Tag: alcohol

  • ಕರೆಂಟ್ ಬಿಲ್ ಏರಿಕೆಯ ಬೆನ್ನಲ್ಲೇ ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದ ಅಬಕಾರಿ ಇಲಾಖೆ

    ಕರೆಂಟ್ ಬಿಲ್ ಏರಿಕೆಯ ಬೆನ್ನಲ್ಲೇ ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದ ಅಬಕಾರಿ ಇಲಾಖೆ

    ಬೆಂಗಳೂರು: ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಫ್ರೀ ಕರೆಂಟ್ ಸಿಗುತ್ತದೆ ಎಂದು ರಾಜ್ಯದ ಜನರು ಸಂತಸಪಟ್ಟರೆ ಕೆಲವೆಡೆ ವಿದ್ಯುತ್ ಬಿಲ್ ಅನ್ನು ದುಪ್ಪಟ್ಟು ಮಾಡಿ ಶಾಕ್ ನೀಡಲಾಗಿದೆ. ಕರೆಂಟ್ ಬಿಲ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಯಿಂದ (Excise Department) ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದೆ.

    ಅಬಕಾರಿ ಇಲಾಖೆ ಸದ್ದಿಲ್ಲದೆ ಮದ್ಯ (Alcohol) ಬೆಲೆ ಏರಿಕೆPrice Hike) ಮಾಡಿದೆ. ಸ್ಲಾಬ್‌ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‌ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್‌ಗಳ ವಿವಿಧ ಬ್ರ್ಯಾಂಡ್‌ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಯಾತ್ರಿಕ ಹೃದಯಾಘಾತದಿಂದ ಸಾವು

    ಯಾವೆಲ್ಲಾ ಬ್ರ್ಯಾಂಡ್ ಎಷ್ಟು ಬೆಲೆ ಏರಿಕೆ?
    650 ಎಂಎಲ್‌ನ ಬಿಯರ್ 160 ರಿಂದ 170 ರೂ. ಏರಿಕೆ ಮಾಡಲಾಗಿದೆ. ಮ್ಯಾಕ್ ಡ್ಯಾವೆಲ್ಸ್ 180 ಎಂಎಲ್ 198 ರಿಂದ 220 ರೂ.ಗೆ ಏರಿಕೆ. ಕಿಂಗ್ ಫಿಷರ್ 650 ಎಂಎಲ್‌ಗೆ 160 ರಿಂದ 170 ರೂ. ಏರಿಕೆ. ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳ. ಬಡ್ವ್ಯೇಷರ್ 200 ರಿಂದ 220 ರೂ. ಹೆಚ್ಚಳ. ಪವರ್ ಕೂಲ್ 100 ರಿಂದ 110 ರೂ. ಏರಿಕೆ. ಬಕಾರ್ಡಿ 275 ಎಂಎಲ್‌ಗೆ 90 ರಿಂದ 105 ರೂ. ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಗೃಹಜ್ಯೋತಿ ಗೊಂದಲ ಬಗೆಹರಿದ್ರೂ ಶಾಕ್- 200 ಯುನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಬಿಲ್

  • ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

    ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

    ಶಿವಮೊಗ್ಗ: ಮದ್ಯ (Alcohol) ಸೇವಿಸುವ ವಿಷಯಕ್ಕೆ ಬಾರ್ (Bar) ನಲ್ಲಿ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಸಚಿನ್ (27) ಕೊಲೆಯಾದ ಯುವಕನಾಗಿದ್ದು, ಈತ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಶಿವಮೊಗ್ಗ (Shivamogga) ತಾಲೂಕಿನ ಆಯನೂರಿನ ನವರತ್ನ ಬಾರ್ ನಲ್ಲಿ ಈ ಗಲಾಟೆ ನಡೆದಿದೆ. ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಕೊಲೆ ಮಾಡಿದ ಆರೋಪಿಗಳು.

    ಈ ಹಿಂದೆ ಹಣ ನೀಡದೇ ಮದ್ಯ ಖರೀದಿಸಿದ್ದ ಆರೋಪಿಗಳು. ಹೀಗಾಗಿ ಬಾರ್ ಬಳಿ ಬಂದಾಗ ಕ್ಯಾಶಿಯರ್ (Bar Cashier)  ಹಣ ಕೇಳಿದ್ದಾರೆ. ಎಲ್ಲಾ ಜನರ ಎದುರು ಹಣ ಕೇಳುತ್ತೀಯಾ ಅಂತಾ ಗಲಾಟೆ ಮಾಡಿದ್ದರು. ಬಳಿಕ ಮೂವರು ಆರೋಪಿಗಳು ಭಾನುವಾರ ರಾತ್ರಿ 10 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದರು.

    ರಾತ್ರಿ 11.30 ಆದರೂ ಆರೋಪಿಗಳು ಮದ್ಯ ಸೇವಿಸುತ್ತಲೇ ಇದ್ದರು. ಈ ವೇಳೆ ಸಚಿನ್, 11.30 ಆಯ್ತು ಬಂದ್ ಮಾಡ್ತೇವೆ ಹೊರಡಿ ಎಮದು ಹೇಳಿದ್ದಾರೆ. ಆಗ ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ ಅಂತಾ ಗಲಾಟೆ ಮಾಡಿದ್ದಾರೆ. ಜಗಳ ತಾರಕಕ್ಕೇರಿ ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೂಡಲೇ ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೇರೆಡೆ ಶಿಫ್ಟ್ ಮಾಡುವಾಗಲೇ ಸಚಿನ್ ಮೃತಟ್ಟಿದ್ದಾರೆ.

    ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡ್ರಮ್‌ನಲ್ಲಿ ಕೂಡಿ ಹಾಕಿ 4 ಮಕ್ಕಳ ಕೊಂದ ತಾಯಿ – ಬಳಿಕ ತಾನೂ ನೇಣಿಗೆ ಶರಣು

  • ಗುರುದ್ವಾರದಲ್ಲಿ ಮದ್ಯಪಾನ ಮಾಡಿದ ಮಹಿಳೆಯ ಗುಂಡಿಕ್ಕಿ ಹತ್ಯೆ

    ಗುರುದ್ವಾರದಲ್ಲಿ ಮದ್ಯಪಾನ ಮಾಡಿದ ಮಹಿಳೆಯ ಗುಂಡಿಕ್ಕಿ ಹತ್ಯೆ

    ಚಂಡೀಗಢ: ಗುರುದ್ವಾರದ (Gurudwara) ಆವರಣದಲ್ಲಿ ಮದ್ಯಪಾನ ಮಾಡಿದ ಆರೋಪದ ಮೇಲೆ ಮಹಿಳೆಯನ್ನು (Woman) ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಪಟಿಯಾಲದಲ್ಲಿ (Patiala) ನಡೆದಿದೆ.

    ಪರ್ಮಿಂದರ್ ಕೌರ್ (32) ಎಂದು ಗುರುತಿಸಲಾದ ಮಹಿಳೆ ಹತ್ಯೆಯಾಗಿದ್ದು, ಗುರುದ್ವಾರಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ನಿರ್ಮಲಜಿತ್ ಸಿಂಗ್ ಸೈನಿ ಮಹಿಳೆ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಭಾನುವಾರ ರಾತ್ರಿ ಪರ್ಮಿಂದರ್ ಕೌರ್ ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಪವಿತ್ರ ನೀರಿನ ಕೊಳದ ಬಳಿ ಮದ್ಯಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಗುರುದ್ವಾರದ ಸಿಬ್ಬಂದಿ ಆಕೆಯನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ನಿರ್ಮಲಜಿತ್ ಸಿಂಗ್ ಸೈನಿ ಕೋಪದಿಂದ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಹಿಳೆ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್

    ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆರೋಪಿ ನಿರ್ಮಲಜಿತ್ ಆಸ್ತಿ ಡೀಲರ್ ಆಗಿದ್ದು, ಯಾವುದೇ ಅಪರಾಧ ಚಟುವಟಿಕೆಗಳ ಇತಿಹಾಸ ಹೊಂದಿಲ್ಲ ಎನ್ನಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

  • ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಚಂಡೀಗಢ: ಕಚೇರಿ, ಸಾರ್ವಜನಿಕ ಸ್ಥಳ ಹೀಗೆ ಕೆಲವೆಡೆ ಮದ್ಯಪಾನ ಮಾಡೋದು ನಿಷೇಧ. ಆದರೆ ಹರ್ಯಾಣದ (Haryana) ಸರ್ಕಾರ ಎಣ್ಣೆ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಕಾರ್ಪೊರೇಟ್ ಕಚೇರಿಯಲ್ಲಿ (Corporate Office) ಕೆಲಸ ಮಾಡುತ್ತ ಸಹೋದ್ಯೋಗಿಗಳೊಂದಿಗೆ ಮದ್ಯಪಾನ ಮಾಡಬಹುದಾದಂತಹ ಹೊಸ ನಿಯಮವನ್ನು ಸರ್ಕಾರ ತಂದಿದೆ.

    ಹರಿಯಾಣ ಮದ್ಯ ನೀತಿಯ (Haryana Liquor Policy) ಪ್ರಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದಂತೆ ಜೂನ್ 12 ರಿಂದ ರಾಜ್ಯಾದ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿಗಳಲ್ಲಿ ಕಡಿಮೆ ಕಂಟೆಂಟ್ ಆಲ್ಕೋಹಾಲ್ (Alcohol) ಪಾನೀಯಗಳಾದ ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಸೇವಿಸಲು ಸರ್ಕಾರ ಅನುಮತಿ ನೀಡುತ್ತಿದೆ.

    ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ (Beer) ಹಾಗೂ ವೈನ್‌ನಂತಹ (Wine) ಪಾನೀಯಗಳನ್ನು ಸೇವಿಸಬಹುದು. ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ.

    ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು. ಇದನ್ನೂ ಓದಿ: ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಹರಿಯಾಣ ಮದ್ಯ ನೀತಿಯ ಪ್ರಕಾರ ಕಾರ್ಪೊರೇಟ್ ಕಚೇರಿಗಳು ಎಲ್-10ಎಫ್ ಮದ್ಯದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಬಿಯರ್ ಮತ್ತು ವೈನ್‌ನಂತಹ ಕಡಿಮೆ ಆಲ್ಕೋಹಾಲ್ ಅಂಶದ ಪಾನೀಯಗಳನ್ನು ಸೇವಿಸಲು ಅನುವು ಮಾಡಿಕೊಡುತ್ತದೆ. ಕ್ಯಾಂಟೀನ್ ಅಥವಾ ಉಪಾಹಾರ ಗೃಹದ ಕನಿಷ್ಠ ವಿಸ್ತೀರ್ಣವು 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಿದ್ದರೆ ಕಾರ್ಪೊರೇಟ್ ಕಚೇರಿ ಪರವಾನಗಿ ಪಡೆಯಬಹುದು. ಪರವಾನಿಗೆ ಪಡೆಯುವ ಕಚೇರಿ 3 ಲಕ್ಷ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ – ಇಬ್ಬರಿಗೆ ತೀವ್ರ ಗಾಯ

  • ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

    ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

    ಲಕ್ನೋ: ಪೊಲೀಸ್ ಠಾಣೆ (Police Station) ಯ ಒಳಗಡೆ ಕುರ್ಚಿಯಲ್ಲಿ ಕುಳಿತು ಮದ್ಯಪಾನ (Alcohol) ಮಾಡಿದ ವ್ಯಕ್ತಿಯನ್ನು ಪೊಲೀಸು ಬಂಧಿಸಿದ ಘಟನೆ ಉತ್ತರಪ್ರದೇಶದ ಸಹರಾನ್ಪುರ್ ನಲ್ಲಿ ನಡೆದಿದೆ.

    ಘಟನೆ ಸಂಬಂಧ ಖತಾ ಖೇರಿ ಪೊಲೀಸ್ ಠಾಣೆ (Khata Kheri police station) ಯ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ಸದ್ಯ ಈತನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮನೆಯಲ್ಲೇ ಇದ್ದ ಮಗುವಿಗಾಗಿ ಪೊಲೀಸರ ಜೊತೆ ಊರೆಲ್ಲಾ ಹುಡುಕಿದ್ರು ಪೋಷಕರು!

    ವೀಡಿಯೋದಲ್ಲೇನಿದೆ..?: ಪೊಲೀಸ್ ಠಾಣೆಯ ಒಳಗೆ ಕುರ್ಚಿಯಲ್ಲಿ ಕುಳಿತ ಇಮ್ರಾನ್ ಬಾಟ್ಲಿಯಿಂದ ಎಣ್ಣೆಯನ್ನು ಗ್ಲಾಸ್‍ಗೆ ಹಾಕಿಕೊಂಡಿದ್ದಾನೆ. ಅಲ್ಲದೆ ಕುಡಿಯುವಾಗ ತಿನ್ನಲು ಕೆಲವೊಂದು ಸ್ನ್ಯಾಕ್ಸ್‍ಗಳು ಹಾಗೂ ನೀರಿನ ಬಾಟ್ಲಿ ಟೇಬಲ್ ಮೇಲೆ ಇರುವುದನ್ನು ಕಾಣಬಹುದಾಗಿದೆ.

    ಮಾರ್ಚ್‍ನಲ್ಲಿ ನಡೆದ ಹೋಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದ್ದು, ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಠಾನಾ ಉಸ್ತುವಾರಿ ಸಚಿನ್ ತ್ಯಾಗಿ ತಿಳಿಸಿದ್ದಾರೆ.

    ಸದ್ಯ ಇಮ್ರಾನ್ ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.

  • ದುಪ್ಪಟ್ಟು ದರಕ್ಕೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 1.72 ಲಕ್ಷ ಮೌಲ್ಯದ ಮದ್ಯ ವಶಕ್ಕೆ

    ದುಪ್ಪಟ್ಟು ದರಕ್ಕೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 1.72 ಲಕ್ಷ ಮೌಲ್ಯದ ಮದ್ಯ ವಶಕ್ಕೆ

    ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 1ಲಕ್ಷ 72 ಸಾವಿರ ಮೌಲ್ಯದ ವಿವಿಧ ಕಂಪನಿಯ ಅಕ್ರಮ ಮದ್ಯ (Alcohol) ವನ್ನು ಅಬಕಾರಿ ಇಲಾಖೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ. ಕೊಂಕಲ್ ಗ್ರಾಮದ ಅಮೀನರಡ್ಡಿ ಸಿದ್ದಣ್ಣಗೌಡ ಪಾಟೀಲ ಬಂಧಿತ ಆರೋಪಿ. ಚುನಾವಣೆ ಹಿನ್ನೆಲೆ ಮದ್ಯವನ್ನ ಖರೀದಿಸಿಟ್ಟಿದ್ದ ಆರೋಪಿ, ದುಪ್ಪಟ್ಟು ದರಕ್ಕೆ ಮಾರಾಟ ಮಾಡೋ ಪ್ಲಾನ್ ಮಾಡಿದ್ದ ಎನ್ನಲಾಗಿದೆ.

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳ ತಂಡ ಅಕ್ರಮ ಮದ್ಯವನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಇಂದು ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ- ಇಂದಿನಿಂದ ಎಣ್ಣೆ ಸಿಗಲ್ಲ

  • ಮೊಬೈಲ್‌ ಕೊಡದ್ದಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆಗೈದ ಪಾನಮತ್ತ ಮಹಿಳೆ

    ಮೊಬೈಲ್‌ ಕೊಡದ್ದಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆಗೈದ ಪಾನಮತ್ತ ಮಹಿಳೆ

    ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಮದ್ಯವ್ಯಸನಿ ಮಹಿಳೆ (Alcohol Woman) ಯೊಬ್ಬಳು ಯುವಕನನ್ನು ಹತ್ಯೆಗೈದ ಘಟನೆ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ನಡೆದಿದೆ.

    ನಾಗರಾಜ್ ರಾಗಿಪಾಟೀಲ್ (25) ಹತ್ಯೆಯಾದ ಯುವಕ. ಬೆಳಗಾವಿ (Belagavi) ತಾಲೂಕಿನ ತಾರಿಹಾಳ ನಿವಾಸಿಯಾಗಿರುವ ಈತನನ್ನು, ಕಂಗ್ರಾಳಿ ಕೆ.ಹೆಚ್. ಗ್ರಾಮದ ನಿವಾಸಿ ಜಯಶ್ರೀ ಪವಾರ್(40) ಭಾನುವಾರ ರಾತ್ರಿ ಹತ್ಯೆಗೈದಿದ್ದಾಳೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

    ಮಹಾರಾಷ್ಟ್ರ(Maharastra) ದ ಕರಾಡ್‍ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ನಾಗರಾಜ್, ಸ್ವಗ್ರಾಮ ತಾರಿಹಾಳದಲ್ಲಿ ರಾಮೇಶ್ವರ ದೇವರ ಜಾತ್ರೆಗೆ ಆಗಮಿಸಿದ್ದನು. ಭಾನುವಾರ ಸ್ನೇಹಿತನ ಜೊತೆ ಬಟ್ಟೆ ತರಲು ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಚವ್ಹಾಟ ಗಲ್ಲಿ ಕಾರ್ನರ್‍ನಲ್ಲಿ ಸ್ನೇಹಿತನ ಜೊತೆ ನಿಂತಿದ್ದನು.

    ಹೀಗೆ ನಿಂತಿದ್ದವನ ಬಳಿ ಬಂದ ಮದ್ಯವ್ಯಸನಿ ಜಯಶ್ರಿ, ಮೊಬೈಲ್ (Mobile) ನೀಡುವಂತೆ ಕಿರಿಕ್ ಮಾಡಿದ್ದಾಳೆ. ಯಾಕೆ ಮೊಬೈಲ್ ಎಂದು ಪ್ರಶ್ನಿಸುತ್ತಿದ್ದಂತೆಯೇ ಜಯಶ್ರೀ ಪವಾರ್ ಚಾಕುವಿನಿಂದ ನಾಗರಾಜ್ ಎದೆಗೆ ಚುಚ್ಚಿದ್ದಾಳೆ. ಕೂಡಲೇ ಗಾಯಾಳು ನಾಗರಾಜ್‍ನನ್ನ ಸ್ನೇಹಿತ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದನು.

    ಆದರೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಗರಾಜ್ ಸಾವನ್ನಪ್ಪಿದ್ದಾನೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕೊಡಗಿನ ಮದುವೆ ಸಮಾರಂಭಗಳಲ್ಲಿ ಓಪನ್ ಬಾರ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್

    ಕೊಡಗಿನ ಮದುವೆ ಸಮಾರಂಭಗಳಲ್ಲಿ ಓಪನ್ ಬಾರ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್

    ಮಡಿಕೇರಿ: ಚುನಾವಣೆ (Election) ಮುಗಿಯುವವರೆಗೂ ಕೊಡಗಿನ (Kodagu) ಸಮಾರಂಭಗಳಲ್ಲಿ ಮದ್ಯ (Alcohol) ಬಳಕೆ ಮಾಡಬಾರದು ಎಂದು ಚುನಾವಣಾ ಆಯೋಗವು (Election Commission) ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಕೊಡಗಿನ ಜನರು ಮದ್ಯ ಬಳಕೆ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಮದ್ಯ ನಿಷೇಧ ನಿರ್ಬಂಧ ಸಡಿಲಿಸಿ ಖಾಸಗಿ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲು ಅವಕಾಶ ನೀಡುವಂತೆ ರಾಜ್ಯದ ಎಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ಕೊಟ್ಟಿದ್ದಾರೆ.

    ಕೊಡಗಿನಲ್ಲಿ ಮದುವೆ, ನಾಮಕರಣ ಸೇರಿದಂತೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ನಿರ್ಬಂಧ ಹೇರಿದ್ದ ಬಗ್ಗೆ ಚುನಾವಣಾಧಿಕಾರಿಗಳಿಗೆ ಕೊಡವ ಸಮಾಜ, ಗೌಡ ಸಮಾಜ ಸೇರಿದಂತೆ ವಿವಿಧ ಸಮಾಜಗಳಿಂದ ದೂರು ಸಲ್ಲಿಸಲಾಗಿತ್ತು. ಅಲ್ಲದೇ ಬಿಜೆಪಿಯಿಂದ (BJP) ಕಿಲನ್ ಗಣಪತಿ ಎಲ್ಲಾ ಸಂಸ್ಥೆಗಳ ಪರವಾಗಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ನಿರ್ಬಂಧ ಸಡಿಲಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ನಾಲ್ಕು ದಿನಗಳ ಹಿಂದೆ ವರದಿ ಮಾಡಿತ್ತು. ಇದನ್ನೂ ಓದಿ: ಮದುವೆಗಳಲ್ಲಿ ಓಪನ್ ಬಾರ್‌ಗೆ ಅನುಮತಿ ನೀಡಿ – ಚುನಾವಣಾ ಆಯೋಗಕ್ಕೆ ಕೊಡಗಿನ ಜನ ಮನವಿ 

    ಆದರೆ ರಾಜಕೀಯ ಪಕ್ಷಗಳಿಂದ ಅಥವಾ ರಾಜಕಾರಣಿಗಳಿಂದ ನಡೆಯುವ ಸಭೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಬಾರದು. ಉಳಿದಂತೆ ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಎಂದಿನಂತೆ ಮದ್ಯ ಸರಬರಾಜಿಗೆ ಅನುಮತಿ ನೀಡಬಹುದು ಎಂದು ಚುನಾವಣಾ ಅಯೋಗವು ಆದೇಶ ಹೊರಡಿಸಿದೆ. ಇದನ್ನೂ ಓದಿ: ಸಹಸ್ರಾರು ಮಂದಿ ಸಮೇತ ಸಚಿವ ಸುಧಾಕರ್ ಇಂದು ನಾಮಪತ್ರ ಸಲ್ಲಿಕೆ – ನಾಮಿನೇಷನ್‌ಗೂ ಮುನ್ನ ಟೆಂಪಲ್‌ ರನ್ 

    ಕೊಡಗಿನಲ್ಲಿ ಪ್ರತೀ ಮದುವೆ ಸಮಾರಂಭಗಳಲ್ಲಿ ಮದ್ಯ ಸೇವಿಸುವುದು ಅವರ ಸಂಸ್ಕೃತಿಯ ಒಂದು ಭಾಗ. ಪ್ರಸ್ತುತ ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿರುವುದರಿಂದ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣಾ ಆಯೋಗವು ಆದೇಶ ಹೊರಡಿಸಿತ್ತು. ಈಗ ಈ ಆದೇಶವನ್ನು ಹಿಂಪಡೆಯುವ ಮೂಲಕ ಕೊಡಗಿನ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

  • ಮದುವೆಗಳಲ್ಲಿ ಓಪನ್ ಬಾರ್‌ಗೆ ಅನುಮತಿ ನೀಡಿ – ಚುನಾವಣಾ ಆಯೋಗಕ್ಕೆ ಕೊಡಗಿನ ಜನ ಮನವಿ

    ಮದುವೆಗಳಲ್ಲಿ ಓಪನ್ ಬಾರ್‌ಗೆ ಅನುಮತಿ ನೀಡಿ – ಚುನಾವಣಾ ಆಯೋಗಕ್ಕೆ ಕೊಡಗಿನ ಜನ ಮನವಿ

    ಮಡಿಕೇರಿ: ಜಿಲ್ಲೆಯ ಜನರು ಮದುವೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣೆ (Election) ಆಯೋಗದ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಮದುವೆ (Marriage) ಸಮಾರಂಭ ಇಟ್ಟುಕೊಂಡವರು ಕಂಗಾಲಾಗಿದ್ದಾರೆ.

    ಹೌದು. ಕೊಡಗು ಅಂದ್ರೆ ಅಲ್ಲಿ ಒಂದಲ್ಲೊಂದು ವಿಶೇಷ. ವೈಶಿಷ್ಟ್ಯ ಕಾಣಸಿಗುತ್ತದೆ. ಇಲ್ಲಿಯ ಆಚಾರ-ವಿಚಾರಗಳು ಕೂಡ ವಿಭಿನ್ನ. ಸದ್ಯ ವಿವಾಹವಾಗಲು ಚೈತ್ರ ಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಇದೀಗ ಮದುವೆ ಸಮಾರಂಭಗಳಲ್ಲಿ ಮದ್ಯದ (Alcohol) ವ್ಯವಸ್ಥೆಗಳನ್ನು ಮಾಡಬಾರದು ಎಂದು ಅಬಕಾರಿ ಇಲಾಖೆ ಆದೇಶ ಹೊರಡಿಸಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ALCOHOL

    ಇಷ್ಟು ಸಮಯ ಚುನಾವಣೆಗಳಲ್ಲಿ ಈ ರೀತಿಯ ಮಾನದಂಡಗಳು ಹಾಕಿರಲ್ಲಿಲ್ಲ. ಆದರೆ ಈ ಬಾರಿ ಮದುವೆ ಕಾರ್ಯಕ್ರಮಗಳಿಗೆ ಮದ್ಯದ ವ್ಯವಸ್ಥೆಗಳನ್ನು ನಿಬರ್ಂಧ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗುವುದಿಲ್ಲ. ಕೊಡಗಿನಲ್ಲಿ ಮದ್ಯ ಸೇವನೆ ಮಾಡುವುದು ಸಂಸ್ಕøತಿಯ ಒಂದು ಭಾಗವಾಗಿದೆ. ಇದು ನಮ್ಮ ಸಂಸ್ಕøತಿಯನ್ನು ಕಸಿದುಕೊಳ್ಳುವ ಕೆಲಸ ಆಗಿದೆ ಎಂದು ಕೊಡಗಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ನನ್ಗೆ MLA ಗಿರಿ ಮುಖ್ಯವಲ್ಲ, ದೇವೇಗೌಡರ ಆರೋಗ್ಯ ಮುಖ್ಯ: ಹೆಚ್.ಡಿ ರೇವಣ್ಣ

    ಕಲ್ಯಾಣ ಮಂಟಪ ಹಾಗೂ ಇತರೆ ಸ್ಥಳದಲ್ಲಿ ಮದುವೆ ನಡೆಯುವ ಸಂದರ್ಭದಲ್ಲಿ ಮದುವೆ ಹಾಲ್‍ಗಳು ಈಗಾಗಲೇ ಬುಕ್ ಆಗಿದೆ. ಕೊಡಗಿನ ಮದುವೆ ಸಮಾರಂಭಗಳಲ್ಲಿ ದೂರ ದೂರಗಳಿಂದ ಇರುವ ಬಂಧು ಮಿತ್ರರು ಒಂದೆಡೆ ಸೇರಿ ಮಾತು ಕಥೆ ಹರಟೆ ಕೊಡವ ನೃತ್ಯಗಳನ್ನು ಮಾಡಿಕೊಂಡು ಸಂಭ್ರಮದಿಂದ ಇರುತ್ತವೆ. ಆದರೆ ಮದ್ಯವೇ ಇಲ್ಲ ಎಂದರೆ ದೂರದ ಊರಿನಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಗೆ ಮದುವೆಯಲ್ಲಿ ಅಷ್ಟು ಖುಷಿ ಇರುವುದಿಲ್ಲ. ಹೀಗಾಗಿ ಕೊಡಗು ಜಿಲ್ಲೆಗೆ ಚುನಾವಣಾ ಆಯೋಗದವರು ಹಾಗೂ ಅಬಕಾರಿ ಇಲಾಖೆಯವರು ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಬೇಕು. ಚುನಾವಣಾ ಆಯೋಗದವರು ಈ ಬಗ್ಗೆ ಚಿಂತನೆ ನಡೆಸಿ ಮದುವೆ ಸಮಾರಂಭಗಳಿಗೆ ಮದ್ಯ ಕೊಡಲು ಅವಕಾಶ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಸಮನ್ಸ್‌

  • ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು ಕಂಬವೇರಿ ಯುವಕ ಪುಂಡಾಟ

    ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು ಕಂಬವೇರಿ ಯುವಕ ಪುಂಡಾಟ

    ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು (Advertisement) ಕಂಬವೇರಿ ಯುವಕನೋರ್ವ ಪುಂಡಾಟ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಸ್ಟೇಶನ್ ರಸ್ತೆಯಲ್ಲಿ ಜಾಹೀರಾತಿನ ಬೃಹತ್ ಹೋಲ್ಡಿಂಗ್ಸ್ ಮೇಲೆ ಯುವಕ ಕೆಲ ಹೊತ್ತು ಪುಂಡಾಟ ನಡೆದಿದ್ದಾನೆ. ಕುಡಿದ (Alcohol) ಮತ್ತಿನಲ್ಲಿ ಪಾಲಿಕೆಯಿಂದ ಜಾಹೀರಾತಿಗಾಗಿ ಹಾಕಲಾಗಿದ್ದ ಹೋಲ್ಡಿಂಗ್ಸ್ ಕಂಬದ ಮೇಲೇರಿದ ಯುವಕ ಕೆಲ ಹೊತ್ತು ಅದರ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದಾನೆ. ಇದನ್ನೂ ಓದಿ: ಖಲಿಸ್ತಾನಿ ಕೃತ್ಯ ಖಂಡಿಸದ ಯುಕೆ – ವ್ಯಾಪಾರ ಮಾತುಕತೆ ಸ್ಥಗಿತಗೊಳಿಸಿದ ಭಾರತ

    ಜನ ಎಷ್ಟೇ ಹೇಳಿದರೂ ಯುವಕ ಮಾತ್ರ ಕೆಳಗಿಳಿದಿಲ್ಲ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಸದ್ಯ ಯುವಕನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯುವಕನ ಪುಂಡಾಟದ ದೃಶ್ಯ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ವೈರಲ್ ಆಗುತ್ತಿವೆ.