Tag: alimony

  • ಡಿವೋರ್ಸ್‌ ಬಳಿಕ ಪತ್ನಿಗೆ ಜೀವನಾಂಶ ಹೊಂದಿಸಲು ದರೋಡೆಗೆ ಯತ್ನ – ಮಾಜಿ ಪತಿ ಸೇರಿ ಮೂವರು ಅರೆಸ್ಟ್‌

    ಡಿವೋರ್ಸ್‌ ಬಳಿಕ ಪತ್ನಿಗೆ ಜೀವನಾಂಶ ಹೊಂದಿಸಲು ದರೋಡೆಗೆ ಯತ್ನ – ಮಾಜಿ ಪತಿ ಸೇರಿ ಮೂವರು ಅರೆಸ್ಟ್‌

    ನವದೆಹಲಿ: ವಿಚ್ಛೇದನದ (Divorce) ಬಳಿಕ ಪತ್ನಿಗೆ ಜೀವನಾಂಶ (Alimony) ನೀಡಲು ಹಣವಿಲ್ಲದೇ ವೃದ್ಧೆಯೊಬ್ಬರ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ ಪತಿ ಹಾಗೂ ಆತನ ಸಹಚರರನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.

    ಮಾ.31 ರಂದು ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಕೊರಿಯರ್ ಇದೆ ಎಂದು ಹೇಳಿಕೊಂಡು ಮನೆಯಲ್ಲಿದ್ದ ವೃದ್ಧೆಗೆ ಬಂದೂಕು ತೋರಿಸಿ ದರೋಡೆಗೆ ಯತ್ನಿಸಿದ್ದ. ಈ ವೇಳೆ ಇನ್ನೊಬ್ಬ ವ್ಯಕ್ತಿಯೂ ಗನ್‌ ಹಿಡಿದು ಬಂದಿದ್ದಾನೆ. ಇದನ್ನು ಕಂಡ ಆಕೆಯ ಮಗಳು ಓಡಿಹೋಗಿ ಮನೆಯ ಬಾಗಿಲನ್ನು ಲಾಕ್ ಮಾಡಿದ್ದಳು. ಬಳಿಕ ಮತ್ತೋರ್ವ ಸಹೋಚರನ ಜೊತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಇದನ್ನೂ ಓದಿ: Bengaluru | ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಟೆಕ್ಕಿ ಆತ್ಮಹತ್ಯೆ

    ಈ ಬಗ್ಗೆ ಸಮೀಪದ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ವೃದ್ಧೆ ಕಮಲೇಶ್ ಅರೋರಾ (72), ದೂರುದಾರ ಹೇಮಂತ್ ಕುಮಾರ್ ಅವರ ಪತ್ನಿ ಘಟನೆಯನ್ನು ವಿವರಿಸಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಗುಪ್ತಚರ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪಂಕಜ್ (25) ಮತ್ತು ನಿವಾಸಿ ರಾಮ ಸ್ವಾಮಿ (28) ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಪಂಕಜ್ ತನ್ನ ವಿಚ್ಛೇದನದ ನಂತರ ಜೀವನಾಂಶ ನೀಡಲು ಹಣ ಹೊಂದಿಸಲು ದರೊಡೆಗೆ ಮುಂದಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಬಂಧಿತ ಆರೋಪಿಗಳಿಂದ ಪೊಲೀಸರು ಒಂದು ಬೈಕ್, ದೇಶಿ ನಿರ್ಮಿತ ಪಿಸ್ತೂಲ್, ಒಂದು ಬ್ಯಾಗ್ ಮತ್ತು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ

  • ಡಿವೋರ್ಸ್‌ ಬಳಿಕ ಚಹಲ್‌ನಿಂದ 60 ಕೋಟಿ ಜೀವನಾಂಶ – ಧನಶ್ರೀ ಕುಟುಂಬ ಹೇಳಿದ್ದೇನು?

    ಡಿವೋರ್ಸ್‌ ಬಳಿಕ ಚಹಲ್‌ನಿಂದ 60 ಕೋಟಿ ಜೀವನಾಂಶ – ಧನಶ್ರೀ ಕುಟುಂಬ ಹೇಳಿದ್ದೇನು?

    ನವದೆಹಲಿ: ಟೀಂ ಇಂಡಿಯಾದ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಹಾಗೂ ಮತ್ತು ನಟಿ ಧನಶ್ರೀ (Dhanashree Verma) ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಇದರ ನಡುವೆ ಧನಶ್ರೀ ಕುಟುಂಬ ಯುಜ್ವೇಂದ್ರ ಚಾಹಲ್ ಅವರ ಬಳಿ 60 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವದಂತಿಯನ್ನು ಧನಶ್ರೀ ಕುಟುಂಬ ತಳ್ಳಿಹಾಕಿದೆ.

    ಜೀವನಾಂಶದ ಬಗ್ಗೆ ಪ್ರಸಾರವಾಗುತ್ತಿರುವ ಆಧಾರ ರಹಿತ ಹೇಳಿಕೆಗಳು, ಸುದ್ದಿಗಳಿಂದ ನಮಗೆ ಬೇಸರವಾಗಿದೆ. ಅಂತಹ ಯಾವುದೇ ಜೀವನಾಂಶದ ಬೇಡಿಕೆಯಿಟ್ಟಿಲ್ಲ ಅಥವಾ ನೀಡಲಾಗಿಲ್ಲ ಎಂದು ಧನಶ್ರೀ ವರ್ಮಾ ಅವರ ಸಂಬಂಧಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್‌, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?

    ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂತಹ ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ತೀರಾ ಬೇಜವಾಬ್ದಾರಿಯಾಗಿದೆ. ಇದು ಅವರ ಕುಟುಂಬಗಳನ್ನು ಸಹ ಅನಗತ್ಯವಾಗಿ ಮುಜುಗರಕ್ಕೀಡು ಮಾಡುತ್ತದೆ. ಮಾಹಿತಿಯನ್ನು ಹರಡುವ ಮೊದಲು ಸಂಯಮ ಮತ್ತು ಸತ್ಯ ಪರಿಶೀಲನೆ ಮಾಡಬೇಕು. ಪ್ರತಿಯೊಬ್ಬರ ಖಾಸಗಿ ಜೀವನದ ಬಗ್ಗೆ ಗೌರವದಿಂದ ವರ್ತಿಸುವಂತೆ ನಾವು ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

    ಯುಜ್ವೇಂದ್ರ ಚಾಹಲ್ ಮತ್ತು ನರ್ತಕಿ-ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿದ್ದಾರೆ. ಫೆ.19ರ ಮಂಗಳವಾರ ವಿಚಾರಣೆಯನ್ನು ಅಂತಿಮಗೊಂಡಿತ್ತು.

    ಚಹಲ್‌ ಆಸ್ತಿ ಎಷ್ಟಿದೆ?
    ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ದೇಶಕ್ಕಾಗಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಹಲ್‌ ಟೀಂ ಇಂಡಿಯಾದ ಟಾಪ್‌ ಬೌಲರ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಹಲ್‌ 160 ಐಪಿಎಲ್‌ (IPL) ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.

    2024ರ ಆವೃತ್ತಿಯಲ್ಲಿ ಚಹಲ್‌ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದರು. ಈ ವೇಳೆ ಅವರಿಗೆ 6.5 ಕೋಟಿ ರೂ. ನೀಡಿತ್ತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂ. ನೀಡಿ ಚಹಲ್‌ ಅವರನ್ನು ಖರೀದಿಸಿತ್ತು.

    ಚಾಹಲ್ ಅವರು 2019 ರಲ್ಲಿ ಜೀವನಶೈಲಿ ಬ್ರ್ಯಾಂಡ್ ‘ಚೆಕ್ಮೇಟ್’ ಅನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅವರು ಫಿಟ್‌ನೆಸ್ ಅಪ್ಲಿಕೇಶನ್ ʼಗ್ರಿಪ್ʼ ಮತ್ತು ʼYUZOʼ ಬಟ್ಟೆ ಲೈನ್‌ನಲ್ಲಿ ಪಾಲನ್ನು ಹೊಂದಿದ್ದಾರೆ. ಚಹಲ್‌ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲಂಬೋರ್ಘಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

    ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಉತ್ತಮ ಮೊತ್ತವನ್ನು ಪಡೆಯುತ್ತಿರುವ ಚಹಲ್‌ ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.

    ಧನಶ್ರೀ ಅಸ್ತಿ ಎಷ್ಟಿದೆ?
    ನೃತ್ಯ ಸಂಯೋಜನೆ, ಬ್ರಾಂಡ್ ಪ್ರಚಾರ, ಸೋಶಿಯಲ್‌ ಮೀಡಿಯಾಗಳಿಂದ ಧನಶ್ರೀ ಆದಾಯ ಸಂಪಾದಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಧನಶ್ರೀ ಅವರು ಅಂದಾಜು 25 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.

  • ಡಿವೋರ್ಸ್‌ ಆದ್ರೆ ಚಹಲ್‌ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?

    ಡಿವೋರ್ಸ್‌ ಆದ್ರೆ ಚಹಲ್‌ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?

    ಮುಂಬೈ: ಭಾರತ ಖ್ಯಾತ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (Yuzvendra Chahal) ಅವರು ಪತ್ನಿ ಧನಶ್ರೀ ವರ್ಮಾಗೆ (Dhanashree Verma) ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿ ಸುದ್ದಿಗಳು ಪ್ರಕಟವಾಗುತ್ತಿದೆ. ಈ ಸುದ್ದಿ ಒಂದು ವೇಳೆ ನಿಜವಾಗಿ ಕೋರ್ಟ್‌ ಮೂಲಕ ವಿಚ್ಛೇದನ (Divorce) ಪಡೆದರೆ ಚಹಲ್‌ ಧನಶ್ರೀ ಅವರಿಗೆ ಭಾರೀ ಜೀವನಾಂಶ (Alimony) ನೀಡಬೇಕಾಗುತ್ತದೆ.

    ಚಹಲ್‌ ಆಸ್ತಿ ಎಷ್ಟಿದೆ?
    ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ದೇಶಕ್ಕಾಗಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಹಲ್‌ ಟೀಂ ಇಂಡಿಯಾದ ಟಾಪ್‌ ಬೌಲರ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಹಲ್‌ 160 ಐಪಿಎಲ್‌ (IPL) ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.

    2024ರ ಆವೃತ್ತಿಯಲ್ಲಿ ಚಹಲ್‌ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದರು. ಈ ವೇಳೆ ಅವರಿಗೆ 6.5 ಕೋಟಿ ರೂ. ನೀಡಿತ್ತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂ. ನೀಡಿ ಚಹಲ್‌ ಅವರನ್ನು ಖರೀದಿಸಿತ್ತು.

    ಚಾಹಲ್ ಅವರು 2019 ರಲ್ಲಿ ಜೀವನಶೈಲಿ ಬ್ರ್ಯಾಂಡ್ ‘ಚೆಕ್ಮೇಟ್’ ಅನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅವರು ಫಿಟ್‌ನೆಸ್ ಅಪ್ಲಿಕೇಶನ್ ʼಗ್ರಿಪ್ʼ ಮತ್ತು ʼYUZOʼ ಬಟ್ಟೆ ಲೈನ್‌ನಲ್ಲಿ ಪಾಲನ್ನು ಹೊಂದಿದ್ದಾರೆ. ಚಹಲ್‌ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲಂಬೋರ್ಘಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

    ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಉತ್ತಮ ಮೊತ್ತವನ್ನು ಪಡೆಯುತ್ತಿರುವ ಚಹಲ್‌ ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

    ಒಂದು ವೇಳೆ ಅಧಿಕೃತವಾಗಿ ಕೋರ್ಟ್‌ ಮೂಲಕ ಧನಶ್ರೀಗೆ ಡಿವೋರ್ಸ್‌ ನೀಡಿದರೆ ಚಹಲ್‌ ಅವರು ತಮ್ಮ ಸಂಪತ್ತಿನ 20% ರಿಂದ 30% ವರೆಗಿನ ಪಾಲನ್ನು ನೀಡಬೇಕಾಗಬಹುದು. ಎಷ್ಟು ಜೀವನಾಂಶ ನೀಡಬೇಕು ಎಂಬುದನ್ನು ಕೋರ್ಟ್‌ ನಿರ್ಧರಿಸಲಿದೆ.

    ಧನಶ್ರೀ ಅಸ್ತಿ ಎಷ್ಟಿದೆ?
    ನೃತ್ಯ ಸಂಯೋಜನೆ, ಬ್ರಾಂಡ್ ಪ್ರಚಾರ, ಸೋಶಿಯಲ್‌ ಮೀಡಿಯಾಗಳಿಂದ ಧನಶ್ರೀ ಆದಾಯ ಸಂಪಾದಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಧನಶ್ರೀ ಅವರು ಅಂದಾಜು 25 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.

  • 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಹೈದರಾಬಾದ್: ದಕ್ಷಿಣ ಭಾರತದ ಕ್ಯೂಟ್ ಕಪಲ್ ಆಗಿದ್ದ ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಶನಿವಾರ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ಇದೀಗ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಕುಟುಂಬದ ಕಡೆಯಿಂದ 200 ಕೋಟಿ ಜೀವನಾಂಶವನ್ನು ಸಮಂತಾ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಸಮಂತಾ ಹಾಗೂ ನಾಗ ಚೈತನ್ಯ ಶನಿವಾರ ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿವಾಹವಾಗಿ ಕೇವಲ ನಾಲ್ಕೆ ವರ್ಷ ಕಳೆದಿದ್ದು, ಐದನೇ ವರ್ಷ ತುಂಬುತ್ತಿದ್ದಂತೆ ಇಬ್ಬರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನೆ ಪಡೆದುಕೊಂಡಿದ್ದಾರೆ. ಸದ್ಯ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಅಕ್ಕಿನೇನಿ ಕುಟುಂಬ ಮುಂದಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಈ ಕುರಿತಂತೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ತಮ್ಮ ಕಠಿಣ ಶ್ರಮ ಹಾಗೂ ಪರಿಶ್ರಮದಿಂದ ಟಾಲಿವುಡ್‍ನಲ್ಲಿ ಸಮಂತಾ ಅಗ್ರಸ್ಥಾನದಲ್ಲಿರುವುದರಿಂದ ವಿಚ್ಛೇದನದಿಂದ ತನಗೆ ಯಾವುದೇ ಹಣದ ಅಗತ್ಯ ಇಲ್ಲ ಎಂದು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಸಮಂತಾ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳಿಂದ ದೂರ ಸರಿದು ಕೆಲಸದ ಕಡೆಗೆ ಗಮನ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

  • ಪ್ರತಿ ತಿಂಗಳು ಪತಿಗೆ 2 ಸಾವಿರ ಜೀವನಾಂಶ ನೀಡಿ – 58ರ ಪತ್ನಿಗೆ ಕೋರ್ಟ್ ಆದೇಶ

    ಪ್ರತಿ ತಿಂಗಳು ಪತಿಗೆ 2 ಸಾವಿರ ಜೀವನಾಂಶ ನೀಡಿ – 58ರ ಪತ್ನಿಗೆ ಕೋರ್ಟ್ ಆದೇಶ

    ಲಕ್ನೋ: ಪತಿಗೆ ಪ್ರತಿ ತಿಂಗಳು 2 ಸಾವಿರ ರೂ. ಜೀವನಾಂಶ ನೀಡುವಂತೆ 58 ವರ್ಷದ ಮಹಿಳೆಗೆ ಕೋರ್ಟ್ ಆದೇಶಿಸಿದೆ.

    ಮುಜಾಫರ್ ನಗರ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ್ದು, 62 ವರ್ಷದ ಕಿಶೋರಿ ಲಾಲ್ ಸೊಹಂಕರ್ ಟೀ ಅಂಗಡಿ ನಡೆಸುತ್ತಿದ್ದು, ಇವರಿಗೆ ಬೇರೆ ಯಾವುದೇ ಆದಾಯ ಮೂಲವಿಲ್ಲ. ಆದರೆ 58 ವರ್ಷದ ಇವರ ಪತ್ನಿ ಮುನ್ನಿ ದೇವಿ ಸೇನೆಯಿಂದ ನಿವೃತ್ತಿ ಹೊಂದಿದವರಾಗಿದ್ದಾರೆ. ಹೀಗಾಗಿ ಇವರಿಗೆ 12 ಸಾವಿರ ರೂ. ಪೆನ್ಷನ್ ಬರುತ್ತದೆ. ಇದರಲ್ಲಿ 2 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶಿಸಿದೆ.

    ಕಿಶೋರ್ ಲಾಲ್ ಸೊಹಂಕರ್ ಮುಜಾಫರ್ ನಗರದ ಖಟುವಾಲಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದು, ಸೇನೆಯಲ್ಲಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಇವರ ಪತ್ನಿ 12 ಸಾವಿರ ರೂ. ಪಿಂಚಣಿ ಪಡೆಯುತ್ತಾರೆ.

    ಆರಂಭದಲ್ಲಿ ಕಿಶೋರಿ ಲಾಲ್ ಸೊಹಂಕರ್ ಪತ್ನಿಯನ್ನು ಮನೆಗೆ ಬರುವಂತೆ ನಿರ್ದೇಶಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಪತ್ನಿ ಇವರ ಜೊತೆಗೆ ಇರಲು ಒಪ್ಪಿಲ್ಲ. ಹೀಗಾಗಿ ಸೊಹಂಕರ್ ತನ್ನ ಜೀವನ ನಿರ್ವಹಣೆಗೆ ಪ್ರತಿ ತಿಂಗಳ ಹಣ ಕೊಡಿಸುವಂತೆ ಕೋರ್ಟ್ ಬಳಿ ಮನವಿ ಮಾಡಿದರು ಎಂದು ಸೊಹಂಕರ್ ಪರ ವಕೀಲ ಬಿ.ಕೆ.ತಾಯಲ್ ಅವರು ತಿಳಿಸಿದ್ದಾರೆ.

    ಮಹಿಳೆಯರು ತಮ್ಮ ಗಂಡಂದಿರಿಗೆ ಜೀವನಾಂಶ ಕೊಡುವ ಪ್ರಕರಣಗಳು ನಮ್ಮ ದೇಶದಲ್ಲಿ ತುಂಬಾ ವಿರಳ. ಹೀಗಾಗಿ ಸೊಹಂಕರ್‍ಗೆ ಮಾಸಿಕ ಜೀವನಾಂಶ ನೀಡುವ ಕುರಿತು ಮುನ್ನಿ ದೇವಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ಹಿಡಿಯಿತು ಎಂದು ವಕೀಲರು ತಿಳಿಸಿದ್ದಾರೆ.

  • ತಲೆ ಮರೆಸಿಕೊಂಡಿರುವ ಪತಿಗಾಗಿ ಪತ್ನಿ ಮೊರೆ

    ತಲೆ ಮರೆಸಿಕೊಂಡಿರುವ ಪತಿಗಾಗಿ ಪತ್ನಿ ಮೊರೆ

    – ಜೀವನಾಂಶ ಕೊಡದೆ ಪರಾರಿಯಾದ ಪ್ರಾಧ್ಯಾಪಕ

    ದಾವಣಗೆರೆ: ನ್ಯಾಯಾಲಯದ ಆದೇಶವಿದ್ದರೂ ತಮಗೆ ಜೀವನಾಂಶ ಕೊಡದೆ ತಲೆಮರೆಸಿಕೊಂಡಿರುವ ಪತಿಯನ್ನು ಹುಡುಕಿಕೊಡುವಂತೆ ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಗಂಡನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ನಗರದ ಸಿದ್ಧವೀರಪ್ಪ ಬಡಾವಣೆ ನಿವಾಸಿ ಎಸ್.ರೇಣುಕಾ ಪತಿಗಾಗಿ ಹುಡುಕಾಟ ನಡೆಸುತ್ತಿರುವ ಮಹಿಳೆಯಾಗಿದ್ದಾರೆ. ಈ ಕುರಿತು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿರುವ ರೇಣುಕಾ ಅವರು, ಜಿಲ್ಲೆಯ ಚನ್ನಗಿರಿ ತಾಲೂಕು ನಲೂರು ಗ್ರಾಮದ ವಾಸಿಯಾಗಿರುವ ನನ್ನ ಪತಿ ಅನಾಟಮಿ ಪ್ರೊಫೆಸರ್ ಡಾ. ಟಿ.ಮಂಜಪ್ಪ, ನನ್ನನ್ನು ತೊರೆದು 2ನೇ ಮದುವೆಯಾಗಿದ್ದಾರೆ. ನ್ಯಾಯಾಲಯವು ನನಗೆ 12,000 ರೂ. ಹಾಗೂ ಇಬ್ಬರು ಮಕ್ಕಳಿಗೆ ತಲಾ 2,500 ರೂ. ಮಾಸಿಕ ಜೀವನಾಂಶ ಕೊಡುವಂತೆ 2014ರಲ್ಲಿ ಆದೇಶಿಸಿತ್ತು. ಆದರೂ ಜೀವನಾಂಶ ಕೊಡದೆ ಕಿರಿಯ ಮಗನನ್ನು ಜೊತೆಯಲ್ಲಿ ಕರೆದುಕೊಂಡು 2015ರಿಂದ ತಲೆಮರೆಸಿಕೊಂಡಿದ್ದಾರೆ. ಮಾಸಿಕ 2 ಲಕ್ಷ ರೂ.ಗೂ ಹೆಚ್ಚು ವರಮಾನವಿದ್ದರೂ ನನ್ನ ಹಾಗೂ ನನ್ನ ಹಿರಿಯ ಮಗನ ಜೀವನಾಂಶಕ್ಕೆ ಹಣ ಕೊಡದೆ ವಂಚಿಸಿದ್ದಾರೆ. ವಾರೆಂಟ್ ಇದ್ದರೂ ಈವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ದೂರಿದ್ದಾರೆ.

    ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾನು ಜೀವನಾಂಶ ಸಿಗದೆ ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತಿರುವೆ. ಇಬ್ಬರು ಮಕ್ಕಳಲ್ಲಿ ಚಿಕ್ಕ ಮಗನನ್ನು ಪತಿ ಡಾ.ಮಂಜಪ್ಪ ಕರೆದುಕೊಂಡು ಹೋಗಿರುವುದರಿಂದ ಮಕ್ಕಳ ಸಹೋದರತ್ವ ಮತ್ತು ಬಾಲ್ಯದ ಜೀವನವನ್ನು ಒಟ್ಟಿಗೆ ಕಳೆಯುವ ಅವಕಾಶವನ್ನು ತಪ್ಪಿಸಿದ್ದಾರೆ ಎಂದು ಎಸ್.ರೇಣುಕಾ ಆರೋಪಿಸಿದ್ದಾರೆ.

    ಪತಿ ಅನಧಿಕೃತವಾಗಿ ಎರಡನೇ ಮದುವೆಯಾಗಿ ಅವಳೊಂದಿಗೆ ಸಂಸಾರ ಮಾಡಿಕೊಂಡು ಸುಖವಾಗಿದ್ದಾರೆ. ಆಗಾಗ ತಮ್ಮೂರಿಗೆ ಬಂದು ಹೋಗುತ್ತಿದ್ದರೂ ಪೊಲೀಸರು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ನ್ಯಾಯಾಲಯದ ಆದೇಶಗಳಿಗೂ ಬೆಲೆ ಕೊಡದೆ, ಪೊಲೀಸ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ನನಗೆ ತೊಂದರೆ ಕೊಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು, ಚಾಲ್ತಿಯಲ್ಲಿರುವ ವಾರಂಟ್ ಜಾರಿ ಮಾಡಿ ನನಗೂ ಮತ್ತು ನನ್ನ ಮಗನಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ರೇಣುಕಾ ಕಣ್ಣೀರಿಟ್ಟಿದ್ದಾರೆ.

  • ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ಚಂಡೀಗಢ್: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ಚಿಲ್ಲರೆ ರೂಪದಲ್ಲಿ ನೀಡಿದ್ದು, ಅವುಗಳನ್ನು ಏಣಿಕೆ ಮಾಡಲಾಗದೆ ಕೋರ್ಟ್ ಪ್ರಕರಣವನ್ನು ಮುಂದೂಡಿದೆ.

    2015 ರಲ್ಲಿ ವಿಚ್ಛೇದನ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪತ್ನಿಗೆ ಪ್ರತಿ ತಿಂಗಳು 25 ಸಾವಿರ ರೂ. ನೀಡುವಂತೆ ಪತಿಗೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಪತಿ ಪ್ರತಿ ತಿಂಗಳು ಜೀವನಾಂಶ ನೀಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ 50 ಸಾವಿರ ರೂ. ನೀಡಿರಲಿಲ್ಲ. ಇದರಿಂದಾಗಿ ಪತ್ನಿಯು ಹೈಕೋರ್ಟ್ ಮೆಟ್ಟಿಲೇರಿದ್ದಳು.

    ಹೈಕೋರ್ಟ್ ವಿಚಾರಣೆ ವೇಳೆ ಪತಿಯು ತಾನು ನೀಡಬೇಕಾಗಿದ್ದ ಹಣದಲ್ಲಿ 26,600 ರೂಪಾಯಿಯನ್ನು 1 ರೂ., 2 ರೂ. ನಾಣ್ಯ ಹಾಗೂ 100 ರೂ. ಮುಖಬೆಲೆಯ 4 ನೋಟುಗಳನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕೊಟ್ಟಿದ್ದಾನೆ.

    ಪತಿಯ ನಡೆಯಿಂದ ರೋಸಿ ಹೋದ ಪತ್ನಿ, ‘ನನಗೆ ಮತ್ತೊಂದು ರೀತಿ ಚಿತ್ರಹಿಂಸೆ ನೀಡಲು ಪತಿ ಹೀಗೆ ಮಾಡಿದ್ದಾನೆ. ನಾನು ಈ ಚಿಲ್ಲರೆ ಹಣವನ್ನು ಹೇಗೆ ಏಣಿಕೆ ಮಾಡಬೇಕು. ಯಾರು ಇಷ್ಟು ಚಿಲ್ಲರೆ ಹಣವನ್ನು ಪಡೆಯುತ್ತಾರೆ’ ಎಂದು ಆರೋಪಿಸಿದಳು.

    ತನ್ನ ನಡೆಯನ್ನು ಸಮರ್ಥಿಸಿಕೊಂಡ ಪತಿ, ‘ನಾನು 100 ರೂ., 500 ರೂ. ಅಥವಾ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನೀಡಬೇಕು ಎಂದುಕೊಂಡಿದ್ದೆ. ಆದರೆ ಈ ಹಣವನ್ನು ಏಣಿಕೆ ಮಾಡಲು ಮೂರು ಜೂನಿಯರ್ ಗಳನ್ನು (ಮಕ್ಕಳನ್ನು) ಆಕೆಗೆ ನೀಡಿದ್ದೇನೆ. ಹೀಗಾಗಿ ಚಿಲ್ಲರೆ ಹಣವನ್ನೇ ನೀಡಿರುವೆ’ ಎಂದು ಹೇಳಿದ್ದಾರೆ.

    ಹಣವನ್ನು ಏಣಿಕೆ ಮಾಡಲಾಗದೇ ಇರುವುದಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಜನೀಶ್ ಕೆ ಶರ್ಮಾ ಅವರು ವಿಚಾರಣೆಯನ್ನು ಎರಡು ದಿನಗಳ ಕಾಲ ಮುಂದೂಡಿದ್ದಾರೆ.

  • ಮಗನ ವಿರುದ್ಧವೇ ಹೇಳಿಕೆ ನೀಡಿ ಸೊಸೆಗೆ ಜೀವನಾಂಶ ಸಿಗಲು ನೆರವಾದ ಅತ್ತೆ

    ಮಗನ ವಿರುದ್ಧವೇ ಹೇಳಿಕೆ ನೀಡಿ ಸೊಸೆಗೆ ಜೀವನಾಂಶ ಸಿಗಲು ನೆರವಾದ ಅತ್ತೆ

    ಬೆಂಗಳೂರು: ವಿಚ್ಛೇದನ ಪ್ರಕರಣದಲ್ಲಿ ತಾಯಿಯೇ ಮಗನ ವಿರುದ್ಧ ಹೇಳಿಕೆ ನೀಡಿ ಸೊಸೆಗೆ ಸೂಕ್ತ ಜೀವನಾಂಶ ಸಿಗುವಂತಾದ ಘಟನೆ ನಡೆದಿದೆ. ಇದರಲ್ಲಿ ಗಮನಾರ್ಹ ಸಂಗತಿಯೆಂದರೆ ದಿವಂಗತ, ಮಾಜಿ ಸಚಿವ ಎಸ್‍ಆರ್ ಕಾಶಪ್ಪನವರ್ ಅವರ ಪುತ್ರ ದೇವಾನಂದ ಶಿವಶಂಕರಪ್ಪ ಕಾಶಪ್ಪನವರ್ ಅವರ ವಿಚ್ಛೇದನ ಪ್ರಕರಣದಲ್ಲಿ ಇಂತಹದ್ದೊಂದು ಬೆಳವಣಿಗೆ ಆಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 24ರಂದು ತೀರ್ಪು ಪ್ರಕಟಿಸಿದ ಕೌಟುಂಬಿಕ ನ್ಯಾಯಾಲಯ, ದೇವಾನಂದ ಶಿವಶಂಕರಪ್ಪ ಕಾಶಪ್ಪನವರ್ ತನ್ನ ಹೆಂಡತಿಗೆ ಶಾಶ್ವತ ಜೀವನಾಂಶವಾಗಿ 4 ಕೋಟಿ ರೂ. ಹಣವನ್ನು 60 ದಿನಗಳೊಳಗೆ ಕೊಡಬೇಕು ಎಂದು ಹೇಳಿದೆ.

    2015ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ 4.85 ಕೋಟಿ ರೂ. ಜೀವನಾಂಶ ನೀಡಬೇಕೆಂದು ಕೇಳಿದ್ದರು. ದೇವಾನಂದ್ ದಂಪತಿ 4 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗಳಿಸಲು ನಿರ್ಧರಿಸಿ 2012ರ ಫೆಬ್ರವರಿ 12ರಿಂದ ಪ್ರತ್ಯೇಕವಾಗಿ ವಾಸವಿದ್ದರು ಎಂಬುದನ್ನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಭಾಗ್ಯ ಮನಗಂಡಿದ್ದರು.

    ಅರ್ಜಿದಾರ ಮಹಿಳೆ ಗಂಡನೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನಿಸಿದರಾದ್ರೂ ಅದಕ್ಕೆ ಪತಿಯಿಂದ ಸರಿಯಾದ ಪ್ರತಿಕ್ರಿಯೆ ಇರಲಿಲ್ಲ. 1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)ರ ಪ್ರಕಾರ ದಂಪತಿ ಅರ್ಜಿ ಸಲ್ಲಿಸುವ ವೇಳೆಗೆ ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ದೂರ ಉಳಿದಿದ್ದರೆ ಅವರಿಗೆ ವಿಚ್ಛೇದನ ನೀಡಬೇಕು. ಅಲ್ಲದೆ ಸ್ವತಃ ದೇವಾನಂದ್ ಅವರ ತಾಯಿಯೇ ಮಗನ ವಿರುದ್ಧ ಹೇಳಿಕೆ ನೀಡಿದ್ದರು. ಅರ್ಜಿದಾರ ಮಹಿಳೆಯೊಂದಿಗೆ ಮದುವೆಯಾಗಿದ್ದಾಗಲೇ ನನ್ನ ಮಗ ಮತ್ತೋರ್ವ ಮಹಿಳೆಯೊಂದಿಗೆ ಮದುವೆಯಾಗಿದ್ದು, ಅವರಿಗೆ ಮಗುವೂ ಇದೆ ಎಂದು ಹೇಳಿದ್ದರು.

    ತಾಯಿ ಹೇಳಿದ್ದು ಏನು? ಕುಟುಂಬ ಸದಸ್ಯರು ಹಾಗೂ ಹಿರಿಯರ ಇಷ್ಟಕ್ಕೆ ವಿರುದ್ಧವಾಗಿ ನನ್ನ ಮಗ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ನನ್ನ ಸೊಸೆಯನ್ನ ಒಂಟಿ ಮಾಡಿದ್ದಾನೆ. ವೈವಾಹಿಕ ಜವಾಬ್ದಾರಿಗಳನ್ನ ಪೂರೈಸಿಲ್ಲ. ನನ್ನ ಮಗನಿಗೆ ಸಾಕಷ್ಟು ಭೂಮಿ ಇದ್ದು, ಕ್ವಾರಿ ಬ್ಯುಸಿನೆಸ್ ಮಾಡುತ್ತಾನೆ. ಸಾಕಷ್ಟು ಹಣ ಗಳಿಸುತ್ತಾನೆ. ಆತನ ಬಳಿ 1 ಕೋಟಿಗೂ ಹೆಚ್ಚಿನ ಮೌಲ್ಯದ ಮರ್ಸಿಡಿಸ್ ಬೆನ್ಜ್ ಕಾರ್ ಇದೆ. ಆದ್ದರಿಂದ ಆತ ಇಷ್ಟೊಂದು ಮೊತ್ತದ ಜೀವನಾಂಶ ಕೊಡಲು ಶಕ್ತನಾಗಿದ್ದಾನೆ ಎಂದು ಅರ್ಜಿದಾರ ಮಹಿಳೆಗೆ ಅಜ್ಜಿಯೂ ಆಗಿರುವ ಎಸ್‍ಆರ್ ಕಾಶಪ್ಪನವರ್ ಪತ್ನಿ ತನ್ನ ಅಫಿಡವಿಟ್‍ನಲ್ಲಿ ಹೇಳಿದ್ದರು. ಅಲ್ಲದೆ ದೇವಾನಂದ್ ಅವರಿಗೆ ನೋಟಿಸ್ ನೀಡಿದ್ದರೂ ಕೂಡ ಕೋರ್ಟ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿರಲಿಲ್ಲ.

    ಅರ್ಜಿದಾರ ಮಹಿಳೆಗೆ ದೇವಾನಂದ್ ಸೋದರಮಾವನಾಗಿದ್ದು, 2011ರ ಮೇ 22ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳ್ಕಲ್‍ನ ಶ್ರೀ ಆರ್ ವೀರಮಣಿ ಸ್ಟೇಡಿಯಂನಲ್ಲಿ ಈ ಇಬ್ಬರ ಮದುವೆಯಾಗಿತ್ತು. ಮದುವೆಯಾದಾಗ ನಾನು ಬಿಬಿಎ ಓದುತ್ತಿದ್ದೆ. ಇಷ್ಟವಿಲ್ಲದೆ ಮದುವೆಯಾದೆ. ಮದುವೆಯಾದ ಕೆಲವೇ ವಾರಗಳಲ್ಲಿ ನನ್ನ ಪತಿಯ ವರ್ತನೆ ಸಂಪೂರ್ಣವಾಗಿ ಬದಲಾಗಿತ್ತು. ಅವರು ನನ್ನನ್ನು ಅಪರಿಚಿತಳಂತೆ ನೋಡುತ್ತಿದ್ರು. ಎರಡನೇ ಮದುವೆಯಾಗಿದ್ದಾರೆಂಬ ಸುದ್ದಿ ಕೇಳಿ ಈ ಬಗ್ಗೆ ಅವರ ಜೊತೆ ಮಾತನಾಡಿದೆ. ಆಗ ದೇವಾನಂದ್ ಅವರು ನನ್ನನ್ನು ನಿಂದಿಸಿದ್ರು. ನಾನು ನನ್ನ ತಂದೆಯ ಆಸೆ ಪೂರೈಸಲು ನಿನ್ನನ್ನು ಮದುವೆಯಾಗಿದ್ದಷ್ಟೇ ಎಂದು ಹೇಳಿದ್ರು ಅಂತ ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ರು.

  • ವಿಚ್ಛೇದಿತ ಪತ್ನಿಗೆ ಪತಿಯ ಸಂಬಳದ ಶೇ. 25ರಷ್ಟು ಜೀವನಾಂಶ ನೀಡಲು ಸುಪ್ರೀಂ ಆದೇಶ

    ವಿಚ್ಛೇದಿತ ಪತ್ನಿಗೆ ಪತಿಯ ಸಂಬಳದ ಶೇ. 25ರಷ್ಟು ಜೀವನಾಂಶ ನೀಡಲು ಸುಪ್ರೀಂ ಆದೇಶ

    ನವದೆಹಲಿ: ಪತ್ನಿಗೆ ವಿಚ್ಛೇದನ ನೀಡುವ ಪತಿ ತನ್ನ ಸಂಬಳದಲ್ಲಿ ಶೇಕಡಾ 25ರಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ವಿಚ್ಛೇದಿತ ಮಹಿಳೆ ಘನತೆಯಿಂದ ಬದುಕಲು ಸಾಕಾಗುಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ ಅಥವಾ ಶಾಶ್ವತ ಜೀವನಾಂಶವಾಗಿ ನೀಡಬೇಕೆಂದು ಕೋರ್ಟ್ ಹೇಳಿದೆ. ಪತಿಯ ಸಂಬಂಳದ ಶೇ. 25ರಷ್ಟು ಹಣವನ್ನು ಜೀವನಾಂಶವಾಗಿ ನೀಡುವುದು ಉತ್ತಮ ಎಂದಿದೆ.

    2003ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದ ಪಶ್ಚಿಮ ಬಂಗಾಳದ ಹೂಗ್ಲಿಯ ಕಲ್ಯಾಣ್ ದೇ ಚೌಧರಿ ಅವರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಪರಮೋಚ್ಛ ನ್ಯಾಯಾಲಯ ಈ ಆದೇಶ ನೀಡಿದೆ. ಸದ್ಯ 95 ಸಾವಿರ ರೂಪಾಯಿ ಸಂಬಳ ಪಡೆಯೋ ಕಲ್ಯಾಣ್, ವಿಚ್ಛೇದಿತ ಪತ್ನಿ ರೀಟಾ ಹಾಗೂ ಮಗನಿಗೆ 23 ಸಾವಿರ ರೂಪಾಯಿ ಜೀವನಾಂಶ ಕೊಡಬೇಕೆಂದು ಕೋಲ್ಕತ್ತಾ ಹೈಕೋರ್ಟ್ ಆದೇಶ ಮಾಡಿತ್ತು. ಇದರ ವಿರುದ್ಧ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಆ ಕಲ್ಯಾಣ್ ಅವರು ಮತ್ತೊಂದು ಮದುವೆಯಾಗಿದ್ದು, ಹೊಸ ಕುಟುಂಬದ ನಿರ್ವಹಣೆ ಮಾಡಬೇಕಿರುವ ಕಾರಣ 3 ಸಾವಿರ ರೂ. ಕಡಿತಗೊಳಿಸಿ 20 ಸಾವಿರ ರೂ. ಜೀವನಾಂಶ ನೀಡಲು ಆದೇಶಿಸಿದೆ.

    ಮೊದಲಿಗೆ ರೀಟಾ ಅವರಿಗೆ 16 ಸಾವಿರ ರೂ. ಜೀವನಾಂಶ ನೀಡಬೇಕೆಂದು ಕೋಲ್ಕತ್ತಾ ಹೈಕೋರ್ಟ್ ಹೇಳಿತ್ತು. ಆದ್ರೆ ನಂತರ ಕಲ್ಯಾಣ್ ಅವರ ಸಂಬಳ 60 ಸಾವಿರದಿಂದ 90 ಸಾವಿರಕ್ಕೆ ಏರಿಕೆಯಾಗಿದ್ದ ಕಾರಣ ಜೀವನಾಂಶದ ಮೊತ್ತವನ್ನು 16 ಸಾವಿರ ರೂ. ನಿಂದ 23 ಸಾವಿರ ರೂ.ಗೆ ಏರಿಸಿತ್ತು. ಆದ್ರೆ ಮೊದಲಿದ್ದ 16 ಸಾವಿರ ರೂ. ವನ್ನೇ ನೀಡುವುದಾಗಿ ಕಲ್ಯಾಣ್ ಮನವಿ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.