Tag: alcoholic

  • ಕುಡುಕ ತಂದೆಯಿಂದ ಚಿತ್ರಹಿಂಸೆ – ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

    ಕುಡುಕ ತಂದೆಯಿಂದ ಚಿತ್ರಹಿಂಸೆ – ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

    ಹೈದರಾಬಾದ್: ಬಾಲಕಿಯೊಬ್ಬಳು ತನ್ನ ಮದ್ಯವ್ಯಸನಿ ತಂದೆಯಿಂದ ದೈಹಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ನಡೆದಿದೆ.

    ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಈಗಾಗಲೇ ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಆರೋಪಿ ರೈತನಾಗಿದ್ದು, ಆತನ ಪತ್ನಿ ಒಂದು ವರ್ಷದ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆರೋಪಿಗೆ ಇಬ್ಬರು ಮಕ್ಕಳಿದ್ದು, ಪತ್ನಿಯ ಸಾವಿನ ನಂತರ ಮಕ್ಕಳಿಗೆ ಚಿತ್ರಹಿಂಸೆ ನೀಡಲಾರಂಭಿಸಿದನು. ಅವನ ಹಿರಿಯ ಮಗನೊಬ್ಬನು ಅಂಗಡಿಯೊಂದರಲ್ಲಿ ಕೆಲಸ ಮಾಡಲು ಪಟ್ಟಣಕ್ಕೆ ತೆರಳಿದ್ದು, ಅಪ್ಪನ ಟಾರ್ಚರ್ ತಡೆದುಕೊಳ್ಳಲಾಗದೇ ಅಲ್ಲಿಯೇ ಇರಲು ಪ್ರಾರಂಭಿಸಿದನು. ಇದನ್ನೂ ಓದಿ: ಮಾಟಕ್ಕೆ ಒಳಗಾದ ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ

    POLICE JEEP

    ಆದರೆ ಮೃತ ಬಾಲಕಿಯು ತನ್ನ ಮದ್ಯವ್ಯಸನಿ ತಂದೆಯ ಚಿತ್ರಹಿಂಸೆಗೆ ನೊಂದು ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಶಾದ್‍ನಗರ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕುಶಾಲ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

  • ಎಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿದ್ದ ಮಂಗಕ್ಕೆ ಜೀವಾವಧಿ ಶಿಕ್ಷೆ

    ಎಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿದ್ದ ಮಂಗಕ್ಕೆ ಜೀವಾವಧಿ ಶಿಕ್ಷೆ

    ಲಕ್ನೋ: ಎಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿ, ಓರ್ವನ ಸಾವಿಗೆ ಕಾರಣವಾಗಿದ್ದ ಮಂಗವು ಜೀವಾವಧಿ ಶಿಕ್ಷೆಗೆ ಗುರಿಯಾದ ಘಟನೆ ಉತ್ತರ ಪ್ರದೇಶ ಮಿರ್ಜಾಪುರದಲ್ಲಿ ನಡೆದಿದೆ.

    ಮಿರ್ಜಾಪುರ ಜಿಲ್ಲೆಯ ನಿವಾಸಿ ಅತೀಂದ್ರಿಯ ಎಂಬವರು ‘ಕಲುವಾ’ ಹೆಸರಿನ ಮಂಗವನ್ನು ಸಾಕಿದ್ದರು. ಆದರೆ ಅವರು ಅದಕ್ಕೆ ನಿಯಮಿತವಾಗಿ ಮದ್ಯ ಕುಡಿಸುತ್ತಿದ್ದರು. ನಿಧಾನವಾಗಿ ಕೋತಿ ಮದ್ಯ ವ್ಯಸನಿಯಾಗಿತ್ತು. ಈ ಮಧ್ಯೆ ಅತೀಂದ್ರಿಯ ಮೃತಪಟ್ಟಿದ್ದರಿಂದ ಕೋತಿಗೆ ಮದ್ಯ ನೀಡುವವರೇ ಇಲ್ಲದಂತಾಗಿತ್ತು.

    ಕಲುವಾ ಮದ್ಯಕ್ಕಾಗಿ ಸ್ಥಳೀಯರ ಮೇಲೆ ಹಲ್ಲೆ ಮಾಡಲು ಆರಂಭಿಸಿತ್ತು. ಕೋತಿಯು 250ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದರು. ಇದರಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿ ಅರಣ್ಯ ಮತ್ತು ಮೃಗಾಲಯದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಸೆರೆ ಹಿಡಿದಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನ್ಪೂರ್ ಮೃಗಾಲಯದ ವೈದ್ಯ ಮೊಹಮ್ಮದ್ ನಾಸಿರ್, “ನಾವು ಕೋತಿಯನ್ನು ಕೆಲವು ತಿಂಗಳು ಪ್ರತ್ಯೇಕವಾಗಿ ಇರಿಸಿ ಬಳಿಕ ಮೃಗಾಲಯದ ಪ್ರತ್ಯೇಕ ಪಂಜರಕ್ಕೆ ಸ್ಥಳಾಂತರಿಸಿದ್ದೆವು. ಈಗಲೂ ಕಲುವಾ ನಡವಳಿಕೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆಕ್ರಮಣಕಾರಿಯಾಗಿ ಉಳಿದಿದ್ದಾನೆ. ಅವನನ್ನು ಇಲ್ಲಿಗೆ ಕರೆತಂದು ಮೂರು ವರ್ಷಗಳಾಗಿವೆ. ಆದರೆ ಈಗ ಕಲುವಾ ಜೀವನದುದ್ದಕ್ಕೂ ಸೆರೆಯಲ್ಲಿಯೇ ಇರುತ್ತಾನೆ ಎಂದು ನಿರ್ಧರಿಸಲಾಗಿದೆ” ಎಂದು ಹೇಳಿದರು.

    ಆರು ವರ್ಷದ ಕೋತಿ ಕಲುವಾನನ್ನು ಮೃಗಾಲಯದಿಂದ ಮುಕ್ತಗೊಳಿಸಿದರೆ ಅದು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಕಲುವಾ ಈವರೆಗೆ ತನ್ನ ಕೇಜ್ ಕೀಪರ್ ಜೊತೆಗೂ ಸ್ನೇಹ ಬೆಳೆಸಿಲ್ಲ. ಹೀಗಾಗಿ ಅದು ಮೃಗಾಲಯದಲ್ಲಿ ಇರುವುದೇ ಸೂಕ್ತ ಎಂದು ಮೊಹಮ್ಮದ್ ನಾಸಿರ್ ತಿಳಿಸಿದ್ದಾರೆ.

  • ಎಣ್ಣೆ ಮತ್ತಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ – ಸೂರಿಲ್ಲದೇ ಪತ್ನಿ ಕಣ್ಣೀರು

    ಎಣ್ಣೆ ಮತ್ತಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ – ಸೂರಿಲ್ಲದೇ ಪತ್ನಿ ಕಣ್ಣೀರು

    ಬಳ್ಳಾರಿ: ಕಂಠಪೂರ್ತಿ ಮದ್ಯ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದ ಕುಡುಕನೋರ್ವ ತನ್ನ ಮನೆಗೇ ಬೆಂಕಿ ಹಚ್ಚಿದ ಘಟನೆ ಬಳ್ಳಾರಿಯ ಕೊಳ್ಳೆಗಲ್ಲು ಗ್ರಾಮದ ಶ್ರೀರಾಮುಲು ನಗರದಲ್ಲಿ ನಡೆದಿದೆ.

    ಕೊಳಗಲ್ಲು ಗ್ರಾಮದ ನಿವಾಸಿ ಚಿದಾನಂದ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಕುಡುಕನ ಅವಾಂತರದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಈ ಚಿದಾನಂದ ಶುಕ್ರವಾರ ತಡ ರಾತ್ರಿ ವಿಪರೀತ ಮದ್ಯಸೇವನೆ ಮಾಡಿದ್ದನು. ಮದ್ಯದ ಅಮಲಿನಲ್ಲಿದ್ದ ಚಿದಾನಂದ ತನ್ನ ಮನೆಯೊಳಗಿನ ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದಾನೆ. ಅದರಿಂದ ಇಡೀ ಮನೆಯ ಒಳಗಿದ್ದ ವಸ್ತುಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.

    ಚಿದಾನಂದನ ಪತ್ನಿ ಶಾಂತಮ್ಮನವರು ಅಗಸಗಿರಿ ಕೆಲಸ ಮಾಡುತ್ತಿದ್ದು, ಬೇರೆಯವರ ಮನೆಯಿಂದ ಬಟ್ಟೆಗಳನ್ನ ತೊಳೆಯೋದಕ್ಕೆ ತಂದಿಟ್ಟಿದ್ದರು. ಪತಿಯ ಮದ್ಯದ ಚಟದಿಂದ ಈಗ ಆ ಬಟ್ಟೆಗಳೂ ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಮಾತನಾಡಿದ ಶಾಂತಮ್ಮ, ಬಾರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ವಿಪರೀತ ಕುಡಿದು ಬಂದು ಈ ರೀತಿ ಮಾಡಿದ್ದಾನೆ. ನೋಡಿ ಮನೆಯೊಳಗೆ ಎಲ್ಲಾ ವಸ್ತುಗಳೂ ಸುಟ್ಟು ಕರಕಲಾಗಿವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

  • ಮದ್ಯ ಸಿಗದೇ ಕಂಗಾಲಾಗಿ ಸ್ಯಾನಿಟೈಸರ್ ಕುಡಿದ ಮದ್ಯವ್ಯಸನಿ

    ಮದ್ಯ ಸಿಗದೇ ಕಂಗಾಲಾಗಿ ಸ್ಯಾನಿಟೈಸರ್ ಕುಡಿದ ಮದ್ಯವ್ಯಸನಿ

    ಧಾರವಾಡ: ಲಾಕ್‍ಡೌನ್ ಹಿನ್ನೆಲೆ ಮದ್ಯ ಸಿಗದಕ್ಕೆ ಕಂಗಾಲಾದ ಮದ್ಯವ್ಯಸನಿಯೊಬ್ಬ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಗಾಂಧಿಚೌಕ್ ಬಾಲಾಜಿ ಓಣಿ ನಿವಾಸಿ ದೀಪಕ್ ಶಿಂಧೆ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ್ದಾನೆ. ಈತ ಮದ್ಯ ವ್ಯಸನಿಯಾಗಿದ್ದು, ಕುಡಿಯಲು ಮದ್ಯ ಸಿಗದಕ್ಕೆ ತನ್ನ ಕೈಗೆ ಸಿಕ್ಕ ಸ್ಯಾನಿಟೈಜರ್ ಗಳನ್ನೇ ಕುಡಿದು ಬಿಟ್ಟಿದ್ದಾನೆ. ಸ್ಯಾನಿಟೈಜರ್ ಕುಡಿದ ತಕ್ಷಣವೇ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಶಹರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಈ ಹಿಂದೆ ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ-ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದಳು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಹೀಗಾಗಿ ಸ್ಯಾನಿಟೈಜರ್ ಕುಡಿದ ಪರಿಣಾಮ ಸಾವನ್ನಪ್ಪಿದ್ದರು.

  • ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ವ್ಯಕ್ತಿ ಸಾವು

    ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ವ್ಯಕ್ತಿ ಸಾವು

    ಹುಬ್ಬಳ್ಳಿ: ಲಾಕ್‍ಡೌನ್ ಎಫೆಕ್ಟ್ ನಿಂದ ಮದ್ಯ ಸಿಗದೆ ಮದ್ಯ ವ್ಯಸನಿಗಳು ಪರದಾಡುತ್ತಿದ್ದಾರೆ. ಈ ಮಧ್ಯೆ ಎಣ್ಣೆ ಸಿಗದೆ ವ್ಯಕ್ತಿಯೋರ್ವ ಸ್ಯಾನಿಟೈಸರ್ ಕುಡಿದು ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.

    ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ವೆಂಕಪ್ಪ ಕುರುವಿನಕೊಪ್ಪ(45) ಮೃತ ವ್ಯಕ್ತಿ. ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದ ಪರಿಣಾಮ ಮೂರು ದಿನಗಳ ಹಿಂದೆ ಬಸವರಾಜ್ ಅಸ್ವಸ್ಥಗೊಂಡಿದ್ದನು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಸವರಾಜ್‍ನನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಆತ ಸಾವನ್ನಪ್ಪಿದ್ದಾನೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟ ಸ್ಥಗಿತಗೊಂಡಿದ್ದು, ಎಣ್ಣೆ ಸಿಗದೇ ಮದ್ಯ ಪ್ರಿಯರು ಬೇಸತ್ತು ಹೋಗಿದ್ದಾರೆ. ಈ ಹಿಂದೆ 21 ದಿನಗಳ ಲಾಕ್‍ಡೌನ್ ಏಪ್ರಿಲ್ 14ರಂದು ಮುಗಿಯುತ್ತೆ. ಆ ಬಳಿಕ ಮದ್ಯದ ಅಂಗಡಿ ತೆರೆಯುತ್ತೆ ಎಂದು ಮದ್ಯ ವ್ಯಸನಿಗಳು ಖುಷಿಯಲ್ಲಿದ್ದರು. ಆದರೆ ಲಾಕ್‍ಡೌನ್ ಅವಧಿಯನ್ನು ಮೇ 3ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಹಿನ್ನೆಲೆ ಮದ್ಯ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಮದ್ಯ ಪ್ರಿಯರ ಆಸೆಗೆ ಕಣ್ಣೀರು ಎರಚಿದಂತಾಗಿದೆ.

  • ತಾಯಿಯನ್ನು ಕೊಂದು ದೇಹವನ್ನು ಮೂರು ಭಾಗ ಮಾಡ್ದ

    ತಾಯಿಯನ್ನು ಕೊಂದು ದೇಹವನ್ನು ಮೂರು ಭಾಗ ಮಾಡ್ದ

    ಮುಂಬೈ: ಕಳೆದ 9 ದಿನಗಳ ಹಿಂದೆ ಮೂರು ಪ್ರತ್ಯೇಕ ಸ್ಥಳದಲ್ಲಿ ದೊರೆತೆ ಮಹಿಳೆಯ ಶವದ ಭಾಗಗಳ ಪ್ರಕರಣವನ್ನು ಭೇದಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನೇ ಕೊಂದ ಪಾಪಿ ಮಗನನ್ನು ಸೊಹೈಲ್ ಶೇಖ್ ಎಂದು ಗುರುತಿಸಲಾಗಿದೆ. ದಿನ ಕುಡಿದು ತಾಯಿಯ ಜೊತೆ ಜಗಳ ಮಾಡುತ್ತಿದ್ದ ಶೇಖ್ ಕುಡಿದ ಮತ್ತಿನಲ್ಲಿ ತಾಯಿಯನ್ನು ಕೊಲೆ ಮಾಡಿದ್ದಾನೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮಗ ಕೆಲಸಕ್ಕೆ ಹೋಗದೆ ದಿನ ಕುಡಿದ ಬರುತ್ತಿದ್ದ ಕಾರಣಕ್ಕೆ ತಾಯಿ ದಿನ ಮಗನ ಜೊತೆ ಜಗಳವಾಡುತ್ತಿದ್ದಳು. ಹೀಗಿರುವಾಗ ಡಿಸೆಂಬರ್ 28 ರಂದು ತುಂಬಾ ಕುಡಿದು ಬಂದಿದ್ದ ಶೇಖ್ ಮತ್ತು ಆತನ ತಾಯಿ ನಡುವೆ ಜಗಳವಾಗಿದೆ. ಹೀಗೆ ಮಾತಿಗೆ ಮಾತು ಬೆಳೆದು ಕುಡಿದ ನಶೆಯಲ್ಲಿದ್ದ ಶೇಖ್ ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಲೆಮಾಡಿದ್ದಾನೆ.

    ಕೊಲೆ ಮಾಡುವ ಸಮಯದಲ್ಲಿ ಕುಡಿದ ನಶೆಯಲ್ಲಿದ್ದ ಶೇಖ್‍ಗೆ ತಾನು ಕೊಲೆ ಮಾಡಿರುವುದು ಗೊತ್ತಾಗಿಲ್ಲ. ಆದರೆ ಡಿಸೆಂಬರ್ 29ರ ಬೆಳಗ್ಗೆ ತಿಳಿದಿದೆ. ಆಗ ಎದ್ದು ದರ್ಗಾಗೆ ಹೋಗಿ ಬಂದ ಶೇಖ್, ಟಿವಿ ಕ್ರೈಮ್ ಕಾರ್ಯಕ್ರಮದಲ್ಲಿ ನೋಡಿದ ರೀತಿಯಲ್ಲಿ ತಾಯಿಯ ಮೃತ ದೇಹವನ್ನು ಮೂರು ಭಾಗಗಳಾಗಿ ಮಾಡಿ, ಅದನ್ನು ಪ್ರತ್ಯೇಕ ಮೂರು ಜಾಗದಲ್ಲಿ ಎಸೆದು ಬಂದಿದ್ದಾನೆ.

    ಹೀಗೆ ಶೇಖ್ ಎಸೆದು ಬಂದ ಶವದ ಭಾಗಗಳು ಡಿಸೆಂಬರ್ 30 ರಂದು ವಿದ್ಯಾವಿಹಾರ್ ಪ್ರದೇಶದ ಕಿರೋರ್ ರಸ್ತೆಯಲ್ಲಿ ತಲೆ ಇಲ್ಲದ ಮುಂಡ ಪತ್ತೆಯಾಗುತ್ತದೆ. ನಂತರ ಕತ್ತರಿಸಿದ ಎರಡು ಕಾಲುಗಳು ಘಟ್ಕೋಪರ್ ನ ಡಸ್ಟ್ ಬಿನ್‍ನಲ್ಲಿ ಡಿಸೆಂಬರ್ 31 ರಂದು ಪತ್ತೆಯಾಗಿದ್ದು, ಜನವರಿ 4 ರಂದು ಸಂತಕ್ರೂಜ್-ಚೆಂಬೂರ್ ಲಿಂಕ್ ರಸ್ತೆಯಲ್ಲಿರುವ ಸೇತುವೆಯ ಕೆಳಗೆ ಕತ್ತರಿಸಿದ ತಲೆ ಪತ್ತೆಯಾಗಿರುತ್ತದೆ.

    ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು, ಶವದ ಭಾಗಗಳು ದೊರೆತ ಮೂರು ಸ್ಥಳದಲ್ಲೂ ಸೂಹೈಲ್ ಬೈಕ್ ನಿಂತಿರುವುದು ಕಂಡು ಬರುತ್ತದೆ. ಇದರಿಂದ ಅನುಮಾನಗೊಂಡ ಪೊಲೀಸರು, ಸೂಹೈಲ್ ಶೇಖ್ ಅನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಾರೆ. ಮೊದಲಿಗೆ ಒಪ್ಪಿಕೊಳ್ಳದ ಶೇಖ್ ವಿಚಾರಣೆ ತೀವ್ರಗೊಂಡಾಗ ನಾನೇ ಕುಡಿದ ಮತ್ತಿನಲ್ಲಿ ತನ್ನ ತಾಯಿಯನ್ನು ಕೊಂದೆ ಎಂದು ಒಪ್ಪಿಕೊಂಡಿದ್ದಾನೆ.

    ಈ ಸಂಬಂಧ ಆರೋಪಿ ಸೂಹೈಲ್ ಶೇಖ್ ಅನ್ನು ಅರೆಸ್ಟ್ ಮಾಡಿರುವ ಘಟ್ಕೋಪರ್ ಪೊಲೀಸರು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

  • ಕುಡುಕರಿಗೆ ಬೆಂಗಳೂರು ಪೊಲೀಸ್ರಿಂದ ‘ಐಲ್ಯಾಂಡ್’ನಲ್ಲಿ ರಾಜ ಮರ್ಯಾದೆ

    ಕುಡುಕರಿಗೆ ಬೆಂಗಳೂರು ಪೊಲೀಸ್ರಿಂದ ‘ಐಲ್ಯಾಂಡ್’ನಲ್ಲಿ ರಾಜ ಮರ್ಯಾದೆ

    ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಕುಡಿದು ರಸ್ತೆಯಲ್ಲಿ ತೂರಾಡುವ ಮಂದಿಗೆ ಬೆಂಗಳೂರು ಪೊಲೀಸ್ರು ರಾಜ ಮರ್ಯಾದೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

    ಕುಡಿದು ರಸ್ತೆಯಲ್ಲಿ ತೂರಾಡುವ ಎಣ್ಣೆ ಪ್ರಿಯರಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ಐಲ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಐಲ್ಯಾಂಡ್ ನಲ್ಲಿ ಸುವ್ಯವಸ್ಥಿತವಾಗಿರುವ ಬೆಡ್ ವ್ಯವಸ್ಥೆ, ಕುಡಿದ ಮತ್ತಿನಲ್ಲಿ ಬಿದ್ದು ಗಾಯಗೊಂಡರೆ ಪ್ರಥಮ ಚಿಕಿತ್ಸೆ ಮಾಡುವ ವ್ಯವಸ್ಥೆ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇದನ್ನು ಓದಿ: ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ

    ಅಷ್ಟೇ ಅಲ್ಲದೇ ರಾತ್ರಿ ಐಲ್ಯಾಂಡ್ ನಲ್ಲಿ ಎಣ್ಣೆ ಕಿಕ್ ಇಳಿದ ಮೇಲೆ ಸುರಕ್ಷಿತವಾಗಿ ಕಳಿಸಿಕೊಡಲು ಒಲಾ, ಉಬರ್, ವ್ಯವಸ್ಥೆ ಮಾಡಿದ್ದಾರೆ. ಸಂಬಂಧ ಪಟ್ಟವರ ಹೆಸರು, ವಿಳಾಸ ಪಡೆದು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ಹಾಟ್ ಜೋನ್ ಹಾಗೂ ಪಬ್‍ಗಳು ಇರುವ ಜಾಗದಲ್ಲಿ ಸುಮಾರು ಆರಕ್ಕೂ ಹೆಚ್ಚು ಐಲ್ಯಾಂಡ್‍ಗಳ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ವಿಶೇಷ ಎಂದರೆ ಕುಡಿದು ರಸ್ತೆಯಲ್ಲಿ ತೂರಾಡುವ ಯುವತಿಯರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲು ಪೊಲೀಸ್ರು ಚಿಂತಿಸಿದ್ದಾರೆ.

  • ವರನನ್ನ ಮೂಸಿ ನೋಡ್ತಾರೆ ವಧು ಸಂಬಂಧಿಕರು

    ವರನನ್ನ ಮೂಸಿ ನೋಡ್ತಾರೆ ವಧು ಸಂಬಂಧಿಕರು

    ಗಾಂಧಿನಗರ: ಗುಜರಾತ ರಾಜ್ಯದ ಗಾಂಧಿನಗರದ ಬಳಿ ಪಿಯಾಬ್ ಗ್ರಾಮದಲ್ಲಿ ಮದುವೆ ದಿನ ವರ ಮತ್ತು ಆತನ ಕುಟುಂಬಸ್ಥರನ್ನು ಮೂಸಿ ನೋಡಿದ ನಂತರ ಮಾಂಗಲ್ಯಧಾರಣೆ ಮಾಡಿಸುತ್ತಾರೆ.

    ಗಾಂಧಿನಗರ ಜಿಲ್ಲೆಯ ಕಲೋಲ ತಾಲೂಕಿನ ಪಿಯಾಬ್ ಗ್ರಾಮದಲ್ಲಿ ಮದುವೆ ದಿನ ವರ ಮತ್ತು ಆತನ ಕುಟುಂಬಸ್ಥರನ್ನು ಮೂಸಿ ನೋಡಲು 25 ಜನರ ಗುಂಪನ್ನು ನೇಮಕ ಮಾಡಲಾಗಿರುತ್ತದೆ. ಈ ತಂಡ ವರ, ವರನ ತಂದೆ ಮತ್ತು ಆತನ ಗೆಳಯರು, ಕುಟುಂಬಸ್ಥರನ್ನು ಮೂಸಿ ನೋಡಿ ಮದ್ಯಪಾನ ಮಾಡಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಾರೆ. ಒಂದು ವೇಳೆ ವರ ಅಥವಾ ಆತನ ಕುಟುಂಬಸ್ಥರು ಮದ್ಯ ಸೇವಿಸಿದ್ದರೆ ಮದುವೆಯನ್ನು ನಿಲ್ಲಿಸಲಾಗುತ್ತದೆ.

    ಮದುವೆ ನಿಂತ್ರೆ ದಂಡ:
    ಮದ್ಯಪಾನ ಮಾಡಿದ್ದರಿಂದ ಮದುವೆ ನಿಂತರೆ ವರನ ಕುಟುಂಬಸ್ಥರು ವಧುವಿಗೆ ಒಂದು ಲಕ್ಷ ರೂ.ಯನ್ನು ದಂಡವಾಗಿ ನೀಡಬೇಕು. ಕಳೆದ ನಾಲ್ಕು ವರ್ಷಗಳಿಂದ ಈ ಪದ್ಧತಿಯನ್ನು ಗ್ರಾಮದಲ್ಲಿ ಜಾರಿಗೆ ತರಲಾಗಿದೆ. ಇದಕ್ಕೂ ಮುನ್ನ 20 ವರ್ಷದೊಳಗಿನ 15 ಯುವಕರು ಮದ್ಯಪಾನ ಮಾಡಿದ್ದರಿಂದ ಸಾವನ್ನಪ್ಪಿದ್ದರು. ಪತಿಯ ಕುಡಿತದಿಂದ ಮಹಿಳೆಯರು ಸಾಕಷ್ಟು ನೋವು ಪಡೋದನ್ನ ಗಮನಿಸಿದ್ದೇನೆ. ಹಾಗಾಗಿ ಈ ನಿಯಮವನ್ನ ಜಾರಿಗೆ ತರಲಾಯ್ತು ಎಂದು ಗ್ರಾಮದ ಮುಖ್ಯಸ್ಥ ರಮೇಶಜೀ ಠಾಕೂರ್ ಹೇಳುತ್ತಾರೆ.

    ಮದುವೆ ಮುನ್ನ ವರ ಹಾಗೂ ಆತನ ಕುಟುಂಬದ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರವೇ ಗ್ರಾಮದ ಯುವತಿಯೊಂದಿಗೆ ಮದುವೆ ಮಾಡಿಸಲಾಗುತ್ತದೆ. ಇದರಿಂದ ಗ್ರಾಮದ ಯುವತಿಯರು ಸಾಂಸರಿಕ ಜೀವನದಲ್ಲಿ ಸುಖವಾಗಿರುತ್ತಾರೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.