Tag: Ali

  • ನಟಿ ತುನಿಷಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಬಾಯ್ ಫ್ರೆಂಡ್ ಬಿಚ್ಚಿಟ್ಟ ಡೇಟಿಂಗ್ ವಿಷಯ

    ನಟಿ ತುನಿಷಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಬಾಯ್ ಫ್ರೆಂಡ್ ಬಿಚ್ಚಿಟ್ಟ ಡೇಟಿಂಗ್ ವಿಷಯ

    ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೋರ್ವ ಹುಡುಗನ ಎಂಟ್ರಿ ಆಗಿದೆ. ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಪರ ವಕೀಲರು ಈ ಮಾಹಿತಿಯನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಶಿಜಾನ್ ಮತ್ತು ತುನಿಷಾ ಪ್ರೀತಿಸುತ್ತಿದ್ದರು ನಿಜ. ಆದರೆ, ತುನಿಷಾ ಆತ್ಮಹತ್ಯೆ ಮಾಡಿಕೊಂಡ ಹದಿನೈದು ದಿನಕ್ಕೂ ಮುನ್ನ ಬ್ರೇಕ್ ಅಪ್ ಆಗಿತ್ತು. ಆಕೆ ಡೇಟಿಂಗ್ ಆಪ್ ಬಳಸುತ್ತಿದ್ದಳು. ಅಲಿ ಎನ್ನುವ ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎಂದು ತಿಳಿಸಿದ್ದಾರೆ. ಆಕೆ ಸಾಯುವ ಮುನ್ನ ಅಲಿ ಜೊತೆ ವಿಡಿಯೋ ಚಾಟ್ ಮಾಡಿದ್ದಳು ಎಂದೂ ಅವರು ತಿಳಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಗಳು ಬರುತ್ತಿವೆ. ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ನನ್ನ ಮಗಳು ತುನಿಷಾ ಸಾವಿಗೆ ನೇರವಾಗಿ ಅವಳ ಬಾಯ್ ಫ್ರೆಂಡ್ ಶಿಜಾನ್ ಕಾರಣವೆಂದು ಮತ್ತೊಮ್ಮೆ ತುನಿಷಾ ತಾಯಿ ಆರೋಪ ಮಾಡಿದ್ದಾರೆ. ಶಿಜಾನ್ ಕಿರುಕುಳದ ಬಗ್ಗೆ ಮತ್ತೊಂದು ಬಾಂಬ್ ಹಾಕಿರುವ ಅವರು, ಅವನೊಬ್ಬ ಡ್ರಗ್ಸ್ ವ್ಯಸನಿ ಆಗಿದ್ದ. ಅದನ್ನು ಸಂಭಾಳಿಸಲೆಂದೇ ನನ್ನ ಮಗಳು ನಮ್ಮಿಂದ ಮೂರು ತಿಂಗಳಲ್ಲಿ ಮೂರು ಲಕ್ಷ ರೂಪಾಯಿ ಪಡೆದಿದ್ದಳು. ಅವನ ಆ ಚಟಕ್ಕೆ ನನ್ನ ಮಗಳು ದುಡ್ಡಿನ ಭಾರ ಹೊರಬೇಕಿತ್ತು ಎಂದಿದ್ದಾರೆ.

    ತುನಿಷಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಸ್ವತಃ ತುನಿಷಾ ತಾಯಿಯೇ ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಮ್ಮ ಕುಟುಂಬದ ಜೊತೆ ತುನಿಷಾ ಚೆನ್ನಾಗಿಯೇ ಇದ್ದಳು ಎಂದು ಮೊನ್ನೆಯಷ್ಟೇ ಶಿಜಾನ್ ಕುಟುಂಬ ಮಾಧ್ಯಮಗಳ ಜೊತೆ ಮಾತನಾಡುತ್ತಾ ತಿಳಿಸಿತ್ತು. ಈ ಮಾತಿಗೆ ತುನಿಷಾ ತಾಯಿ ಪ್ರತಿಕ್ರಿಯೆ ಕೊಟ್ಟು. ನನ್ನ ಮಗಳು ಚೆನ್ನಾಗಿಯೇ ಇದ್ದಳು. ಅವರ ಮಗ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ

    ತನ್ನ ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಿಜಾನ್ ಕುಟುಂಬ ಉತ್ತರ ನೀಡಿದ್ದು, ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪು ಮನೆಗೆ ಭೇಟಿ ಕೊಟ್ಟ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ, ಅಲಿ

    ಅಪ್ಪು ಮನೆಗೆ ಭೇಟಿ ಕೊಟ್ಟ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ, ಅಲಿ

    ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 6 ತಿಂಗಳಾದರೂ ಅವರು ಎಲ್ಲರ ಮನದಲ್ಲಿ ಅಜರಾಮರರಾಗಿದ್ದಾರೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳು ಅವರಿಗೋಸ್ಕರ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತ ಇರುತ್ತಾರೆ. ಇವರಿಗೆ ಸಿನಿ ಕ್ಷೇತ್ರದ ಎಲ್ಲ ಭಾಷೆಯಲ್ಲಿಯೂ ಸ್ನೇಹಿತ ಬಂಧುಗಳು ಹೆಚ್ಚು ಇದ್ದಾರೆ. ಈ ಹಿನ್ನೆಲೆ ಅವರ ಸಮಾಧಿ ಮತ್ತು ಮನೆಗೆ ಹಲವು ಗಣ್ಯರು ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವದ ಮಾತುಗಳನ್ನು ಹೇಳುತ್ತಾರೆ.

    ಟಾಲಿವುಡ್ ಸೂಪರ್ ಸ್ಟಾರ್, ಕಾಮಿಡಿ ಕಿಂಗ್ ಬ್ರಹ್ಮಾನಂದಂ ಹಾಗೂ ಅಲಿ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಅಪ್ಪು ಜೊತೆಗೆ ಕಳೆದ ದಿನಗಳನ್ನು ಬ್ರಹ್ಮಾನಂದಂ ಅಪ್ಪು ಕುಟುಂಬದೊಂದಿಗೆ ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಬ್ರಹ್ಮಾನಂದಂ ಹಾಗೂ ಅಲಿ ಸಾಂತ್ವಾನದ ಮಾತುಗಳನ್ನ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

    ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‍ಕುಮಾರ್, ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್, ಯುವ ರಾಜ್‍ಕುಮಾರ್ ಸಹ ಇದ್ದರು. ಅವರೊಂದಿಗೂ ಹಲವು ಹೊತ್ತು ಮಾತುಕತೆ ನಡೆಸಿದ್ದಾರೆ.

    ಟಾಲಿವುಡ್ ಹಾಸ್ಯನಟರಾದ ಅಲಿ ಹಾಗೂ ಬ್ರಹ್ಮಾನಂದಂ ಇಬ್ಬರೂ ಪವರ್  ಜೊತೆ ಒಳ್ಳೆಯ ಸಂಬಂಧವೊಂದಿದ್ದರು. ಅಲ್ಲದೇ ಬ್ರಹ್ಮಾನಂದಂ ಅವರು ಅಪ್ಪು ಜೊತೆ ‘ನಿನ್ನಿಂದಲೇ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಇವರ ಪಾತ್ರ ಚಿಕ್ಕದಿದ್ದರೂ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ಸನ್ನು ಕಂಡಿದ್ದರು.