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಮುಸ್ಕಾನ್ ಕೂಡ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಮೂರನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿಲ್ಲ. ಅಲ್ಲದೇ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೂಡ ತೆಗೆದುಕೊಂಡಿಲ್ಲ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಮುಸ್ಕಾನ್ ಪಾಸ್‍ಪೋರ್ಟ್ ಪರಿಶೀಲನೆಗೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಮುಸ್ಲಿಂ ನಾಯಕರು ಮನೆಗೆ ಬಂದು ನಗದು ಬಹುಮಾನ ಪ್ರಕಟಿಸಿದ್ದರು.

    ಶಿಕ್ಷಣಕ್ಕಿಂತ ನಮಗೆ ಹಿಜಬ್ ಮುಖ್ಯ ಎಂದು ಹೇಳಿ ಈಗಾಗಲೇ ಕರ್ನಾಟಕದ ಹಲವು ಕಡೆ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌