Tag: alcohol

  • ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.31 ಲಕ್ಷ ರೂ. ನಗದು ಮತ್ತು 28 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

    ಕೊಡಗು ಅಬಕಾರಿ ಇಲಾಖೆಯೂ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರದ ಮದ್ಯ ವಶ ಪಡಿಸಿಕೊಂಡಿದ್ದಾರೆ. ಮೈಸೂರಿಂದ ವಯನಾಡಿಗೆ ಲಾರಿಯಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಕೊಡಗು ಜಿಲ್ಲೆಯ ಪೆರುಂಬಾಡಿ ಬಳಿ ಕೊಡಗು ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.

    28 ಲಕ್ಷ ಮೌಲ್ಯದ ಮದ್ಯ, ಲಾರಿ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಶಾಲನಗರದಲ್ಲಿ ಕೇರಳ ನೋಂದಣಿಯ ಜೀಪ್‍ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6 ಲಕ್ಷ ನಗದು ಪತ್ತೆಯಾಗಿದೆ.

    ಕೊಪ್ಪ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುವಾಗ ಈ ಹಣ ಪತ್ತೆಯಾಗಿದೆ. ಕೇರಳ ಮೂಲದ ಜೀವನ್ ಹಾಗೂ ಸಂತೋಷ್ ಬಳಿ ಹಣ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಅವರು 6,31,050 ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಪಟ್ನಾ: ಬಿಹಾರ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಬ್ಯಾನ್ ಮಾಡಲಾಗಿದೆ. ಆದ್ರೆ ಇಲ್ಲಿನ ಪುರ್ನಿಯಾ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕಂಠ ಪೂರ್ತಿ ಕುಡಿದು ಬಂದು ನಾಮಪತ್ರ ಸಲ್ಲಿಸಿ, ಪೊಲೀಸರ ಅತಿಥಿಯಾಗಿದ್ದಾರೆ.

    ಹೌದು, ಪುರ್ನಿಯಾ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ರಾಜೀವ್ ಕುಮಾರ್ ಸಿಂಗ್ ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಮದ್ಯಪಾನ ಮಾಡಿಕೊಂಡು ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೀವ್ ಮೂಲತಃ ಭಗಲ್‍ಪುರ ಜಿಲ್ಲೆಯವರು. ಮಂಗಳವಾರ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಭ್ಯರ್ಥಿಯ ವರ್ತನೆ ಕಂಡು ಅನುಮಾನ ಬಂದಿದೆ. ಆಗ ಆಲ್ಕೋ ಮೀಟರ್ ನಿಂದ ಅಭ್ಯರ್ಥಿಯನ್ನು ಪರೀಕ್ಷಿಸಿದಾಗ ಆತ ಕುಡಿದಿರುವುದು ಖಚಿತವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಖಚಿತವಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಾಜೀವ್ ಕುಮಾರ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿರುವ ಕಾನೂನನ್ನು ಉಲ್ಲಂಘಿಸಿದಕ್ಕೆ ಆರೋಪಿ ಮೇಲೆ ಪ್ರಕರಣ ಕೂಡ ದಾಖಲಿಸಲಾಗಿದೆ. 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರ ಆಡಳಿತದಲ್ಲಿದಾಗ, ಬಿಹಾರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿತ್ತು. ಆದರೂ ಕೂಡ ಬಿಹಾರದಲ್ಲಿ ಮದ್ಯ ಮಾರಾಟ ನಿಂತಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಈ ಕುರಿತು ರಾಜಕೀಯ ಪಾಳಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.

    ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಒಟ್ಟು 18 ಅಭ್ಯರ್ಥಿಗಳು ಲೋಕಸಮರಕ್ಕೆ ಕಣಕ್ಕಿಳಿಯಲಿದ್ದಾರೆ. ಅವರಲ್ಲಿ ಈಗಾಗಲೇ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

  • ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಮಡಿಕೇರಿ: ತನ್ನ ಆಚಾರ, ವಿಚಾರ, ಪದ್ಧತಿ ಪರಂಪರೆಯಿಂದ ಪ್ರಸಿದ್ಧಯಾಗಿರುವ ಕೊಡಗಿನ ಜನತೆಯ ಮದುವೆ ಸಮಾರಂಭಕ್ಕೆ ನೀತಿಸಂಹಿತೆ ತಟ್ಟಿದೆ.

    ಸದ್ಯ ವಿವಾಹವಾಗಲು ಚೈತ್ರಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಹೀಗೆ ನಡೆಯುತ್ತಿರುವ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಶುಭ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಕೊಡಗಿನ ಜನರಿಗೆ ತಲೆನೋವಾಗಿ ಪರಿಣಮಿಸಿದೆ.

    ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಅಬಕಾರಿ ಇಲಾಖೆಯಿಂದ ಕಲ್ಯಾಣ ಮಂಟಪಗಳಿಗೆ ಲಿಖಿತ ನೋಟಿಸ್ ಜಾರಿಗೊಳಿಸಿದ್ದು, ಕಲ್ಯಾಣ ಮಂಟಪ ಅಥವಾ ಶುಭ ಸಮಾರಂಭ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದಂತೆಯೂ, ಮದ್ಯ ಸಂಗ್ರಹ ಮಾಡಿ ಇಟ್ಟುಕೊಳ್ಳದಂತೆಯೂ ನಿರ್ದೇಶಿಸಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಿಕ್ಕೇರಿಸಿಕೊಳ್ಳುತ್ತಿದ್ದ ಮಂದಿ ಈ ನಿಯಮದಿಂದ ತುಂಬಾನೇ ಬೇಸರ ಮಾಡಿಕೊಳ್ಳುವಂತಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ವೀರಣ್ಣ ಹೇಳಿದ್ದಾರೆ.

    ಚುನಾವಣೆ ನೀತಿ ಸಂಹಿತೆ ನಡುವೆಯೂ ಮದ್ಯ ಬಳಕೆಗೆ ಅವಕಾಶ ಬೇಕು ಎಂದ್ರೆ ಒಂದು ದಿನಕ್ಕೆ 11,500ರೂ ಹಣ ಸಂದಾಯ ಮಾಡಿ ಪರವಾನಿಗೆ ಪಡೆಯಬೇಕು ಎಂದು ಆದೇಶ ಮಾಡಲಾಗಿದೆ. ಈ ಮೊತ್ತ ಸರ್ಕಾರಕ್ಕೆ ಜಮೆಯಾಗಲಿದ್ದು, ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಚುನಾವಣೆ ಘೋಷಣೆಗೆ ಮುನ್ನವೇ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಾಹ ಸಮಾರಂಭಗಳು ನಿಶ್ಚಯ ಆಗಿವೆ.

    ಸಾಮಾನ್ಯವಾಗಿ ಮದುವೆಯ ಮುನ್ನ ದಿನವಾದ ಚಪ್ಪರ ಹಾಗೂ ಮದುವೆ ದಿನ ಮದ್ಯವನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಹೀಗಾಗಿ ಸದ್ಯ 2 ದಿನಕ್ಕೆ ಪರವಾನಿಗೆ ಬೇಕು ಅಂದ್ರೆ 23 ಸಾವಿರ ಹಣವನ್ನ ಅಬಕಾರಿ ಇಲಾಖೆಗೆ ಕಟ್ಟಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮದುವೆ ಮಂಟಪಗಳ ಬಾಡಿಗೆ ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಿ ಶುಭ ಸಮಾರಂಭಗಳನ್ನು ನೆರವೇರಿಸಲು ಸಾಮಾನ್ಯ ಕುಟುಂಬಗಳು ಬವಣೆ ಪಡುತ್ತಿರುವಾಗ, ಹೆಚ್ಚುವರಿ ಸುಮಾರು 25 ಸಾವಿರ ಹಣವನ್ನ ಪಾವತಿಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಸ್ಥಳೀಯ ನವೀನ್ ತಿಳಿಸಿದ್ದಾರೆ.

  • ಒಂದೇ ಮರದಲ್ಲಿ ನೇಣಿಗೆ ಶರಣಾದ ಸ್ನೇಹಿತರು

    ಒಂದೇ ಮರದಲ್ಲಿ ನೇಣಿಗೆ ಶರಣಾದ ಸ್ನೇಹಿತರು

    ಶಿವಮೊಗ್ಗ: ಸ್ನೇಹಿತರಿಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದೆ.

    ಶ್ರೀಕಾಂತ್(29) ಮತ್ತು ಪ್ರಕಾಶ್ (32) ಇಬ್ಬರು ಸ್ಮಶಾನದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಹೊಸನಗರದಲ್ಲಿ ಕೂಲಿ ಕಾರ್ಮಿಕರಾಗಿದ್ದರು ಎಂದು ತಿಳಿದು ಬಂದಿದೆ.

    ಮಂಗಳವಾರ ರಾತ್ರಿ ಹೊಸನಗರದ ಮಾರಿಗುಡ್ಡದಲ್ಲಿ ಇಬ್ಬರು ಕುಡಿಯುತ್ತಾ ಕುಳಿತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಇಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ರಸ್ತೆಯಲ್ಲಿ ವಾಕಿಂಗ್ ಹೋಗುವವರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ಶ್ರೀಕಾಂತ್ ಮತ್ತು ಪ್ರಶಾಂತ್ ಇಬ್ಬರು ತುಂಬಾ ಕುಡಿಯುತ್ತಿದ್ದರು. ಈ ಕಾರಣಕ್ಕೆ ಮದುವೆಗೆಂದು ನೋಡಿದ್ದ ಹುಡುಗಿಯರು ನಿರಾಕರಿಸುತ್ತಿದ್ದರು. ಹುಡುಗಿಯರು ತಮ್ಮನ್ನು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಜಾಸ್ತಿ ಕುಡಿಯುತ್ತಿದ್ದರು. ಈ ವಿಚಾರಕ್ಕೆ ಖಿನ್ನತೆಗೆ ಜಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

    ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್

    ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಎಲೆಕ್ಷನ್ ಹವಾ ದೇಶಾದ್ಯಂತ ಧೂಳೆಬ್ಬಿಸಿದೆ. ಅತ್ತ ಚುನಾವಣಾ ಆಯೋಗ ಎಣ್ಣೆ ಕಿಕ್ ಇಳಿಸಲು ಮೇಜರ್ ಸರ್ಜರಿ ಮಾಡಿದೆ. ಚುನಾವಣೆ ಮುಗಿಯೋವರೆಗೆ ಎಣ್ಣೆ ಬೇಕು ಅಣ್ಣಾ ಎಂದು ಕೆಮ್ಮಂಗಿಲ್ಲ. ಬಾರ್ ಮಾಲೀಕರನ್ನು ಗಿರ ಗಿರ ಸುತ್ತಿಸೋ, ಎಣ್ಣೆ ಪ್ರಿಯರ ನಶೆ ಇಳಿಸೋ ಸುದ್ದಿ ಇಲ್ಲಿದೆ.

    ಈ ಎಲೆಕ್ಷನ್ ಟೈಂನಲ್ಲಿ ಎಣ್ಣೆ ಕೊಟ್ಟೇ ವೋಟು ಹಾಕಿಸಿಕೊಳ್ಳುವ ಜನಪ್ರತಿನಿಧಿಗಳು ಇರುವುದರಿಂದ ಚುನಾವಣಾ ಆಯೋಗ ಎಣ್ಣೆ ವ್ಯಾಪಾರಕ್ಕೆ ಭರ್ಜರಿ ಕತ್ತರಿ ಹಾಕಿದೆ. ಡೈಲಿ ಬಾರ್ ಗಳಿಗೆ ನೂರೆಂಟು ರೂಲ್ಸ್ ತಂದು ಎಣ್ಣೆ ವ್ಯಾಪಾರದ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎಂದು ಹೇಳಲಾಗುತ್ತಿದೆ.

    ನನ್ ದುಡ್ಡು ನನ್ನಿಷ್ಟ ಅನ್ಕೊಂಡು ಬಾರ್ ಗೆ ಹೋಗಿ ನಿಮ್ಗೆ ಬೇಕಾದಷ್ಟು ಎಣ್ಣೆ ವ್ಯಾಪಾರ ಮಾಡುವ ಆಗಿಲ್ಲ. ಅಷ್ಟೆ ಅಲ್ಲ ಬಾರ್ ಮಾಲೀಕರಿಗೆ ಈ ಬಾರಿ ಲೋಕಸಭಾ ಎಲೆಕ್ಷನ್‍ಗೆ ಹೊಸ ರೂಲ್ಸ್ ತಂದಿದ್ದಾರೆ.

    ಎಣ್ಣೆಗೂ ನೀತಿ ಸಂಹಿತೆ!
    * ಬಾರನ್ನು ಬೆಳಗ್ಗೆ 10.30ಕ್ಕೆ ತೆರೆಯಬೇಕು. ರಾತ್ರಿ ನಿಗಧಿತ ಅವಧಿಗೆ ಮುಚ್ಚಬೇಕು. ಬೇಗ ತೆರೆಯೋದು, ಲೇಟಾಗಿ ಮುಚ್ಚೋದು ಮಾಡಿದರೆ ಅಂತಹ ಬಾರ್‍ಗಳ ಮೇಲೆ ದಂಡ ಪ್ರಯೋಗ
    * ಪ್ರತಿ ಬಾರ್ ಮೇಲೆ ಕಣ್ಣಿಡಲು ಸ್ಪೆಷಲ್ ಟೀಮ್ ರಚನೆ
    * ಒಬ್ಬ ವ್ಯಕ್ತಿ 2.3 ಲೀಟರ್‍ನಷ್ಟು ಮದ್ಯ ಖರೀದಿ ಮಾಡಬಹುದು. ಹೆಚ್ಚು ಖರೀದಿಸಿದರೆ ಬಾರ್‍ಗಳ ಲೈಸೆನ್ಸ್‍ಗೆ ಕುತ್ತು.
    * ನಿತ್ಯ ಬೆಳಗ್ಗೆ ಎಂಟು ಗಂಟೆಯೊಳಗೆ ಮದ್ಯ ಮಾರಾಟ, ವ್ಯಾಪಾರದ ಸಂಪೂರ್ಣ ವಿವರ ನೀಡಬೇಕು. ಡೈಲಿ ವ್ಯಾಪಾರದ ದಾಖಲೆಯನ್ನು ಅಬಕಾರಿಗೆ ಕಳಿಸಬೇಕು.
    * ಕದ್ದುಮುಚ್ಚಿ ಮದ್ಯ ಮಾರಾಟ ಮಾಡಿದರೆ ಸ್ಪೆಷಲ್ ವಿಂಗ್ಸ್ ಕೈಯಲ್ಲಿ ತಗ್ಲಾಕ್ಕೊಂಡ್ರೆ ಕ್ರಮ

    ಒಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಅಬಕಾರಿ ಇಲಾಖೆ ಕೊಂಚ ಕಠಿಣವಾಗಿಯೇ ಕ್ರಮ ಕೈಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿಬೇಡ ಎಂದ ಪತ್ನಿಯನ್ನೇ ಕೊಂದ – ರಾತ್ರಿಯಿಡೀ ಪತಿಯಿಂದ ನೀಚ ಕೃತ್ಯ

    ಕುಡಿಬೇಡ ಎಂದ ಪತ್ನಿಯನ್ನೇ ಕೊಂದ – ರಾತ್ರಿಯಿಡೀ ಪತಿಯಿಂದ ನೀಚ ಕೃತ್ಯ

    ನವದೆಹಲಿ: 30 ವರ್ಷದ ವ್ಯಕ್ತಿಯೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ರಾತ್ರಿಯಿಡೀ ಆಕೆಯ ಶವದ ಪಕ್ಕದಲ್ಲಿಯೇ ನಿರಾಳವಾಗಿ ನಿದ್ದೆ ಮಾಡಿರುವ ನೀಚ ಕೃತ್ಯ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ಬಬ್ಲಿ (28) ಕೊಲೆಯಾದ ಮಹಿಳೆ. ಆರೋಪಿಯನ್ನು ಪ್ರೇಮ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದ್ದು, ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಪತ್ನಿ ಬಾಬ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರೇಮ್ ಸಿಂಗ್ ಖಾಸಗಿ ಕಂಪನಿಯನ್ನು ಕೆಲಸ ಮಾಡುತ್ತಿದ್ದು, ಸದಾ ಕುಡಿಯುತ್ತಿದ್ದನು. ಈ ವಿಚಾರದ ಬಗ್ಗೆ ಆಗಾಗ ಇಬ್ಬರ ಮಧ್ಯೆಯೂ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರ ರಾತ್ರಿ ಕೂಡ ಸಿಂಗ್ ಕುಡಿದ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಮತ್ತೆ ಕುಡಿತದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ. ಆಗ ಕೋಪದಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಒಂದು ರಾತ್ರಿಯಿಡೀ ಶವದ ಪಕ್ಕದಲ್ಲೇ ಮಲಗಿದ್ದಾನೆ. ಮುಂಜಾನೆ ಎಚ್ಚರಗೊಂಡು ಪತ್ನಿಯನ್ನು ಎಬ್ಬಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ಬಳಿಕ ಭಯದಿಂದ ಪರಾರಿಯಾಗಿದ್ದಾನೆ.

    ಈ ಕುರಿತು ಕೊಲೆ ಆರೋಪದಡಿ ಆರೋಪಿ ವಿರುದ್ಧ ನಿಹಾಲ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಮೃತದೇಹವನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಗುರುವಾರ ಬೆಳಗ್ಗೆ ನೆರೆಹೊರೆಯ ಮನೆಯವರು ಬಬ್ಲಿ ತನ್ನ ರೂಮಿನಲ್ಲಿ ಶವವಾಗಿ ಬಿದ್ದಿರುವುದನ್ನು ನೋಡಿದ್ದರು. ಬಳಿಕ ಪತಿಯನ್ನು ಹುಡುಕಿದಾಗ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಹಿಂದಿನ ದಿನ ರಾತ್ರಿ ಪತಿ- ಪತ್ನಿ ಇಬ್ಬರು ಜಗಳವಾಡುತ್ತಿರುವುದು ಕೇಳಿಸಿತ್ತು ಎಂದು ನೆರೆಹೊರೆಯವರು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಈ ಕುರಿತು ತನಿಖೆ ಶುರುಮಾಡಿದ್ದು, ಪರಾರಿಯಾಗಿದ್ದ ಸಿಂಗ್ ನನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಗ್ನಿಸಾಕ್ಷಿ ಅನಾಹುತ!

    ಅಗ್ನಿಸಾಕ್ಷಿ ಅನಾಹುತ!

    https://www.youtube.com/watch?v=6dP56BggZwg

  • ಪತ್ನಿ `ಎಣ್ಣೆ’ ಹೊಡೆಯೋ ವಿಡಿಯೋ ಬಿಡುಗಡೆ ಮಾಡಿದ ನಟ ಅಖಿಲ್!

    ಪತ್ನಿ `ಎಣ್ಣೆ’ ಹೊಡೆಯೋ ವಿಡಿಯೋ ಬಿಡುಗಡೆ ಮಾಡಿದ ನಟ ಅಖಿಲ್!

    ಬೆಂಗಳೂರು: ಅಗ್ನಿಸಾಕ್ಷಿ ಧಾರಾವಾಹಿಯ ಅಖಿಲ್ ಪಾತ್ರಧಾರಿಯ ರಾಜೇಶ್ ಧ್ರುವ ಅವರು ತಮ್ಮ ಪತ್ನಿ ಶೃತಿ ಮದ್ಯಪಾನ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ರಾಜೇಶ್ ತಮ್ಮ ಪತ್ನಿ ಶೃತಿ ಮದ್ಯಪಾನದ ಮತ್ತಿನಲ್ಲಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶೃತಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದಾರೆ. ರಾಜೇಶ್ ಹಾಗೂ ಶೃತಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.

    ಈ ವಿಡಿಯೋದಲ್ಲಿ ರಾಜೇಶ್ ಅವರು ಶೃತಿಗೆ ನಾ ಯಾರು ಎಂದು ಪ್ರಶ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಶೃತಿ ಹೇ ಸುಮ್ನೆ ಹಚ್ಚೋ ನೀನು ಎಂತೆಲ್ಲಾ ಮಾಡ್ತಿಯಾ? ಎಂದು ಅವಾಜ್ ಹಾಕಿದ್ದಾರೆ. ಬಳಿಕ ರಾಜೇಶ್ ನಾ ಯಾರು? ನಾ ಯಾರು? ಎಂದು ಮತ್ತೆ ಪ್ರಶ್ನಿಸಿದ್ದಾರೆ. ಅದಲ್ಲದೇ ಉಪ್ಪಿನಕಾಯಿ ಬೇಕಾ? ಎಂದು ಕೇಳಿದ್ದಾರೆ. ಆಗ ಶೃತಿ ಬೇಕು ಎಂದು ಹೇಳಿದ್ದಾರೆ.


    ಮತ್ತೆ ರಾಜೇಶ್ ಅವರು ಶೃತಿ ಕುಡಿಯುತ್ತಿರುವುದನ್ನು ನೋಡಿ, ಸರಿಯಾಗ್ ಕುಡಿತಿಯಲ್ಲೇ?. ಎಂದು ಕೇಳಿದ್ದಾರೆ. ಆದರೆ ಇದಕ್ಕೆ ಶೃತಿ ಪ್ರತಿಕ್ರಿಯಿಸದೇ ಫಸ್ಟ್ ಹಚ್ಚಲೇ ಎಂದು ರಾಜೇಶ್‍ಗೆ ಬೈದಿದ್ದಾರೆ. ಆಗ ನನಗ್ಯಾಕ್ ಬೈತಿ? ನಾನೇನು ನಿನ್ನ ಗಂಡನಾ? ಎಂದು ಕೇಳಿದ್ದಾಗ ನನಗೆ ಅಳು ಬರ್ತಾಯಿದೆ. ಅಂವ ಅಲ್ಲಿ ನಿಂತು ಏನು ಮಾಡಕ್ಕತ್ಯಾನ?. ಹಚ್ಚಲ್ಲಿ. ಬ್ಯಾಕ್ ಬಾ ಎಂದು ಶೃತಿ ಎಣ್ಣೆ ಮತ್ತಿನಲ್ಲಿ ಎಲ್ಲರಿಗೂ ಅವಾಜ್ ಹಾಕಿದ್ದಾರೆ.

    ಈ ವಿವಾದ ಬಗ್ಗೆ ಶೃತಿ ಮಾತನಾಡಿ, 2013ರಲ್ಲಿ ಮದುವೆ ರಿಜಿಸ್ಟರ್ ಆಗಿದೆ. ಇಬ್ಬರೂ ಲವ್ ಮಾಡಿದ್ದು, ಅವರೇ ನಮ್ಮ ಅಪ್ಪನ ಬಳಿ ಬಂದು ಮದುವೆ ಮಾತುಕತೆ ನಡೆಸಿದ್ದಾರೆ. ಆಗ ನನ್ನ ಅಪ್ಪ ಈವಾಗ ಬೇಡ ಓದಿ, ಒಳ್ಳೆಯ ಕೆಲಸ ಸಿಕ್ಕ ಬಳಿಕ ನೋಡೋಣ ಎಂದು ಹೇಳಿದ್ದರು. ನಂತರ ಅವರ ಅಮ್ಮ ಒಪ್ಪಿಕೊಂಡು ಬಳಿಕ ಜಾತಿ ಬೇರೆ ಬೇರೆಯಾಗಿದೆ. ಹೀಗಾಗಿ ಬೇಡ ಎಂದಿದ್ದರು. ಈ ವೇಳೆಯೂ ರಾಜೇಶ್, ಇಲ್ಲ ಅವಳು ಇಲ್ಲದೆ ನಾನು ಇರಲ್ಲ. ಸತ್ತು ಹೋಗ್ತೀನಿ ಎಂದು ಹೇಳಿದ್ದರು. ಇಷ್ಟೆಲ್ಲ ಆದ ಬಳಿಕ ನಾವು ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ” ಎಂದು ವಿವರಿಸಿದ್ರು.

    https://www.youtube.com/watch?v=yoxkgVdHfw4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರವಾರದಲ್ಲಿ 23.73 ಲಕ್ಷ ರೂ. ಮೌಲ್ಯದ ಮದ್ಯ ನಾಶ

    ಕಾರವಾರದಲ್ಲಿ 23.73 ಲಕ್ಷ ರೂ. ಮೌಲ್ಯದ ಮದ್ಯ ನಾಶ

    ಕಾರವಾರ: ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡ ಸುಮಾರು 8,170.75 ಲೀಟರ್ ಗೋವಾ ಹಾಗೂ ಕರ್ನಾಟಕದ ಮದ್ಯವನ್ನು ಕಾರವಾರದ ಅಬಕಾರಿ ಇಲಾಖೆಯ ಕಚೇರಿ ಆವರಣದಲ್ಲಿ ನಾಶಪಡಿಸಲಾಯಿತು.

    ವಿಧಾನಸಭಾ ಚುನಾವಣೆಯಿಂದ ಈವರೆಗೂ ಜಿಲ್ಲೆಯಾದ್ಯಾಂತ 121 ವಿವಿಧ ಮೊಕದ್ದಮೆಯನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ದಾಖಲಿಸಿಕೊಂಡಿದೆ. ಈ ಪ್ರಕರಣ ಅಡಿಯಲ್ಲಿ ಒಟ್ಟು 23.73 ಲಕ್ಷ ರೂ. ಮೌಲ್ಯದ 8,170.75 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿತ್ತು.

    ಕಳ್ಳಬಟ್ಟಿ, ಗೋವಾ ಮದ್ಯ, ಬಿಯರ್, ಐಎಂಎಫ್‍ಎಲ್ ಹಾಗೂ ಸೇದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂಕೋಲಾ, ಕುಮಟಾ, ಹೊನ್ನವಾರ ಬಟ್ಕಾಳ, ಯಲ್ಲಾಪುರ, ಶಿರಸಿ, ದಂಡೇಲಿ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 459 ಲೀಟರ್ ಮದ್ಯ, 518 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದ್ದು, ಒಟ್ಟು 23.73 ಲಕ್ಷ ರೂ ಮೌಲ್ಯದ 8,170.75 ಲೀಟರ್ ಮದ್ಯಗಳನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

    ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

    ಹೈದಾರಾಬಾದ್: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ತರಗತಿಯಲ್ಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

    ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ.

    ಮದ್ಯ ಸೇವನೆ ಮಾಡಿದ ಬಳಿಕ ವಿದ್ಯಾರ್ಥಿನಿಯರು ಬೇರೆ ವಿದ್ಯಾರ್ಥಿಗಳ ಜೊತೆ ಜೋರಾಗಿ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ತರಗತಿಯಲ್ಲಿ ಮದ್ಯದ ವಾಸನೆ ಬಂದಿದೆ. ಇದರಿಂದ ಶಿಕ್ಷಕರು ಅನುಮಾನಗೊಂಡು ಜ್ಯೂಸ್ ಬಾಟಲನ್ನು ಕಿತ್ತುಕೊಂಡು ಪರಿಶೀಲಿಸಿದಾಗ ಮದ್ಯ ಮಿಕ್ಸ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣ ಇಬ್ಬರು ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಿದೆ.

    “ವಿದ್ಯಾರ್ಥಿನಿಯರು ತರಗತಿಯಲ್ಲಿ ಮದ್ಯಪಾನ ಮಾಡಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು, ಪ್ರತಿದಿನ ನಮ್ಮ ತಂದೆ ಮನೆಯಲ್ಲಿಯೇ ಕುಡಿಯುತ್ತಾರೆ. ಒಮ್ಮೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಬಾಟಲ್ ತೆಗೆದುಕೊಂಡು ಕುಡಿದಿದ್ದೆವು. ಬಳಿಕ ನಮಗೂ ಅದು ಹವ್ಯಾಸವಾಗಿ ಬೆಳೆಯಿತು” ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ಮುಖ್ಯೋಪಾಧ್ಯಾಯ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಇಬ್ಬರು ವಿದ್ಯಾರ್ಥಿನಿಯರ ಕೆಟ್ಟ ಅಭ್ಯಾಸದಿಂದ ಉಳಿದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

    ಮದ್ಯ ಸೇವನೆ ಒಂದು ಕೆಟ್ಟ ಹವ್ಯಾಸವಾಗಿದೆ. ಇದಕ್ಕೆ ಯುವಕರು ಬೇಗ ಅಡಿಕ್ಟ್ ಆಗುತ್ತಾರೆ. ಆದರೆ ವಿದ್ಯಾರ್ಥಿನಿಯರನ್ನು ಕೌನ್ಸೆಲಿಂಗ್ ಗೆ ಒಳಪಡಿಸಬೇಕಿತ್ತು. ಈ ರೀತಿ ಶಾಲೆಯಿಂದ ಹೊರ ಹಾಕುವುದು ತಪ್ಪು ಎಂದು ಸಾಮಾಜಿಕ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv