Tag: alcohol

  • ಲಾಕ್‍ಡೌನ್ ಎಫೆಕ್ಟ್- ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು 9 ಮಂದಿ ದುರ್ಮರಣ!

    ಲಾಕ್‍ಡೌನ್ ಎಫೆಕ್ಟ್- ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು 9 ಮಂದಿ ದುರ್ಮರಣ!

    ಹೈದರಾಬಾದ್: ಕೊರೊನಾ ಭೀತಿಯಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಈ ಲಾಕ್‍ಡೌನ್ ವೇಳೆ ಕುಡಿಯಲು ಆಲ್ಕೋಹಾಲ್ ಸಿಗದೆ ಅನೇಕ ಮಂದಿ ಮದ್ಯವ್ಯಸನಿಗಳು ಪರದಾಡಿದ್ದಾರೆ. ಇದೇ ರೀತಿ ಮದ್ಯಪಾನ ಇಲ್ಲದೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರನ್ನೇ ಕುಡಿದು ಸುಮಾರು 9 ಮಂದಿ ಮೃತಪಟ್ಟ ದುರಂತ ಘಟನೆ ಆಂಧ್ರಪ್ರದೇಶದ ಪ್ರಕಾಶನ್ ಜಿಲ್ಲೆಯ ಕುರಿಚೆಡು ಪಟ್ಟಣದಲ್ಲಿ ನಡೆದಿದೆ.

    ಬುಧವಾರ ಮಧ್ಯರಾತ್ರಿ ಓರ್ವ ಮೃತಪಟ್ಟರೆ, ಮತ್ತಿಬ್ಬರು ಗುರುವಾರ ರಾತ್ರಿ ಹಾಗೂ ಉಳಿದ 6 ಮಂದಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಭಿಕ್ಷುಕರು ಆಗಿದ್ದು, ಉಳಿದವರನ್ನು ಸ್ಥಳೀಯ ಸ್ಲಂ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಸುಮಾರು 20 ಮಂದಿ ಸ್ಯಾನಿಟೈಸರ್ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೃತರನ್ನು ಅನುಗೊಂಡ ಸ್ರೀನು(25), ಭೋಗೆಮ್ ತಿರುಪತಯ್ಯ(35), ಗುಂಟಕ ರಮಿ ರೆಡ್ಡಿ(60), ಕದಿಯಾಮ್ ರಾಮನಯ್ಯ(28), ರಾಜ ರೆಡ್ಡಿ(65), ರಾಮನಯ್ಯ(65), ಬಾಬು(40), ಚಾರ್ಲೆಸ್(45) ಹಾಗೂ ಅಗಸ್ಟಿನ್(45) ಎಂದು ಗುರುತಿಸಲಾಗಿದೆ.

    ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಒತ್ತಾಯಪೂರ್ವಕವಾಗಿ ಕುರಿಚೆಡುನಲ್ಲಿ ಲಾಕ್‍ಡೌನ್ ಹೇರಲಾಗಿತ್ತು. ಹೀಗಾಗಿ ಮದ್ಯದಂಗಡಿಗಳು ಬಂದ್ ಆದ ಪರಿಣಾಮ ಸ್ಯಾನಿಟೈಸರ್ ಕುಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.

    ಸ್ಥಳೀಯ ದುರ್ಗಾ ದೇವಾಲಯದಲ್ಲಿದ್ದ ಭಿಕ್ಷಕನೊಬ್ಬನಿಂದ ಇದು ಪ್ರಾರಂಭವಾಯಿತು. ಆತ ತನ್ನ ಹೊಟ್ಟೆ ವಿಪರೀತವಾಗಿ ಉರಿಯುತ್ತಿದೆ ಎಂದು ಗೋಗರೆಯುತ್ತಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬುಧವಾರ ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ಯುತ್ತಿರುವಾಗ ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ಅವರು ತಿಳಿಸಿದರು.

    ಆ ನಂತರ ಅಂದರೆ ಗುರುವಾರ ಬೆಳಗ್ಗೆ ಮತ್ತಿಬ್ಬರು ಹೊಟ್ಟೆನೋವಿನಿಂದ ಪರದಾಡುತ್ತಿದ್ದರು. ಕೂಡಲೇ ಅವರನ್ನು ಅವರ ಕುಟುಂಬಸ್ಥರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರಿಬ್ಬರೂ ಅಂದೇ ರಾತ್ರಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಆರು ಮಂದಿ ಕೂಡ ಇಂತದ್ದೇ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

    ಘಟನೆಯಿಂದ ಎಚ್ಚೆತ್ತ ಪೊಲೀಸರು, ಸ್ಥಳೀಯ ಅಂಗಡಿಗಳಿಗೆ ದಾಳಿ ಮಾಡಿ ಲ್ಯಾಬ್ ಟೆಸ್ಟ್ ಗೆ ಸ್ಯಾನಿಟೈಸರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತರು ಬರೀ ಸಾನಿಟೈಸರ್ ಮಾತ್ರ ಕುಡಿದಿದ್ದಾರೋ ಅಥವಾ ಅದಕ್ಕೆ ಬೇರೆ ಏನಾದರೂ ಸೇರಿಸಿ ಕುಡಿದಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಕೌಶಲ್ ಮಾಹಿತಿ ನೀಡಿದ್ದಾರೆ.

  • 5 ಲಕ್ಷ ಮೌಲ್ಯದ ದುಬಾರಿ ಬೆಲೆಯ ಮದ್ಯದ ಬಾಟಲಿಗಳ ಕಳವು

    5 ಲಕ್ಷ ಮೌಲ್ಯದ ದುಬಾರಿ ಬೆಲೆಯ ಮದ್ಯದ ಬಾಟಲಿಗಳ ಕಳವು

    ರಾಯಚೂರು: ನಗರದ ಬಸವೇಶ್ವರ ವೃತ್ತದ ಬಳಿಯ ಮಂಜುನಾಥ್ ವೈನ್ಸ್ ನಲ್ಲಿ ಕಳ್ಳತನವಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮದ್ಯದಂಗಡಿಯ ಹಿಂದಿನ ಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಅಂದಾಜು ಐದು ಲಕ್ಷ ಮೌಲ್ಯದ ಮದ್ಯವನ್ನ ಕಳ್ಳರು ದೋಚಿದ್ದಾರೆ. ಅಗ್ಗದ ಬೆಲೆಯ ಮದ್ಯಕ್ಕಿಂತ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನ ಹೆಚ್ಚು ಕಳ್ಳತನ ಮಾಡಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಮದ್ಯದ ಅಂಗಡಿ ಬಂದ್ ಆಗಿದ್ದ ವೇಳೆ ಕಳ್ಳತನ ನಡೆದಿರಬಹುದು ಅಂತ ಅಂಗಡಿ ಮಾಲೀಕರು ಹೇಳಿದ್ದಾರೆ. ಇಂದು ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ಕಳ್ಳತನ ಮಾಡಲಾಗಿದೆ. ಅಂಗಡಿಯಲ್ಲಿನ ಸಿಸಿ ಕ್ಯಾಮರಾಗಳನ್ನೂ ಜಖಂಗೊಳಿಸಲಾಗಿದೆ.

    ಘಟನೆ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾಕ್‍ಡೌನ್ ಮಾರ್ಗಸೂಚಿ ಮಾರ್ಪಾಡು- ಮದ್ಯ ಮಾರಾಟಕ್ಕಿಲ್ಲ ಅವಕಾಶ

    ಲಾಕ್‍ಡೌನ್ ಮಾರ್ಗಸೂಚಿ ಮಾರ್ಪಾಡು- ಮದ್ಯ ಮಾರಾಟಕ್ಕಿಲ್ಲ ಅವಕಾಶ

    ಬೆಂಗಳೂರು: ಲಾಕ್‍ಡೌನ್ ಮಾರ್ಗಸೂಚಿಯನ್ನು ಸರ್ಕಾರ ಮಾರ್ಪಾಡು ಮಾಡಿದ್ದು, ಮದ್ಯ ಮಾರಾಟಕ್ಕೆ ನೀಡಿದ ಅನುಮತಿಯನ್ನು ಹಿಂಪಡೆದಿದೆ.

    ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ಲಾಕ್ ಆಗಲಿದೆ. ಈ ಸಂಬಂಧ ಸರ್ಕಾರ ಪ್ರಕಟಿಸಿದ ಮೊದಲ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಬೆಳಗ್ಗೆ 10 ರಿಂದ ಸಂಜೆ 5ರವೆರೆಗೆ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿತ್ತು. ಕೇವಲ ಪಾರ್ಸೆಲ್ ನೀಡಬೇಕೆಂದು ಮಾರ್ಗಸೂಚಿಯಲ್ಲಿ ಹೇಳಿತ್ತು.

    ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಸರ್ಕಾರ ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ರಾಜಧಾನಿಯಲ್ಲಿ ಮದ್ಯದ ಮಳಿಗೆಗಳು ಮುಚ್ಚಲಿವೆ. ಮೊದಲಿನ ಮಾರ್ಗಸೂಚಿ ನೋಡಿದ್ದ ಖುಷಿಯಾಗಿದ್ದ ಗುಂಡೈಕ್ಳಿಗೆ ಸರ್ಕಾರ ಶಾಕ್ ನೀಡಿದೆ.

  • ಲಾಕ್‍ಡೌನ್ ವೇಳೆ ಮಾರಲು ತಂದ 6 ಲಕ್ಷ ಮೌಲ್ಯದ ಗೋವಾ ಮದ್ಯ ವಶಕ್ಕೆ

    ಲಾಕ್‍ಡೌನ್ ವೇಳೆ ಮಾರಲು ತಂದ 6 ಲಕ್ಷ ಮೌಲ್ಯದ ಗೋವಾ ಮದ್ಯ ವಶಕ್ಕೆ

    ಚಿಕ್ಕೋಡಿ: ಲಾಕ್‍ಡೌನ್ ವೇಳೆ ಮಾರಲು ಗೋವಾದಿಂದ ಆಕ್ರಮವಾಗಿ ತರುತ್ತಿದ್ದ 6 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗೋವಾ ರಾಜ್ಯದಿಂದ ಕರ್ನಾಟಕದ ನಿಪ್ಪಾಣಿ ಕಡೆಗೆ ಆಕ್ರಮವಾಗಿ ಗೋವಾ ಮದ್ಯವನ್ನು ಐಶರ್ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಸುಮಾರು 6,22,300 ಬೆಲೆ ಬಾಳುವ ಮದ್ಯವನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಕ್ರೈಂ (ಡಿಸಿಬಿ) ಪೋಲಿಸರು ಯಮಕನಮರಡಿಯಲ್ಲಿ ವಶಪಡಿಸಿಕೊಂಡಿದ್ದಾರೆ.

    ಲಾರಿ ಚಾಲಕ ಬೆಳಗಾವಿ ಜಿಲ್ಲೆಯ ಹೊನಗಾ ಗ್ರಾಮದ ಜನತಾ ಪ್ಲಾಟನ ನಿವಾಸಿ ಶಕೀಲ ಕಾಸೀಮಸಾಬ ಶೇಖ(34) ಬಂಧಿಸಲಾಗಿದೆ. ಬಂಧಿತ ಆರೋಪಿ ಲಾಕ್‍ಡೌನ್ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.

    ಹುಕ್ಕೇರಿ ತಾಲೂಕಿನ ಎನ್‍ಎಚ್4 ರಸ್ತೆ ಮಣಗುತ್ತಿ ಕ್ರಾಸ್ ಬಳಿ ಒಟ್ಟು 6,22,300 ಬೆಲೆ ಬಾಳುವ 173 ರಟ್ಟಿನ ಬಾಕ್ಸ್‍ಗಳಲ್ಲಿದ್ದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಖ್ಯ ಶಿಕ್ಷಕನಿಂದ ಸರ್ಕಾರಿ ಶಾಲೆಯಲ್ಲಿ ನಿತ್ಯ ಗುಂಡು, ತುಂಡು ಪಾರ್ಟಿ

    ಮುಖ್ಯ ಶಿಕ್ಷಕನಿಂದ ಸರ್ಕಾರಿ ಶಾಲೆಯಲ್ಲಿ ನಿತ್ಯ ಗುಂಡು, ತುಂಡು ಪಾರ್ಟಿ

    – ಕಂಠ ಪೂರ್ತಿ ಕುಡಿದು ಶಾಲೆಯಲ್ಲೇ ಮಲಗುವ ಶಿಕ್ಷಕ
    – ಮುಖ್ಯ ಶಿಕ್ಷಕರ ಚೆಂಬರ್ ತುಂಬೆಲ್ಲ ಬಾಟಲಿಗಳು

    ಯಾದಗಿರಿ: ಶಾಲೆ ಎಂದರೆ ಜ್ಞಾನ ದೇಗುಲ ಎಂಬ ಭಾವನೆ. ಇಂತಹ ಶಾಲೆಯಲ್ಲಿ ಗುರುವಿನ ಸ್ಥಾನದಲ್ಲಿರುವ ಶಿಕ್ಷಕನೇ ಶಾಲೆಯಲ್ಲಿ ನೀತಿಗೆಟ್ಟ ಕೆಲಸ ಮಾಡಿದ್ದಾನೆ.

    ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರಿನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾನೆ. ಕೊರೊನಾ ಹಿನ್ನೆಲೆ ಶಾಲೆಗೆ ಶಿಕ್ಷಕರು ಮಾತ್ರ ಬರುತ್ತಿದ್ದು, ಶಾಲೆಯಲ್ಲಿ ಮುಖ್ಯ ಶಿಕ್ಷಕ ಆಡಿದ್ದೆ ಆಟ ಎನ್ನುವಂತಾಗಿದೆ. ಕಳೆದ ಹಲವು ದಿನಗಳಿಂದ, ಶಾಲೆಯೊಳಗೆ ಮುಖ್ಯ ಶಿಕ್ಷಕನ ನೇತೃತ್ವದಲ್ಲೇ ಗುಂಡು-ತುಂಡಿನ ಪಾರ್ಟಿ ಮಾಡಿ ಮೋಜು ಮಸ್ತಿ ನಡೆಯುತ್ತಿದೆ.

    ಶಾಲೆಯೊಳಗೆ ರಾಜಾರೋಷವಾಗಿ ಕಂಠಪೂರ್ತಿ ಕುಡಿಯುವ ಮುಖ್ಯ ಶಿಕ್ಷಕ ದೇವಿಂದ್ರಪ್ಪ, ಒಮ್ಮೊಮ್ಮೆ ಶಾಲೆಯಲ್ಲಿಯೆ ಮಲಗಿ ಬಿಡುತ್ತಾನೆ. ಅಲ್ಲದೆ ಇತನ ಚೇಂಬರ್ ತುಂಬೆಲ್ಲ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ಕುಡುಕ ಹೆಡ್ ಮಾಸ್ಟರ್‍ನ ಎಣ್ಣೆ ಆಟವನ್ನು ಗ್ರಾಮಸ್ಥರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಕುಡುಕ ಹೆಡ್ ಮಾಸ್ಟರ್ ಕಳ್ಳಾಟ ಬಯಲಾಗಿದ್ದು, ಶಿಕ್ಷಕನ ಅಮಾನತಿಗೆ ಗ್ರಾಮಸ್ಥರು ಮತ್ತು ಪೋಷಕರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ.

  • ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಆಪ್ ಸರ್ಕಾರ

    ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಆಪ್ ಸರ್ಕಾರ

    ನವದೆಹಲಿ: ಮದ್ಯ ಮಾರಾಟದ ಮೇಲೆ ಹೇರಿದ್ದ ಶೇಕಡಾ 70 ಕೊರೊನಾ ವಿಶೇಷ ಶುಲ್ಕವನ್ನು ದೆಹಲಿ ಸರ್ಕಾರ ಹಿಂಪಡೆದುಕೊಂಡಿದ್ದು, ಬುಧವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ.

    ಕೊರೊನಾ ವಿಶೇಷ ಶುಲ್ಕ ಹಿಂಪಡೆದುಕೊಂಡಿರುವ ಸರ್ಕಾರ ಶೇ.20ರಿಂದ 25ರಷ್ಟು ವ್ಯಾಟ್ ಟ್ಯಾಕ್ಸ್ ಹೇರಲು ನಿರ್ಧಾರ ತೆಗೆದುಕೊಂಡಿದೆ. ದೆಹಲಿಯಲ್ಲಿ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಎರಡು ಮಹತ್ವ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

    ಲಾಕ್‍ಡೌನ್ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ಸರ್ಕಾರ ಮೂಲ ಬೆಲೆಯ ಮೇಲೆ ಶೇ.70 ನಷ್ಟು ಕೊರೊನಾ ವಿಶೇಷ ಶುಲ್ಕ ವಿಧಿಸಿ ಬೆಲೆ ಏರಿಕೆ ಮಾಡಿತ್ತು. ಲಾಕ್‍ಡೌನ್‍ನಿಂದ ಆರ್ಥಿಕ ನಷ್ಟದಲ್ಲಿ ಸರ್ಕಾರ ಆದಾಯ ಕ್ರೋಢೀಕರಿಸಲು ಹಾಗೂ ಮದ್ಯಕ್ಕಾಗಿ ಏರ್ಪಟ್ಟಿದ್ದ ದೊಡ್ಡ ಜನ ಸಮುದಾಯವನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು.

    ಸೋಮವಾರದಿಂದ ದೆಹಲಿಯಲ್ಲಿ ಅನ್‍ಲಾಕ್ ಆಗಲಿದ್ದು, ಸಾರ್ವಜನಿಕ ಪ್ರದೇಶಗಳು, ಅಂಗಡಿ ಮುಂಗಟ್ಟು, ಮಾಲ್, ಮಾರುಕಟ್ಟೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೇಂದ್ರದ ಮಾರ್ಗಸೂಚಿಯಂತೆ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಆರಂಭವಾಗಲಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಮೂವತ್ತು ಸಾವಿರದ ಗಡಿಯಲ್ಲಿದ್ದು ದೆಹಲಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಬೆಡ್‍ಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಡಲಾಗಿದೆ.

  • ನನ್ನ ಬಿಟ್ಬಿಡಿ, ನನಗೆ ಎಣ್ಣೆ ಬೇಕು- ಸೀಲ್‍ಡೌನ್ ಏರಿಯಾದಲ್ಲಿ ಕುಡುಕನ ರಂಪಾಟ

    ನನ್ನ ಬಿಟ್ಬಿಡಿ, ನನಗೆ ಎಣ್ಣೆ ಬೇಕು- ಸೀಲ್‍ಡೌನ್ ಏರಿಯಾದಲ್ಲಿ ಕುಡುಕನ ರಂಪಾಟ

    -ಪಿಎಸ್‍ಐ ಎದುರು ಬಟ್ಟೆ ಬಿಚ್ಚಿ ಮಲಗಿದ ಭೂಪ

    ಬೆಳಗಾವಿ/ಚಿಕ್ಕೋಡಿ: ಸೀಲ್‍ಡೌನ್ ಏರಿಯಾದಲ್ಲಿ ಕುಡುಕನೋರ್ವ ನನ್ನನ್ನು ಹೊರಗೆ ಕಳುಹಿಸಿ. ಎಣ್ಣೆ ತೆಗದುಕೊಂಡು ಬರುತ್ತೀನಿ, ನನ್ನನ್ನು ಬಿಟ್ಟು ಬಿಡಿ ಎಂದು ವ್ಯಕ್ತಿ ರಂಪಾಟ ಮಾಡಿರೋ ಘಟನೆ ಚಿಕ್ಕೋಡಿ ಪಟ್ಟಣದ ಝಾರಿಗಲ್ಲಿಯಲ್ಲಿ ನಡೆದಿದೆ.

    ಕೊರೊನಾ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದು ಐದು ದಿನಗಳಿಂದ ಝಾರಿಗಲ್ಲಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಇಂದು ಮನೆಯಿಂದ ಹೊರ ಬಂದ ವ್ಯಕ್ತಿ, ನನಗೆ ಕುಡಿಯಲು ಮದ್ಯ ಬೇಕಾಗಿದೆ. ಎನಾದರೂ ಮಾಡಿ ನನ್ನನ್ನು ಆಚೆ ಹೋಗಲು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.

    ಇದೇ ವೇಳೆ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‍ಐ ಐ ರಾಕೇಶ್ ಬಗಲಿ ಆಗಮಿಸಿದ್ದಾರೆ. ಆದ್ರೂ ಸುಮ್ಮನಾಗದ ವ್ಯಕ್ತಿ ಬಟ್ಟೆ ಕಳಚಿ ರಸ್ತೆಯಲ್ಲಿ ಮಲಗಿ ಹೈಡ್ರಾಮಾ ಮಾಡಿದ್ದಾನೆ. ಕುಡುಕನ ರಂಪಾಟದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

  • ಸ್ನೇಹಿತನ ಪತ್ನಿ ಬರ್ತ್ ಡೇ ಪಾರ್ಟಿ- ಕುಡಿದ ಮತ್ತಿನಲ್ಲಿ ತನ್ನನ್ನು ತಾನೇ ಶೂಟ್ ಮಾಡ್ಕೊಂಡ

    ಸ್ನೇಹಿತನ ಪತ್ನಿ ಬರ್ತ್ ಡೇ ಪಾರ್ಟಿ- ಕುಡಿದ ಮತ್ತಿನಲ್ಲಿ ತನ್ನನ್ನು ತಾನೇ ಶೂಟ್ ಮಾಡ್ಕೊಂಡ

    – ಡಮ್ಮಿ ಪಿಸ್ತೂಲ್ ಎಂದು ತಲೆಗೆ ಗುಂಡು ಹಾರಿಸ್ಕೊಂಡ

    ಮುಂಬೈ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಡಮ್ಮಿ ಗನ್ ಎಂದು ಭಾವಿಸಿ ತಲೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ವ್ಯಕ್ತಿಯನ್ನು ಸಿಧೇಶ್ ಜಂಗಮ್ ಎಂದು ಗುರುತಿಸಲಾಗಿದೆ. ಸಿಧೇಶ್ ತಂದೆ ಪ್ರಕಾಶ್ ಜಂಗಮ್ ಜೊತೆ ನೆರೆ ಮನೆಯ ಭಾರತ್ ಶೇರ್ ಅವರ ಹೆಂಡತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಪಾರ್ಟಿಯಲ್ಲಿ ಮದ್ಯಪಾನ ಮಾಡಿದ ನಂತರ ಇಸ್ಪೀಟ್ ಆಡಿಕೊಂಡು ಸಮಯ ಕಳೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

    ಪಾರ್ಟಿಗೆ ಬಂದಿದ್ದ ಸಿಧೇಶ್ ಜಂಗಮ್ ತಂದೆ ಪ್ರಕಾಶ್ ಜಂಗಮ್ ಸಂಜೆಯ ವೇಳೆಗೆ ಮನೆಗೆ ಹೋಗಿದ್ದರು. ಈ ವೇಳೆ ಸಿಧೇಶ್ ಜೊತೆ ಇಸ್ಪೀಟ್ ಆಡುತ್ತಿದ್ದ ಭಾರತ್ ತನ್ನ ಬೆಡ್ ರೊಂಗೆ ಹೋಗಿದ್ದಾನೆ. ಇತ್ತ ಮನೆಯಲ್ಲಿ ಗನ್ ಇರುವುದು ಸಿಧೇಶ್ ಕಣ್ಣಿಗೆ ಬಿದ್ದಿದೆ. ಮೊದಲೇ ಕುಡಿದ ಅಮಲಿನಲ್ಲಿ ಇದ್ದ ಸಿಧೇಶ್ ಡಮ್ಮಿ ಗನ್ ಅನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ತೆಗೆದುಕೊಂಡು ತಲೆಗೆ ಶೂಟ್ ಮಾಡಿಕೊಂಡಿದ್ದಾನೆ.

    ಈ ಘಟನೆ ನಡೆದಾಗ ಸಿಧೇಶ್ ಐವರು ಸ್ನೇಹಿತರು ಜೊತೆಯಲ್ಲೇ ಇದ್ದು, ತಂದೆ ಪ್ರಕಾಶ್ ಜಂಗಮ್‍ನನ್ನು ಕರೆಸಿದ್ದಾರೆ. ಅಷ್ಟರಲ್ಲಿ ಸಿಧೇಶ್ ತಲೆಗೆ ಗುಂಡು ಬಿದ್ದು, ತಲೆ, ಮೂಗಿನಲ್ಲಿ ರಕ್ತ ಬಂದಿದೆ. ಇದನ್ನು ಕಂಡು ಭಯಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿ ಇದ್ದ ಐವರು ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ. ಜೊತೆಗೆ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಪಿಸ್ತೂಲ್ ಅನ್ನು ಮನೆಯಲ್ಲಿ ಇಟ್ಟುಕೊಂಡ ಕಾರಣ ಭಾರತ್ ಶೇರ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

  • ಬಿಯರ್ ಶೇರ್ ಮಾಡದ್ದಕ್ಕೆ ಐಸ್ ಪಿಕ್‍ನಿಂದ ಸ್ನೇಹಿತನನ್ನೇ ಕೊಂದ

    ಬಿಯರ್ ಶೇರ್ ಮಾಡದ್ದಕ್ಕೆ ಐಸ್ ಪಿಕ್‍ನಿಂದ ಸ್ನೇಹಿತನನ್ನೇ ಕೊಂದ

    ಮುಂಬೈ: ಬಿಯರ್ ಬಾಟಲ್ ಶೇರ್ ಮಾಡದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಮುಂಬೈನ ಜೋಗೇಶ್ವರಿ ಪ್ರದೇಶದಲ್ಲಿ ನಡೆದಿದೆ.

    ಅಜಯ್ ದ್ರಾವಿಡ್ (29) ಕೊಲೆಯಾದ ಸ್ನೇಹಿತ. ಮೇಘವಾಡಿ ಪೊಲೀಸರು ಆರೋಪಿ ಸೋನು ಅಲಿಯಾಸ್ ಷಣ್ಮುಗ ರಾಜೇಂದ್ರನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಅಜಯ್ ದ್ರಾವಿಡ್ ಮತ್ತು ಆತನ ಸಹೋದರ ಬಿಯರ್ ತರಿಸಿಕೊಂಡು ತಮ್ಮ ಮನೆಯ ಸಮೀಪವಿರುವ ಮೀನು ಮಾರುಕಟ್ಟೆಯಲ್ಲಿ ಕುಳಿತು ಕುಡಿಯುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರ ಸ್ನೇಹಿತನಾಗಿದ್ದ ಆರೋಪಿ ಸೋನು ಆಗಮಿಸಿದ್ದಾನೆ. ಈ ವೇಳೆ ಆರೋಪಿ ತನಗೂ ಬಿಯರ್ ಕೊಟ್ಟು ಹಂಚಿಕೊಂಡು ಕುಡಿಯುವಂತೆ ಕೇಳಿಕೊಂಡಿದ್ದಾನೆ. ಆದರೆ ಬಿಯರ್ ಬಾಟಲ್ ಕಡಿಮೆ ಇದ್ದುದ್ದರಿಂದ ಅಜಯ್ ಸ್ನೇಹಿತನ ಜೊತೆ ಬಿಯರ್ ಹಂಚಿಕೊಳ್ಳಲು ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.

    ಇಬ್ಬರ ಜಗಳದ ಮಧ್ಯೆ ಅಜಯ್ ಸಹೋದರ ಬಂದಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಸೋನು ಐಸ್ ಪಿಕ್ ಹಿಡಿದು ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ನೋಡಿದ ಇತರ ಸ್ನೇಹಿತರು ಜಗಳ ಬಿಡಿಸಲು ಬಂದಿದ್ದಾರೆ. ಅಷ್ಟರಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಇಬ್ಬರು ಸಹೋದರರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗ ಅಜಯ್ ಮೃತಪಟ್ಟಿದ್ದಾನೆ..

    ಸದ್ಯಕ್ಕೆ ಅಜಯ್ ಸಹೋದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಪರಾರಿಯಾಗಿದ್ದ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಯನ್ನು ಕೆಲವು ದಿನಗಳವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಹಲ್ಲೆ ಮಾಡಲು ಬಳಸಿದ್ದ ಐಸ್ ಪಿಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಜನರ ಹೇಳಿಕೆಗಳನ್ನು ಸಹ ನಾವು ದಾಖಲಿಸಿದ್ದೇವೆ. ಬಿಯರ್ ಬಾಟಲಿ ಕೊಡದಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಇನ್ಸ್ ಪೆಕ್ಟರ್ ಸುಧೀರ್ ನಿಗುಡ್ಕರ್ ಹೇಳಿದ್ದಾರೆ.

  • ಎಣ್ಣೆ ಏಟಲ್ಲಿ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ

    ಎಣ್ಣೆ ಏಟಲ್ಲಿ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ

    ಧಾರವಾಡ: ಮದ್ಯದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಮಗಳಿಗೆ ಬೆಂಕಿಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದಿದೆ.

    ಗುಡಿಸಾಗರ ಗ್ರಾಮದ ಭೀರಪ್ಪ ಕಟಿಗಾರ (40) ಕೃತ್ಯ ಎಸೆಗಿದ ಪಾಪಿ. ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಭೀರಪ್ಪ ಹಾಗೂ ಪತ್ನಿ ಫಕೀರವ್ವ (34) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 12 ವರ್ಷದ ಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

    ಭೀರಪ್ಪ ಮದ್ಯ ಕುಡಿದು ಮನೆಗೆ ಬಂದಿದ್ದ. ಈ ವೇಳೆ ದಂಪತಿಯ ಮಧ್ಯೆ ಜಗಳವಾಗಿದ್ದು, ಕೋಪಗೊಂಡ ಆರೋಪಿ ಪೆಟ್ರೋಲ್ ಸುರಿದು ಪತ್ನಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದಾನೆ. ಅಷ್ಟೇ ಅಲ್ಲದೆ ತಾನೂ ಬೆಂಕಿ ಹಚ್ಚಿಕೊಂಡಿದ್ದ. ಇದನ್ನು ನೋಡಿದ ನೆರೆಹೊರೆಯವರು ಬೆಂಕಿ ನಂದಿಸಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ಭೀರಪ್ಪ ಮೊದಲು ಸಾವನ್ನಪ್ಪಿದ್ದಾನೆ. ಬಳಿಕ ಪತ್ನಿ ಫಕೀರವ್ವ ಕೂಡ ಮೃತಪಟ್ಟಿದ್ದು, ಮಗಳು ತಂದೆಯ ಕೃತ್ಯದಿಂದಾಗಿಯೇ ಅನಾಥವಾಗುವ ಸ್ಥಿತಿ ಬಂದಿದೆ. ಈ ಸಂಬಂಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.