Tag: alcohol

  • ದೂರು ಕೊಡಲು ಬಂದ ಮಹಿಳೆಗೆ ಪಾನಮತ್ತ ಪೇದೆ ನಿಂದನೆ

    ದೂರು ಕೊಡಲು ಬಂದ ಮಹಿಳೆಗೆ ಪಾನಮತ್ತ ಪೇದೆ ನಿಂದನೆ

    ಮೈಸೂರು: ಅಪಘಾತದ ವಿಚಾರದಲ್ಲಿ ಬಸ್ ಚಾಲಕನ ವಿರುದ್ಧ ದೂರು ನೀಡಲು ಬಂದ ಮಹಿಳೆಗೆ ಪೊಲೀಸ್ ಪೇದೆ ನಶೆಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಂತರ ಸಂತೆ ಉಪ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ಶ್ರೀನಿವಾಸ್ ಪಾನಮತ್ತರಾಗಿ ತಮ್ಮನ್ನು ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪೇದೆ ಮತ್ತು ಮಹಿಳೆ ಜೊತೆಗಿನ ವಾಗ್ವಾದದ ದೃಶ್ಯಾವಳಿಯನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದೆ.

    ಎಚ್.ಡಿ. ಕೋಟೆಯ ರಾಘವೇಂದ್ರ ಅವರ ಕುಟುಂಬ ಸಫಾರಿಗಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿತ್ತು. ಈ ವೇಳೆ ಕೆಎಸ್ಆರ್‌ಟಿಸಿ ಬಸ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಕುಟುಂಬದಲ್ಲಿನ ಮಹಿಳೆ ಎಚ್.ಡಿ. ಕೋಟೆಯ ಅಂತರ ಸಂತೆಯ ಉಪ ಪೊಲೀಸ್ ಠಾಣೆಗೆ ಬಂದಿದ್ದಾರೆ.

    ಈ ವೇಳ ಕರ್ತವ್ಯದಲ್ಲಿದ್ದ ಪೇದೆ ಶ್ರೀನಿವಾಸ್ ದೂರು ಪಡೆಯದೆ ಬಸ್ ಚಾಲಕನ ಪರ ವಕಾಲತ್ತು ವಹಿಸಿದ್ದಾರೆ. ಅಲ್ಲದೆ ಶ್ರೀನಿವಾಸ್ ಮದ್ಯಪಾನ ಮಾಡಿ ತಮ್ಮನ್ನು ಅವಾಚ್ಯವಾಗಿ ನಿಂದಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಈ ಪೇದೆಯ ವಿರುದ್ಧ ಮಹಿಳೆ ದೂರು ನೀಡಲು ಮುಂದಾಗಿದ್ದಾರೆ.

  • ಪತ್ನಿಯ ಕಪಾಳಮೋಕ್ಷಕ್ಕೆ ಪತಿ ಸಾವು

    ಪತ್ನಿಯ ಕಪಾಳಮೋಕ್ಷಕ್ಕೆ ಪತಿ ಸಾವು

    ಚಾಮರಾಜನಗರ: ಕುಡಿದು ಬಂದ ಪತಿಗೆ ಪತ್ನಿ ಕಪಾಳಮೋಕ್ಷ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರಭುಸ್ವಾಮಿ ಮೃತ ಪತಿ. ಈತ ಆಗಾಗ್ಗೆ ಕುಡಿದು ಬಂದು ಪತ್ನಿ ಅಂಬಿಕಾ ಜೊತೆ ಜಗಳ ಮಾಡುತ್ತಿದ್ದನು. ಶನಿವಾರ ಕೂಡ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಆಗ ಪತ್ನಿ ಅಂಬಿಕಾ ಕೋಪಗೊಂಡು ಪತಿ ಪ್ರಭುಸ್ವಾಮಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೇಳೆ ಪ್ರಭುಸ್ವಾಮಿ ಕುಸಿದುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಇದರಿಂದ ಹೆದರಿದ ಅಂಬಿಕಾ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪತಿಯ ಶವವನ್ನು ನೇಣು ಹಾಕಿದ್ದಾಳೆ. ಆದರೆ ಪ್ರಭುಸ್ವಾಮಿಯ ಸಹೋದರಿಯರಿಗೆ ಅನುಮಾನ ಬಂದು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಬಿಕಾಳನ್ನು ಬಂಧಿಸಿದ್ದಾರೆ. ಮೃತ ಪ್ರಭುಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮದ್ಯಕ್ಕಾಗಿ ಜಗಳ: ನಡುಬೀದಿಯಲ್ಲೇ ಪತ್ನಿಯಿಂದ ಪತಿಗೆ ಚಪ್ಪಲಿ ಸೇವೆ

    ಮದ್ಯಕ್ಕಾಗಿ ಜಗಳ: ನಡುಬೀದಿಯಲ್ಲೇ ಪತ್ನಿಯಿಂದ ಪತಿಗೆ ಚಪ್ಪಲಿ ಸೇವೆ

    ಚಿಕ್ಕಮಗಳೂರು: ಕುಡಿದ ಅಮಲಿನಲ್ಲೇ ಮದ್ಯಕ್ಕಾಗಿ ಪತಿ ಹಾಗೂ ಪತ್ನಿ ಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿ ನಡೆದಿದೆ.

    ಪತಿ ಹಾಗೂ ಪತಿ ಮೊದಲೇ ಮದ್ಯ ಸೇವನೆ ಮಾಡಿದ್ದರು. ಬಳಿಕ ಬಾಟಲಿಯಲ್ಲಿ ಉಳಿದ ಸುಮಾರು 90 ಎಣ್ಣೆಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ನಡು ಬೀದಿಯಲ್ಲೇ ರಂಪಾಟ ನಡೆಸಿದ್ದಾರೆ.

    ಅಲ್ಲದೆ ಬಾರ್ ಮುಂಭಾಗದಲ್ಲಿ ದಂಪತಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಬಳಿಕ ಪತಿ ತನಗೆ ಎಣ್ಣೆ ಕೊಡಿಸಲಿಲ್ಲ ಎಂದು ಸಿಟ್ಟಿಗೆದ್ದ ಪತ್ನಿ ನಡು ರಸ್ತೆಯಲ್ಲಿ ತನ್ನ ಪತಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಪತಿ-ಪತ್ನಿ ಸುಮಾರು ಅರ್ಧ ಗಂಟೆಗಳ ಕಾಲ ಪರಸ್ಪರ ಬಡಿದಾಡಿಕೊಂಡಿದ್ದಾರೆ.

    ದಂಪತಿಯ ಎಣ್ಣೆ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮದ್ಯದ ಅಮಲಿನಲ್ಲಿ ಯುವತಿಯರಿಂದ ಆಟೋ ಚಾಲಕನಿಗೆ ಕಪಾಳ ಮೋಕ್ಷ

    ಮದ್ಯದ ಅಮಲಿನಲ್ಲಿ ಯುವತಿಯರಿಂದ ಆಟೋ ಚಾಲಕನಿಗೆ ಕಪಾಳ ಮೋಕ್ಷ

    ಬೆಂಗಳೂರು: ಮೂರು ಜನ ಯುವತಿಯರು ಮದ್ಯದ ಅಮಲಿನಲ್ಲಿ ಆಟೋ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

    ಸುರೇಂದ್ರ ಬಾಬು ಯುವತಿಯರಿಂದ ಕಾಪಾಳಮೋಕ್ಷಕ್ಕೆ ಒಳಗಾದ ಆಟೋ ಚಾಲಕ. ಶಿವಾನಂದ ಸರ್ಕಲ್ ಬಳಿ ಶುಕ್ರವಾರ ಘಟನೆ ನಡೆದಿದ್ದು, ಆಟೋ ಚಾಲಕ ಸುರೇಂದ್ರ ಬಾಬು ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಕಂಠಪೂರ್ತಿ ಕುಡಿದಿದ್ದ ಮೂವರು ಅಪರಿಚಿತ ಯುವತಿಯರು ಎಂಜಿ ರೋಡ್‍ನಲ್ಲಿ ಆಟೋ ಹತ್ತಿದ್ದರು. ವಿಜಯನಗರಕ್ಕೆ ತಮ್ಮನ್ನು ಬಿಡುವಂತೆ ತಿಳಿದ್ದರು. ಆದರೆ ಮದ್ಯದ ಗುಂಗಿನಲ್ಲಿದ್ದ ಅವರು ಆಟೋದಲ್ಲಿ ಕಿರುಚಾಡಲು ಆರಂಭಿಸಿದರು. ಇದರಿಂದ ಸ್ವಲ್ಪ ಕೋಪಗೊಂಡು, ಯಾಕೆ ಕೂಗಾಡುತ್ತೀರಾ? ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳಿದ್ದೆ. ಈ ವೇಳೆ ನನ್ನ ಜೊತೆಗೆ ಜಗಳ ಆರಂಭಿಸಿದರು. ಬಳಿಕ ಆಟೋದಿಂದ ಇಳಿದು ಅವಾಚ್ಯ ಪದಗಳಿಂದ ನಿಂದಸಿದರು. ಅಷ್ಟೇ ಅಲ್ಲದೆ ಯುವತಿಯೊಬ್ಬಳು ನನಗೆ ಕಪಾಳ ಮೋಕ್ಷ ಮಾಡಿದ್ದಾಳೆ ಎಂದು ಸುರೇಂದ್ರ ಬಾಬು ದೂರಿದ್ದಾರೆ.

    ಈ ಸಂಬಂಧ ಸುರೇಂದ್ರ ಬಾಬು ಅವರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಯುವತಿಯರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

  • ಎಣ್ಣೆ ಅಮಲಿನಲ್ಲಿ ಗಲಾಟೆ ಮಾಡ್ತಿದ್ದ ರೌಡಿಶೀಟರ್ ಬರ್ಬರ ಹತ್ಯೆ

    ಎಣ್ಣೆ ಅಮಲಿನಲ್ಲಿ ಗಲಾಟೆ ಮಾಡ್ತಿದ್ದ ರೌಡಿಶೀಟರ್ ಬರ್ಬರ ಹತ್ಯೆ

    ಬೆಂಗಳೂರು: ಮದ್ಯದ ಅಮಲಿನಲ್ಲಿ ದಿನನಿತ್ಯವೂ ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಬರ್ಬರ ಹತ್ಯೆಗೈದ ಘಟನೆ ನಗರದಲ್ಲಿ ನಡೆದಿದೆ.

    ಕೆಜಿ ಹಳ್ಳಿಯ ಕಾರ್ಪೋರೇಟಿವ್ ಕ್ವಾಟ್ರಸ್ ನಿವಾಸಿ ಸ್ಟೀಫನ್ ರಾಜ್ (40) ಕೊಲೆಯಾದ ರೌಡಿಶೀಟರ್. ಸ್ಟೀಫನ್ ರಾಜ್ ಕುಡಿದ ಅಮಲಿನಲ್ಲಿ ನಿತ್ಯವೂ ಸ್ಥಳೀಯರ ಜೊತೆ ಗಲಾಟೆ ಮಾಡುತ್ತಿದ್ದ. ಹೀಗಾಗಿ ಮಹೇಂದ್ರ ಅಂಡ್ ಟೀಂ ಕೊಲೆ ಮಾಡಿದೆ.

    ಸ್ಟೀಫನ್ ರಾಜ್ ಸ್ನೇಹಿತರಾದ ಕಿರಣ್ ಹಾಗೂ ಮುಗೇಂದ್ರ ಜೊತೆಗೆ ಬುಧವಾರ ತಡರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ. ಆದರೆ ಮನೆಗೆ ಹೋಗದೆ ಪತ್ನಿಗೆ ಕರೆ ಮಾಡಿ, ಬೆಂಗಳೂರಿಗೆ ಬಂದಿರುವುದಾಗಿ ತಿಳಿಸಿದ್ದ. ಇತ್ತ ಭಾವನಿಗೆ ಕರೆ ಮಾಡಿ, ಆಟೋವನ್ನು ತೆಗೆದುಕೊಂಡು ಹೋಗಿದ್ದ. ಈ ವೇಳೆ ಮಹೇಂದ್ರ ಅಂಡ್ ಟೀಂ ಆಟೋವನ್ನು ತಡೆದು ಹಲ್ಲೆ ಮಾಡಿದ್ದಾರೆ.

    ಮಹೇಂದ್ರ ಅಂಡ್ ಟೀಂನಿಂದ ತಪ್ಪಿಸಿಕೊಂಡ ಕಿರಣ್ ಹಾಗೂ ಮುಗೇಂದ್ರ ಸ್ಟೀಫನ್ ಪತ್ನಿಯ ಮನೆಗೆ ಬಂದಿದ್ದರು. ಆಗ ನಮ್ಮ ಪತಿ ಎಲ್ಲಿದ್ದಾರೆ ಎಂದು ಸ್ಟೀಫನ್ ಪತ್ನಿ ವಿಚಾರಿಸಿದ್ದಾಳೆ. ಇಬ್ಬರಿಂದಲೂ ಯಾವುದೇ ಉತ್ತರ ಸಿಗದಿದ್ದಾಗ ಪೊಲೀಸ್ ಕರೆ ಮಾಡುವುದಾಗಿ ಹೆದರಿಸಿದ್ದಾಳೆ. ಸ್ಟೀಫನ್ ಪತ್ನಿ ಮಾತಿನಿಂದ ಗಾಬರಿಗೊಂಡ ಕಿರಣ್ ಹಾಗೂ ಮುಗೇಂದ್ರ ಅಲ್ಲಿಂದ ಪರಾರಿಯಾಗಿದ್ದಾರೆ.

    ಸ್ಟೀಫನ್‍ಗಾಗಿ ಹುಡುಕಾಟ ನಡೆಸಿದಾಗ ಗುರುವಾರ ಬೆಳಗ್ಗೆ 3 ಗಂಟೆಯ ಸುಮಾರಿಗೆ ಆಟೋದಲ್ಲಿ ಶವ ಪತ್ತೆಯಾಗಿದೆ. ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಹಲ್ಲೆ ಮಾಡಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಟೀಫನ್ ಪ್ರಾಣಬಿಟ್ಟಿದ್ದಾನೆ. ಆರೋಪಿಗಳು ಹಾಗೂ ಸ್ಟೀಫನ್ ರಾಜ್ ಸ್ನೇಹಿತರಾದ ಕಿರಣ್, ಮುಗೇಂದ್ರ ತಲೆಮರೆಸಿಕೊಂಡಿದ್ದಾರೆ.

    ಈ ಸಂಬಂಧ ಕೆಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಆತ್ಮಹತ್ಯೆಗೆ ಶರಣಾದ ಪತಿ

    ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಆತ್ಮಹತ್ಯೆಗೆ ಶರಣಾದ ಪತಿ

    ಬಾಗಲಕೋಟೆ: ಕುಡಿತಕ್ಕೆ ಹಣ ಕೊಡದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಪತಿ ಕೊಡಲಿಯಿಂದ ಕೊಚ್ಚಿ ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾದ ಘಟನೆ ಬಾಗಲಕೋಟೆ ತಾಲೂಕಿನ ಸೊಕನಾದಗಿ ಗ್ರಾಮದಲ್ಲಿ ನಡೆದಿದೆ.

    ಸೊಕನಾದಗಿ ಗ್ರಾಮದ ನಿವಾಸಿ ಪರಸಪ್ಪ ಬದ್ನೂರ(38) ತನ್ನ ಪತ್ನಿ ರೇಣವ್ವ ಬದ್ನೂರ(32) ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೊಕನಾದಗಿ ಗ್ರಾಮದ ತೋಟದ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಮಂಗಳವಾರ ಪತಿ ಕುಡಿಯಲು ಹಣ ಕೊಡು ಎಂದು ಪತ್ನಿ ಬಳಿ ಕೇಳಿದ್ದಾನೆ. ಆಗ ಪತ್ನಿ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಕೋಪದ ಕೈಗೆ ಬುದ್ಧಿಕೊಟ್ಟು ಪತ್ನಿಯನ್ನು ಕೊಲೆ ಮಾಡಿದೆ ಎಂದು ಮನನೊಂದು ಮರಕ್ಕೆ ನೇಣು ಹಾಕಿಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಮರದಲ್ಲಿ ನೇತಾಡುತ್ತಿದ್ದ ಪರಸಪ್ಪನ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲೋ ಒಬ್ಬಬ್ರೇ ಬರ್ರೋ- ಎಣ್ಣೆ ನಶೆಯಲ್ಲಿ ಯುವತಿಯ ರಂಪಾಟ

    ಲೋ ಒಬ್ಬಬ್ರೇ ಬರ್ರೋ- ಎಣ್ಣೆ ನಶೆಯಲ್ಲಿ ಯುವತಿಯ ರಂಪಾಟ

    ದಾವಣಗೆರೆ: ಎಣ್ಣೆ ಮತ್ತಿನಲ್ಲಿ ಯುವತಿಯೊಬ್ಬಳು ಬಾರ್ ಮುಂದೆ ರಂಪಾಟ ಮಾಡಿರುವ ಘಟನೆ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ.

    ಬಾರ್‌ವೊಂದರಲ್ಲಿ ಮುಂಭಾಗ ಬಂದು ಯುವತಿ ಎಣ್ಣೆ ನಶೆಯಲ್ಲಿ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲದೇ ಅಲ್ಲಿದ್ದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾಳೆ. ಬಾರ್ ಮುಂಭಾಗವೇ ನೆಲದ ಮೇಲೆ ಕುಳಿತು, ಮಲಗಿ ಒದ್ದಾಡಿದ್ದಾಳೆ.

    ಕೊನೆಗೆ ಯುವತಿಯ ಕಾಟಕ್ಕೆ ರೋಸಿ ಹೋದ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುಷ್ಟರಲ್ಲಿ ಯುವತಿಗೆ ಮೇಲೆ ನೀರು ಸುರಿದು ಎಣ್ಣೆ ನಶೆ ಇಳಿಸಲು ಪ್ರಯತ್ನ ಮಾಡಿದ್ದಾರೆ. ಇತ್ತ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರಿಗೂ ಯುವತಿ ಅವಾಜ್ ಹಾಕಿದ್ದಾಳೆ.

    ಸ್ವಲ್ಪ ಸಮಯದವರೆಗೂ ರಸ್ತೆಯಲ್ಲಿಯೇ ಯುವತಿ ರಂಪಾಟ ಮಾಡಿದ್ದಾಳೆ. ನಂತರ ಪೊಲೀಸರು ಯುವತಿಯನ್ನು ಸಮಾಧಾನ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಯಾರೆಂದು ಇನ್ನೂ ಪತ್ತೆಯಾಗಿಲ್ಲ.

  • ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

    ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

    ಬೆಂಗಳೂರು: ಕೆಲವು ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ಹಾಸ್ಟೆಲ್ ವಾರ್ಡನ್‍ರೊಬ್ಬರು ಹೆಚ್ಚು ಮದ್ಯಪಾನ ಮಾಡಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಹಾಸ್ಟೆಲ್ ವಾರ್ಡನ್ ಆಗಿದ್ದ ದೇವೇಂದ್ರಪ್ಪ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದ್ದ ಕೆಲವು ಸ್ಥಳೀಯ ಪರ್ತಕರ್ತರು ದೇವೇಂದ್ರಪ್ಪಗೆ ಧಮ್ಕಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.

    ನಕಲಿ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ನಡೆಸಿದ್ದಾರೆಂದು ಹಣಕ್ಕಾಗಿ ಮನೆಯ ಬಳಿ ಹೋಗಿ ದೇವೇಂದ್ರಪ್ಪಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಹಣ ನೀಡದಿದ್ದರೆ ಲೋಕಾಯುಕ್ತಗೆ ಪತ್ರ ಬರೆದು ಕೆಲಸದಿಂದ ವಜಾ ಮಾಡಿಸುತ್ತೇವೆಂದು ಧಮ್ಕಿ ಹಾಕುತ್ತಿದ್ದರು.

    ಹದಿನೈದು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಆಗಿ ಆನೇಕಲ್ ತಾಲೂಕಿನಲ್ಲಿ ದೇವೇಂದ್ರಪ್ಪ ಕೆಲಸ ನಿರ್ವಹಿಸುತ್ತಿದ್ದರು. ಈ ಕಿರುಕುಳದ ಬಗ್ಗೆ ದೇವೇಂದ್ರಪ್ಪ ಸ್ನೇಹಿತರು ಹಾಗು ಪತ್ನಿಯ ಬಳಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರತಿದಿನ ಪತ್ರಕರ್ತರು ನೀಡುತ್ತಿದ್ದ ಕಿರುಕುಳಕ್ಕೆ ನೊಂದಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಕೊನೆ ಉಸಿರೆಳೆದಿದ್ದಾರೆ.

    ಸ್ಥಳೀಯ ಪತ್ರಕರ್ತರ ಕಿರುಕುಳದಿಂದ ನೊಂದು ಸಾವನ್ನಪ್ಪಿದ್ದಾರೆಂದು ಹಾಸ್ಟೆಲ್‍ನ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಂದ ಆರೋಪ ಕೇಳಿಬರುತ್ತಿದೆ. ಹಾಗೆಯೇ ದೇವೇಂದ್ರಪ್ಪ ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ ಕುಟುಂಬದವರು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

  • ಮದ್ಯ ಮಾರಾಟದಲ್ಲಿ ಈ ಬಾರಿ ದಾಖಲೆ ಬರೆದ ಮಂಡ್ಯ!

    ಮದ್ಯ ಮಾರಾಟದಲ್ಲಿ ಈ ಬಾರಿ ದಾಖಲೆ ಬರೆದ ಮಂಡ್ಯ!

    * ಅರುಣ್ ಬಡಿಗೇರ್
    ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ. ಇದು ಅಷ್ಟಕ್ಕೂ ನಿಲ್ಲದೆ, ಕುಡುಕರಾದ ಹುಡುಗರಲ್ಲಿ ರಾಜಕೀಯದ ವೈಷಮ್ಯಗಳನ್ನ ಬಿತ್ತಿ, ತಮಗಾಗದವರ ಮೇಲೆ ಹಲ್ಲೆ ಮಾಡಿಸೋದು, ಸೇಡು ತೀರಿಸಿಕೊಳ್ಳೋದನ್ನೆಲ್ಲ ಮಾಡಿಸುತ್ತಿದ್ದಾರೆ ಮಂಡ್ಯದ ಕೆಲ ಜನಪ್ರತಿನಿಧಿಗಳು.

    ಹೇವಿ ಹೀಟ್ ಇದ್ದ ಕ್ಷೇತ್ರ ಅಂದ್ರೆ ಅದು ಮಂಡ್ಯ. ಹಾಗಾಗಿ ನಾವು ಹೆಚ್ಚಾಗಿ ಬುಲೆಟ್‍ನಲ್ಲಿ ಸುತ್ತಾಡಿದ್ದು ಮಂಡ್ಯದಲ್ಲೇ. ಹಳ್ಳಿ ಹಳ್ಳಿಗಳಲ್ಲಿ, ಪಟ್ಟಣ-ತಾಲೂಕುಗಳಲ್ಲಿ ನಾವು ಸಂಚಾರ ನಡೆಸಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದು ಮಾತ್ರ ಶಾಕ್ ಆಗುವಂಥದ್ದು. ಸುಮಾರು 14-16 ವಯಸ್ಸಿನ ಮಕ್ಕಳೆಲ್ಲ ಎಣ್ಣೆ ಹೊಡೆದು ಓಡಾಡ್ತಿದ್ದ ದೃಶ್ಯಗಳು ಕಣ್ಣಿಗೆ ಬಿದ್ವು. ಕೆಲವು ಕಡೆ ಎಣ್ಣೆ ಹೊಡೆದ ಮಕ್ಕಳೆಲ್ಲ ಜಗಳಾಡಿಕೊಂಡು, ಹೊಡೆದಾಡಿಕೊಳ್ತಿದ್ದ ದೃಶ್ಯಗಳು ಕಾಣಿಸಿದ್ವು. ಕೆಲವು ಹುಡುಗರನ್ನ ಹಾಗೇ ಕೇಳಿದಾಗ ನಮ್ಮಪ್ಪನೇ ಕುಡಿಕೊಂಡು ಬರ್ತಾನೆ ನಾನ್ ಕುಡಿದರೇ ತಪ್ಪೇನು? ಅಂತಾ ನಮಗೆ ಪ್ರಶ್ನೆ ಮಾಡಿದ್ದು ಇದೆ. ಇನ್ನೂ ಕೆಲ ಹುಡುಗರು ನಮ್ಮನ್ನ ನೋಡಿ ಎಸ್ಕೇಪ್ ಅಂತಾ ಓಡಿಹೋಗಿದ್ದು ಇದೆ.

    ಕೋತಿಗೆ ಎಣ್ಣೆ ಹೊಡೆಸಿ, ಚೇಳು ಕಡಿಸಿದಂಗೆ:
    ಮೊದಲೇ ಯುವಕರಂದ್ರೆ ಕೋತಿ ವಯಸ್ಸದು. ಅಂಥ ಕೋತಿಗೆ ಎಣ್ಣೆ ಹೊಡೆಸಿ, ಚೇಳು ಕಡಿಸಿದ್ರೆ ಏನಾಗ್ಬಾದ್ರು. ಇಂಥದ್ದೆ ಸ್ಥಿತಿ ಈಗ ಮಂಡ್ಯದಲ್ಲಿದೆ. ರಾಜಕೀಯ ಪಕ್ಷಗಳು ನೇರವಾಗಿ ಟಾರ್ಗೆಟ್ ಮಾಡೋದೆ ಎಣ್ಣೆ ಹೊಡೆಯೋರನ್ನ. ಅದರಲ್ಲೂ ಯುವಕರನ್ನ. ಯುವಕರಿಗೆ ಒಂದಿಷ್ಟು ಎಣ್ಣೆ ಹೊಡೆಸಿ ಬಿಟ್ರೇ ಮುಗಿತು ಅವರನ್ನ ಹಿಡಿಯೋಕೆ ಆಗಲ್ಲ. ಅಂಥದ್ರಲ್ಲಿ ಅವರ ತಲೇಲಿ ದ್ವೇಷ, ರಾಜಕೀಯದ ಜಿದ್ದು ಇಂಥದ್ದೆಲ್ಲ ತುಂಬಿದ್ರೇ ಅವರ ಜೀವನವೇ ಹಾಳಾಗಿ ಹೋಗುತ್ತೆ. ತಿನ್ನೋಕೆ ಕಾಸಿಲ್ಲ ಅಂದ್ರು, ಕುಡಿಯೋಕೆ ಮಾತ್ರ ಅದೆಲ್ಲಿಂದ ಕಾಸು ಬರುತ್ತೋ ಗೊತ್ತಿಲ್ಲ. ಎಣ್ಣೆ ಹೊಡೆದುಕೊಂಡು ತೂರಾಡಿಕೊಂಡು ಓಡಾಡ್ತಾರೆ. ಕೆಲವರ ಬಳಿ ಹೋದ್ರೆ, ಎಣ್ಣೆಯ ಪರಿಮಳವಂತೂ ಘಮಘಮ ಅಂತಾ ರಪಕ್ಕನೆ ಮೂಗಿಗೆ ಬಡಿಯುತ್ತೆ.

    ಬೆಳಗ್ಗೆ ಶುರುವಾಗುತ್ತೆ ಎಣ್ಣೆ ಏಟು:
    ದಿನವಿಡೀ ಕೆಲಸ ಮಾಡಿ ದೇಹ ದಣಿದಾಗ ಕುಡಿಯೋದು ಕೆಲವರಲ್ಲಿ ಮಾಮೂಲು. ಮಜಾ ಮಾಡೋಕೆ ರಾತ್ರಿ ಕುಡಿಯೋರು ಮಾಮೂಲು. ಆದ್ರೆ, ಕೆಲಸ ಇರಲಿ ಬಿಡಲಿ ಬೆಳಿಗ್ಗೆ ಎದ್ದ ತಕ್ಷಣ ಎಣ್ಣೆ ಹೊಡೆಯೋರಿಗೆ ಏನಂತ ಕರೆಯಬೇಕೋ ಗೊತ್ತಿಲ್ಲ. ಇಂಥವರು ಎಲ್ಲೆಡೆ ಸಿಗ್ತಾರೆ ಇಲ್ಲ ಅನ್ನಲ್ಲ. ಅದರಲ್ಲೂ ಈ ಬಾರಿ ಎಲೆಕ್ಷನ್‍ನಲ್ಲಂತೂ ತುಸು ಹೆಚ್ಚಾಗಿಯೇ ಇದ್ದಂತಿತ್ತು. ಒಂದು ಕಡೆ ರಾಜಕೀಯ ಜಿದ್ದಾಜಿದ್ದಿ, ಮಗದೊಂದು ಕಡೆ ದ್ವೇಷದ ಕಿಚ್ಚು, ಇದರ ಮಧ್ಯೆ ಎಣ್ಣೆಯ ಏಟು ಏನೇನೋ ಆಡಿಸಿತ್ತು.

    ಮಂಡ್ಯದಲ್ಲಿ ಈ ವರ್ಷ ಮದ್ಯ ಮಾರಾಟವಾಗಿದೆ?
    ಜನವರಿಯಲ್ಲಿ 51.30 ಲಕ್ಷ ಬಾಕ್ಸ್, 4.43 ಕೋಟಿ ಲೀಟರ್
    ಫೆಬ್ರವರಿಯಲ್ಲಿ 47.61 ಲಕ್ಷ ಬಾಕ್ಸ್, 4.11 ಕೋಟಿ ಲೀಟರ್
    ಮಾರ್ಚ್‍ನಲ್ಲಿ 44.11 ಲಕ್ಷ ಬಾಕ್ಸ್, 3.80 ಕೋಟಿ ಲೀಟರ್
    ಎಪ್ರಿಲ್‍ನಲ್ಲಿ 46.35 ಲಕ್ಷ ಬಾಕ್ಸ್, 4 ಕೋಟಿ ಲೀಟರ್
    (ಒಂದು ಬಾಕ್ಸ್ ನಲ್ಲಿ 180 ಎಂಎಲ್ ಇರುವ ಒಟ್ಟು 48 ಬಾಟಲ್‍ಗಳಿರುತ್ತೆ.)

    ಅಬಕಾರಿ ಇಲಾಖೆ ಕೊಟ್ಟಿರುವ ಈ ಲೆಕ್ಕಾಚಾರದ ಪ್ರಕಾರ 2005 ರಿಂದ ಇಲ್ಲಿಯವರೆಗೆ ಏಪ್ರಿಲ್ ತಿಂಗಳಲ್ಲಿ ಈ ಬಾರಿಯೇ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ಹೆಚ್ಚು ಎಣ್ಣೆ ಮಾರಾಟವಾಗುತ್ತೆ. ಇದಕ್ಕೆ ಪ್ರತಿ ವರ್ಷ ಅಬಕಾರಿ ಇಲಾಖೆ ಬಳಿ ಇರೋ ದಾಖಲೆಗಳೇ ಸಾಕ್ಷಿ. 2005ರಲ್ಲಿ ಒಂದು ವರ್ಷಕ್ಕೆ, 1 ಕೋಟಿ 44 ಲಕ್ಷ ಬಾಕ್ಸ್ ಗಳು ಮಾರಾಟವಾಗುತ್ತಿದ್ದರೆ, ಅದೇ 2018ರಲ್ಲಿ 5 ಕೋಟಿ 69 ಲಕ್ಷ ಬಾಕ್ಸ್ ಗಳು ಮಾರಾಟವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಮದ್ಯದ ಮಾರಾಟ ಪ್ರಮಾಣದ ಗುರಿಯನ್ನು ವರ್ಷದಿಂದ ವರ್ಷಕ್ಕೆ ಸರಕಾರ ಹೆಚ್ಚಿಸುತ್ತಲೇ ಇದೆ. ಹೀಗಾಗಿ ಪ್ರತಿ ವರ್ಷವೂ ಮದ್ಯ ಮಾರಾಟ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅದರಲ್ಲೂ 2018ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ, ಲೋಕಸಭೆ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ನಾನಾ ಕಾರಣಗಳಿಂದ ತೆರವಾದ ಕಾರಣಕ್ಕೆ ನಡೆದ ತಾ.ಪಂ., ಗ್ರಾ.ಪಂ. ಉಪ ಚುನಾವಣೆ ಪರಿಣಾಮ ಹಿಂದಿನ ವರ್ಷಕ್ಕಿಂತ ಹೆಚ್ಚು ಮದ್ಯ ಮಾರಾಟವಾಗಿತ್ತು.

    ಎಷ್ಟು ಅಂಗಡಿಗಳಿವೆ?
    ಮಂಡ್ಯ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕಾಗಿ ವಿವಿಧ ವರ್ಗದ ಒಟ್ಟು 256 ಲೈಸೆನ್ಸ್ ನೀಡಲಾಗಿದೆ. ಕೆ.ಆರ್.ಪೇಟೆಯಲ್ಲಿ 34, ಮದ್ದೂರಿನಲ್ಲಿ 48, ಮಳವಳ್ಳಿಯಲ್ಲಿ 33, ಮಂಡ್ಯದಲ್ಲಿ 62, ನಾಗಮಂಗಲದಲ್ಲಿ 27, ಪಾಂಡಪುರದಲ್ಲಿ 18 ಹಾಗೂ ಶ್ರೀರಂಗಪಟ್ಟಣದಲ್ಲಿ 35 ಲೈಸೆನ್ಸ್ ಹೊಂದಿರೋ ಬಾರ್ ಆಂಡ್ ರೆಸ್ಟೋರೆಂಟ್‍ಗಳಿವೆ. ಇವೆಲ್ಲ ಲೈಸೆನ್ಸ್ ಹೊಂದಿರೋ ಮದ್ಯ ಮಾರಾಟದ ಕೇಂದ್ರಗಳು. ಆದ್ರೆ, ಲೈಸೆನ್ಸ್ ಇಲ್ಲದೆ, ಹಳ್ಳಿ ಹಳ್ಳಿಗಳಲ್ಲಿ ಕದ್ದು ಮುಚ್ಚಿ ಮಾರಾಟ ಮಾಡೋ ಕೇಂದ್ರಗಳು ಅಲ್ಲಲ್ಲಿ ಸಿಗುತ್ವೆ. ಕೆಲವು ಹೋಟೆಲ್‍ಗಳಂತೂ ಅನಧಿಕೃತವಾಗಿ ಬಾರ್ ಆಂಡ್ ರೆಸ್ಟೋರೆಂಟ್‍ಗಳಾಗಿವೆ. ಇಲ್ಲಿ ಹೇಳೋರು ಕೇಳೋರು ಇದ್ದಾರೋ ಇಲ್ವೋ ಗೊತ್ತಿಲ್ಲ. ಇದನ್ನೆಲ್ಲ ನಿಲ್ಲಿಸಬೇಕಾದ ಪೊಲೀಸರು ಹಲವು ಕಡೆ ಶಾಮೀಲಾಗಿದ್ದಾರೆ. ಕೆಲ ಪೊಲೀಸರಿಗೆ ಒತ್ತಡಗಳು, ಬೆದರಿಕೆಗಳು ಮಂಡ್ಯದಲ್ಲಿವೆ.

    ಒಂದೆಡೆ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಮದ್ಯ ಸೇವನೆ ಮಾಡಬೇಡಿ’ ಎನ್ನುವ ಸರಕಾರ ಮತ್ತೊಂದೆಡೆ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ. ಯಾಕಂದ್ರೆ, ಸರಕಾರಗಳ ಪ್ರಮುಖ ಆದಾಯದ ಮೂಲಗಳಲ್ಲಿ ಅಬಕಾರಿ ಸುಂಕವೂ ಒಂದು. ಆದ್ರೆ, ಇದರಿಂದಾಗಿ ಮಂಡ್ಯದಲ್ಲಿ ಆಗ್ತಿರೋ ದುಷ್ಪರಿಣಾಮದ ಬಗ್ಗೆ ಯಾವ ನಾಯಕರಿಗೂ ಅರಿವು ಇದ್ದಂತಿಲ್ಲ.

  • ಮಂಡ್ಯದಲ್ಲಿ ಹಣದ ಜೊತೆ ಹರಿದಿದೆ ಮದ್ಯದ ಹೊಳೆ!

    ಮಂಡ್ಯದಲ್ಲಿ ಹಣದ ಜೊತೆ ಹರಿದಿದೆ ಮದ್ಯದ ಹೊಳೆ!

    ಬೆಂಗಳೂರು: ಮಂಡ್ಯದಲ್ಲಿ ಹಣದ ಜೊತೆಗೆ ಮದ್ಯದ ಹೊಳೆಯೂ ಹರಿದಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಂಡ್ಯ ಚುನಾವಣಾ ರಣಕಣದಲ್ಲಿ ಮೊದಲಲ್ಲ, ಮದ್ಯ ಪ್ರಿಯರ ಲಿಸ್ಟ್ ನಲ್ಲೂ ಮೊದಲಂತೆ. ಬಾಡೂಟ, ಬಾಟಲ್‍ನ ಸರ್ಕ್ಯೂಲೇಷನ್ ಲೀಡ್ ಲಿಸ್ಟ್ ನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಇದೆ. ದಶಕದಲ್ಲಿಯೇ ಮೊದಲ ಬಾರಿಗೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮದ್ಯ ಮಾರಾಟ ಆಗಿದೆ ಎನ್ನಲಾಗಿದೆ.

    ಹಣದ ಹೊಳೆಯ ನಡುವೆ ಅಭ್ಯರ್ಥಿಗಳು ಮದ್ಯದ ಹೊಳೆಯನ್ನು ಹರಿಸಿದ್ದಾರೆ. ಈ ಮೂಲಕ 14 ವರ್ಷದ ದಾಖಲೆಯನ್ನು ಚಿಂದಿ ಉಡಾಯಿಸಿದೆ. ಅಭ್ಯರ್ಥಿಗಳು ಬೆಂಬಲಿಗರಿಗೆ ತಲಾ 300 ರೂ. ಬಿರಿಯಾನಿ ಊಟ, ಡ್ರಿಂಕ್ಸ್ ನ ಟ್ರೆಟ್ರಾ ಪ್ಯಾಕ್‍ನ ಪರಿಣಾಮವಾಗಿ 46.35 ಲಕ್ಷ ಲೀಟರ್ ಎಣ್ಣೆ ಮಾರಾಟ ಆಗಿದೆ. ಅದರಲ್ಲಿ 180 ಎಂಎಲ್ ಇರುವ ಟ್ರೆಟ್ರಾ ಪ್ಯಾಕ್‍ಗಳೇ ಹೆಚ್ಚು ಮಾರಾಟ ಆಗಿದೆ ಎಂಬುದಾಗಿ ತಿಳಿದುಬಂದಿದೆ.

    2019 ಫೆಬ್ರವರಿಯಂದು 44.61 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಮಾರ್ಚ್ 2019ರಲ್ಲಿ 44.11 ಲಕ್ಷ ಲೀಟರ್ ಸೇಲ್ ಆಗಿದ್ದು, 2019 ಏಪ್ರಿಲ್‍ನಲ್ಲಿ 46.36 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಅಂದರೆ ಏಪ್ರಿಲ್ ತಿಂಗಳಲ್ಲಿ ಸುಮಾರು 34 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.