Tag: Allah

  • ಎಲ್ಲರ ಜೊತೆಗೂಡಿ ಸಾಗುವಂತೆ ಇಸ್ಲಾಂ, ಅಲ್ಲಾ ನಮಗೆ ಕಲಿಸಿದ್ದಾನೆ- ಮೋದಿಗೆ ಫಾರೂಕ್‌ ಅಬ್ದುಲ್ಲಾ ಟಾಂಗ್

    ಎಲ್ಲರ ಜೊತೆಗೂಡಿ ಸಾಗುವಂತೆ ಇಸ್ಲಾಂ, ಅಲ್ಲಾ ನಮಗೆ ಕಲಿಸಿದ್ದಾನೆ- ಮೋದಿಗೆ ಫಾರೂಕ್‌ ಅಬ್ದುಲ್ಲಾ ಟಾಂಗ್

    ನವದೆಹಲಿ: ಮಂಗಳ ಸೂತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ಖಂಡಿಸಿದ್ದಾರೆ.

    ಈ ಸಂಬಂಧ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಲ್ಲಾ (Allah) ಮತ್ತು ಇಸ್ಲಾಂ (Islam) ನಮಗೆ ಎಲ್ಲರೊಂದಿಗೆ ಒಟ್ಟಾಗಿ ಸಾಗಲು ಕಲಿಸಿದೆ. ನಮ್ಮ ಧರ್ಮವು ನಮಗೆ ಇತರ ಧರ್ಮಗಳನ್ನು ಕೀಳಾಗಿ ಕಾಣುವುದನ್ನು ಕಲಿಸಿಲ್ಲ, ಬದಲಿಗೆ ಯಾವಾಗಲೂ ಇತರ ಧರ್ಮಗಳನ್ನು ಗೌರವಿಸಲು ಕಲಿಸಿದೆ. ಒಬ್ಬ ವ್ಯಕ್ತಿಯು ಮಂಗಳಸೂತ್ರವನ್ನು ಕಿತ್ತುಕೊಂಡರೆ ಅವನು ಮುಸ್ಲಿಮನಲ್ಲ ಎಂದು ವಾಗ್ದಾಳಿ ನಡೆಸಿದರು.

    2024ರ ಲೋಕಸಭಾ ಚುನಾವಣೆಗೆ (Loksabha Elections 2024) ಮುನ್ನ ಭಾನುವಾರ ಬನ್ಸ್ವಾರಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಬೆಂಗ್ಳೂರಿನ ಹಲ್ಲೆ ಪ್ರಸ್ತಾಪಿಸಿ ಮೋದಿ ಕಿಡಿ

    ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಅಲ್ಪಸಂಖ್ಯಾತ ಸಮುದಾಯ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿತ್ತು. ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಮಂಗಳಸೂತ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ದರು.

  • ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ: ಪರಮೇಶ್ವರ್

    ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ: ಪರಮೇಶ್ವರ್

    ತುಮಕೂರು: ಅಲ್ಲಾನ (Allah) ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ಆ ದೇವರ ಆಶೀರ್ವಾದ ಇಲ್ಲದೇ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ (G.Parameshwara) ಹೇಳಿದ್ದಾರೆ.

    ಗುರುವಾರ ಮುಸ್ಲಿಂ ಭಾಂಧವರ ಬಕ್ರಿದ್ (Bakrid) ಹಬ್ಬದ ಹಿನ್ನೆಲೆಯಲ್ಲಿ ಕೊರಟಗೆರೆ (Koratagere) ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ (Muslim) ಬಾಂಧವರಿಗೆ ಶುಭ ಕೋರಿದರು. ಈ ವೇಳೆ ಧಾರ್ಮಿಕ ಮುಖಂಡರು ಪರಮೇಶ್ವರ್ ಅವರಿಗೆ ಟೋಪಿ ಧಾರಣೆ ಮಾಡಿ ಸಿಎಂ ಆಗಲಿ ಎಂದು ಶುಭಹಾರೈಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಶಕ್ತಿ ಪ್ರದರ್ಶನ – ಜುಲೈ 13, 14ಕ್ಕೆ ಸಭೆ

    ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಬಕ್ರಿದ್ ಹಬ್ಬ ತ್ಯಾಗ ಬಲಿದಾನದ ಸಂಕೇತ. ಅಲ್ಲಾ ಬೇರೆ ಬೇರೆ ರೀತಿಯಲ್ಲಿ ಪರೀಕ್ಷೆ ಮಾಡುತ್ತಾನಂತೆ. ತನ್ನ ಮಗನನ್ನೂ ಬಲಿ ಕೊಡಬೇಕು ಎನ್ನುವ ತ್ಯಾಗ ದೊಡ್ಡದು. ರಂಜಾನ್ ವೇಳೆ ಇಲ್ಲಿಗೆ ಬಂದಿದ್ದೆ. ಆಗ ಚುನಾವಣೆ ಇತ್ತು. ಈ ಸಂದರ್ಭ ನಾನು ಬಂದು ಮತ ಕೇಳಿದ್ದೆ. ನನ್ನನ್ನು ಗೆಲ್ಲಿಸಿದ್ದೀರಿ ಎಂದರು. ಇದನ್ನೂ ಓದಿ: ಅಕ್ಕಿಗೆ ಕಲ್ಲು ಹಾಕಿದ್ರಿ, ಈಗ ಹಣ ಕೊಡೋದ್ರಲ್ಲೂ ಜನ್ರ ಮನಸ್ಸು ಕೆಡಿಸ್ಬೇಡಿ: ಹೆಚ್‌ಕೆ ಪಾಟೀಲ್

    ಮಹಮ್ಮದ್ ಇಬ್ರಾಹಿಂ ತನ್ನ ಮಗನನ್ನೇ ಅಲ್ಲಾನಿಗೆ ಬಲಿ ಕೊಟ್ಟಿದ್ದ. ಅಂತಹ ಮಹಾನ್ ಬಲಿದಾನದ ಸಂಕೇತ ಬಕ್ರಿದ್. ಎಲ್ಲರಿಗೂ ಶುಭಕಾಮನೆ ಹೇಳಿದ್ದೇನೆ. ಭಾರತ ಶಾಂತಿ ನಂಬಿದ ದೇಶ. ಸಂವಿಧಾನದಲ್ಲೇ ಅದನ್ನು ಅಳವಡಿಸಿಕೊಂಡಿದ್ದೇವೆ ಎಂದರು. ಈ ಬಾರಿಯ ಚುನಾವಣೆಯಲ್ಲಿ (Election) ಕಾಂಗ್ರೆಸ್‌ಗೆ ಮುಸ್ಲಿಂ ಬಾಂಧವರ ಬಹುಪಾಲು ಮತದ ವಿಚಾರವಾಗಿ ಮಾತನಾಡಿದ ಅವರು, ಎಲ್ಲೋ ಒಂದುಕಡೆ ಮುಸ್ಲಿಮರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು. ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್‌ಗೆ ಮತಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯಗೆ ನೋಟಿಸ್

    ಕಾಂಗ್ರೆಸ್ ಜ್ಯಾತ್ಯಾತೀತ ಪಕ್ಷ. ಹಾಗಾಗಿ ಅವರು ನಮ್ಮ ಜೊತೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿಯ ಜೊತೆಗೆ ಶಾಂತಿ ಕಾಪಡಬೇಕಿದೆ. ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ದ್ವೇಷ ಸಾಧಿಸಲು ಹೋಗುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಾಜ್ಯದ ಶ್ರೀಮಂತ ದೇವಸ್ಥಾನಗಳ ಪಟ್ಟಿ ಬಿಡುಗಡೆ – ಯಾವ ದೇವಾಲಯದ ಆದಾಯ, ಖರ್ಚು ಎಷ್ಟು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಅಲ್ಲಾ’ ಎಂಬ ಪದ ಸಂಸ್ಕೃತದಿಂದ ಬಂದಿದೆ: ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಹೇಳಿಕೆ

    ‘ಅಲ್ಲಾ’ ಎಂಬ ಪದ ಸಂಸ್ಕೃತದಿಂದ ಬಂದಿದೆ: ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಹೇಳಿಕೆ

    ಲಕ್ನೋ: ‘ಅಲ್ಲಾ’ (Allah) ಎಂಬ ಪದ ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತದಿಂದ (Sanskrit) ಬಂದಿದೆ ಎಂದು ವಾರಣಾಸಿಯ (Varanasi) ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ನಿಶ್ಚಲಾನಂದ ಸರಸ್ವತಿ (Shankaracharya Nischalanand Saraswati) ಹೇಳಿಕೆ ನೀಡಿದ್ದಾರೆ.

    ಅಲ್ಲಾ ಎಂಬ ಪದ ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ. ಈ ಪದವನ್ನು ದುರ್ಗಾ ದೇವಿಯನ್ನು ಪ್ರಾರ್ಥಿಸಲು ಬಳಸಲಾಗುತ್ತದೆ. ಜಗತ್ತಿನಲ್ಲಿ ಇರುವುದು ಕೇವಲ ಒಂದೇ ಧರ್ಮ. ಅದು ಹಿಂದೂ ಸನಾತನ ಧರ್ಮ. ಉಳಿದ ಎಲ್ಲಾ ಧರ್ಮಗಳು ಕೇವಲ ಪಂಗಡಗಳು. ಧರ್ಮದ ಬಗ್ಗೆ ಪ್ರಶ್ನೆಯನ್ನು ಎತ್ತುವವರು ಮೊದಲು ಸಂಸ್ಕೃತ ವ್ಯಾಕರಣವನ್ನು ಕಲಿತುಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ದೆಹಲಿ ಪಾಲಿಕೆಯಲ್ಲಿ ಹೈಡ್ರಾಮಾ – ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ, ಆಪ್ ಸದಸ್ಯರು

    ‘ಅಲ್ಲಾ’ ಮತ್ತು ‘ಓಂ’ ಪದಗಳೆರಡೂ ಒಂದೇ ಎಂಬ ಮೌಲಾನಾ ಸೈಯದ್ ಅರ್ಷದ್ ಮದನಿಯವರ ಹೇಳಿಕೆಯನ್ನು ಟೀಕಿಸಿದ ನಿಶ್ಚಲಾನಂದ ಸರಸ್ವತಿ, ಬೇರೆ ಧರ್ಮದ ಗ್ರಂಥಗಳ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ರಾಮಚರಿತಮಾನಸಗಳನ್ನು ಪ್ರಶ್ನಿಸುವವರು ಚಾಣಕ್ಯ ನೀತಿಯನ್ನು ಓದಬೇಕು ಎಂದರು.

    ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ಹಾಡಿ ಹೊಗಳಿದ ಅವರು, ಶಾಸ್ತ್ರಿ ಅವರು ಅಲೆದಾಡುತ್ತಿರುವ ಹಿಂದೂಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ದೇವರ ಹೆಸರನ್ನು ತೆಗೆದುಕೊಂಡು ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಎಂದಿಗೂ ತಾವು ಪವಾಡಗಳನ್ನು ಮಾಡಿರುವುದಾಗಿ ಹೇಳಿಕೊಂಡಿಲ್ಲ. ಅವರು ಹೇಳಿರುವ ಎಲ್ಲಾ ವಿಚಾರಗಳೂ ನಿಜವಾಗಿದೆ. ಇದಕ್ಕೆಲ್ಲಾ ಕಾರಣ ಭಗವಾನ್ ಹನುಮಂತನ ಶಕ್ತಿ ಎಂದರು. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಪಂಜಾಬ್ ಆಪ್ ಶಾಸಕ ಬಂಧನ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಮಿಳಿನ ಖ್ಯಾತ ನಟ ವಿಶಾಲ್ ದೇವರ ಬಗ್ಗೆ ಅಪಾರ ನಂಬಿಕೆವುಳ್ಳವರು. ಅವರು ಯಾವ ಜಾತಿಯರು ಎಂದು ಈವರೆಗೂ ಅಭಿಮಾನಿಗಳು ಕೇಳದೇ ಆರಾಧಿಸುತ್ತಾ ಬಂದಿದ್ದಾರೆ. ಸದ್ಯ ವಿಶಾಲ್ ಮಾಡಿರುವ ಒಂದು ಟ್ವಿಟ್ ನಿಂದಾಗಿ ವಿಶಾಲ್ ಯಾವ ಧರ್ಮದವರು ಎಂದು ಹುಡುಕುತ್ತಿದ್ದಾರೆ ನೆಟ್ಟಿಗರು. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ವಿಶಾಲ್ ಅವರ ಸಹೋದರಿ ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿರುವ ಅವರು, ‘ನಾನು ಮತ್ತೆ ಅಂಕಲ್ ಆಗಿರುವೆ. ಮತ್ತೊಮ್ಮೆ ಅಂಕಲ್ ಆಗಿರುವುದು ಸಂಭ್ರಮ ತಂದಿದೆ. ನನ್ನ ಸಹೋದರಿ ಐಶು ಅವರು ರಾಜಕುಮಾರಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಮತ್ತು ಸಹೋದರಿಗೂ ಶುಭ ಹಾರೈಸಿ. ಇಬ್ಬರಿಗೂ ಇನ್ಶ್ಯಾ ಅಲ್ಲಾಹ್ ನ ಆಶೀರ್ವಾದವಿರಲಿ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ಶ್ಯಾ ಅಲ್ಲಾಹ್’ ಎಂಬ ಪದವೇ ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಅಲ್ಲಾಹ್ ದೇವರ ಆಶೀರ್ವಾದ ಕೋರಿರುವ ವಿಶಾಲ್ ಹಾಗಾದರೆ, ಇಸ್ಲಾಂಗೆ ಮತಾಂತರ ಆಗಿದ್ದಾರಾ ಎಂದು ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಪದವನ್ನು ಅವರು ಹಾಕಿರುವುದಾದರೂ ಏತಕ್ಕೆ ಎನ್ನುವ ಚರ್ಚೆ ಕೂಡ ತಮಿಳು ನಾಡಿನಲ್ಲಿ ನಡೆದಿದೆ. ಅದಕ್ಕೆ ವಿಶಾಲ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲು ಹೋಗಿಲ್ಲ.

    ಸಮಾಜಮುಖಿ ಕಾರ್ಯಗಳಿಂದಾಗಿ ವಿಶಾಲ್ ಎಲ್ಲರ ಪ್ರೀತಿಯ ನಟರಾಗಿ ಉಳಿದುಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ನಿಧನರಾದಾಗ, ಅಪ್ಪು ನೋಡಿಕೊಳ್ಳುತ್ತಿದ್ದ ಅಷ್ಟೂ ಮಕ್ಕಳನ್ನು ದತ್ತು ಪಡೆದುಕೊಂಡು ಓದಿಸುತ್ತೇನೆ ಎಂದು ಹೇಳಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅವರು ಗಿಡಗಳನ್ನು ನೆಟ್ಟು, ಪುನೀತ್ ಅಭಿಮಾನಿಗಳು ಪ್ರೀತಿಗೂ ವಿಶಾಲ್ ಪಾತ್ರರಾಗಿದ್ದರು. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಸದ್ಯ ವಿಶಾಲ್ ಅವರು ಲಾಠಿ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸುನೈನಾ ಅವರು ವಿಶಾಲ್ ಗೆ ನಾಯಕಿಯಾಗಿ ನಟಿಸಿದ್ದಾರೆ. ರಮಣ ಮತ್ತು ನಂದು ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಒಂದು ಮೀನಿಗೆ 5 ಲಕ್ಷ ರೂ. – ಬೆಲೆ ಕಡಿಮೆ ಎಂದ ಮಾಲೀಕ

    ಒಂದು ಮೀನಿಗೆ 5 ಲಕ್ಷ ರೂ. – ಬೆಲೆ ಕಡಿಮೆ ಎಂದ ಮಾಲೀಕ

    ಲಕ್ನೋ: ಕೇವಲ ಒಂದು ಮೀನಿಗೆ ಗ್ರಾಹಕರೊಬ್ಬರು 5 ಲಕ್ಷ ರೂ. ನೀಡಲು ಮುಂದಾದ್ರೂ ಮಾಲೀಕ ಮಾತ್ರ ಮಾರಾಟ ಮಾಡಲ್ಲ ಎಂದು ಹೇಳಿದ್ದಾರೆ. ಈ ವಿಶೇಷ ಮೀನಿನ ಮೇಲೆ ಉರ್ದುವಿನಲ್ಲಿ ‘ಅಲ್ಲಾಹ’ ಎಂದು ಬರೆಯಲಾಗಿದ್ದು, ಕೆಲವರು ಜಲಚರಕ್ಕಾಗಿ ಲಕ್ಷಾಂತರ ರೂಪಾಯಿ ನೀಡಲು ಮುಂದಾಗುತ್ತಿದ್ದಾರೆ.

    ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಕೈರಾನಾದಲ್ಲಿರುವ ಈ ವಿಶೇಷ ಮೀನು ನೋಡಲು ಜನರು ದೂರದಿಂದ ಆಗಮಿಸುತ್ತಿದ್ದಾರೆ. ಶಬಾಬ್ ಅಹಮದ್ ಎಂಬವರು ಎಂಟು ತಿಂಗಳ ಹಿಂದೆ ಪುಟ್ಟ ಮೀನನ್ನು ತಂದು ಅಕ್ವೇರಿಯಂನಲ್ಲಿ ಸಾಕುತ್ತಿದ್ದರು. ಮೀನು ದೊಡ್ಡದಾದಂತೆ ಅದರ ಮೇಲ್ಭಾಗದಲ್ಲಿ ಅಲ್ಲಾಹ ಎಂಬ ಅಕ್ಷರಗಳು ಕಾಣಿಸತೊಡಗಿದವು. ಈ ಮೀನು ಮನೆಗೆ ಬಂದಾಗಿನಿಂದ ನಮಗೆ ಒಳ್ಳೆಯದಾಗುತ್ತಿದೆ ಎಂಬುವುದು ಅಹಮದ್ ಅವರ ಬಲವಾದ ನಂಬಿಕೆ.

    ಶಾಮಲಿ ನಗರದ ಹಾಜಿ ರಶಿದ್ ಖಾನ್ ಎಂಬವರು 5 ಲಕ್ಷ ರೂ.ಗೆ ಮೀನು ನೀಡುವಂತೆ ಕೇಳಿದ್ದಾರೆ. ರಶಿದ್ ಖಾನ್ 5 ಲಕ್ಷಕ್ಕಿಂತೂ ಹೆಚ್ಚು ಹಣ ನೀಡಲು ಸಿದ್ಧರಿದ್ದಾರೆ. ಮೀನಿನ ಫೋಟೋಗಳು ವಾಟ್ಸಪ್ ನಲ್ಲಿ ಹರಿದಾಡಿದ್ದರಿಂದ ಶಾಮಲಿ ಜಿಲ್ಲೆಯ ಜನರು ಮನೆಗೆ ಬರುತ್ತಿದ್ದಾರೆ. ಕೆಲವು ಸಣ್ಣ ಮೀನುಗಳು ವಿಶೇಷ ಬರಹವುಳ್ಳ ಮೀನು ಇದೆ ಎಂದು ಅಹಮದ್ ಹೇಳುತ್ತಾರೆ.

    ಮನೆಗೆ ಆಗಮಿಸುತ್ತಿರುವ ಜನರು ಮೀನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಮೀನಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ರಶಿದ್ ಖಾನ್ ಅವರ ರೀತಿಯಲ್ಲಿ ಮೀನು ಖರೀದಿಗೆ ಮುಂದಾಗುತ್ತಿದ್ದು, ಒಳ್ಳೆಯ ಬೆಲೆ ಸಿಕ್ಕ ಕೂಡಲೇ ಮಾರುತ್ತೇನೆ. ಈ ಮೀನು ಮಾರಾಟದಿಂದ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದು ಅಹಮದ್ ತಿಳಿಸಿದ್ದಾರೆ.