Tag: alcohol

  • ತಲೆ ಮೇಲೆ ಮದ್ಯದ ಬಾಟಲಿ ಹಿಡಿದು ನಡುರಸ್ತೆಯಲ್ಲಿ ಆಂಟಿ ಡ್ಯಾನ್ಸ್..!

    ತಲೆ ಮೇಲೆ ಮದ್ಯದ ಬಾಟಲಿ ಹಿಡಿದು ನಡುರಸ್ತೆಯಲ್ಲಿ ಆಂಟಿ ಡ್ಯಾನ್ಸ್..!

    ಚಿಕ್ಕಮಗಳೂರು: ನಡು ರಸ್ತೆಯಲ್ಲಿ ತಲೆ ಮೇಲೆ ಮದ್ಯದ ಬಾಟಲಿ ಹೊತ್ತು ಮಹಿಳೆಯೊಬ್ಬಳು ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಒಮ್ಮೆ ಎಣ್ಣೆ ಒಳಗೆ ಸೇರಿದರೆ ಎಷ್ಟೋ ಮಂದಿ ಮೈ ಮರೆತು ಬಿಡುತ್ತಾರೆ. ಸಾಮಾನ್ಯವಾಗಿ ಗಂಡಸರು ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಿದ್ದು ಒದ್ದಾಡುವುದನ್ನು ಆಗಾಗ ರಸ್ತೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೇನೂ ಕಡಿಮೆ ಇಲ್ಲ ಎಂಬAತೆ ಮದ್ಯ ಸೇವಿಸಿ ರಂಪಾಟ ಮಾಡಿರುವ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇದೀಗ ಕೊಂಚ ವಿಭಿನ್ನವೆಂಬಂತೆ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬಳು ಕುಡಿದ ಅಮಲಿನಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾಳೆ. ಇದನ್ನೂ ಓದಿ: 20 ವರ್ಷದ ಹುಡುಗಿ ಅಂತ 50ರ ಆಂಟಿ ತುಂಟಾಟ – ಚಾಟ್ ಮಾಡಿ ಮೋಸ ಹೋದ ಯುವಕ

    ಹೌದು, ನಡು ರಸ್ತೆಯಲ್ಲಿ ಸೀರೆಯುಟ್ಟ ಮಹಿಳೆ ತಲೆ ಮೇಲೆ ಬಿಯರ್ ಬಾಟಲಿ ಹೊತ್ತುಕೊಂಡು, ಕೈಗಳ ಸಹಾಯವಿಲ್ಲದೇ ಮಸ್ತ್ ಕುಣಿದು ಕುಪ್ಪಳಿಸಿದ್ದಾಳೆ. ದಾರಿಯಲ್ಲಿ ಹೋಗುತ್ತಿರುವವರೆಲ್ಲರೂ ಮಹಿಳೆಯನ್ನು ನೋಡುತ್ತಿದ್ದರೂ, ಮಹಿಳೆ ಕೊಂಚವೂ ಲೆಕ್ಕಿಸದೇ ಕುಡಿದ ಮತ್ತಿನಲ್ಲಿ ತನ್ನದೇ ಲೋಕದಲ್ಲಿ ಮುಳುಗಿ ನೃತ್ಯ ಮಾಡಿದ್ದಾಳೆ. ಇದನ್ನೂ ಓದಿ: ಇಂಟರ್‌ವ್ಯೂಗೆಂದು ಹೋದ ಯುವತಿ, ಟ್ಯಾಲಿಕ್ಲಾಸ್‌ಗೆ ಹೋಗ್ತೀನೆಂದಿದ್ದ ಯುವಕ – ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?

  • ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

    ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

    ಬೆಳಗಾವಿ: ಸಾಕಷ್ಟು ಜನರು ಸರ್ಕಾರಿ ನೌಕರಿಗಾಗಿ ಪರದಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ಅಡ್ಡಲಾಗಿ ಮಲಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.

    ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿದ್ದ ಗ್ರಾಮ ಲೆಕ್ಕಾಧಿಕಾರಿ. ಈ ಮೊದಲು ಸಂಜು ಬೆಣ್ಣಿ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸಕ್ಕಿದ್ದ. ಅಲ್ಲಿಯೂ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದ ಹಿನ್ನೆಲೆ ಸವದತ್ತಿ ತಹಶೀಲ್ದಾರ್ ಕಚೇರಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

    ಆದ್ರೆ, ಇಲ್ಲಿಯೂ ಸಹ ಸಂಜು ಬೆಣ್ಣಿ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಈತನ ರಂಪಾಟದ ಜೊತೆಗೆ ಗ್ರಾಮಸ್ಥರ ಜೊತೆ ದುರ್ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜೊತೆ ಸಂಜು ಬೆಣ್ಣಿ ವಿರುದ್ಧ ಕ್ರಮಕೈಗೊಳ್ಳದ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮದ್ಯದ ಅಮಲಿನಲ್ಲಿ ಸ್ಕೈವಾಕ್‍ನಿಂದ ಜಿಗಿದ ವ್ಯಕ್ತಿ – ಸೊಂಟಕ್ಕೆ ಗಂಭೀರ ಪೆಟ್ಟು

    ಮದ್ಯದ ಅಮಲಿನಲ್ಲಿ ಸ್ಕೈವಾಕ್‍ನಿಂದ ಜಿಗಿದ ವ್ಯಕ್ತಿ – ಸೊಂಟಕ್ಕೆ ಗಂಭೀರ ಪೆಟ್ಟು

    ರಾಯ್ಪುರ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಆಸ್ಪತ್ರೆಯ ಸ್ಕೈವಾಕ್‍ನಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯ್ಪುರದಲ್ಲಿ ನಡೆದಿದೆ.

    ಗಾಯಗೊಂಡ ವ್ಯಕ್ತಿಯನ್ನು ಮಧ್ಯಪ್ರದೇಶದ ಸತ್ನಾ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಸೊಂಟಕ್ಕೆ ಗಂಭೀರವಾಗಿ ಪೆಟ್ಟುಬಿದ್ದಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2003ರಲ್ಲಿ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ ಸುಜಿತ್ ಕುಮಾರ್, ಮೂರ್ಛೆ ರೋಗವನ್ನು ಸಹ ಹೊಂದಿದ್ದ. ಮೂರ್ಛೆ ರೋಗ ಹೊಂದಿದ್ದರಿಂದ ಅವರನ್ನು ಡಾ.ಭೀಮ್ ರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

    ತನ್ನ ಲಗೇಜ್ ಮತ್ತು ಪ್ರಮಾಣಪತ್ರಗಳನ್ನು ಕೇಳುವ ಮೂಲಕ ಸುಜಿತ್ ಕುಮಾರ್ ಆಸ್ಪತ್ರೆಯಲ್ಲಿ ರಂಪಾಟ ಮಾಡಿ, ನಂತರ ಆಸ್ಪತ್ರೆಯಿಂದ ಓಡಿಹೋಗಿ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಸ್ಕೈವಾಕ್ ಅನ್ನು ಏರಿ ಕಿರಾಡಲು ಆರಂಭಿಸಿದ್ದಾನೆ. ಅಲ್ಲದೇ ಕುಡಿದ ಅಮಲಿನಲ್ಲಿ ಸುಜಿತ್ ಕುಮಾರ್ ಸ್ಕೈವಾಕ್ ಮೇಲೆ ಹತ್ತಿ ಜಿಗಿಯುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಅವಾಂತರ – ಭಾರೀ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ

    ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಕುಲದೀಪ್ ಜುನೇಜಾ ಅವರು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಸುಜಿತ್ ಕುಮಾರ್‍ನನ್ನು ಸಮಾಧಾನಗೊಳಿಸಿ ಕೆಳಗೆ ಬರುವಂತೆ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಸುಜಿತ್ ಯಾರ ಮಾತನ್ನು ಕೇಳದೇ ಸ್ಕೈವಾಕ್ ಮೇಲೆ ಓಡಲು ಆರಂಭಿಸಿ ನಂತರ 7 ರಿಂದ 8 ಅಡಿ ಎತ್ತರದಿಂದ ಕೆಳಗೆ ಜಿಗಿದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಈ ದೇವರಿಗೆ ಹೂವು, ಹಣ್ಣು, ಕಾಣಿಕೆ ಬೇಡ, ಸಿಗರೇಟು, ಬ್ರಾಂಡೆಡ್ ಮದ್ಯವೇ ಬೇಕು!

    ಈ ದೇವರಿಗೆ ಹೂವು, ಹಣ್ಣು, ಕಾಣಿಕೆ ಬೇಡ, ಸಿಗರೇಟು, ಬ್ರಾಂಡೆಡ್ ಮದ್ಯವೇ ಬೇಕು!

    ಕಾರವಾರ: ಆ ದೇವರಿಗೆ ಸಿಗರೇಟು ಎಂದರೆ ಎಲ್ಲಿಲ್ಲದ ಪ್ರೀತಿ. ಹೆಂಡ ನೀಡಿದರೆ ಇಷ್ಟಾರ್ಥವನ್ನು ಏನಿದ್ದರೂ ನೆರವೇರಿಸುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು.

    ಹೌದು. ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ ದೇವರ ಜಾತ್ರಾ ಮಹೋತ್ಸವಕ್ಕೆ ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಂಡು ಹರಕೆ ತೀರಿಸಲು ಜನರು ಹೀಗೆ ನಿಂತಿದ್ದಾರೆ. ಪ್ರತಿ ವರ್ಷ ನಡೆಯುವ ಕಾಪ್ರಿ ದೇವರ ವಿಶಿಷ್ಟ ಜಾತ್ರೆಗೆ ಕಾರವಾರ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾದಿಂದಲೂ ಜನರು ಆಗಮಿಸ್ತಾರೆ. ತಮ್ಮ, ತಮ್ಮವರ ಒಳಿತಿಗಾಗಿ ಹತ್ತು ಹಲವು ಹರಕೆ ಕಟ್ಟಿಕೊಳ್ಳುತ್ತಾರೆ.  ಇದನ್ನೂ ಓದಿ: ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    500 ವರ್ಷದ ಹಿಂದೆ ನಿರ್ಮಾಣವಾದ ಈ ದೇವಸ್ಥಾನಕ್ಕೂ ವಿಶಿಷ್ಟ ಇತಿಹಾಸವಿದೆ. ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಸಮಯದಲ್ಲಿ ಕಾಪ್ರಿ ಎಂಬ ವಿದೇಶಿಗ ಗುಲಾಮನಾಗಿ ಭಾರತಕ್ಕೆ ಬಂದಿದ್ದನಂತೆ. ಆತ ಬ್ರಿಟಿಷರು ಕೊಡ್ತಿದ್ದ ಎಲ್ಲ ರೀತಿಯ ಕಷ್ಟ, ತೊಂದರೆಗಳನ್ನು ಸಹಿಸಿಕೊಂಡಿದ್ದವನು. ಬಳಿಕ ಕಾರವಾರ ಭಾಗದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಅವರ ಸಂಕಷ್ಟ ನಿವಾರಿಸುತಿದ್ದನಂತೆ. ಈತನಿಗೆ ಬೀಡಿ, ಸಿಗರೇಟು, ಕೋಳಿ, ಕುರಿ ಮಾಂಸ ಬಲುಪ್ರೀತಿ. ಹೀಗಾಗಿ ಈತನ ಬಳಿ ಸಂಕಷ್ಟ ತೋಡಿಕೊಂಡು ಬರುವವರು ಈತನಿಗೆ ಕಾಣಿಕೆಯಾಗಿ ಇವುಗಳನ್ನು ನೀಡುತ್ತಿದ್ದರು ಎಂಬ ಇತಿಹಾಸವಿದೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಆರ್‌ಎಸ್‌ಎಸ್‌, ಭಜರಂಗದಳ, ಎಸ್‍ಡಿಪಿಐ ಕುಮ್ಮಕ್ಕು ಇದೆ ಈ ಎಲ್ಲಾ ಸಂಘಟನೆಗಳನ್ನು ನಿಷೇಧಿಸಿ: ಸಿದ್ದರಾಮಯ್ಯ

    ಒಟ್ಟಿನಲ್ಲಿ ಜಾತಿ, ಕುಲ, ಧರ್ಮ ಎಂದು ಹೊಡೆದಾಡಿಕೊಳ್ಳುತ್ತಿರುವವರ ಮಧ್ಯೆ ಒಬ್ಬ ವಿದೇಶಿ ಪ್ರಜೆ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಂಡು ಅವರ ಸಂಕಷ್ಟಗಳಿಗೆ ಸ್ಪಂದಿಸಿ ಇದೀಗ ಅವನ ಕಾಲದ ನಂತರ ದೇವರ ರೂಪ ಪಡೆದು ಎಲ್ಲಾ ಧರ್ಮಿಯರಿಂದ ಪೂಜೆಗೆ ಒಳಗಾಗುತ್ತಿರುವುದು ನಮ್ಮ ದೇಶದ ಜ್ಯಾತ್ಯಾತೀತತೆಯನ್ನು ಮತ್ತೊಮ್ಮೆ ಸಾರುತ್ತಿದೆ.

  • ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ – ವಿದ್ಯಾರ್ಥಿ ಮೇಲೆ ಬ್ಯಾಟ್‍ನಿಂದ ಹಲ್ಲೆ

    ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ – ವಿದ್ಯಾರ್ಥಿ ಮೇಲೆ ಬ್ಯಾಟ್‍ನಿಂದ ಹಲ್ಲೆ

    ರಾಯ್‍ಪುರ: ಮದ್ಯ ಸೇವಿಸಿ ಶಾಲೆಗೆ ಬಂದ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಛತ್ತೀಸ್‍ಗಢದ ಜಶ್‍ಪುರದಲ್ಲಿ ನಡೆದಿದೆ.

    ಸಾಮಾನ್ಯವಾಗಿ ತಂದೆ, ತಾಯಿ ಬಳಿಕ ವಿದ್ಯೆ ಕಲಿಸುವ ಗುರುವಿಗೆ ಪೂಜ್ಯ ಸ್ಥಾನವನ್ನು ನೀಡಲಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿಬುದ್ದಿ ಹೇಳಬೇಕಾದ ಗುರುವೇ ಶಾಲೆಗೆ ಮದ್ಯ ಸೇವಿಸಿ ಬರುವುದು ವಿಪರ್ಯಾಸ ಎಂದೇ ಹೇಳಬಹುದು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲು

    ಮಾರ್ಚ್ 10 ರಂದು ಜಶ್‍ಪುರದ ಶಾಲೆವೊಂದರಲ್ಲಿ ಶಿಕ್ಷಕ ದಿನೇಶ್ ಕುಮಾರ್ ಲಕ್ಷ್ಮೆ ಮದ್ಯ ಸೇವಿಸಿ ಶಾಲೆಗೆ ಬಂದಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ದಿನೇಶ್ ಶಾಲಾ ಆವರಣಕ್ಕೆ ಆಗಮಿಸುತ್ತಿದ್ದಂತೆಯೇ ಕ್ರಿಕೆಟ್ ಬ್ಯಾಟ್‍ನಿಂದ ಸುಮ್ಮನೆ ನಿಂತಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಇದೀಗ ಈ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಶಿಕ್ಷಕ ದಿನೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿಗಳು ಶನಿವಾರ ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

  • ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಅಗರ್ತಲಾ: ತ್ರಿಪುರಾದಲ್ಲಿ ವ್ಯಕ್ತಿಯೊರ್ವ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಸಾವನ್ನಪ್ಪಿದ್ದಾನೆ.

    ಶುಕ್ರವಾರ ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಆಸಿಡ್ ಸೇವಿಸಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಕಾರ್ತಿಕ್ ಮೋಹನ್ ದೆಬ್ಬರ್ಮ ಮದ್ಯದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಕುಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಮೂಲಗಳ ಪ್ರಕಾರ, ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿಕೊಂಡಿದ್ದಾನೆ. ನಂತರ ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ದೆಬ್ಬರ್ಮ ಆಸಿಡ್ ಕುಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು

    ALCOHOL

    ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮೂಲಗಳು ಹೇಳಿದೆ.

  • ವೈದ್ಯನ ಎಡವಟ್ಟು – ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ರೋಗಿ ಸಾವು

    ವೈದ್ಯನ ಎಡವಟ್ಟು – ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ರೋಗಿ ಸಾವು

    ಭೋಪಾಲ್: ಹೋಮಿಯೋಪತಿ ವೈದ್ಯನೊಬ್ಬ ನೀಡಿದ್ದ ತಪ್ಪಾದ ಚುಚ್ಚು ಮದ್ದಿನಿಂದ ರೋಗಿಯೊಬ್ಬ ಸಾವನ್ನಪ್ಪಿದ್ದು, ಇದೀಗ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.

    ಸಿಂಧಿ ಕಾಲೋನಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ದೀಪಕ್ ವಿಶ್ವಕರ್ಮ ಅವರನ್ನು ಐಪಿಸಿ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿ ಶುಕ್ರವಾರ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‍ಪಿ) ಲಲಿತ್ ಗಾತ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

    ನಾಲ್ಕು ತಿಂಗಳ ಹಿಂದೆ ಚುಚ್ಚುಮದ್ದು ಸ್ವೀಕರಿಸಿದ್ದ ವ್ಯಾಪಾರಿ ಎರಡು ದಿನಗಳ ನಂತರ ಸಾವನ್ನಪ್ಪಿದ ಕಾರಣ ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು ನಂತರ ವೈದ್ಯನ ಕ್ಲಿನಿಕ್ ಸಹ ಸೀಲ್‍ಡೌನ್ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ : ಡಿಕೆಶಿ

    ಘಟನೆ ಕುರಿತಂತೆ ತನಿಖೆ ವೇಳೆ ವೈದ್ಯ ವಿಶ್ವಕರ್ಮ ಅವರು ತಮ್ಮ ರೋಗಿ ದೀಪಕ್ ಆರತಾನಿಗೆ ಅಲೋಪತಿ ಔಷಧಿಗಳನ್ನು ನೀಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಸೋಂಕಿಗೆ ಒಳಗಾಗಿದ್ದ ವ್ಯಕ್ತಿಗೆ ವೈದ್ಯರು ತಪ್ಪಾದ ಚುಚ್ಚುಮದ್ದು ನೀಡಿದ್ದರಿಂದ ರೋಗಿ ಸಾವನ್ನಪ್ಪಿರುವುದಾಗಿ ಮೊಘಾಟ್ ರೋಡ್ ಪೊಲೀಸ್ ಠಾಣೆಯ ಈಶ್ವರ್ ಸಿಂಗ್ ಚೌಹಾಣ್ ಹೇಳಿದ್ದಾರೆ.

  • ಮದ್ಯಪಾನಕ್ಕೆ ಕರೆದೊಯ್ದು ಸ್ನೇಹಿತರಿಂದಲೇ ಯುವಕನ ಕತ್ತು ಕೊಯ್ದು ಕೊಲೆ

    ಮದ್ಯಪಾನಕ್ಕೆ ಕರೆದೊಯ್ದು ಸ್ನೇಹಿತರಿಂದಲೇ ಯುವಕನ ಕತ್ತು ಕೊಯ್ದು ಕೊಲೆ

    ಚಿಕ್ಕಬಳ್ಳಾಪುರ: ಮದ್ಯಪಾನ ಮಾಡಲು ಕರೆದೊಯ್ದ ಸ್ನೇಹಿತರೇ ಯುವಕನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೀಗೆಹಳ್ಳಿ ಗ್ರಾಮದ ಬಳಿ ನಡೆದಿದೆ.

    ಗ್ರಾಮದ ಮೋಹನ್(28) ಕೊಲೆಯಾದವ. ಇನ್ನೂ ಇದೇ ಗ್ರಾಮದ ಪ್ರಭಾಕರ್, ಸುಮನ್ ಹಾಗೂ ನಂದನ್ ಕೊಲೆ ಆರೋಪಿಗಳು ಅಂತ ತಿಳಿದುಬಂದಿದೆ.

    ಒಂದೇ ಗ್ರಾಮದವರಾದ ನಾಲ್ವರು ನಿನ್ನೆ ರಾತ್ರಿ ಗ್ರಾಮ ಹೊರವಲಯದ ಗೆಜ್ಜಿಗಾನಹಳ್ಳಿ ಬಳಿಯ ನೀಲಗಿರಿ ತೋಪಿನ ಬಳಿ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಪ್ಲಾನ್ ಮಾಡಿದಂತೆ ಪ್ರಭಾಕರ್, ಸುಮನ್, ನಂದನ್ ಮೂವರು ಸೇರಿ ಮೋಹನ್ ಕೊಲೆ ಮಾಡಿ ಪರಾರಿಯಾಗಿದ್ರು. ವಿಷಯ ತಿಳಿದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಅಂತ ತಿಳಿದುಬಂದಿದೆ. ಇದನ್ನೂ ಓದಿ: INS ರಣವೀರ್ ನೌಕೆಯಲ್ಲಿಸ್ಫೋಟ- ಮೂವರು ಸಿಬ್ಬಂದಿ ಸಾವು

    ಕೊಲೆಗೆ ಕಾರಣ ಏನು..?
    ಹಿಂದೆ ಸುಖಾಸುಮ್ಮನೆ ಮಾತಿಗೆ ಮಾತು ಬೆಳೆದು ಪ್ರಭಾಕರ್ ಕುತ್ತಿಗೆಗೆ ಮೋಹನ್ ಮಚ್ಚು ಇಟ್ಟು ಬೆದರಿಸಿದ್ದನಂತೆ. ಇದೇ ಮನಸ್ಸಲ್ಲಿಟ್ಟುಕೊಂಡಿದ್ದ ಪ್ರಭಾಕರ್ ಸುಮನ್, ನಂದನ್ ಜೊತೆ ಪ್ಲಾನ್ ಮಾಡಿ ಮರ್ಡರ್ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಹಣಕಾಸಿನ ವ್ಯವಹಾರದ ಶಂಕೆ ಕೇಳಿಬಂದಿದ್ದು, ಹಳೆ ವೈಷಮ್ಯದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

    ಸಂಜೆಯೇ ಮೋಹನ್ ಗೆ ಈ ಮೂವರು ಇವತ್ತು ಕತ್ತು ಕೊಯ್ದು ಮರ್ಡರ್ ಮಾಡ್ತೀವಿ ಅಂತ ಬೆದರಿಕ ಹಾಕಿದ್ರಂತೆ. ಈ ವಿಷಯವನ್ನ ಮೋಹನ್ ತನ್ನ ಭಾವನಿಗೆ ಫೋನ್ ಮಾಡಿ ಸಹ ತಿಳಿಸಿದ್ದಾನೆ. ಆದರೆ ಎಲ್ಲೋ ತಮಾಷೆಗೆ ಮಾತಿಗೆ ಮಾತಾಡಿಕೊಂಡಿರಬೇಕು. ಬಿಡು ಆಯ್ತು ಸುಮ್ನಿರು ಅಂತ ಹೇಳಿದ್ದನಂತೆ. ಆದರೆ ಅದೇ ಪ್ರಭಾಕರ್ ನಿಜವಾಗಿಯೇ ಕತ್ತು ಕೊಯ್ದು ಕೊಲೆ ಮಾಡಿಸಿದ್ದಾನೆ ಅಂತ ಭಾವ ಮನು ಹೇಳಿದ್ದಾನೆ.

  • ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

    ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

    ಕಾರವಾರ: ಅಕ್ರಮವಾಗಿ ದಂಧೆ ಮಾಡುತ್ತಿದ್ದವರ ಮನೆಗಳಿಗೆ ನೂರಾರು ಮಹಿಳೆಯರು ನುಗ್ಗಿ, ಮಾರಾಟಕ್ಕೆ ತರಲಾಗಿದ್ದ ಮದ್ಯದ ಪೊಟ್ಟಣಗಳನ್ನು ಪತ್ತೆ ಹಚ್ಚಿ ನಾಶಪಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಕೇರಿ ಸಮೀಪದ ದೇಶಪಾಂಡೆ ನಗರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ಕ್ರಮ ಜರುಗಿಸದೇ ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರೇ ಅಕ್ರಮ ಮದ್ಯವನ್ನು ನಾಶ ಪಡಿಸಿದ್ದಾರೆ.

    ಗ್ರಾಮದ ಕೆಲವು ಮನೆಗಳು ಹಾಗೂ ಬಾರ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಹಲವು ಯುವಕರು ಮದ್ಯದ ವ್ಯಸನದಿಂದ ಅನಾರೋಗ್ಯ ಪೀಡಿತರಾಗಿದ್ದರು. ಅಕ್ರಮ ಮದ್ಯ ಮಾರಾಟ ಸಂಬಂಧಿಸಿದಂತೆ ಇಲಾಖೆಗಳಿಗೆ ದೂರು ನೀಡಿದರೂ, ಕ್ರಮ ಕೈಗೊಳ್ಳದಿದ್ದರಿಂದ ಅಕ್ರಮ ಮದ್ಯ ಮಾರಾಟ ಅಧಿಕವಾಗಿ ನಡೆಯುತ್ತಿತ್ತು.

    ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಹಾಗೂ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರು ಇಂದು ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳು ಹಾಗೂ ಮನೆಗೆ ತೆರಳಿ ಅಕ್ರಮ ಮದ್ಯವನ್ನು ಪತ್ತೆ ಮಾಡಿ ನಾಶ ಪಡಿಸಿದ್ದಾರೆ.

    ತಾಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಡಿವೈಎಸ್ಪಿ ಹಾಗೂ ಶಿರಸಿ ಉಪ ವಿಭಾಗಾಧಿಕಾರಿಗಳು ಯಲ್ಲಾಪುರದಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

    ಶ್ರೀ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾದ ನಕಲಿ ದೂಳು ಕೊಕರೆ, ನಾಗಿ ಲಕ್ಕು ಕೊಕರೆ, ಶೋಭಾ ದೋಂಡು ಕೊಕರೆ, ಸಾವಿತ್ರಿ ಮಾಕು ಕೊಕರೆ, ನಕಲಿ ನಾವು ಪಟಕಾರೆ, ಸವಿತಾ ಜಾನು ಖರಾತ್, ಕಣ್ಣಿಗೇರಿ ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

  • ಇಂದು ರಾತ್ರಿ 8 ಗಂಟೆಯಿಂದ್ಲೇ ಸಿಗಲ್ಲ ಮದ್ಯ – ಎಣ್ಣೆ ಪಾರ್ಸೆಲ್‍ಗೂ ನೋ ಪರ್ಮಿಷನ್

    ಇಂದು ರಾತ್ರಿ 8 ಗಂಟೆಯಿಂದ್ಲೇ ಸಿಗಲ್ಲ ಮದ್ಯ – ಎಣ್ಣೆ ಪಾರ್ಸೆಲ್‍ಗೂ ನೋ ಪರ್ಮಿಷನ್

    ಬೆಂಗಳೂರು: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ವಿಕೇಂಡ್ ಮಸ್ತಿಗೆ ಈ ಬಾರಿ ಕರ್ಫ್ಯೂ ಅಡ್ಡಿಯಾಗುತ್ತಿದೆ.

    ಹೌದು. ಇಂದು ರಾತ್ರಿಯಿಂದಲೇ ಮದ್ಯ ಮಾರಾಟ ಬಂದ್ ಆಗಲಿದೆ. ರಾತ್ರಿ 8 ಗಂಟೆಯ ನಂತರ ಮದ್ಯ ಸಿಗಲ್ಲ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪಾರ್ಸೆಲ್‍ಗೂ ಅನುಮತಿ ಇಲ್ಲ. ಕದ್ದು ಮುಚ್ಚಿ ಮಾರಾಟ ಮಾಡುವ ಬಾರ್‌ ಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸಜ್ಜಾಗಿದೆ. ಕಣ್ತತಪ್ಪಿಸಿ ಮದ್ಯಮಾರಾಟ ಮಾಡಿ ಸಿಕ್ಕಿಬಿದ್ದರೆ ಬಾರ್ ಲೆಸೆನ್ಸ್ ರದ್ದು ಮಾಡಲಾಗುತ್ತದೆ.

    ಸೋಮವಾರ ಮುಂಜಾನೆವರೆಗೂ ಬಾರ್, ರೆಸ್ಟೋರೆಂಟ್, ಎಂಎಸ್ ಐಎಲ್ ಎಲ್ಲಾವೂ ಬಂದ್ ಆಗಿರುತ್ತವೆ. ಸೋಮವಾರದ ಬಳಿಕ ಬಾರ್ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮೈಂಟೇನ್ ಮಾಡಬೇಕು. ಜೊತೆಗೆ ಬಾರ್, ಪಬ್ ಸಿಬ್ಬಂದಿಗೆ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿರುತ್ತದೆ.

    ಇನ್ನು ಬಾರ್, ಪಬ್, ರೆಸ್ಟೋರೆಂಟ್‍ಗೆ ಬರುವ ಗ್ರಾಹಕರಿಗೂ ಕೋವಿಡ್ ರೂಲ್ಸ್ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂದ್ರೆ ಲೆಸನ್ಸ್ ರದ್ದು ಮಾಡುವ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ