Tag: Alien

  • ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

    ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

    ಅನಂತ ಬ್ರಹ್ಮಾಂಡದಲ್ಲಿ ವಿಜ್ಞಾನ-ತಂತ್ರಜ್ಞಾನ ಲೋಕಕ್ಕೆ ನಿಲುಕದ ಅದೆಷ್ಟೋ ನಿಗೂಢತೆಗಳಿವೆ. ಭೂಮಿಯಲ್ಲಿ (Earth) ಇರುವಂತೆ ಅನ್ಯಗ್ರಹಗಳಲ್ಲೂ ಮಾನವನಿಗಿಂತ ಬುದ್ಧಿವಂತ ಜೀವಿಗಳು (Alien) ಇವೆಯೇ? ಇರುವುದಾದರೆ ಎಲ್ಲಿರುತ್ತವೆ? ಹೇಗಿರುತ್ತವೆ? ಈ ಪ್ರಶ್ನೆಗಳಿಗೆ ಕೆಲ ತಜ್ಞರು ಹೌದು ಎನ್ನುತ್ತಾರೆ. ಆದರೆ ಅನ್ಯಗ್ರಹ ಜೀವಿಗಳ ಅಸ್ತಿತ್ವ ಕುರಿತು ಬಲವಾದ ಸಾಕ್ಷ್ಯ ಇನ್ನೂ ಸಿಕ್ಕಿಲ್ಲ. ಆಕಾಶಕಾಯದಲ್ಲಿ ಹಾರಾಡುವ ವಸ್ತುಗಳು ಭೂಮ್ಯತೀತ ಜೀವಿಗಳ ವಾಹನಗಳೇ ಇರಬೇಕು ಎಂದು ಊಹೆಗಳಿವೆ. ಈ ಕುರಿತು ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇದೆ. ಇದರ ನಡುವೆ ನಾವು ಅನ್ಯಗ್ರಹ ಜೀವಿಗಳನ್ನು ನೋಡಿದ್ದೇವೆ. ತುಂಬಾ ವಿಚಿತ್ರವಾಗಿವೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಅನ್ಯಗ್ರಹ ಜೀವಿಗಳ ಬಗ್ಗೆ ಅಂತೆ-ಕಂತೆಗಳ ಮಾತೇ ಹೆಚ್ಚು. ಇದರ ನಡುವೆ ಅಮೆರಿಕದ ವಿಜ್ಞಾನಿಯೊಬ್ಬರ (US Scientist) ಹೇಳಿಕೆ ಏಲಿಯನ್‌ಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.

    ಭೂಮಿಗೆ ಅಪ್ಪಳಿಸಿದ ‘ಬೆಂಕಿ ಚೆಂಡು’
    ಅದು 2014, ಜನವರಿ 8 ರ ಸಂದರ್ಭ. ಬಾಹ್ಯಾಕಾಶದಿಂದ ಬೆಂಕಿಯ ಚೆಂಡು (Fireball) ಭೂಮಿಯ ಕಡೆ ನುಗ್ಗಿ ಬಂದು, ಪಪುವಾ ನ್ಯೂಗಿನಿಯಾದ ಈಶಾನ್ಯ ಕರಾವಳಿಯ ಮನುಸ್ ದ್ವೀಪದ ಉತ್ತರಕ್ಕೆ ಸಮುದ್ರದಲ್ಲಿ ಅಪ್ಪಳಿಸಿತು. ಅದು ನುಗ್ಗಿ ಬಂದ ಸ್ಥಾನ, ವೇಗ ಮತ್ತು ಹೊಳಪನ್ನು ಯುಎಸ್ ಸರ್ಕಾರದ ಸಂವೇದಕಗಳು ದಾಖಲಿಸಿವೆ. ಅದರ ಡೇಟಾವನ್ನ ಸತತ 5 ವರ್ಷಗಳ ಕಾಲ ಸರ್ಕಾರ ಗೌಪ್ಯವಾಗಿಟ್ಟಿತ್ತು. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

    ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸೈದ್ಧಾಂತಿಕ ಖಗೋಳ ಭೌತಶಾಸ್ತ್ರಜ್ಞ ಅವಿ ಲೊಯೆಬ್ ಮತ್ತು ವಿದ್ಯಾರ್ಥಿಯಾಗಿದ್ದ ಅಮೀರ್ ಸಿರಾಜ್ 2019 ರಲ್ಲಿ ಈ ಬೆಂಕಿಯ ಚೆಂಡಿನ ಬಗ್ಗೆ (ಫೈರ್‌ಬಾಲ್) ವಿಜ್ಞಾನ ವಲಯದಲ್ಲಿ ಪ್ರಸ್ತಾಪಿಸುವವರೆಗೂ ಈ ವಿಚಾರವನ್ನು ಸೀಕ್ರೆಟ್ ಆಗಿಯೇ ಇಡಲಾಗಿತ್ತು. ಕಳೆದ ತಿಂಗಳು ಲೊಯೆಬ್, ಪಶ್ಚಿಮ ಪೆಸಿಫಿಕ್ ಸಮುದ್ರದ ತಳದಲ್ಲಿ ಹರಡಿಕೊಂಡಿದ್ದ ಬೆಂಕಿ ಚೆಂಡಿನ ತುಣುಕುಗಳನ್ನು ಪಡೆಯಲು ಸಾಕಷ್ಟು ಸರ್ಕಸ್ ನಡೆಸಬೇಕಾಯಿತು.

    ಫೈರ್‌ಬಾಲ್‌ನಲ್ಲಿದ್ಯಾ ಏಲಿಯನ್‌ ಲೈಫ್‌ ಸೀಕ್ರೆಟ್‌?
    ನಿಗೂಢತೆಗಳನ್ನ ಹೊತ್ತು ತಂದ ಫೈರ್‌ಬಾಲ್‌ನ ಒಂದಷ್ಟು ತುಣುಕುಗಳನ್ನ ತೆಗೆದುಕೊಂಡು ಲೊಯೆಬ್ ಸಂಶೋಧನೆಗೆ ಒಳಪಡಿಸಿದ್ರು. ‘ಏಲಿಯನ್ ಲೈಫ್ (ಅನ್ಯಗ್ರಹ ಜೀವಿಗಳ) ಬಗ್ಗೆ ಪುರಾವೆಗಳನ್ನ ಕಂಡುಕೊಳ್ಳೋದಕ್ಕೆ ಇದು ಮಾರ್ಗವಾಗಿರಬಹುದು’ ಎಂದು ವಿಜ್ಞಾನಿ ಘೋಷಿಸಿಯೇ ಬಿಟ್ರು. ಮುಂದುವರಿದು ‘ನಾವು ಸಿನಿಮಾಗಳಲ್ಲಿ ನೋಡಿದಂತೆ ಏಲಿಯನ್‌ಗಳು ಇರುವುದಿಲ್ಲ. ಕೃತಕ ಬುದ್ದಿಮತ್ತೆಗಳನ್ನು ಅನ್ಯಗ್ರಹ ಜೀವಿಗಳು ಹೋಲಬಹುದು’ ಅಂತ ಕೂಡ ಹೇಳಿದ್ದಾರೆ.

    ಅನ್ಯಗ್ರಹ ತಂತ್ರಜ್ಞಾನದ ಅವಶೇಷ ಎಂದಿದ್ದ ವಿಜ್ಞಾನಿ
    ಪೆಸಿಫಿಕ್‌ ಸಾಗರದ ತಳದಲ್ಲಿ ಸಿಕ್ಕಿರುವುದು ಅನ್ಯಲೋಕ ತಂತ್ರಜ್ಞಾನದ ಅವಶೇಷ ಇರಬಹುದು ಎಂದು ಈ ಹಿಂದೆ ಲೊಯೆಬ್‌ ಹೇಳಿಕೆ ಕೊಟ್ಟಿದ್ದರು. ಲೊಯೆಬ್‌ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿಯಾದವರು. ಕೆಲವೊಮ್ಮೆ ಇವರು ನೀಡುವ ಹೇಳಿಕೆಗಳು ಖಗೋಳ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಲೊಯೆಬ್‌ ಹೇಳಿಕೆಗೆ ವಿಜ್ಞಾನಿಗಳ ಆಕ್ಷೇಪ
    ಖಗೋಳ ಭೌತಶಾಸ್ತ್ರಜ್ಞನ ಈ ಮಾತು ಕೆಲ ವಿಜ್ಞಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಲೊಯೆಬ್ ಆತುರದಲ್ಲಿ ಕೆಲ ಘೋಷಣೆಗಳನ್ನ ಮಾಡಿದ್ದಾರೆ. ಇಂತಹ ಹೇಳಿಕೆಗಳು, ವಿಜ್ಞಾನದ ಸಂಶೋಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ನಕಾರಾತ್ಮಕ ಭಾವನೆ ಸೃಷ್ಟಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದರು. ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಭೌತಶಾಸ್ತ್ರಜ್ಞ ಸ್ಟೀವ್ ಡೆಸ್ಚ್, ‘ಲೊಯೆಬ್ ಅವರ ಈ ಮಾತುಗಳನ್ನ ಕೇಳಿ ಜನ ಸುಸ್ತಾಗಿದ್ದಾರೆ. ಇದು ವಿಜ್ಞಾನವನ್ನು ಕಲುಷಿತಗೊಳಿಸುತ್ತಿದೆ’ ಅಂತ ಟೀಕಿಸಿದರು. ‘ಲೊಯೆಬ್ ಜೊತೆ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಇತರೆ ವಿಜ್ಞಾನಿಗಳು ನಿರಾಕರಿಸುತ್ತಿದ್ದಾರೆ’ ಅಂತ ಕೂಡ ಡೆಸ್ಚ್ ಹೇಳಿದ್ದರು.

    ಕಪ್ಪು ಕುಳಿ, ಡಾರ್ಕ್ ಮ್ಯಾಟರ್, ಮೊದಲ ನಕ್ಷತ್ರ, ನಮ್ಮ ಬ್ರಹ್ಮಾಂಡದ ಭವಿಷ್ಯ ಕುರಿತು ಸಂಶೋಧನೆ ನಡೆಸಿ ನೂರಾರು ಅಧ್ಯಯನ ವರದಿಗಳನ್ನ ಪ್ರಕಟಿಸಿರುವ ವಿಜ್ಞಾನಿ ಲೊಯೆಬ್. ‘Oumuamua’ (ಅಂತರತಾರಾ ವಸ್ತು) ಸೌರವ್ಯೂಹದ ಮೂಲಕ ಹಾದು ಹೋಗುವಾಗ 2017ರಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಅದು ಕ್ಷುದ್ರಗ್ರಹವೋ ಅಥವಾ ಇನ್ನೊಂದು ನಕ್ಷತ್ರ ಸಿಸ್ಟಮ್‌ನಿಂದ ಬಂದ ಧೂಮಕೇತುವೋ ಅಂತ ವಿಜ್ಞಾನಿಗಳು ಚರ್ಚಿಸಿದ್ದರು. ಆಗ ಲೊಯೆಬ್ ‘ಇದು ಅನ್ಯಗ್ರಹ ಜೀವಿಗಳಿಗೆ ಸಂಬಂಧಿಸಿದ್ದಿರಬಹುದು’ ಎಂದಿದ್ದರು. ಅಲ್ಲಿಂದ ಲೊಯೆಬ್ ಅವರಿಗೆ ಅನ್ಯಗ್ರಹ ಜೀವಿಗಳ ಬಗ್ಗೆ ಕುತೂಹಲ ಮೂಡಿತ್ತು.

    ಟೀಕೆಗಳಿಗೆ ಸೊಪ್ಪ ಹಾಕದೇ ಬೆಂಕಿಯ ಚೆಂಡಿನ ಕುರಿತು ಲೊಯೆಬ್ ಅಧ್ಯಯನ ನಡೆಸಲು ಶುರು ಮಾಡಿದರು. ನಾಸಾದ ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಇಲ್ಲಿ ಅಧ್ಯಯನ ಆರಂಭಿಸಿದರು. ಫೈರ್‌ಬಾಲ್‌ನ ದಿಕ್ಕು ಮತ್ತು ಪ್ರಭಾವದ ವೇಗದ ಕುರಿತು ಸಂಶೋಧನೆ ನಡೆಸಿದರು. ಅದು ಸೆಕೆಂಡಿಗೆ 28 ಮೈಲುಗಳಷ್ಟು ವೇಗವಾಗಿ ಚಲಿಸಿತ್ತು. ನಮ್ಮ ಸೂರ್ಯನ ಗುರುತ್ವಾಕರ್ಷಣೆಗೆ ಬಂಧಿತವಾಗಿ ಬೆಂಕಿಯ ಚೆಂಡು ತುಂಬಾ ವೇಗವಾಗಿ ಚಲಿಸಿರಬಹುದು ಎಂದು ಲೊಯೆಬ್ ಮತ್ತು ಸಿರಾಜ್ ಅಂದಾಜಿಸಿದರು. ‘Oumuamua’ ದಂತೆ ಇದು ಕೂಡ ಅಂತರತಾರಾ ವಸ್ತು ಆಗಿರಬೇಕು ಎಂದು ತೀರ್ಮಾನಿಸಿದರು. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ

    ಕೊನೆಗೆ 2019 ರಲ್ಲಿ ತಮ್ಮ ಆವಿಷ್ಕಾರದ ಬಗ್ಗೆ ಒಂದು ವರದಿ ಬರೆದರು. ಆರಂಭದಲ್ಲಿ ಇದನ್ನು ದಿ ಆಸ್ಟ್ರೋಫಿಸಿಕಲ್ ಜರ್ನಲ್ ತಿರಸ್ಕರಿಸಿತು. ಯುಎಸ್ ಸ್ಪೇಸ್ ಕಮಾಂಡ್ ಟ್ಟಿಟ್ಟರ್‌ನಲ್ಲಿ, ಫೈರ್‌ಬಾಲ್‌ನ ವೇಗದ ಲೆಕ್ಕಾಚಾರ ಕುರಿತ ಪ್ರಕಟಣೆಯನ್ನು ಹಂಚಿಕೊಂಡಿತು. ಇದಕ್ಕೂ ಲೊಯೆಬ್ ಅವರ ಸಂಶೋಧನಾ ವರದಿಗೆ ಸಾಮ್ಯತೆ ಇರುವುದು ಗೊತ್ತಾಯಿತು. ಆಗ ಮೊದಲು ತಿರಸ್ಕರಿಸಿದ್ದ ಜರ್ನಲ್, ಈ ಸಂಶೋಧನಾ ವರದಿಯನ್ನು ನವೆಂಬರ್‌ನಲ್ಲಿ ಪ್ರಕಟಿಸಲು ಒಪ್ಪಿಗೆ ಸೂಚಿಸಿತು.

    ಫೈರ್‌ಬಾಲ್‌ನಲ್ಲಿ ಏನಿದೆ?
    ಲೊಯೆಬ್ ನಡೆಸಿದ ಆರಂಭಿಕ ಪರೀಕ್ಷೆಗಳು, ಫೈರ್‌ಬಾಲ್‌ನಲ್ಲಿ ಯುರೇನಿಯಂ ಮತ್ತು ಸೀಸ ಇರುವುದನ್ನು ಬಹಿರಂಗಪಡಿಸಿವೆ. ಇವುಗಳ ಸಮೃದ್ಧಿಯು ವಸ್ತುವಿನ ವಯಸ್ಸನ್ನು ಅಂದಾಜು ಮಾಡಲು ಸಹಕಾರಿಯಾಗಿದೆ. ನಮ್ಮ ಸೌರವ್ಯೂಹಕ್ಕೆ ಹೋಲಿಸಬಹುದಾದ ಕೆಲವು ಶತಕೋಟಿ ವರ್ಷಗಳ ವಯಸ್ಸನ್ನು ಹೊಂದಿದೆ ಎಂದು ಲೊಯೆಬ್ ಅಂದಾಜಿಸಿದ್ದಾರೆ.

    ಫೈರ್‌ಬಾಲ್ ನಿಜವಾಗಿಯೂ ಮತ್ತೊಂದು ನೆರೆಯ ತಾರಾ ವಲಯದಿಂದ ಬಂದಿದ್ದರೂ ಸಹ, ಇದು ಅನ್ಯಗ್ರಹ ಜೀವಿಗಳಿಗೆ ಸಂಬಂಧಿಸಿವೆ ಎಂದು ತೋರಿಸಲು ಹೆಚ್ಚಿನ ಪುರಾವೆಗಳು ಬೇಕಾಗುತ್ತವೆ. ಏನೇ ಆಗಲಿ, ಇಂತಹ ಅಂತರತಾರಾ ವಸ್ತುಗಳು ವಿಶ್ವದ ಉಗಮ, ವಿಕಾಸದ ಚರಿತ್ರೆಯನ್ನು ಆಗಾಗ ಪುನರ್ ವಿಮರ್ಶೆಗೆ ಒಳಪಡಿಸುವಂತೆ ಮಾಡುತ್ತವೆ.

    ಅಮೆರಿಕದ ಬಳಿ ಇದ್ಯಾ ಅನ್ಯಗ್ರಹ ಜೀವಿಗಳ ಮಾಹಿತಿ?
    ಅಮೆರಿಕ ಸರ್ಕಾರದ ಬಳಿ ಅನ್ಯಗ್ರಹ ಜೀವಿಗಳ ಬಗ್ಗೆ ಮಾಹಿತಿ ಇದೆ. ಅಷ್ಟೇ ಅಲ್ಲ ಏಲಿಯನ್‌ಗಳ ನೌಕೆ ಕೂಡ ಇದೆ. ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವವರಿಂದ ನನಗೆ ಈ ವಿಷಯ ತಿಳಿದಿದೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್‌ ಗ್ರಷ್‌ ಈಚೆಗೆ ಸ್ಫೋಟಕ ಹೇಳಿಕೆ ನೀಡಿದ್ದರು. ಖಗೋಳ ಭೌತಶಾಸ್ತ್ರಜ್ಞ ಲೊಯೆಬ್‌ ಹಾಗೂ ಗ್ರಷ್‌ ಅವರ ಮಾತು ಏಲಿಯನ್‌ಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?

    ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?

    ಮೆರಿದ (America) ಟಾಪ್ ಸೀಕ್ರೆಟ್ ಪ್ರದೇಶ ಅದು ಏರಿಯಾ 51 (Area 51) ಎಂತಲೇ ಹೆಸರುವಾಸಿ. ಸಾರ್ವಜನಿಕರಿಗೆ ನಿಷೇಧವಾಗಿರುವ ನೇವಾಡದಲ್ಲಿರುವ ಈ ಏರಿಯಾ 51 ಪ್ರದೇಶದಲ್ಲಿ ದಶಕಗಳವರೆಗೆ ಏಲಿಯನ್‌ಗಳು (America) ನೆಲೆಸಿ, ಅಲ್ಲಿ ಅವಿತು ಕುಳಿತಿವೆ ಎಂಬುದಕ್ಕೆ ಸಾಕ್ಷಿಗಳನ್ನು ನಿರಂತರವಾಗಿ ಹುಡುಕಲಾಗಿದೆ. ಆದರೆ ಇಲ್ಲಿಯವರೆಗೆ ಇದಕ್ಕೆ ಯಾವುದೇ ದೃಢ ಸಾಕ್ಷಿಗಳು ದೊರೆತಿಲ್ಲ. ಏಲಿಯನ್‌ಗಳ ಅಸ್ತಿತ್ವ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಏರಿಯಾ 51 ಪ್ರದೇಶದ ಸುತ್ತಲಿರುವ ಗೋಡೆಗಳ ಹಿಂದೆ ಏನು ನಡೆಯುತ್ತದೆ ಎಂಬುದು ಅತ್ಯಂತ ಕುತೂಹಲಕಾರಿಯಾಗಿರುವ ಸಂಗತಿಯಾಗಿದೆ.

    ಏರಿಯಾ 51ರಲ್ಲಿ ಭದ್ರತೆ ಹೇಗಿದೆ?
    ನೇವಾಡ ಮರುಭೂಮಿಯ ಮಧ್ಯಭಾಗದಲ್ಲಿ ಏರಿಯಾ 51 ಕಡೆಗೆ ಸಾಗುವ ಗೇಟ್ ಇದೆ. ಪ್ರದೇಶದ ಸುತ್ತಲೂ ಚೈನ್, ಮುಳ್ಳಿನ ಬೇಲಿ ಇದ್ದು, ಜನರನ್ನು ಬೆದರಿಸುವಂತಹ ಫಲಕಗಳನ್ನು ಹಾಕಲಾಗಿದೆ. ಗೇಟ್‌ನ ಆಚೆಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದು ಪ್ರತಿ ಕೋನವನ್ನೂ ವೀಕ್ಷಿಸುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟದಲ್ಲಿ ಪಿಕಪ್ ಟ್ರಕ್ ಒಂದು ಇದ್ದು, ಅದರೊಳಗಿರುವ ಸಿಬ್ಬಂದಿ ಪ್ರದೇಶದೊಳಗೆ ನುಸುಳಲು ಪ್ರತ್ನಿಸುವವರ ಬಗ್ಗೆ ಗಮನಹರಿಸುತ್ತಾರೆ ಎನ್ನಲಾಗಿದೆ. ಇನ್ನೂ ಕೆಲವರು ಆ ಪ್ರದೇಶದಲ್ಲಿ ಜನರು ಓಡಾಡಿದರೆ ಸಂವೇದಕಗಳ ಮೂಲಕ ಅದು ಸಿಬ್ಬಂದಿಗೆ ಸೂಚನೆ ನೀಡುವ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

    ಏರಿಯಾ 51 ಒಳಗಡೆ ಏನು ನಡೆಯುತ್ತೆ?
    ಏರಿಯಾ 51 ಒಳಗಡೆ ನಿಖರವಾಗಿ ಏನು ನಡೆಯುತ್ತಿದೆ ಎಂಬುದು ದಶಕಗಳಿಂದ ಊಹಾಪೋಹಗಳಿಗೆ ಕಾರಣವಾಗಿದೆ. ಭೂಮಿಯನ್ನು ಅನ್ವೇಶಿಸಲು ಬಂದ ಏಲಿಯನ್‌ಗಳು ಇಲ್ಲಿ ಸಿಕ್ಕಿಹಾಕಿಕೊಂಡಿವೆ ಎಂಬ ವದಂತಿಗಳು ಇವೆ. ಇವುಗಳಲ್ಲೊಂದು 1942ರಲ್ಲಿ ನಡೆದ ರೋಸ್‌ವೆಲ್ ಅಪಘಾತ. ವಾಸ್ತವವಾಗಿ ಇದು ಸೋವಿಯತ್‌ನ ವಿಮಾನವಾಗಿದ್ದು, ಅದರ ಅವಶೇಷ ಏರಿಯಾ 51 ಪ್ರದೇಶದಲ್ಲಿ ಉಳಿದುಕೊಂಡಿದೆ.

    ಈ ಎಲ್ಲಾ ವದಂತಿಗಳ ನಡುವೆಯೂ ಏರಿಯಾ 51 ಅಸ್ತಿತ್ವದಲ್ಲಿದ್ದು ಅದು ಇಂದಿಗೂ ಸಕ್ರಿಯವಾಗಿದೆ ಎಂಬುದು ನಿಜ. ಅಲ್ಲಿ ಏನು ನಡೆಯುತ್ತಿದೆ ಎಂಬುದು ನಿಕಟ ಹಾಗೂ ಮೇಲ್ವಿಚಾರಣೆಗೊಳಪಡಿಸಲಾದ ವ್ಯಕ್ತಿಗಳಿಗಷ್ಟೇ ತಿಳಿದಿದೆ. ಈ ಪ್ರದೇಶವನ್ನು ಅತ್ಯಂತ ಗೌಪ್ಯವಾಗಿ ಇರಿಸಿರುವ ಅಂಶ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಜನರು ಬಯಸುವಂತೆ ಮಾಡುತ್ತಿದೆ. ಈ ಪ್ರದೇಶದಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿರುವುದಾಗಿ ಏರೋಸ್ಪೇಸ್ ಇತಿಹಾಸಕಾರ ಹಾಗೂ ಲೇಖಕ ಪೀಟರ್ ಮೆರ್ಲಿನ್ ತಿಳಿಸಿದ್ದಾರೆ.

    ಏರಿಯಾ 51 ಅಸ್ತಿತ್ವಕ್ಕೆ ಬಂದಿದ್ದು ಹೇಗೆ?
    ಏರಿಯಾ 51 ಯು-2 ಯುದ್ಧ ವಿಮಾನದ ಅಭಿವೃದ್ಧಿ ಹಾಗೂ ಪ್ರಯೋಗಗಳನ್ನು ನಡೆಸಲು ಆರಂಭಿಸಲಾಗಿತ್ತು. 2ನೇ ಮಹಾಯುದ್ಧದ ಬಳಿಕ ಸೋವಿಯತ್ ಒಕ್ಕೂಟ ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ತಗ್ಗಿಸಿತು. ಇದು ಪ್ರಪಂಚದಾದ್ಯಂತ ಗುಪ್ತಚರ ಚಟುವಟಿಕೆಗಳಿಗೆ ಪ್ರೇರಣೆ ನೀಡಿತು. 1950ರಲ್ಲಿ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವಿನ ಆಕ್ರಮಣವನ್ನು ಸೋವಿಯತ್ ಬೆಂಬಲಿಸಿದಾಗ ತನ್ನ ಪ್ರಭಾವವನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ ಎಂಬುದು ಸ್ಪಷ್ಟವಾಯಿತು.

    ಇದಾದ ಬಳಿಕ ಅಮೆರಿಕ ರಹಸ್ಯವಾಗಿ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಲು ಮುಂದಾಯಿತು. 1954ರಲ್ಲಿ ಅಧ್ಯಕ್ಷ ಐಸೆನ್‌ಹೋವರ್ ಯು-2 ಪ್ರೋಗ್ರಾಂ ಎಂದು ಕರೆಯಲ್ಪಡುವ ವಿಮಾನದ ರಹಸ್ಯ ಅಭಿವೃದ್ಧಿಯನ್ನು ಅನುಮೋದಿಸಿದರು. ಇದರ ತರಬೇತಿ ಹಾಗೂ ಪರೀಕ್ಷೆಗಾಗಿ ದೂರದ ಹಾಗೂ ರಹಸ್ಯವಾದ ಸ್ಥಳವನ್ನು ಹುಡುಕಲು ಮುಂದಾಯಿತು. ಇದಕ್ಕೆ ಆಯ್ಕೆ ಮಾಡಿಕೊಳ್ಳಲಾದ ಸ್ಥಳವೇ ಈ ನೇವಾಡದ ಮರುಭೂಮಿ ಪ್ರದೇಶ.

    ನೇವಾಡದ ಮಧ್ಯಭಾಗದಲ್ಲಿರುವ ಈ ಒಂದು ನಿರ್ದಿಷ್ಟ ಪ್ರದೇಶವೇ ಉನ್ನತ ರಹಸ್ಯ ಮಿಲಿಟರಿ ನೆಲೆಯಾಗಿದೆ. 1954ರಲ್ಲಿ ಇಲ್ಲಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಾಗೂ ಅವರ ಮನವೊಲಿಸುವಂತೆ ಮಾಡಲು ಯು-2 ಯೋಜನೆಯ ಪ್ರಮುಖ ಎಂಜಿನಿರ್‌ಗಳಲ್ಲಿ ಒಬ್ಬರಾದ ಕೆಲ್ಲಿ ಜಾನ್ಸನ್ ಇದಕ್ಕೆ ವಿಭಿನ್ನವಾಗಿ ಏರಿಯಾ 51 ಎಂದು ಹೆಸರು ನೀಡಿದರು. ಇದನ್ನೂ ಓದಿ: ಭೂಕಂಪ, ಸುನಾಮಿ ಸಂಭವಿಸಿದರೂ ಜಪಾನ್‌ನಲ್ಲಿ ಜಾಸ್ತಿ ಹಾನಿಯಾಗಲ್ಲ ಯಾಕೆ? ದೇಶ ಹೇಗೆ ಎದುರಿಸುತ್ತೆ?

    1955ರಲ್ಲಿ ಯು-2 ಪರೀಕ್ಷೆಯನ್ನು ಪ್ರಾರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಥಳೀಯರು ಆಕಾಶದಲ್ಲಿ ವಿಚಿತ್ರ ವಸ್ತುಗಳು ಹಾರಾಡಿರುವ ಬಗ್ಗೆ ವರದಿ ಮಾಡಿದ್ದರು. ಇದು ಅನ್ಯಲೋಕದ ವಿಮಾನಗಳಿರಬಹುದೆಂದು ಹಲವರು ಊಹಿಸಿದರು. ಆದರೆ ವಾಯುಪಡೆ ಅಧಿಕಾರಿಗಳಿಗೆ ಈ ಹಾರುವ ವಸ್ತುಗಳು ಯು-2 ಪರೀಕ್ಷೆಗೆ ಸಂಬಂಧಪಟ್ಟಿರುವುದು ಎಂಬುದು ತಿಳಿದಿದ್ದರೂ ಇದರ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಅವಕಾಶವಿರಲಿಲ್ಲ ಎನ್ನಲಾಗಿದೆ.

    ಇಂತಹ ಒಂದು ನಿಗೂಢ ಪ್ರದೇಶವೇ ಇಲ್ಲ ಎಂದು ವಾದಿಸಿಕೊಂಡು ಬಂದಿದ್ದ ಅಮೆರಿಕ 2013ರಲ್ಲಿ ಏರಿಯಾ 51ರ ಅಸ್ತಿತ್ವವನ್ನು ದೃಢೀಕರಿಸಿದೆ. ಯು-2 ಕಾರ್ಯಾಚರಣೆಗಳು 2050ರ ದಶಕದ ಅಂತ್ಯದಲ್ಲೇ ಸ್ಥಗಿತಗೊಂಡಿದೆ. ಆದರೆ ಇತರ ಉನ್ನತ ರಹಸ್ಯ ಮಿಲಿಟರಿ ವಿಮಾನಗಳನ್ನು ಏರಿಯಾ 51ನಲ್ಲಿ ಪರೀಕ್ಷೆಗೆ ಒಳಪಡಿಸುವುದನ್ನು ಮುಂದುವರಿಸಲಾಗುತ್ತಿದೆ. ಎ-12, ಬರ್ಡ್ ಆಫ್ ಪ್ರೇ, ಎಫ್-117ಎ ಗಳಂತಹ ಹಲವಾರು ರಹಸ್ಯ ವಿಮಾನಗಳನ್ನು ನೇವಾಡದ ಪ್ರದೇಶದಲ್ಲೇ ಅಭಿವೃದ್ಧಿಪಡಿಸಿ ಪರೀಕ್ಷಿಸಲಾಗಿದೆ. ಆದರೆ 1989ರಲ್ಲಿ ಎಂಜಿನಿಯರ್ ಬಾಬ್ ಲಾಜರ್ ಅವರು ನೀಡಿದ ಒಂದು ಸಂದರ್ಶನ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಅವರು ಲಾಸ್ ವೆಗಾಸ್ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಬೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅನ್ಯಲೋಕದ ಬಾಹ್ಯಾಕಾಶ ನೌಕೆಯನ್ನು ಸರಿಪಡಿಸಲು ಹಾಗೂ ವಾಪಸ್ ಕಳುಹಿಸಲು ಸಹಾಯ ಮಾಡಿದ್ದಾಗಿ ತಿಳಿಸಿದ್ದರು. ಇದು ಏರಿಯಾ 51ನಲ್ಲಿ ಏಲಿಯನ್‌ಗಳು ಇದ್ದವು ಎಂಬ ಊಹೆಯನ್ನು ಮತ್ತಷ್ಟು ಗಾಢಗೊಳಿಸಿತು. ಆದರೆ ಏರಿಯಾ 51ನ ಇತರ ಎಂಜಿನಿಯರ್, ಉದ್ಯೋಗಿಗಳು ಸೇರಿದಂತೆ ಅನೇಕರು ಇದನ್ನು ಕಾಲ್ಪನಿಕ ಕಥೆ ಎಂದು ತಳ್ಳಿಹಾಕದರು. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಸತ್ಯವೋ ಅಥವಾ ಕಾಲ್ಪನಿಕವೋ ಆದರೆ ಏರಿಯಾ 51ರ ಪಶ್ಚಿಮಕ್ಕೆ ಏಲಿಯನ್ ಕ್ಯಾಟ್ ಹೌಸ್ ಅನ್ನು ಮಾಡಲಾಗಿದೆ. ಇದು ಏಲಿಯನ್‌ಗಳ ಸಂಶೋಧನಾ ಕೇಂದ್ರವಾಗಿದೆ. ಇದು ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿಯೂ ಸೆಳೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಅನ್ಯಗ್ರಹದಿಂದ ಬಂದಿದ್ದೇನೆ – ಬೀದಿಯಲ್ಲಿ ಬೆತ್ತಲಾಗಿ ಓಡಾಡ್ತಿದ್ದ ವ್ಯಕ್ತಿ ಅರೆಸ್ಟ್

    ನಾನು ಅನ್ಯಗ್ರಹದಿಂದ ಬಂದಿದ್ದೇನೆ – ಬೀದಿಯಲ್ಲಿ ಬೆತ್ತಲಾಗಿ ಓಡಾಡ್ತಿದ್ದ ವ್ಯಕ್ತಿ ಅರೆಸ್ಟ್

    ವಾಷಿಂಗ್ಟನ್: ಬಾಲಿವುಡ್‌ನ ಪಿಕೆ ಸಿನಿಮಾ ನೋಡಿದವರಿಗೆ ಈ ಒಂದು ಘಟನೆ ಥೇಟ್ ಅದರಂತೆಯೇ ಎನಿಸುತ್ತದೆ. ಅಮೆರಿಕದಲ್ಲಿ (America) ವ್ಯಕ್ತಿಯೊಬ್ಬ ಬೀದಿಯಲ್ಲಿ ಬೆತ್ತಲಾಗಿ (Naked) ಸಂಚರಿಸಿದ್ದಕ್ಕೆ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ ಅನ್ಯಗ್ರಹದಿಂದ (Alien) ಬಂದಿರುವುದಾಗಿ ತಿಳಿಸಿದ್ದಾನೆ.

    ಫ್ಲೋರಿಡಾದ (Florida) ಪಾಮ್ ಬೀಚ್‌ನಲ್ಲಿ (Palm Beach) 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಳಿಕ ಆತ ತಾನು ಬೇರೊಂದು ಗ್ರಹದಿಂದ ಬಂದಿದ್ದೇನೆ ಎಂದಿದ್ದಾನೆ. ಇದನ್ನೂ ಓದಿ: ನರ್ಸ್ ವೇಷ ಧರಿಸಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ

    ಪೊಲೀಸರು ಬಂಧಿಸಿದಾಗ ಆತ ನಾನು ಬಟ್ಟೆಗಳನ್ನು ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ ಎಂದಿದ್ದಾನೆ. ಆತ ತನ್ನ ಹೆಸರು ಅಥವಾ ಯಾವುದೇ ಗುರುತುಗಳನ್ನು ನೀಡಲು ನಿರಾಕರಿಸಿದ್ದಾನೆ. ಇದಾದ ಬಳಿಕ ಪೊಲೀಸರು ಆತನ ಬಗ್ಗೆ ಪತ್ತೆ ಹಚ್ಚಿ, ಹೆಸರನ್ನು ಜೇಸನ್ ಸ್ಮಿತ್ ಎಂದು ಗುರುತಿಸಿದ್ದಾರೆ.

    ವ್ಯಕ್ತಿ ನಾನು ಭೂಮಿಯವನೇ ಅಲ್ಲ, ಅನ್ಯಗ್ರಹದಿಂದ ಬಂದಿದ್ದೇನೆ. ಕೆಲ ದಿನಗಳಿಂದ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಇದೀಗ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಎನ್ ಮಹೇಶ್‌ಗೆ ಎದೆನೋವು – ಆಸ್ಪತ್ರೆಗೆ ದಾಖಲು

  • ಏಲಿಯನ್ ಸಂಪರ್ಕದಿಂದ ಗರ್ಭಿಣಿಯಾದ ಮಹಿಳೆ

    ಏಲಿಯನ್ ಸಂಪರ್ಕದಿಂದ ಗರ್ಭಿಣಿಯಾದ ಮಹಿಳೆ

    ವಾಷಿಂಗ್ಟನ್: ಅನ್ಯಗ್ರಹ ಜೀವಿಗಳು(ಏಲಿಯನ್) ಮನುಷ್ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂದು ಪೆಂಟಗನ್ ಆಘಾತಕಾರಿ ಹೇಳಿಕೆಗಳನ್ನು ನೀಡಿದೆ.

    ಅನ್ಯಗ್ರಹ ಜೀವಿಗಳು ಭೂಮಿ ಮೇಲೆ ಓಡಾಡುತ್ತೆ ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಇದರ ಬಗ್ಗೆ ಖಚಿತವಾಗಿ ಯಾವುದೇ ರೀತಿಯ ಸ್ಪಷ್ಟ ಚಿತ್ರಣವಿಲ್ಲ. ಆದರೆ ‘ದ ಸನ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ’ಯಿಂದ(DNA) ಪಡೆದ ಪೆಂಟಗನ್ ದಾಖಲೆಗಳಲ್ಲಿ ಭಾರೀ ಮಾಹಿತಿಯೊಂದು ಸಿಕ್ಕಿದ್ದು, ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ. ಪೆಂಟಗನ್ ದಾಖಲೆಗಳ ಪ್ರಕಾರ, ಅನ್ಯಗ್ರಹ ಜೀವಿಗಳು ಮನುಷ್ಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದೆ. ಈ ಹಿನ್ನೆಲೆ ಮಹಿಳೆಯೊಬ್ಬಳು ಅನ್ಯಜೀವಿ ಸಂಪರ್ಕದಿಂದ ಗರ್ಭಿಣಿಯಾಗಿದ್ದಾಳೆ ಎಂದು ವರದಿ ಮಾಡಿದೆ. ಇದನ್ನೂ ಓದಿ: ಕಪಾಳಮೋಕ್ಷ ಘಟನೆಯ ನಂತರ 10 ವರ್ಷ ಆಸ್ಕರ್ ಪ್ರಶಸ್ತಿಯಿಂದ ಬ್ಯಾನ್ ಆದ ವಿಲ್ ಸ್ಮಿತ್

    ಯುಎಸ್ ಮೂಲದ ನಾಗರಿಕ ಸಂಶೋಧನಾ ಸಂಸ್ಥೆ MUFON ಈ ಕುರಿತು ವರದಿ ಮಾಡಿದ್ದು, ‘ಉಪಯುಕ್ತ ದತ್ತಾಂಶ’ ಸಂಗ್ರಹಿಸಿದೆ. ಮಾನವನ ಮೇಲೆ ಅನ್ಯಗ್ರಹ ಜೀವಿಗಳು ಜೈವಿಕ ಪರಿಣಾಮ ಮತ್ತು ಅವುಗಳ ಆವರ್ತನವನ್ನು ಸಂಸ್ಥೆ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ, ಸಹಜ ಅಪಹರಣ, ಲೆಕ್ಕಕ್ಕೆ ಸಿಗದ ಗರ್ಭಧಾರಣೆ, ಲೈಂಗಿಕ ಮುಖಾಮುಖಿಗಳು, ಟೆಲಿಪತಿಯ ಅನುಭವ ಮತ್ತು ಗ್ರಹಿಸಿದ ಟೆಲಿಪೋರ್ಟೇಶನ್‍ನಂತಹ ವಿಚಿತ್ರ ಘಟನೆಗಳನ್ನು ತನಿಖಾ ವರದಿಯಲ್ಲಿ ಸೇರಿಸಲಾಗಿದೆ.

    ಈ ಅಧ್ಯಯನವು ಅನ್ಯಗ್ರಹ ಜೀವಿಗಳು ಮತ್ತು ಮನುಷ್ಯನ ನಡುವೆ 5 ರೀತಿಯಲ್ಲಿ ಲೈಂಗಿಕ ಸಂಪರ್ಕವಾಗುತ್ತೆ ಎಂದು ತಿಳಿಸಲಾಗಿದೆ. ಒಂದು ವೇಳೆ ಮನುಷ್ಯನು ಏಲಿಯನ್ ಸಂಪರ್ಕಕ್ಕೆ ಬಂದರೆ ಅವರು ಗಾಯಗೊಳ್ಳುವುದು, ವಿಕಿರಣ ಸುಟ್ಟುಗಾಯಗಳಿಂದ ಬಳಲುವುದು, ಮೆದುಳಿನ ಸಮಸ್ಯೆ ಮತ್ತು ನರ ಹಾನಿ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದು ಅಧ್ಯಯದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ

  • ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

    ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

    ನವದೆಹಲಿ: ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಒಂದು ಪತ್ತೆಯಾಗಿದೆ ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದು ಟ್ಯಾಂಕ್ ಅಥವಾ ದೊಡ್ಡ ಬಂಡೆಯಾಗಿರಬಹುದು ಎಂದು ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸೆಕ್ಯೂರ್‍ಟೀಂ10 ಹೆಸರಿನ ತಂಡವೊಂದು ಚಂದ್ರ ಲೋಕದಲ್ಲಿ ಕಂಡ ಈ ವಸ್ತುವಿನ ವಿಡಿಯೋವನ್ನು ಯೂ ಟ್ಯೂಬ್‍ನಲ್ಲಿ ಮೇ 9ರಂದು ಅಪ್ಲೋಡ್ ಮಾಡಿದ್ದು 6.29 ಲಕ್ಷ ವ್ಯೂ ಕಂಡಿದೆ.

    ಸಂಶೋಧಕರ ಈ ಸಂಶೋಧನೆಯ ಬಗ್ಗೆ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಚಂದ್ರನ ನೆಲದಲ್ಲಿ ಟ್ಯಾಂಕ್ ರೀತಿಯ ವಸ್ತುವೊಂದು ಪತ್ತೆಯಾಗಿದೆ ಎಂದು ಸೆಕ್ಯೂರ್‍ಟೀಂ10 ವಿಡಿಯೋದಲ್ಲಿ ಹೇಳಿಕೊಂಡಿದೆ.

  • ಮಗು ಏಲಿಯನ್‍ನಂತಿದೆ ಎಂದು ಹಾಲುಣಿಸಲು ನಿರಾಕರಿಸಿದ ತಾಯಿ!

    ಮಗು ಏಲಿಯನ್‍ನಂತಿದೆ ಎಂದು ಹಾಲುಣಿಸಲು ನಿರಾಕರಿಸಿದ ತಾಯಿ!

    – ಬಿಹಾರದಲ್ಲಿ ವಿರೂಪಗೊಂಡ ಮಗು ಜನನ
    – ಹನುಮಾನ್ ಅವತಾರ ಅಂತಿದ್ದಾರೆ ಸ್ಥಳೀಯರು

    ಪಾಟ್ನಾ: ಬಿಹಾರದ ಕತಿಹಾರ್‍ನಲ್ಲಿ ಮಹಿಳೆಯೊಬ್ಬರು ವಿರೂಪಗೊಂಡ ಮಗುವಿಗೆ ಜನ್ಮ ನೀಡಿದ್ದಾರೆ.

    ನಾಲ್ಕು ಮಕ್ಕಳ ತಾಯಿಯಾಗಿರೋ 35 ವರ್ಷದ ಖಾಲಿದಾ ಬೇಗಂ ಜನ್ಮ ನೀಡಿರೋ ಈ ಮಗುವಿನ ತಲೆ ಮುದುರಿ ಹೋಗಿದ್ದು, ಕಣ್ಣುಗಳು ಉಬ್ಬಿಕೊಂಡಿವೆ. ತಾನೇ ಜನ್ಮ ನೀಡಿರೋ ಮಗುವಿನ ರೂಪ ಕಂಡು ತಾಯಿ ಖಲೀದಾ ಶಾಕ್ ಆಗಿದ್ರು. ಮಗು ನೋಡಲು ಏಲಿಯನ್ ರೀತಿ ಇದೆ ಎಂದು ಹೇಳಿ ಮೊದಲಿಗೆ ಹಾಲುಣಿಸೋದಕ್ಕೂ ನಿರಾಕರಿಸಿದ್ದರು.

    ಮಗುವಿನ ಅನೇಕ ಅಂಗಾಗಗಳು ಸರಿಯಾಗಿ ಬೆಳವಣಿಗೆ ಹೊಂದಿಲ್ಲ. ಡೆಲಿವರಿ ಆದ ನಂತರ ಮೊದಲ ಬಾರಿಗೆ ನಾನು ಮಗು ನೋಡಿ ಶಾಕ್ ಆದೆ. ತುಂಬಾ ಬೇಜಾರಾಗಿ ಮಗುವನ್ನು ನನ್ನ ಕಣ್ಣಿಂದ ದೂರ ಕರೆದುಕೊಂಡು ಹೋಗಿ ಎಂದು ಹೇಳಿದೆ ಅಂತ ಖಲೀದಾ ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಖಾಲಿದಾ ಮಗುವನ್ನ ತಿರಸ್ಕರಿಸಿದ್ರೂ, ಮಗುವಿನ ತಂದೆ ಮೊಹಮ್ಮದ್ ಇಮ್ತಿಯಾಸ್ ಸೇರಿದಂತೆ ಇಲ್ಲಿನ ಸ್ಥಳೀಯರು ಇದು ಹನುಮಾನ್ ಅವತಾರ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

    ವೈದ್ಯರ ಪ್ರಕಾರ ನವಜಾತ ಮಗುವಿಗೆ ಹರ್ಲೆಕ್ವಿನ್ ಇಕ್ತ್ಯೋಸಿಸ್ ಎಂಬ ಅನುವಂಶಿಕ ತೊಂದರೆಯಿದ್ದು, ಈ ಸಮಸ್ಯೆ ಇರುವವರಿಗೆ ಚರ್ಮ ದಪ್ಪವಾಗಿ ಅಂಗಾಂಗಗಳು ವಿರೂಪಗೊಂಡಿರುತ್ತವೆ. ಅಲ್ಲದೆ ಈ ಮಗುವಿಗೆ ಅನಾನ್ಸೆಫಲಿ ತೊಂದರೆ ಇರಬಹುದು ಎಂದು ಕೂಡ ತಜ್ಞರು ಊಹಿಸಿದ್ದಾರೆ.