Tag: Aliya Bhat

  • ಮಂಡ್ಯದ ಗ್ರಾಮಕ್ಕೆ ಬೆಳಕು ಮೂಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

    ಮಂಡ್ಯದ ಗ್ರಾಮಕ್ಕೆ ಬೆಳಕು ಮೂಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

    ಮುಂಬೈ: ಸಿನಿಮಾರಂಗದ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿರುತ್ತಾರೆ. ಈಗ ಬಾಲಿವುಡ್ ನಟಿ ಆಲಿಯಾ ಭಟ್ ಅವರಿಂದ ಮಂಡ್ಯದ ಗ್ರಾಮವೊಂದಕ್ಕೆ ಬೆಳಕಿನ ಭಾಗ್ಯ ಲಭಿಸಿದೆ.

    ಹೌದು, ಕರ್ನಾಟಕದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಆಲಿಯಾ ಭಟ್ ರಿಂದ ವಿದ್ಯುತ್ ದೊರೆತಿದೆ. ಇದೇ ವರ್ಷ ಆರಂಭವಾದ `ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್’ ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ನಲ್ಲಿ ನಡೆಸಲಾದ ಅಭಿಯಾನದ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ಒಂದು ವಿಶೇಷವಾದ ಬಟ್ಟೆಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು.

    ಬೆಂಗಳೂರು ಮೂಲದ ಎಆರ್ ಓಎಚ್‍ಎ ಸಂಸ್ಥೆಯೊಂದು ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಇದು ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ಬಳಿಕ ಅದರಿಂದ ವಿದ್ಯುತ್ ಇಲ್ಲದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೋಲಾರ್ ದೀಪಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

    ಈ ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮದಡಿಯಲ್ಲಿ ಚಾರಿಟಿಗಾಗಿ ಆಲಿಯಾ ಭಟ್ ಅವರನ್ನ ಸಂಪರ್ಕಿಸಿದೆ. ಆಗ ಆಲಿಯಾ ಭಟ್ ಮಾರಾಟಕ್ಕಿಟ್ಟಿದ್ದ ಬಟ್ಟೆಯಿಂದ ಬಂದ ಹಣವನ್ನು ಈ ಸಂಸ್ಥೆಗೆ ನೀಡಿದ್ದಾರೆ. ಅವರು ನೀಡಿದ ಹಣದಿಂದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.

    ಈ ಯೋಜನೆಯ ಬಗ್ಗೆ ಮಾತನಾಡಿದ ಅಲಿಯಾ, “ಭಾರತದಲ್ಲಿ ಅನೇಕ ಕುಟುಂಬಗಳು ಕತ್ತಲೆಯಲ್ಲಿ ಜೀವಿಸುತ್ತಿವೆ. ಅವರಿಗೆ ಮನೆಗಳನ್ನು ಬೆಳಗಿಸಲು ಹೊಸ ಮತ್ತು ಸಮರ್ಥನೀಯ ಮಾರ್ಗ ಇದಾಗಿದ್ದು, ಪರಿಸರ ಸ್ನೇಹಿ ಸೌರ ದೀಪಗಳಾಗಿವೆ. ಈ ಸಂಸ್ಥೆ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ಸಮುದಾಯದವರ ಜೀವನ ಗುಣಮಟ್ಟವನ್ನು ಸುಧಾರಿಸಿದೆ. ಕಿಕ್ಕೇರಿ ಗ್ರಾಮದ 200 ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

    ಆಲಿಯಾ ಭಟ್ ಇತ್ತೀಚೆಗೆ ಮೇಘನಾ ಗುಲ್ಜಾರ್ ಅವರ `ರಾಜಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಣವೀರ್ ಸಿಂಗ್ ಅಭಿನಯದ `ಜೊಯಾ ಅಖ್ತರ್ ಗಲ್ಲಿ ಬಾಯ್’ ನ್ಲಲೂ ನಟಿಸುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಅಯನ್ ಮುಖರ್ಜಿಯವರ `ಬ್ರಹ್ಮಸ್ತರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಮೌನಿ ರಾಯ್, ಅಮಿತಾಬ್ ಬಚ್ಚನ್, ಕಲಾಂಕ್, ವರುಣ್ ಧವನ್, ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಸೇರಿದಂತೆ ತಾರಾ ಬಳಗವಿದೆ.

  • ಮುಂದಿನ ವರ್ಷ ಶುರುವಾಗುತ್ತಾ ಸಡಕ್-2?

    ಮುಂದಿನ ವರ್ಷ ಶುರುವಾಗುತ್ತಾ ಸಡಕ್-2?

    ಮುಂಬೈ: 90ರ ದಶಕದಲ್ಲಿ ತೆರೆ ಕಂಡಿದ್ದ ಸಂಜಯ್ ದತ್ ನಾಯಕನಾಗಿದ್ದ ಸಡಕ್ ಚಿತ್ರ ಬಾಲಿವುಡ್‍ನ ಹಿಟ್ ಚಿತ್ರವಾಗಿ ದಾಖಲಾಗಿತ್ತು. ಕಥೆಯಿಂದ ಮೊದಲ್ಗೊಂಡು ಹಾಡಿನವರೆಗೆ ಎಲ್ಲವೂ ಜನಮನ ಸೆಳೆದಿತ್ತು. ಈ ಚಿತ್ರದಿಂದಲೇ ಸಂಜಯ್ ದತ್ ನಾಯಕನಾಗಿ ಬಾಲಿವುಡ್‍ನಲ್ಲಿ ಮತ್ತಷ್ಟು ಬೇಡಿಕೆ ಗಳಿಸಿಕೊಂಡಿದ್ದೀಗ ಇತಿಹಾಸ.

    ಇದೀಗ ಸಡಕ್ 2 ಚಿತ್ರ ಕಾರ್ಯಾರಂಭ ಮಾಡುವ ಬಗ್ಗೆ ಬಾಲಿವುಡ್ ತುಂಬಾ ಗುಲ್ಲೆದ್ದಿದೆ. ಇದು ನಿರ್ದೇಶಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರುಗಳ ಕನಸಿನ ಪ್ರಾಜೆಕ್ಟ್. ಕಳೆದ ವರ್ಷವೇ ಈ ಚಿತ್ರದ ಬಗ್ಗೆ ಇವರಿಬ್ಬರೂ ಹೇಳಿಕೊಂಡಿದ್ದರು. ಆದರೆ ವರ್ಷಗಳ ಕಾಲ ಇದಕ್ಕಾಗಿ ತಯಾರಿ ನಡೆಸಿ ಬೇರೆ ಕೆಲಸ ಕಾರ್ಯಗಳಲ್ಲಿ ಕಳೆದು ಹೋಗಿದ್ದ ಭಟ್ ಬ್ರದರ್ಸ್ ಇದೀಗ ತಮ್ಮ ಕನಸಿನ ಸಡಕ್ ವಿಚಾರವಾಗಿ ಕಾರ್ಯಾರಂಭ ಮಾಡಿದಂತಿದೆ!

    ಸಡಕ್ 2 ಚಿತ್ರವನ್ನು 2019ರ ಆರಂಭದಲ್ಲಿಯೇ ಆರಂಭಿಸಲು ಭಟ್ ಬ್ರದರ್ಸ್ ನಿರ್ಧರಿಸಿದ್ದಾರೆ. ಆ ಸಮಯದಲ್ಲಿ ಸಮಯ ಹೊಂದಿಸುವ ಭರವಸೆ ಸಂಜಯ್ ದತ್ ಕಡೆಯಿಂದಲೂ ಸಿಕ್ಕಿದೆ. ತೊಂಭತ್ತರ ದಶಕದಲ್ಲಿ ಸಡಕ್ ಚಿತ್ರ ಸೃಷ್ಟಿಸಿದಂಥಾದ್ದೇ ದಾಖಲೆಯನ್ನು ಮತ್ತೊಮ್ಮೆ ಸೃಷ್ಟಿಸುವ ಸಲುವಾಗಿ ಭಟ್ ಬ್ರದರ್ಸ್ ಅಣಿಯಾಗಲಾರಂಭಿಸಿದ್ದಾರೆ.

    ಮಹೇಶ್ ಭಟ್ ಅವರ ಹೋಂ ಬ್ಯಾನರಿನಲ್ಲಿಯೇ ಈ ಚಿತ್ರ ತಯಾರಾಗಲಿದೆಯಂತೆ. ಈ ಚಿತ್ರದಲ್ಲಿ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸೋದು ಪಕ್ಕಾ. ಅದ್ಯಾವ ಚಿತ್ರವೇ ಇದ್ದರೂ ಆಲಿಯಾ ತನ್ನ ಹೋಂ ಬ್ಯಾನರಿನ ಈ ಚಿತ್ರದಲ್ಲಿ ನಟಿಸಲು ತಯಾರಾಗಿದ್ದಾಳಂತೆ!.

  • ಆಲಿಯಾ ಭಟ್ ಜೊತೆ ಬ್ರೇಕಪ್-ಮತ್ತೊಬ್ಬ ನಟಿಯೊಂದಿಗೆ ಸಿದ್ದಾರ್ಥ್ ಡೇಟಿಂಗ್ ಶುರು

    ಆಲಿಯಾ ಭಟ್ ಜೊತೆ ಬ್ರೇಕಪ್-ಮತ್ತೊಬ್ಬ ನಟಿಯೊಂದಿಗೆ ಸಿದ್ದಾರ್ಥ್ ಡೇಟಿಂಗ್ ಶುರು

    ಮುಂಬೈ: ಬಾಲಿವುಡ್‍ನ ಕ್ಯೂಟ್ ಆ್ಯಂಡ್ ಯಂಗ್ ಜೋಡಿ ಎಂದೇ ಕರೆಸಿಕೊಳ್ಳುವ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬ್ರೇಕಪ್ ಬಳಿಕ ಸಿದ್ದಾರ್ಥ್ ಬೇರೊಬ್ಬ ಯುವತಿಯೊಂದಿಗೆ ಡೇಟಿಂಗ್‍ನಲ್ಲಿದ್ದಾರೆ ಎನ್ನುವ ಮತ್ತೊಂದು ಸುದ್ದಿ ವೈರಲ್ ಆಗಿದೆ.

    `ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಇಬ್ಬರು ಪಾದಾರ್ಪಣೆ ಮಾಡಿದ್ದರು. ನಂತರ ಇಬ್ರೂ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಚಾಪನ್ನು ಬಾಲಿವುಡ್ ನಲ್ಲಿ ಮೂಡಿಸುತ್ತಿದ್ದಾರೆ. ಆದ್ರೆ ಇತ್ತೀಚೆಗೆ ಆಲಿಯಾ ಭಟ್ ಜೊತೆ ನಟಿಸಲು ಬಂದಿದ್ದ ಜಾಹಿರಾತಿನ ಆಫರ್‍ನ್ನು ಸಿದ್ದಾರ್ಥ್ ತಿರಸ್ಕರಿಸಿದ್ದಾರೆ ಅಂತಾ ಎನ್ನಲಾಗಿದೆ.

    ಖಾಸಗಿ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಆಲಿಯಾ ಮತ್ತು ಸಿದ್ದಾರ್ಥ್ ದೂರವಾಗಿದ್ದಾರೆ. ಜನವರಿ 12 ರಂದು ಶಾರೂಖ್ ಖಾನ್ ಮನೆಯಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಇಬ್ಬರೂ ಅಂತರವನ್ನು ಕಾಯ್ದುಕೊಂಡಿದ್ದರು ಅಂತ ವರದಿಯಾಗಿದೆ.

    ಶಾರೂಖ್ ಖಾನ್ ನಿವಾಸದಲ್ಲಿ ಪಾರ್ಟಿಯಲ್ಲಿ ಸಿದ್ದಾರ್ಥ್ ಜೊತೆ ಹೊಸ ಗೆಳತಿ ಸಹ ಬಂದಿದ್ದರು. ಕಾರಿನಿಂದ ಕೆಳಗೆ ಕೇವಲ ಸಿದ್ದಾರ್ಥ್ ಹೊರ ಬಂದರೆ ವಿನಃ ಗೆಳತಿ ಮಾತ್ರ ಬರಲಿಲ್ಲ. ಸಿದ್ದಾರ್ಥ್ ಗೆಳತಿ ಯಾರೆಂಬುದೂ ಇದೂವರೆಗೂ ರಿವೀಲ್ ಆಗಿಲ್ಲ. ಸಿದ್ದಾರ್ಥ್ ಮತ್ತು ಆಲಿಯಾ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮಾತ್ರ ಕೆಲ ದಿನಗಳಿಂದ ತಿಳಿದು ಬಂದಿದೆ.