Tag: alcohol

  • ಗಂಡ-ಹೆಂಡ್ತಿ ಒಟ್ಟಿಗೆ ಕೂತು ಎಣ್ಣೆ ಹೊಡೆದ್ರು- ಜಗಳವಾಡಿ 12ನೇ ಪತ್ನಿಯನ್ನೇ ಮುಗಿಸಿದ!

    ಗಂಡ-ಹೆಂಡ್ತಿ ಒಟ್ಟಿಗೆ ಕೂತು ಎಣ್ಣೆ ಹೊಡೆದ್ರು- ಜಗಳವಾಡಿ 12ನೇ ಪತ್ನಿಯನ್ನೇ ಮುಗಿಸಿದ!

    ರಾಂಚಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ 12ನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಚ್ಚರಿಯ ಘಟನೆಯೊಂದು ಜಾರ್ಖಂಡ್‍ (Jharkhand) ನಲ್ಲಿ ನಡೆದಿದೆ.

    ಮೃತಳನ್ನು ಸಾವಿತ್ರಿ ದೇವಿ (40) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ರಾಮಚಂದ್ರ ತುರಿ ಕೊಲೆ ಮಾಡಿದ್ದಾನೆ. ಪತಿ ಹಾಗೂ ಪತ್ನಿ ಇಬ್ಬರೂ ಕೋಣೆಯೊಳಗೆ ಕುಳಿತುಕೊಂಡು ಮದ್ಯಪಾನ (Alcohol) ಮಾಡಿದ್ದಾರೆ. ಹೀಗೆ ಮಾತನಾಡುತ್ತಾ ಇಬ್ಬರ ಮಧ್ಯೆ ವಿಚಾರವೊಂದಕ್ಕೆ ವಾಗ್ವಾದ ನಡೆದಿದೆ. ಪತ್ನಿಯ ಮಾತಿನಿಂದ ರೊಚ್ಚಿಗೆದ್ದ ಪತಿ, ಅಲ್ಲೇ ಇದ್ದ ಕೋಲು ತೆಗೆದುಕೊಂಡು ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಸಾವಿತ್ರಿ ದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಇತ್ತ ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿ ಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತಳು ಆರೋಪಿಯ 12ನೇ ಪತ್ನಿಯಾಗಿದ್ದಾಳೆ. ಇದಕ್ಕೂ ಮೊದಲು ಮದುವೆಯಾಗಿರುವ 11 ಮಂದಿ ಪತ್ನಿಯರು ಕೂಡ ಈತ ನೀಡುತ್ತಿದ್ದ ಮಾನಸಿಕ ಹಿಂಸೆಯಿಂದ ಬಿಟ್ಟು ಹೋಗಿದ್ದಾರೆ. ಆರೋಪಿಗೆ ಮೂವರು ಪುತ್ರರು ಹಾಗೂ ಓರ್ವ ಮಗಳಿದ್ದು, ಎಲ್ಲರೂ ಸಾವಿತ್ರಿ ದೇವಿ ಜೊತೆ ವಾಸವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

    ಸಾವಿತ್ರಿ ದೇವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯ ತನಿಖೆ ನಡೆಯುತ್ತಿದೆ ಎಮದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಜೆ ಸೌಂಡ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆ ಗುಂಡು ಹಾರಿಸಿದ ನೆರೆಮನೆಯಾತ

  • ಅಬಕಾರಿ ಇಲಾಖೆ ಅಧಿಕಾರಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ

    ಅಬಕಾರಿ ಇಲಾಖೆ ಅಧಿಕಾರಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ

    ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆ (Vidhanasabha Election) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಕಲಬುರಗಿ ಜಿಲ್ಲೆಯ ವಿವಿಧೆಡೆ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಬಳಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 84 ಸಾವಿನ ರೂಪಾಯಿ ಮೌಲ್ಯದ 198 ಲೀಟರ್ ಮದ್ಯ (Alcohol) ವನ್ನು ವಶಕ್ಕೆ ತೆಗೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಶೇಖರ್ ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೆ ಕಾರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರ ಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಲೀಟರ್ ಕಲಬೆರಕೆ ಸೇಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅದರ ಜೊತೆಗೆ 15 ಸಾವಿರ ರೂಪಾಯಿ ಮೌಲ್ಯದ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಜಾರಕಿಹೊಳಿ – ಸವದಿ ಬಣ ರಾಜಕೀಯಕ್ಕೆ ಬ್ರೇಕ್‌; ಹೈಕಮಾಂಡ್‌ ಸಂದೇಶ ರವಾನಿಸಿದ ಜೋಶಿ

    ಅದರಂತೆ ಸೇಡಂ ತಾಲೂಕಿನ ಬಟಗೇರಾ ಬಿ ಬಳಿ 51 ಲೀಟರ್ ಕ್ಕಿಂತ ಅಧಿಕ ಅಕ್ರಮವಾದ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಮದ್ಯ ಸಾಗಿಸುತ್ತಿದ್ದ ಆರೋಪಿ ಪರಾರಿಯಾಗಿದ್ದಾನೆ. ಒಂದು ಬೈಕ್ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು, ಆರೋಪಿಯ ಬಂಧನಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಜಾಲ ಬೀಸಿದ್ದಾರೆ.

  • ಮದ್ಯಪಾನ ಮಾಡಿ ಒಂದೇ ವಾರದಲ್ಲಿ ಐವರ ಸಾವು – ಗ್ರಾಮಸ್ಥರಲ್ಲಿ ಮೂಡಿದ ಆತಂಕ

    ಮದ್ಯಪಾನ ಮಾಡಿ ಒಂದೇ ವಾರದಲ್ಲಿ ಐವರ ಸಾವು – ಗ್ರಾಮಸ್ಥರಲ್ಲಿ ಮೂಡಿದ ಆತಂಕ

    ಮಡಿಕೇರಿ: ಆ ಊರಿನಲ್ಲಿ ಬಹುತೇಕ ಜನರು ಕೂಲಿ ಕಾರ್ಮಿಕರೇ. ದಿನ ನಿತ್ಯ ಕೆಲಸ ಮಾಡಿ ದುಡಿದ ಹಣದಲ್ಲಿ ಮದ್ಯಪಾನ (Drinking Alcohol) ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಕಳೆದ 1 ವಾರದಲ್ಲಿ ಮದ್ಯಪಾನ ಮಾಡಿ ಐವರು ಮೃತಪಟ್ಟಿದ್ದು ಊರಿನ ಜನರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.

    ಈ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಮುಂಭಾಗದ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಿಮೆ ಬೆಲೆಯ ಮದ್ಯವನ್ನು ತಂದು ಇಲ್ಲಿರುವ ಕೂಲಿ ಕಾರ್ಮಿಕರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆಯಿಂದ ಕಡಿಮೆ ಬೆಲೆಗೆ ಮದ್ಯವನ್ನು ತಂದು ಈ ಊರಿನ ಕೆಲವು ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾರ್‌ಗಳಲ್ಲಿ ಮದ್ಯ ಮಾರಾಟ ಮಾಡಲು ಸಮಯ ನಿಗದಿ ಇರುತ್ತದೆ. ಆದರೆ ಈ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಇದೀಗ ಒಂದೇ ವಾರದಲ್ಲಿ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಲ್ಲಿನ ದೇವಾಲಯ ಮುಂಭಾಗದ ಹಲವು ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಹಾರಂಗಿ ಪೋಲಿಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಮದ್ಯ ಮಾರಾಟ ಮಾಡುವ ಮನೆಗಳ ಮೇಲೆ ದಾಳಿ ನಡೆಸಿ ಮದ್ಯ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅನಧಿಕೃತವಾಗಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಗ್ರಾಮದಲ್ಲಿ ಈಗಲೂ ಅನೇಕ ಮನೆಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲು ಕೆಲ ಜನರು ಮುಂದಾಗಿದ್ದಾರೆ. ಕೂಲಿ ಕಾರ್ಮಿಕರು ತಮ್ಮ ಮನೆಗಳ ಸಮೀಪವೇ ಮದ್ಯ ಸಿಗುವುದರಿಂದ ಯಾವ ಬ್ರ್ಯಾಂಡ್ ಎಂಬುವುದನ್ನು ನೋಡದೇ ಕಡಿಮೆ ಬೆಲೆಯ ಮದ್ಯ ಸೇವಿಸಿ ಸಾವನ್ನಪ್ಪುತ್ತಿದ್ದಾರೆ. ಇದನ್ನೂ ಓದಿ: ತಾಯಿಗೆ ದ್ರೋಹ ಮಾಡಿದ ಬಾಬುರಾವ್ ಚಿಂಚನಸೂರು – ಗಿರೀಶ್ ಮಟ್ಟಣ್ಣನವರ್

    ಇದೀಗ ಮದ್ಯ ಸೇವಿಸಿ ಐವರು ಸಾವನ್ನಪ್ಪಿರುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಒಂದೇ ವಾರದಲ್ಲಿ ಕಡಿಮೆ ಬೆಲೆಯ ಮದ್ಯ ಸೇವಿಸಿ ಕೂಲಿ ಕಾರ್ಮಿಕರು ಬಲಿಯಾಗಿರುವುದಕ್ಕೆ ಇನ್ನಾದರೂ ಇಲಾಖೆಯವರು ಗ್ರಾಮಕ್ಕೆ ತೆರಳಿ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: H3N2 ಇನ್‌ಫ್ಲುಯೆಂಜಾ ಭೀತಿ ಮಧ್ಯೆ ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

  • ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

    ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

    ಪಾಟ್ನಾ: ಬಿಹಾರದ (Bihar) ವರನೊಬ್ಬ (Groom) ಕಂಠಪೂರ್ತಿ ಕುಡಿದು ಮರುದಿನ ಮದುವೆಗೆ (Wedding) ಹಾಜರಾಗಲು ಮರೆತಿರುವ ವಿಲಕ್ಷಣ ಘಟನೆ ನಡೆದಿದೆ.

    ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ಖುಷಿಯಲ್ಲಿ ವರ ಮದ್ಯ ಸೇವಿಸಿದ್ದ. ಆದರೆ ಮರುದಿನ ಮದ್ಯದ ಅಮಲಿನಲ್ಲಿ ತನ್ನ ಮದುವೆಯಿದೆ ಎಂಬುದನ್ನ ಮರೆತು ಮದುವೆಗೆ ಗೈರಾಗಿದ್ದಾನೆ.

    ಮದುವೆ ಸ್ಥಳದಲ್ಲಿ ವಧು ಮತ್ತು ಆಕೆಯ ಕುಟುಂಬದವರು ವರನಿಗಾಗಿ ಕಾಯುತ್ತಿದ್ದರೂ ಆತ ಬಂದಿರಲಿಲ್ಲ. ಅದಾದ ಒಂದು ದಿನದ ನಂತರ ವರನಿಗೆ ಪ್ರಜ್ಞೆ ಬಂದು ವಧುವಿನ ಮನೆಗೆ ಬಂದಿದ್ದಾನೆ. ಈ ವೇಳೆ ವಧು ನನಗೆ ನೀನು ಬೇಡ ಎಂದು ಮದುವೆಯಾಗಲು ನಿರಾಕರಿಸಿದ್ದಾಳೆ. ಇದನ್ನೂ ಓದಿ: ಅಜ್ಜನಿಂದ ಮೊಮ್ಮಗಳ ಮೇಲೆ ರೇಪ್ – ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟ

    ಅಷ್ಟೇ ಅಲ್ಲದೇ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವಧುವಿನ ಮನೆಯವರು ಕೂಡ ವರನ ಕುಟುಂಬಕ್ಕೆ ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

    ಈ ವೇಳೆ ವಧುವಿನ ಸಂಬಂಧಿಕರು ವರನ ಕಡೆಯವರನ್ನು ಒತ್ತೆಯಾಳಾಗಿ ಇರಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಇತ್ಯರ್ಥಗೊಳಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್, ಬರೋಬ್ಬರಿ 3 ಕೋಟಿ ಹಣವನ್ನೇ ಗಿಫ್ಟ್ ಪಡೆದ ವಧು!

  • ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

    ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

    ಬೆಂಗಳೂರು: ವಿಧಾನಸೌಧ (Vidhanasoudha) ದಲ್ಲಿ ನಡೆದ ಬ್ಲಾಕ್ ಅಂಡ್ ವೈಟ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಆಗಿದೆ.

    ಹೌದು. ಖಾಕಿ ಕಣ್ಗಾವಲಿನ ನಡುವೆಯೂ ಪೊಲೀಸ್ ಕಾನ್ಸ್‌ಟೇಬಲ್ ಮದ್ಯದ ಬಾಟ್ಲಿಯೊಂದಿಗೆ ವಿಧಾನಸೌಧದ ಒಳಗೆ ಹೋಗಿದ್ದಾನೆ. ಶಕ್ತಿಸೌಧದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕೊಡಲು ಬ್ಲಾಕ್ ಅಂಡ್ ವೈಟ್ ದುಬಾರಿ ಬೆಲೆಯ ಎಣ್ಣೆ ತೆಗೆದುಕೊಂಡು ಹೋಳಿ ಹಬ್ಬದ ಪ್ರಯುಕ್ತ ಗಿಫ್ಟ್ ಮಾಡಲು ಹೋಗಿದ್ದಾನೆ. ಪೊಲೀಸ್ ಅಧಿಕಾರಿಗೆ ಅದೇನ್ ಅನ್ನಿಸಿತೋ ತನ್ನ ಶಿಷ್ಯನ ಬಳಿ ಎಣ್ಣೆ ಬಾಟ್ಲಿ ತೆಗೆದುಕೊಳ್ಳದೇ ವಾಪಸ್ ಕಳಿಸಿಕೊಟ್ಟಿದ್ದಾರೆ.

    ಬಾಸ್ ಎಣ್ಣೆ ಬಾಟ್ಲಿ ನಿರಾಕರಿಸಿದ್ದರಿಂದ ಬಾಟ್ಲಿಯೊಂದಿಗೆ ವಿಧಾನಸೌಧ ವೆಸ್ಟ್ ಗೇಟ್‍ನಿಂದ ಹೊರಗಡೆ ಬರೋದಕ್ಕೆ ಕಾನ್ಸ್‌ಟೇಬಲ್ ಮುಂದಾಗಿದ್ರು. ಈ ವೇಳೆ ದುರಾದೃಷ್ಟವಶಾತ್ ಕೈ ಜಾರಿ ಎಣ್ಣೆ ಬಾಟ್ಲಿ ಕೆಳಗಡೆ ಬಿದ್ದು ಒಡೆದು ಹೋಗಿದೆ. ಮದ್ಯದ ಬಾಟ್ಲಿ ಪೀಸ್ ಪೀಸ್ ಆಗುತ್ತಿದ್ದಂತೆ ಕಾನ್ಸ್‌ಟೇಬಲ್ ಆತುರದಲ್ಲಿಯೇ ಬಾಟ್ಲಿ ಪೀಸ್‍ಗಳನ್ನ ಬಾಚಿಕೊಂಡು ಪರಾರಿಯಾಗಿದ್ದಾನೆ. ಭದ್ರತೆಯಲ್ಲಿದ್ದ ಪೊಲೀಸರು ಕೆಲ ಗಂಟೆಗಳ ಕಾಲ ದಂಗಾಗಿ ಹೋಗಿದ್ದಾರೆ.

    ಬಾಟ್ಲಿ ತಂದ ವ್ಯಕ್ತಿ ಯಾರು, ಯಾಕಾಗಿ ತಂದ್ರು ಅನ್ನೋದು ಭದ್ರತೆಯಲ್ಲಿದ್ದ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಹೀಗಾಗಿ ಶಕ್ತಿಸೌಧದ ವೆಸ್ಟ್ ಗೇಟ್ ಹಾಗೂ ನಾರ್ಥ್ ಗೇಟ್ ಸಿಸಿಟಿವಿ ಸರ್ಚ್ ಮಾಡಿದ್ದಾರೆ. ಆಗ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದ್ದು, ಹೈಕೋರ್ಟ್ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಅನ್ನೋದು ಖಾತ್ರಿಯಾಗಿದೆ. ಇದನ್ನೂ ಓದಿ: ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ‌ ಇವಿ ಬಸ್‌ಗಳು

    ವಿಧಾನಸೌಧ ಪೊಲೀಸರಿಗೆ ಬಾಟ್ಲಿ ವೀರನ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕರೆದು ವಿಚಾರಣೆ ಮಾಡಿದಾಗ ಬ್ಲಾಕ್ ಅಂಡ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಮಾಡಿದ್ದಾನೆ. ಸದ್ಯ ಕಾನ್ಸ್‌ಟೇಬಲ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದು ಇಲಾಖಾ ತನಿಖೆಗೆ ಆದೇಶ ಮಾಡಲಾಗಿದೆ.

  • ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ- 3,905 ಲೀಟರ್ ಮದ್ಯ ವಶ

    ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ- 3,905 ಲೀಟರ್ ಮದ್ಯ ವಶ

    ಬೆಳಗಾವಿ: ಅಬಕಾರಿ ಇಲಾಖೆಯ (Excise Department) ಮಿಂಚಿನ ಕಾರ್ಯಾಚರಣೆ ಮಾಡಿದ್ದು, ರಾಜ್ಯ ವಿಧಾನಸಭೆ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಸಂಗ್ರಹ ಯತ್ನಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಗೋವಾ (Goa) ದಿಂದ ಕರ್ನಾಟಕಕ್ಕೆ ಸಾಗಿಸಲಾಗುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ಮೊದೆಕೊಪ್ಪ ಕ್ರಾಸ್ ಬಳಿ ಅಬಕಾರಿ ಇಲಾಖೆಯಿಂದ ದಾಳಿ ನಡೆಸಲಾಗಿದ್ದು 67,73 ಲಕ್ಷ ಮೌಲ್ಯದ 3905 ಲೀಟರ್ ಮದ್ಯ (Alcohol) ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೂರ್ವಭಾವಿ ತಯಾರಿ ಪರಿವೀಕ್ಷಣೆ – ಚುನಾವಣಾ ಆಯೋಗದಿಂದ 3 ದಿನ ರಾಜ್ಯ ಭೇಟಿ

    ಗೋವಾದಿಂದ ಬೆಳಗಾವಿಗೆ ಅಕ್ರಮ ಮದ್ಯ ಸಂಗ್ರಹಿಸಿ ಚುನಾವಣೆಯಲ್ಲಿ ಹಂಚಲು ಹುನ್ನಾರ ಮಾಡಿರುವ ಆರೋಪ ಕೇಳಿಬಂದಿದ್ದು ಲಾರಿ, ಅಕ್ರಮ ಮದ್ಯ ಜಪ್ತಿ ಜೊತೆಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ನಿರೀಕ್ಷಕ ದಾವಲಸಾಬ್ ಶಿಂದೋಗಿ, ಉಪನಿರೀಕ್ಷಕ ಜಯರಾಮ್ ಹೆಗಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

  • ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ

    ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ

    ಮುಂಬೈ: ತನ್ನ ಗೆಳತಿಯನ್ನ ಖುಷಿಪಡಿಸಲು ಮುಂದಾದ 41 ವರ್ಷದ ಗೆಳೆಯನೊಬ್ಬ ಮದ್ಯ (Alcohol) ಸೇವಿಸಿದ ನಂತರ 2 ವಯಾಗ್ರ ಮಾತ್ರೆಗಳನ್ನು (Viagra Pills) ಸೇವಿಸಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpur) ನಡೆದಿದೆ.

    ತನ್ನ ಸ್ನೇಹಿತೆಯೊಂದಿಗೆ ಹೋಟೆಲ್‌ನಲ್ಲಿ (Hotel) ರೂಮ್ ಮಾಡಿಕೊಂಡಿದ್ದ ವ್ಯಕ್ತಿ, ಮದ್ಯ ಸೇವಿಸಿದ ಬಳಿಕ, ಸಿಲ್ಡೆನಾಫಿಲ್‌ನ 50 ಎಂಜಿ ಮಾತ್ರೆಗಳನ್ನ ಸೇವಿಸಿದ್ದಾನೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದಂತೆ ವಾಂತಿ ಮಾಡಿಕೊಂಡಿದ್ದಾನೆ. ತನ್ನ ಸ್ನೇಹಿತೆ, ವೈದ್ಯರ ಸಹಾಯ ಪಡೆಯುವಂತೆ ಹೇಳಿದರೂ ಆತ ನಿರಾಕರಿಸಿದ್ದಾನೆ. ನಂತರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಬಳಿಕ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕಿನಲ್ಲಿ ತುಂಬಿಸಿಟ್ಟ!

    ವ್ಯಕ್ತಿಗೆ ಸೆರೆಬ್ರೊವಾಸ್ಕುಲರ್ ನಿಂದ ರಕ್ತಸ್ರಾವವಾಗಿದೆ, ಇದರಿಂದ ಮೆದುಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವರಾ ಭಾಸ್ಕರ್ ಮತ್ತೊಂದು ಮದುವೆ: ಆಹ್ವಾನ ಪತ್ರಿಕೆ ವಿಶೇಷತೆ ಏನು?

    ಮರಣೋತ್ತರ ಪರೀಕ್ಷೆಯಲ್ಲಿ ಆಲ್ಕೋಹಾಲ್, ಔಷಧಿ ಮಿಶ್ರಣದೊಂದಿಗೆ 300 ಗ್ರಾಮ್‌ನಷ್ಟು ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಆದ್ದರಿಂದ ರಕ್ತದಲ್ಲಿ ಅಧಿಕ ಒತ್ತಡ ಉಂಟಾಗಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

  • ಮದ್ಯ ಮಾರಾಟ, ಖರೀದಿಗೆ ವಯಸ್ಸು ಇಳಿಕೆ ಇಲ್ಲ: ಗೋಪಾಲಯ್ಯ

    ಮದ್ಯ ಮಾರಾಟ, ಖರೀದಿಗೆ ವಯಸ್ಸು ಇಳಿಕೆ ಇಲ್ಲ: ಗೋಪಾಲಯ್ಯ

    ಬೆಂಗಳೂರು: ರಾಜ್ಯದಲ್ಲಿ ಮದ್ಯ (Alcohol) ಮಾರಾಟ ಮತ್ತು ಮದ್ಯ ಖರೀದಿ ವಯೋಮಾನ (Age) 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ಪರಿಷ್ಕರಿಸಿ ಹೊರಡಿಸಿದ್ದ ಅಧಿಸೂಚನೆಗೆ ಆಕ್ಷೇಪಣೆ ಸ್ವೀಕರಿಸಿದ್ದು, ಸದ್ಯ ಇರುವ ಹಳೆ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ (Gopalaiah) ಸ್ಪಷ್ಟಪಡಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಮಾರಾಟ ವಯೋಮಾನದ ಕುರಿತು ಜನವರಿ 9 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮದ್ಯ ಖರೀದಿಸುವವರ ವಯೋಮಿತಿ 21 ರಿಂದ 18 ಕ್ಕೆ ಇಳಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದಕ್ಕೆ ಅನೇಕ ಆಕ್ಷೇಪಣೆ ಬಂತು. ಹೀಗಾಗಿ ಸಮಿತಿ ರಚಿಸಿದ್ದು ಸದ್ಯ ಈಗ ಯಾವ ರೀತಿ ಇದೆಯೋ ಅದರಂತೆಯೇ ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದರು.

    ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅನೇಕ ಕಡೆ ದಿಟ್ಟ ಕ್ರಮ ವಹಿಸಿದೆ. ಮುಂದೆಯೂ ಅದೇ ರೀತಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ಮದ್ಯ ಮಾರಾಟದಿಂದ ಚಿನ್ನದ ಬೆಳೆ ತೆಗೆದ ಸರ್ಕಾರ – 5 ವರ್ಷಗಳಲ್ಲಿ 1 ಲಕ್ಷ ಕೋಟಿ ಆದಾಯ

    ಈ ವರ್ಷ ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ಆರ್ಥಿಕ ಗುರಿಯನ್ನು ಇಲಾಖೆ ದಾಟಲಿದೆ. ಕಳೆದ 5 ವರ್ಷವೂ ಸತತವಾಗಿ ನಮಗೆ ನಿಗದಿಪಡಿಸಿರುವ ಗುರಿಯನ್ನು ದಾಟಿದ್ದೇವೆ. ಈ ಬಾರಿಯೂ ಗುರಿ ತಲುಪುವುದರಲ್ಲಿ ಹಿಂದೆ ಬೀಳಲ್ಲ. ನಮಗೆ ನಿಗದಿಪಡಿಸಿರುವ ಗುರಿ ತಲುಪಲು ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದರು. ಇದನ್ನೂ ಓದಿ: ಅನುದಾನಿತ ಕಾಲೇಜು ಉಪನ್ಯಾಸಕರಿಗೆ NPS ಜಾರಿಗೆ ಬಗ್ಗೆ ನ್ಯಾಯ ಸಮ್ಮತ ಕ್ರಮ: ಬೊಮ್ಮಾಯಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದುಶ್ಚಟಗಳಿಗೆ ದಾಸನಾಗಿದ್ದ ನನ್ನನ್ನು ಸರಿದಾರಿಗೆ ತಂದಿದ್ದು ನನ್ನ ಪತ್ನಿ: ರಜನಿಕಾಂತ್

    ದುಶ್ಚಟಗಳಿಗೆ ದಾಸನಾಗಿದ್ದ ನನ್ನನ್ನು ಸರಿದಾರಿಗೆ ತಂದಿದ್ದು ನನ್ನ ಪತ್ನಿ: ರಜನಿಕಾಂತ್

    ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ರಜನಿಕಾಂತ್ (Rajinikanth) ತಮ್ಮ ಖಾಸಗಿ ಜೀವನದ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ಅತಿಯಾಗಿ ಮದ್ಯ (alcohol), ಮಾಂಸ ಮತ್ತು ಸಿಗರೇಟ್ (cigarettes) ಸೇದುತ್ತಿರುವ ಕುರಿತು ಅವರು ಮಾತನಾಡಿದ್ದು, ಒಂದು ರೀತಿಯಲ್ಲಿ ಅವರು ದುಶ್ಚಟಗಳಿಗೆ ದಾಸರೇ ಆಗಿದ್ದರಂತೆ. ಅಲ್ಲಿಂದ ಆಚೆ ತಂದದ್ದು ತಮ್ಮ ಪತ್ನಿ ಎಂದು ಅವರು ಹೇಳಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಜನಿ, ತಮ್ಮ ಬದುಕಿನಲ್ಲಿ ಪತ್ನಿಯು ಹೇಗೆ ದಾರಿ ದೀವಿಗೆ ಆದಳು ಎನ್ನುವುದನ್ನು ಹಂಚಿಕೊಂಡಿದ್ದಾರೆ.

    ‘ನಾನು ವಿಪರೀತ ಮಾಂಸ ತಿನ್ನುತ್ತಿದೆ. ದಿನಕ್ಕೆ ಎರಡು ಹೊತ್ತಾದರೂ ಮಾಂಸ ಬೇಕಿತ್ತು. ಮದ್ಯ ಸೇವಿಸುತ್ತಿದ್ದೆ. ಸಿಗರೇಟು ಸೇದುತ್ತಿದ್ದೆ. ಯಾವುದೂ ನನ್ನ ಕಂಟ್ರೋಲ್ ನಲ್ಲಿ ಇರಲಿಲ್ಲ. ಮದುವೆ ನಂತರದ ದಿನಗಳಲ್ಲಿ ಅವುಗಳನ್ನು ಕಡಿಮೆ ಮಾಡಿಸಿದ್ದು ಮತ್ತು ಸಂಪೂರ್ಣ ಬಿಡುವಂತೆ ಮಾಡಿದ್ದು ನನ್ನ ಪತ್ನಿ. ಅವರಿಂದಾಗಿಯೇ ನಾನು ಆ ಚಟಗಳಿಂದ ದೂರವಾದೆ. ಸದ್ಯ ನಾನು ಆರೋಗ್ಯವಾಗಿದ್ದೀನಿ ಎಂದರೆ ಅದಕ್ಕೆ ಕಾರಣ ಅವರೆ’ ಎಂದು ಮೆಚ್ಚಿ ಮಾತನಾಡಿದ್ದಾರೆ ರಜನಿ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಪತ್ನಿ ಲತಾ ರಂಗಚಾರ್ಯ (Lata Rajinikanth) ಅವರನ್ನು ತಮಗೆ ಪರಿಚಯಿಸಿದ ವೈ.ಜಿ ಮಹೇಂದ್ರನ್ ಅವರಿಗೆ ಕೃತಜ್ಞತೆ ಸಲ್ಲಿಸಿದ ರಜನಿ, ‘ಇಂತಹ ಹುಡುಗಿಯನ್ನು ಅವರು ಪರಿಚಯಿಸದೇ ಇದ್ದರೆ ನನ್ನ ಬದುಕು ಯಾವ ರೀತಿಯಲ್ಲಿ ಇರುತ್ತಿತ್ತೋ ಗೊತ್ತಿಲ್ಲ. ಇವತ್ತು ನಾನು ನೆಮ್ಮದಿಯಾಗಿ ಇದ್ದೇನೆ ಎನ್ನುವುದಕ್ಕೆ ಲತಾ ಕಾರಣ. ನನ್ನ ಬದುಕನ್ನು ಬಲು ಶಿಸ್ತಿನಿಂದ ರೂಪಿಸಿದಳು. ಈ ಕಾರಣಕ್ಕಾಗಿ ನಾನು ಅವರನ್ನು ಯಾವತ್ತೂ ನೆನಪಿಸಿಕೊಳ್ಳುವೆ’ ಎಂದು ಭಾವನಾತ್ಮಕವಾಗಿ ಸಮಾರಂಭದಲ್ಲಿ ಮಾತನಾಡಿದ್ದಾರೆ ರಜನಿಕಾಂತ್.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡಿತದ ಚಟವಿರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು: ವೀರೇಂದ್ರ ಹೆಗ್ಗಡೆ

    ಕುಡಿತದ ಚಟವಿರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು: ವೀರೇಂದ್ರ ಹೆಗ್ಗಡೆ

    ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವು ಸಾಮಾಜಿಕ ಕೈಂಕರ್ಯಗಳನ್ನ ಮಾಡಿಕೊಂಡು ಬರುತ್ತಿದೆ. ಅದರಲ್ಲಿ ಮದ್ಯವ್ಯಸನಿಗಳಿಗೆ ಮದ್ಯ ಕುಡಿಯುವ ಚಟ ಬಿಡಿಸುವ ಶಿಬಿರಗಳನ್ನ ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಸಂಸ್ಥೆಯ ಸಮಾಜಿಕ ಬದ್ಧತೆ ಎದ್ದು ಕಾಣುತ್ತಿದೆ. ಅದೇ ರೀತಿ ಮಂಡ್ಯದ ಮದ್ದೂರಿ (Mandya Mddur) ನಲ್ಲಿ ಸಂಸ್ಥೆ ವತಿಯಿಂದ ನಡೆದ 1639 ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ (Veerendra Heggade) ಯವರು ಆಶೀರ್ವಚನ ನೀಡಿದ್ರು.

    ಮಂಡ್ಯದ ಮದ್ದೂರು ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಶಿಬರವನ್ನ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ರು. ಬಳಿಕ ಶಿಬಿರಾರ್ಥಿಗಳ ಕುರಿತು ಮಾತನಾಡಿದ ಅವರು, ಕುಡಿತದ ಚಟ ಹೊಂದಿರುವವರೆಲ್ಲ ಕೆಟ್ಟವರಲ್ಲ, ಅವರ ದುಶ್ಚಟಗಳು ಅವರನ್ನ ಕೆಟ್ಟವರನ್ನಾಗಿ ಬಿಂಬಿಸಿದೆ. ಖುಷಿಗೋ, ಕುತೂಹಲಕ್ಕೊ ಅಥವಾ ಸಹವಾಸ ದೋಷಕ್ಕೊ ಮನುಷ್ಯ ಮದ್ಯ ಸೇವಿಸುವುದನ್ನ ಕಲಿಯುತ್ತಾನೆ. ಆದರೆ ಬಳಿಕ ಮದ್ಯಪಾನವೇ ಆತನನ್ನ ಕೈವಶ ಮಾಡಿಕೊಳ್ಳುತ್ತೆ ಎಂದು ಹೇಳಿದರು. ಇದನ್ನೂ ಓದಿ: ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ದೇಶಕ್ಕೆ ಮಾದರಿ, ಇದೊಂದು ಮೈಲಿಗಲ್ಲು – ಬೊಮ್ಮಾಯಿ

    ಸದ್ಯ ಆ ಮದ್ಯಪಾನ ತ್ಯಜಿಸುವ ನಿಟ್ಟಿನಲ್ಲಿ ನೀವೆಲ್ಲ ಶಿಬಿರದಲ್ಲಿ ಭಾಗವಹಿಸಿದ್ದೀರಿ. ನೀವೆಲ್ಲ ಊರಿಗೆ ಹೋದ ಮೇಲೆ ಸಂಯಮದಿಂದ ಬದುಕುವ ಜೊತೆಗೆ ಸಹಪಾಠಿಗಳ, ಜನರ ಮೂದಲಿಕೆ ಟೀಕೆ ಟಿಪ್ಪಣಿಗಳನ್ನ ತಾಳ್ಮೆಯಿಂದ ಸಹಿಸಿಕೊಂಡು ದುಶ್ಚಟದಿಂದ ಮುಕ್ತರಾಗಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದ್ರು. ಈ ಶಿಬಿರದ ಮತ್ತೊಂದು ವಿಶೇಷತೆ ಎಂದ್ರೆ ಯಾವುದೇ ಮಾತ್ರೆ, ಔಷಧಿ ಬಳಕೆಯಿಲ್ಲದೆ, ಮಂತ್ರ ತಂತ್ರಗಳ ಮೊರೆ ಹೋಗದೆ, ಕೇವಲ ಮನಪರಿವರ್ತನೆಯಿಂದ ಮದ್ಯಪಾನ ಬಿಡಿಸುವ ಪ್ರಕ್ರಿಯಾಗಿದೆ. ಈ ಶಿಬಿರದಲ್ಲಿ ಭಾಗವಹಿಸಿರುವ ನೂರಾರು ಜನರು ಮದ್ಯಪಾನ (Alcohol) ದುಶ್ಚಟವನ್ನ ಮುಂದೆಯು ತ್ಯಜಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಿ ಸಂಯಮದಿಂದ ಬದುಕುವಂತೆ ಕರೆ ನೀಡಿದ್ರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k