Tag: Alia

  • ಬಹಿರಂಗ ಪತ್ರ ಬರೆದು ಮತ್ತೆ ಗಂಭೀರ ಆರೋಪ ಮಾಡಿದ ನಟ ನವಾಜುದ್ದೀನ್ ಪತ್ನಿ

    ಬಹಿರಂಗ ಪತ್ರ ಬರೆದು ಮತ್ತೆ ಗಂಭೀರ ಆರೋಪ ಮಾಡಿದ ನಟ ನವಾಜುದ್ದೀನ್ ಪತ್ನಿ

    ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಅವರ ಪತ್ನಿ ಆಲಿಯಾ (Alia)  ಜಗಳ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದವರು, ಇದೀಗ ಆ ಜಗಳದಲ್ಲಿ ತಮ್ಮ ಅಪ್ರಾಪ್ತ ಮಗಳನ್ನೂ ಎಳೆದು ತಂದಿದ್ದಾರೆ. ನವಾಜುದ್ದೀನ್ ಪತ್ನಿ ಆಲಿಯಾ ಬರೆದ ಬಹಿರಂಗ ಪತ್ರದಲ್ಲಿ ಸಿದ್ದಿಕಿ ಮ್ಯಾನೇಜರ್ ತಮ್ಮ ಪುಟ್ಟ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡ ಎಂದು ಹೇಳಿಕೊಂಡಿದ್ದಾರೆ.

    ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಸದ್ಯ ದೂರ ದೂರವಿದ್ದಾರೆ. ಡಿವೋರ್ಸ್ (Divorced) ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳು ಯಾರ ಜೊತೆ ಇರಬೇಕು ಎನ್ನುವುದರ ಬಗ್ಗೆ ಕೋರ್ಟಿನಲ್ಲಿ ನ್ಯಾಯ ತೀರ್ಮಾನ ಆಗಬೇಕಿದೆಯಂತೆ. ಹಾಗಾಗಿ ಮಕ್ಕಳು ತನ್ನೊಂದಿಗೆ ಇರಬೇಕು ಎನ್ನುವುದು ಆಲಿಯಾ ವಾದ. ಆದರೆ, ಅದಕ್ಕೆ ನವಾಜುದ್ದೀನ್ ಒಪ್ಪುತ್ತಿಲ್ಲ. ಈ ವಿಚಾರವಾಗಿ ಆಲಿಯಾ ಗಂಭೀರ ಆರೋಪ ಮಾಡಿದ್ದು, ನವಾಜುದ್ದೀನ್ ಅಪಾಯಕಾರಿ ತಂದೆ, ಬೇಜವಾಬ್ದಾರಿ ಮನುಷ್ಯ. ಅವರ ಮ್ಯಾನೇಜರ್ ಕೂಡ ಸರಿಯಿಲ್ಲ’ ಎಂದು ಆರೋಪ ಮಾಡಿದ್ದಾರೆ.

    ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

    ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.

  • ನವಾಜುದ್ದೀನ್ ಸಿದ್ದಿಕಿ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

    ನವಾಜುದ್ದೀನ್ ಸಿದ್ದಿಕಿ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

    ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಇವರ ಹೆಂಡತಿಯ ಜಗಳ ನಾನಾ ರೂಪ ಪಡೆದುಕೊಳ್ಳುತ್ತಿದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಹೆಂಡತಿಯ ವಿರುದ್ಧ ಹಲವು ಪೋಸ್ಟ್ ಗಳನ್ನು ಸಿದ್ದಿಕಿ ಹಾಕಿದ್ದರು. ಹಲವು ದಿನಗಳ ನಂತರ ಮೌನ ಮುರಿದಿದ್ದರು. ನವಾಜುದ್ದೀನ್ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ನಟಿ ಕಂಗನಾ ರಣಾವತ್ (Kangana Ranaut) ಪ್ರಕರಣದಲ್ಲಿ ಪ್ರವೇಶ ಮಾಡಿದ್ದಾರೆ. ಮೌನ ಯಾವತ್ತು ನೋವನ್ನುಂಟು ಮಾಡುತ್ತಿದೆ. ಎಲ್ಲವನ್ನೂ ಹಂಚಿಕೊಂಡಿದ್ದೀರಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ.

    ನವಾಜುದ್ದೀನ್ ಸಿದ್ದಿಕಿ ಹಾಗೂ ಪತ್ನಿ ಆಲಿಯಾ (Alia) ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು. ಇದನ್ನೂ ಓದಿ:ಬರ್ತ್‌ಡೇ ಬಗ್ಗೆ ಅಪ್‌ಡೇಟ್ ನೀಡಿದ ರಾಧಿಕಾ ಪಂಡಿತ್

    ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

    ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

    ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.

  • ಆಲಿಯಾ ನನ್ನ ಪತ್ನಿಯಲ್ಲ, ನನ್ನ ಮಕ್ಕಳ ತಾಯಿ ಅಷ್ಟೆ: ನಟ ನವಾಜುದ್ದೀನ್ ಸಿದ್ದಿಕಿ

    ಆಲಿಯಾ ನನ್ನ ಪತ್ನಿಯಲ್ಲ, ನನ್ನ ಮಕ್ಕಳ ತಾಯಿ ಅಷ್ಟೆ: ನಟ ನವಾಜುದ್ದೀನ್ ಸಿದ್ದಿಕಿ

    ಬಾಲಿವುಡ್ ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಹಾಗೂ ಪತ್ನಿ ಆಲಿಯಾ (Alia) ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.

    ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ (Divorced) ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ (Dubai) ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

    ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.

  • ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ

    ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ

    ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಪತ್ನಿ ಆಲಿಯಾ (Alia) ನಡುವಿನ ಗಲಾಟೆ ಹೊಸದೇನೂ ಅಲ್ಲ. ಆ ಜಗಳಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸ್ವತಃ ಗಂಡನ ವಿರುದ್ಧವೇ ನಟನ ಪತ್ನಿ ಆಲಿಯಾ ರೇಪ್ (Rape) ಕೇಸ್ ದಾಖಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

    ನವಾಜುದ್ದೀನ್ ಸಿದ್ದಿಕಿ ಕುಟುಂಬ ತಮ್ಮ ಮೇಲೆ ಸತತವಾಗಿ ಹಲ್ಲೆ ಮಾಡಿದೆ. ಊಟ, ನೀರು ಕೊಡದೇ ಹಿಂಸಿಸಿದೆ ಎಂದು ಈ ಹಿಂದೆ ಮಾಧ್ಯಮಗಳ ಜೊತೆ ತಮ್ಮ ನೋವುಗಳನ್ನು ಹೇಳಿಕೊಂಡಿದ್ದರು ಆಲಿಯಾ. ಇದೀಗ ತಮ್ಮ ಮೇಲೆ ನವಾಜ್ ಅತ್ಯಾಚಾರ ಮಾಡಿದ್ದಾರೆ ಎಂದು ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮನ್ನು ಮನೆಯಿಂದ ಆಚೆ ಹಾಕಲು ಏನೆಲ್ಲ ತಂತ್ರಗಳನ್ನು ಅವರು ಹೂಡಿದ್ದರು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ತಮ್ಮ ಮಕ್ಕಳನ್ನು ನವಾಜುದ್ದೀನ್ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಸಮಾಜದ ಮುಂದೆ ತಾವು ಮಹಾನ್ ವ್ಯಕ್ತಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅತಿ ಹಿಂಸೆಯನ್ನೂ ನನಗೆ ನೀಡಿದ್ದಾರೆ. ಹಾಗಾಗಿ ನಾನು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಮಕ್ಕಳನ್ನು ಅವನಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಈಗಾಗಲೇ ತಮ್ಮ ಮಕ್ಕಳನ್ನು ತಮಗೆ ಕೊಡಬೇಕು ಎಂದು ನವಾಜುದ್ದೀನ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಆಲಿಯಾ ಮಾತನಾಡಿದ್ದು, ಹುಟ್ಟಿದಾಗಿಂದ ಈವರೆಗೂ ಮಕ್ಕಳ ಬಗ್ಗೆ ಕಾಳಜಿ ತೋರಿಸದೇ ಇರುವವನು, ಈಗೇಕೆ ಇಷ್ಟೊಂದು ಪ್ರೀತಿ ಬಂದಿದೆ ಎಂದು ಅರ್ಥವಾಗುತ್ತಿಲ್ಲ. ನನ್ನಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ದೂರ ಮಾಡುವುದಕ್ಕೆ ಆಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

  • ಸೋತು ಕಂಗೆಟ್ಟಿದ್ದ ರಣಬೀರ್ ಗೆ ಆಸರೆಯಾಗಿದ್ದು ಆಲಿಯಾ!

    ಸೋತು ಕಂಗೆಟ್ಟಿದ್ದ ರಣಬೀರ್ ಗೆ ಆಸರೆಯಾಗಿದ್ದು ಆಲಿಯಾ!

    – ಸೋಲುಗಳಿಂದಲೇ ಪಾಠ ಕಲಿತಿದ್ದಾನಂತೆ ರಣಬೀರ್ ಕಪೂರ್!
    – ಕುಸಿದು ಬಿದ್ದಾಗ ತೂರಿ ಬಂದಿತ್ತು ಆಳಿಗೊಂದು ಕಲ್ಲು!

    ಮುಂಬೈ: ಸದ್ಯ ಬಾಲಿವುಡ್ ತುಂಬಾ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಂಜಯ್ ದತ್ ಜೀವನಾಧಾರಿತ ಚಿತ್ರದ ಪ್ರಮುಖ ಆಕರ್ಷಣೆ ರಣಬೀರ್ ಕಪೂರ್. ಥೇಟು ಸಂಜಯ್ ದತ್ ನನ್ನು ಹೋಲುವಂಥಾದ್ದೇ ಹಾವಭಾವ, ಬಾಡಿ ಲಾಂಗ್ವೇಜ್‍ಗಳಿಂದ ರಣಬೀರ್ ಭಾರೀ ಸದ್ದು ಮಾಡುತ್ತಿದ್ದಾನೆ. ಹೀಗೆ ಈ ಪಾತ್ರದಲ್ಲಿ ಈತನನ್ನು ತಲ್ಲೀನನಾಗಿ ನಟಿಸುವಂತೆ ಪ್ರೇರೇಪಿಸಿರೋದು ಸೋಲಿಗೆ ಸೆಡ್ಡು ಹೊಡೆಯೋ ಉಮೇದು. ಈ ಹಿಂದೆ ಸುತ್ತಿಕೊಂಡ ದೊಡ್ಡ ಮಟ್ಟದ ಸೋಲಿನಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವ ತಹ ತಹ!

    ಗೆಲುವನ್ನಷ್ಟೇ ಹೆಗಲ ಮೇಲೆ ಹೊತ್ತು ಮೆರೆದಾಡುತ್ತಾ ಸೋತವರನ್ನು ಮೆಟ್ಟಿ ಹೊಸಕೋದು ಬಣ್ಣದ ಜಗತ್ತಿನ ಮಾಮೂಲು ವರಸೆ. ಇದರಿಂದ ಬಾಲಿವುಡ್ ಕೂಡಾ ಹೊರತಾಗಿಲ್ಲ. ಒಂದು ಚಿತ್ರ ತೀರಾ ಸೋಲಬೇಕೆಂದೇನೂ ಇಲ್ಲ. ಬಾಕ್ಸಾಫೀಸಿನಲ್ಲಿ ಕೊಂಚ ಡಲ್ಲು ಹೊಡೆದರೂ ಎಂಥಾ ಸ್ಟಾರ್ ಆದರೂ ಆತನನ್ನು ಒಂದು ಮಟ್ಟಕ್ಕೆ ಕಡೆಗಣಿಸಲಾಗುತ್ತೆ. ಸೂಕ್ಷ್ಮ ಮನಸುಗಳನ್ನು ಘಾಸಿಗೊಳಿಸುವಂಥಾ ವಿದ್ಯಮಾನಗಳೂ ಧಾರಾಳವಾಗಿಯೇ ನಡೆಯುತ್ತವೆ.

    ಪರಿಪಕ್ವವಾದ ನಟನಾಗಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ರಣಬೀರ್ ಕಪೂರ್ ಕೂಡಾ ಇಂಥಾದ್ದೊಂದು ಆಘಾತವನ್ನ ಎದುರುಗೊಂಡಿದ್ದಾನೆ. ಈ ಹಿಂದೆ ಭಾರೀ ಸದ್ದು ಮಾಡುತ್ತಲೇ ಈತ ನಟಿಸಿದ್ದ ಜಗ್ಗ ಜಾಜೂಸ್ ಚಿತ್ರ ತೆರೆಗಂಡಿತ್ತು. ಈ ಚಿತ್ರ ದೊಡ್ಡ ಮಟ್ಟದ ಹಿಟ್ ಚಿತ್ರವಾಗಿ ದಾಖಲಾಗುತ್ತದೆ ಎಂಬಂತೆ ಹವಾ ಸೃಷ್ಟಿಸಿತ್ತು. ಆದರೆ ಈ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಅದೇಕೋ ನೀರಸ ಪ್ರತಿಕ್ರಿಯೆ ಸಿಕ್ಕಿ ಬಾಕ್ಸಾಫೀಸಿನಲ್ಲಿಯೂ ಡಲ್ಲು ಹೊಡೆಯುವಂತಾಗಿತ್ತು. ಅದಾದ ಮರುಕ್ಷಣದಿಂದಲೇ ರಣಬೀರ್ ಕಪೂರನತ್ತ ಆಳಿಗೊಂದು ಕಲ್ಲುಗಳು ತೂರಿ ಬರಲಾರಂಭಿಸಿದ್ದವು!

    ವರ್ಷಾನುಗಟ್ಟಲೆ ಇಂಥಾ ಸೋಲಿನ ಯಾತನೆಯಿಂದ ಕಂಗಾಲಾದ ರಣಬೀರ್ ಕಪೂರ್ ಸಂಜಯ್ ಜೀವನಾಧಾರಿತ ಚಿತ್ರದ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಎದ್ದು ನಿಂತಿದ್ದಾನೆ. ಸ್ವತಃ ಆತನೇ ತಾನು ಗೆಲುವಿನಿಂದ ಅದೇನು ಕಲಿತೆನೋ ಗೊತ್ತಿಲ್ಲ. ಆದರೆ ಸೋಲುಗಳಿಂದ ದೊಡ್ಡ ದೊಡ್ಡ ಪಾಠವನ್ನೇ ಕಲಿತಿದ್ದೇನೆ ಎಂಬಂಥ ಮಾತುಗಳನ್ನೂ ಆಡಿದ್ದಾನೆ. ಇನ್ನೂ ಪ್ರಮುಖ ವಿಚಾರವೆಂದರೆ ಜಗ್ಗ ಜಾಜೂಸ್ ಸೋಲಿನಿಂದ ಕಂಗಾಲಾಗಿದ್ದ ರಣಬೀರ್‍ಗೆ ಸಂಪೂರ್ಣ ಸಾಥ್ ನೀಡಿ ಎದ್ದು ನಿಲ್ಲುವಂತೆ ಮಾಡಿದ್ದ ಆಲಿಯಾ ಭಟ್ ಪ್ರೀತಿ. ಸೋಲಿನಿಂಗ ಕಂಗೆಟ್ಟಿದ್ದ ರಣಬೀರ್‍ಗೆ ಆಲಿಯಾ ಕ್ಷಣ ಕ್ಷಣವೂ ಹೆಗಲಾಗಿದ್ದಳಂತೆ. ಮತ್ತೊಂದು ಗೆಲುವಿನ ರೂವಾರಿಯಾಗಲು ಉತ್ತೇಜಿಸಿದ್ದಳಂತೆ. ಆ ಬಲದಿಂದಲೇ ರಣಬೀರ್ ಸಂಜಯ್ ಚಿತ್ರದ ಮೂಲಕ ಮೈ ಕೊಡವಿಕೊಂಡು ಮೇಲೆದ್ದು ನಿಂತಿದ್ದಾನೆ!