Tag: Alia Kashyap

  • ವಿದೇಶಿ ಮೂಲದ ಗೆಳೆಯನೊಂದಿಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಡೇಟಿಂಗ್

    ವಿದೇಶಿ ಮೂಲದ ಗೆಳೆಯನೊಂದಿಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಡೇಟಿಂಗ್

    ಬಾಲಿವುಡ್‌ನ ಖ್ಯಾತ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ಒಂದಲ್ಲಾ ಒಂದು ವಿಚಾರವಾಗಿ ಟ್ರೇಂಡಿಂಗ್‌ನಲ್ಲಿರುತ್ತಾರೆ. ಇದೀಗ ತನ್ನ ಪ್ರೀಯಕರ ಶೇನ್ ಜೊತೆಗಿನ ಬೋಲ್ಡ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡ್ತಿದ್ದಾರೆ.

    ಖ್ಯಾತ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮೊದಲ ಪತ್ನಿ ಆರತಿ ಬಜಾಜ್ ಅವರ ಮಗಳು ಆಲಿಯಾ ಕಶ್ಯಪ್ ಆಗಾಗ ಬಾಯ್‌ಫ್ರೆಂಡ್‌ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಗೆಳೆಯ ಶೇನ್ ಗ್ರೆಗೊಯಿರ್ ಜತೆ ಆಲಿಯಾ ಸದಾ ಸುತ್ತಾಡುತ್ತಾ, ಬೋಲ್ಡ್ ಮತ್ತು ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಇದೀಗ ಪ್ರವಾಸಕ್ಕೆ ಪ್ರಿಯಕರನ ಜತೆ ಇಟಲಿಗೆ ಹಾರಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಸಮಂತಾ- ರಶ್ಮಿಕಾ ಮಂದಣ್ಣ ಡ್ಯುಯೇಟ್.!

     

    View this post on Instagram

     

    A post shared by Aaliyah Kashyap (@aaliyahkashyap)

    ಆಲಿಯಾ ಕಶ್ಯಪ್ ಇತ್ತೀಚೆಗಷ್ಟೇ ಇಟಲಿಯಲ್ಲಿ ತನ್ನ ಗೆಳೆಯನೊಂದಿಗೆ ಸಮಯ ಕಳೆಯುತ್ತಿರುವುದನ್ನು ಹಂಚಿಕೊಂಡಿದ್ದಾಳೆ. ಆಲಿಯಾ ತನ್ನ ಗೆಳೆಯ ಶೇನ್ ಚುಂಬಿಸಿದ ಚಿತ್ರಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ, ವೈರಲ್ ಆಗಿದ್ದಾರೆ. ಆಲಿಯಾ ಮತ್ತು ಶೇನ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರು ಯೂಟ್ಯೂಬ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕೂಡ 21ರ ಆಲಿಯಾ ತನ್ನ ಗಳೆಯನ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದರು. ಸದ್ಯ ಇಟಲಿಯಲ್ಲಿ ಶೇನ್ ಜತೆ ಕಾಲ ಕಳೆಯುತ್ತಿದ್ದಾರೆ. ಬೋಲ್ಡ್ ಫೋಟೋಗಳ ಮೂಲಕ ಸೌಂಡ್ ಮಾಡ್ತಿದ್ದಾರೆ.

    Live Tv

  • ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನೀವೇನು ಯೋಚಿಸ್ತೀರಿ? ಅನುರಾಗ್ ಕಶ್ಯಪ್ ಗೆ ಪುತ್ರಿಯ ಪ್ರಶ್ನೆ

    ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನೀವೇನು ಯೋಚಿಸ್ತೀರಿ? ಅನುರಾಗ್ ಕಶ್ಯಪ್ ಗೆ ಪುತ್ರಿಯ ಪ್ರಶ್ನೆ

    ಮುಂಬೈ: ಮದುವೆಗೂ ಮುನ್ನ ಸೆಕ್ಸ್ ನಡೆಸಿದ್ರೆ, ನೀವು ನನ್ನ ಬಗ್ಗೆ ಏನೂ ಯೋಚಿಸುತ್ತೀರಿ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಗೆ  ಅವರ ಪುತ್ರಿ ಆಲಿಯಾ  ಪ್ರಶ್ನೆ ಮಾಡಿದ್ದಾಳೆ.

    ಅನುರಾಗ್ ಕಶ್ಯಪ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಲಿಯಾ ತಂದೆಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಮದುವೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಕೇಳಿದ್ದಾಳೆ.

    ಮಗಳ ಪ್ರಶ್ನೆಗೆ ಉತ್ತರಿಸಿರುವ ಅನುರಾಗ್ ಕಶ್ಯಪ್, ಇದೆಂತಹ ಪ್ರಶ್ನೆ? 80ರ ದಶಕದಲ್ಲಿ ನಾವು ಈ ಪ್ರಶ್ನೆಗಳನ್ನು ಕೇಳುತ್ತಿದ್ದೀವಿ. ಈ ಪ್ರಶ್ನೆಯಿಂದ ಮುಂದೆ ಹೋಗೋಣ ಎಂದು ಉತ್ತರ ನೀಡಿದ್ದಾರೆ. ನಾವು ಕಾಲೇಜಿನಲ್ಲಿದ್ದಾಗ ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೇವು. ನಾವು ಬೇರೆಯವರಿಗೆ ಈ ಬಗ್ಗೆ ಉಪದೇಶ ಸಹ ನೀಡುವ ಪ್ರಯತ್ನ ಮಾಡುತ್ತಿದ್ದೇವು ಎಂದು ತಂದೆ ಹೇಳಿದಾಗ, ಮದುವೆಗೆ ಮುನ್ನ ಸೆಕ್ಸ್ ಬಗ್ಗೆಗಿನ ಮಾತುಗಳು ನಾರ್ಮಲ್? ಎಂದು ಮರುಪ್ರಶ್ನೆ ಹಾಕಿದ್ದಾಳೆ. ಸದ್ಯ ಸಮಯ ಸಾಕಷ್ಟು ಬದಲಾಗಿದೆ. ಈ ವೇಳೆ ಇಂತಹ ಪ್ರಶ್ನೆಗಳು ಅವಶ್ಯ ಅಲ್ಲ ಎಂದು ಅನುರಾಗ್ ಕಶ್ಯಪ್ ಮಾತು ಬದಲಿಸಿದ್ದಾರೆ.

    ಗೆಳೆಯ ಶೆನ್ ಗ್ರಗೊಯರ್ ಜೊತೆ ಆಲಿಯಾ ಮುಂಬೈಗೆ ಬಂದಿದ್ದು, ಇದೇ ವೀಡಿಯೋದಲ್ಲಿ ಪ್ರಿಯಕರನ ಬಗ್ಗೆ ಕೇಳಿದ್ದಾಳೆ. ನನಗೆ ನಿನ್ನ ಗೆಳೆಯ ಶೆನ್ ಇಷ್ಟ, ನೀನು ಗೆಳೆಯರ ಆಯ್ಕೆಯ ಬಗ್ಗೆ ಮೆಚ್ಚುಗೆ ಇದೆ. ಶೆನ್ ಒರ್ವ ಒಳ್ಳೆಯ ಆಧ್ಯಾತ್ಮಿಕ, ಶಾಂತ ಸ್ವಭಾವದ ಹುಡುಗ. 40 ವರ್ಷದ ಪುರುಷರಂತ ಮೆಚ್ಯೂರ್ ಮೈಂಡ್ ಹುಡುಗ ಎಂದು ಮಗಳ ಗೆಳೆಯನ ಗುಣಗಾನ ಮಾಡಿದ್ದಾರೆ.