Tag: alcohol

  • ಹೆಣ್ಣು ವೇಷವೆಂದ್ರೆ ಸ್ವಾಮೀಜಿಗೆ ಸಿಕ್ಕಾಪಟ್ಟೆ ಇಷ್ಟ- ತುಂಡು ಬಟ್ಟೆಯಲ್ಲಿ ಮಾಡ್ತಾನೆ ನಂಗಾನಾಚ್

    ಹೆಣ್ಣು ವೇಷವೆಂದ್ರೆ ಸ್ವಾಮೀಜಿಗೆ ಸಿಕ್ಕಾಪಟ್ಟೆ ಇಷ್ಟ- ತುಂಡು ಬಟ್ಟೆಯಲ್ಲಿ ಮಾಡ್ತಾನೆ ನಂಗಾನಾಚ್

    – ಮಠದಲ್ಲಿ ಸೇವೆ ಮಾಡುವ ಗಂಡು ಮಕ್ಕಳ ಮೇಲೆ ಲೈಂಗಿಕ ಕಿರುಕುಳ

    ಮೈಸೂರು: ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠದ ಈ ಸ್ವಾಮಿಜಿಗೆ ಹೆಣ್ಣು ವೇಷವೇ ಅತಿ ಇಷ್ಟವಾಗಿದ್ದು, ತುಂಡು ಬಟ್ಟೆಯಲ್ಲಿ ನಂಗಾನಾಚ್ ಮಾಡಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದ್ದಾನೆ. ಜೊತೆಗೆ ಮಠದಲ್ಲಿ ಸೇವೆಗೆಂದು ಗಂಡು ಮಕ್ಕಳನ್ನು ಇರಿಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾನೆ ಎಂಬ ಆರೋಪ ಸ್ವಾಮಿ ಮೇಲೆ ಕೇಳಿಬರುತ್ತಿದೆ.

    ಅಷ್ಟಕ್ಕೂ ಈ ಸ್ವಾಮೀಜಿ ಬೇರೆ ಯಾರೂ ಅಲ್ಲ. ಈ ಹಿಂದೆ ಬಾಗಲಕೋಟೆಯಿಂದ ಜನರು ಓಡಿಸಿದ್ದ ವಿದ್ಯಾಹಂಸ ಭಾರತಿ ಸ್ವಾಮೀಜಿ. ಹೌದು, ಮೈಸೂರಿನ ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠವಿದೆ. ಈ ಮಠದ ಪೀಠಾಧ್ಯಕ್ಷನಾಗಿರುವ ವಿದ್ಯಾಹಂಸ ಭಾರತಿ ಸ್ವಾಮೀಜಿ ಎಲ್ಲಿ ಹೋದರು ಅಲ್ಲಿ ಇರಲು ಜನರು ಬಿಡುವುದಿಲ್ಲ. ಯಾಕೆಂದರೆ ಆತ ತೊಡುವ ವೇಷಭೂಷಣ, ವರ್ತಿಸುವ ರೀತಿ ವಿಚಿತ್ರವಾಗಿದೆ. ಆತನ ವರ್ತನೆಯನ್ನು ನೋಡಿ ಸ್ವಾಮೀಜಿಯನ್ನು ಜನ ತಮ್ಮ ಊರಿನಿಂದ ಓಡಿಸುತ್ತಾರೆ. ಈ ಬಾರಿ ನಂಗಾನಾಜ್ ಮಾಡಿ ಸ್ವಾಮೀಜಿ ಸಖತ್ ಫೇಮಸ್ ಆಗಿದ್ದಾನೆ. ಮೈ ಮೇಲೆ ಒಂದು ತುಂಡು ಬಟ್ಟೆ ಸುತ್ಕೊಂಡು ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

    ಮೈಸೂರಿನಲ್ಲೂ ಡ್ಯಾನ್ಸ್ ಮಾಡಿ ಪೇರಿ ಕಿತ್ತಿದ್ದ ಈತ, ಬಾಗಲಕೋಟೆಯಲ್ಲೂ ಪೂಜೆ ಮಾಡೋದಕ್ಕೆ ಹೋಗಿ ಅಲ್ಲಿನ ಜನರ ಓಡಿಸಿದ್ದರು. ಚಿಕ್ಕಸಂಗಮದಲ್ಲಿ ಪ್ರತ್ಯಂಗಿರಾ ಹೋಮ, ಹವನ ಹೆಸರಿನಲ್ಲಿ ಗ್ರಾಮಸ್ಥರಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದ, ಹಾಗೆಯೇ ದೊಡ್ಡ ದೊಡ್ಡ ಸ್ವಾಮೀಜಿಗಳು, ಗಣ್ಯವ್ಯಕ್ತಿಗಳ ಜೊತೆಗಿನ ಭಾವಚಿತ್ರ ತೋರಿಸಿ ನಂಬುವಂತೆ ಗ್ರಾಮಸ್ಥರ ತಲೆ ಕೆಡಿಸಿದ್ದ. ಆದರೆ ಆತನ ವಿಚಿತ್ರ ವರ್ತನೆ ನೋಡಿ ಅಲ್ಲಿಂದ ಜನ ಓಡಿಸಿದ್ದರು. ಆದರೆ ಈಗ ಈ ಸ್ವಾಮೀಜಿ ನಂಗಾನಾಚ್ ನಿಂದ ಫೇಮಸ್ ಆಗಿದ್ದಾನೆ.

    ತುಂಡು ಬಟ್ಟೆಯಲ್ಲಿ ಹಿಂದಿ ಹಾಡು, ಮದ್ಯ ಕುಡಿಯುತ್ತ ನಂಗಾನಾಚ್ ಮಾಡುತ್ತಾನೆ. ಮದ್ಯ ಇಟ್ಕೊಂಡು ಕುಣಿದು ಕುಪ್ಪಳಿಸೋ ಸ್ವಾಮಿಜಿಯ ಮೇಲೆ ಮತ್ತೊಂದು ಆರೋಪವೂ ಇದೆ. ಗಂಡು ಮಕ್ಕಳನ್ನು ಸೇವೆಗೆ ಇಟ್ಟುಕೊಳ್ಳುವ ಈತ ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಇಟ್ಟುಕೊಂಡಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಮನೆ ಮಠ ಬಿಟ್ಟು ಬರುವ ಗಂಡು ಮಕ್ಕಳು ಅವನ ಜೊತೆಯಲ್ಲಿಯೇ ಇರಬೇಕು. ಮನೆಗೆ ವಾಪಸ್ಸು ಹೋಗುವ ಹಾಗೇ ಇಲ್ಲ. ಇದೇ ರೀತಿ ಅದೇಷ್ಟೋ ಕುಟುಂಬಗಳು ಮಕ್ಕಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಾ ಇದ್ದಾರೆ.

    ಸೇವೆಯ ನೆಪದಲ್ಲಿ ಆತ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸುತ್ತಾನೆ ಎನ್ನಲಾಗಿದೆ. ಭಕ್ತರೊಬ್ಬರ ಪತ್ನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೂಡ ಇತನ ಮೇಲಿದೆ. ಈ ಬಗ್ಗೆ ಭಕ್ತನ ಪತ್ನಿಯೇ ದೂರು ನೀಡಿ ಬಂಧನವಾಗುವಂತೆ ಮಾಡಿದ್ದರು. ಆದರೆ ಜಾಮೀನಿನ ಮೇಲೆ ಈ ಸ್ವಾಮೀಜಿ ಹೊರಗೆ ಬಂದಿದ್ದಾನೆ.

  • ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ರಾತ್ರಿ ಪತ್ನಿಯ ಶವದ ಪಕ್ಕ ಮಲಗಿದ ಪತಿ

    ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ರಾತ್ರಿ ಪತ್ನಿಯ ಶವದ ಪಕ್ಕ ಮಲಗಿದ ಪತಿ

    ಬಳ್ಳಾರಿ: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಂದ ಪತಿ ರಾತ್ರಿ ಪೂರ್ತಿ ಪತ್ನಿಯ ಶವದ ಪಕ್ಕವೇ ಮಲಗಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ.

    ಕೊಲೆ ಮಾಡಿದ ಪತಿಯನ್ನು ವ್ಯಾಚ್ಯಾ ನಾಯ್ಕ್ ಎಂದು ಗುರುತಿಸಲಾಗಿದೆ. ತಡರಾತ್ರಿ ತನ್ನ ಪತ್ನಿ 40 ವರ್ಷದ ಜ್ಯೋತಿ ಬಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ನಾಯ್ಕ್ ರಾತ್ರಿ ಪೂರ್ತಿ ತನ್ನ ಹೆಂಡತಿಯ ಶವದ ಪಕ್ಕವೇ ಮಲಗಿದ್ದಾನೆ.

    ಕೊಲೆಯಾದ ಮಹಿಳೆ ಕೂಲಿ ಕೆಲಸ ಮಾಡುತ್ತಿದ್ದು, ವ್ಯಾಚ್ಯಾ ನಾಯ್ಕ್ ಕೂಡ ಕೂಲಿ ಕೆಲಸ ಮಾಡುತ್ತಿದ್ದ. ಆದರೆ ಪ್ರತಿ ದಿನ ರಾತ್ರಿ ಕುಡಿದು ಬಂದು ಜಗಳವಾಡುತ್ತಿದ್ದ ನಾಯ್ಕ್, ತಡ ರಾತ್ರಿ ತನಗೆ ಅರಿವೇ ಇಲ್ಲದ ರೀತಿಯಲ್ಲಿ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿ ಮೃತ ದೇಹದ ಪಕ್ಕವೇ ರಾತ್ರಿ ಪೂರ್ತಿ ಮಲಗಿದ್ದಾನೆ. ಈ ಸಂಬಂಧ ಹಿರೇ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

  • ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

    ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

    ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿ ಇರುವ ಗಾಂಧಿ ಪಾರ್ಕ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.

    ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಇರುವ ಪಾರ್ಕಿನಲ್ಲಿ ನಡೆವ ಚಟುವಟಿಕೆಗಳ ಬಗ್ಗೆ ವ್ಯಾಪಕವಾದ ದೂರುಗಳು ಇದ್ದರೂ ಖಚಿತವಾದ ಆಧಾರ ಇರಲಿಲ್ಲ. ಈಗ ಈ ಪಾರ್ಕಿನಲ್ಲಿ ಒಂದಷ್ಟು ಜನ ಹುಡುಗಿಯರು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಮೂರ್ನಾಲ್ಕು ಜನ ಹುಡುಗಿಯರು ಹಾಗೂ ಹುಡುಗರು ಗಾಂಧಿ ಪಾರ್ಕಿನಲ್ಲಿ ಇರುವ ಕಟ್ಟೆ ಮೇಲೆ ಬೀರ್ ಬಾಟಲುಗಳನ್ನು ಇಟ್ಟುಕೊಂಡು ಕುಡಿದಿದ್ದಾರೆ. ಅಷ್ಟೇ ಅಲ್ಲದೆ ಕೇಕೆ ಹಾಕುತ್ತಾ ಅದನ್ನು ವಿಡಿಯೋ ಮಾಡಿದ್ದಾರೆ. ಬಹಿರಂಗವಾಗಿ ಹಾಡಹಗಲೇ ಎಣ್ಣೆ ಹಾಕಿದ ಈ ಯುವತಿಯರ ಕೃತ್ಯ ಗಂಭೀರವಾಗಿದೆ.

    ಈ ವಿಡಿಯೋ ಪಾರ್ಕಿಗೆ ವಾಕಿಂಗ್‍ಗಾಗಿ ಬರುವ ಸಭ್ಯಸ್ಥರಿಗೆ ಶಾಕ್ ನೀಡಿದೆ. ಇಂತಹ ಅನೇಕ ಘಟನೆಗಳಿಗೆ ಗಾಂಧಿ ಪಾರ್ಕ್ ಕೇಂದ್ರವಾಗಿದೆ. ಆದರೆ ಈ ಬಗ್ಗೆ ಮಹಾನಗರ ಪಾಲಿಕೆ ಜಾಣ ಮೌನ ತೋರುತ್ತಿದೆ.

  • ಅಕ್ರಮ ಸಂಬಂಧಕ್ಕೆ ಅಡ್ಡಿ- ಪ್ರಿಯತಮೆಯ ಗಂಡನನ್ನೇ ಕೊಲೆ ಮಾಡಿದ ಪ್ರಿಯತಮ

    ಅಕ್ರಮ ಸಂಬಂಧಕ್ಕೆ ಅಡ್ಡಿ- ಪ್ರಿಯತಮೆಯ ಗಂಡನನ್ನೇ ಕೊಲೆ ಮಾಡಿದ ಪ್ರಿಯತಮ

    ಬಳ್ಳಾರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಗಂಡನನ್ನೇ ಮಚ್ಚಿನಿಂದ ಕೊಚ್ಚಿ ಪ್ರಿಯಕರ ಕೊಲೆ ಮಾಡಿದ ಘಟನೆಯೊಂದು ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಗಂಡನನ್ನು 33 ವರ್ಷದ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಹನುಮಂತಪ್ಪನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಾರಕನಾಳ ಗ್ರಾಮದ ಹನುಮಂತಪ್ಪ ಎನ್ನುವ ವ್ಯಕ್ತಿ ತಡ ರಾತ್ರಿ ಮದ್ಯಪಾನ ಮಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಈ ಇಬ್ಬರು ಹನುಮಂತಪ್ಪರು ಶನಿವಾರ ರಾತ್ರಿ ಹಿರೇಹಡಗಲಿ ಗ್ರಾಮದ ವೈನ್ ಶಾಪ್‍ನಲ್ಲಿ ಕುಡಿದು ರಾತ್ರಿ ಮನೆಗೆ ಮರಳುವ ಸಂದರ್ಭದಲ್ಲಿ ತುಂಬಿನಕೇರಿ ಗ್ರಾಮದ ಬಳಿಯ ಹಳ್ಳದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ಇಬ್ಬರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾಗಿರುವ ಹನುಮಂತಪ್ಪನಿಗೆ ಕಂಠಪೂರ್ತಿ ಕುಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

    ಈ ಸಂಬಂಧ ಆರೋಪಿ ಹನುಮಂತಪ್ಪನನ್ನು ವಶಕ್ಕೆ ಪಡೆದಿರುವ ಹಿರೇಹಡಗಲಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ – ಎಣ್ಣೆಗೂ ಆಧಾರ್ ಕಾರ್ಡ್ ಕಡ್ಡಾಯ

    ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ – ಎಣ್ಣೆಗೂ ಆಧಾರ್ ಕಾರ್ಡ್ ಕಡ್ಡಾಯ

    ಬೆಂಗಳೂರು: ಮದ್ಯಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದ್ದು, ಮದ್ಯ ಖರೀದಿಗೆ ಇನ್ಮುಂದೆ ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು ಎಂದು ಹೇಳಲಾಗುತ್ತಿದೆ.

    ಬಾರ್ ನಲ್ಲಿ ಎಣ್ಣೆ ತೆಗೆದುಕೊಳ್ಳಬೇಕು ಎಂದರೆ ಕಡ್ಡಾಯವಾಗಿ ಅಧಾರ್ ಕಾರ್ಡ್ ತೋರಿಸಬೇಕು. ಮದ್ಯ ತಗೊಂಡು ಹೋಗಿ ಕುಡಿದು ಎಲ್ಲಾದ್ರಲ್ಲಿ ಖಾಲಿ ಬಾಟಲ್ ಎಸೆದರೆ, ಆ ಬಾಟಲ್ ಮೇಲಿರುವ ಬಾರ್ ಕೋಡ್ ಆಧಾರದ ಮೇಲೆ ಇದು ಯಾವ ಬಾರಿನಲ್ಲಿ ಮಾರಾಟವಾಗಿದೆ, ಆ ಬಾರಲ್ಲಿ ಮದ್ಯ ತಗೊಂಡು ಹೀಗೆ ಬಿಸಾಕಿದ ವ್ಯಕ್ತಿ ಯಾರು ಎನ್ನುವುದನ್ನು ಆಧಾರ್ ಕಾರ್ಡ್ ಅಧಾರದ ಮೇಲೆ ಕಂಡು ಹಿಡಿದು ಬಾರ್ ನವನಿಗೂ, ಕುಡಿದವನಿಗೂ ಇಬ್ಬರಿಗೂ ಫೈನ್ ಹಾಕುತ್ತಾರೆ.

    ಮಂಗಳೂರಿನ ರಾಷ್ಟ್ರೀಯ ಪರಿಸರ ಒಕ್ಕೂಟ ಎನ್ನುವ ಎನ್‍ಜಿಓ ಈ ರೀತಿಯ ಮನವಿ ಇರುವ ಪತ್ರವನ್ನು ಮಂಡ್ಯದ ಮಳವಳ್ಳಿ ಅಬಕಾರಿ ಇಲಾಖೆ ಬರೆದಿದೆ. ಅಬಕಾರಿ ಇಲಾಖೆಯಿಂದ ಸರ್ಕಾರ ಸಾಕಷ್ಟು ದುಡ್ಡು ಮಾಡುತ್ತೆ, ಕುಡುಕರ ಕ್ಷೇಮಾಭಿವೃದ್ಧಿಗೆ ಹಣ ಮೀಸಲಿಡಬೇಕು. ಕುಡಿದು ಅನಾರೋಗ್ಯಕ್ಕೆ ತುತ್ತಾದರೆ ಸರ್ಕಾರ ಉಚಿತ ಚಿಕಿತ್ಸೆ ಕೊಡಿಸೋದರ ಜೊತೆಗೆ ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕು ಎಂದು ಪತ್ರ ಬರೆದಿದೆ.

    ಈ ಪತ್ರಕ್ಕೆ ಪ್ರತಿಕ್ರಿಯಿಸಿದ, ರಾಜ್ಯ ಅಬಕಾರಿ ಇಲಾಖೆಯ ಆಯುಕ್ತ ಯಶವಂತ್ ಈ ರೀತಿಯ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ, ಇದೆಲ್ಲಾ ಮಾಡುವುದ್ದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  • ಕುಡಿದ ಮತ್ತಿನಲ್ಲಿ ಯುವಕರ ದಾಂಧಲೆ- ಬಾರ್ ಮುಂದೆ ಕಲ್ಲು ತೂರಾಟ

    ಕುಡಿದ ಮತ್ತಿನಲ್ಲಿ ಯುವಕರ ದಾಂಧಲೆ- ಬಾರ್ ಮುಂದೆ ಕಲ್ಲು ತೂರಾಟ

    ಕಾರವಾರ: ಕುಡಿದ ಮತ್ತಿನಲ್ಲಿ ಯುವಕರಿಂದ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ದಾಂಧಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ.

    ಈ ಘಟನೆ ರತ್ನಾಸ್ ಹಾಲಿಡೇಸ್ ರೆಸ್ಟೋರೆಂಟ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಕಲ್ಲು ತೂರಾಡಿ, ಕಾರಿನ ಗಾಜು ಒಡೆದು ದಾಂಧಲೆ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕರು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಕಾರವಾರದ ಸಮೀರ್ ನಾಯ್ಕ ಮತ್ತು ಅಮೋಘ ಎನ್ನುವ ಯುವಕರೇ ಕೃತ್ಯ ನಡೆಸಿದವರು ಎಂದು ತಿಳಿದುಬಂದಿದ್ದು, ಇವರ ವಿರುದ್ಧ ರೆಸ್ಟೋರೆಂಟ್ ಮ್ಯಾನೇಜರ್ ಸಂತೋಷ್ ಅವರು ದೂರು ನೀಡಿದ್ದಾರೆ. ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ – ಸುದೀಪ್

    ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ – ಸುದೀಪ್

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುವ ಸುದೀಪ್ ಬಹಳ ಅರ್ಥಗರ್ಭಿತವಾದ ವಾಕ್ಯವನ್ನು ಟ್ವೀಟ್ ಮಾಡಿದ್ದಾರೆ.

    “ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ” ಎಂದು ಬರೆದಿರುವ ಸಾಲನ್ನು ನಾನು ಓದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ತಮ್ಮ ಚಿತ್ರವಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ “ನಾನು ಹೋರಾಟ ಮಾಡಬೇಕು ಎನ್ನುವ ಕಾರಣಕ್ಕೆ ಹೋರಾಟ ಮಾಡುವುದಿಲ್ಲ. ಎದುರಾಳಿಯೊಬ್ಬ ಅರ್ಹನಿದ್ದರೆ ಮಾತ್ರ ಅಖಾಡಕ್ಕೆ ಇಳಿಯುತ್ತೇನೆ” ಎನ್ನುವ ವಾಕ್ಯವಿದೆ. ಇಂದು ಮಧ್ಯಾಹ್ನ 1:48ಕ್ಕೆ ಸುದೀಪ್ ಪೈಲ್ವಾನ್ ಕಿಚ್ಚಾ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಿನ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಅಭಿಮಾನಿಯೊಬ್ಬರು ನಿಜವಾದ ಗಂಡಸಿಗೆ ಅಲ್ಕೋಹಾಲ್ ಬೇಕಿಲ್ಲ. ಯಾಕೆಂದರೆ ಕಿಚ್ಚನ ಅಭಿಮಾನಿಗಳು ಕಿಚ್ಚನ ವ್ಯಸನಿಗಳಾಗಿದ್ದೇವೆ. ಈಗ ಪೈಲ್ವಾನ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೇವೆ ಎಂದು ಬರೆದು ಪ್ರತಿಕ್ರಿಯಿಸಿದ್ದಾರೆ.

    ಪೈಲ್ವಾನ್ ಆಗಸ್ಟ್ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಈ ಹಿಂದೆ `ಪೈಲ್ವಾನ್’ ಸಿನಿಮಾ ಆಗಸ್ಟ್ 8 ಅಂದರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಅದೇ ದಿನ ನಟ ದರ್ಶನ್ ಅಭಿನಯದ `ಕುರುಕ್ಷೇತ್ರ’ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದರು. ಹೀಗಾಗಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಸಮಸ್ಯೆಯಾಗುತ್ತದೆ ಎಂದು `ಕುರುಕ್ಷೇತ್ರ’ ಸಿನಿಮಾವನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿತ್ತು. ಪೈಲ್ವಾನ್ ಸಿನಿಮಾ ನಟ ಸುದೀಪ್, ಕಬೀರ್ ಸಿಂಗ್ ದುಹಾನ್, ಆಕಾಂಕ್ಷ ಸಿಂಗ್ ಮತ್ತು ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

  • ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಕೊಲೆ

    ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಕೊಲೆ

    ನವದೆಹಲಿ: ಮದ್ಯಪಾನ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಇಬ್ಬರು ಯುವಕರು ಸೇರಿ ನೆರೆಯ ಮನೆಯ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನವದೆಹಲಿಯ ಶಕುರ್ಪುರದಲ್ಲಿ ನಡೆದಿದೆ.

    ಮದ್ಯ ಖರೀದಿಸಲು ಹಣ ನೀಡದ ಚಂದರ್ ಖಾನ್‍ನನ್ನು ಶಕುರ್ಪುರದ ನಿವಾಸಿಗಳಾದ ಗಿರಿ ರಾಜ್ ಮತ್ತು ಪವನ್ ಕತ್ತು ಹಿಸುಕಿ ಹತ್ಯೆ ಮಾಡಿ ಜಿಲ್ಲಾ ಉದ್ಯಾನವನದ ಪೊದೆಯೊಳಗೆ ಎಸೆದು ಹೋಗಿದ್ದಾರೆ.

    ಪಾರ್ಕಿನಲ್ಲಿ ಮೃತ ದೇಹವೊಂದನ್ನು ಕಂಡು ತನಿಖೆ ಆರಂಭ ಮಾಡಿದ ಪೊಲೀಸರು ಮೃತ ಚಂದರ್ ಖಾನ್ ಅವರ ಸಹೋದರಿ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಚಂದರ್ ಖಾನ್ ಹತ್ತಿರ ಮದ್ಯ ಖರೀದಿಸಲು ಹಣ ಕೇಳಿದ್ದಾರೆ. ಈ ವೇಳೆ ಹಣ ಕೊಡಲು ನಿರಾಕರಿಸಿದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಚಂದರ್ ಖಾನ್ ಸಹೋದರಿ ನೀಡಿದ ಮಾಹಿತಿ ಮೇರೆಗೆ ಈಗ ಇಬ್ಬರನ್ನು ಬಂಧಿಸಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

  • ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕ – ಡಿಸಿಯಿಂದ ಅಮಾನತು

    ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕ – ಡಿಸಿಯಿಂದ ಅಮಾನತು

    ರಾಯ್ಪುರ: ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿರುವ ಘಟನೆ ಛತ್ತೀಸ್‍ಗಢದ ಆಶ್‍ಪುರದಲ್ಲಿ ನಡೆದಿದೆ.

    ಆಶ್‍ಪುರ ಜಿಲ್ಲೆಯ ತುರಾಂಗ್‍ಖಾರ್ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಶಾಲೆಗೆ ಮದ್ಯಪಾನ ಮಾಡಿಕೊಂಡು ಬಂದು ಮಕ್ಕಳಿಗೆ ಪಾಠ ಮಾಡದೇ ತರಗತಿಯಲ್ಲಿ ಮಲಗಿದ್ದ.

    ಕುಡಿದು ಶಾಲೆಗೆ ಬಂದಿದ್ದ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೇ ಮಾಲಗಿದ್ದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ನಂತರ ಅವನನ್ನು ಎಬ್ಬಿಸಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮದ್ಯಪಾನ ಮಾಡಿಲ್ಲ ಎಂದು ಹೇಳಿದ್ದಾನೆ. ಈಗ ಈ ವಿಚಾರವಾಗಿ ಸ್ಥಳೀಯರು ಮಕ್ಕಳ ಬಳಿ ಮಾಹಿತಿ ಪಡೆದು ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನರು ಒತ್ತಾಯ ಮಾಡಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಶಿಕ್ಷಣಾಧಿಕಾರಿ ಬಾಲಾ ರಾಮ್ ಧ್ರುವ ಈ ಘಟನೆಯ ಬಗ್ಗೆ ಪ್ರಸ್ತುತ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಬಂದಲ್ಲಿ ಅ ವರದಿಯ ಆಧಾರದ ಮೇಲೆ ಅ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

  • ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

    ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

    ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಉತ್ತರಾಖಂಡ್‍ನ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದು, ನಾಲ್ಕೈದು ಗನ್ ಹಿಡಿದುಕೊಂಡು ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣದ ನಂತರ ಪ್ರಧಾನಿ ಮೋದಿ ಅವರು ಎಲ್ಲ ಜನಪ್ರತಿನಿಧಿಗಳು ಶಿಸ್ತಿನಿಂದ ವರ್ತಿಸಬೇಕು. ಅಶಿಸ್ತು ಹಾಗೂ ದುರ್ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೆಲ ನಾಯಕರು ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಿದ್ದು, ಉತ್ತರಾಖಂಡ ಶಾಸಕರೊಬ್ಬರು ಇದೀಗ ನಾಲ್ಕೈದು ಗನ್‍ಗಳನ್ನು ಹಿಡಿದುಕೊಂಡು ಅಶ್ಲೀಲ ಶಬ್ದಗಳಿಂದ ಬೈಯ್ಯುವ ಮೂಲಕ ವಿಚಿತ್ರವಾಗಿ ವರ್ತಿಸಿದ್ದಾರೆ.

    ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯ್ಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮಧ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ್ದಾರೆ. ಶಾಸಕರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕುರಿತು ಎಚ್ಚರ ವಹಿಸಿದ್ದು, ಗನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಬಿಜೆಪಿ ಸಹ ಈ ಕುರಿತು ಖಂಡನೆ ವ್ಯಕ್ತಪಡಿಸಿದ್ದು, ಶಾಸಕನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

    ನಾನು ಈ ವಿಡಿಯೋವನ್ನು ಗಮನಿಸಿದ್ದು, ಶಾಸಕ ಪ್ರಣವ್ ಸಿಂಗ್ ಇಂತಹ ವರ್ತನೆಗಳಿಂದಲೇ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಹೀಗಾಗಿಯೇ ಈ ಹಿಂದೆ ಮೂರು ತಿಂಗಳುಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಘಟನೆ ಕುರಿತು ಉತ್ತರಾಖಂಡ್ ರಾಜ್ಯ ಬಿಜೆಪಿ ಜೊತೆ ಮಾತನಾಡಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ತಿಳಿಸಿದ್ದಾರೆ.

    ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಕಳೆದ ತಿಂಗಳು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿತ್ತು. ಅಲ್ಲದೆ, ಅಶಿಸ್ತು ಹಾಗೂ ದುರ್ವರ್ತನೆಯಿಂದ ಬಿಜೆಪಿ ರೋಸಿ ಹೋಗಿದ್ದು, ಅಮಾನತುಗೊಳಿಸಿದರೂ ಸಹ ಶಾಸಕರ ದುರ್ವರ್ತನೆಗೆ ಕಡಿವಾಣ ಬಿದ್ದಿಲ್ಲ.