Tag: all india women congress general secretary

  • ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಗೆ ಸಿಕ್ತು ರಾಷ್ಟ್ರಮಟ್ಟದ ದೊಡ್ಡ ಜವಾಬ್ದಾರಿ!

    ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಗೆ ಸಿಕ್ತು ರಾಷ್ಟ್ರಮಟ್ಟದ ದೊಡ್ಡ ಜವಾಬ್ದಾರಿ!

    ಬೆಂಗಳೂರು: ಅಖಿಲ ಭಾರತ ಮಹಿಳಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಮಲಿಂಗ ರೆಡ್ಡಿ ಪುತ್ರಿ, ಜಯನಗರದ ಶಾಸಕಿಯಾಗಿರುವ ಸೌಮ್ಯ ರೆಡ್ಡಿ ಅವರನ್ನು ಎಐಸಿಸಿ ನೇಮಕ ಮಾಡಿದೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೌಮ್ಯ ರೆಡ್ಡಿಯವರು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿದ್ದಾರೆ ಎಂದು ಐಎನ್‍ಸಿ ಸಂದೇಶ್ ತಿಳಿಸಿದೆ.

    ಸಂಪುಟ ವಿಸ್ತರಣೆ ಸಮಯದಲ್ಲಿ ಸೌಮ್ಯ ರೆಡ್ಡಿ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಆದ್ರೆ ತಂದೆ ರಾಮಲಿಂಗ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ನನಗೆ ಈ ಸ್ಥಾನ ಬೇಡ ಎಂದು ಹೇಳಿದ್ದರು.

    ನನಗೀಗ ಯಾವ ರೀತಿಯ ಸಂಸದೀಯ ಕಾರ್ಯದರ್ಶಿ ಹಾಗೂ ಯಾವುದೇ ರೀತಿಯ ಹುದ್ದೆ ಬೇಡ. ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ದುಡಿದವರಿಗೆ ಸ್ವಲ್ಪ ಹಿಂದೇಟು ಆಗುವುದು ಖಂಡಿತ ಅದು ರಾಜಕೀಯದ ಒಂದು ಭಾಗ. ಆದ್ರೆ ಈ ರೀತಿ ಪಕ್ಷಕ್ಕೆ ನಿಷ್ಠೆಯಿಂದ ಇದ್ದವರಿಗೆ ಹಿಂದೇಟು ಆದರೆ ಬೇಸರವಾಗುತ್ತದೆ. ನಾನು ಮೊದಲನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ಇನ್ನೂ ನನ್ನ ಕ್ಷೇತ್ರದ ಹಲವಾರು ಕೆಲಸಗಳು ಮಾಡಲು ನನಗೆ ಬಹಳ ಸಮಯ ಬೇಕಾಗಿದೆ. ನನಗೆ ಪಾರ್ಲಿಮೆಂಟ್ ಸೆಕ್ರೆಟರಿಯ ಸ್ಥಾನಮಾನ ನೀಡಿರುವುದು ಸದ್ಯಕ್ಕೆ ಬೇಡ. ಅದು ಯಾರಿಗೆ ಅವಶ್ಯಕತೆ ಇದೆ ಅವರಿಗೆ ಕೊಡಿ ಎಂದು ತಿರಸ್ಕರಿಸಿದ್ದರು.

    ನನಗೆ ನನ್ನ ಕ್ಷೇತ್ರದ ಜನರಿಗೆ ಕೆಲ್ಸ ಮಾಡಿ ಅವರ ಋಣವನ್ನು ತೀರಿಸಬೇಕಾಗಿದೆ. ನನ್ನ ತಂದೆ 2 ಬಾರಿ ಡಿಸಿಸಿ ಅಧ್ಯಕ್ಷರಾಗಿ ಹಾಗೂ 7 ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳ ದುಡಿದಿದ್ದಾರೆ. ಆದ್ರೂ ನನ್ನ ತಂದೆಯವರಿಗೆ ಸಚಿವ ಸ್ಥಾನ ಸಿಗದಿರುವುದು ಬೆಸರದ ಸಂಗತಿ. ಕೇವಲ ಒಂದು ಶಾಸಕರಿಂದ ಈಗ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಶಾಸಕರಿದ್ದಾರೆ. ನಾನು ಅವರನ್ನು ಮಂತ್ರಿಯಾಗಿ ನೋಡಲು ಇಷ್ಟಪಡುತ್ತೇನೆ. ಬೆಂಗಳೂರಿನಲ್ಲಿ ಎಲ್ಲ 28 ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರು ಗೆಲ್ಲಲು ಶ್ರಮಿಸಬೇಕಾದ ಅಗತ್ಯ ಇದೆ ಅಂತ ಬರೆದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv