ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದ ಸೀಕ್ವೆಲ್ ಯಾವಾಗ ಬರಲಿದೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ‘ಬ್ರಹ್ಮಾಸ್ತ್ರ’ ಸೀಕ್ವೆಲ್ ಬರೋದಾಗಿ ರಣಬೀರ್ ಖಚಿತಪಡಿಸಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು
ಅಂತೂ ಇಂತೂ ಅಭಿಮಾನಿಗಳ ಕಾತರಕ್ಕೆ ಬ್ರೇಕ್ ಬಿದ್ದಿದೆ. ‘ಬ್ರಹ್ಮಾಸ್ತ್ರ 2’ ಬಗ್ಗೆ ಇಂಟರೆಸ್ಟಿಂಗ್ ಸುದ್ದಿಯನ್ನ ರಣಬೀರ್ ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ರಣಬೀರ್ ಕಪೂರ್ ಮಾತನಾಡಿ, ‘ಬ್ರಹ್ಮಾಸ್ತ್ರ 2’ (Brahmastra 2) ಬರುವ ಬಗ್ಗೆ ಖಚಿತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ಅಯಾನ್ ‘ವಾರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಿದ್ದು, ಸಿನಿಮಾ ರಿಲೀಸ್ ಆದ್ಮೇಲೆ ‘ಬ್ರಹ್ಮಾಸ್ತ್ರ 2’ಗೆ ಚಾಲನೆ ಸಿಗಲಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನೂ 2022ರಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ಬಿಗ್ ಬಿ, ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಅನೇಕರು ನಟಿಸಿದ್ದರು. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ (Love And War) ಚಿತ್ರದಲ್ಲಿ ರಣ್‌ಬೀರ್ ಕಪೂರ್ (Ranbir Kapoor), ಆಲಿಯಾ ಭಟ್ (Aliaa Bhatt), ವಿಕ್ಕಿ ಕೌಶಲ್ (Vicky Kaushal) ಜೊತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳುಗಳಿಂದ ಸದ್ದು ಮಾಡಿತ್ತು. ಆದರೆ ಶೂಟಿಂಗ್ ಶುರುವಾಗೋದು ಯಾವಾಗ? ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ? ಎಂದವರಿಗೆ ತಕ್ಕ ಉತ್ತರ ಕೊಟ್ಟ ನಯನತಾರಾ
ಬಹುನಿರೀಕ್ಷಿತ ‘ಲವ್ ಆ್ಯಂಡ್ ವಾರ್’ ಸಿನಿಮಾದ ಶೂಟಿಂಗ್ ನವೆಂಬರ್ 7ರಿಂದ ಮುಂಬೈನಲ್ಲಿ ಶುರುವಾಗಲಿದೆ. ಮೊದಲ ಹಂತದ ಶೂಟಿಂಗ್‌ನಲ್ಲಿ ನಟ ರಣ್‌ಬೀರ್ ಕಪೂರ್ ಮಾತ್ರ ಭಾಗಿಯಾಗುತ್ತಿದ್ದಾರೆ. ಆ ನಂತರ ವಿಕ್ಕಿ ಕೌಶಲ್ ಮತ್ತು ಆಲಿಯಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಸದ್ಯ ರಣ್‌ಬೀರ್ ಭಾಗದ ಚಿತ್ರೀಕರಣ ಶುರುವಾಗಲಿದೆ.
ಇನ್ನೂ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣ್‌ಬೀರ್ ಮತ್ತು ಆಲಿಯಾ ಜೊತೆಯಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ‘ಲವ್ ಆ್ಯಂಡ್ ವಾರ್’ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಟ್ರಯಾಂಗಲ್ ಲವ್ ಸ್ಟೋರಿಯಾಗಿದ್ದು, ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.
ಬಾಲಿವುಡ್ ನಟ ರಣ್‌ಬೀರ್ ಕಪೂರ್‌ಗೆ (Ranbir Kapoor) ವಿಲನ್ ಆಗಿ ಗೆದ್ದ ಮೇಲೆ ಆಲಿಯಾ ಭಟ್‌ಗೆ ಮುಂದೆ ಅಬ್ಬರಿಸಲು ಬಾಬಿ ಡಿಯೋಲ್ (Bobby Deol) ರೆಡಿಯಾಗಿದ್ದಾರೆ. ರಣ್‌ಬೀರ್ ಪತ್ನಿ ಮುಂದೆ ವಿಲನ್ ಮೆರೆಯಲು ಪಣ ತೊಟ್ಟಿದ್ದಾರೆ. ಇದನ್ನೂ ಓದಿ:ಶಿಂಧೆ ಬಣದ ಶಿವಸೇನೆ ಸೇರಿದ ನಟ ಗೋವಿಂದ್
‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಮುಂದೆ ಖಡಕ್ ಖಳನಟನಾಗಿ ಗೆದ್ದು ಬೀಗಿದ್ದರು. ಚಿತ್ರದ ಗೆಲುವಿಗೆ ಬಾಬಿ ಡಿಯೋಲ್ ಕೂಡ ಕಾರಣವಾಗಿದ್ದರೂ ಹೀಗಿರುವಾಗ ಅವರಿಗೆ ಇದೀಗ ಬಂಪರ್ ಚಾನ್ಸ್‌ವೊಂದು ಸಿಕ್ಕಿದೆ.
ಯಶ್ ರಾಜ್ ಫಿಲ್ಮ್ಸ್ ಹೊಸ ಗೂಢಚಾರಿ ಸರಣಿ ‘ಸ್ಪೈ ವರ್ಸ್’ ಸಿನಿಮಾದಲ್ಲಿ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ವಾಘ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಮುಂದೆ ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಬಾಬಿ ಡಿಯೋಲ್ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಲಿಯಾ ಭಟ್ ನಟಿಸಲಿರುವ ಈ ಚಿತ್ರಕ್ಕೆ ಆದಿತ್ಯಾ ಚೋಪ್ರಾ ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್‌ನಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.
ಅಂದಹಾಗೆ, ‘ಅನಿಮಲ್’ ಚಿತ್ರದ ಸಕ್ಸಸ್ ನಂತರ ಬಾಲಿವುಡ್ ಮಾತ್ರವಲ್ಲ ತೆಲುಗಿನಿಂದ ಕೂಡ ಬಾಬಿ ಡಿಯೋಲ್ ಅವಕಾಶಗಳು ಅರಸಿ ಬರುತ್ತಿದೆ. ಕಥೆ ಮತ್ತು ಪಾತ್ರ ನೋಡಿ ನಟ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
‘ಅನಿಮಲ್’ ಸಿನಿಮಾ (Animal Film) 500 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ರಣ್‌ಬೀರ್ ಕಪೂರ್‌ಗೆ (Ranbir Kapoor) ಸಿನಿಮಾ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ. ಇದೇ ಖುಷಿಯಲ್ಲಿ ಕ್ರಿಸ್ಮಸ್ ಹಬ್ಬದಂದು ಮಗಳು ರಾಹಾ ಮುಖ ಕೂಡ ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗಳ ಹೆಸರಿನಲ್ಲಿ ಮಕ್ಕಳ ಕಲ್ಯಾಣಕ್ಕೆ 1 ಲಕ್ಷ ರೂ. ರಣ್‌ಬೀರ್ ಕಪೂರ್ ದೇಣಿಗೆ ನೀಡಿದ್ದಾರೆ.
ಮಗಳು ಹುಟ್ಟಿದ ದಿನದಿಂದ ಮಗಳ ಲುಕ್‌ನ್ನ ಎಲ್ಲಿಯೂ ರಣ್‌ಬೀರ್ ದಂಪತಿ ರಿವೀಲ್ ಮಾಡಿರಲಿಲ್ಲ. ಆದರೆ ನಿನ್ನೆ (ಡಿ.25) ರಿವೀಲ್ ಮಾಡಿದ್ದರು. ಕ್ರಿಸ್ಮಸ್ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಆಲಿಯಾ-ರಣ್‌ಬೀರ್, ರಾಹಾ ಮುಖ ಪಾಪರಾಜಿಗಳ ಕ್ಯಾಮೆರಾಗೆ ತೋರಿಸಿದ್ದರು. ಮುದ್ದು ಮುದ್ದಾಗಿರೋ ರಾಹಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ಜೊತೆಗೆ ಮಕ್ಕಳ ಕಲ್ಯಾಣಕ್ಕೆ ರಣ್‌ಬೀರ್ ಕಪೂರ್ ದೇಣಿಗೆ ನೀಡಿರುವ ಬಗ್ಗೆ ಆಲಿಯಾ ತಾಯಿ ಸೋನಿ ಅವರು ರಿವೀಲ್ ಮಾಡಿದ್ದಾರೆ.
ಮಗಳು ರಾಹಾ ಮುಖ ರಿವೀಲ್ ಮಾಡಿರುವ ಬೆನ್ನಲ್ಲೇ ದೇಣಿಗೆ ವಿಚಾರ ಕೂಡ ಸಖತ್ ಸುದ್ದಿಯಾಗುತ್ತಿದೆ. ರಣ್‌ಬೀರ್- ಆಲಿಯಾ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಅನಿರುದ್ಧ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಹುಡುಗಿಗೆ ಅವಕಾಶ
ಬಾಲಿವುಡ್‌ನಲ್ಲಿ ರಣ್‌ಬೀರ್- ಆಲಿಯಾ ಭಟ್ (Alia Bhatt) ಇಬ್ಬರಿಗೂ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅನಿಮಲ್ ಸಕ್ಸಸ್ ನಂತರ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಇನ್ನೂ ಮದುವೆಯಾಗಿ ಮಗುವಾಗಿದ್ರೂ ಕೂಡ ಆಲಿಯಾ ಭಟ್ ಚಾರ್ಮ್ ಕಮ್ಮಿಯಾಗಿಲ್ಲ. ಸಿನಿಮಾರಂಗದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿ ಜನಮನ್ನಣೆ ಗಳಿಸಿದ್ದಾರೆ.
ಬಾಲಿವುಡ್ ನಟ ರಣ್‌ಬೀರ್ ಕಪೂರ್- ಆಲಿಯಾ ಭಟ್ (Aliaa Bhatt) ಜೋಡಿ ಕ್ರಿಸ್ಮಸ್ ದಿನದಂದು ಮಗಳ ಮುಖ ರಿವೀಲ್ ಮಾಡಿದ್ದಾರೆ. ಕೊನೆಗೂ ಮಗಳ ಮುಖ ರಿವೀಲ್ ಮಾಡುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.
2022ರಲ್ಲಿ ರಣ್‌ಬೀರ್-ಆಲಿಯಾ ಮದುವೆಯಾಗಿದ್ದರು. ಹಲವು ವರ್ಷಗಳು ಪ್ರೀತಿಸಿ ದಾಂಪತ್ಯದ ಮುದ್ರೆ ಒತ್ತಿದ್ದರು. ಕಳೆದ ವರ್ಷ ನವೆಂಬರ್ 6ರಂದು ರಾಹಾಗೆ (Raha) ಆಲಿಯಾ ಭಟ್ ಜನ್ಮ ನೀಡಿದ್ದರು. ಮಗಳ ಹೆಸರನ್ನ ರಿವೀಲ್ (Reveal) ಮಾಡಿದ್ದು ಬಿಟ್ಟರೇ, ಮುಖವನ್ನು ಎಲ್ಲೂ ತೋರಿಸಿರಲಿಲ್ಲ. ಇದನ್ನೂ ಓದಿ:ನಿರೂಪ್ ಜೊತೆ ಡ್ಯುಯೆಟ್ ಹಾಡೋಕೆ ಸಜ್ಜಾದ ಬೃಂದಾ
ರಾಹಾ ಮುಖದಲ್ಲಿ ನೀಲಿ ಕಣ್ಣುಗಳು ಹೈಲೆಟ್ ಆಗಿದ್ದು, ಮುದ್ದು ಮದ್ದಾಗಿದ್ದಾಳೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ರಾಹಾ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈಗ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಗಳ ಜೊತೆಗಿನ ರಣ್‌ಬೀರ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸದ್ದು ಮಾಡುತ್ತಿವೆ.
ಮಗಳ ಜೊತೆ ರಣ್‌ಬೀರ್ (Ranbir Kapoor) ದಂಪತಿ ಕ್ರಿಸ್ಮಸ್ ಪಾರ್ಟಿ ಮಾಡಿದ್ದಾರೆ. ಸದ್ಯ ರಾಹಾ (Raha) ಲುಕ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಾಹಾ ಪೋಸ್ ನೋಡಿ ತಂದೆಗೆ ತಕ್ಕ ಮಗಳು ಎಂದು ಫ್ಯಾನ್ಸ್ ಹಾಡಿ ಹೊಗಳುತ್ತಿದ್ದಾರೆ.
ತಂತ್ರಜ್ಞಾನ ದುರ್ಬಳಕೆಯಿಂದ ರಶ್ಮಿಕಾ ಮಂದಣ್ಣ (Rashmika Mandanna) ಡೀಪ್‌ಫೇಕ್ (Deepafake) ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಆಲಿಯಾ ಭಟ್‌ಗೂ ಅದೇ ಕಂಟಕ ಎದುರಾಗಿದೆ. ಬೇರೆ ಯಾರದ್ದೋ ಮಹಿಳೆಯ ದೇಹಕ್ಕೆ ಆಲಿಯಾ ಮುಖವನ್ನ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ರಶ್ಮಿಕಾ ಮಂದಣ್ಣ? ನಟಿ ಸ್ಪಷ್ಟನೆ
ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬೆನ್ನಲೇ ಸೈಬರ್ ಕ್ರೈಂ ತಂಡ ಕಠಿಣ ಕ್ರಮ ಕೈಗೊಂಡರೂ ಕೂಡ ಮತ್ತೆ ಕಿಡಿಗೇಡಿಗಳಿಂದ ಕಾಟ ಶುರುವಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಅರೆ ಬರೆ ಬಟ್ಟೆಯಲ್ಲಿ ಸಖತ್ ಹಾಟ್ ಕಾಣಿಸಿಕೊಂಡಿರುವ ಯುವತಿಯ ದೇಹಕ್ಕೆ ಆಲಿಯಾ (Aliaa Bhatt) ಮುಖ ಅಂಟಿಸಿ ವೈರಲ್ ಮಾಡಿದ್ದಾರೆ.
ಈ ಹಿಂದೆಯೂ ಕೂಡ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಕಲಾವಿದರು ರಶ್ಮಿಕಾ ಪರ ಧ್ವನಿಯೆತ್ತಿದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಅನೇಕರು ಮನವಿ ಮಾಡಿದ್ದರು. ಇದನ್ನೂ ಓದಿ:ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ರಶ್ಮಿಕಾ ಮಂದಣ್ಣ? ನಟಿ ಸ್ಪಷ್ಟನೆ
ಸದ್ಯ ಆಲಿಯಾ ಭಟ್ ಅವರು ಸಿನಿಮಾ ಮತ್ತು ತಾಯ್ತನದ ಹೊಣೆ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ಹೀರೋ ಫರ್ಹಾನ್ ಅಖ್ತರ್ (Farhan Akhtar) ಅವರು ನಟನೆ- ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರ ಮುಂಬರುವ ನಿರ್ದೇಶನದ ಸಿನಿಮಾ ‘ಜೀ ಲೇ ಜರಾ’ (Jee Le Zara) ಚಿತ್ರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಗಳು ಎದುರಾಗಿತ್ತಿದೆ. ಫರ್ಹಾನ್ ನಿರ್ದೇಶನದ ಜೀ ಲೇ ಜರಾ ಸಿನಿಮಾ ಪ್ರಿಯಾಂಕಾ ಚೋಪ್ರಾ ಹೊರನಡೆದಿದ್ದಾರೆ. ಪಿಗ್ಗಿ ರಿಜೆಕ್ಟ್ ಮಾಡಿದ ಸಿನಿಮಾ ನಟಿಸಲು ಅನುಷ್ಕಾ ಶಮಾ ನೋ ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ವೈವಾಹಿಕ ಜೀವನ, ಹಾಲಿವುಡ್ ಸಿನಿಮಾ ಅಂತಾ ಅಮೆರಿಕದಲ್ಲೇ ಸೆಟಲ್ ಆಗಿದ್ದಾರೆ. ಕೊರೊನಾಗೂ ಮುನ್ನ ಒಪ್ಪಿಕೊಂಡಿದ್ದ ಫರ್ಹಾನ್ ಅಖ್ತರ್ ಸಿನಿಮಾದಿಂದ ಈಗ ಹೊರ ನಡೆದಿದ್ದಾರೆ. ಸಿಟಾಡೆಲ್ ಸಕ್ಸಸ್ ಬಳಿಕ ಹಾಲಿವುಡ್ ಸಿಟಾಡೆಲ್ 2ಗೆ ತಯಾರಿ ನಡೆಯುತ್ತಿದೆ. ಸಿಟಾಡೆಲ್ 2 ಮತ್ತು ‘ಜೀ ಲೇ ಜರಾ’ ಸಿನಿಮಾ ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ಬಾಲಿವುಡ್ ಚಿತ್ರದಿಂದ ಪ್ರಿಯಾಂಕಾ ಹೊರಬಂದಿದ್ದಾರೆ. ಜೀ ಲೇ ಜರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿತ್ತು. ಆಲಿಯಾ ಭಟ್ (Alia Bhatt), ಕತ್ರಿಕಾ ಕೈಫ್ (Katrina Kaif) ಮತ್ತು ಪ್ರಿಯಾಂಕಾ ಫೈನಲ್ ಆಗಿದ್ರು. ಈಗ ಪ್ರಿಯಾಂಕಾ ರೋಲ್‌ಗೆ ಸೂಕ್ತ ನಟಿಯ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ
ಈ ಬಂಪಲ್ ಆಫರ್ ಅನುಷ್ಕಾಗೆ ಅರಸಿ ಬಂದಿದೆ. ಆದರೆ ಅವರು ನೋ ಎಂದಿದ್ದಾರೆ. ಅನುಷ್ಕಾ ಶರ್ಮಾ (Anushka Sharma) ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ವೃತ್ತಿಜೀವನ ಮತ್ತು ಕುಟುಂಬಕ್ಕೆ ಅವರು ಸಮಯ ಹೊಂದಿಸುತ್ತಿದ್ದಾರೆ. ಹೆಣ್ಣು ಮಗುವಿನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಕೆಲವು ಜಾಹೀರಾತುಗಳಲ್ಲೂ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಜೀ ಲೇ ಜರಾ ಸಿನಿಮಾಗೆ ಕಾಲ್‌ಶೀಟ್ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅದನ್ನು ಹೊರತುಪಡಿಸಿದರೆ ಈ ಆಫರ್ ತಿರಸ್ಕರಿಸಲು ಬೇರೆ ಯಾವುದೇ ಕಾರಣ ಇಲ್ಲ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಅವರು ‘ಜೀ ಲೇ ಜರಾ’ ಸಿನಿಮಾದಿಂದ ಹೊರನಡೆದಿದ್ದಕಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಅವರಿಗೆ ತಲೆಬಿಸಿ ಶುರುವಾಗಿದೆ. ಪ್ರಿಯಾಂಕಾ ಚೋಪ್ರಾ ಬದಲಿಗೆ ಬೇರೆ ಯಾವ ನಟಿಯನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಇದೇ ರೀತಿ ವಿಳಂಬವಾದರೆ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಈ ಸಿನಿಮಾದಿಂದ ಹೊರನಡೆಯಬಹುದು. ಆಗ ಫರ್ಹಾನ್ ಅಖ್ತರ್ ಅವರು ಸಂಪೂರ್ಣವಾಗಿ ಈ ಸಿನಿಮಾವನ್ನು ಕೈ ಬಿಡಬೇಕಾಗುತ್ತದೆ.