Tag: alcohol

  • ಇಂದು ಎಲ್ಲೆಲ್ಲಿ ಮದ್ಯ ಸಿಗಲ್ಲ?- ದೇಶದಲ್ಲಿ ಎಣ್ಣೆ ಸಿಗದ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

    ಇಂದು ಎಲ್ಲೆಲ್ಲಿ ಮದ್ಯ ಸಿಗಲ್ಲ?- ದೇಶದಲ್ಲಿ ಎಣ್ಣೆ ಸಿಗದ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

    ನವದೆಹಲಿ: ಇಂದು ದೇಶಾದ್ಯಂತ ರಂಜಾನ್‌ ಅಥವಾ ಈದ್ ಉಲ್ ಫಿತರ್ (Eid al-Fitr) ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ನಿಮಿತ್ತ ಇಂದು ಹಲವಾರು ರಾಜ್ಯಗಳು ಮತ್ತು ನಗರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

    ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ಇಲಾಖೆ ವಿವರವಾದ ಆದೇಶವನ್ನು ಬಿಡುಗಡೆ ಮಾಡಿತು. ಈದ್ ಹಬ್ಬ ಸೇರಿದಂತೆ ನಗರದಲ್ಲಿ 5 ದಿನಗಳನ್ನು ʼDry Dayʼ ಎಂದು ಘೋಷಿಸಿತು. ಈದ್ (ಏಪ್ರಿಲ್ 11), ರಾಮ ನವಮಿ (ಏಪ್ರಿಲ್ 17) ಮತ್ತು ಮಹಾವೀರ ಜಯಂತಿ (ಏಪ್ರಿಲ್ 21) ರಂದು ದೆಹಲಿಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿತ್ತು.

    ಇದರ ಜೊತೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಡಿ ಭಾಗಗಳಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಸಂಜೆ 6ರಿಂದ 26ರ ಸಂಜೆ 6ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಳನೀರು ಕುಡಿದು 15 ಮಂದಿ ಅಸ್ವಸ್ಥ!

    ದೇಶದಲ್ಲಿ ಯಾವ ದಿನ ಮದ್ಯ ಸಿಗಲ್ಲ..? : ಏಪ್ರಿಲ್‌ 14: ಅಂಬೇಡ್ಕರ್ ಜಯಂತಿ, ಏಪ್ರಿಲ್ 17: ರಾಮ ನವಮಿ, ಏಪ್ರಿಲ್ 21: ಮಹಾವೀರ ಜಯಂತಿ, ಮೇ 1: ಮಹಾರಾಷ್ಟ್ರ ದಿನ (ಮಹಾರಾಷ್ಟ್ರದಲ್ಲಿ ಮಾತ್ರ), ಮೇ 23: ಬುದ್ಧ ಪೂರ್ಣಿಮೆ, ಮೇ 17: ಬಕ್ರೀದ್, ಜುಲೈ 17: ಮೊಹರಂ ಮತ್ತು ಆಷಾದಿ ಏಕಾದಶಿ, ಜುಲೈ 21: ಗುರು ಪೂರ್ಣಿಮೆ, ಆಗಸ್ಟ್ 15: ಸ್ವಾತಂತ್ರ್ಯ ದಿನ, ಆಗಸ್ಟ್ 2: ಜನ್ಮಾಷ್ಠಮಿ, ಸೆಪ್ಟೆಂಬರ್ 7: ಗಣೇಶ ಚತುರ್ಥಿ (ಮಹಾರಾಷ್ಟ್ರದಲ್ಲಿ ಮಾತ್ರ), ಸೆಪ್ಟೆಂಬರ್ 17: ಈದ್-ಎ-ಮಿಲಾದ್ ಮತ್ತು ಅನಂತ ಚತುರ್ದಶಿ.

    ಅಕ್ಟೋಬರ್ 2: ಗಾಂಧಿ ಜಯಂತಿ, ಅಕ್ಟೋಬರ್ 12: ದಸರಾ, ಅಕ್ಟೋಬರ್ 17: ಮಹರ್ಷಿ ವಾಲ್ಮೀಕಿ ಜಯಂತಿ, ನವೆಂಬರ್ 1: ದೀಪಾವಳಿ, ನವೆಂಬರ್ 12: ಕಾರ್ತಿಕಿ ಏಕಾದಶಿ, ನವೆಂಬರ್ 15: ಗುರುನಾನಕ್ ಜಯಂತಿ, ಡಿಸೆಂಬರ್ 25: ಕ್ರಿಸ್ಮಸ್ ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.

    ಈದ್ ಉಲ್-ಫಿತರ್: ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ 10 ನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಈದ್ ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಇದು ತಿಂಗಳ ಅವಧಿಯ ರಂಜಾನ್ ಉಪವಾಸ ಮತ್ತು ಶವ್ವಾಲ್ ಆರಂಭವನ್ನು ಸೂಚಿಸುತ್ತದೆ. ಹಿಂದಿನಿಂದಲೂ ಇಸ್ಲಾಮಿಕ್ ಸಂಸ್ಕೃತಿಯ ಭಾಗವಾಗಿರುವ ಚಂದ್ರನ ದರ್ಶನದಿಂದಾಗಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಪ್ರವಾದಿ ಮುಹಮ್ಮದ್ ಹೊಸ ತಿಂಗಳ ಆರಂಭವನ್ನು ಸೂಚಿಸಿದಂತೆ ಅರ್ಧಚಂದ್ರನ ದೃಶ್ಯಗಳ ಸುದ್ದಿಗಾಗಿ ಕಾಯುತ್ತಿದ್ದರು ಎಂದು ನಂಬಲಾಗಿದೆ.

  • ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

    ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

    ರಾಯಚೂರು: ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಪೋಷಕರ ಬುದ್ದಿಮಾತಿಗೆ ಮನನೊಂದು ಪುತ್ರ ನೇಣಿಗೆ (Suicide) ಶರಣಾಗಿರುವ ಘಟನೆ ನಡೆದಿದೆ. ನಿತ್ಯ ಮದ್ಯಪಾನ ಮಾಡದಂತೆ ಬುದ್ದಿಹೇಳಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    24 ವರ್ಷದ ಆದರ್ಶ ಆತ್ಮಹತ್ಯೆಗೆ ಶರಣಾದ ಯುವಕ. ನಿತ್ಯ ಮದ್ಯಪಾನ (Alcohol) ಸೇವಿಸಿ ಮನೆಗೆ ಬರುತ್ತಿದ್ದ ಮಗನ ವರ್ತನೆಯಿಂದ ಪೋಷಕರು ಬೇಸತ್ತಿದ್ದರು. ಇದೇ ವಿಚಾರಕ್ಕೆ ಬೈದು ಬುದ್ದಿವಾದ ಹೇಳಿದ್ದರು. ಬುದ್ದಿವಾದವನ್ನೇ ಅವಮಾನ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಇದನ್ನೂ ಓದಿ: ‘ಇಂಡಿಯಾ’ ಬಣದಿಂದ ಅಂತರ ಕಾಪಾಡಿಕೊಂಡ ನಟ ಕಮಲ್ ಹಾಸನ್

    ಮನೆಯ ಬಾತ್ ರೂಮ್‌ನಲ್ಲಿದ್ದ ಕಬ್ಬಿಣದ ಪೈಪ್‌ಗೆ ಹಗ್ಗ ಹಾಕಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಾನ್ವಿ ಪಟ್ಟಣದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಆದರ್ಶ ಮದ್ಯವ್ಯಸನಿಯಾಗಿದ್ದ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಣು ಶಕ್ತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ಹಣ – ರೇಸ್‌ನಲ್ಲಿ ಟಾಟಾ, ರಿಲಯನ್ಸ್‌, ಅದಾನಿ

  • ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಬೆಂಗಳೂರಲ್ಲಿ 3 ದಿನ ಅಲ್ಲ, 2 ದಿನ ಮಾತ್ರ ಮದ್ಯ ಮಾರಾಟ ಬಂದ್

    ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಬೆಂಗಳೂರಲ್ಲಿ 3 ದಿನ ಅಲ್ಲ, 2 ದಿನ ಮಾತ್ರ ಮದ್ಯ ಮಾರಾಟ ಬಂದ್

    ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ (Vidhan Parishad by-election) ಹಿನ್ನೆಲೆ ಮದ್ಯ ಮಾರಾಟಕ್ಕೆ (Alcohol Sale Ban) ವಿಧಿಸಿದ್ದ ನಿರ್ಬಂಧ‌ದಲ್ಲಿ ಮಾರ್ಪಾಡು ಮಾಡಲಾಗಿದೆ. ಮತದಾನದ ದಿನ ಮತ್ತು ಎಣಿಕೆ‌‌ ದಿನದಂದು ಮಾತ್ರ ಮದ್ಯ ಮಾರಾಟಕ್ಕೆ ಹೈಕೋರ್ಟ್‌ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಿದೆ.

    ಫೆ.16 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮತ್ತು ಫೆ.20 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ‌‌ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿದೆ.  ಇದನ್ನೂ ಓದಿ: ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್ ಆರಂಭ – ವಿಶೇಷತೆ ಏನು?

    ಆಹಾರ ಪೂರೈಸಲು ರೆಸ್ಟೋರೆಂಟ್‌ಗಳಿಗೆ ನಿರ್ಬಂಧವಿಲ್ಲ. ಮದ್ಯಪಾನ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಆದೇಶ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರಕ್ಕೂ ಅನ್ವಯವಾಗುತ್ತದೆ. ಇದನ್ನೂ ಓದಿ: ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ

    10 ಸಾವಿರ ಮಹಿಳೆಯರು ಹಾಗೂ 6,000 ಪುರುಷರು ಇರುವ ಒಂದೇ ಒಂದು ಶಿಕ್ಷಣ ಕ್ಷೇತ್ರಕ್ಕೆ16ನೇ ತಾರೀಖು ನಡೆಯುವ ಚುನಾವಣೆಗೆ 3600 ಕ್ಕೂ ಹೆಚ್ಚಿಗೆ ಸನ್ನದುಗಳನ್ನು ಮುಚ್ಚಲು ಆದೇಶ ಕೊಟ್ಟಿರುವುದು ಅನಗತ್ಯ ಹಾಗೂ ಅವೈಜ್ಞಾನಿಕ. ಇದನ್ನು ಮರು ಪರಿಶೀಲಿಸಲೆಂದು ಖುದ್ದು ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಆದರೆ ನಮ್ಮ ಪರವಾಗಿ ಸೂಕ್ತ ಆದೇಶ ಬಂದಿರುವುದಿಲ್ಲ. ಈ ಕಾರಣದಿಂದ ನಾವು ಹೈಕೋರ್ಟ್‌ ಮೊರೆ ಹೋಗಿದ್ದೆವು. ನ್ಯಾಯಾಧೀಶರು ನಮ್ಮ ಪರ ವಾದವನ್ನು ಆಲಿಸಿದ ನಂತರ 16 ಮತ್ತು 20 ನೇ ತಾರೀಕು ಎರಡು ದಿನಗಳು ಮಾತ್ರ ಬಂದ್ ಮಾಡಬೇಕೆಂಬ ಆದೇಶವನ್ನುಹೊರಡಿಸಿರುತ್ತಾರೆ. ಈ ಸಮಂಜಸವಾದ ನ್ಯಾಯ ಸಿಕ್ಕಿರುವುದು ಸಂತಸದ ವಿಷಯ. ವಕೀಲರಾದ ಅರುಣ್ ಶ್ಯಾಮರವರ ಜೊತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.

     

    ಉಪ ಚುನಾವಣೆ ಹಿನ್ನೆಲೆ ಫೆಬ್ರವರಿ 14ರ ಸಂಜೆಯಿಂದ 16ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಪ್ರಕಟಿಸಿತ್ತು.

    ಬೆಂಗಳೂರು ನಗರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಶಿಕ್ಷಕರು (ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್) ಶಿಕ್ಷಕರು ಮತದಾನ ಮಾಡಲಿದ್ದಾರೆ. ಮಾದರಿ ನೀತಿ ಸಂಹಿತೆ ಫೆ.23ರವರೆಗೆ ಜಾರಿಯಾಲ್ಲಿರಲಿದೆ.

  • ವ್ಯಾಲೆಂಟೈನ್ಸ್ ಡೇ ಸೇರಿ ಬೆಂಗಳೂರಿನಲ್ಲಿ 4 ದಿನ ಮದ್ಯ ಬಂದ್!

    ವ್ಯಾಲೆಂಟೈನ್ಸ್ ಡೇ ಸೇರಿ ಬೆಂಗಳೂರಿನಲ್ಲಿ 4 ದಿನ ಮದ್ಯ ಬಂದ್!

    – ಹೋಟೆಲ್ ಅಸೋಸಿಯೇಷನ್‍ನಿಂದ ವಿರೋಧ

    ಬೆಂಗಳೂರು: ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ (Valentine’s Day). ಈ ದಿನದಂದು ಪ್ರೇಮಿಗಳ ಪಾರ್ಟಿ, ಸೆಲೆಬ್ರೇಷನ್ ಜೋರಾಗಿರುತ್ತದೆ. ಆದರೆ ಸೆಲೆಬ್ರೇಷನ್ ಮೂಡ್ ನಲ್ಲಿದ್ದ ಪ್ರೇಮಿಗಳಿಗೆ ಈ ಬಾರಿ ನಿರಾಶೆ ಕಾದಿದ್ದು, ಮದ್ಯ ಸಿಗ್ತಿಲ್ಲ. ಜೊತೆಗೆ ಮದ್ಯ ಮಾರಾಟ ನಿಷೇಧಕ್ಕೆ ಹೋಟೆಲ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನಪರಿಷತ್ ಉಪಚುನಾವಣೆ ಹಿನ್ನೆಲೆ ವ್ಯಾಲೆಂಟೈನ್ಸ್ ಡೇ ಅಂದ್ರೆ ಫೆಬ್ರವರಿ 14ರ ಸಂಜೆ 5 ಗಂಟೆಯಿಂದ ಫೆಬ್ರವರಿ 17ರ ಬೆಳಗ್ಗೆ 6 ಗಂಟೆವರೆಗೆ ನಗರದ ಕೆಲವು ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 14, 15, 16 ಹಾಗೂ 20ನ್ನು ಡ್ರೈ ಡೇ ಅಂತ ಘೋಷಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಫೆಬ್ರವರಿ 14ನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧರಾಗಿದ್ದ ಯುವಜನತೆಗೆ ನಿರಾಸೆಯಾಗಿದೆ. ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದ ರೆಸ್ಟೋರೆಂಟ್, ಪಬ್, ಬಾರ್‍ಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ಹೋಟೆಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಮೆದುಳು ಜ್ವರಕ್ಕೆ ಬಾಲಕ ಬಲಿ

    ನಾಲ್ಕು ದಿನದ ಮದ್ಯ ಮಾರಾಟ ನಿಷೇಧದಿಂದ ಕಾರ್ಮಿಕರ ಸಂಬಳ, ಕಟ್ಟಡ ಬಾಡಿಗೆ ಮುಂತಾದ ಖರ್ಚುಗಳನ್ನು ನಿಭಾಯಿಸಲು ತೊಂದರೆಯಾಗಲಿದೆ. ಕೇವಲ 16 ಸಾವಿರ ಮತ ಚಲಾವಣೆಯಾಗೋ ಚುನಾವಣೆಗೆ ನಾಲ್ಕು ದಿನ ಮದ್ಯ ಮಾರಾಟ ನಿಷೇಧದ ಆದೇಶವನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಬೆಂಗಳೂರು ಚುನಾವಣಾ ಅಧಿಕಾರಿಗಳಿಗೆ ಹೋಟೆಲ್ ಅಸೋಸಿಯೇಷನ್ ಪತ್ರ ಬರೆದು ಮನವಿ ಮಾಡಿದೆ.

    ಒಟ್ಟಿನಲ್ಲಿ ವ್ಯಾಲೆಂಟೆನ್ಸ್ ಡೇ ಖುಷಿಯಲ್ಲಿದ್ದ ಮದ್ಯ ಪ್ರೇಮಿಗಳಿಗೆ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದ ಹೋಟೆಲ್, ರೆಸ್ಟೋರೆಂಟ್ ಗಳಿಗೆ ನಿರಾಶೆಯಾಗಿರೋದಂತೂ ಸುಳ್ಳಲ್ಲ.

  • ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಯುವತಿಯಿಂದ ಹಲ್ಲೆ

    ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಯುವತಿಯಿಂದ ಹಲ್ಲೆ

    ಹೈದರಾಬಾದ್: ಕುಡಿದ (Alcohol) ಅಮಲಿನಲ್ಲಿ ಬಸ್ ನಿರ್ವಾಹನ ( Conductor) ಮೇಲೆ ಯುವತಿ (Woman) ಹಲ್ಲೆ ಮಾಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.

    ಕುಡಿತ ಮತ್ತಿನಲ್ಲಿ ಬಸ್ ಹತ್ತಿದ್ದು, ಟಿಕೆಟ್‌ಗೆ ಸಂಬಂಧಿಸಿದಂತೆ ನಿರ್ವಾಹನ ಜೊತೆ ಯುವತಿ ಜಗಳ ಮಾಡಿದ್ದಾಳೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿ ಅವಾಚ್ಯ ಶಬ್ದಗಳಿಂದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್‌ಗೆ ನಿಂದಿಸಿ ಹಲ್ಲೆ ಮಾಡಿದ್ದಾಳೆ. ಯುವತಿ ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ಬಸ್ ಪ್ರಯಾಣಿಕರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಅಡ್ಡಿಪಡಿಸುವವರನ್ನು ಯಾರೂ ನೆನಪಿಸಿಕೊಳ್ಳಲ್ಲ: ಅಧಿವೇಶನಕ್ಕೂ ಮುನ್ನ ಸಂಸದರಿಗೆ ಮೋದಿ ಸಲಹೆ

    ಬಸ್‌ನಲ್ಲಿ ಇತರ ಪ್ರಯಾಣಿಕರೊಂದಿಗೆ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈಕೆಯ ವರ್ತನೆಯನ್ನು ಸಹ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಯುವತಿ ವಿರುದ್ಧ ಟಿಎಸ್‌ಆರ್‌ಟಿಸಿ ದೂರು ದಾಖಲಿಸಿದೆ. ಯುವತಿ ರಂಪಾಟದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಜಾರ್ಖಂಡ್ ಸಿಎಂ 30 ಗಂಟೆ ಬಳಿಕ ಪತ್ತೆ!

  • ಮದ್ಯ ಸೇವಿಸಲು ಹಣ ಕೊಡದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಾಕಿದ ಪತಿ- ಕೋಮಾಗೆ ಜಾರಿದ ಪತ್ನಿ

    ಮದ್ಯ ಸೇವಿಸಲು ಹಣ ಕೊಡದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಾಕಿದ ಪತಿ- ಕೋಮಾಗೆ ಜಾರಿದ ಪತ್ನಿ

    ದಾವಣಗೆರೆ: ಮದ್ಯ ಸೇವನೆಗೆ ಪತ್ನಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಪತಿಯೇ (Husband) ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯನ್ನ (Wife) ಹಲ್ಲೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಿತ್ರದುರ್ಗ (Chitradurga)  ಜಿಲ್ಲೆ ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕದರಪ್ಪ (60) ಹಲ್ಲೆ ನಡೆಸಿದ ಆರೋಪಿ. ಪತಿ ಮಾಡಿರುವ ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆ ಸಾಕಮ್ಮ (55) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರ ದಾರುಣ ಸಾವು, ಮೂವರ ಸ್ಥಿತಿ ಗಂಭೀರ

    ದಂಪತಿ ಹಲವು ವರ್ಷಗಳಿಂದ ಬಡಗೊಲ್ಲರಹಟ್ಟಿ, ಸೀಗೆಹಟ್ಟಿ ಗ್ರಾಮದವರ ಜೊತೆಗೂಡಿ ಕುರಿಗಳನ್ನು ಮೇಯಿಸುತ್ತಿದ್ದರು. ಅದರಂತೆಯೇ ಕುರಿಗಳನ್ನು ಮೇಯಿಸಲು ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮ ಸೇರಿ ಸುತ್ತಲ ಗ್ರಾಮಗಳಲ್ಲಿ ವಾರದಿಂದ ತೋಟವೊಂದರಲ್ಲಿ ತಂಗಿದ್ದರು. ಮದ್ಯ ವ್ಯಸನಿಯಾಗಿದ್ದ ಆರೋಪಿ ಕದರಪ್ಪ, ಹಣ ನೀಡುವಂತೆ ಪತ್ನಿ ಸಾಕಮ್ಮನನ್ನು ಪದೆ ಪದೇ ಪೀಡಿಸುತ್ತಿದ್ದನು. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

    ಪತ್ನಿ ಹಣ ನೀಡಲು ನಿರಾಕರಿಸಿದ್ದಕ್ಕೆ ಇನ್ನಷ್ಟು ಕೋಪಗೊಂಡ ಕದರಪ್ಪ ಅಲ್ಲೇ ಇದ್ದ ಕಲ್ಲನ್ನು ತಲೆಮೇಲೆ ಎತ್ತಿಹಾಕಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಕಮ್ಮ ಅವರನ್ನು ಕಂಡ ಬಡಗೊಲ್ಲರಹಟ್ಟಿ ಮತ್ತು ಸೀಗೆಹಟ್ಟಿ ಕುರಿ ಕಾಯುವವರು ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾಕಮ್ಮ ಮಗ ದಯಾನಂದ ಬಸವಾಪಟ್ಟಣ ಪೊಲೀಸ್ ಠಾಣೆಗೆ ತಂದೆ ಮೇಲೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಆರೋಪಿ ಕದರಪ್ಪನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಶ್ರಯ ಕೊಟ್ಟ ಭಾರತೀಯ ವಿದ್ಯಾರ್ಥಿಯನ್ನೇ ಹೊಡೆದು ಕೊಂದ ಯುಎಸ್ ನಿರಾಶ್ರಿತ ವ್ಯಕ್ತಿ!

  • ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಚಿಕ್ಕಮಗಳೂರು: ಎಣ್ಣೆ ಏಟಲ್ಲಿ ಕೆಲವೊಮ್ಮೆ ವ್ಯಕ್ತಿ ತಾನೇನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಬಿಡುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಯಾವ ಭಯವೂ ಇರುವುದಿಲ್ಲ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಗಾಢವಾಗಿ ನಿದ್ದೆ ಮಾಡಿದ ಪ್ರಸಂಗವೊಂದು ನಡೆದಿದೆ.

    ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಸಮೀಪದ ಹಳಸೆ ಗ್ರಾಮದ ಬಳಿ ನಡೆದಿದೆ. ಕುಡಿತ ಮತ್ತಿನಲ್ಲಿ ವ್ಯಕ್ತಿ ಮಧ್ಯರಾತ್ರಿ ಸಮಯದಲ್ಲಿ ರಸ್ತೆ ಮಧ್ಯೆಯೇ ಗಡದ್ದಾಗಿ ನಿದ್ದೆ ಮಾಡಿದ್ದಾಳೆ. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ವಾಹನ ಸಾವರರೊಬ್ಬರು ವ್ಯಕ್ತಿಯನ್ನು ಕಂಡು ಗಾಬರಿಗೊಂಡಿದ್ದಾರೆ.

    ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ವ್ಯಕ್ತಿ ಎದ್ದೇಳುವ ಲಕ್ಷಣ ಕಾಣುತ್ತಿಲ್ಲ. ಆ ಬಳಿಕ ಕೆಲ ಹೊತ್ತು ಎದ್ದು ಕುಳಿತು ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ಒಟ್ಟಾರೆಯಾಗಿ ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚೆಲ್ಲಾಟದಿಂದ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಇದನ್ನೂ ಓದಿ: ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

  • ಕುಡಿತಿದ್ದೆ, ಡ್ರಗ್ಸ್ ತಗೋತಾ ಇರಲಿಲ್ಲ: ನಟಿ ಶ್ರುತಿ ಹಾಸನ್

    ಕುಡಿತಿದ್ದೆ, ಡ್ರಗ್ಸ್ ತಗೋತಾ ಇರಲಿಲ್ಲ: ನಟಿ ಶ್ರುತಿ ಹಾಸನ್

    ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್  (Shruti Haasan)ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಮಾತಾಡ್ತಾ ಇರುತ್ತಾರೆ. ಬಾಯ್ ಫ್ರೆಂಡ್, ಡಿಪ್ರೆಷನ್ ಹೀಗೆ ಅನೇಕ ವಿಚಾರಗಳನ್ನು ಈವರೆಗೂ ಮಾತನಾಡಿದ್ದಾರೆ. ಈ ಬಾರಿ ಕುಡಿತ (Alcohol) ಮತ್ತು ಡ್ರಗ್ಸ್ (Drugs) ಬಗ್ಗೆ ಮಾತನಾಡಿದ್ದಾರೆ. ತಾನು ಕುಡಿತದ ಚಟಕ್ಕೆ ದಾಸಳಾಗಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

    ನಾನು ಸಾಕಷ್ಟು ಕುಡಿತಿದ್ದೆ. ಫ್ರೆಂಡ್ಸ್ ಸಿಕ್ಕಾಗೆಲ್ಲ ಕುಡಿತಿದ್ದೆ. ಕುಡಿತದ ಚಟ ನನ್ನನ್ನು ಆಳುತ್ತಿದೆ ಅಂತ ಅನಿಸಿತು. ಕುಡಿತದ ಬಗ್ಗೆ ಬೇಸರವಾಯಿತು. ಆಗ ಬಿಟ್ಟು ಬಿಟ್ಟು. ನಾನು ಕುಡಿಯೋದನ್ನು ಬಿಟ್ಟು ಎಂಟು ವರ್ಷಗಳೇ ಆಗಿವೆ. ಕುಡಿತಿದ್ದೆ ನಿಜ. ಆದರೆ, ಡ್ರಗ್ಸ್ ತಗೆದುಕೊಳ್ಳುತ್ತಿರಲಿಲ್ಲ. ಇವತ್ತಿನವರೆಗೂ ನಾನು ಒಂದೇ ಒಂದು ಬಾರಿಯೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ ಶ್ರುತಿ.

    ಯೂಟ್ಯೂಬ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರುತಿ, ತಮ್ಮ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅದರಲ್ಲೂ ಕುಡಿತದ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದರು. ಜೊತೆಗೆ ಇನ್ನಷ್ಟೇ ರಿಲೀಸ್ ಆಗಬೇಕಿರುವ ಸಲಾರ್ ಸಿನಿಮಾದ ಬಗ್ಗೆಯೂ ಶ್ರುತಿ ಮಾತನಾಡಿದ್ದಾರೆ.

     

    ಎಂಟು ವರ್ಷಗಳಿಂದ ಅವರ ಮೇಲೆ ಅವರು ನಿಯಂತ್ರಣ ಹೊಂದಿದ್ದಾರಂತೆ. ಆ ಕಾರಣದಿಂದಾಗಿಯೇ ಮತ್ತಷ್ಟು ಸಾಧನೆ ಮಾಡೋಕೆ ಅವರಿಗೆ ಸಾಧ್ಯವಾಗಿದೆ ಅಂತೆ. ಈಗ ಸಂಪೂರ್ಣವಾಗಿ ಅವರು ಮದ್ಯಮುಕ್ತರಾಗಿದ್ದಾರಂತೆ.

  • ಚಿಕ್ಕಪ್ಪನನ್ನೇ ಕೊಂದ ಪ್ರಕರಣ – ಜ್ಯೂಸ್ ಅಂತ ಹೇಳಿ ಮದ್ಯ ಕುಡಿಸಿದ್ದಕ್ಕೆ ಬರ್ಬರ ಹತ್ಯೆ

    ಚಿಕ್ಕಪ್ಪನನ್ನೇ ಕೊಂದ ಪ್ರಕರಣ – ಜ್ಯೂಸ್ ಅಂತ ಹೇಳಿ ಮದ್ಯ ಕುಡಿಸಿದ್ದಕ್ಕೆ ಬರ್ಬರ ಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಪ್ಪನನ್ನೇ (Uncle) ಅಣ್ಣನ ಮಗ ಕೊಚ್ಚಿ ಕೊಲೆ (Murder) ಮಾಡಿದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು (Gauribidanur) ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಚಿಕ್ಕಪ್ಪ ಮೋಸದಿಂದ ಮದ್ಯ (Alcohol) ಕುಡಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

    ಅಂದಹಾಗೆ ಸೋಮವಾರ ಬೆಳಗ್ಗೆ ಗೌರಿಬಿದನೂರು ತಾಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ಹಾಲು ತರಲು ಡೈರಿ ಬಳಿ ಬಂದಿದ್ದ ರಾಮಕೃಷ್ಣಪ್ಪನನ್ನು ಆತನ ಅಣ್ಣನ ಮಗ ನಾಗರಾಜು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇದೀಗ ಪೊಲೀಸರ ಬಳಿ ಆರೋಪಿ ಕೊಲೆಯ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

    ಕೊಲೆಗಾರ ನಾಗರಾಜು ಈ ಹಿಂದೆ ಮದ್ಯವ್ಯಸನಿಯಾಗಿದ್ದು ಕುಟುಂಬಸ್ಥರು ಮದ್ಯಪಾನ ಮುಕ್ತ ಕೇಂದ್ರಕ್ಕೆ ಸೇರಿಸಿ ಮದ್ಯ ಸೇವನೆ ಬಿಡಿಸಿದ್ದರು. ಕಳೆದ 8 ವರ್ಷಗಳಿಂದ ಸಂತೋಷದ ಜೀವನ ಮಾಡಿಕೊಂಡಿದ್ದ ನಾಗರಾಜುಗೆ ರಾಮಕೃಷ್ಣಪ್ಪ ಕೊಲೆಯಾದ ಹಿಂದಿನ ದಿನ ಜ್ಯೂಸ್ (Juice) ಬಾಟಲಿಗೆ ಮದ್ಯ ಬೆರೆಸಿ ನೀಡಿದ್ದ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿ ಗ್ರೇಟ್ ಆಪರೇಷನ್ – 17 ದಿನಗಳ ಬಳಿಕ ಸಾವು ಗೆದ್ದ 41 ಕಾರ್ಮಿಕರು

    ಬಾಟಲಿಯಲ್ಲಿರುವುದು ಜ್ಯೂಸ್ ಎಂದು ನಂಬಿಸಿ ನಾಗರಾಜುಗೆ ಮೋಸದಿಂದ ಮದ್ಯ ಕುಡಿಸಿದ್ದರಿಂದ ಅಮಲೇರಿದ ಆತ ರಾತ್ರಿ ಮನೆಯಲ್ಲಿ ಹೆಂಡತಿ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ಮರುದಿನ ಬೆಳಗ್ಗೆ ನಡೆದ ಘಟನೆ ಬಗ್ಗೆ ಸಾಕಷ್ಟು ವಿಚಲಿತನಾದ ನಾಗರಾಜು ಚಿಕ್ಕಪ್ಪ ರಾಮಕೃಷ್ಣಪ್ಪ ಹಾಲು ತರಲು ಬರುವುದನ್ನೇ ಕಾದು ಕುಳಿತು ಬಳಿಕ ಬರ್ಬರ ಹತ್ಯೆ ನಡೆಸಿ ಪರಾರಿಯಾಗಿದ್ದ.

    ಘಟನೆ ನಂತರ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾನೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

  • 2 ಲಕ್ಷ ಬಹುಮಾನಕ್ಕಾಗಿ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಕುಡಿದು ವ್ಯಕ್ತಿ ಸಾವು

    2 ಲಕ್ಷ ಬಹುಮಾನಕ್ಕಾಗಿ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಕುಡಿದು ವ್ಯಕ್ತಿ ಸಾವು

    ಬೀಜಿಂಗ್: 2 ಲಕ್ಷ ರೂ. ಬಹುಮಾನಕ್ಕಾಗಿ ಆಫಿಸ್ ಪಾರ್ಟಿಯಲ್ಲಿ 10 ನಿಮಿಷದಲ್ಲಿ ಒಂದು ಲೀಟರ್ ಹಾರ್ಡ್ ಡ್ರಿಂಕ್ಸ್ (Alcohol) ಕುಡಿದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಚೀನಾದಲ್ಲಿ (China) ನಡೆದಿದೆ.

    ಝಾಂಗ್ ಎಂಬಾತ ತನ್ನ ಕಚೇರಿಯ ಸಹೋದ್ಯೋಗಿಗಳಿಗೆ ಮಾಲೀಕ ಆಯೋಜಿದ್ದ ಔತಣಕೂಟಕ್ಕೆ ತೆರಳಿದ್ದ. ಈ ವೇಳೆ ಕುಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯಾರಾದರೂ ಕುಡಿತದಲ್ಲಿ ಝಾಂಗ್‍ನನ್ನು ಮೀರಿಸಿದರೆ 20,000 ಯುವಾನ್ ಬಹುಮಾನವನ್ನು ನೀಡುವುದಾಗಿ ಈ ವೇಳೆ ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ಸೋತರೆ ಅದೇ ಮೊತ್ತದ ಪಾರ್ಟಿ ಕೊಡಿಸುವಂತೆ ಹೇಳಲಾಗಿದೆ. ಬಳಿಕ ತೀವ್ರ ಮದ್ಯ ಸೇವನೆ ಮಾಡಿದ ಝಾಂಗ್ ಅಸ್ವಸ್ಥನಾಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪ್ರಾಣಿಗಳ ದಿನಕ್ಕೆ ಮುದ್ದಾದ ಪಪ್ಪಿಯನ್ನು ತಾಯಿಗೆ ಉಡುಗೊರೆ ನೀಡಿದ್ರು ರಾಹುಲ್

    ಔತಣಕೂಟದಲ್ಲಿದ್ದ ಉದ್ಯೋಗಿಯೊಬ್ಬರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಝಾಂಗ್ 10 ನಿಮಿಷಗಳಲ್ಲಿ ಒಂದು ಲೀಟರ್ ಬೈಜು ಎಂಬ ಹಾರ್ಡ್ ಡ್ರಿಂಕ್ಸ್ ಕುಡಿದಿದ್ದಾನೆ. ಇದು 30% ರಿಂದ 60% ರಷ್ಟು ವಿಶಿಷ್ಟವಾದ ಆಲ್ಕೋಹಾಲ್ ಅಂಶ ಹೊಂದಿರುವ ಚೈನೀಸ್ ಸ್ಪಿರಿಟ್ ಆಗಿದೆ ಎಂದು ತಿಳಿಸಿದ್ದಾರೆ.

    ಝಾಂಗ್ ಕುಸಿದು ಬಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಉಸಿರುಗಟ್ಟುವಿಕೆ ಮತ್ತು ಹೃದಯ ಸ್ತಂಭನದಿಂದ ಮೃತಪಟ್ಟರು ಎಂದು ಹೇಳಿದ್ದಾರೆ.

    ಇದೇ ಮದ್ಯವನ್ನು ಸೇವಿಸಿ ಚೀನಾದಲ್ಲಿ ಇತ್ತೀಚೆಗೆ ಪ್ರಭಾವಿ ಒಬ್ಬರು ಮೃತಪಟ್ಟಿದ್ದರು. ಬಳಿಕ ಈ ಮದ್ಯದ ಬಗ್ಗೆ ಚೀನಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಆಂಧ್ರಪ್ರದೇಶ-ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದ- ಕೃಷ್ಣಾ ನ್ಯಾಯಧಿಕರಣ 2 ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]