Tag: alcoholic drink

  • ಮದ್ಯ ಖರೀದಿಗೆ ಹಣ ಕೊಡದ ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದ

    ಮದ್ಯ ಖರೀದಿಗೆ ಹಣ ಕೊಡದ ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದ

    ರಾಂಚಿ: ಮದ್ಯ ಖರೀದಿಸಲು ಹಣ ಕೊಡದ ಗರ್ಭಿಣಿ ಪತ್ನಿಯನ್ನು ಪತಿ ಕತ್ತು ಹಿಸುಕಿ ಕೊಂದಿರುವ ಘಟನೆ ಜಾರ್ಖಂಡ್‍ನ ಛತ್ರಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

    ಪ್ರಿಯಾ ದೇವಿ ಮೃತಳಾಗಿದ್ದಾಳೆ. ತಿಲೇಶ್ವರ ಗಂಜು ಆರೋಪಿ ಪತಿಯಾಗಿದ್ದಾನೆ. ತಿಲೇಶ್ವರ್ ಕಳೆದ ವರ್ಷ ಮೇ 25ರಂದು ಪ್ರಿಯಾ ದೇವಿಯನ್ನು ಮದುವೆಯಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

    ಕಂಠ ಪೂರ್ತಿ ಕುಡಿದು ಬರುತ್ತಿದ್ದ ತಲೇಶ್ವರ ಪ್ರಿಯಾ ಗರ್ಭಿಣಿ ಎನ್ನುವುದು ಲೆಕ್ಕಿಸದೇ ಹೊಡೆದು ಹಿಂಸೆ ಮಾಡುತ್ತಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಪ್ರಿಯಾ ಪ್ರಾಣವನ್ನು ತೆಗೆದಿದೆ. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆ ಬಿಸಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೂ ಕೊರೊನಾ ದೃಢ

    MONEY

    ಒಂದು ದಿನ ತಿಲೇಶ್ವರ ಪತ್ನಿ ಬಳಿ ಮದ್ಯ ಖರೀದಿ ಮಾಡಲು ಹಣ ಕೇಳಿದ್ದಾನೆ. ಆದರೆ ಆಕೆ ಹಣ ಕೊಡಲು ನಿರಾಕರಿಸಿದ್ದಾಳೆ. ಆಗ ಮನಬಂದಂತೆ ಆಕೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ. ಪ್ರಿಯಾ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಿಲೇಶ್ವರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೂ ಕೊರೊನಾ ಪಾಸಿಟಿವ್

  • ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಯಾದಗಿರಿ: ಕುಡಿದ ಮತ್ತಿನಲ್ಲಿ ಸ್ನೇಹತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಯಾದಗಿರಿಯ ಸೈದಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಸಾಬಯ್ಯ(30) ಮೃತನಾಗಿದ್ದಾನೆ. ಈತ ಯಾದಗಿರಿ ತಾಲೂಕಿನ ನಾಗಾಲಪುರ ಗ್ರಾಮದ ನಿವಾಸಿಯಾಗಿದ್ದನು. ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ವ್ಯಕ್ತಿಯ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

    POLICE JEEP

    ಪ್ರಕರಣದ ಹಿನ್ನೆಲೆ: ಕಳೆದ ನಾಲ್ಕು ವರ್ಷಗಳಿಂದ ಸಾಬಯ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಡಿಪಿ ಜೈನ್ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಸಾಬಯ್ಯಗೆ ಕಳೆದ ಐದು ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದು, ಮೂವರು ಮುದ್ದಾದ ಮಕ್ಕಳಿದ್ದಾರೆ. ಮೂರನೇ ಮಗನ ತೊಟ್ಟಿಲು ಕಾರ್ಯಕ್ರಮವನ್ನ ಮುಂದಿನ ಸೋಮವಾರ ಇಟ್ಟುಕೊಂಡಿದ್ದ. ಇನ್ನು ಸಾಬಯ್ಯ ಮತ್ತು ಸ್ನೇಹಿತ ಜನ್ನಪ್ಪ ಇಬ್ಬರು ಸೇರಿ ನಿನ್ನೆ ಮದ್ಯಹ್ನದಿಂದಲೇ ಎಣ್ಣೇ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ನಿನ್ನೆ ಸಾಬಯ್ಯ ಜನ್ನಪ್ಪನ ಕರೆದುಕೊಂಡು ತನ್ನ ಸಂಬಂಧಿಕರ ಊರುಗಳಿಗೆ ಸಹ ಹೋಗಿ ಬಂದಿದ್ದಾನೆ. ಇದಾದ ಬಳಿ ನಿನ್ನೆ ಸಂಜೆ ಸೈದಾಪುರ ಪಟ್ಟಣದಲ್ಲಿ ಎಣ್ಣೆ ಖರೀದಿ ಮಾಡಿಕೊಂಡು ಹೋಗಿ ಸೈದಾಪುರದಿಂದ ಸ್ವಲ್ಪ ದೂರ ಹೋಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹತ್ತಿ ಜಮೀನಿನಲ್ಲಿ ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುವ ಇಬ್ಬರ ಮದ್ಯ ಜಗಳ ಕೂಡ ಆಗಿದೆ ಅಂತ ಹೇಳಲಾಗುತ್ತಿದೆ. ಜನ್ನಪ್ಪ ಮದ್ಯದ ನಶೆಯಲ್ಲಿ ತನ್ನ ಸ್ನೇಹಿತ ಸಾಬಯ್ಯಯನ್ನ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಪಾರ್ಟಿ ಮಾಡುವಾಗ ಪದೇ ಪದೇ ನಾನಾ ಎಣ್ಣೆ ಕೊಡಿಸಬೇಕಾ ನಿಂಗೆ ಅಂತ ಸಾಬಯ್ಯ ಜಗಳ ಮಾಡಿದ್ದಾನಂತೆ. ಆದರೆ ಇಬ್ಬರಿಗೂ ನಶೆಯಾಗಿದ್ದ ಅಲ್ಲೆ ರಾತ್ರಿ ವೇಳೆ ಮಲಗಿದ್ದಾರೆ. ಆದರೆ ಜನ್ನಪ್ಪನಿಗೆ ಎಚ್ಚರ ಆದ ಮೇಲೆ ಮದ್ಯದ ನಶೆಯಲ್ಲಿ ಗುಂಡು ಕಲ್ಲು ಎತ್ತಿ ಸಾಬಯ್ಯ ತಲೆ ಮೇಲೆ ಮೂರು ಬಾರಿ ಹಾಕಿದ್ದಾನೆ ಅಂತ ಹೇಳಲಾಗುತ್ತಿದೆ. ಆದರೆ ಸಾಬಯ್ಯ ಸಂಬಂಧಿಕರ ಪ್ರಕಾರ ಯಾರ ಜೊತೆಗೂ ಜಗಳ ಮಾಡಿಕೊಳ್ಳದ ವ್ಯಕ್ತಿ ಅವನಿಗೆ ಯಾರು ಕೊಲೆ ಮಾಡಿದ್ದಾರೆ ಎಲ್ಲರನ್ನ ಬಂಧಿಸಬೇಕು. ಒಬ್ಬನೇ ಸಾಬಯ್ಯನನ್ನ ಕೊಲೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಈ ಕೊಲೆ ಹಿಂದೆ ನಾಲ್ಕೈದು ಮಂದಿಯ ಕೈವಾಡವಿದೆ ಅಂತ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಅಮಲಿನಲ್ಲಿದ್ದ ತಾತ ಸಾಯಿಸುಬಿಡು ಎಂದಿದ್ದಕ್ಕೆ ತಂದೆಯನ್ನು ಕೊಂದೇಬಿಟ್ಟ

    ಕುಡಿದ ಅಮಲಿನಲ್ಲಿದ್ದ ತಾತ ಸಾಯಿಸುಬಿಡು ಎಂದಿದ್ದಕ್ಕೆ ತಂದೆಯನ್ನು ಕೊಂದೇಬಿಟ್ಟ

    ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತನ್ನ ತಂದೆಯನ್ನೇ ಮಗ ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಭೈರೇನಹಳ್ಳಿಯಲ್ಲಿ ನಡೆದಿದೆ.

    ಮುನೇಗೌಡ(50) ಮಗನಿಂದ ಕೊಲೆಯಾದ ತಂದೆ. ಮಗ ಮಂಜುನಾಥ್ ಕೊಲೆ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ತಂದೆ ಮಗನ ಜಗಳದಲ್ಲಿ ತಾತ ಮಗನ ಕೈಯಿಂದಲೇ ಅಪ್ಪನ ಕೊಲೆ ಮಾಡಿಸಿದ್ದಾನೆ.

    ತಂದೆ ಮಗ ಹಾಗೂ ತಾತ ಮೂವರಿಗೂ ಮದ್ಯ ಸೇವಿಸುವ ಚಟವಿತ್ತು. ಹೀಗಾಗಿ ಕುಡಿದ ಅಮಲಿನಲ್ಲಿ ಆಗಾಗ್ಗೆ ತಂದೆ, ಮಗ ಜಗಳ ಆಡೋದು ಮಾತಿಗೆ ಮಾತು ಬೆಳೆಸೋದು ಸಾಮಾನ್ಯ ಎಂಬಂತಾಗಿತ್ತು. ಇದೇ ರೀತಿ ನಿನ್ನೆ ರಾತ್ರಿ ಸಹ ತಂದೆ ಮಗ ಇಬ್ಬರು ಮಾತಿಗೆ ಮಾತು ಬೆಳೆಸಿ ಜಗಳವಾಡಿದ್ದಾರೆ. ಈ ವೇಳೆ ಕೊಲೆಯಾದ ಮುನೇಗೌಡ ತಂದೆ ರಂಗಪ್ಪ ‘ಏಯ್ ಏನೋ ಯಾವಗ್ಲೂ ಇದೇ ಮಾತಿಗೆ ಮಾತು ಸಾಯಿಸುಬಿಡು ಅಂತ ಪ್ರೇರೇಪಿಸಿದ್ದಾನೆ’ ತಾತನ ಮಾತು ಕೇಳಿದ ಮೊಮ್ಮಗ ತನ್ನ ತಂದೆಯನ್ನೆ ಕೊಲೆ ಮಾಡಿದ್ದಾನೆ.

    ಮಂಜುನಾಥ್ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚೂಪಾದ ಚಾಕುವನ್ನು ತೆಗೆದುಕೊಂಡು ತಂದೆಗೆ ಇರಿದುಕೊಂದಿದ್ದಾನೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಮಗ ಮಂಜುನಾಥ್ ಹಾಗೂ ತಾತ ರಂಗಪ್ಪನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.