Tag: alcoholism

  • ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಆಕ್ಸಿಡೆಂಟ್ ಮಾಡಿದ ನಟಿ ಅಶ್ವಥಿ ಸ್ನೇಹಿತ

    ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಆಕ್ಸಿಡೆಂಟ್ ಮಾಡಿದ ನಟಿ ಅಶ್ವಥಿ ಸ್ನೇಹಿತ

    ನ್ನ ಸ್ನೇಹಿತನ ಜೊತೆ ಪಾರ್ಟಿ ಮುಗಿಸಿಕೊಂಡು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಕೇರಳದ ನಟಿ ಅಶ್ವಥಿ ಬಾಬು ಮತ್ತು ಆಕೆಯ ಸ್ನೇಹಿತ ನೌಫಲ್ ಪೊಲೀಸರಿಗೆ ಅತಿಥಿಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಐದಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಅಶ್ವಥಿ ಕೇರಳದ ಕಾಕನಾಡ ಮೂಲದವರು ಎನ್ನಲಾಗುತ್ತಿದೆ.

    ಜುಲೈ 26ರ ಸಂಜೆ 6.30ರ ವೇಳೆಗೆ ಅಲುವಾದ ಮುತ್ತೊಮ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಸಿಯುಎಸ್ಎಟಿ ಜಂಕ್ಷನ್ ನಿಂದ ಥ್ರಿಕ್ಕಕ್ಕರ ದೇವಸ್ಥಾನದವರೆಗೂ ನಟಿಯ ಸ್ನೇಹಿತ ನೌಫಲ್ ಕುಡಿದ ಮತ್ತಿನಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದ್ದಾನಂತೆ. ಹೀಗಾಗಿ ಒಂದು ಕಾರು ಮತ್ತು ನಾಲ್ಕು ದ್ವಿಚಕ್ರವಾಹನ ಜಖಂ ಆಗಿವೆ. ಕೂಡಲೇ ಕಾರು ನಿಲ್ಲಿಸಿದ ನಟಿ ಮತ್ತು ಸ್ನೇಹಿತರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಕೂಡ ಮಾಡಿದ್ದಾರೆ. ಇದನ್ನೂ ಓದಿ:ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

    ಕಾರು ಢಿಕ್ಕಿಯಾದ ನಂತರ ಸ್ಥಳದಿಂದ ತಪ್ಪಿಸಿಕೊಳ್ಳಲು ನಟಿ ಮತ್ತು ನಟಿಯ ಸ್ನೇಹಿತ ಪ್ರಯತ್ನಿಸಿದ್ದಾರೆ. ಕೂಡಲೇ ಅವರನ್ನು ಹಿಡಿದು ಹಾಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ ನೆರೆದಿದ್ದವರು. ಕೂಡಲೇ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೌಫಲ್ ವಿಪರೀತ ಮದ್ಯ ಸೇವನೆ ಮಾಡಿರುವುದು ತಿಳಿದು ಬಂದಿದೆ.

    \Live Tv
    [brid partner=56869869 player=32851 video=960834 autoplay=true]

  • ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

    ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

    -ಕುರಿ ಸಾಕಾಣಿಕೆಗೆ ಮುಂದಾದ ವ್ಯಕ್ತಿ

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಮದ್ಯ ಸಿಗದೆ ಪರದಾಡಿದವರೇ ಹೆಚ್ಚು. ಆದರೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಮದ್ಯವ್ಯಸನಿ ವೃದ್ಧನೋರ್ವ ಕುಡಿತ ಬಿಟ್ಟು ಕುರಿ ತಂದು ಸಾಕಾಣಿಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

    ಗ್ರಾಮದ ಚಿಕ್ಕಮುನಿಯಪ್ಪ ಎಂಬವರು ಮದ್ಯವ್ಯಸನಿಂದ ದೂರು ಬಂದು ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಲಾಕ್‍ಡೌನ್ ನಡುವೆ ಎಣ್ಣೆ ಸಿಗದೇ ಪರಿತಪ್ಪಿಸಿದ್ದ ಚಿಕ್ಕಮುನಿಯಪ್ಪ ಕೊನಗೆ ಮದ್ಯಕ್ಕೆ ವಿದಾಯ ಹೇಳಿ ಈಗ ಎರಡು ಕುರಿ ತಂದು ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ. ಸುಮಾರು 6,000 ರೂ.ನಿಂದ ಒಂದು ಕುರಿ ಹಾಗೂ ಕುರಿ ಮರಿ ಖರೀದಿಸಿ ಈಗ ಅವುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಹಲವು ವರ್ಷಗಳಿಂದಲೂ ಮದ್ಯ ವ್ಯಸನಿಯಾಗಿದ್ದ ಚಿಕ್ಕಮನಿಯಪ್ಪ ಕೂಲಿ ನಾಲಿ ಮಾಡಿ ಬಂದ ಹಣವನ್ನೆಲ್ಲಾ ಮದ್ಯ ಖರೀದಿಗೆ ಬಳಸುತ್ತಿದ್ದರು. ಆದರೆ ಈಗ ಕೊರೊನಾ ಎಫೆಕ್ಟ್ ನಿಂದ ಮದ್ಯವೂ ಸಿಗದೆ ಪರಿತಪಿಸಿದ್ದ ಚಿಕ್ಕಮುನಿಯಪ್ಪರಿಗೆ ಮೊದ ಮೊದಲು ಕೈ ಕಾಲು ನಡುಗುವುದು, ಅದರುವುದು ಆಗಿದೆ. ಆದರೆ ಗಟ್ಟಿ ಮನಸ್ಸು ಮಾಡಿದ ಚಿಕ್ಕಮುನಿಯಪ್ಪ ದಿನದಿಂದ ದಿನಕ್ಕೆ ಮದ್ಯದ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಂಡಿದ್ದಾರೆ. ಕೊನೆಗೆ ಎರಡು ಕುರಿ ಮರಿ ತಂದು ಸಾಕುವ ನಿರ್ಧಾರ ಮಾಡಿ ಕುರಿ ಹಾಗೂ ಮರಿಯೊಂದನ್ನ ಖರೀದಿ ಮಾಡಿ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇನ್ನೂ ಮೂರು ದಿನಗಳಿಂದ ಮದ್ಯ ಮಾರಾಟ ನಡೆಯುತ್ತಿದ್ದರೂ, ಎಣ್ಣೆ ಸಿಗುತ್ತೆ ಅಂತ ಗೊತ್ತಿದ್ರೂ ಮದ್ಯದತ್ತ ಮುಖ ಮಾಡದ ಚಿಕ್ಕಮುನಿಯಪ್ಪ, ಕುರಿಗಳ ಸಾಕಾಣಿಕೆ ಜೊತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ವೃದ್ಧನ ಮಾದರಿ ನಿರ್ಧಾರಕ್ಕೆ ಗ್ರಾಮಸ್ಥರು ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಕುರಿಗಳನ್ನ ತಂದು ಸಾಕಾಣಿಕೆ ಮಾಡಬೇಕು ಎಂದು ವೃದ್ದ ಚಿಕ್ಕಮುನಿಯಪ್ಪ ಹೇಳುತ್ತಾರೆ.

  • ಮದ್ಯಪಾನಕ್ಕೆ 20 ರೂ. ಕೊಡ್ಲಿಲ್ಲ ಅಂತ ತಾಯಿಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡ್ದ!

    ಮದ್ಯಪಾನಕ್ಕೆ 20 ರೂ. ಕೊಡ್ಲಿಲ್ಲ ಅಂತ ತಾಯಿಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡ್ದ!

    ಬೆಳಗಾವಿ: ವ್ಯಕ್ತಿಯೊಬ್ಬ ಮದ್ಯಪಾನ ಮಾಡಲು 20 ರೂ ನೀಡಲಿಲ್ಲ ಎಂದು ತನ್ನ ವೃದ್ಧ ತಾಯಿಯನ್ನೇ ಕಲ್ಲು, ಕಟ್ಟಿಗೆಯಿಂದ ತಲೆಗೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಗುಗ್ರಾನಟ್ಟಿ ಗ್ರಾಮದಲ್ಲಿ ನಡೆದಿದೆ.

    66 ವರ್ಷದ ಪಾರ್ವತಿ ಕೊಲೆಯಾದ ತಾಯಿ. ಇವರ ಮಗನಾದ ಆರೋಪಿ ಸುರೇಶ ದಾಸರಕರ ಕಳೆದ ಹಲವಾರು ವರ್ಷಗಳಿಂದ ಕುಡಿತದ ಚಟಕ್ಕೆ ಬಲಿಯಾಗಿದ್ದ. ಕಳೆದ ರಾತ್ರಿ ಸುರೇಶ್ ತಾಯಿ ಪಾರ್ವತಿ ಜೊತೆ ಜಗಳವಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ತಕ್ಷಣ ತಾಯಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸುರೇಶ್‍ನನ್ನು ಬಂಧಿಸಲಾಗಿದೆ.

     

  • ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ರಾಯಚೂರು: ಬಿರು ಬೇಸಿಗೆಯಲ್ಲಿ ಮೇಲಗಡೆ ತಂಪು, ಕೆಳಗಡೆ ತಂಪು, ಅಲ್ಲಲ್ಲಿ ನಿಂತ ನೀರು, ತಣ್ಣನೆ ಮರಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಮದ್ಯಪಾನ. ಇದು ರಾಯಚೂರಿನ ದೇವದುರ್ಗದ ನಾರಾಯಣಪುರ ಬಲದಂಡೆ ಕಾಲುವೆಯ ಸೇತುವೆಗಳ ಕೆಳಗೆ ಕಂಡು ಬರುವ ಸಾಮಾನ್ಯ ದೃಶ್ಯ. ಬಿಸಿಲನಾಡು ರಾಯಚೂರಿನಲ್ಲಿ ಬರಗಾಲದಿಂದ ಖಾಲಿ ಖಾಲಿಯಾಗಿರುವ ಎನ್‍ಆರ್‍ಬಿಸಿ ಕಾಲುವೆಗಳು ಈಗ ಮದ್ಯವ್ಯಸನಿಗಳ ಹಾಟ್ ಸ್ಪಾಟ್‍ಗಳಾಗುತ್ತಿವೆ.

    ಬಿರುಬಿಸಿಲಿನ ಝಳತಪ್ಪಿಸಿಕೊಂಡು ಮದ್ಯಪಾನಮಾಡಲು ವ್ಯಸನಿಗಳು ಕಾಲುವೆಯ ಸೇತುವೆಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟಕ್ಕೆ ಕಿವಿಗೊಡದ ಸರ್ಕಾರದ ನಿಲುವು ಮದ್ಯಪಾನಿಗಳಿಗೆ ಅನುಕೂಲವಾಗಿದೆ. ನೀರಾವರಿ ಸಲಹಾ ಸಮಿತಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ ಕಾಲುವೆಗಳು ಖಾಲಿ ಖಾಲಿಯಾಗಿವೆ. ಹೀಗಾಗಿ ದಾರಿಹೋಕರು, ಪುಂಡಪೋಕರಿಗಳು, ಸುತ್ತಮುತ್ತಲ ಗ್ರಾಮಗಳ ಮದ್ಯವ್ಯಸನಿಗಳಿಗೆ ಸೇತುವೆ ಕೆಳಗಿನ ಕಾಲುವೆ ಜಾಗ ಮದ್ಯಪಾನಕ್ಕೆ ಹೇಳಿಮಾಡಿಸಿದಂತಾಗಿದೆ. ಮದ್ಯಪಾನ ಮಾಡಿ ಬಾಟಲ್, ಪೌಚ್, ನೀರಿನ ಪ್ಲಾಸ್ಟಿಕ್ ಗ್ಲಾಸ್‍ಗಳನ್ನ ಕಾಲುವೆಯಲ್ಲೇ ಎಸೆದು ಹೋಗುತ್ತಿದ್ದಾರೆ.

    ನೀರಾವರಿ ಸಲಹಾ ಸಮಿತಿ ನಾರಾಯಣಪುರ ಬಲದಂಡೆ ಕಾಲುವೆಗೆ ಮಾರ್ಚ್ 26 ರಿಂದ 30 ರವರೆಗೆ ಐದು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದೆ. ಆದ್ರೆ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರಿಗೆ ನೀರು ತಲುಪುವುದು ಅನುಮಾನವಾಗಿದೆ. ಇನ್ನೂ ಕೇವಲ 5 ದಿನ ನೀರು ಹರಿಸಿದರೆ 16, 17, 18 ನೇ ವಿತರಣಾ ಕಾಲುವೆಗೆ ಹನಿ ನೀರು ಸಹ ತಲುಪುವುದಿಲ್ಲ ಅಂತ ರೈತರು ಆರೋಪಿಸಿದ್ದಾರೆ.

    ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟ ನಡೆಸಿದ್ದಾರೆ. ಕಾಳು ಕಟ್ಟಿರುವ ಭತ್ತ, ಶೇಂಗಾ ,ಕಡಲೆ ಬೆಳೆಗಳು ಒಣಗಿಹೋಗುತ್ತಿದ್ದು, ಕಾಲುವೆಯ ಕೆಳಭಾಗದ ರೈತರು ಬೆಳೆಹಾನಿ ಆತಂಕದಲ್ಲಿದ್ದಾರೆ. ಆದ್ರೆ ಸರ್ಕಾರ ಮಾತ್ರ ಕಾಲುವೆಗೆ ನೀರು ಬಿಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮದ್ಯ ವ್ಯಸನಿಗಳಿಗೆ ಸರ್ಕಾರವೇ ಜಾಗ ಹುಡುಕಿ ಕೊಟ್ಟಂತಾಗಿದೆ.

    ಒಟ್ನಲ್ಲಿ, ಪವಿತ್ರ ಕೃಷ್ಣೆ ಹರಿಯಬೇಕಾದ ಸ್ಥಳದಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಬೆಳಿಗ್ಗೆಯಿಂದಲೇ ಠಿಕಾಣಿ ಹೂಡೋ ಕುಡುಕರು ಸಂಜೆ ವೇಳೆಗೆ ಮನೆಕಡೆ ತೆರಳುತ್ತಿದ್ದಾರೆ. ಕನಿಷ್ಟ ಈಗಲಾದ್ರೂ ಸರ್ಕಾರ ಎಚ್ಚೆತ್ತು ಕುಡುಕರ ತಾಣವಾಗುತ್ತಿರುವ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕಿದೆ. ರೈತರ ಬೆಳೆಗಳನ್ನ ರಕ್ಷಿಸಬೇಕಿದೆ.

     

  • ಬೆಳಗಾವಿ: `90′ ಜಾಸ್ತಿ ಆಗಿ ಸ್ನೇಹಿತನನ್ನೇ ಕೊಲೆ ಮಾಡಿಬಿಟ್ರು!

    ಬೆಳಗಾವಿ: `90′ ಜಾಸ್ತಿ ಆಗಿ ಸ್ನೇಹಿತನನ್ನೇ ಕೊಲೆ ಮಾಡಿಬಿಟ್ರು!

    ಬೆಳಗಾವಿ: ಕಂಠಪೂರ್ತಿ ಕುಡಿದು ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಾಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮುರಳೀಧರ್ ವಸಂತ್ ನಿಕ್ಕಂ (33) ಕೊಲೆಯಾದ ವ್ಯಕ್ತಿ. ಫೆಬ್ರವರಿ 10 ರಂದು ಮುರಳೀಧರ್ ಹಾಗೂ ಅವನ ಸ್ನೇಹಿತರಾದ ಬಾಬಲೆ ಗೋಪಾಲ್ ಪವಾರ್ (34), ಹಲಸಿ ಅರಣ್ಯದ ಆದಿವಾಸಿ ಬಬನ ವಿಠ್ಠಲ್ ಪವಾರ್ (35), ಹಲಸಾಲ ಅರಣ್ಯದ ಆದಿವಾಸಿ ಅಂಕುಶ್ ದುಲೇಖಾನ್ ನಿಕ್ಕಂ (34) ಮತ್ತು ಕುಟಿನೋನಗರ ಅರಣ್ಯದ ಆದಿವಾಸಿ ಗೋಪಾಲ್ ಅಜರುನ್ ಪವಾರ (28) ಐವರು ಸೇರಿ ಪಾರ್ಟಿ ಮಾಡಿದ್ದಾರೆ.

    ಎಲ್ಲರೂ ಕಂಠಪೂರ್ತಿ ಕುಡಿದು ಐವರ ಮಧ್ಯೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಬಾಬಲೆ, ಬಬನ, ಅಂಕುಶ್ ಮತ್ತು ಗೋಪಾಲ್ ನಾಲ್ವರು ಸೇರಿ ಮುರಳೀಧರನನ್ನು ಕೊಲೆ ಮಾಡಿ ನಾಗರಾಳಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಕೊಲೆ ಬಗ್ಗೆ ಯಾರು ದೂರು ನೀಡಿರಲಿಲ್ಲ. ಈ ನಾಲ್ವರು ಒಂದೇ ಕಡೆ ಕಟ್ಟಿಗೆ ಕಡಿಯುವ ಕೆಲಸ ಮಾಡುತ್ತಿದ್ದರು. ಮುರಳೀಧರ್ ಕೆಲಸಕ್ಕೆ ಬಾರದೇ ಕಣ್ಮರೆಯಾಗಿದ್ದರಿಂದ ಗುತ್ತಿಗೆದಾರ ಪೊಲೀಸರಿಗೆ ದೂರು ನೀಡಿದ್ದಾರೆ.

    ಗುತ್ತಿಗೆದಾರರ ದೂರು ಆಧರಿಸಿ ತನಿಖೆಗಿಳಿದ ನಂದಗಢ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಳೆಯನನ್ನು ಕೊಲೆ ಮಾಡಿದ ಬಾಬಲೆ, ಬಬನ್, ಅಂಕುಶ್ ಮತ್ತು ಗೋಪಾಲ್ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರ ಮಾಹಿತಿ ಆಧಾರದ ಮೇಲೆ ಎಸಿ ರಾಜಶ್ರೀ ಅವರ ನೇತೃತ್ವದಲ್ಲಿ ಹೂತಿಡಲಾಗಿದ್ದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.