ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಜು.12ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ನಟ, ನಟಿಯರು ಭಾಗಿಯಾಗಿದ್ದಾರೆ. ಇದರ ನಡುವೆ ಈಗ 160 ವರ್ಷದ ಹಿಂದಿನ ಸೀರೆಯುಟ್ಟು ಮಿಂಚಿದ ಆಲಿಯಾ ಭಟ್ (Alia Bhatt) ಲುಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಅನಂತ್, ರಾಧಿಕಾ ಮದುವೆಗೆ ಯಶ್ (Yash) ಮತ್ತು ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ (Rashmika Mandanna), ದೀಪಿಕಾ ಪಡುಕೋಣೆ, ಶಾರುಖ್, ಸಲ್ಮಾನ್ ಖಾನ್, ಬಿಗ್ ಬಿ ಫ್ಯಾಮಿಲಿ ಸೇರಿದಂತೆ ಹೀಗೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದರು. ಆಲಿಯಾ ಮತ್ತು ರಣ್‌ಬೀರ್ ಕಪೂರ್ ದಂಪತಿ ಕೂಡ ಮದುವೆಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದರು. ಇದನ್ನೂ ಓದಿ:‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

ಇನ್ನೂ ಮದುವೆಯಲ್ಲಿ ಆಲಿಯಾ ಭಟ್, 160 ವರ್ಷದ ಹಳೆಯ ಆಶಾವಲಿ ಸೀರೆಯನ್ನು ಧರಿಸಿ ಮಿಂಚಿದ್ದು ಎಲ್ಲರ ಗಮನ ಸೆಳೆದಿದೆ. ನಟಿ ಧರಿಸಿದ ಪಿಂಕ್ ಸೀರೆಯನ್ನು ಗುಜರಾತ್‌ನಲ್ಲಿ ತಯಾರಿಸಲಾಗಿದೆ. ಶುದ್ಧ ರೇಷ್ಮೆ, ಝರಿಯನ್ನು ಬಳಸಿದ್ದಾರೆ. ಜೊತೆಗೆ 6 ಗ್ರಾಂ ಶುದ್ಧ ಚಿನ್ನವನ್ನು ಹಾಕಿ ಸೀರೆಯನ್ನು ತಯಾರಿಸಲಾಗಿದೆ.
ಶುದ್ಧ ರೇಷ್ಮೆ ಮತ್ತು 99%ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಕೂಡ ಇದು ಹೊಂದಿದೆ. ಗುಜರಾತ್‌ನಲ್ಲಿ ತಯಾರಿಸಿದ ಈ ಸೀರೆಗೆ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಹೊಸದಾಗಿ ಡಿಸೈನ್ ಮಾಡಿದ್ದಾರೆ. ಈ ಸೀರೆಯ ಬೆಲೆ 2 ಕೋಟಿ ರೂ. ಮೌಲ್ಯದಾಗಿದೆ. ಸದ್ಯ ಆಲಿಯಾ ಭಟ್ ಲುಕ್ ಮತ್ತು ಸೀರೆಯ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.










ಅನುಷ್ಕಾ ಶರ್ಮಾ(Anushka Sharma) ಮತ್ತು ವಿರಾಟ್ ಕೊಹ್ಲಿ (Viraat Kohli) ಅವರಂತೆಯೇ ಆಲಿಯಾ ದಂಪತಿ ಯೋಚನೆ ಮಾಡಿದ್ದು, ಸದ್ಯ ಮಗಳು ರಾಹಾ ಮುಖವನ್ನು ರಿವೀಲ್ ಮಾಡುವ ಪ್ಲ್ಯಾನ್‌ನಲ್ಲಿ ಇಲ್ಲ. ರಾಹಾ ಬೆಳವಣಿಗೆಯನ್ನು ಖಾಸಗಿಯಾಗಿ ಇಡಲು ಆಲಿಯಾ-ರಣ್‌ಬೀರ್ ಜೋಡಿ ಯೋಚಿಸಿದ್ದಾರೆ.
ಇನ್ನೂ ನಟಿ ಆಲಿಯಾ ಭಟ್ `ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’, `ಬ್ರಹ್ಮಾಸ್ತ್ರ 2′ (Bhramastra 2) ಚಿತ್ರದ ಮೂಲಕ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಈಗ ಆಲಿಯಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮತ್ತೆ 2ನೇ ಬಾರಿ ಆಲಿಯಾ ಪ್ರೆಗ್ನೆಂಟ್ (Pregnant) ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಣ್‌ಬೀರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ರಣ್‌ಬೀರ್, ಆಲಿಯಾ ಇಬ್ಬರು ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: 










