Tag: alcohol

  • ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ

    ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ

    -ಶ್ರದ್ಧಾ ಕೂಡಾ ಮದ್ಯ ಸೇವಿಸುತ್ತಿದ್ದಳು
    – 35 ಅಲ್ಲ 16 ಪೀಸ್ ಮಾಡಿದ್ದೆ

    ನವದೆಹಲಿ: ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದಲ್ಲಿ ಪ್ರತಿನಿತ್ಯ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿದೆ. ಪ್ರಕರಣ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು (Delhi) ಮುಂದೆ ಅಫ್ತಾಬ್ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾನೆ. ತನಿಖೆ ವೇಳೆ ಅಫ್ತಾಬ್ (Aftab Amin Poonawala) ಡ್ರಗ್ಸ್‌ಗೆ ಅಡಿಕ್ಟ್ ಆಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿತ್ಯ ಗಾಂಜಾ ಸೇವಿಸುತ್ತಿದ್ದೆ, ನಶೆಯಲ್ಲಿ ತೇಲಾಡುತ್ತಿದ್ದೆ, ಗಾಂಜಾ ಸೇವನೆಯನ್ನು ಶ್ರದ್ಧಾ ವಿರೋಧಿಸಿದ್ದಳು, ಇದೇ ಕಾರಣಕ್ಕೆ ಶ್ರದ್ಧಾ ಜಗಳವಾಡುತ್ತಿದ್ದಳು ಎಂದು ತನಿಖೆ ವೇಳೆ ಅಫ್ತಾಬ್ ಹೇಳಿಕೊಂಡಿದ್ದಾನೆ.

    ಮುಂಬೈನಿಂದ (Mumbai) ದೆಹಲಿಗೆ ಶಿಫ್ಟ್ ಆಗಿದ್ದರಿಂದ ಶ್ರದ್ಧಾ ಮತ್ತು ನನ್ನ ನಡುವೆ ಲಗೇಜ್ ತರುವ ವಿಚಾರಕ್ಕೆ ಮೇ 18 ರಂದು ಜಗಳವಾಗಿತ್ತು. ಮುಂಬೈನಲ್ಲಿ ಮನೆ ಬಳಕೆಯ ಲಗೇಜ್ ಇತ್ತು, ಅದನ್ನು ದೆಹಲಿಗೆ ತರುವ ಬಗ್ಗೆ ಇಬ್ಬರ ನಡುವೆ ಜಗಳವಾಗಿತ್ತು. ಇಬ್ಬರು ನಗದು ಹಣದ ಕೊರತೆ ಎದುರಿಸುತ್ತಿದ್ದರಿಂದ ಮುಂಬೈನಿಂದ ಲಗೇಜ್ ತರುವುದು ಯಾರು ಎಂದು ಜಗಳಮಾಡಿಕೊಂಡಿದ್ದೆವು, ಕೊಲೆಯಾದ ದಿನ ತೀವ್ರ ಮಾತಿನ ಜಕಮಕಿ ನಡೆದಿತ್ತು.

    ಜಗಳ ನಡುವೆ ಮನೆಯಿಂದ ಹೊರಗೆ ಹೋಗಿ ಗಾಂಜಾ ಸೇವಿಸಿ ಮನೆಗೆ ವಾಪಸ್ ಆಗಿದ್ದೆ, ಈ ವೇಳೆ ಜಗಳ ಮುಂದುವರಿದು ನಶೆಯಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿರುವುದಾಗಿ ಅಫ್ತಾಬ್ ಹೇಳಿದ್ದಾನೆ. ಇದು ನಶೆಯಲ್ಲಿ ನಡೆದ ಘಟನೆಯಾಗಿದ್ದು, ಶ್ರದ್ಧಾ ಹತ್ಯೆ ಮಾಡುವ ಉದ್ದೇಶ ಇರಲಿಲ್ಲ ಎಂದು ಸೈಕೋ ಕಿಲ್ಲರ್ ಅಫ್ತಾಬ್ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವಳು ಮತಾಂತರವಾಗಲಿಲ್ಲ – ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ

    ಶ್ರದ್ಧಾ ಜೊತೆ ಮದ್ಯ ಸೇವಿಸುತ್ತಿದ್ದೆ
    ವಿಚಾರಣೆ ವೇಳೆ ಶ್ರದ್ಧಾ ಕೂಡಾ ಮದ್ಯ ಸೇವನೆ ಮಾಡುತ್ತಿದ್ದ ಮಾಹಿತಿಯನ್ನು ಅಫ್ತಾಬ್ ಹಂಚಿಕೊಂಡಿದ್ದಾನೆ. ಹಲವು ಬಾರಿ ಮನೆಯಲ್ಲಿ ಶ್ರದ್ಧಾ ಜೊತೆಯಲ್ಲಿ ಮದ್ಯ ಸೇವನೆ ಮಾಡಿ ಜಗಳ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

    35 ಅಲ್ಲ 16 ಪೀಸ್ ಮಾಡಿದ್ದೆ
    ಇದೇ ವೇಳೆ ಅಫ್ತಾಬ್ ತನ್ನ ಹೇಳಿಕೆಯನ್ನು ಬದಲಿಸಿದ್ದು, ಶ್ರದ್ಧಾ ದೇಹವನ್ನು 35 ಭಾಗವಲ್ಲ ಬದಲಿಗೆ 16 ಭಾಗಗಳಾಗಿ ತುಂಡರಿಸಿ ಫ್ರಿಡ್ಜ್‌ನಲ್ಲಿ ತುಂಬಿದ್ದೆ ಎಂದು ಅಫ್ತಾಬ್ ಹೇಳಿದ್ದಾನೆ. ಸೊಂಟದ ಕೆಳಭಾಗದಿಂದ ಕಾಲಿನವರೆಗೆ ಮೂರು ಭಾಗಗಳಾಗಿ ಮಾಡಿದರೆ, ಮೇಲಿನ ದೇಹ ಮತ್ತು ಒಳ ಭಾಗಗಳನ್ನು 13 ಭಾಗಗಳಾಗಿ ಕತ್ತರಿಸಿರುವುದಾಗಿ ಹೇಳಿದ್ದಾನೆ, ತಲೆಯನ್ನು ಗುರುತು ಸಿಗದ ಹಾಗೇ ಸುಟ್ಟು ಎಸೆದಿದ್ದು, ಅದನ್ನು ಕತ್ತಿರಿಸುವ ಪ್ರಯತ್ನ ಮಾಡಿಲ್ಲ ಎಂದು ತಿಳಿಸಿದ್ದಾನೆ.

    ಮಂಪರು ಪರೀಕ್ಷೆ ನಿರ್ಧಾರದ ಬಳಿಕ ಅಫ್ತಾಬ್ ತನ್ನ ಹೇಳಿಕೆಯಲ್ಲಿ ಮಹತ್ವದ ಹೇಳಿಕೆ ಬದಲಿಸಿದ್ದು ಇದು ತನಿಖೆಯ ದಿಕ್ಕನ್ನು ಮತ್ತೊಂದು ಕಡೆಗೆ ತಿರುಗಿಸಲಿದೆ. ಈಗಾಗಲೇ ಪೊಲೀಸರು 13 ಭಾಗಗಳನ್ನು ಗುರುತಿಸಿದ್ದು, ತಲೆ ಬರುಡೆಯನ್ನು ಪತ್ತೆ ಹಚ್ಚಿ ಡಿಎನ್‍ಎ ಟೆಸ್ಟ್‌ಗೆ ಕಳುಹಿಸಿದೆ. ಈ ವರದಿಗಾಗಿಯೂ ಪೊಲೀಸರು ಕಾಯುತ್ತಿದ್ದಾರೆ. ಇದನ್ನೂ ಓದಿ: ಭೀಮಾ ಕೋರೆಗಾಂವ್‌ ಪ್ರಕರಣ – ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆಗೆ ಬಾಂಬೆ ಹೈಕೋರ್ಟ್ ಜಾಮೀನು

    2020ರಲ್ಲೇ ಶ್ರದ್ಧಾ ಮೇಲೆ ತೀವ್ರ ಹಲ್ಲೆ ಮಾಡಿದ್ನಾ ಆಫ್ತಾಬ್?
    ಶ್ರದ್ಧಾ ಸೋಶಿಯಲ್ ಮೀಡಿಯಾ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಹೊಸ ಮಾಹಿತಿ ತಿಳಿದು ಬಂದಿದೆ. ಶ್ರದ್ಧಾ ಅಪ್ಲೋಡ್ ಮಾಡಿದ ಹಳೆಯ ಫೋಟೋದಲ್ಲಿ ಮುಖದ ಮೇಲೆ ಗಾಯ ಪತ್ತೆಯಾಗಿದೆ. ಮುಖದ ಮೇಲೆ ಗಾಯ, ಊದಿಕೊಂಡ ಕಣ್ಣುಗಳು, ಮೂಗಿನ ಮೇಲೆಯೂ ಗಾಯದ ಗುರುತು ಹೊಂದಿರುವ ಫೋಟೋಗಳನ್ನು 2020ರಲ್ಲಿ ಶ್ರದ್ಧಾ ಅಪ್ಲೋಡ್ ಮಾಡಿದ್ದಾಳೆ. ಹೀಗಾಗಿ ಅಫ್ತಾಬ್ ಈ ಹಿಂದೆಯೂ ಶ್ರದ್ಧಾ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ನಾ ಎಂಬ ಅನುಮಾನ ಮೂಡಿದೆ.

    176 ಪೊಲೀಸ್ ಠಾಣೆಗಳಿಗೆ ನೋಟಿಸ್
    ಶ್ರದ್ಧಾ ಮೃತ ದೇಹ ಪತ್ತೆ ಮಾಡುವ ನಿಟ್ಟಿನಲ್ಲಿ ದೆಹಲಿ ಪೊಲೀಸ್ ಮಹಾ ನಿರ್ದೇಶಕರು ಮೆಹ್ರೋಲಿ ಸುತ್ತಲಿನ 176 ಪೊಲೀಸ್ ಠಾಣೆಗಳಿಗೆ ನೋಟಿಸ್ ನೀಡಿದ್ದಾರೆ. ಮೇ 18 ರಿಂದ ಜುಲೈ ಅಂತ್ಯದ ಅವಧಿಯಲ್ಲಿ ದೆಹಲಿಯಲ್ಲಿ ಪತ್ತೆಯಾದ ಗುರುತು ಸಿಗದ ಹೆಣ್ಣು ದೇಹಗಳ ಮಾಹಿತಿಯನ್ನು ತಿಳಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಶ್ರದ್ಧಾಳ ಬಾಕಿ ದೇಹಕ್ಕಾಗಿ ಹುಡುಕಾಟ ತೀವ್ರವಾಗಿದೆ.

    ಅಫ್ತಾಬ್ ವಿಚಾರಣೆ ವೇಳೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆ ಪೊಲೀಸರು ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಈಗಾಗಲೇ ಮಂಪರು ಪರೀಕ್ಷೆ ನಡೆಸಲು ನ್ಯಾಯಲಯ ಅನುಮತಿ ನೀಡಿದ್ದು, ಅಫ್ತಾಬ್ ಕೂಡಾ ಒಪ್ಪಿಗೆ ಸೂಚಿಸಿದ್ದಾನೆ. ತಜ್ಞರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲು ಪೊಲೀಸರು ತಯಾರಿ ಮಾಡಿಕೊಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಣ್ಣೆ ಏಟಲ್ಲಿ ಯುವತಿಯರ ಗುದ್ದಾಟ – ಜುಟ್ಟು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರು

    ಎಣ್ಣೆ ಏಟಲ್ಲಿ ಯುವತಿಯರ ಗುದ್ದಾಟ – ಜುಟ್ಟು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರು

    ಭೋಪಾಲ್: ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳಿಗೆ ನಾಲ್ವರು ಯುವತಿಯರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ಜಿಲ್ಲೆಯಲ್ಲಿ ನಡೆದಿದೆ.

    ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಇಂದೋರ್‌ನ ಎಲ್‍ಐಜಿ ಛೇದಕದಲ್ಲಿ ಯುವತಿಯನ್ನು ನೆಲಕ್ಕುರುಳಿಸಿ, ಆಕೆಯ ಜುಟ್ಟು ಎಳೆದಾಡುತ್ತಾ, ಬೆಲ್ಟ್‌ನಿಂದ ಥಳಿಸಿದ್ದಾರೆ. ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಕಾರಿಗೆ ಅಡ್ಡ ಬಂದ ನಾಯಿ- ಡಿವೈಡರ್‌ಗೆ ಡಿಕ್ಕಿಯಾಗಿ ಮಹಿಳೆಯರಿಬ್ಬರ ದುರ್ಮರಣ

    ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಕುಡಿದು ಬಂದ ಯುವತಿಯರು ಸಂತ್ರಸ್ತೆಯ ಜುಟ್ಟು ಹಿಡಿದು ಎಳೆದಾಡಿ, ಮುಖಕ್ಕೆ ಗುದ್ದುತ್ತಾ, ಕಾಲಿನಿಂದ ಒದ್ದಿರುವುದನ್ನು ಕಾಣಬಹುದಾಗಿದೆ. ಇಷ್ಟೇ ಅಲ್ಲದೇ ಆಕೆಯನ್ನು ಥಳಿಸುತ್ತಿದ್ದರೆ, ಅಕ್ಕ, ಪಕ್ಕದಲ್ಲಿ ನಿಂತಿದ್ದ ಸ್ಥಳೀಯರು ಸುಮ್ಮನೆ ನೋಡುತ್ತಿರುತ್ತಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ – ಪೋಸ್ಟರ್ ಹಾಕಿ ಬಿಜೆಪಿ ಪ್ರತಿಭಟನೆ

    ಯಾವುದೇ ಕಾರಣವಿಲ್ಲದೇ ಅಷ್ಟು ಜನ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇದೀಗ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಯುವತಿ ಇಂದೋರ್‍ನ ಧೇನು ಮಾರುಕಟ್ಟೆಯಲ್ಲಿ ಕೀಟನಾಶಕ ಅಂಗಡಿಯಲ್ಲಿ ಮಾರಾಟಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

    ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

    ನವದೆಹಲಿ: ಕೋವಿಡ್ (Covid-19) ಸಾಂಕ್ರಾಮಿಕದ ನಂತರ ಮದ್ಯಸೇವನೆ (Drinking) ಮಾಡುವುದರಲ್ಲಿ ಮಹಿಳೆಯರ (Women) ಸಂಖ್ಯೆಯೇ ಹೆಚ್ಚಾಗಿದೆ ಎಂದು ಕಮ್ಯುನಿಟಿ ಅಗೇನ್ಸ್ಟ್‌ ಡ್ರಂಕನ್ ಡ್ರೈವಿಂಗ್ (CADD) ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆ ತೋರಿಸಿದೆ.

    ಈ ವರ್ಷ ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ 18 ರಿಂದ 68ನೇ ವಯಸ್ಸಿನ 5,000 ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯ ದತ್ತಾಂಶವು ಮಹಿಳೆಯರಲ್ಲಿ (Women’s) ಮದ್ಯ ಸೇವನೆ ಹೆಚ್ಚಾಗಿರುವುದನ್ನು ಸೂಚಿಸಿದೆ. ಮನೆಯಲ್ಲಿ ಹಾಗೂ ಮನೆಯ ಪಾರ್ಟಿಗಳಲ್ಲಿ (House Parties) ಕುಡಿಯುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲ ಮಹಿಳೆಯರು ಪಬ್‌ಗಳಿಗೆ (Pub) ಹೋಗಿ ಕುಡಿಯಲು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಸೂಚಿಸಿದೆ. ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ

    ಈ ಕುರಿತು ಸಿಎಡಿಡಿ (ACDD) ಸಂಸ್ಥಾಪಕ ಪ್ರಿನ್ಸ್ ಸಿಂಘಾಲ್ ಮಾತನಾಡಿದ್ದು, ಇತ್ತೀಚಿನ ಪ್ರವೃತ್ತಿಗಳು ಮಹಿಳೆಯರಲ್ಲಿ ಮದ್ಯ ಸೇವೆನೆ ಮಾಡುವುದನ್ನು ಹೆಚ್ಚಾಗಿಸಿದೆ. ಕಳೆದ 3 ವರ್ಷಗಳಲ್ಲಿ ಕುಡಿಯುವ ಮಾದರಿಗಳು ಬದಲಾಗಿದೆ. ಸಾಂಕ್ರಾಮಿಕದ ನಂತರ ಅದರ ಒತ್ತಡದಿಂದಾಗಿಯೇ ಹೆಚ್ಚು ಮದ್ಯ ಸೇವಿಸಲು ಆರಂಭಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಹಿಳೆಯರು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಿದ್ದರು. ನಂತರ ಕನಿಷ್ಠ ಶೇ.30 ಮಹಿಳೆಯರು ತಮ್ಮ ಆಲ್ಕೋಹಾಲ್ (Alcohol) ಸೇವನೆಯನ್ನು ಶೇ.42.3ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಶೇ.45.7 ರಷ್ಟು ಮಹಿಳೆಯರು ಒತ್ತಡದಿಂದ, ಶೇ.30.1 ರಷ್ಟು ಮಹಿಳೆಯರು ಬೇಸರ ಹಾಗೂ ಒಂಟಿ ತನದಿಂದ ಹಾಗೂ ಶೇ.34.4 ರಷ್ಟು ಮಹಿಳೆಯರು ಆಲ್ಕೋಹಾಲ್ ಲಭ್ಯವಾಗುತ್ತಿರುವುದರಿಂದ ಕುಡಿತದ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಕುಟುಂಬ ನಿರ್ವಹಣೆ, ಮನೆಗೆಲಸ, ವೃತ್ತಿಪರ ಜೀವನ ನಿರ್ವಹಣೆ ನಿಭಾಯಿಸುವುದರಿಂದ ಪುರುಷರಿಗಿಂತ ಮೂರುಪಟ್ಟು ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಮಹಿಳೆಯರಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿರುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಭೋಪಾಲ್: ಮದ್ಯಪಾನ (Liquor) ಬೇಕಾದರೂ ಮಾಡಿ, ಗುಟ್ಕಾ (Gutka) ಬೇಕಾದರೂ ತಿನ್ನಿ, ಅಯೋಡೆಕ್ಸ್‌ನಾದ್ರೂ ತಿನ್ನಿ ಆದರೆ, ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ನೀರಿನ ಸಂರಕ್ಷಣೆ ಕುರಿತಂತೆ ಸಲಹೆ ನೀಡುವ ಭರದಲ್ಲಿ ಬಿಜೆಪಿ (Bharatiya Janata Party) ಸಂಸದ ಜನಾರ್ದನ್ ಮಿಶ್ರಾ (Janardan Mishra) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಭಾನುವಾರ ಜಿಲ್ಲೆಯ ರೇವಾದ (Rewa) ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ (Krishnaraj Kapoor Auditorium) ಜಲ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಮೀನುಗಳು ನೀರಿನಿಂದ ಬತ್ತಿ ಹೋಗುತ್ತಿದ್ದು, ಅವುಗಳನ್ನು ಉಳಿಸಬೇಕು. ನೀವು ಗುಟ್ಕಾನಾದ್ರೂ ತಿನ್ನಿ, ಮದ್ಯನಾದ್ರೂ ಸೇವಿಸಿ, ವಾಸನೆ ಬರುವ ಅಯೋಡೆಕ್ಸ್ ಆದ್ರೂ ತಿನ್ನಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ

    ಇದೇ ವೇಳೆ ಯಾವುದಾದರೂ ಸರ್ಕಾರ ನೀರಿನ ತೆರಿಗೆಯನ್ನು ಮನ್ನಾ ಮಾಡಲು ಘೋಷಿಸಿದರೆ ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ ಮತ್ತು ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳಿಂದಲೂ ರಿಲೀಫ್ ಪಡೆದುಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಲಕಿಯರ ಶೌಚಾಲಯವನ್ನು ಬರಿಗೈಯಲ್ಲೇ ಸ್ವಚ್ಛಗೊಳಿಸಿದ ಬಿಜೆಪಿ MP

    ಜನಾರ್ದನ್ ಮಿಶ್ರಾ ಅವರು ಸುದ್ದಿಯಾಗುತ್ತಿರುವುದು ಇದೇ ಮೊದಲೆನಲ್ಲ, ಈ ಹಿಂದೆ ಬಾಲಕಿಯರ ಶಾಲೆಯ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದ್ದರು. ಅಲ್ಲದೇ , ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದು ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯವರ ಸಂದೇಶವಾಗಿದೆ. ಇಂತಹ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ಇದೇ ಮೊದಲಲ್ಲ ಎಂದಿದ್ದರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಮಕ್ಕಳೊಂದಿಗೆ ಚೆಕ್‍ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ

    ಇಬ್ಬರು ಮಕ್ಕಳೊಂದಿಗೆ ಚೆಕ್‍ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ

    ಚಿತ್ರದುರ್ಗ: ಮದ್ಯಪಾನ (Alcohol) ಕ್ಕೆ ದಾಸನಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಗಂಡನ ಟಾರ್ಚರ್ ತಾಳಲಾರದೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂ (Check Dam) ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ(28), ಮಗಳು ಮಾನಸ(6), ಮಗ ಮದನ್(4) ಮೃತ ದುರ್ದೈವಿಗಳು. ಕಳೆದ 8ವರ್ಷದ ಹಿಂದೆ ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾಳನ್ನು ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಮದುವೆಯಾಗಿದ್ದು, ಪತ್ನಿ ಮೇಲೆ ಅನುಮಾನ ಪಡುತ್ತಿದ್ದನು. ಇದನ್ನೂ ಓದಿ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು – ಕಣ್ಣುಗಳನ್ನು ದಾನ ಮಾಡಿದ ಪೋಷಕರು

    ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಟಾರ್ಚರ್ (Torcher) ನೀಡುತ್ತಾ ಹಲ್ಲೆ ನಡೆಸುತ್ತಿದ್ದನಂತೆ. ಈ ಕಿರುಕುಳದಿಂದ ಮನನೊಂದ ಅರ್ಪಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅರ್ಪಿತಾ, ಮೊಬೈಲ್ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೆಲ್ಫಿ ವೀಡಿಯೋ ವೇಳೆ ಅಪ್ಪ ಎಂದು ಕೂಗಿರುವ ಪುಟ್ಟ ಬಾಲಕ ಮದನ್‍ನ ಮನಕಲಕುವ ಸೆಲ್ಫಿ ವೀಡಿಯೋ ವೈರಲ್ ಆಗಿದೆ.

    ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಎಣ್ಣೆ ಪಾರ್ಟಿ

    ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಎಣ್ಣೆ ಪಾರ್ಟಿ

    ಹೈದರಾಬಾದ್: ತೆಲಂಗಾಣದ ( Telangana) ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಹಿಳಾ ಸಿಬ್ಬಂದಿ ಮದ್ಯದ ಪಾರ್ಟಿ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತೆಲಂಗಾಣದ ಹನಮಕೊಂಡ (Hanamkonda) ಜಿಲ್ಲೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಹನಮಕೊಂಡದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲೇ ಕುಳಿತುಕೊಂಡು ಮದ್ಯ ಸೇವಿಸುತ್ತಿರುವ ದೃಶ್ಯವನ್ನು ರೋಗಿಯ ಸಂಬಂಧಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ALCOHOL

    ಈಗಾಗಲೇ ಈ ಮಹಿಳಾ ಸಿಬ್ಬಂದಿ ವಿರುದ್ಧ ಹಲವಾರು ದೂರುಗಳಿದೆ. ಈ ನಡುವೆ 12 ಗಂಟೆಯಾಗಿದೆ ಎಂಬ ಪ್ರಜ್ಞೆ ಕೂಡ ಇಲ್ಲದೇ ಆಸ್ಪತ್ರೆ ಆವರಣದಲ್ಲಿಯೇ ಬರ್ತ್‍ಡೇ ಮಾಡಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದಾರೆ. ಮದ್ಯ ಸೇವಿಸಿ ಕರ್ತವ್ಯ ಕೂಡ ನಿರ್ವಹಿಸಲು ಆಕೆಗೆ ಸಾಧ್ಯವಾಗಲಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಟ್ಕಾದಂಧೆ, ಅಕ್ರಮ ಪಬ್‌ಗಳಿಗೆ ಪೊಲೀಸ್ ಇಲಾಖೆಯಿಂದಲೇ ಸಹಕಾರ – HDK ಕಿಡಿ

    ವೀಡಿಯೋದಲ್ಲಿ ಒಬ್ಬ ನರ್ಸ್, ಮತ್ತೋರ್ವ ಆರೋಗ್ಯ ಕಾರ್ಯಕರ್ತೆ, ಒಬ್ಬ ಸಿಬ್ಬಂದಿ ಸೇರಿದಂತೆ ಹವರು ಇರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: 8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್‌

    Live Tv
    [brid partner=56869869 player=32851 video=960834 autoplay=true]

  • ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

    ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

    ರಾಯಚೂರು: ಕೌಟುಂಬಿಕ ಕಲಹದಿಂದಾಗಿ ಪತಿ (Husband) ಯೇ ಪತ್ನಿ (wife)ಯನ್ನು ಕೊಚ್ಚಿ ಕೊಲೆಗೈದಿರುವ ಘಟನೆ ರಾಯಚೂರು ತಾಲೂಕಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಶಿಕ್ಷಕಿಯಾಗಿದ್ದ 27 ವರ್ಷದ ನಾಗರತ್ನ ಕೊಲೆಯಾದ ಮಹಿಳೆ.

    ಆರೋಪಿ ಪತಿ ಶಶಿಕುಮಾರ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಸೆರೆಯಾಗಿದ್ದಾನೆ. ಸದ್ಯ ತಾಯಿಯನ್ನ ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕಾಟಕ್ಕೆ ನಾಗರತ್ನ ಬೇಸತ್ತಿದ್ದಳು. ಗಂಡನ ಕಾಟದಿಂದ ಬೇಸತ್ತು ಕಳೆದ ಎರಡು ದಿನಗಳಿಂದ ಅತ್ತೆಯ ಜೊತೆ ಬೇರೆ ಮನೆಯಲ್ಲಿದ್ದಳು.

    ಗಂಡನ ಕಿರುಕುಳದ ಕುರಿತು ಪೊಲೀಸರಿಗೆ ಮೌಖಿಕ ದೂರು ಕೂಡ ನೀಡಿದ್ದಳು, ಗಂಡನನ್ನ ಠಾಣೆಗೆ ಕರೆಯಿಸಿ ಬುದ್ಧಿ ಹೇಳುವುದಾಗಿ ಪೊಲೀಸರು ಧೈರ್ಯ ನೀಡಿದ್ದರು. ಆದರೆ ಪಾಪಿ ಪತಿ ಶಶಿಕುಮಾರ್ ಮದ್ಯದ ಅಮಲಿನಲ್ಲಿ ಮತ್ತೆ ಜಗಳ ತೆಗೆದು ಕೊಡಲಿಯಿಂದ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

    POLICE JEEP

    ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯ ವಿಚಾರಣೆ ಮುಂದುವರಿದಿದೆ. ಇದನ್ನೂ ಓದಿ: ಜೈಲಿನಲ್ಲಿ ಬೆಂಕಿ ಅವಘಡ- ಮಹ್ಸಾ ಅಮಿನಿ ಬೆಂಬಲಿಗರು ಸಾವು, 61 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಮಹಿಳೆಯರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ

    ಕುಡಿದ ಮತ್ತಿನಲ್ಲಿ ಮಹಿಳೆಯರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ

    ಲಕ್ನೋ: ಕುಡಿದ ಮತ್ತಿನಲ್ಲಿ ಮೂವರು ಮಹಿಳೆಯರು ಸೇರಿಕೊಂಡು ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನೋಯ್ಡಾದ ಸೆಕ್ಟರ್-121ರಲ್ಲಿ (Noida’s Sector-121) ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಮಹಿಳೆಯೊಬ್ಬರು ಸೆಕ್ಯೂರಿಟಿ ಗಾರ್ಡ್ ಕೊರಳಪಟ್ಟಿ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಈ ಸಂಬಂಧ ಪೊಲೀಸರು ಇದೀಗ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ಸೆಕ್ಯೂರಿಟಿ ಗಾರ್ಡ್ ಅನ್ನು ಪಂಕಜ್ ಎಂದು ಗುರುತಿಸಲಾಗಿದ್ದು, ನೋಯ್ಡಾ ಸೊಸೈಟಿಗೆ ಮಹಿಳೆಯರು ಬಂದು ಕರ್ತವ್ಯನಿರತರಾಗಿದ್ದ ಪಂಕಜ್ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಮಹಿಳೆಯರು ಬಂದ ವಾಹನದಲ್ಲಿ ಸೊಸೈಟಿ ಸ್ಟಿಕ್ಕರ್ ಇಲ್ಲದೇ ಇರುವುದಕ್ಕೆ ಅವರನ್ನು ಸೆಕ್ಯೂರಿಟಿ ಗಾರ್ಡ್ ಅಡ್ಡ ಹಾಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಆತನ ವಿರುದ್ಧ ನಿಂದಿಸಲು ಆರಂಭಿಸಿದರು. ಈ ವೇಳೆ ಜಗಳ ಬಿಡಿಸಲು ಇತರ ಸೆಕ್ಯೂರಿಟ ಗಾರ್ಡ್‍ಗಳು ಮಧ್ಯೆ ಪ್ರವೇಶಿಸಿದಾಗ, ಕುಡಿದ ಮತ್ತಿನಲ್ಲಿದ್ದ ಮಹಿಳೆಯರು ಅವರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು.

    ಈ ಸಂಬಂಧ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅವರಲ್ಲಿ ಇಬ್ಬರಿಗೆ ಚಲನ್ ಜಾರಿ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಸಿಆರ್‌ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಮತ್ತು ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಿಚ್ಛೆಯಿಂದ ಗಾಯವನ್ನುಂಟು ಮಾಡಿದ್ದಕ್ಕೆ ದಂಡನೆ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ಅಮರಾವತಿ: 5.47 ಕೋಟಿ ಮೌಲ್ಯದ ಅಕ್ರಮ ಮದ್ಯವನ್ನು ಆಂಧ್ರಪ್ರದೇಶ(AndhraPradesh) ದ ಪೊಲೀಸರು ನಾಶಪಡಿಸಿದ್ದಾರೆ.

    2.43 ಲಕ್ಷ ಮದ್ಯ(Liquor) ದ ಬಾಟ್ಲಿಗಳ ಮೇಲೆ ಪೊಲೀಸರು ರೋಡ್ ರೋಲರ್ (Road Roler) ಹರಿಸಿದ್ದಾರೆ. ಈ ಘಟನೆ ಎನ್‍ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಆಲ್ಕೋಹಾಲ್ ತುಂಬಿದ ಬಾಟ್ಲಿಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತೆಲಂಗಾಣ (Telangana) ದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯದ ಬಾಟ್ಲಿಗಳನ್ನು ಸಾಗಿಸಲಾಗುತ್ತಿತ್ತು. ಈ ವಿಚಾರ ನಮ್ಮ ಗಮನಕ್ಕೆ ಬಂತು. ಹೀಗಾಗಿ ನಾವು ದಾಳಿ ಮಾಡಿ 2 ಸಾವಿರ ಲೀಟರ್ ಅಕ್ರಮ ಮದ್ಯವನ್ನು ನಾಶಪಡಿಸಿದ್ದೇವೆ. ಅಲ್ಲದೆ ಈ ಸಂಬಂಧ 226 ಕೇಸ್ ದಾಖಲಿಸಿದ್ದೇವೆ ಎಂದು ವಿಜಯವಾಡದ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ವಿವರಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ನಗರದ ಹೊರವಲಯದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ (Check Post) ಗಳ ಮೇಲೆ ಏಕಾಏಕಿ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇತರ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ಅಕ್ರಮ ಮದ್ಯ ಸಾಗಣೆಯಾಗಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಈ ವರ್ಷದ ಆರಂಭದಲ್ಲಿ ಕರ್ನೂಲ್‍ನಿಂದ 2 ಕೋಟಿ ಮೌಲ್ಯದ 66 ಸಾವಿರ ಮದ್ಯದ ಬಾಟ್ಲಿಗಳನ್ನು ಆಂಧ್ರ ಪ್ರದೇಶದ ವಿಶೇಷ ಜಾರಿ ಬ್ಯೂರೋ (SEB) ಸೀಜ್ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ತುಮಕೂರು: ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡುತ್ತಿದ್ದ ಲೇಡಿ ಟೀಚರ್(Teacher) ಒಬ್ಬಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಲಕ್ಷಣ ಘಟನೆ ತುಮಕೂರು(Tumkuru) ತಾಲೂಕಿನ ಚಿಕ್ಕಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿ ಗಂಗಲಕ್ಷ್ಮಮ್ಮ ಸೇವೆ ಸಲ್ಲಿಸುತ್ತಿದ್ದಾಳೆ. ಆದರೆ ಕಳೆದ 5 ವರ್ಷದಿಂದ ಮದ್ಯ ವ್ಯಸನಕ್ಕೆ ದಾಸಳಾಗಿದ್ದಳು. ಇದನ್ನೂ ಓದಿ: ಅರ್ಧಂಬರ್ಧ ಮೆಟ್ರೋ ಕಾಮಗಾರಿಯಿಂದಲೇ ಮುಳುಗಿತಾ ಬೆಂಗಳೂರು..?

    ಮದ್ಯಪಾನ(Alcohol) ಮಾಡಿ ಪಾಠ ಮಾಡಿ, ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು ಹಾಗೂ ಸಹೋದ್ಯೋಗಿಗಳ ಜೊತೆ ಜಗಳ ಮಾಡುತ್ತಿದ್ದಳು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿತ್ತು. ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮಗೆ ತಪ್ಪು ತಿದ್ದಿಕೊಳ್ಳುವಂತೆ ತಾಕೀತು ಮಾಡಿದ್ದರು. ಆದರೆ ಗಂಗಲಕ್ಷ್ಮಮ್ಮ ತನ್ನ ಚಾಳಿ ಬದಲಿಸಲಿಲ್ಲ. ಇದರಿಂದ ಪೋಷಕರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

    ಈ ವೇಳೆ ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕಿಯ ಟೇಬಲ್‍ನ ಡ್ರಾಯರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಸ್ವತಃ ಬಿಇಒ ಡ್ರಾಯರ್ ಓಪನ್ ಮಾಡಲು ಹೋದಾಗ ಶಿಕ್ಷಕಿ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೇಬಲನ್ನು ಹೊರಕ್ಕೆ ತಂದು ಡ್ರಾಯರ್ ಬೀಗ ಮುರಿದಿದ್ದಾರೆ. ಆಗ ಡ್ರಾಯರ್‍ನಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್‍ಗಳು ಪತ್ತೆಯಾಗಿದೆ. ಇದನ್ನೂ ಓದಿ: ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    ಮದ್ಯದ ಬಾಟಲ್ ಪತ್ತೆಯಾಗುತಿದ್ದಂತೆ ಕೊಠಡಿ ಬೀಗಹಾಕೊಂಡು ಗಂಗ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾಳೆ. ಬಳಿಕ ಪೊಲೀಸರು ಬಂದು ಮದ್ಯದ ಬಾಟಲನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಒಟ್ಟಾರೆ ಚಿಕ್ಕಸಾರಂಗಿ ಶಾಲೆಯ ಮುಂದೆ ನಡೆದ ಹೈಡ್ರಾಮಾಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]