Tag: aliya

  • ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ಬಾಲಿವುಡ್ (Bollywood)  ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಸಂಸಾರದ ಸಮಸ್ಯೆ ಬೀದಿಯಲ್ಲಿ ರಂಪಾಟವಾಗುತ್ತಿದೆ. ನಟನ ವಿರುದ್ಧ ಪತ್ನಿ ಆಲಿಯಾ (Wife Aaliya) ಸಾಲು ಸಾಲು ಆರೋಪ ಮಾಡಿದ್ದಾರೆ. ನವಾಜುದ್ದೀನ್‌ನಿಂದ ಬೀದಿಗೆ ಬಂದಿರೋದಾಗಿ ಪತ್ನಿ ವೀಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.

    ನಟ-ನಟಿಯರ ಬದುಕು ಅಭಿಮಾನಿಗಳಿಗೆ ನಿದರ್ಶನವಾಗಬೇಕು. ಆದರೆ ಅವರೇ ಬದುಕೇ ಇದೀಗ ಮೂರಾಬಟ್ಟೆ ಆಗಿದೆ. ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ಅಕ್ಷರಶಃ ಬೀದಿಗೆ ಬಂದಿದೆ. ನವಾಜುದ್ದೀನ್ ಪತ್ನಿ ಆಲಿಯಾ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಬೀದಿಯಲ್ಲಿ ನಿಂತು ವಿಡಿಯೋ ಮಾಡಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

    ಕಳೆದ ಕೆಲವು ತಿಂಗಳಿಂದ ಅಲಿಯಾ ಪತಿ ಮತ್ತು ಅವರ ಕುಟುಂಬದ ವಿಚಾರ ಬೀದಿ ರಂಪಾಟವಾಗಿದೆ. ಇದೀಗ ತನ್ನನ್ನು ಮತ್ತು ಮಕ್ಕಳನ್ನು ಬೀದಿಗೆ ಹಾಕಿದ್ದಾನೆ ಎಂದು ವಿಡಿಯೋ ಮೂಲಕ ನಟನ ಪತ್ನಿ ಬಹಿರಂಗಪಡಿಸಿದ್ದಾರೆ. ಕಳೆದ ವಾರ ಆಲಿಯಾ ಮತ್ತು ಇಬ್ಬರು ಮಕ್ಕಳಾದ ಶೋರಾ ಮತ್ತು ಯಾನಿ ಅವರೊಂದಿಗೆ ನವಾಜುದ್ದೀನ್ ಅವರ ಅಂಧೇರಿ ಬಂಗಲೆಯಲ್ಲಿ ಉಳಿದುಕೊಂಡಿರುವುದಾಗಿ ಹೇಳಿದ್ದರು. ಅಲ್ಲಿ ಯಾವುದೇ ಸೌಲಭ್ಯವಿಲ್ಲ, ಸ್ನಾನ ಮಾಡಲು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ಮಕ್ಕಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾರೆ.

     

    View this post on Instagram

     

    A post shared by Aaliya Siddiqui (@aaliyanawazuddin)

    ತನ್ನ ಬಂಗಲೆ ಪ್ರವೇಶಿಸದಂತೆ ನವಾಜುದ್ದೀನ್ ಬಾಡಿಗಾರ್ಡ್ ನಿಯೋಜಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಮಕ್ಕಳೊಂದಿಗೆ ನವಾಜುದ್ದೀನ್ ಮನೆ ಮುಂದೆ ರಸ್ತೆಯಲ್ಲಿ ನಿಂತಿದ್ದಾರೆ. ಮಗ ಯಾನಿಯನ್ನು ಹತ್ತಿರದಲ್ಲೇ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದಾರೆ ಮಗಳು ಶೋರಾ ಜೋರಾಗಿ ಅಳುತ್ತಿದ್ದಾಳೆ. ಇಬ್ಬರೂ ಮಕ್ಕಳನ್ನು ಸಹ ಬಂಗಲೆಯಿಂದ ಹೊರಹಾಕಿದ್ದಾರೆ. ಮನೆಯೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನನ್ನ ಬಳಿ ಕೇವಲ 81 ರೂಪಾಯಿ ಇದೆ. ನಾವು ಎಲ್ಲಿಯೂ ಹೋಗಿಲ್ಲ ಎಂದಿದ್ದಾರೆ. ಎಲ್ಲಿಗೆ ಹೋಗಬೇಕು, ಮುಂದೆ ಎನು ಎಂಬುದು ಗೊತ್ತಿಲ್ಲ. ನವಾಜ್ ಅವರು ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅವರು ತೀರಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಆಲಿಯಾ ಹೇಳಿದ್ದಾರೆ.