Tag: alcohol

  • ಪತ್ನಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಪತಿರಾಯ – ಕಾರಣ ಮಾತ್ರ ಸಸ್ಪೆನ್ಸ್

    ಪತ್ನಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಪತಿರಾಯ – ಕಾರಣ ಮಾತ್ರ ಸಸ್ಪೆನ್ಸ್

    ಹಾಸನ: ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇಂದ್ರಮ್ಮ (48) ಕೊಲೆಯಾದ ಮಹಿಳೆಯಾಗಿದ್ದು, ಚಂದ್ರಯ್ಯ ಪತ್ನಿಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ. ಇಂದು ಬೆಳಗ್ಗೆ ಇಂದ್ರಮ್ಮ ನಾಲ್ವರ ಜೊತೆ ಕೇಶವಮೂರ್ತಿ ಅವರ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಏಕಾಏಕಿ ದಾಳಿ ಮಾಡಿದ ಚಂದ್ರಯ್ಯ ತನ್ನ ಪತ್ನಿಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    POLICE JEEP

    ಈ ವೇಳೆ ಇಂದ್ರಮ್ಮನ ಜೊತೆಗಿದ್ದ ಮಹಿಳೆಯೊಬ್ಬರು ಕಾಪಾಡಲು ಮುಂದಾದಾಗ ಆ ಮಹಿಳೆಯ ಮೇಲು ಚಂದ್ರಯ್ಯ ಹಲ್ಲೆ ಮಾಡಿದ್ದಾನೆ. ಚಂದ್ರಯ್ಯ-ಇಂದ್ರಮ್ಮನ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರು ತಿಂಗಳ ಹಿಂದೆಯು ಇಂದ್ರಮ್ಮನನ್ನು ನೇಣು ಹಾಕಿ ಕೊಲ್ಲಲು ಚಂದ್ರಯ್ಯ ಯತ್ನಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ಚಂದ್ರಯ್ಯ ಪತ್ನಿ ಜೊತೆ ಜಗಳವಾಡಿದ್ದ. ಈ ವೇಳೆ ಚಂದ್ರೇಗೌಡ-ಇಂದ್ರಮ್ಮ ಪುತ್ರ ಚೀಕನಹಳ್ಳಿ ಗ್ರಾ.ಪಂ. ಸದಸ್ಯ ಪ್ರದೀಪ್ ಜಗಳ ಬಿಡಿಸಿ ಇಬ್ಬರಿಗೂ ಬುದ್ದಿ ಹೇಳಿದ್ದರು. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯದ ನಶೆಯಲ್ಲಿಯೇ ಸಾರಾಯಿ ಬಂದ್ ಮಾಡ್ಬೇಕೆಂದು ಪಂಚಾಯ್ತಿ ಕಟ್ಟಡವೇರಿದ!

    ಮದ್ಯದ ನಶೆಯಲ್ಲಿಯೇ ಸಾರಾಯಿ ಬಂದ್ ಮಾಡ್ಬೇಕೆಂದು ಪಂಚಾಯ್ತಿ ಕಟ್ಟಡವೇರಿದ!

    ಬಾಗಲಕೋಟೆ: ಸಾರಾಯಿ ಬಂದ್ ಮಾಡಬೇಕೆಂದು ವ್ಯಕ್ತಿಯೊಬ್ಬ ಪಂಚಾಯ್ತಿ ಕಟ್ಟಡ ಏರಿ ಹೈಡ್ರಾಮಾ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

    ಕಾಕಪ್ಪ ಮಾದರ ಹೈಡ್ರಾಮಾ ಮಾಡಿದ ವ್ಯಕ್ತಿ. ಈತ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಕನೂರು ಗ್ರಾಮ ಪಂಚಾಯ್ತಿ ಏರಿ ಕುಳಿತು, ಸಾರಾಯಿ ಬಂದ್ ಮಾಡಿಸದಿದ್ದರೆ ಪಂಚಾಯ್ತಿಯಲ್ಲೇ ನೇಣು ಹಾಕಿಕೊಂಡು ಸಾಯ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಲ್ಲಿ-ಎಷ್ಟು ಮಳೆಯಾಗಿದೆ?

    ನಾ ಮನೆ ಕೇಳಿಲ್ಲ, ಹೊಲ ಕೇಳಿಲ್ಲ. ಸಾರಾಯಿ ಮಾರಾಟ ಬಂದ್ ಮಾಡಿಸಿ. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಬಂದ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾನೆ. ಸ್ವತಃ ಸಾರಾಯಿ ಕುಡಿದು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಪಂಚಾಯ್ತಿ ಕಟ್ಟಡವೇರಿ ಕಾಕಪ್ಪ ಕೂತಿದ್ದಾನೆ. ನಂತರ ಗ್ರಾಮದ ಹಿರಿಯರು ಪಂಚಾಯ್ತಿ ಮೇಲೇರಿ ಮನವೊಲಿಕೆ ಮಾಡಿ ಆತನನ್ನು ಕೆಳಗಿಳಿಸಿದ್ದಾರೆ.

    ವ್ಯಕ್ತಿಯ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಯುವಕರಿಗೆ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ ಜಪಾನ್- ಕಾರಣ ಏನು ಗೊತ್ತಾ?

    ಯುವಕರಿಗೆ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ ಜಪಾನ್- ಕಾರಣ ಏನು ಗೊತ್ತಾ?

    ಟೋಕಿಯೋ: ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟ, ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಜಪಾನ್ ಸರ್ಕಾರ ತನ್ನ ಆದಾಯ ಹೆಚ್ಚಿಸಲು ಹೊಸ ಅಭಿಯಾನ ಆರಂಭಿಸಿದೆ. ಯುವ ವಯಸ್ಕರಿಗೆ ಹೆಚ್ಚು ಮದ್ಯಪಾನ ಮಾಡಲು ಕರೆ ಕೊಟ್ಟಿದ್ದು, “ಸೇಕ್ ವಿವಾ” ಎನ್ನುವ ಸ್ಪರ್ಧೆಯನ್ನು ಆರಂಭಿಸಿದೆ.

    ರಾಷ್ಟ್ರೀಯ ತೆರಿಗೆ ಏಜೆನ್ಸಿ (NTA) “ಸೇಕ್ ವಿವಾ!” ಎಂಬ ರಾಷ್ಟ್ರೀಯ ವ್ಯಾಪಾರ ಸ್ಪರ್ಧೆಯನ್ನು ಘೋಷಿಸಿದ್ದು, ದೇಶದ ಕಿರಿಯ ಜನಸಂಖ್ಯೆಯಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಈ ಅಭಿಯಾನ ಪ್ರೋತ್ಸಾಹಿಸುತ್ತದೆ. ಹೊಸ ವ್ಯಾಪಾರ ಕಲ್ಪನೆಗಳೊಂದಿಗೆ ಬರುವುದು, ಸೇಕ್, ಶೋಚು, ಅವಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ನಂತಹ ಜಪಾನಿನ ಆಲ್ಕೊಹಾಲ್‌ಯುಕ್ತ ಪಾನೀಯಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಅಭಿಯಾನ ಸಹಾಯ ಮಾಡಲಿದೆ.

    ಈ ಅಭಿಯಾನ ಮದ್ಯದ ಉದ್ಯಮವನ್ನು ಪುನಶ್ಚೇತನಗೊಳಿಸಲು ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಲಿದೆ ಎಂದು ಜಪಾನಿನ ತೆರಿಗೆ ಏಜೆನ್ಸಿ ಯೋಜನೆಯನ್ನು ವಿವರಿಸಿದೆ. “ಸೇಕ್ ವಿವಾ!” ಆಲ್ಕೊಹಾಲ್‌ಯುಕ್ತ ಪಾನೀಯಗಳ ಆಕರ್ಷಣೆಯನ್ನು ಪುನರುಜ್ಜೀವನಗೊಳಿಸಲಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳಲು 20 ಮತ್ತು 39ರ ನಡುವಿನ ವಯಸ್ಸಿನ ಜನರನ್ನು ಆಹ್ವಾನಿಸಲಾಗುತ್ತಿದೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ, ಇದು ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಭೌಗೋಳಿಕ ಸೂಚನೆಗಳನ್ನು (ಉತ್ಪನ್ನಗಳ ಭೌಗೋಳಿಕ ಮೂಲವನ್ನು ಸೂಚಿಸಲು ಬಳಸುವ ಚಿಹ್ನೆ) ಬಳಸುವ ಹೊಸ ಮಾರಾಟ ವಿಧಾನಗಳನ್ನು ಸೂಚಿಸಲು ಜನರನ್ನು ಕೇಳುತ್ತದೆ. ಇದಕ್ಕೆ ಸ್ಪರ್ಧಿಗಳು ಹೊಸ ಯೋಚನೆಗಳನ್ನು ನೀಡಬೇಕು.

    ಸ್ಪರ್ಧೆಯಲ್ಲಿ ಫೈನಲಿಸ್ಟ್‌ಗಳನ್ನು ಸೆಪ್ಟೆಂಬರ್ 27 ರೊಳಗೆ ಆಯ್ಕೆ ಮಾಡಲಾಗುವುದು. ನಂತರ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತು ನಡೆಯಲಿದ್ದು, ಈ ವಿಶಿಷ್ಟ ಸ್ಪರ್ಧೆಯ ಫಲಿತಾಂಶಗಳನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    NTA ಪ್ರಕಾರ, 1995 ಕ್ಕೆ ಹೋಲಿಸಿದರೆ ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ 2020 ರಲ್ಲಿ ಜಪಾನಿಯರು ಕಡಿಮೆ ಮದ್ಯ ಸೇವನೆ ಮಾಡುತ್ತಿದ್ದಾರೆ. 1995 ರಲ್ಲಿ ಜನರು 100 ಲೀಟರ್ (22 ಗ್ಯಾಲನ್) ಆಲ್ಕೋಹಾಲ್ ಅನ್ನು ಸೇವಿಸುತ್ತಿದ್ದರು. ಸದ್ಯ ಕುಡಿಯುವಿಕೆಯು 75 ಲೀಟರ್‌ಗಳಿಗೆ (16 ಗ್ಯಾಲನ್‌ಗಳು) ಕಡಿಮೆಯಾಗಿದೆ  ಎಂದು ವರದಿಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಇವರು ಎಣ್ಣೆ ಹೊಡೆದ್ರೆ ಸಾಕು ಏನಾದ್ರೂ ಕದಿಯಲೇ ಬೇಕು!

    ಇವರು ಎಣ್ಣೆ ಹೊಡೆದ್ರೆ ಸಾಕು ಏನಾದ್ರೂ ಕದಿಯಲೇ ಬೇಕು!

    ಬೆಂಗಳೂರು: ಇವರು ಎಣ್ಣೆ ಹೊಡೆದ್ರೆ ಸಾಕ ಏನಾದರೂ ಕದಿಯಲೇಬೇಕಂತೆ. ಬೈಕು, ಕಾರು, ಆಟೋ ಏನೇ ಆಗಲಿ ಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುತ್ತಾರೆ.

    ಈ ರೀತಿ ಕಳ್ಳತನಕ್ಕಿಳಿದಿದ್ದ ಇಬ್ಬರನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನದೀಂ ಅಹಮದ್ ಹಾಗೂ ಗುಲಾಂ ಹುಸೇನ್ ಎಂದು ಗುರುತಿಸಲಗಿದೆ. ಇವರು ಕದ್ದ ವಾಹನಗಳನ್ನ ಕೊಳ್ಳೋರ ಜೊತೆ ಸಂಚಾರಿ ಪೊಲೀಸರಿಗೂ ಯಾಮಾರಿಸುತ್ತಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    ಮದ್ಯದ ನಶೆಯಲ್ಲಿ ಯಾವ ವಾಹನ ಕಂಡರೂ ಕ್ಷಣಮಾತ್ರದಲ್ಲಿ ಎಗರಿಸುತ್ತಿದ್ದ ಆರೋಪಿಗಳು ಕದ್ದ ವಾಹನದ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಹುಳಿಮಾವು, ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು.

    ಜೈಲಿಗೆ ಹೋಗಿ ಬಂದರೂ ಮತ್ತದೇ ಕೃತ್ಯ ಮುಂದುವರಿಸಿದ್ದರು. ಸದ್ಯ ಬಂಧಿತರಿಂದ 2 ಆಟೋ, 1 ಕಾರು 6 ಬೈಕುಗಳ ಜಪ್ತಿ ಮಾಡಲಾಗಿದೆ. ಮತ್ತೋರ್ವ ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಗುರಾಯಿಸಿದ್ದಕ್ಕೆ ದೊಣ್ಣೆ ಹಿಡಿದು ನಡುರಸ್ತೆಯಲ್ಲಿ ಹೊಡೆದಾಡಿದ ಯುವಕರು

    ಗುರಾಯಿಸಿದ್ದಕ್ಕೆ ದೊಣ್ಣೆ ಹಿಡಿದು ನಡುರಸ್ತೆಯಲ್ಲಿ ಹೊಡೆದಾಡಿದ ಯುವಕರು

    ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪೊಂದು ದಾಂಧಲೆ ನಡೆಸಿದ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

    ರಿಂಗ್ ರಸ್ತೆಯ ಕ್ಲೌಡ್ 9 ಬಾರ್‌ನಲ್ಲಿ ಯುವಕರ ಗುಂಪು ಮದ್ಯವನ್ನು ಸೇವಿಸುತ್ತಿತ್ತು. ಈ ವೇಳೆ ಯುವಕನೊಬ್ಬ ಮದ್ಯ ಸೇವಸಿದ ಬಳಿಕ ಗುರಾಯಿಸಿದ್ದಾನೆ. ಇದನ್ನೆ ಕಾರಣವಾಗಿಟ್ಟುಕೊಂಡು ಯುವಕರ ಗುಂಪು ಗಲಾಟೆ ಮಾಡಲು ಆರಂಭ ಮಾಡಿದೆ. ಇದನ್ನೂ ಓದಿ: ನಾಗಪಂಚಮಿಯ ವಿಶೇಷ: ಬಾಯಲ್ಲಿಟ್ಟರೆ ಕರಗುವ ‘ಅಕ್ಕಿ ತಂಬಿಟ್ಟು’ ಮಾಡುವ ವಿಧಾನ

    ದೊಣ್ಣೆ ಹಿಡಿದುಕೊಂಡು ನಡುರಸ್ತೆಗೆ ಯುವಕರು ಇಳಿದಿದ್ದು, ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ತಿಳಿಸಿದ ತಕ್ಷಣ ಪೊಲೀಸರು ಧಾವಿಸಿದ್ದು, ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಕುಡಿದು ದಾಂಧಲೆ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪರಾಧಗಳನ್ನು ತಡೆಯಲು ಮದ್ಯಪಾನದ ಬದಲು ಗಾಂಜಾ, ಭಾಂಗ್ ಸೇವಿಸಿ: ಶಾಸಕನಿಂದ ವಿವಾದಾತ್ಮಕ ಹೇಳಿಕೆ

    ಅಪರಾಧಗಳನ್ನು ತಡೆಯಲು ಮದ್ಯಪಾನದ ಬದಲು ಗಾಂಜಾ, ಭಾಂಗ್ ಸೇವಿಸಿ: ಶಾಸಕನಿಂದ ವಿವಾದಾತ್ಮಕ ಹೇಳಿಕೆ

    ರಾಯಪುರ: ಅಪರಾಧಗಳನ್ನು ತಪ್ಪಿಸಲು ಮದ್ಯಪಾನವನ್ನು ಮಾಡಬೇಡಿ. ಬದಲಿಗೆ ಗಾಂಜಾ ಅಥವಾ ಭಾಂಗ್ ಸೇವಿಸಿ ಎಂದು ಛತ್ತೀಸ್‌ಗಢದ ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮದ್ಯಪಾನದಿಂದ ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಅಪರಾಧಗಳು ಹೆಚ್ಚಾಗುತ್ತಿವೆ. ಆದರೆ ಭಾಂಗ್ ಅಥವಾ ಗಾಂಜಾ ಸೇವನೆ ಇಂತಹ ಅಪರಾಧಗಳನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕನ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಒಬ್ಬ ಸಾರ್ವಜನಿಕ ಪ್ರತಿನಿಧಿ ಮಾದಕ ದ್ರವ್ಯ ಸೇವಿಸಲು ಜನರಿಗೆ ಉತ್ತೇಜನ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವರ ಸಾವು

    ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಹಿಂದೆಯೂ ಈ ಬಗ್ಗೆ ವಿಧಾನಸಭೆಯಲ್ಲಿ ಒಮ್ಮೆ ಚರ್ಚೆ ನಡೆಸಿದ್ದೆ. ಅತ್ಯಾಚಾರ, ಕೊಲೆ, ಅಪರಾಧಗಳಿಗೆ ಎಲ್ಲೋ ಒಂದೆಡೆ ಮದ್ಯಪಾನವೇ ಕಾರಣವಾಗಿರುತ್ತದೆ ಎಂದು ಹೇಳಿದ್ದೆ. ಇಲ್ಲಿಯವರೆಗೆ ಭಾಂಗ್ ಸೇವಿಸಿದವರು ಅತ್ಯಾಚಾರ, ಕೊಲೆಯಂತಹ ಕೃತ್ಯಗಳನ್ನು ಮಾಡಿದ್ದಾರಾ? ವ್ಯಸನದ ಅಗತ್ಯಗಳನ್ನು ಪೂರೈಸಲು ಇದು ಅತ್ಯುತ್ತಮ ಮಾರ್ಗ. ಮದ್ಯಪಾನವನ್ನು ನಿಷೇಧಿಸಲು ಇದು ಸಹಕಾರಿಯೂ ಆಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ

    ಜನರು ವ್ಯಸನವನ್ನು ಬಯಸಿದರೆ, ಅವರಿಗೆ ಕೊಲೆ, ಅತ್ಯಾಚಾರಗಳಂತಹ ಅಪರಾಧಗಳಿಗೆ ಉತ್ತೇಜನ ನೀಡದ ವಸ್ತುಗಳನ್ನು ನೀಡಬೇಕು. ನಾವು ಇದಕ್ಕಾಗಿ ಭಾಂಗ್ ಮತ್ತು ಗಾಂಜಾದ ಕಡೆಗೆ ಮುನ್ನಡೆಯಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಅತ್ತೆ ಬಲಿಯಾಗಿರುವ ಘಟನೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ನಡೆದಿದೆ.

    ಸೌಭಾಗ್ಯ ಮೃತ ಮಹಿಳೆಯಾಗಿದ್ದು, ಜುಲೈ 13 ರ ಬುಧವಾರ ಸಂಜೆ 7.30ಕ್ಕೆ ಈ ಘಟನೆ ನಡೆದಿದೆ. ಆರೋಪಿಯನ್ನು 35 ವರ್ಷದ ನಾಗರಾಜ ಎಂದು ಗುರುತಿಸಲಾಗಿದೆ. ಕಳೆದ 6 ವರ್ಷದ ಹಿಂದೆ ನಾಗರಾಜ ಮತ್ತು ಭವ್ಯಶ್ರೀ ವಿವಾಹವಾಗಿದ್ದರು. ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದರಿಂದ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಗಂಡನ ಕಾಟ ತಾಳಲಾರದೇ ಭವ್ಯ ಶ್ರೀ ಸಂಜಯನಗರದಲ್ಲಿರುವ ತನ್ನ ತಾಯಿ ನಿವಾಸಕ್ಕೆ ಬಂದಿದ್ದರು.

    CRIME 2

    ಕಳೆದ ಊರು ವರ್ಷದಿಂದ ತಾಯಿ ಮನೆಯಲ್ಲಿಯೇ ವಾಸವಾಗಿದ್ದ ಭವ್ಯ ಶ್ರೀ ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ನಡೆಸುತ್ತಿದ್ದರು. ಈ ವಿಚಾರ ತಿಳಿದು ಮತ್ತೆ ಪತ್ನಿ ಬೇಕು ಎನಿಸಿ ಕುಡಿದ ಅಮಲಿನಲ್ಲಿ ನಾಗರಾಜ ಜುಲೈ 12ರಂದು ಮಂಗಳವಾರ ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    KILLING CRIME

    ಈ ವೇಳೆ ಸೌಭಾಗ್ಯ ಕುಟುಂಬಸ್ಥರು ಬುದ್ಧಿ ಹೇಳಿ ನಾಗರಾಜ ಅನ್ನು ವಾಪಸ್ ಕಳುಹಿಸಿದ್ದರು. ಆದರೆ ಬುದ್ಧಿ ಕಲಿಯದ ಆಸಾಮಿ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಪಣತೊಟ್ಟು ಆರೋಪಿ ಅತ್ತೆಗೆ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಸೌಭಾಗ್ಯ ಅವರನ್ನು ಸೊಪ್ಪು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಬಂದು ನಾಗರಾಜ್ ಏಕಾಏಕಿ ಸುತ್ತಿಗೆಯಿಂದ ಐದಾರು ಬಾರಿ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಬೀರವಾಗಿ ಗಾಯಗೊಂಡ ಸೌಭಾಗ್ಯ ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಅವರನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ ಸಾವನ್ನಪ್ಪಿದ್ದಾರೆ.

    ಇದೀಗ ಘಟನೆ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ನಾಗರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿ ನನಗೆ ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿ ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಲ್ಲಿ ಯಾರು ಎನ್ನುವುದೇ ಗೊತ್ತಾಗಿಲ್ಲ. ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆ ನೋವು ತಾಳಲಾರದೇ ಯುವಕ ಆತ್ಮಹತ್ಯೆ

    ಹೊಟ್ಟೆ ನೋವು ತಾಳಲಾರದೇ ಯುವಕ ಆತ್ಮಹತ್ಯೆ

    ತುಮಕೂರು: ಹೊಟ್ಟೆ ನೋವು ತಾಳಲಾರದೇ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೊಡಬಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಹೃತಿಕ್ ನಾಯಕ್ (19) ಎಂದು ಗುರುತಿಸಲಾಗಿದೆ. ಯುವಕ ಹೆಚ್ಚು ಮದ್ಯಸೇವನೆಯಿಂದ ಪದೇ ಪದೇ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಹೊಟ್ಟೆ ನೋವು ತಾಳಲಾರದೆ ಮನನೊಂದು ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೊಳೆಗೆ ಕಾರು ಉರುಳಿದ ಪ್ರಕರಣಕ್ಕೆ ಟ್ವಿಸ್ಟ್- ಆಕ್ಸಿಡೆಂಟ್ ಆಗೋ 4 ನಿಮಿಷ ಮೊದಲೇ ಕರೆ ಮಾಡಿದ್ದ ಯುವಕರು..!

    ಇದೇ ರೀತಿ ಇತ್ತೀಚೆಗಷ್ಟೇ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಂಜಿತಾ (30) ಅವರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿತ್ತು. ಈ ಬಗ್ಗೆ ಪತಿ ವೆಂಕಟೇಶ್ ಕುಣಿಗಲ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ಗುಂಡಿನ ದಾಳಿ- 15 ಮಂದಿ ಸ್ಥಳದಲ್ಲೇ ಸಾವು

    Live Tv
    [brid partner=56869869 player=32851 video=960834 autoplay=true]

  • ಸಾರಾಯಿ ಕುಡಿಬೇಡ ಅಂತ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

    ಸಾರಾಯಿ ಕುಡಿಬೇಡ ಅಂತ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

    ಚಿಕ್ಕೋಡಿ: ಸಾರಾಯಿ ಕುಡಿಬೇಡ ಅಂತ ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ.

    ಮನ್ಸೂರ್ ಇಲಾಹಿ ಮುಲ್ಲಾ(50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಶನಿವಾರ ತಡರಾತ್ರಿ ಹೆಂಡತಿ ಮಗನೊಂದಿಗೆ ಇದೇ ವಿಚಾರಕ್ಕೆ ಮನ್ಸೂರ್ ಜಗಳವಾಡಿದ್ದ. ಸಾರಾಯಿ ಕುಡಿಯುವ ವಿಷಯಕ್ಕೆ ದಿನನಿತ್ಯ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಕುಡಿಯಬೇಡ ಅಂತ ಹೇಳಿದ್ದಕ್ಕೆ ಮನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯಿಂದ ಸ್ಥಳಕ್ಕೆ ಖಡಕಲಾಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 7 ಮಂದಿ ದುರ್ಮರಣ

    Live Tv

  • ಶೀಘ್ರವೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ನಿಲ್ಲಿಸಲಾಗುತ್ತದೆ: ಅಜಿತ್ ಪವಾರ್

    ಶೀಘ್ರವೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ನಿಲ್ಲಿಸಲಾಗುತ್ತದೆ: ಅಜಿತ್ ಪವಾರ್

    ಮುಂಬೈ: ಕೊರೊನಾ ಲಾಕ್‍ಡೌನ್ ವೇಳೆ ಮನೆ ಬಾಗಿಲಿಗೆ ಲಿಕ್ಕರ್ ಪೂರೈಕೆ ಮಾಡಲಾಗುತ್ತಿತ್ತು. ಆದರೀಗ ಈ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ನಿಲ್ಲಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

    ಕೋವಿಡ್-19 ಪ್ರಕರಣಗಳು ಕಡಿಮೆಯಾಗಿರುವುದರಿಂದ, ನಾವು ಲಿಕ್ಕರ್‍ನನ್ನು ಮನೆ ಬಾಗಿಲಿಗೆ ಪೂರೈಸುವುದನ್ನು ನಿಲ್ಲಿಸುತ್ತೇವೆ. ಅಲ್ಲದೇ ಇನ್ಮುಂದೆ ಲಿಕ್ಕರ್ ಹೋಂ ಡೆಲಿವರಿ ಮಾಡುವುದನ್ನು ಸ್ಥಗಿತಗೊಳಿಸುವಂತೆ ಗೃಹ ಇಲಾಖೆ ಅಬಕಾರಿ ಇಲಾಖೆಗೆ ಪತ್ರ ಬರೆದಿದೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಸತೇಂದ್ರ ಜೈನ್ ಬಳಿಕ‌ ಮನೀಷ್ ಸಿಸೋಡಿಯ ಬಂಧನಕ್ಕೆ ತಯಾರಿ : ಮೋದಿ ವಿರುದ್ಧ ಕೇಜ್ರಿವಾಲ್‌ ಕಿಡಿ

    ಲಾಕ್‍ಡೌನ್ ಸಮಯದಲ್ಲಿ ಮಹಾರಾಷ್ಟ್ರ ಸರ್ಕಾರವು ಮದ್ಯ ಪ್ರಿಯರಿಗೆ ಲಿಕ್ಕರ್‍ನನ್ನು ಮನೆ ಬಾಗಲಿಗೆ ಪೂರೈಕೆ ಮಾಡಬಹುದೆಂದು ಅಧಿಸೂಚನೆ ಹೊರಡಿಸಿತ್ತು. ಅಲ್ಲದೇ ಪರವಾನಗಿ ಹೊಂದಿರುವ ಮದ್ಯದಂಗಡಿಗಳಿಗೆ ಮಾತ್ರ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ಕಂದಮ್ಮನ ಎದುರೇ ಆತ್ಯಹತ್ಯೆ ಮಾಡಿಕೊಂಡ ತಾಯಿ – ಎರಡೂವರೆ ಗಂಟೆ ಅಮ್ಮ…ಎಂದು ಕಣ್ಣೀರಿಟ್ಟ ಮಗು