Tag: All OK Alok Babu

  • ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಕಾರವಾರ: ಪೊಲೀಸರ ಲಾಠಿಗೆ ಹೆದರಿದ ಅಭಿಮಾನಿಯೊಬ್ಬ ತಪ್ಪಿಸಿಕೊಳ್ಳಲು ಆಲ್ ಓಕೆ ಗಾಯಕ ಅಲೋಕ್ ಬಾಬುರನ್ನು ವೇದಿಕೆಯಲ್ಲೇ ತಳ್ಳಿ ಓಡಿದ್ದು, ಇದರಿಂದಾಗಿ ವೇದಿಕೆಯಲ್ಲಿ ಹಾಡು ಹೇಳುತ್ತಿದ್ದ ಕನ್ನಡ ರ‍್ಯಾಪರ್ ಆಲ್ ಓಕೆ ಖ್ಯಾತಿಯ ಅಲೋಕ್ ಬಾಬು ವೇದಿಕೆಯಲ್ಲೇ ಬಿದ್ದು ಪಲ್ಟಿಯಾಗಿದ್ದಾರೆ.

    ಕಾರವಾರ (Karwar) ನಗರದ ಮಯೂರವರ್ಮ ವೇದಿಕೆಯಲ್ಲಿ ನಡೆಯುತ್ತಿದ್ದ ಕರುನಾಡು ಕರಾವಳಿ ಉತ್ಸವದಲ್ಲಿ ಈ ಘಟನೆ ನಡೆದಿದೆ. ಆಲ್‌ ಓಕೆ ರ‍್ಯಾಪರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ವೇದಿಕೆ ಬಳಿಯೇ ಗುಂಪುಗೂಡಿ ಅಲೋಕ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು.

    ಈ ವೇಳೆ ವೇದಿಕೆ ಹತ್ತಿ ಕುಣಿದಿದ್ದ ಓರ್ವ ಅಭಿಮಾನಿ ಗಾಯಕನೊಂದಿಗೆ ಕುಣಿದು ತಬ್ಬಿಕೊಳ್ಳಲು ಮುಂದಾಗಿದ್ದ ವೇಳೆ ಪೊಲೀಸ್ ಸಿಬ್ಬಂದಿ ಲಾಠಿ ಹಿಡಿದು ಹೊಡೆಯಲು ಬಂದಿದ್ದಾರೆ. ಈ ವೇಳೆ ಲಾಠಿ ಹೊಡೆತಕ್ಕೆ ಹೆದರಿದ ಅಭಿಮಾನಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗಾಯಕ ಅಲೋಕ್‌ನನ್ನು ತಳ್ಳಿ ಓಡಿದ್ದಾನೆ. ಈ ವೇಳೆ ಆಯತಪ್ಪಿ ವೇದಿಕೆಯಲ್ಲಿ ರ‍್ಯಾಪರ್ ಅಲೋಕ್ ಬಿದ್ದಿದ್ದಾರೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    ವೇದಿಕೆಯಲ್ಲಿ ಬಿದ್ದರೂ ನೋ ಪ್ರಾಬ್ಲಮ್ ಎನ್ನುತ್ತಾ ಹಾಡು ಮುಂದುವರೆಸಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸಾಲಗಾರರ ಕಿರುಕುಳ – ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಆಲ್ ಒಕೆ ಅಲೋಕ್ ಬಾಬು

    ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಆಲ್ ಒಕೆ ಅಲೋಕ್ ಬಾಬು

    ಬೆಂಗಳೂರು: ಕನ್ನಡದಲ್ಲಿ ರ‍್ಯಾಪರ್ ಹಾಡುಗಳ ಮೂಲಕ ಫೇಮಸ್ ಆಗಿರುವ ಅಲೋಕ್ ಬಾಬು ಅಲಿಯಾಸ್ ಆಲ್‍ಓಕೆ ಬಾಬು ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ.

    All OK Alok Babu

    ಹೌದು, 2019ರಲ್ಲಿ ತಮ್ಮ ಬಾಲ್ಯದ ಗೆಳತಿ ನಿಷಾ ಜೊತೆ ಸಪ್ತಪದಿ ತುಳಿದ ಅಲೋಕ್ ಬಾಬು ಇದೀಗ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗಿನ ಜಾವ 2.14ಕ್ಕೆ ನಿಷಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ಅಲೋಕ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: WhatsApp, Facebook, Instagram 9 ಗಂಟೆ ಬಂದ್ – ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ

    All OK Alok Babu

    ಸದ್ಯ ತಂದೆಯಾಗಿರುವ ಅಲೋಕ್ ಬಾಬು, ಪತ್ನಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ನಿಷಾ ಬೇಬಿ ಬಂಪ್‍ನಲ್ಲಿ ಕಾಣಿಸಿಕೊಂಡಿದ್ದು, ಅಲೋಕ್ ಪತ್ನಿಯ ಬೇಬಿ ಬಂಪ್ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ನಮಸ್ಕಾರ, ನಮಗೆ ಇಂದು ಗಂಡು ಮಗು ಜನಿಸಿರುವ ವಿಚಾರವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಆರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು, ಹರಸಿ, ಹಾರೈಸಿ, ಕೈ ಹಿಡಿದು, ಬೆಳೆಸಿ ಈ ನಮ್ಮ ಪುಟ್ಟ ಕಂದನನ್ನು, ಇನ್ಮುಂದೆ ಇವನು ನಿಮ್ಮ ಸ್ವತ್ತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

     

    View this post on Instagram

     

    A post shared by Alok Babu R (@all_ok_official)

    ಕನ್ನಡದಲ್ಲಿ ಹಲವಾರು ರ‍್ಯಾಪ್ ಸಾಂಗ್ ಹಾಡಿರುವ ಅಲೋಕ್ ಬಾಬು ಅವರು ಇತ್ತೀಚೆಗೆ ಹಾಡಿದ್ದ ಹ್ಯಾಪಿ ಆಗಿದೆ ರ‍್ಯಾಪ್ ಸಾಂಗ್ ಸಿಕ್ಕಾಪಟ್ಟೆ ಜನಪ್ರಿಯಗೊಂಡಿತ್ತು. ಈ ಮುನ್ನ ನಿರ್ದೇಶಕ ಶಿವಮಣಿ ಆ್ಯಕ್ಷನ್ ಕಟ್ ಹೇಳಿದ್ದ 2009ರಲ್ಲಿ ತೆರೆಕಂಡಿದ್ದ ಜೋಶ್ ಸಿನಿಮಾದಲ್ಲಿ ಅಲೋಕ್ ಬಾಬು ಅಭಿನಯಿಸಿದ್ದರು.